Tag: sparrow

  • ಗುಬ್ಬಚ್ಚಿಗಾಗಿ ಮನೆ ಮೀಸಲು, ಹತ್ತಾರು ಪ್ರಭೇದದ ಪಕ್ಷಿಗಳಿಗೆ ಆಶ್ರಯದಾತರಾಗಿರೋ ಸಲಾವುದ್ದೀನ್

    ಗುಬ್ಬಚ್ಚಿಗಾಗಿ ಮನೆ ಮೀಸಲು, ಹತ್ತಾರು ಪ್ರಭೇದದ ಪಕ್ಷಿಗಳಿಗೆ ಆಶ್ರಯದಾತರಾಗಿರೋ ಸಲಾವುದ್ದೀನ್

    ರಾಯಚೂರು: ನಾಗರೀಕತೆ ಬೆಳೆದಂತೆ ಮನುಷ್ಯನ ಜೊತೆ ಜೊತೆಗೆ ಬದುಕುತ್ತಿದ್ದ ಪಕ್ಷಿ, ಪ್ರಾಣಿಗಳು ದೂರವಾಗತ್ತಲೇ ಇವೆ. ಹೀಗೇ ದೂರವಾದವುಗಳಲ್ಲಿ ಗುಬ್ಬಚ್ಚಿ ಸಂತತಿ ಪ್ರಮುಖ. ಆದ್ರೆ ರಾಯಚೂರಿನ ಇವತ್ತಿನ ಪಬ್ಲಿಕ್ ಹೀರೋ ತಮ್ಮ ಮನೆಯನ್ನೇ ಪಕ್ಷಿಗಳ ಆಶ್ರಯತಾಣ ಮಾಡಿದ್ದಾರೆ.

    ಜಿಲ್ಲೆಯ ಮಾನ್ವಿ ಪಟ್ಟಣದ ಕ್ಲಾಸ್ ಒನ್ ಸಿವಿಲ್ ಕಾಂಟ್ರಾಕ್ಟರ್ ಸಲಾವುದ್ದಿನ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಕಳೆದ ನಾಲ್ಕುವರೆ ವರ್ಷದಿಂದ ತಮ್ಮ ಮನೆಯನ್ನೇ ಪಕ್ಷಿಗಳಿಗಾಗಿ ಮೀಸಲಿಟ್ಟಿದ್ದಾರೆ.

    ಗೋಡೆ, ಛಾವಣಿಯಲ್ಲಿ ಬಿದಿರು, ಟೈರ್, ಮಡಿಕೆ, ಪೈಪ್‍ಗಳ ಮೂಲಕ ಮನೆಯಲ್ಲೇ ಪಕ್ಷಿಗಳಿಗೆ ಆಹಾರ, ನೀರು ಜೊತೆಗೆ ಆಶ್ರಯ ಸಿಗುವಂತೆ ಮಾಡಿದ್ದಾರೆ. ಗುಬ್ಬಚ್ಚಿ ಸಂತತಿ ರಕ್ಷಣೆಯೇ ನಮ್ಮ ಉದ್ದೇಶ ಎಂದು ಸಲಾವುದ್ದೀನ್ ಹೇಳ್ತಾರೆ.

    ಮನೆಗೆ ನಿತ್ಯ ಅತಿಥಿಗಳಾಗಿ ಗುಬ್ಬಚ್ಚಿ, ಮೈನಾ, ದೊಡ್ಡ ಮೈನಾ, ಹಳದಿ ಗುಬ್ಬಿ, ರಾಬಿನ್, ಬೆಳವ, ಬುಲ್ ಬುಲ್ ಪಕ್ಷಿಗಳು ಬರುತ್ತವೆ. ಸಲಾವುದ್ದೀನ್‍ರ ಮನೆ ಬಳಿ ಯಾವಾಗಲು ಹಕ್ಕಿಗಳ ಚಿಲಿಪಿಲಿ ಇರುತ್ತದೆ.

    ಸಲಾವುದ್ದೀನ್ ಅವರ ಕಾರ್ಯಕ್ಕೆ ಪತ್ನಿ, ಮಕ್ಕಳು ಸಾಥ್ ನೀಡಿದ್ದಾರೆ. ಕಾಂಕ್ರಿಟ್ ಕಾಡಿನ ಮಧ್ಯೆ ಮತ್ತೆ ಹಕ್ಕಿಗಳ ನಿನಾದ ಕೇಳುವಂತೆ ಮಾಡ್ತಿದ್ದಾರೆ ನಮ್ಮ ಪಬ್ಲಿಕ್ ಹೀರೋ.

    https://www.youtube.com/watch?v=NwLGZRYzLIQ

  • ಬಳ್ಳಾರಿ: ಬೇವಿನ ಮರದಲ್ಲಿ ಗುಬ್ಬಚ್ಚಿಯನ್ನು ನುಂಗಲೆತ್ನಿಸಿದ ಹಸಿರು ಹಾವು – ವಿಡಿಯೋ ನೋಡಿ

    ಬಳ್ಳಾರಿ: ಬೇವಿನ ಮರದಲ್ಲಿ ಗುಬ್ಬಚ್ಚಿಯನ್ನು ನುಂಗಲೆತ್ನಿಸಿದ ಹಸಿರು ಹಾವು – ವಿಡಿಯೋ ನೋಡಿ

    ಬಳ್ಳಾರಿ: ಹಾವುಗಳು ಕಪ್ಪೆ, ಇಲಿ ಮೀನುಗಳನ್ನು ನುಂಗುವುದನ್ನು ಕೇಳಿರ್ತೀರ. ಆದ್ರೆ ಹಸಿರು ಹಾವೊಂದು ಗುಬ್ಬಚ್ಚಿಯನ್ನು ನುಂಗುವ ವಿಡಿಯೋವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಹೊಸಪೇಟೆ ತಾಲೂಕಿನ ಹಂಪಿ ಪವರ್ ಹೌಸ್ ಕ್ಯಾಂಪ್‍ನಲ್ಲಿ ಬೇವಿನ ಮರದಲ್ಲಿದ್ದ ಹಸಿರು ಹಾವೊಂದು ಗುಬ್ಬಿಯನ್ನು ನುಂಗಿದ ಅಪರೂಪದ ದೃಶ್ಯ ಮೊಬೈಲ್‍ನಲ್ಲಿ ಸೆರೆ ಸಿಕ್ಕಿದೆ. ಬೇವಿನಮರದಲ್ಲಿದ್ದ ಹಾವು ಗುಬ್ಬಚ್ಚಿಯನ್ನು ನುಂಗುತ್ತಿದ್ದಂತೆ ಗುಬ್ಬಚ್ಚಿ ಅರಚುವುದನ್ನು ಸ್ಥಳೀಯರು ನೋಡಿದ್ದು, ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಹಾವು ಸುಮಾರು ಒಂದು ಗಂಟೆ ಕಾಲ ಗುಬ್ಬಚ್ಚಿ ನುಂಗಲು ಪ್ರಯತ್ನಪಟ್ಟರೂ ಸಂಪೂರ್ಣವಾಗಿ ಗುಬ್ಬಚ್ಚಿಯನ್ನು ನುಂಗಲು ಸಾಧ್ಯವಾಗಿಲ್ಲ.

    https://www.youtube.com/watch?v=9lRnoN7wHl8

  • ಪಕ್ಷಿಗಳಿಗೆ ಎಲ್ಲಾ ಕಾಲದಲ್ಲೂ ಸಿಗುತ್ತೆ ಆಸರೆ- ಇದು ಬೀದರ್‍ನ ಮಸ್ಕಲ್ ಗ್ರಾಮಸ್ಥರ ಪಕ್ಷಿಪ್ರೇಮ

    ಪಕ್ಷಿಗಳಿಗೆ ಎಲ್ಲಾ ಕಾಲದಲ್ಲೂ ಸಿಗುತ್ತೆ ಆಸರೆ- ಇದು ಬೀದರ್‍ನ ಮಸ್ಕಲ್ ಗ್ರಾಮಸ್ಥರ ಪಕ್ಷಿಪ್ರೇಮ

    ಬೀದರ್: ಬೇಸಿಗೆ ಪ್ರಾರಂಭವಾಗಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಬಿಸಿಲು ದಾಖಲಾಗುತ್ತಿದೆ. ಜನರಿಗೇನೋ ಮಾತು ಬರುತ್ತೆ ಸಂಕಟ, ಸಮಸ್ಯೆಯನ್ನ ಹೇಳ್ಕೊಳ್ತಾರೆ. ಆದ್ರೆ ಪ್ರಾಣಿ-ಪಕ್ಷಿಗಳು ಏನು ಮಾಡ್ಬೇಕು? ಇಂಥ ಪಕ್ಷಿಗಳಿಗೆ ಬೀದರ್‍ನ ಮಸ್ಕಲ್ ಗ್ರಾಮಸ್ಥರು ಒಳ್ಳೇ ಐಡಿಯಾ ಮಾಡಿ ಆಶ್ರಯ ಕೊಟ್ಟಿದ್ದಾರೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮಸ್ಕಲ್ ಗ್ರಾಮಸ್ಥರು ಪಕ್ಷಿಗಳಿಗೆ ಡಬ್ಬಗಳನ್ನು ನಿರ್ಮಾಣ ಮಾಡಿ ಆಶ್ರಯ ಕೊಟ್ಟಿದ್ದಾರೆ. ಗ್ರಾಮದ 2 ಕಡೆ 20ಕ್ಕೂ ಹೆಚ್ಚು ಡಬ್ಬಗಳನ್ನು ಕಟ್ಟಿದ್ದಾರೆ. ಅಷ್ಟೇ ಅಲ್ಲದೇ ಇವುಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನೂ ಮಾಡಿದ್ದಾರೆ.

    ಮನುಷ್ಯನ ಅತಿಯಾಸೆಯಿಂದ ಅವಸಾನವಾಗ್ತಿರೋ ಕಾಡಿನಿಂದಾಗಿ ಪಕ್ಷಿಗಳಿಗೂ ಆಸರೆಯಿಲ್ಲದಂತಾಗಿದೆ. ಆದ್ರೆ ಈ ಗ್ರಾಮಸ್ಥರು ಮಾತ್ರ ಮೂರು ಕಾಲದಲ್ಲೂ ಪಕ್ಷಿಗಳಿಗೆ ಅನ್ನಾಹಾರ ನೀಡ್ತಿದ್ದಾರೆ. ಈಗಿನ ಬೇಸಿಗೆಯಲ್ಲಂತೂ ಪಾರಿವಾಳ, ಗುಬ್ಬಚ್ಚಿಗಳು ಖುಷಿಯಾಗಿ ಗ್ರಾಮಸ್ಥರ ಆತಿಥ್ಯ ಸ್ವೀಕರಿಸುತ್ತಿವೆ.

    https://www.youtube.com/watch?v=4EH1zg-enwo