Tag: Special Express Train

  • ಬೀದರ್-ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲು

    ಬೀದರ್-ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲು

    ಬೀದರ್/ಬೆಂಗಳೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆ ಬೆಂಗಳೂರು ಕಂಟೋನ್ಮೆಂಟ್ ಮತ್ತು ಬೀದರ್ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಒದಗಿಸಲಿದೆ.

    ರೈಲಿನ ಮಾಹಿತಿ:
    ರೈಲು ಸಂಖ್ಯೆ 07063 ಬೀದರ್-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್‌ ರೈಲು ಇದೇ ಅಕ್ಟೋಬರ್ 4ರಂದು (ಶನಿವಾರ) ಬೀದರ್‌ನಿಂದ ಮಧ್ಯಾಹ್ನ 2:40ಕ್ಕೆ ಹೊರಟು, ಮರುದಿನ ಬೆಳಿಗ್ಗೆ 5:00ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಇನ್ನೂ ರೈಲು ಸಂಖ್ಯೆ 07064 ಬೆಂಗಳೂರು ಕಂಟೋನ್ಮೆಂಟ್-ಬೀದರ್ ವಿಶೇಷ ಎಕ್ಸ್‌ಪ್ರೆಸ್‌ ರೈಲು ಇದೇ ಅಕ್ಟೋಬರ್ 5ರಿಂದ (ಭಾನುವಾರ) ರಾತ್ರಿ 10:30ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಟು, ಮರುದಿನ ಮಧ್ಯಾಹ್ನ 2:40ಕ್ಕೆ ಬೀದರ್ ತಲುಪಲಿದೆ.ಇದನ್ನೂ ಓದಿ: ಪೊಲೀಸ್ ನೇಮಕಾತಿಗಳಿಗೆ ಪ್ರತ್ಯೇಕ ಶಾಶ್ವತ ವಯೋಮಿತಿ ಸಡಿಲಿಕೆ ಮಾಡ್ತೇವೆ – ಪರಮೇಶ್ವರ್

    ಈ ರೈಲು ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಯಾದಗಿರಿ, ವಾಡಿ, ಶಹಾಬಾದ್, ಕಲಬುರಗಿ, ಕಮಲಾಪುರ ಮತ್ತು ಹುಮನಾಬಾದ್ ನಿಲ್ದಾಣಗಳಲ್ಲಿ ನಿಲ್ಲಲಿದೆ.

    ಈ ವಿಶೇಷ ರೈಲು 24 ಬೋಗಿಗಳ ಸಂಯೋಜನೆಯೊಂದಿಗೆ ಓಡಲಿದೆ. ಇದರಲ್ಲಿ 1 ಎಸಿ 2 ಟಯರ್, 2 ಎಸಿ ತ್ರಿ ಟಯರ್, 17 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು, 2 ಸಾಮಾನ್ಯ ಬೋಗಿಗಳು ಹಾಗೂ 2 ಲಗೇಜ್ ಕಮ್ ದಿವ್ಯಾಂಗ ಸ್ನೇಹಿ ಬೋಗಿಗಳು ಇರಲಿವೆ.ಇದನ್ನೂ ಓದಿ: ಪೀಕ್‌ ಅವರ್‌ನಲ್ಲಿ ಬೆಂಗಳೂರಿನಲ್ಲಿ ಒಬ್ಬರೇ ಕಾರ್‌ನಲ್ಲಿ ಸಂಚರಿಸಿದ್ರೆ ಟ್ಯಾಕ್ಸ್‌?

  • ಕುಂಭಮೇಳಕ್ಕಾಗಿ ಮೈಸೂರಿನಿಂದ ಲಕ್ನೋಗೆ ವಿಶೇಷ ರೈಲು

    ಕುಂಭಮೇಳಕ್ಕಾಗಿ ಮೈಸೂರಿನಿಂದ ಲಕ್ನೋಗೆ ವಿಶೇಷ ರೈಲು

    ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿರುವ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಕುಂಭಮೇಳಕ್ಕಾಗಿ (Kumbh Mela) ಮೈಸೂರಿನಿಂದ ಲಕ್ನೋ ಜಂಕ್ಷನ್‌ಗೆ (Mysuru-Lucknow) ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.

    ಕುಂಭಮೇಳದಲ್ಲಿ ಪಾಲ್ಗೊಳ್ಳುವ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಪೂರೈಲು ನೈರುತ್ಯ ರೈಲ್ವೆಯಿಂದ ಏಕಮುಖ ವಿಶೇಷ ರೈಲು ಸಂಚರಿಸಲಿವೆ. ಇದನ್ನೂ ಓದಿ: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಒಪ್ಪಿಗೆ

    ರೈಲು ಸಂಖ್ಯೆ 06216 ಮೈಸೂರು-ಲಕ್ನೋ ಜಂಕ್ಷನ್ ಏಕಮುಖ ಸ್ಪೆಷಲ್ ಎಕ್ಸ್‌ಪ್ರೆಸ್‌ ಡಿ.29 ರ ಭಾನುವಾರ ರಾತ್ರಿ 12:30 ಕ್ಕೆ ಮೈಸೂರಿನಿಂದ ಹೊರಟು ಡಿ.31 ರ ಮಂಗಳವಾರ ನಸುಕಿನ 4 ಗಂಟೆಗೆ ಲಕ್ನೋ ಜಂಕ್ಷನ್ ತಲುಪಲಿದೆ.

    ಈ ರೈಲು ಮಂಡ್ಯ, ಕೆಎಸ್ಆರ್ ಬೆಂಗಳೂರು, ಯಶವಂತಪುರ ಜಂಕ್ಷನ್, ತುಮಕೂರು, ಅರಸೀಕೆರೆ ಜಂಕ್ಷನ್, ಕಡೂರು, ಚಿಕ್ಕಜಾಜೂರು ಜಂಕ್ಷನ್, ದಾವಣಗೆರೆ, ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ ಜಂಕ್ಷನ್, ಧಾರವಾಡ, ಬೆಳಗಾವಿ, ಘಟಪ್ರಭಾ, ಮಿರಜ್ ಜಂಕ್ಷನ್, ಸಾಂಗ್ಲಿ, ಕರಡ್, ಪುಣೆ ಜಂಕ್ಷನ್, ದೌಂಡ್ ಕಾರ್ಡ್ ಲೈನ್, ಅಹ್ಮದ್ನಗರ, ಮನ್ಮಾಡ್ ಜಂಕ್ಷನ್, ಭೂಸಾವಲ್ ಜಂಕ್ಷನ್, ಖಾಂಡ್ವಾ, ತಲ್ವಾಡಿಯಾ, ಭೋಪಾಲ್, ಖಾಂಡ್ವಾ, ತಲ್ವಾಡಿಯಾ, ಚನೇರಾ, ಖಾಂಡ್ವಾ, ತಲ್ವಾಡ್ಯ, ಚನೇರಾ, ಖಾಂಡ್ವಾ ನಿಲ್ದಾಣಗಳಲ್ಲಿ ನಿಲ್ಲಲಿದ್ದು, ಪ್ರಯಾಣಿಕರು ಸೇವೆಯನ್ನ ಬಳಸಿಕೊಳ್ಳಬಹುದು. ಇದನ್ನೂ ಓದಿ: ಇಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತ್ಯಕ್ರಿಯೆ – ಅಂತ್ಯಸಂಸ್ಕಾರಕ್ಕೂ ಮುನ್ನ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ

    ವಿಶೇಷ ರೈಲು 11 ಸೆಕೆಂಡ್ ಜನರಲ್ ಕ್ಲಾಸ್ ಬೋಗಿಗಳು, 7 ಸ್ಲೀಪರ್ ಕ್ಲಾಸ್ ಬೋಗಿಗಳು ಮತ್ತು ಎಸ್ಎಲ್ಆರ್/ಡಿ ಸೇರಿದಂತೆ 20 ಬೋಗಿಗಳನ್ನು ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಯು ಭಾರತೀಯ ರೈಲ್ವೆಯ ವೆಬ್‌ಸೈಟ್ www.enquiry.indianrail.gov.in ನಲ್ಲಿ ಲಭ್ಯವಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.

  • ಸಾರ್ವಜನಿಕ ಪ್ರಯಾಣಕ್ಕೆ ಭಾರತೀಯ ರೈಲ್ವೆಯಿಂದ 10 ವಿಶೇಷ ಎಕ್ಸ್‌ಪ್ರೆಸ್‌ ರೈಲು

    ಸಾರ್ವಜನಿಕ ಪ್ರಯಾಣಕ್ಕೆ ಭಾರತೀಯ ರೈಲ್ವೆಯಿಂದ 10 ವಿಶೇಷ ಎಕ್ಸ್‌ಪ್ರೆಸ್‌ ರೈಲು

    ಹುಬ್ಬಳ್ಳಿ: ಲಾಕ್‍ಡೌನ್ ಸಡಿಲಿಕೆ ಬಳಿಕ ಭಾರತೀಯ ರೈಲ್ವೆ ಇಲಾಖೆ ಕೆಲವು ಸೂಕ್ತ ನಿರ್ದೇಶನಗಳನ್ನು ಜಾರಿ ಮಾಡಿ ಸಾರ್ವಜನಿಕರ ಸೇವೆಗೆ ಹತ್ತು ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳ ಸೇವೆಯನ್ನು ಪ್ರಾರಂಭಿಸಲಿದೆ.

    ಭಾರತೀಯ ರೈಲ್ವೆ ವಲಯದ ನೈಋತ್ಯ ವಿಭಾಗದಲ್ಲಿ ಸುಮಾರು ಹತ್ತು ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳು ಕಾರ್ಯಾರಂಭ ಮಾಡಲು ಸಿದ್ಧಗೊಂಡಿದ್ದು, ಗಾಡಿ ಸಂಖ್ಯೆ 06587/06588 ಯಶವಂತಪುರ ದಿಂದ ಬಿಕಾನೇರ್ ವಾರಕ್ಕೊಮ್ಮೆ ಸಂಚರಿಸಲಿದೆ.

    ಗಾಡಿ ಸಂಖ್ಯೆ 06535/36 ರೈಲು ಮೈಸೂರು-ಸೊಲ್ಲಾಪೂರ ಮಧ್ಯೆ ಪ್ರತಿದಿನವೂ ಸಂಚರಿಸಲಿವೆ. 02253/02254 ರೈಲು ಯಶವಂತಪುರ ಹಾಗೂ ಬಿಜಾಪುರ ಮಧ್ಯೆ ವಾರಕ್ಕೊಮ್ಮೆ ಸಂಚಾರ ನಡೆಸಲಿವೆ. 02627/02628 ಬೆಂಗಳೂರು-ದೆಹಲಿ ಮಧ್ಯೆದಲ್ಲಿ ದಿನವೂ ಸಂಚಾರ ನಡೆಸಲಿವೆ. ಇನ್ನೂ 06539/40 ರೈಲು ಬೆಂಗಳೂರು ಮತ್ತು ಮೈಸೂರು ಮಧ್ಯೆ ಭಾನುವಾರ ಹೊರತು ಪಡಿಸಿ ವಾರದ ಆರು ದಿನದಲ್ಲಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

    ಅನ್‍ಲಾಕ್ 4 ಜಾರಿಯಾದ ಬಳಿಕ ಗೃಹ ಸಚಿವಾಲಯ ವಿಶೇಷ ರೈಲು ಸಂಚಾರ ಆರಂಭಿಸಲು ಅನುಮತಿ ನೀಡಿತ್ತು. ಸುಮಾರು 100 ಹೆಚ್ಚು ವಿಶೇಷ ರೈಲುಗಳು ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲೆಗಳಲ್ಲೂ ಸಂಚಾರ ಮಾಡಲಿದೆ. ಬೇಡಿಕೆ ಹಾಗೂ ಕೋವಿಡ್ ಪರಿಸ್ಥಿತಿಯನ್ನು ಪರಿಗಣಿಸಿ ಹೆಚ್ಚಿನ ರೈಲುಗಳನ್ನು ಹಂತ ಹಂತವಾಗಿ ಆರಂಭಿಸಲಾಗುವುದು ಎಂದು ರೈಲ್ವೆ ಇಲಾಖೆ ಕಳೆದ ತಿಂಗಳು ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.