Tag: Special

  • ದೀಪಾವಳಿ: ವ್ಯಾಪಾರ ವೃದ್ಧಿಗೆ ಮಾಡಿ ಧನಲಕ್ಷ್ಮಿ ಪೂಜೆ

    ದೀಪಾವಳಿ: ವ್ಯಾಪಾರ ವೃದ್ಧಿಗೆ ಮಾಡಿ ಧನಲಕ್ಷ್ಮಿ ಪೂಜೆ

    ಸಿರಿವಂತರಾಗಬೇಕೆಂಬ ಕನಸು ಪ್ರತಿಯೊಬ್ಬರಲ್ಲೂ ಇರುತ್ತದೆ. ವರ್ತಮಾನದಲ್ಲಿ ಬರುವ ಹಬ್ಬಗಳ ಹಿರಿಯ ಹಬ್ಬವೇ ದೀಪಾವಳಿ. ನೀವು ಧನವಂತರಾಗಬೇಕೆಂದರೆ, ವ್ಯಾಪಾರದಲ್ಲಿ ಅಭಿವೃದ್ಧಿಯಾಗಬೇಕು ಎಂದರೆ ಜನರು ತಾವು ಕೆಲಸ ಮಾಡುವ ಅಂಗಡಿ, ಫ್ಯಾಕ್ಟರಿ, ಹೋಟೆಲುಗಳಲ್ಲಿ ಧನಲಕ್ಷ್ಮಿ ಪೂಜೆ ಮಾಡುತ್ತಾರೆ. ಇದರಿಂದ ವ್ಯಾಪಾರದಲ್ಲಿ ಒಳ್ಳೆಯ ಲಾಭ ಹಾಗೂ ಲಕ್ಷ್ಮಿ ಎಂದಿಗೂ ಜೊತೆಯಲ್ಲಿರುತ್ತಾಳೆ ಎಂಬ ನಂಬಿಕೆ ಇದೆ.

    ದೀಪಾವಳಿ ಅಶ್ವಯಜ ಮಾಸದ ಕೃಷ್ಣ ಪಕ್ಷದಲ್ಲಿ ಆರಂಭವಾಗಿ ಕಾರ್ತಿಕ ಮಾಸದ ಪಾಡ್ಯದಲ್ಲಿ ಕೊನೆಗೊಳ್ಳುತ್ತದೆ. ದೀಪಾವಳಿಯನ್ನು ಒಟ್ಟು 3 ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಮೊದಲನೆಯ ದಿನ ನರಕ ಚತುರ್ದಶಿ, ಎರಡನೇ ದಿನ ಅಮವಾಸ್ಯೆ ಧನಲಕ್ಷ್ಮೀ ಪೂಜೆ ಮತ್ತು ಮೂರನೇಯ ದಿನ ಬಲಿಪಾಡ್ಯಮಿ ಬಲಿಯೇಂದ್ರನನ್ನು ಆರಾಧನೆ ಮಾಡುವ ಮೂಲಕ ದೀಪಾವಳಿ ಮುಗಿಯುತ್ತದೆ.

    ದೀಪಾವಳಿ ಹಬ್ಬಗಳ ಸರಮಾಲೆಯಾಗಿರುವುದರಿಂದ ದೊಡ್ಡ ಹಬ್ಬವೆಂದೇ ಕರೆಯಲಾಗುತ್ತದೆ. ಈ 3 ದಿನಗಳಲ್ಲಿ ನಡುವಿನ ದಿನ ಧನಲಕ್ಷ್ಮಿ ಪೂಜೆಯನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ. ವ್ಯಾಪಾರದಲ್ಲಿ ಲಾಭಗಳಿಸುವ ಸಲುವಾಗಿ ದೀಪಾವಳಿಯ ಸಂದರ್ಭದಲ್ಲಿ ಬರುವ ಅಮಾವಾಸ್ಯೆಯ ದಿನ ಧನಲಕ್ಷ್ಮಿ ಪೂಜೆ ಮಾಡಲಾಗುತ್ತದೆ.

    ಹಲವರು ಮನೆಯಲ್ಲಿ ಧನಲಕ್ಷ್ಮಿ ಪೂಜೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಾರೆ. ನಾವೆಲ್ಲರು ಸಂಕಲ್ಪ ಮಾಡುವಾಗ ‘ಮಹಾಲಕ್ಷ್ಮೀ ಚಿರಕಾಲ ಸಂರಕ್ಷಣಾರ್ಥ’ ಎಂದು ಹೇಳುತ್ತೇವೆ. ಅಂದರೆ ಮನೆಯಲ್ಲಿ ಇರುವಂತಹ ಮಹಾಲಕ್ಷ್ಮೀ ಚಿರಕಾಲ ಸಂರಕ್ಷಣೆ ಆಗಲಿ ಎಂಬರ್ಥ. ಹೀಗಾಗಿ ಧನಲಕ್ಷ್ಮಿ ಪೂಜೆಯನ್ನು ತುಂಬಾ ವ್ಯವಸ್ಥಿತವಾಗಿ ಮಾಡಬೇಕು.

    ಮೇವಿಗೆ ತೆರಳಿದ ಗೋವುಗಳು ಸಂಜೆ ಮನೆಗೆ ಹಿಂತಿರುಗಿ ಬರುವ ಸಮಯ ಗೋಧೂಳಿ ಲಗ್ನ ಎಂದು ಕರೆಯಲಾಗುತ್ತದೆ. ಈ ವೇಳೆ ವ್ಯಾಪಾರ ಮಾಡುವ ಸ್ಥಳದಲ್ಲಿ ಗೋಮಯ ಸಾರಿಸಿ, ರಂಗೋಲಿ ಹಾಕಿ, ಅಲಂಕರಿಸಿ, ಲಕ್ಷ್ಮಿ, ಗಣಪತಿ, ಸರಸ್ವತಿಯ ಫೋಟೋವನ್ನಿಟ್ಟು, ಕಲಶವನ್ನು ಸ್ಥಾಪಿಸಿ, ನಾಣ್ಯಗಳನ್ನಿಟ್ಟು, ತುಪ್ಪದ ದೀಪ ಹಚ್ಚಿ ಪೂಜೆ ಮಾಡಬೇಕು.

    ಉತ್ತರ ಭಾರತದಲ್ಲಿ ಈ ದಿನವನ್ನು ಹೊಸ ವರ್ಷ ಅಥವಾ ಹೊಸ ಆರ್ಥಿಕ ವರ್ಷದ ಆರಂಭ ಎಂತಲೂ ಕರೆಯುತ್ತಾರೆ. ಕಳೆದ ದೀಪಾವಳಿಯಿಂದ ಹಿಡಿದು ಈ ದೀಪಾವಳಿ ವರೆಗಿನ ವ್ಯಾಪಾರದ ಲೆಕ್ಕಾಚಾರವನ್ನು ಕೊನೆಗೊಳಿಸಿ, ಹೊಸ ಲೆಕ್ಕಪತ್ರವನ್ನು ಇಟ್ಟು ವ್ಯಾಪಾರವನ್ನು ಪುನರಾರಂಭಿಸುತ್ತಾರೆ. ಮಾತ್ರವಲ್ಲದೇ ಇಡೀ ವರ್ಷ ವ್ಯಾಪಾರದಲ್ಲಿ ಒಳ್ಳೆಯ ಲಾಭ ಪ್ರಾಪ್ತಿಯಾಗಲಿ ಎಂದು ಧನಲಕ್ಷ್ಮಿಯನ್ನು ಆರಾಧಿಸುತ್ತಾರೆ.

    
    
  • ನಟ ಡಾ. ವಿಷ್ಣುವರ್ಧನ್ ಮನೆ ಹೇಗಿದೆ? ‘ವಲ್ಮೀಕ’ ವಿಶೇಷ

    ನಟ ಡಾ. ವಿಷ್ಣುವರ್ಧನ್ ಮನೆ ಹೇಗಿದೆ? ‘ವಲ್ಮೀಕ’ ವಿಶೇಷ

    ಡಾ.ವಿಷ್ಣುವರ್ಧನ್ ಅವರ ಕನಸಿನ ಮನೆಗೆ ಇಂದು‌ ಗೃಹಪ್ರವೇಶ.  ಜಯನಗರದಲ್ಲಿ ನಿರ್ಮಾಣವಾಗಿರುವ ಆ‌ ಭವ್ಯ ಮನೆಯಲ್ಲಿ ಹಳೆಯ ನೆನಪುಗಳನ್ನೇ ಉಳಿಸಿಕೊಂಡು ಹೊಸ ಮನೆಯನ್ನು ನಿರ್ಮಾಣ ಮಾಡಿದ್ದಾರೆ ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್. ಸಿಂಹ ನೆಲೆಸಿದ್ದ ಆ ಮನೆಯನ್ನು ಅವರ ಕುಟುಂಬ ಇದೀಗ ಹೊಸ ರೀತಿಯಲ್ಲಿ ಕಟ್ಟಿಸಲಾಗಿದೆ.

    ನವ ಗೃಹಕ್ಕೆ ಪ್ರವೇಶಿಸುವುದು ಹಲವರ ಕನಸು. ಇಂದು ಚಂದನವನದ ಮೇರುನಟ ದಿ. ವಿಷ್ಣುವರ್ಧನ್ ಅವರ ಕುಟುಂಬ ಇಂತಹದ್ದೇ ಸಂತಸದಲ್ಲಿದೆ. ಈ ಶುಭ ದಿನದಂದು ವಿಷ್ಣು ಅವರ ನೂತನ ನಿವಾಸದ ಗೃಹಪ್ರವೇಶಕ್ಕೆ ಸಜ್ಜಾಗಿದ್ದು, ವಿಷ್ಣು ಅವರು ಆಸೆ ಪಟ್ಟಂತೆಯೇ ಪತ್ನಿ ಭಾರತಿ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಮನೆ ಗೃಹಪ್ರವೇಶ ನಡೆದಿದೆ‌. ಇದನ್ನೂ ಓದಿ: `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ

    ಸಾಹಸಸಿಂಹ ವಿಷ್ಣುವರ್ಧನ್ ಅವರ ಕನಸಿನ ಮನೆ ಇರುವುದು ಜಯನಗರದ ಟಿ ಬ್ಲಾಕ್ ನಲ್ಲಿ 90/90 ಚದರಡಿಯಲ್ಲಿ ಭವ್ಯವಾಗಿ ಈ ಮನೆ ನಿರ್ಮಾಣ ಮಾಡಲಾಗಿದೆ. ‘ವಲ್ಮೀಕ’ ಹೆಸರಿನಲ್ಲಿ, ಗೇಟ ಮೇಲೆ ಸಿಂಹದ ಮುಖದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇಂತಹ ಮನೆಗೆ ಇಂದು ವಿಷ್ಣು ಕುಟುಂಬ ಗೃಹ ಪ್ರವೇಶ ಮಾಡಿದ್ದು, ಸಿಎಂ‌ ಬಸವರಾಜ ಬೊಮ್ಮಾಯಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.

    ವಲ್ಮೀಕ ಎಂದರೆ ಹಾವಿನ ಹುತ್ತ ಎಂದರ್ಥ. ನಾಗರಹಾವು ಚಿತ್ರದ ಯಶಸ್ಸಿನ‌ ನಂತರ ಇಲ್ಲೆ ಇದ್ದ ವಿಷ್ಣುವರ್ಧನ್ ಹಳೆಮನೆಗೆ ವಲ್ಮೀಕ ಎಂದು ಹೆಸರಿಟ್ಟಿದ್ದರು. 1976 ರಲ್ಲಿ ವಿಷ್ಣುವರ್ಧನ್ ಈ ಜಾಗ ಖರೀದಿ ಮಾಡಿದ್ದರಂತೆ. ಆದರೆ, ಇದು ನಮ್ಮ ಜಾಗ ಅಂತ ಅದರ ಮಾಲಿಕರು ಆಗ ಬಂದಿದ್ದರು. ವಿಷ್ಣುವರ್ಧನ್ ಇದನ್ನು ಇಷ್ಟ ಪಟ್ಟಿದ್ದಾರೆ ಅಂತ ಆ ಜಾಗದಲ್ಲಿ ಅರ್ಧ ಜಾಗ ಹಾಗೆಯೇ ಕೊಟ್ಟಿದ್ದರಂತೆ ಮಾಲೀಕರು. 6 ಬೆಡ್ ರೂಂನ ಈ ಮನೆ ಮುಂಭಾಗ‌ ಒಂದು ಕೃಷ್ಣನ ವಿಗ್ರಹವಿದೆ. ಅದನ್ನ ವಿಷ್ಣು ಅವ್ರೆ ಇಲ್ಲಿ‌ ಸ್ಥಾಪಿಸಿದ್ದರಂತೆ. ಅದನ್ನ ಹಾಗೆಯೆ ಇಟ್ಟು‌‌ ಕಲ್ಲಿನ ಮಂಟಪ ಮಾಡಿ ಮತ್ತೆ ಪ್ರತಿಷ್ಠಾಪನೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹಬ್ಬದ ಸಿಹಿ ತಿಂಡಿಯಲ್ಲಿ ಇರಲಿ ಎಳ್ಳು ಉಂಡೆ

    ಹಬ್ಬದ ಸಿಹಿ ತಿಂಡಿಯಲ್ಲಿ ಇರಲಿ ಎಳ್ಳು ಉಂಡೆ

    ಸಿಹಿ ಅಡುಗೆ ಇದ್ದರೆ ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಕಳೆ ಬರುತ್ತದೆ. ನವರಾತ್ರಿ ಹಬ್ಬವನ್ನು 9 ದಿನ ಆಚರಣೆ ಮಾಡುವುದರಿಂದ ಪ್ರತಿ ದಿನ ಒಂದೊಂದು ಬಗೆಯ ಸಿಹಿ ಅಡುಗೆಯನ್ನು ಮಾಡುವುದು ಸಾಮಾನ್ಯ. ಎಳ್ಳು ಉಂಡೆ ಸರವಾಗಿ ಮಾಡುವ ರುಚಿಯಾದ ಅಡುಗೆಯಾಗಿದೆ. ಟ್ರೈ ಮಾಡಿ ನೋಡಿ, ಎಲ್ಲರಿಗೂ ಇಷ್ಟವಾಗೋದ್ರಲ್ಲಿ ಡೌಟೇ ಇಲ್ಲ. ಈ ವರ್ಷದ ನವರಾತ್ರಿ ಹಬ್ಬವನ್ನು ನೀವು ಈ ಸಿಹಿ ತಿಂಡಿ ಜೊತೆಗೆ ವಿಶೇಷವಾಗಿ ಆಚರಿಸಬಹುದಾಗಿದೆ. 9 ದಿನ ಆಚರಿಸುವ ಈ ನವರಾತ್ರಿ ಹಬ್ಬಕ್ಕೆ ವಿಶೇಷವಾಗಿ ವಿವಿಧ ಸಿಹಿತಿಂಡಿಗಳನ್ನು ಮಾಡುತ್ತೇವೆ.

    ಬೇಕಾಗುವ ಸಾಮಗ್ರಿಗಳು:
    * ಬಿಳಿಎಳ್ಳು- 1 ಕಪ್
    * ಬೆಲ್ಲ- 1ಕಪ್
    * ತುಪ್ಪ- ಅರ್ಧ ಕಪ್
    * ಏಲಕ್ಕಿ ಪುಡಿ- ಸ್ವಲ್ಪ
    * ಪಿಸ್ತಾ (ಹುರಿದು ಪುಡಿ ಮಾಡಿದ್ದು)- ಸ್ವಲ್ಪ


    ಮಾಡುವ ವಿಧಾನ:
    * ಎಳ್ಳುನ್ನು ಒಂದು ಪಾತ್ರೆಗೆ ಹಾಕಿ ಮಧ್ಯಮ ಉರಿಯಲ್ಲಿ ಪರಿಮಳ ಬರುವವರೆಗೂ ಹಾಗೂ ಎಳ್ಳು ಕಂದು ಬಣ್ಣಕ್ಕೆ ಬರುವವರೆಗು ಹುರಿದು ಒಂದು ಕಡೆ ತೆಗೆದಿಟ್ಟುಕೊಳ್ಳಿ.
    * ಈಗ ಅದೇ ಪಾತ್ರೆಗೆ ತುಪ್ಪ ಹಾಗೂ ಬೆಲ್ಲ ಸೇರಿಸಿ ಕರಗಿಸಿ ಚೆನ್ನಾಗಿ ಮಿಶ್ರಣವನ್ನು ಮಾಡಬೇಕು.

    * ನಂತರ ಬೆಲ್ಲ ಇರುವ ಪಾತ್ರೆಗೆ ಹುರಿದ ಎಳ್ಳು, ಪಿಸ್ತಾ ಪುಡಿ, ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿ. ಮಿಶ್ರಣ ದಪ್ಪವಾಗಿ ಉಂಡೆ ಮಾಡುವ ಹದಕ್ಕೆ ಬರುವರೆಗೂ ಬೇಯಿಸಿಕೊಳ್ಳಿ. ಇದನ್ನೂ ಓದಿ: ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?


    * ನಂತರ ಮೇಲೆ ಸ್ವಲ್ಪ ತುಪ್ಪ ಹಾಕಿ. ಅದನ್ನು ತಕ್ಷಣಕ್ಕೆ ಬೇಕಾದ ಆಕಾರಕ್ಕೆ ಉಂಡೆ ಮಾಡಿಕೊಳ್ಳಿ.
    * ಈಗ ರುಚಿಯಾದ ಎಳ್ಳು ಉಂಡೆ ಸವಿಯಲು ಸಿದ್ಧವಾಗುತ್ತದೆ. ಈ ಉಂಡೆಯನ್ನು ನೀವು 20 ದಿನ ಬೇಕಾದರು ಸಂಗ್ರಹಿಸಿ ಇಡಬಹುದಾಗಿದೆ. ಇದನ್ನೂ ಓದಿ: ನಿಮ್ಮ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಮಾಡಿ ಹುರಿಗಡಲೆ ಪೇಡಾ

  • ಬೆಂಗ್ಳೂರಿನಿಂದ ಮೈಸೂರು, ಬೆಳಗಾವಿಗೆ ವಿಶೇಷ ರೈಲು – ಎಲ್ಲಿ ನಿಲುಗಡೆ? ಯಾವ ದಿನ ಓಡುತ್ತೆ?

    ಬೆಂಗ್ಳೂರಿನಿಂದ ಮೈಸೂರು, ಬೆಳಗಾವಿಗೆ ವಿಶೇಷ ರೈಲು – ಎಲ್ಲಿ ನಿಲುಗಡೆ? ಯಾವ ದಿನ ಓಡುತ್ತೆ?

    ಬೆಂಗಳೂರು: ದಕ್ಷಿಣ ರೈಲ್ವೇ ಬೆಂಗಳೂರು – ಬೆಳಗಾವಿ ಮತ್ತು ಬೆಂಗಳೂರು ಮೈಸೂರು ಮಧ್ಯೆ ಎಕ್ಸ್ ಪ್ರೆಸ್ ರೈಲು ಓಡಿಸಲು ಮುಂದಾಗಿದೆ.

    ಈ ರೈಲುಗಳ ಸೇವೆ ಮೇ 22ರಿಂದ ಆರಂಭವಾಗಲಿದ್ದು, ಭಾರತೀಯ ರೈಲ್ವೇ ವೆಬ್‍ಸೈಟ್ ಮೂಲಕ ಟಿಕೆಟ್ ಬುಕ್ ಮಾಡಿದವರಿಗೆ ಮಾತ್ರ ಈ ರೈಲುಗಳನ್ನು ಪ್ರಯಾಣಿಸಲು ಅನುಮತಿ ನೀಡಲಾಗುತ್ತದೆ. ನಿಲ್ದಾಣದಲ್ಲಿನ ಕೌಂಟರ್ ಗಳಲ್ಲಿ ಟಿಕೆಟ್ ನೀಡುವುದಿಲ್ಲ. ಭಾನುವಾರ ರೈಲುಗಳು ಸಂಚರಿಸುವುದಿಲ್ಲ ಎಂದು ದಕ್ಷಿಣ ರೈಲ್ವೇ ತಿಳಿಸಿದೆ.

    ಬೆಂಗಳೂರಿನಿಂದ ಬೆಳಗಾವಿಗೆ ಸೋಮವಾರ, ಬುಧವಾರ, ಶುಕ್ರವಾರ ರೈಲು ಓಡಿದರೆ ಬೆಳಗಾವಿಯಿಂದ ಬೆಂಗಳೂರಿಗೆ ಮಂಗಳವಾರ, ಗುರುವಾರ ಶುಕ್ರವಾರ ಸಂಚರಿಸಲಿದೆ.

    ಈ ರೈಲು ಯಶವಂತಪುರ, ತುಮಕೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೇಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ ನಿಲ್ದಾಣಗಳಲ್ಲಿ ನಿಲ್ಲಲಿದೆ.

    ಬೆಂಗಳೂರಿನಿಂದ ಮೈಸೂರಿಗೆ ಬೆಳಗ್ಗೆ 9:43, 10:15, 10:48, 11:08, 11:44, 11:59, ಮಧ್ಯಾಹ್ನ 12:45ಕ್ಕೆ ಹೊರಟರೆ ಮೈಸೂರಿನಿಂದ ಬೆಂಗಳೂರಿಗೆ ಮಧ್ಯಾಹ್ನ 1:45, 1:54, 2:10, 2:40, 3:02, 3:34, 4:10ಕ್ಕೆ ಹೊರಡಲಿದೆ.

    ಬೆಂಗಳೂರು – ಮೈಸೂರು ರೈಲುಗಳಿಗೆ  ಕೆಂಗೇರಿ, ರಾಮನಗರ, ಮದ್ದೂರು, ಮಂಡ್ಯ, ಪಾಂಡವಪುರ, ನಾಗನಹಳ್ಳಿ ನಿಲ್ದಾಣಗಳಲ್ಲಿ ನಿಲುಗಡೆಯಿದೆ.

    covid 19 corona railways

  • ‘ತೋಳ’ ಚಂದ್ರ ಗ್ರಹಣಕ್ಕೆ ಸಿಕ್ಕಿತು ಮೋಕ್ಷ

    ‘ತೋಳ’ ಚಂದ್ರ ಗ್ರಹಣಕ್ಕೆ ಸಿಕ್ಕಿತು ಮೋಕ್ಷ

    – ಅರೆನೆರಳಲ್ಲಿ ಕೊಂಚ ಮಂಕಾದ ಚಂದಿರ

    ಬೆಂಗಳೂರು: ಪ್ರತಿ ಹುಣ್ಣಿಮೆಯಂದು ಚಂದಿರ ಪಳಪಳನೆ ಹೊಳೆಯುತ್ತಾನೆ. ಆದರೆ ಬಾನಂಗಳದಲ್ಲಿ ಶುಕ್ರವಾರ ರಾತ್ರಿ 4 ಗಂಟೆಗಳ ಕಾಲ ನಡೆದ ಚಮತ್ಕಾರದಲ್ಲಿ ಚಂದಿರ ಕೊಂಚ ಮಂಕಾಗಿ ಹೋಗಿದ್ದು, ತೋಳನ ವಕ್ರದೃಷ್ಟಿಯಿಂದಾಗಿ ಚಂದಿರನಿಗೆ ಗ್ರಹಣ ಬಡಿದಿತ್ತು.

    ಶುಕ್ರವಾರ ರಾತ್ರಿ 10.38 ರಿಂದ ಮುಂಜಾನೆ 2.42ರವರೆಗೂ ಚಂದ್ರ ಭೂಮಿಯ ಅರೆನೆರಳಿನಲ್ಲಿ ಸಿಲುಕಿದ್ದನು. ಈ ನಾಲ್ಕು ಗಂಟೆಗಳ ಕಾಲ ನಡೆದ ಕೌತುಕವನ್ನು ತೋಳ ಚಂದ್ರ ಗ್ರಹಣ, ಪಾರ್ಶ್ವ ಛಾಯಾ ಗ್ರಹಣ, ಮಸುಕಂಚಿನ ಚಂದ್ರಗ್ರಹಣ ಎಂದೆಲ್ಲ ಕರೆಯುತ್ತಾರೆ. ಮಧ್ಯರಾತ್ರಿ 12.40ರ ಸುಮಾರಿಗೆ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸಿತ್ತು.

    ಈ ಭೂಮಿ-ಚಂದ್ರನ ಆಟ ವಿಶ್ವದ ಕೆಲವೆಡೆ ಮಾತ್ರ ಗೋಚರಿಸಿತು. ಭಾರತ, ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಯುರೋಪ್, ಉತ್ತರ ಅಮೆರಿಕದ ಕೆಲ ಪ್ರದೇಶದಲ್ಲಿ ತೋಳ ಚಂದಿರನ ಕೌತುಕತೆಯನ್ನ ಜನ ಕಣ್ತುಂಬಿಕೊಂಡರು. ರಾಜ್ಯದಲ್ಲೂ ತೋಳ ಚಂದಿರನ ವಿಸ್ಮಯ ಜರುಗಿದ್ದು, ಕೆಲವರು ನಿದ್ರೆ ಬಿಟ್ಟು ಈ ಕೌತುಕತೆಯನ್ನ ಕಣ್ತುಂಬಿಕೊಂಡರು. ಬೆಂಗಳೂರಿನ ಟೌನ್‍ಹಾಲ್, ಲಾಲ್‍ಬಾಗ್‍ನಲ್ಲಿ ತೋಳ ಚಂದ್ರಗ್ರಹಣ ವೀಕ್ಷಣೆಗೆ ಅನುವು ಮಾಡಿಕೊಡಲಾಗಿತ್ತು. ವಿದ್ಯಾರ್ಥಿಗಳು ಸೇರಿದಂತೆ ಹಲವರು ಮಧ್ಯರಾತ್ರಿ ಜರುಗಿದ ಚಂದಿರನ ಚಮಾತ್ಕಾರ ನೋಡಿದರು.

    2019ರ ಅಂತ್ಯದ ವೇಳೆಗೆ, ಇಡೀ ಜಗತ್ತು ಬೆಂಕಿ ಬಳೆ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿತ್ತು. ಇದಾಗಿ ಕೇವಲ ಎರಡು ವಾರಗಳ ಅಂತರದಲ್ಲಿ ಚಂದ್ರಗ್ರಹಣ ಸಂಭವಿಸಿದೆ. ಹೀಗಾಗಿ ಅತ್ಯಂತ ಕುತೂಹಲಕಾರಿಯಾಗಿ ಜನ ಚಂದ್ರಗ್ರಹಣವನ್ನ ವೀಕ್ಷಿಸಿದರು.

    ಚಂದ್ರ ಗ್ರಹಣದ ವಿಶೇಷತೆಗಳೇನು?
    – ಈ ಚಂದ್ರ ಗ್ರಹಣಕ್ಕೆ ತೋಳ ಚಂದ್ರ ಗ್ರಹಣ ಎಂದು ಹೆಸರು
    – ಜನವರಿ ತಿಂಗಳು ತೋಳಗಳ ಸಂತಾನಾಭಿವೃದ್ಧಿಯ ಸಮಯ
    – ಪಾಶ್ಚಾತ್ಯ ದೇಶಗಳಲ್ಲಿ ಜನವರಿ ತಿಂಗಳ ಗ್ರಹಣವನ್ನು ತೋಳ ಗ್ರಹಣ ಎನ್ನುತ್ತಾರೆ
    – ಈ ಗ್ರಹಣವನ್ನು ಸಂಪೂರ್ಣ ಚಂದ್ರ ಗ್ರಹಣ ಎನ್ನುವುದಿಲ್ಲ
    – ಇದು ನೆರಳಿನ ಗ್ರಹಣ, ಚಂದ್ರನ ಸ್ಥಾನದಲ್ಲಿ ವಿಶೇಷ ಬದಲಾವಣೆ ಇಲ್ಲ

    ವೈಜ್ಞಾನಿಕವಾಗಿ ಇದೊಂದು ಖಗೋಳ ಕೌತುಕತೆ. ಇದರಿಂದ ಯಾವುದೇ ಅಪಾಯವಿಲ್ಲ. ಆದರೆ ಜ್ಯೋತಿಷ್ಯಗಳ ಪ್ರಕಾರ ಈ ಚಂದ್ರಗ್ರಹಣ ದೊಡ್ಡ ಅಪಾಯಕರಿಯಂತೆ. ವರ್ಷಾರಂಭದಲ್ಲಿ ಸಂಭವಿಸಿರುವ ಈ ತೋಳ ಚಂದ್ರ ಗ್ರಹಣದಿಂದ ಜಲಗಂಡಾಂತರವಿದೆ ಅಂತ ಭವಿಷ್ಯ ನುಡಿದಿದ್ದಾರೆ.

  • ದೇಶದ ಹಬ್ಬಕ್ಕೆ ಕ್ಷಣಗಣನೆ : ಸಿಂಗಾರಗೊಂಡಿದೆ ರಾಜಪಥ್: ಈ ಬಾರಿಯ ಪರೇಡ್ ವಿಶೇಷತೆ ಏನು?

    ದೇಶದ ಹಬ್ಬಕ್ಕೆ ಕ್ಷಣಗಣನೆ : ಸಿಂಗಾರಗೊಂಡಿದೆ ರಾಜಪಥ್: ಈ ಬಾರಿಯ ಪರೇಡ್ ವಿಶೇಷತೆ ಏನು?

    ನವದೆಹಲಿ: ದೇಶದ ಹಬ್ಬ ಗಣರಾಜೋತ್ಸವ ಆಚರಣೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ದೆಹಲಿಯ ರಾಜಪಥ್ ರಸ್ತೆ ಶನಿವಾರದ ಕಾರ್ಯಕ್ರಮಕ್ಕೆ ನವವಧುವಿನಂತೆ ಸಿಂಗಾರಗೊಂಡಿದೆ.

    ಬೆಳಗ್ಗೆ ಹತ್ತು ಗಂಟೆಯಿಂದ ಅಧಿಕೃತ ಕಾರ್ಯಕ್ರಮ ಆರಂಭವಾಗಲಿದ್ದು ಅಂತಿಮ ಹಂತದ ಕೆಲಸಗಳು, ಭದ್ರತಾ ತಪಾಸಣೆ ಕಾರ್ಯ ನಡೆಯುತ್ತಿದೆ. ಬೆಳಗ್ಗೆ ಹತ್ತು ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಈ ಬಾರಿಯ ಅತಿಥಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸೈರಿಲ್ ರಾಮ್ಫೂಸಾ ಸಮ್ಮುಖದಲ್ಲಿ ಇಂಡಿಯಾ ಗೇಟ್ ನಲ್ಲಿರುವ ಅಮರ್ ಜವಾನ್ ಜ್ಯೋತಿ ಬಳಿ ಹುತ್ಮಾತ ಯೋಧರಿಗೆ ಗೌರವ ವಂದನೆ ಸಲ್ಲಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಧ್ವಜಾರೋಹಣ ಮಾಡಲಿದ್ದಾರೆ.

    ಬೆಳಗ್ಗೆ 10.30ರಿಂದ ಪರೇಡ್ ಗೆ ಅಧಿಕೃತ ಚಾಲನೆ ಸಿಗಲಿದ್ದು, ಮಹಾತ್ಮ ಗಾಂಧಿ 150ನೇ ಜನ್ಮ ದಿನ ಹಿನ್ನೆಲೆಯಲ್ಲಿ ಸ್ತಬ್ಧ ಚಿತ್ರಗಳ ಮೂಲಕ ವಿಶೇಷ ಗೌರವ ಸಲ್ಲಿಸಲು ತಯಾರಿ ನಡೆದಿದೆ. 17 ರಾಜ್ಯಗಳು 6 ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರ ಸರ್ಕಾರದ ಹಲವು ಸಚಿವಾಲಯದಿಂದ ಗಾಂಧಿಗೆ ಗೌರವ ಸಲ್ಲಿಸಲಾಗುತ್ತಿದೆ. ಇದನ್ನು ಓದಿ: ಫಸ್ಟ್ ಟೈಂ ಆರ್‌ಡಿಯಲ್ಲಿ ಪುರುಷ ದಳವನ್ನು ಮುನ್ನಡೆಸಲಿದ್ದಾರೆ ಮಹಿಳಾ ಅಧಿಕಾರಿ

    ಪ್ರತಿ ವರ್ಷದಂತೆ ಈ ಬಾರಿಯೂ ಗಣರಾಜೋತ್ಸವದ ಮೇಲೆ ಉಗ್ರರ ಕರಿನೆರಳಿದ್ದು ಜೈಶ್ ಈ ಮೊಹ್ಮದ್ ಉಗ್ರ ಸಂಘಟನೆಯ ಶಂಕಿತ ಇಬ್ಬರು ಉಗ್ರರನ್ನು ದೆಹಲಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ರಾಜಪಥ್ ನಿಂದ ಐದು ಕಿಮೀ ವರೆಗೂ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದ್ದು ಪಾಸ್ ಇದ್ದವರು ಮಾತ್ರ ಜನಪಥ್ ರಸ್ತೆ ಪ್ರವೇಶಿಸಬಹುದಾಗಿದೆ. ವೇದಿಕೆ ಸುತ್ತಲೂ ಮೂರು ಬಗೆಯ ಭದ್ರತೆ ಒದಗಿಲಾಗಿದ್ದು ಎಸ್ಪಿಜಿ, ಬ್ಲಾಕ್ ಕ್ಯಾಟ್ ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗುವ ಗಣ್ಯರಿಗೆ ಸ್ಪೆಷಲ್ ಪ್ರೊಟಕ್ಷನ್ ಗ್ರೂಪ್ ನಿಂದ ಭದ್ರತೆ ನೀಡಲಾಗಿದೆ.

    ಹೇಗೆ ಪರೇಡ್ ಆರಂಭಗೊಳ್ಳುತ್ತದೆ?
    ಶನಿವಾರ ಬೆಳಗ್ಗೆ 9.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಮರ್ ಜವಾನ್ ಜ್ಯೋತಿ ಬಳಿ ಆಗಮಿಸಲಿದ್ದಾರೆ. ಬಳಿಕ 9.55ಕ್ಕೆ ಕುದುರೆ ಸಾರೋಟಿನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಆಗಮಿಸಿ ಅಮರ್ ಜವಾನ್ ಜ್ಯೋತಿ ಬಳಿ ಆಗಮಿಸಿ ಯುದ್ಧದಲ್ಲಿ ಹುತ್ಮಾತರಾದ ಸೈನಿಕರಿಗೆ ಗೌರವ ವಂದನೆ ಸಲ್ಲಿಸಲಿದ್ದಾರೆ. ಇದನ್ನು ಓದಿ: ರಾಜಪಥ್ ರಸ್ತೆಯಲ್ಲಿ ಮೊದಲ ಬಾರಿ ಪ್ರತಿಧ್ವನಿಸಲಿದೆ ಕನ್ನಡದ ಹಾಡು

    ರಾಷ್ಟ್ರಪತಿಗಳು 10 ಗಂಟೆಗೆ ಪ್ರಧಾನಿ ಸಮ್ಮುಖದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಈ ವೇಳೆ ದೇಶದ ಭೂ, ವಾಯು ಮತ್ತು ನೌಕದಳದ ಮುಖ್ಯಸ್ಥರು ಉಪಸ್ಥಿತರಿರಲಿದ್ದಾರೆ. 10.30ಕ್ಕೆ ಅಧಿಕೃತವಾಗಿ ಪರೇಡ್‍ಗೆ ಆರಂಭವಾಗುವ ಸಾಧ್ಯತೆಯಿದೆ. ರಾಷ್ಟ್ರಪತಿ ಭವನದಿಂದ ಇಂಡಿಯಾಗೇಟ್ ವರೆಗೆ ಒಟ್ಟು ನಾಲ್ಕು ಕಿಮೀ ದೂರ ಹಾಗೂ ಮೂರು ಗಂಟೆಗಳ ಕಾಲ ಪರೇಡ್ ನಡೆಯಲಿದೆ.

    ವಿಶೇಷವಾಗಿ ಮಹಾತ್ಮ ಗಾಂಧೀಜಿ ಭೇಟಿ ಕೊಟ್ಟ ನೆನಪುಗಳನ್ನು ತೋರಿಸಲು 17 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶ ಗಾಂಧೀಜಿಗೆ ಸಂಬಂಧಿಸಿದ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಲಿದೆ.

    ಪರೇಡ್ ವಿಶೇಷತೆಗಳು: ಭಾರತೀಯ ಸೇನೆಗೆ ಅವಳವಡಿಸಿಕೊಂಡಿರುವ ಅಮೇರಿಕಾದ ಎಂ777 ಎ2 ಆರ್ಟಿಲರಿ ಗನ್ ಈ ಬಾರಿ ಪರೇಡ್ ವಿಶೇಷ ಪ್ರದರ್ಶನವಾಗಿದೆ. ಅಲ್ಲದೇ ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಂಡಿರುವ ಕೆ9 ವಜ್ರಾ ಆರ್ಟಿಲರಿ ಗನ್ ಕೂಡ ಪ್ರದರ್ಶನವಾಗಲಿದೆ. ಇದನ್ನು ಓದಿ: ಮೋದಿ ಜೊತೆ ಗಣರಾಜ್ಯೋತ್ಸವ ವೀಕ್ಷಿಸಲು ಬೆಂಗ್ಳೂರು ವಿದ್ಯಾರ್ಥಿನಿಗೆ ಬಂತು ಆಹ್ವಾನ

    ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ ಸಿದ್ಧಪಡಿಸಿರುವ ಮಧ್ಯಮ ಶ್ರೇಣಿಯ ಏರ್ ಮಿಸೈಲ್, ಅರ್ಜುನಾ ಟ್ಯಾಂಕ್ ಗಳ ರಕ್ಷಣೆಗೆಂದು ನಿರ್ಮಾಣಗೊಂಡಿರುವ ಅರ್ಮರ್ಡ್ ರಿಕವರಿ ವೆಹಿಕಲ್ (ಶಸ್ತ್ರಸಜ್ಜಿತ ರಕ್ಷಣಾ ವಾಹನ) ಕೂಡಾ ಮೊದಲ ಬಾರಿಗೆ ಪ್ರದರ್ಶನ ಮಾಡಲಾಗುತ್ತಿದೆ. ಬಯೋ ಇಂಧನ ಸಾಮರ್ಥ್ಯದಿಂದ ಮೊದಲ ಬಾರಿಗೆ ಹಾರಾಟ ನಡೆಸಲಿರುವ ಎಎನ್ – 32 ವಿಮಾನ ಪರೇಡಿನ ಮತ್ತೊಂದು ವಿಶೇಷವಾಗಿದೆ.

    ನೇತಾಜಿ ಸುಭಾಸ್ ಚಂದ್ರಬೋಸ್ ಅವರ ಐಎನ್‍ಎ ದಳದಲ್ಲಿದ್ದ ನಾಲ್ವರು ಯೋಧರು ಇದೆ ಮೊದಲ ಬಾರಿಗೆ ಪರೇಡ್ ನಲ್ಲಿ ಭಾಗಿಯಾಗುತ್ತಿದ್ದು, ಭಾರತೀಯ ಸೇನೆಯ ಮೂರು ದಳಗಳಿಗಾಗಿ ಸಿದ್ಧಪಡಿಸಲಾಗಿರುವ ಶಂಖನಾದ ಹೆಸರಿನ ವಿಶೇಷ ಟ್ಯೂನ್ ಈ ವೇಳೆ ಬಳಕೆ ಮಾಡಲಾಗುತ್ತದೆ. ಮೊದಲ ಬಾರಿಗೆ ಮಹಿಳಾ ಶಕ್ತಿಯ ಪ್ರದರ್ಶನ ನಡೆಯಲಿದ್ದು, ಮೇಜರ್ ಕುಸುಬು ಕನ್ವಾಲ್ ನೇತೃತ್ವದಲ್ಲಿ ದೇಶದ ಅತಿ ಪುರಾತನ ಪ್ಯಾರಾಮಿಲಿಟರಿ ಫೋರ್ಸ್ ಅಸ್ಸಾಂ ರೈಫಲ್ಸ್ ಅನ್ನು ಮುನ್ನಡೆಸಲಿದ್ದಾರೆ. ಮೊದಲ ಬಾರಿಗೆ ಮಹಿಳಾ ಅಧಿಕಾರಿಯಾದ ಕ್ಯಾಪ್ಟನ್ ಶಿಖಾ ಸುರಭಿ ಅವರು ಸೇನೆಯ ಡೇರ್ ಡೇವಿಲ್ಸ್ ಮೋಟಾರ್ ಸೈಕಲ್ ತಂಡದಲ್ಲಿ ಪುರುಷ ಸದಸ್ಯರ ಜೊತೆ ಸೇರಿ ಪ್ರದರ್ಶನ ನೀಡಲಿದ್ದಾರೆ. ಇದನ್ನು ಓದಿ: ಪ್ರಧಾನಿ ಮೋದಿ ಆಹ್ವಾನ ಸ್ವೀಕರಿಸಿದ ದಕ್ಷಿಣ ಆಫ್ರಿಕಾ ಅಧ್ಯಕ್ಷ

    ಗಣರಾಜೋತ್ಸವದ ಮುಖ್ಯ ಅತಿಥಿಯಾಗಿ ದಕ್ಷಿಣಾ ಆಫ್ರಿಕಾ ಅಧ್ಯಕ್ಷ ಸೈರಿಲ್ ರಾಮ್ಪೂಸಾ ಆಗಮಿಸಲಿದ್ದು, ನಲ್ಸೇನ್ ಮಂಡೇಲಾ ಬಳಿಕ ದಕ್ಷಿಣ ಆಫ್ರಿಕಾದಿಂದ ಗಣರಾಜೋತ್ಸದಲ್ಲಿ ಭಾಗಿಯಾಗಿರುತ್ತಿರುವ ಎರಡನೇ ಅಧ್ಯಕ್ಷರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಂದನ್ ಶೆಟ್ಟಿ ನನಗೆ ಯಾಕೆ ಸ್ಪೆಷಲ್ ಅಂತ ಹೇಳಿದ್ರು ಅರ್ಜುನ್ ಜನ್ಯ

    ಚಂದನ್ ಶೆಟ್ಟಿ ನನಗೆ ಯಾಕೆ ಸ್ಪೆಷಲ್ ಅಂತ ಹೇಳಿದ್ರು ಅರ್ಜುನ್ ಜನ್ಯ

    ಬೆಂಗಳೂರು: ಬಿಗ್‍ಬಾಸ್ ಸೀಸನ್-5ರ ಟ್ರೋಫಿ ಮುಡಿಗೇರಿಸಿಕೊಂಡಿರೋ ರ‍್ಯಾಪ್ ಸಿಂಗರ್ ಚಂದನ್ ಶೆಟ್ಟಿ ಸೋಮವಾರ ರಾತ್ರಿ ಬಿಡದಿಯ ಫಿಲ್ಮ್ ಸಿಟಿಯಿಂದ ನಿರ್ಗಮಿಸಿದ್ದರು.

    105ದಿನ ಬಿಗ್‍ಬಾಸ್ ಮನೆಯಲ್ಲಿ ಭರ್ಜರಿ ಮನರಂಜನೆ ನೀಡಿ ಜನರ ಮನ ಗೆದ್ದಿದ್ದ ಚಂದನ್ ಶೆಟ್ಟಿಯನ್ನು ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡರು. ಮೆರವಣಿಗೆ ಮೂಲಕ ಸಾವಿರಾರು ಜನರೊಂದಿಗೆ ಆಗಮಿಸಿದ್ದರು. ಆಂಜನೇಯ ದೇವಸ್ಥಾನಕ್ಕೆ ತೆರಳಿ ಚಂದನ್ ಶೆಟ್ಟಿ ಪೂಜೆ ಸಲ್ಲಿಸಿ ಪಬ್ಲಿಕ್ ಟಿವಿಗೆ ಆಗಮಿಸಿದ್ದರು.

    ಪಬ್ಲಿಕ್ ಟಿವಿಗೆ ಬಂದಿದ್ದ ಚಂದನ್ ಶೆಟ್ಟಿಗೆ ಅರ್ಜುನ್ ಜನ್ಯ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಚಂದು ನನಗೆ ತುಂಬಾನೇ ಖುಷಿಯಾಗಿದೆ. ನಾನು ನಿನ್ನನ್ನು ಮೊದಲಿನಿಂದ ನೋಡಿದ್ದೇನೆ. ನೀನು ಕಷ್ಟ ಪಟ್ಟಿದ್ದನ್ನು ಹಾಗೂ ಕನಸು ಕಂಡಿದ್ದರ ಬಗ್ಗೆ ನನಗೆ ತಿಳಿದಿದೆ. ಯಾರಾದರೂ ಕನಸು ಕಂಡು ಅದನ್ನು ಸಾಧಿಸಿದಾಗ ಆಗುವ ಖುಷಿ ನನಗೂ ತಿಳಿದಿದೆ. ನೀನು ಈ ಚಿಕ್ಕ ವಯಸ್ಸಿನಲ್ಲೇ ಒಬ್ಬನೇ ಕಷ್ಟಪಟ್ಟು ಒಬ್ಬನೇ ರ‍್ಯಾಪ್ ಮಾಡಿ ಅದನ್ನು ಹಾಡಿ ನಂತರ ಒಬ್ಬನೇ ವಿಡಿಯೋ ಮಾಡಿ ನಿನ್ನದೇ ಒಂದು ದಾರಿಯನ್ನು ಕಂಡುಕೊಂಡಿದ್ದೀಯ. ಅದು ನನಗೆ ಖುಷಿಯಾಗುತ್ತಿದೆ. ದೇವರು ನಿನಗೆ ಒಳ್ಳೆದು ಮಾಡಲಿ ಹಾಗೂ ನೀನು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ ಎಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹರ್ಷ ವ್ಯಕ್ತಪಡಿಸಿದ್ದಾರೆ.

    ಅರ್ಜುನ್ ಮಾತಿಗೆ ಪ್ರತಿಕ್ರಿಯಿಸಿದ ಶೆಟ್ಟಿ, ಸರ್. ನಿಮ್ಮ ಆರ್ಶೀವಾದ ನನ್ನ ಮೇಲೆ ಯಾವಾಗಲೂ ಇದೆ. ನಿಮ್ಮ ಸ್ಟೂಡೆಂಟ್ ಎಂದು ಹೇಳಿಕೊಳ್ಳಲು ನನಗೆ ಬಹಳ ಹೆಮ್ಮೆಯಿದೆ. ನೀವು ಪ್ರತಿ ಸಲ ನನಗೆ ಸಿಕ್ಕಿದಾಗ ಎರಡು ಮಾತನ್ನು ಆಡುತ್ತಿದ್ದೀರಿ. ಆದರೆ ಆ ಮಾತಲ್ಲಿ ದೊಡ್ಡ ಅರ್ಥವಿರುತ್ತಿತ್ತು. ನಾನು ಆ ಮಾತಗಳನ್ನು ಪಾಲಿಸುತ್ತಿದ್ದೇನೆ. ನೀವು ಹೇಳಿದ ಪ್ರತಿಯೊಂದು ಮಾತನ್ನೂ ನಾನು ಈವರೆಗೂ ಪಾಲಿಸುತ್ತಾ ಬಂದಿದ್ದೀನಿ. ನಾನು ಒಬ್ಬ ಚಂದನ್ ಶೆಟ್ಟಿ ಆಗಿರುವುದೇ ನಿಮ್ಮಿಂದ. ನನ್ನಿಂದ ಏನಾದರೂ ತಪ್ಪು ಆಗಿದ್ದರೆ ಕ್ಷಮಿಸಿ ಸರ್ ಎಂದು ಹೇಳಿದ್ರು.

    ನಿನ್ನ ಪರಿಶ್ರಮದಿಂದ ನೀನು ಚಂದನ್ ಶೆಟ್ಟಿ ಆಗಿದ್ದೀಯಾ? ನನಗೆ ನಿನ್ನ ಸ್ವಾಭಾವಿತ ನಡವಳಿಕೆ ನನಗೆ ಬಹಳ ಇಷ್ಟವಾಯಿತ್ತು. ಮನುಷ್ಯ ಎಷ್ಟೇ ಯಶಸ್ಸು ಕಂಡರೂ ಅವನಿಗೆ ಸ್ವಾಭಾವಿತ ನಡವಳಿಕೆಯಿರಬೇಕು. ಅದು ನಿನ್ನಲ್ಲಿ ಇದೆ. ಅದು ಇರೋವರೆಗೂ ನಿನ್ನನ್ನು ಯಾರೂ ಏನು ಮಾಡಲು ಆಗುವುದಿಲ್ಲ. ನಿನಗೆ ಯಾವುದೇ ಅಡಚನೆ ಕೂಡ ಇರುವುದಿಲ್ಲ. ಆ ಸ್ವಭಾವನ್ನು ನಾನು ಬಿಗ್‍ಬಾಸ್ ಮನೆಯಲ್ಲಿ ಕಂಡಿದ್ದೇನೆ. ಚಂದನ್ ಮೆಚ್ಯೂರಿಟಿಯನ್ನು ಕಂಡಿದ್ದಾನೆ ಎಂದು ಅನಿಸಿತ್ತು ಅಂತ ಅರ್ಜುನ್ ಜನ್ಯ ಹೇಳಿದ್ರು.

    ಚಂದನ್ ಶೆಟ್ಟಿ ಯಾಕೆ ಸ್ಪೆಷಲ್: ಚಂದನ್ ಶೆಟ್ಟಿ ಒಬ್ಬ ಕನಸುಗಾರ. ಕನಸು ಕಾಣದಲ್ಲದೇ ಅದನ್ನು ನನಸು ಮಾಡಲು ಪ್ರಯತ್ನಿಸುತ್ತಾನೆ. ಆ ಕನಸಿನ ಹಿಂದೆ ಹೋಗಿ ತನ್ನದೇ ಆದ ಒಂದು ದಾರಿಯನ್ನು ಮಾಡಿಕೊಳ್ಳುತ್ತಾನೆ. `ಮೂರೇ ಮೂರು ಪೆಗ್’ ಹಾಡು ವಿಶ್ವದಾದ್ಯಂತ ಜನಪ್ರಿಯವಾಗಿದೆ. ನಾನು ದುಬೈಗೆ ಹೋದರು ಅಲ್ಲಿನ ಜನರು ಆ ಹಾಡನ್ನು ಕೇಳುತ್ತಾರೆ. ಇದು ಕರ್ನಾಟಕದ ಹೆಮ್ಮಯ ವಿಷಯ. ಚಂದನ್ ಶೆಟ್ಟಿಗೆ ಯಾವ ಗಾಡ್ ಫಾದರ್ ಇಲ್ಲ. ಯಾವ ಮ್ಯೂಸಿಕ್ ಬ್ಯಾಗ್ರೌಂಡ್ ಕೂಡ ಇಲ್ಲದೆ ಈ ರೀತಿ ಹಾಡುಗಳನ್ನು ಮಾಡುತ್ತಾನೆಂದರೆ ಅದು ದೇವರ ಆರ್ಶಿವಾದ ಎಂದು ಅರ್ಜುನ್ ಜನ್ಯ ತಿಳಿಸಿದ್ದಾರೆ.

    ಅಷ್ಟೇ ಅಲ್ಲದೇ ಅರ್ಜುನ್ ಜನ್ಯ ಅವರು ಚಂದನ್ ಶೆಟ್ಟಿಯಿಂದ ಒಂದು ಹಾಡನ್ನು ಕೂಡ ಹಾಡಿಸಿದ್ದಾರೆ. ಅರ್ಜುನ ಜನ್ಯಗೋಸ್ಕರ ಚಂದನ್ ನಿವೇದಿತಾ ಗೌಡಗೆ ಹಾಡಿದ ಗೊಂಬೆ.. ಗೊಂಬೆ.. ಹಾಡನ್ನು ಹಾಡಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ವಿಜಯ ಪತಾಕೆ ಹಾರಿಸಿದ ಚಂದನ್ ಶೆಟ್ಟಿಗೆ ಅಮ್ಮನಿಂದ ಮುದ್ದಾದ ಉಡುಗೊರೆ