Tag: spam bots

  • ಟ್ವಿಟ್ಟರ್ ಖರೀದಿ ಪ್ರಕ್ರಿಯೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಮಸ್ಕ್

    ಟ್ವಿಟ್ಟರ್ ಖರೀದಿ ಪ್ರಕ್ರಿಯೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಮಸ್ಕ್

    ವಾಷಿಂಗ್ಟನ್: ಟ್ವಿಟ್ಟರ್ ಖರೀದಿಗೆ ಮುಂದಾಗಿದ್ದ ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಟ್ವಿಟರ್‌ನಲ್ಲಿನ ನಕಲಿ ಖಾತೆ (ಸ್ಪ್ಯಾಮ್ ಖಾತೆ) ಗಳಿಗೆ ಸಂಬಂಧಿಸಿದ ವಿವರಗಳು ಬಾಕಿ ಉಳಿದಿವೆ ಎಂಬ ಕಾರಣದಿಂದ ಸದ್ಯಕ್ಕೆ ಟ್ವಿಟ್ಟರ್ ಖರೀದಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಹೇಳಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಮಸ್ಕ್, ಷೇರುಪೇಟೆ ಸಾರ್ವಜನಿಕ ವಹಿವಾಟು ಆರಂಭಕ್ಕೂ ಮುನ್ನ (ಪ್ರೀ-ಮಾರ್ಕೆಟ್ ಟ್ರೇಡಿಂಗ್) ಟ್ವಿಟರ್‌ನ ಷೇರು ಬೆಲೆ ಶೇ.18ರಷ್ಟು ಕುಸಿದಿದೆ. ಇದರೊಂದಿಗೆ ಟೆಸ್ಲಾ ಶೇ.5 ರಷ್ಟು ಜಿಗಿದಿದೆ ಎಂದು ತಮ್ಮ ಟ್ವೀಟ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ ಬಗೆಗಿನ ನಂಬಿಕೆ ಬದಲಾಗಿಲ್ಲ: ಮಸ್ಕ್‌ಗೆ ಕೇಂದ್ರ ಪ್ರತಿಕ್ರಿಯೆ

    _Elon Musk

    ನಿತ್ಯದ ಟ್ವಿಟ್ಟರ್ ಬಳಕೆದಾರರ ಪೈಕಿ ಶೇ.5 ಕ್ಕಿಂತ ಕಡಿಮೆ ನಕಲಿ ಅಥವಾ ಸ್ಪ್ಯಾಮ್ ಖಾತೆಗಳಿರುವುದಾಗಿ ಟ್ವಿಟ್ಟರ್ ಈ ಹಿಂದೆ ಹೇಳಿತ್ತು. ಮೊದಲ ತ್ರೈಮಾಸಿಕದಲ್ಲಿ ಕಂಪನಿಯು 22.9 ಕೋಟಿ ಬಳಕೆದಾರರಿಗೆ ಜಾಹೀರಾತು ಸೇವೆ ಒದಗಿಸಿತ್ತು. ಆದ್ರೆ, `ಸ್ಪ್ಯಾಮ್ ಬಾಟ್ಸ್’ (ನಕಲಿ ಖಾತೆಗಳ ಮೂಲಕ ಟ್ವೀಟ್‌ಗಳನ್ನು ಹಂಚುವ ತಾಂತ್ರಿಕ ವ್ಯವಸ್ಥೆ)ಯನ್ನು ಮೊದಲು ತೆರವುಗೊಳಿಸುವಂತೆ ಮಸ್ಕ್ ಹೇಳಿದ್ದರು. ಇದನ್ನೂ ಓದಿ: 3.36 ಲಕ್ಷ ಕೋಟಿಗೆ ಟ್ವಿಟ್ಟರ್‌ ಡೀಲ್‌ ಮಾಡಿದ ಎಲಾನ್‌ ಮಸ್ಕ್‌

    ಮಸ್ಕ್ ಅವರು ಸಾಮಾಜಿಕ ಮಾಧ್ಯಮ `ಟ್ವಿಟರ್’ ಕಂಪನಿಯನ್ನು 44 ಬಿಲಿಯನ್ ಡಾಲರ್ (ಸುಮಾರು 3.36 ಲಕ್ಷ ಕೋಟಿ ರೂ.) ಮೊತ್ತಕ್ಕೆ ಖರೀದಿಸಲು ಮುಂದಾಗಿದ್ದಾರೆ. ಅದಕ್ಕೆ ಅಗತ್ಯವಿರುವ ಹಣ ಸಂಗ್ರಹಿಸಲು ಟೆಸ್ಲಾ ಕಂಪನಿಯ 52.3 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ.

    ಅಕಸ್ಮಾತ್ ಟ್ವಿಟರ್ ಖರೀದಿಯಿಂದ ಹಿಂದೆ ಸರಿದರೆ, ಭಾರತದಲ್ಲಿ ಟೆಸ್ಲಾ ಕಾರು ತಯಾರಿಕೆಗೆ ಹೂಡಿಕೆ ಮಾಡುವಂತೆ ಎಲಾನ್ ಮಸ್ಕ್ ಅವರಿಗೆ ಸೀರಂ ಇನ್‌ಸ್ಟಿಟ್ಯೂಟ್‌ನ (ಎಸ್‌ಐಐ) ಸಿಇಒ ಆದಾರ್ ಪೂನಾವಾಲಾ ಇತ್ತೀಚೆಗಷ್ಟೇ ತಿಳಿಸಿದ್ದರು. ಇದನ್ನೂ ಓದಿ: ಮಸ್ಕ್‌ ತೆಕ್ಕೆಗೆ ಟ್ವಿಟ್ಟರ್‌ – ಕೊನೆಯ ಹಂತದಲ್ಲಿದೆ ಡೀಲ್‌ ಮಾತುಕತೆ

    ಹಿಂದಿನಿಂದಲೂ ಟ್ವಿಟರ್‌ಗೆ ಹಲವು ಬದಲಾವಣೆಗಳನ್ನು ಸೂಚಿಸುತ್ತಿರುವ ಮಸ್ಕ್, ವಾಣಿಜ್ಯ ಬಳಕೆ ಮತ್ತು ಸರ್ಕಾರದ ಖಾತೆಗಳಿಗೆ ಟ್ವಿಟರ್ ಶುಲ್ಕ ವಿಧಿಸುವುದಾಗಿ ಪ್ರಕಟಿಸಿದ್ದರು. ಸಾಮಾನ್ಯ ಬಳಕೆದಾರರಿಗೆ ಟ್ವಿಟರ್ ಉಚಿತವಾಗಿಯೇ ಇರಲಿದೆ ಎಂದಿರುವ ಅವರು, ವಾಣಿಜ್ಯ ಮತ್ತು ಸರ್ಕಾರದ ಖಾತೆಗಳಿಗೆ ಅಲ್ಪ ಮೊತ್ತದ ಶುಲ್ಕ ವಿಧಿಸಬಹುದು ಎಂದು ಹೇಳಿದ್ದರು. ಇದೀಗ ತಾತ್ಕಾಲಿಕ ತಡೆ ಘೋಷಿಸಿದ್ದಾರೆ.