ಮಂಡ್ಯ: ಗಾನಗಂಧರ್ವ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನದ ಸುದ್ದಿ ಕೇಳಿ ಕರ್ನಾಟಕ ಸೇರದಂತೆ ದೇಶದ ಕೋಟ್ಯಂತರ ಸಂಗೀತ ಪ್ರಿಯರು ದುಃಖಿತರಾಗಿದ್ದಾರೆ. ಎಸ್‍ಪಿಬಿ ಅವರು ಕೇವಲ ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲದೇ ತಮ್ಮ ನಟನೆಯ ಮೂಲಕ ಸಾಕಷ್ಟು ಮಂದಿಯ ಮನ ಗೆದ್ದಿದ್ದಾರೆ. ಇಂತಹ ಕಲಾವಿದರಿಗೂ ಸಕ್ಕರೆ ನಾಡು ಮಂಡ್ಯ ಜಿಲ್ಲೆಗೂ ಒಂದು ನಂಟಿದೆ.
ಆಡು ಮುಟ್ಟದ ಸೊಪ್ಪಿಲ್ಲ, ಬಾಲಸುಬ್ರಹ್ಮಣ್ಯಂ ಅವರು ಹಾಡುಗಳನ್ನು ಕೇಳದ ಜನರಿಲ್ಲ. ದೇಶದ ಮೂಲೆ ಮೂಲೆಗಳಲ್ಲೂ ಬಾಲಸುಬ್ರಹ್ಮಣ್ಯಂ ಅವರ ಕಂಠ ಮೆಚ್ಚಿದ ಜನರು ಇದ್ದಾರೆ. ಬಾಲಸುಬ್ರಹ್ಮಣ್ಯಂ ಅವರು ಕೇವಲ ತಮ್ಮ ಕಂಠ ಸಿರಿಯಿಂದ ಮಾತ್ರವಲ್ಲ ತಮ್ಮ ನಟನೆಯಿಂದಲೂ ಸಾಕಷ್ಟು ಚಿತ್ರ ರಸಿಕರನ್ನು ಸೆಳೆದಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಎಸ್.ಪಿ.ಬಿ ಅವರು ಎರಡು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಅವರೊಂದಿಗೆ ನಟನೆ ಮಾಡಿದ ಮಂಡ್ಯ ಮೂಲದ ವ್ಯಕ್ತಿಗಳು ಅವರ ನಟನೆಯ ಜೊತೆಗೆ ಅವರಲ್ಲಿನ ಗುಣಗಳನ್ನು ನೆನೆಯುತ್ತಿದ್ದಾರೆ. ಆ ಕ್ಷಣಗಳಲ್ಲಿ ಅವರೊಂದಿಗೆ ಇದ್ದ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.
1995 ರಲ್ಲಿ ತೆರೆಕಂಡಿರುವ ಬಾಳೊಂದು ಚದುರಂಗ ಚಲನಚಿತ್ರದಲ್ಲಿ ಎಸ್‍ಬಿ ಬಾಲಸುಬ್ರಹ್ಮಣ್ಯಂ ಅವರು ನಟನೆ ಮಾಡಿದ್ದರು. ಈ ಚಿತ್ರದಲ್ಲಿ ಕುಟುಂಬದರನ್ನು ಕಳೆದುಕೊಂಡು, ಅವರ ಆಶ್ರುತರ್ಪಣ ಬಿಡಲು ಬಾಲಸುಬ್ರಹ್ಮಣ್ಯಂ ಅವರು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಗೆ ಬಂದಿರುತ್ತಾರೆ. ಈ ವೇಳೆ ಜ್ಯೋತಿಷಿ ಭಾನುಪ್ರಕಾಶ್‍ಶರ್ಮ ಅವರು ನಟನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಾಲಸುಬ್ರಹ್ಮಣ್ಯಂ ಅವರು ನಡೆದುಕೊಂಡ ರೀತಿ ಮತ್ತು ಅವರ ಗುಣಗಳನ್ನು ಭಾನುಪ್ರಕಾಶ್ ಶರ್ಮ ಅವರು ನೆನೆಯುತ್ತಿದ್ದಾರೆ. ಇದಲ್ಲದೇ ಮುದ್ದಿನಮಾವ ಚಿತ್ರವೂ ಸಹ ಮಂಡ್ಯದ ಶೂಟಿಂಗ್ ಮಹದೇವಪುರದಲ್ಲಿ ನಡೆದಿದೆ. ಶೂಟಿಂಗ್ ವೇಳೆ ಸಾವಿರಾರು ಜನ ಬಾಲಸುಬ್ರಹ್ಮಣ್ಯಂ ಅವರನ್ನು ನೋಡಲು ಬಂದಿದ್ದನ್ನು ಇಲ್ಲಿನ ಜನರು ಮೆಲುಕು ಹಾಕುತ್ತಿದ್ದಾರೆ. ಇದಲ್ಲದೇ ಪಾಂಡವಪುರ ವ್ಯಾಪ್ತಿಯಲ್ಲಿ ನಡೆದ ಕನ್ನಡ ಜಾತ್ರೆಗೆ ಎಸ್‍ಪಿಬಿ ಅವರು ಕನ್ನಡ ಚಿತ್ರಗೀತೆಗಳನ್ನು ಹಾಡಿ ರಂಜಿಸಿದ್ದರು.
ಗಾನಗಂಧರ್ವ ಬಾಲಸುಬ್ರಹ್ಮಣ್ಯಂ ಅವರ ಗಾಯನ ಎಷ್ಟು ಪ್ರಸಿದ್ಧವೋ ಅಷ್ಟೇ ಅವರ ನಟನೆಯೂ ಸಹ ಪ್ರಸಿದ್ಧಿ ಪಡೆದುಕೊಂಡಿದೆ. ಬಾಲಸುಬ್ರಹ್ಮಣ್ಯಂ ಅವರು ನಮ್ಮಿಂದ ದೂರವಾದ್ರು ಸಹ ಅವರ ಕೊಡುಗೆಗಳು ಮಾತ್ರ ದೂರವಾಗುವುದಿಲ್ಲ.
– ನಿಜವಾಗಿ ಅತ್ತರೂ ಜನ ಅಭಿನಯ ಅಂದುಕೊಂಡಿದ್ರು
– ಜಗವೇ ನನ್ನ ಕರ್ಮಭೂಮಿ’ ಐದರ ಬಾಲಕನ ಗಟ್ಟಿ ನಿರ್ಧಾರ
ಬಾಲು ನಮ್ಮ ಜೊತೆ ಇದ್ದಾರೆ. ನಮ್ಮ ಜೊತೆಯೇ ಇರುತ್ತಾರೆ. ಇನ್ನು ನೂರಾರು ವರ್ಷ ಅವರೇ ನಮ್ಮನ್ನು ಬೆಳೆಸುತ್ತಾರೆ. ಹೀಗಂತ ಲಕ್ಷಾಂತರ ಸಂಗೀತ ಪ್ರೇಮಿಗಳು ನಂಬಿದ್ದರು. ಆದರೆ ಆ ನಂಬಿಕೆ ಇದೀಗ ಹುಸಿಯಾಗಿದ್ದು, ಗಾನಗಂಧರ್ವ ಬಾರದ ಲೋಕಕ್ಕೆ ತೆರಳಿದ್ದಾರೆ.
ಹೌದು. ಇಂದು ಮಧ್ಯಾಹ್ನ 1.04ರ ಸುಮಾರಿಗೆ ಗಾನ ಗಾರುಡಿಗ ಎಸ್‍ಪಿಬಿ ಅವರು ಆಸ್ಪತ್ರೆಯಲ್ಲಿಯೇ ವಿಧಿವಶರಾಗಿದ್ದಾರೆ. ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿರುವ ಬಾಲು ಕೇವಲ ಐದು ವರ್ಷ ಇದ್ದಾಗಲೇ ಸಂಗೀತವನ್ನೇ ಉಸಿರಾಗಿಸಿಕೊಳ್ಳಲು ನಿರ್ಧರಿಸಿದ್ದರು.
ಬಾಲ್ಯ, ಒಬ್ಬೊಬ್ಬರನ್ನು ಒಂದೊಂದು ರೀತಿ ಬೆಳೆಸುತ್ತದೆ. ಮನೆಯಲ್ಲಿಯ ಸಂಸ್ಕಾರವೇ ಒಬ್ಬ ವ್ಯಕ್ತಿಯನ್ನು ಮುನ್ನಡೆಸುತ್ತದೆ. ಆ ಕುಟುಂಬದ ಆಚಾರ-ವಿಚಾರ, ಕಷ್ಟ- ಸುಖ, ನೋವು ನಲಿವುಗಳೇ ಆ ಮನೆಯ ಮಕ್ಕಳನ್ನು ಒಂದು ದಾರಿಗೆ ತರುತ್ತದೆ. ಯಾಕೆಂದರೆ ಆ ಸಂಸ್ಕಾರದ ಶಕ್ತಿಯೇ ಹಾಗಿರುತ್ತದೆ. ಅದೇ ರೀತಿ ಬಾಲು ಕೂಡ ಸುಸಂಸ್ಕøತ ಮನೆಯಲ್ಲಿ ಹುಟ್ಟಿದವರು. ಅಪ್ಪ ಹರಿಕತೆ ಮಾಡುತ್ತಿದ್ದರು. ಆಗಾಗ ನಾಟಕಗಳಿಗೂ ಬಣ್ಣ ಹಚ್ಚುತ್ತಿದ್ದರು. ಅದೆಲ್ಲಾ ಬಾಲು ಮನಸಲ್ಲಿ ಅಚ್ಚಳಿಯದೇ ಕುಳಿತುಬಿಟ್ಟಿದ್ದು, ಸಂಗೀತಕ್ಕೆ ಬುನಾದಿ ಹಾಕಿತು.
ಹಲವಾರು ದಶಕಗಳ ಹಿಂದೆ ಹರಿಕತೆ ಮಾಡುವುದೆಂದರೆ ಅದನ್ನು ಪುಣ್ಯದ ಕೆಲಸ ಎಂದು ತಿಳಿಯುತ್ತಿದ್ದರು. ಆದರೆ ಆಗಿನ ಕಾಲವೇ ಬೇರೆ, ಈಗಿನ ಕಾಲವೇ ಬೇರೆ. ಹರಿಕತೆಯನ್ನು ಕೇಳಲೆಂದೇ ಜನರು ಇಡೀ ರಾತ್ರಿ ಜಾಗರಣೆ ಮಾಡುತ್ತಿದ್ದರು. ಆಗ ಮನರಂಜನೆ ಎನ್ನುವುದು ಈಗಿನಷ್ಟು ಬಿಡಿ, ನಲವತ್ತು ವರ್ಷ ಹಿಂದೆ ಇದ್ದಷ್ಟೂ ಇರಲಿಲ್ಲ. ಇಂತ ಹೊತ್ತಿನಲ್ಲಿ ಅದೊಂದು ದಿನ ಬಾಲು ತಂದೆ ನಾಟಕ ಮಾಡಲು ಹೋಗಿದ್ದರು. ಅಪ್ಪ ರಾಮದಾಸನ ಪಾತ್ರ ಮಾಡಿದರೆ, ಐದರ ಬಾಲು ರಘುರಾಮನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದರು. ಇದನ್ನೂ ಓದಿ: ಡಾ.ರಾಜ್‍ಕುಮಾರ್ ಅಂದರೆ ಬಾಲುಗೆ ಜೀವಜ್ಜೀವ ಪ್ರೇಮ
ಮೊದಲೇ ಐದರ ಕೂಸಾಗಿದ್ದ ಬಾಲು ನಡು ರಾತ್ರಿಯಲ್ಲಿ ನಾಟಕ ಮಾಡಲು ಸಾಧ್ಯವೆ? ಅದೂ ಬಣ್ಣ ಹಚ್ಚಿಕೊಂಡು, ಡೈಲಾಗ್ ನೆನೆಪಿಟ್ಟುಕೊಂಡು ವೇದಿಕೆ ಮೇಲೆ ಜನರನ್ನು ರಂಜಿಸಲು ಆಗುತ್ತಾ? ಇಲ್ಲ ಇದ್ಯಾವುದೂ ಆಗ ಯಾರಿಗೂ ನೆನಪಿಗೆ ಬರುತ್ತಿರಲಿಲ್ಲ. ಯಾಕೆಂದರೆ ಅದೇ ನಮ್ಮ ಕಾಯಕ. ಅದನ್ನು ನಾವು ಎಷ್ಟೇ ಕಷ್ಟಪಟ್ಟಾದರೂ ಸರಿ ಮಾಡಲೇಬೇಕು. ಹೀಗೊಂದು ಅಲಿಖಿತ ನಿಯಮವನ್ನು ಬಾಲು ತಂದೆ ಹಾಕಿಕೊಂಡಿದ್ದರು. ಆಗಲೇ ಅದೊಂದು ಘಟನೆ ನಡೆದಿತ್ತು. ಮೊದಲ ದೃಶ್ಯ ಮುಗಿಸಿ ಬಾಲು ಮಲಗಿದ್ದರು. ಮತ್ತೆ ಕೊನೆಯ ದೃಶ್ಯದಲ್ಲಿ ವೇದಿಕೆ ಮೇಲೆ ಬರಬೇಕಿತ್ತು. ಆಗ ಬಾಲುವನ್ನು ಎಬ್ಬಿಸಿ ಸ್ಟೇಜ್ ಮೇಲೆ ಬಿಟ್ಟಿದ್ದಾರೆ. ಬಾಲಕ ಬಾಲು ಮಾಡಿರುವುದು ನಿಜಕ್ಕೂ ಅಚ್ಚರಿ ತಂದಿತ್ತು.
ನಿದ್ದೆ ಕಣ್ಣಿನಲ್ಲಿ ಬಾಲಕ ಬಾಲುಗೆ ಏನು ಮಾಡುತ್ತಿದ್ದೇನೆಂದು ತಿಳಿದಿಲ್ಲ. ನನ್ನ ಅಪ್ಪನನ್ನು ಬಿಟ್ಟು ಬಿಡಿ ಎಂದು ಅಳಲು ಶುರು ಮಾಡಿದ್ದಾನೆ. ಅದು ನಾಟಕದ ವೇದಿಕೆ ಎನ್ನುವುದನ್ನು ಮರೆತಿದ್ದಾನೆ. ಆದರೆ ಅಸಲಿಗೆ ಜನರು, ನಿಜಕ್ಕೂ ಬಾಲಕ ಪಾತ್ರ ಮಾಡುತ್ತಿದ್ದಾನೆ ಅಂತ ಅಂದುಕೊಂಡಿದ್ದರು. ಅಷ್ಟೊಂದು ಇನ್‍ವಾಲ್ವಮೆಂಟ್ ತೋರಿಸುತ್ತಿದ್ದಾನೆ ಎಂದೇ ನಂಬಿಬಿಟ್ಟಿದ್ದಾರೆ. ಚಪ್ಪಾಳೆ ಮೇಲೆ ಚಪ್ಪಾಳೆ ಬೀಳುತ್ತಿವೆ. ಬಾಲು ಮಾತ್ರ ಅದೇ ರಾಗ ಅದೇ ಹಾಡು…`ನನ್ನ ಅಪ್ಪನನ್ನು ಬಿಟ್ಟು ಬಿಡಿ…ಬಿಟ್ಟು ಬಿಡಿ…’ ಎಂದು ರೋಧಿಸುತ್ತಿದ್ದಾರೆ.
ಕೆಲವೇ ಕೆಲವು ನಿಮಿಷದಲ್ಲಿ ಬಾಲುಗೆ ವಾಸ್ತವತೆ ಗೊತ್ತಾಗಿದೆ. ನಾನು ನಾಟಕ ಮಾಡುತ್ತಿದ್ದೇನೆ, ಹೀಗೆಲ್ಲಾ ಮಾಡಬಾರದು..ನಾನು ಎಲ್ಲೋ ತಪ್ಪು ಮಾಡಿದ್ದೇನೆ…ಇದೆಲ್ಲ ಕೆಲವೇ ಕೆಲವು ಕ್ಷಣಗಳ ಅಂತರದಲ್ಲಿ ಅವರ ಎದೆಯಲ್ಲಿ ಮಿಂಚಿ ಹೋಗಿದೆ. ಅದ್ಯಾವ ದೈವ ಸಾಕ್ಷಾತ್ಕಾರವೊ, ಅದ್ಯಾವ ಸರಸ್ವರತಿ ಕೃಪೆಯೇ…ಕೇವಲ ಐದೇ ಐದು ವರ್ಷ ಬಾಲು ಒಂದು ಗಟ್ಟಿ ನಿರ್ಧಾರಕ್ಕೆ ಬಂದಿದ್ದಾರೆ. ನಮ್ಮಪ್ಪ ನಮಗಾಗಿ ಇಷ್ಟೆಲ್ಲಾ ಹಗಲು ರಾತ್ರಿ ಕಷ್ಟ ಪಡುತ್ತಿದ್ದಾರಲ್ಲ…ಅವರಿಗಾಗಿ ನಾನೇನಾದರೂ ಮಾಢಬೇಕು. ಸುಮ್ಮನೆ ಕೂತರೆ ಆಗಲ್ಲ ಎನ್ನುವ ಜ್ಞಾನೋದಯ ಆಗಿದೆ.
ಆ ಕ್ಷಣ…ಆ ತಲ್ಲಣದ ದಿನ.. ಆ ಅನಿರ್ವಚನೀಯ ಅನುಭವ…ಎಲ್ಲವೂ ಸೇರಿಕೊಂಡು ಐದರ ಬಾಲಕನ ಮನಸನ್ನು ಕದಡಿಬಿಟ್ಟಿತು. ನಾವು ಮನೆಯಲ್ಲಿ ಆರಾಮಾಗಿ ಊಟ ಮಾಡುತ್ತೇವೆ ನಿಜ. ಅನ್ನವನ್ನು ಹೊತ್ತು ಹೊತ್ತಿಗೆ ತಿನ್ನುತ್ತೇವೆ ಸತ್ಯ. ಆದರೆ ಅದರ ಹಿಂದೆ ನಮ್ಮ ತಂದೆ ಇಷ್ಟೊಂದು ಕಷ್ಟ ಪಡುತ್ತಾರಲ್ಲ ? ಅದರ ಬಗ್ಗೆ ನಂಗ್ಯಾಕೆ ಈ ಕ್ಷಣವೂ ಹೊಳೆಯಲಿಲ್ಲ. ನಿಜಕ್ಕೂ ನಾನು ಅಪ್ಪನಿಗೆ ಸಹಾಯ ಮಾಡಬೇಕು. ಹೇಗಾದರೂ ಮಾಡಿ ಸಂಗೀತ ಕಲಿಯಲೇಬೇಕು ಎಂಬ ಛಲ ಹುಟ್ಟಿಕೊಂಡಿತ್ತು.
ಆರಂಭದ ದಿನಗಳಲ್ಲಿ ಬಾಲು ಎಂಜಿನಿಯರ್ ಆಗಬೇಕೆಂದಿದ್ದರು. 250 ರೂ. ಸಂಬಳ, ಓಡಾಡಲು ಜೀಪು. ಮತ್ತು ಆಫೀಸರ್ ಹುದ್ದೆ. ಇನ್ನೇನು ಬೇಕು ನನ್ನ ನೆಮ್ಮದಿಯ ದಿನಗಳಿಗಾಗಿ ಎಂದು ಯೋಚನೆ ಮಾಡಿದ್ದವರು ಸಡನ್ನಾಗಿ ಸಂಗೀತವನ್ನೇ ಉಸಿರಾಗಿಸಿಕೊಳ್ಳಲು ಮನಸು ಮಾಡಿದರು. ಹೇಗಾದರೂ ಮಾಡಿ ಸಂಗೀತ ಕಲಿಯಬೇಕು. ಅದರಲ್ಲಿ ಏನಾದರೂ ಸಾಧಿಸಬೇಕು. ಅದರಲ್ಲೇ ನನ್ನ ಭಾಗ್ಯವನ್ನು ಕಂಡುಕೊಳ್ಳಬೇಕು. ಆ ಗಳಿಗೆ ಹುಟ್ಟಿದ ಆ ನಿರ್ಧಾರ ಇಂದು ನಮ್ಮ ನಡುವೆ ಬಾಲು ಎನ್ನುವ ಸ್ವರ ಸಾಮ್ರಾಟನನ್ನು ಮೆರವಣಿಗೆ ಹೊರಡಿಸಿತು.
ಚೆನ್ನೈ: ಹಿರಿಯ ಗಾಯಕ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ(74) ಗಾಯನವನ್ನು ನಿಲ್ಲಿಸಿದ್ದಾರೆ. ಹಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್‌ಪಿಬಿ ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಸುಮಾರು 1.4 ನಿಮಿಷಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಅವರ ಮಗ ಚರಣ್ ಅಧಿಕೃತವಾಗಿ ಹೇಳಿದರು.
ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಆಗಸ್ಟ್ 5ರಂದು ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 13ರ ತಡರಾತ್ರಿಯಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ತಜ್ಞ ವೈದ್ಯರ ತಂಡದಿಂದ ಆರೈಕೆ ಮಾಡಲಾಗುತ್ತಿತ್ತು. ಆಗಸ್ಟ್ 24ರಂದು ಕೊರೊನಾ ವರದಿ ನೆಗೆಟಿವ್ ಬಂದಿತ್ತು.
ಆಗಸ್ಟ್ 5ರಂದು ಶೀತ ಮತ್ತು ಜ್ವರ ಕಾಣಿಸಿಕೊಂಡು ಉಸಿರಾಟಕ್ಕೆ ತೊಂದರೆಯಾಗಿದ್ದರಿಂದ ಎಸ್‌ಪಿಬಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆಯಿಂದ ಅವರಿಗೆ ಕೋವಿಡ್–19 ಸೋಂಕಿನ ಲಕ್ಷಣಗಳಿರುವುದು ದೃಢಪಟ್ಟಿತ್ತು. ಮನೆಯಲ್ಲಿಯೇ ಕ್ವಾರಂಟೈನ್ ಆಗುವಂತೆ ವೈದ್ಯರು ಸೂಚಿಸಿದ್ದರು. ಆದರೆ, ಕುಟುಂಬದ ಸದಸ್ಯರ ಸಲಹೆ ಮೇರೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕದಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮೂಲಕವೇ ಅವರಿಗೆ ಚಿಕಿತ್ಸೆ ನಿಡಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಮೃತ ಅಂತ್ಯಕ್ರಿಯೆ ಚೆನ್ನೈನ ಫಾರ್ಮ್ ಹೌಸ್ ನಲ್ಲಿ ನಡೆಯುವ ಬಗ್ಗೆ ಮಾಹಿತಿ ಸಿಕ್ಕಿದೆ.
ವಿಡಿಯೋ ಬಿಡುಗಡೆ ಮಾಡಿದ್ದ ಎಸ್‌ಪಿಬಿ ನನ್ನ ಆರೋಗ್ಯ ಸರಿ ಇರಲಿಲ್ಲ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಶೀತ ಮತ್ತು ಜ್ವರ ಕೂಡ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರ ಬಳಿಗೆ ಚಿಕಿತ್ಸೆ ಪಡೆಯಲು ಮುಂದಾದೆ. ಪರೀಕ್ಷೆಯ ಬಳಿಕ ಕೊರೊನಾ ಸೋಂಕು ಸಣ್ಣ ಪ್ರಮಾಣದಲ್ಲಿರುವುದು ಗೊತ್ತಾಯಿತು. ಮನೆಯಲ್ಲಿಯೇ ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದರು. ಆದರೆ ಕುಟುಂಬದ ಸದಸ್ಯರು ಒಪ್ಪದ ಕಾರಣ ಆಸ್ಪತ್ರೆಗೆ ದಾಖಲಾದೆ. ನನ್ನ ಆರೋಗ್ಯದ ಬಗ್ಗೆ ಯಾರೊಬ್ಬರು ಚಿಂತಿಸಬೇಕಿಲ್ಲ. ನನ್ನ ಆರೋಗ್ಯ ವಿಚಾರಿಸಲು ಮೊಬೈಲ್ ಕಾಲ್ ಮಾಡಬೇಡಿ. ಕಾಲ್ ಸ್ವೀಕರಿಸುವ ಸ್ಥಿತಿಯಲ್ಲಿ ನಾನಿಲ್ಲ. ಶೀತದ ಹೊರತಾಗಿ ನಾನು ಚೆನ್ನಾಗಿದ್ದೇನೆ. ಜ್ವರವೂ ಕಡಿಮೆಯಾಗಿದೆ. ಇನ್ನೆರಡು ದಿನಗಳಲ್ಲಿ ಸಂಪೂರ್ಣ ಗುಣಮುಖನಾಗುತ್ತೇನೆ ಎಂದು ಹೇಳಿದ್ದರು.
ಜುಲೈನಲ್ಲಿ ಬಾಲಸುಬ್ರಹ್ಮಣ್ಯಂ ಅವರು ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು ಸಾಹಿತಿ ವೈರಮುತ್ತು ರಚಿಸಿದ್ದ ಹಾಡಿಗೆ ಧ್ವನಿ ನೀಡಿದ್ದರು. ಇವರ ಕಲಾ ಸೇವೆಗೆ ಭಾರತ ಸರ್ಕಾರ 2011ರಲ್ಲಿ ಪದ್ಮಶ್ರೀ, 2011ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತ್ತು.
1946ರ ಜೂನ್ 4 ರಂದು ಜನಿಸಿದ್ದ ಎಸ್‌ಪಿಬಿ ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಸೇರಿದಂತೆ ಒಟ್ಟು 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡನ್ನು ಹಾಡಿದ್ದಾರೆ.
ಕೆಲವು ದಿನಗಳ ಹಿಂದೆ ವಿಡಿಯೋ ಪೋಸ್ಸ್ ಮಾಡಿದ್ದ ಎಸ್‍ಪಿಬಿ ಪುತ್ರ ಚರಣ್, ಅಪ್ಪನ ಆರೋಗ್ಯ ಸ್ಥಿರವಾಗಿದ್ದು, ವೆಂಟಿಲೇಟರ್ ನಲ್ಲೇ ಇದ್ದಾರೆ. ಉಳಿದೆಲ್ಲ ವರದಿಗಳು ನಾರ್ಮಲ್ ಆಗಿದ್ದು, ಯಾವುದೇ ಇನ್ಫೆಕ್ಷನ್ ಕಂಡು ಬಂದಿಲ್ಲ. ಆದರೆ ಶ್ವಾಸಕೋಶ ಹಾಗೂ ಉಸಿರಾಟದಲ್ಲಿ ಇನ್ನೂ ಹೆಚ್ಚಿನ ವೃದ್ಧಿಯಾಗಬೇಕಿದೆ. ಇದೀಗ ಅವರು ಕುಳಿತುಕೊಳ್ಳುತ್ತಿದ್ದು, ವೈದ್ಯರ ಸಹಾಯದ ಮೇರೆಗೆ ಪ್ರತಿ ದಿನ 20 ನಿಮಿಷಗಳ ಕಾಲ ಕುಳಿತುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಬೆಂಗಳೂರು: ಖ್ಯಾತ ಗಾಯಕ ಎಸ್ ಬಾಲಸುಬ್ರಹ್ಮಣ್ಯಂ ಅವರ ಬಗ್ಗೆ ಮಾತನಾಡಲು ನಾನು ತುಂಬಾ ಚಿಕ್ಕೋನು ಎಂದು ರಾಕಿಂಗ್ ಸ್ಟಾರ್ ಯಶ್ ಅವರು ಹೇಳಿದ್ದಾರೆ.
ಇಂದು ಚಾಮರಾಜಪೇಟೆಯಲ್ಲಿರೋ ಕಲಾವಿದರ ಸಂಘದ ಭವವದಲ್ಲಿ ಎಸ್‍ಪಿಬಿಯವರು ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ಎಸ್‍ಪಿಬಿ ಖಂಡಿತ ಹುಷಾರಾಗಿ ಬರುತ್ತಾರೆ. ಅವರನ್ನು ಮತ್ತೆ ಹಾಡಲು ಗುಣಮುಖರಾಗಿ ಬರಬೇಕು ಎಂದರು.
ನನಗೆ ಒಂದು ಖುಷಿ ಏನೆಂದರೆ, ನನ್ನ ರಾಕಿ ಸಿನಿಮಾಗಾಗಿ ಅವರು ಹಾಡು ಹಾಡಿದ್ದಾರೆ. ಅಂದು ನಾನೂ ಬಹಳ ಖುಷಿಪಟ್ಟಿದೆ. ಇಂದು ಅವರಿಗಾಗಿ ನಾನು ಪ್ರಾರ್ಥಿಸುತ್ತಿರುವುದು ಖುಷಿಯಾಗಿದೆ. ಹಂಸಲೇಖ ಹಾಗೂ ಎಸ್.ಪಿ.ಬಿಯವರು ಕಲಾವಿದರು ಅನ್ನುವುದಕ್ಕಿಂತ ಎಷ್ಟೋ ಜನಕ್ಕೆ ಬದುಕಿನ ಪಾಠ ಹೇಳಿಕೊಟ್ಟ ಗುರುಗಳು ಎಂದು ಹೇಳಬಹುದು. ನಾವು ನಮಗಾಗಿ ಪ್ರಾರ್ಥಿಸಿದರೆ ಈಡೆರುತ್ತೋ ಏನೋ ಗೊತ್ತಿಲ್ಲ. ಆದರೆ ನಿಸ್ವಾರ್ಥದಿಂದ ಬೇರೆಯವರಿಗಾಗಿ ಪ್ರಾರ್ಥಿಸಿದರೆ ಅದು ದೇವರಿಗೆ ತಲುಪುತ್ತೆ ಎಂದು ಯಶ್ ಹೇಳಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದ ಗಾಯಕ ವಿಜಯ್ ಪ್ರಕಾಶ್ ಮಾತನಾಡಿ, ಎಸ್‍ಪಿಬಿ ಹಾಡುಗಳನ್ನು ಕೇಳಿ ಬೆಳೆದವನು ನಾನು. ಹಲವಾರು ಬಾರಿ ನಾನು ಅವರ ಜೊತೆ ವೇದಿಕೆಗಳಲ್ಲಿ ಹಾಡುವಂತಹ ಭಾಗ್ಯ ಸಿಕ್ಕಿದೆ. ಗಾಯನದ ಹೊರತಾಗಿಯೂ ಅವರು ನನಗೆ ಯಾಕೆ ಇಷ್ಟ ಅಂದರೆ, 70ರ ದಶಕದಲ್ಲಿ ಅವರ ಜೊತೆ ಕೆಲಸ ಮಾಡಿದ ಕಲಾವಿದರನ್ನು ಈಗಲೂ ಸಹ ನೆನೆಯುತ್ತಾರೆ. ಆ ಮಟ್ಟಕ್ಕೆ ಜೊತೆಗೆ ಕೆಲಸ ಮಾಡಿದವರ ಮೇಲೆ ಅವರಿಗೆ ಗೌರವವಿದೆ ಎಂದರು.
ನಾನು ಇತ್ತೀಚಿಗೆ ಹಾಡಿದ್ದ ಒಂದು ಹಾಡನ್ನು ಅವರು ಕೇಳಿ ಪ್ರಶಂಸಿದ್ದರು. ಅಷ್ಟು ದೊಡ್ಡ ಗಾಯಕ ಆ ಮಟ್ಟಿಗೆ ಇನ್ನೊಬ್ಬರನ್ನು ಪ್ರೋತ್ಸಾಹ ಮಾಡುತ್ತಿದ್ದರು. ಅಂತಹ ಮಹಾನ್ ಗಾಯಕನಿಗೆ ಮೃತ್ಯುಂಜಯ ಮಂತ್ರದ ಮೂಲಕ ಗುಣಮುಖರಾಗಲು ಪ್ರಾರ್ಥಿಸುತ್ತೇನೆ ಎಂದು ಹಾಡು ಹಾಡಿದರು.