Tag: spain

  • ಭಾರತಕ್ಕೆ ಸ್ಪೇನ್‌ನ C-295 ಮಿಲಿಟರಿ ವಿಮಾನ ಹಸ್ತಾಂತರ – ಏನಿದರ ವಿಶೇಷ?

    ಭಾರತಕ್ಕೆ ಸ್ಪೇನ್‌ನ C-295 ಮಿಲಿಟರಿ ವಿಮಾನ ಹಸ್ತಾಂತರ – ಏನಿದರ ವಿಶೇಷ?

    ನವದೆಹಲಿ: ಸ್ಪೇನ್‌ನಲ್ಲಿ (Spain) ನಿರ್ಮಾಣವಾದ C-295 ಮಿಲಿಟರಿ ವಿಮಾನವನ್ನು (Military Aircraft) ಭಾರತಕ್ಕೆ ಹಸ್ತಾಂತರಿಸಲಾಗಿದೆ. ಸ್ಪೇನ್‌ನಲ್ಲಿರುವ ವಾಯುಸೇನೆ ಮುಖ್ಯಸ್ಥ ವಿವೇಕ್ ರಾಮ್ ಚೌಧರಿ ವಿಮಾನವನ್ನು ಸ್ವೀಕರಿಸಿದ್ದಾರೆ. ಸೆಪ್ಟೆಂಬರ್ 25ರಂದು ಉತ್ತರ ಪ್ರದೇಶದಲ್ಲಿರುವ ಹಿಂಡನ್ ವಾಯುನೆಲೆಯಲ್ಲಿ ಹೊಸ ವಿಮಾನ ಲ್ಯಾಂಡಿಂಗ್ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

    ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಾಯುಸೇನೆಯ ಹಳೆಯದಾದ Avro-748 ವಿಮಾನಗಳನ್ನು ಬದಲಿಸಲು 56 C-295 ವಿಮಾನಗಳನ್ನು ಖರೀದಿಸಲು ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇನ್‌ನೊಂದಿಗೆ ಭಾರತವು 21,000 ಕೋಟಿ ರೂ.ಗಳ ಒಪ್ಪಂದವನ್ನು ಮಾಡಿಕೊಂಡಿತ್ತು. 56 ವಿಮಾನಗಳಿಗೆ ಎರಡು ದೇಶಗಳ ನಡುವೆ ಒಪ್ಪಂದ ನಡೆದಿದೆ. 16 ವಿಮಾನಗಳು ಸ್ಪೇನ್ ನಿರ್ಮಾಣ ಮಾಡಲಿದ್ದು, ಅದೇ ತಂತ್ರಜ್ಞಾನ ಬಳಸಿಕೊಂಡು 40 ವಿಮಾನಗಳನ್ನು ಗುಜರಾತ್ ವಡೋದರದಲ್ಲಿ ಉತ್ಪಾದನೆಯಾಗಲಿವೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ವಿರುದ್ಧ ಮುಂಬೈನಲ್ಲಿ ಎಫ್‌ಐಆರ್ ದಾಖಲು

    ಸಿ-295 ಒಂದು ಸಾರಿಗೆ ವಿಮಾನವಾಗಿದ್ದು ಕಡಿಮೆ ಸ್ಥಳದಲ್ಲಿ ಟೇಕಾಫ್ ಮತ್ತು ಲ್ಯಾಂಡಿಂಗ್ ಸಾಮರ್ಥ್ಯವನ್ನು ಹೊಂದಿದೆ, ಇದು ಒಂಬತ್ತು ಟನ್ ಪೇಲೋಡ್ ಅಥವಾ 71 ಸೈನಿಕರನ್ನು ಗರಿಷ್ಠ 260 ನಾಟ್ಸ್ (KTS) ವೇಗದಲ್ಲಿ ಸಾಗಿಸುವ ಸಾಮರ್ಥ್ಯ ಹೊಂದಿದೆ. ವಿಮಾನದ ಸ್ಥಿರ ರೆಕ್ಕೆಗಳ ಸಹಾಯದಿಂದ ಹೆಲಿಕಾಪ್ಟರ್‌ಗಳಿಗೆ ಗಾಳಿಯಲ್ಲಿ ಇಂಧನ ತುಂಬಬಹುದಾಗಿದೆ. ಇದು ಅತ್ಯುತ್ತಮ ಇಂಜಿನ್‌ಗಳನ್ನು ಹೊಂದಿದ್ದು, 13 ಗಂಟೆ ನಿರಂತರ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ: ಇನ್ಮುಂದೆ ಚುನಾವಣಾ ಸಿಬ್ಬಂದಿಗೆ ಬೂತಲ್ಲೇ ಅಂಚೆ ಮತದಾನ ಕಡ್ಡಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ವಕಪ್‌ ಹಾಕಿಯಲ್ಲಿ ಭಾರತ ಶುಭಾರಂಭ – ಸ್ಪೇನ್‌ ವಿರುದ್ಧ ಗೆಲುವು

    ವಿಶ್ವಕಪ್‌ ಹಾಕಿಯಲ್ಲಿ ಭಾರತ ಶುಭಾರಂಭ – ಸ್ಪೇನ್‌ ವಿರುದ್ಧ ಗೆಲುವು

    ರೂರ್ಕೆಲಾ: ವಿಶ್ವಕಪ್‌ ಹಾಕಿಯಲ್ಲಿ (Hockey World Cup) ಅತಿಥೇಯ ಭಾರತ (India) ಶುಭಾರಂಭ ಮಾಡಿದೆ. ಡಿ ಗುಂಪಿನ ಆರಂಭಿಕ ಪಂದ್ಯದಲ್ಲಿ ಸ್ಪೇನ್‌ (Spain) ತಂಡವನ್ನು 2-0 ಗೋಲುಗಳಿಂದ ಸೋಲಿಸಿದೆ.

    ಭಾರತದ ಪರ ಉಪನಾಯಕ ಅಮಿತ್ ರೋಹಿದಾಸ್ 12ನೇ ನಿಮಿಷ ಮತ್ತು ಹಾರ್ದಿಕ್ ಸಿಂಗ್ 26ನೇ ನಿಮಿಷದಲ್ಲಿ ಗೋಲು ಹೊಡೆದರು. ಇದನ್ನೂ ಓದಿ: ನಾನು ತಂಡದ ಜೊತೆಗಿನ ಕೊನೆಯ ಬಸ್ ಪ್ರಯಾಣವನ್ನು ಮಿಸ್ ಮಾಡಿಕೊಳ್ಳಲ್ಲ – 2019ರಲ್ಲೇ ಧೋನಿ ನಿವೃತ್ತಿ ಹೇಳಿದ್ದರು: ಆರ್.ಶ್ರೀಧರ್

    ಭಾರತಕ್ಕೆ ಐದು ಪೆನಾಲ್ಟಿ ಕಾರ್ನರ್‌ ಸಿಕ್ಕಿತ್ತು. ಈ ಪೈಕಿ ರೋಹಿದಾಸ್ ಒಂದನ್ನು ಗೋಲ್ ಆಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಸ್ಪೇನ್ ತಂಡಕ್ಕೆ ಮೂರು ಪೆನಾಲ್ಟಿ ಕಾರ್ನರ್‌ ಸಿಕ್ಕಿತ್ತು.

    ಇಂದಿನ ಪಂದ್ಯದಲ್ಲೇ ವೇಲ್ಸ್ ತಂಡವನ್ನು 5-0 ಗೋಲುಗಳಿಂದ ಸೋಲಿಸಿದ್ದ ಇಂಗ್ಲೆಂಡ್ ವಿರುದ್ಧ ಭಾರತ ಮುಂದಿನ ಪಂದ್ಯ ಆಡಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಾಜ್ ಮಹಲ್ ನೋಡಲು ಬಂದಿದ್ದವಳ ಮೇಲೆ ಕೋತಿ ದಾಳಿ- ಗಳಗಳನೆ ಅತ್ತ ಸ್ಪೇನ್ ಸುಂದರಿ

    ತಾಜ್ ಮಹಲ್ ನೋಡಲು ಬಂದಿದ್ದವಳ ಮೇಲೆ ಕೋತಿ ದಾಳಿ- ಗಳಗಳನೆ ಅತ್ತ ಸ್ಪೇನ್ ಸುಂದರಿ

    ಲಕ್ನೋ: ವಿಶ್ವ ಪ್ರಸಿದ್ಧ ತಾಜ್ ಮಹಲ್ (Taj Mahal) ವೀಕ್ಷಣೆಗೆ ಬರುವ ಪ್ರವಾಸಿಗರ (Tourist) ಸಂಖ್ಯೆ ಹೆಚ್ಚಾಗುತ್ತಿದ್ದು, ದೇಶ ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಿದ್ದಾರೆ. ಹಾಗೆಯೇ ಸ್ಪೇನ್‌ನಿಂದ (Spain) ಬಂದಿದ್ದ ಮಹಿಳೆಯೊಬ್ಬರ ಮೇಲೆ ಕೋತಿ ದಾಳಿ ನಡೆಸಿದೆ.

    ತಾಜ್‌ಮಹಲ್ (Taj Mahal) ಮುಂಭಾಗದ ರಾಯಲ್ ಗೇಟ್ ಬಳಿ ಫೋಟೋ ತೆಗೆಯಲೆಂದು ನಿಂತಿದ್ದ ಸ್ಪೇನ್ ಮಹಿಳೆ (Spanish woman) ಮೇಲೆ ಕೋತಿ ಎರಗಿ ದಾಳಿ ಮಾಡಿದೆ. ಈ ವೇಳೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಹಿಳೆ ಸ್ಥಳದಲ್ಲೇ ಗಳಗಳನ್ನೆ ಅತ್ತಿದ್ದಾಳೆ. ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಚಂಡೀಗಢ ವಿವಿ ಬಳಿಕ ಐಐಟಿ ಬಾಂಬೆ- ಹಾಸ್ಟೆಲ್ ಸ್ನಾನಗೃಹದಲ್ಲಿ ಇಣುಕಿದ ಕ್ಯಾಂಟೀನ್ ಸಿಬ್ಬಂದಿ ಬಂಧನ

    2019ರಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ತಾಜ್ ಮಹಲ್‌ನ ರಕ್ಷಣೆಯ ಜವಾಬ್ದಾರಿ ವಹಿಸಿತ್ತು. ಈ ವೇಳೆ ಕೋತಿಗಳನ್ನು (Monkey) ಓಡಿಸಲು ಸಿಂಗಲ್‌ಶಾಟ್ ಗನ್ ಬಳಕೆ ಮಾಡಲಾಗುತ್ತಿತ್ತು. ಇದಕ್ಕೆ ಪ್ರಾಣಿಪ್ರಿಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಇದನ್ನೂ ಓದಿ: ಸೂಪರ್ ಸ್ಟಾರ್ ಸ್ಮೃತಿ ಮಂಧಾನಗೆ ICC ರ‍್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನ

    ಪ್ರವಾಸಿಗರ ಮೇಲೆ ಕೋತಿಗಳು ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಸಮಸ್ಯೆ ಬಗೆಹರಿಸುವಂತೆ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಭಧ್ರತಾ ಸಿಬ್ಬಂದಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್‌ ಉಳಿತಾಯಕ್ಕೆ ಟೈ ಕಟ್ಟುವುದನ್ನು ನಿಲ್ಲಿಸಿ: ಸ್ಪೇನ್‌ ಪ್ರಧಾನಿ

    ವಿದ್ಯುತ್‌ ಉಳಿತಾಯಕ್ಕೆ ಟೈ ಕಟ್ಟುವುದನ್ನು ನಿಲ್ಲಿಸಿ: ಸ್ಪೇನ್‌ ಪ್ರಧಾನಿ

    ಮ್ಯಾಡ್ರೀಡ್‌: ವಿದ್ಯುತ್‌ ಉಳಿತಾಯಕ್ಕೆ ಟೈ ಕಟ್ಟುವುದನ್ನು ನಿಲ್ಲಿಸಿ ಎಂದು ಸ್ಪೇನ್‌ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಮನವಿ ಮಾಡಿದ್ದಾರೆ.

    ನಾನು ಈಗಾಗಲೇ ಟೈ ಕಟ್ಟುವುದನ್ನು ನಿಲ್ಲಿಸಿದ್ದೇನೆ. ನಮ್ಮ ಮಂತ್ರಿಗಳು ಮತ್ತು ಕಚೇರಿಯಲ್ಲಿರುವ ಸಿಬ್ಬಂದಿ ಈ ನಡೆಯನ್ನು ಅನುಸರಿಸಬೇಕು. ಈ ಮೂಲಕ ವಿದ್ಯುತ್‌ ಶಕ್ತಿಯನ್ನು ಉಳಿತಾಯ ಮಾಡಬಹುದು ಎಂದು ಅವರು ಹೇಳಿದ್ದಾರೆ.

    ನೀಲಿ ಬಣ್ಣದ ಸೂಟ್‌ ಮತ್ತು ಬಿಳಿ ಬಣ್ಣದ ಶರ್ಟ್‌ ಧರಿಸಿ ಮಾತಾನಾಡಿದ ಅವರು, ಈ ನಿರ್ಧಾರದ ಮೂಲಕ ಎಲ್ಲರೂ ವಿದ್ಯುತ್‌ ಉಳಿತಾಯಕ್ಕೆ ಸಹಕಾರ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಮ್ಯೂಸಿಕ್ ಶೂಟ್ ವೇಳೆ ದಾಳಿ: 8 ಮಹಿಳಾ ರೂಪದರ್ಶಿಗಳ ಮೇಲೆ ಅತ್ಯಾಚಾರ

    ಆಗಸ್ಟ್ 1 ರಿಂದ ಸ್ಪೇನ್‌ ಸರ್ಕಾರವು ಇಂಧನ ದಕ್ಷತೆ ಮತ್ತು ಉಳಿತಾಯ ಕಾರ್ಯಕ್ರಮವನ್ನು ಆರಂಭಿಸಲಿದೆ. ಇತರ ಯುರೋಪ್‌ ರಾಷ್ಟ್ರಗಳು ಇಂಧನ ಉಳಿತಾಯಕ್ಕೆ ಯೋಜನೆ ಹಾಕಿಕೊಂಡಿವೆ.

    ಯುರೋಪ್‌ ರಾಷ್ಟ್ರಗಳಲ್ಲಿ ಬಿಸಿಗಾಳಿ ಜಾಸ್ತಿಯಾಗಿದೆ. 27 ಡಿಗ್ರಿ ಸೆಲ್ಸಿಯಸ್‌ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಏರ್‌ ಕಂಡಿಷನ್‌ ಬಳಕೆ ಹೆಚ್ಚಾಗುತ್ತಿದೆ.

    ಉಕ್ರೇನ್‌ನಲ್ಲಿನ ಯುದ್ಧದಿಂದಾಗಿ ಸ್ಪೇನ್‌ನಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ವಿದ್ಯುತ್ ಬೆಲೆಗಳು ಏರಿಕೆಯಾಗಿತ್ತು. ಆದರೆ ಮೆಡಿಟರೇನಿಯನ್ ರಾಷ್ಟ್ರ ಮತ್ತು ಪೋರ್ಚುಗಲ್‌ನಿಂದ ನ್ಯಾಚುರಲ್‌ ಗ್ಯಾಸ್‌ ಆಮದು ಮಾಡುತ್ತಿರುವ ಕಾರಣ ವಿದ್ಯುತ್‌ ಬೆಲೆ ಇಳಿಕೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ರಜೆ ಘೋಷಿಸಿದ ಸ್ಪೇನ್

    ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ರಜೆ ಘೋಷಿಸಿದ ಸ್ಪೇನ್

    ಮ್ಯಾಡ್ರೀಡ್: ವಿಶ್ವದಾದ್ಯಂತ ಶೇ. 65ರಷ್ಟು ಮಹಿಳೆಯರು ಋತುಚಕ್ರದಲ್ಲಿ ನೋವಿನಿಂದ ಬಳಲುತ್ತಾರೆ. ಅದರಲ್ಲೂ ಕೆಲಸದ ಸಮಯದಲ್ಲಿ ತುಂಬಾ ಕಷ್ಟಪಡುತ್ತಿರುತ್ತಾರೆ. ಇದ್ದಕ್ಕಾಗಿ ಸ್ಪ್ಯಾನಿಷ್ ಕ್ಯಾಬಿನೆಟ್‍ನಲ್ಲಿ ಇದಕ್ಕೆ ಸಂಬಂಧಿಸಿದ ಮಸೂದೆಯೊಂದು ಜಾರಿಯಾಗಿದೆ.

    ಮಸೂದೆಯ ಪ್ರಕಾರ, ಮುಟ್ಟಿನ ನೋವಿನಿಂದಾಗಿ ಮಹಿಳೆಯರಿಗೆ ಸಂಬಳ ಸಹಿತ ಅನಾರೋಗ್ಯ ರಜೆಯನ್ನು ತೆಗೆದುಕೊಳ್ಳುವ ಹಕ್ಕು ಇದೆ. ಈ ಮೂಲಕ ಯುರೋಪ್‌ನಲ್ಲಿ ಮುಟ್ಟಿನ ಸಮಸ್ಯೆಗೆ ರಜೆ ನೀಡುವ ಮೊದಲ ರಾಷ್ಟ್ರವಾಗಿ ಸ್ಪೇನ್ ಹೊರಹೊಮ್ಮಿದೆ. ಸಂಬಳ ಸಹಿತ ಮುಟ್ಟಿನ ರಜೆಯನ್ನು ತೆಗೆದುಕೊಳ್ಳುವ ಅವಕಾಶವಿರುವ ರಾಷ್ಟ್ರಗಳಲ್ಲಿ ದಕ್ಷಿಣ ಕೊರಿಯಾ ಹಾಗೂ ಇಂಡೋನೇಷ್ಯಾ ರಾಷ್ಟ್ರಗಳು ಸೇರಿವೆ.

    ಕ್ಯಾಬಿನೆಟ್ ಸಭೆಯ ನಂತರ ಸ್ಪ್ಯಾನಿಷ್ ಸಚಿವ ಐರಿನ್ ಮೊಂಟೆರೊ ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳೆಯರು ಉತ್ತಮವಾಗಿ ಬದುಕಲು ಅನುವು ಮಾಡಿಕೊಡುವ ಕಾನೂನನ್ನು ನಾವು ಮಾಡುತ್ತಿದ್ದೇವೆ. ಇದರಿಂದಾಗಿ ನೋವಿನಲ್ಲಿ ಕೆಲಸ ಮಾಡಲು ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಂತ್ಯವಾಗಲಿದೆ ಎಂದರು. ಇದನ್ನೂ ಓದಿ: ಬೇಸಿಗೆಯ ಮಳೆಗೆ ಮುಳುಗಿದ ಬೆಂಗಳೂರು – ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

    ಮುಟ್ಟಿನ ನೋವನ್ನು ಅನುಭವಿಸುತ್ತಿರುವ ಕೆಲಸಗಾರರು ತಮಗೆ ಬೇಕಾದಷ್ಟು ಕಾಲ ಮನೆಯಲ್ಲಿಯೇ ಇರವ ಹಕ್ಕನ್ನು ಹೊಂದಿರುತ್ತಾರೆ. ರಜೆಯ ಅವಧಿಯನ್ನು ಅಂದಾಜು ಮಾಡಲು ವೈದ್ಯರ ಸಮಾಲೋಚನೆ ಅಗತ್ಯವಿದೆ ಎಂದ ಅವರು, ಈ ಕಾನೂನಿಂದಾಗಿ ಸ್ಪ್ಯಾನಿಷ್ ಸರ್ಕಾರಕ್ಕೆ ವರ್ಷಕ್ಕೆ 25 ಮಿಲಿಯನ್ ಡಾಲರ್‌ ನಷ್ಟವಾಗುತ್ತದೆ. ಆದರೆ ಉದ್ಯೋಗದಾತರಿಗೆ ಅಲ್ಲ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶೀನಾ ಬೋರಾ ಹತ್ಯೆ ಕೇಸ್‌- ಇಂದ್ರಾಣಿಗೆ ಮುಖರ್ಜಿಗೆ ಜಾಮೀನು ಮಂಜೂರು

  • ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ನಿಧನ

    ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ನಿಧನ

    ಮ್ಯಾಡ್ರಿಡ್: ವಿಶ್ವದ ಹಿರಿಯ ವ್ಯಕ್ತಿ ಎಂದು ಗಿನ್ನಿಸ್ ರೆಕಾರ್ಡ್ ದಾಖಲಿಸಿದ ಸ್ಪೇನ್ ನ 112 ವರ್ಷದ ಸ್ಯಾಟಿರ್ನಿನೊ ಡೆ ಲಾ ಫ್ಯೂಯೆಂಟ್ ಮಂಗಳವಾರ ತಮ್ಮ ನಿವಾಸದಲ್ಲಿ ನಿಧನರಾದರು.

    1909ರ ಫೆಬ್ರವರಿ 11ರಂದು ಲಿಯಾನ್‍ನ ಪುಯೆಂಟೆ ಅವರು ಕ್ಯಾಸ್ಟ್ರೋದಲ್ಲಿ ಜನಿಸಿದ್ದರು. ಮಂಗಳವಾರ ವಾಯುವ್ಯ ಸ್ಪೇನ್‍ನ ಲಿಯೋನ್‍ನಲ್ಲಿರುವ ಮನೆಯಲ್ಲಿ ನಿಧನರಾದರು. ಕಳೆದ ಸಪ್ಟೆಂಬರ್‍ನಲ್ಲಿ ಡೆ ಲಾ ಫ್ಯೂಯೆಂಟೆಯನ್ನು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗಿನ್ನಿಸ್ ರೆಕಾರ್ಡ್‍ನಲ್ಲಿ ದಾಖಲಿಸಲಾಗಿತ್ತು.

    ಡೆ ಲಾ ಫ್ಯೂಯೆಂಟ್ ಅವರು ವ್ಯಾಪಾರದಲ್ಲಿ ಚಮ್ಮಾರರಾಗಿದ್ದರು. ತಮ್ಮ 13ನೇ ವಯಸ್ಸಿನಲ್ಲಿ ಶೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು. ಆಂಟೋನಿನಾ ಅವರ ಪತ್ನಿ. ದಂಪತಿಗೆ 8 ಮಕ್ಕಳು, 14 ಮೊಮ್ಮಕ್ಕಳು ಮತ್ತು 22 ಮರಿ ಮೊಮ್ಮಕ್ಕಳು ಇದ್ದಾರೆ. ಅವರನ್ನು ಸ್ಥಳೀಯ ಸ್ಮಶಾನದಲ್ಲಿ ಇಂದು ಅಂತ್ಯಸಂಸ್ಕಾರ ಮಾಡಲಾಯಿತು.  ಇದನ್ನೂ ಓದಿ:  ಚರಣ್​ಜಿತ್ ಸಿಂಗ್ ಚೆನ್ನಿ ಸಂಬಂಧಿ ಮನೆಯ ಮೇಲೆ ಇಡಿ ದಾಳಿ

  • ಸೂಪರ್ ಮಾರ್ಕೆಟ್‍ನಿಂದ ತಂದ ತರಕಾರಿ ಜೊತೆಗೆ ಸತ್ತ ಇಲಿನೂ ತಿಂದ

    ಸೂಪರ್ ಮಾರ್ಕೆಟ್‍ನಿಂದ ತಂದ ತರಕಾರಿ ಜೊತೆಗೆ ಸತ್ತ ಇಲಿನೂ ತಿಂದ

    ಮ್ಯಾಡ್ರಿಡ್: ವ್ಯಕ್ತಿಯೊರ್ವ ಆಕಸ್ಮಿಕವಾಗಿ ತರಕಾರಿ ಹಾಗೂ ಆಲೂಗಡ್ಡೆಯೊಂದಿಗೆ ತಿಳಿಯದೇ ಸತ್ತ ಇಲಿಯನ್ನು ಸೇವಿಸಿರುವ ಘಟನೆ ಸ್ಪೇನ್‍ನಲ್ಲಿ ನಡೆದಿದೆ.

    ಜುವಾನ್ ಜೋಸ್ ಅವರು ಸೂಪರ್ ಮಾರ್ಕೆಟ್‍ನಿಂದ ತರಕಾರಿ ಹಾಗೂ ಆಲೂಗಡ್ಡೆ ಪ್ಯಾಕೆಟ್ ಖರೀದಿಸಿ ಮನೆಗೆ ಬಂದು ಬೇಯಿಸಿ ನಂತರ ಅದನ್ನು ತಟ್ಟೆಗೆ ಬಡಿಸಿಕೊಂಡಿದ್ದಾರೆ. ಈ ವೇಳೆ ಯಾವುದೋ ಭಾರದಂತಿರುವ ವಸ್ತು ತಟ್ಟೆಯೊಳಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ಚಮಚದ ಮೂಲಕ ತಿನ್ನಲು ಆರಂಭಿಸಿದಾಗ ಯಾವುದೋ ವಿಚಿತ್ರವಾಗಿರುವ ಕುರುಕುಲಾಗಿರುವ ಪದಾರ್ಥವನ್ನು ಅಗಿಯುತ್ತಿರುವಂತೆ ಫೀಲ್ ಆಗಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಸುಳ್ಳಿನ ದೆವ್ವ ಮೆಟ್ಟಿಕೊಂಡಿದೆ: ಸಿ.ಟಿ ರವಿ ವ್ಯಂಗ್ಯ

    ನಂತರ ತಟ್ಟೆಯನ್ನು ಗಮನಿಸಿದಾಗ ಸತ್ತ ಇಲಿಯ ತಲೆಯನ್ನು ನೋಡಿ ಶಾಕ್ ಆಗಿದ್ದಾರೆ. ತರಕಾರಿಯೊಂದಿಗೆ ಇಲಿಯ ತಲೆಯಲ್ಲಿ ಕಣ್ಣು ಮತ್ತು ಮೀಸೆ ಸಮೇತ ಹಾಕಿರುವುದನ್ನು ಕಂಡಿದ್ದಾರೆ. ನಂತರ ತಾವು ತಿಂದಿದ್ದು, ತರಕಾರಿ ಅಲ್ಲ ಬದಲಿಗೆ ಇಲಿ ಎಂದು ಖಚಿತಪಡಿಸಿಕೊಂಡ ಬಳಿಕ ಸೂಪರ್ ಮಾರ್ಕೆಟ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಅರೆಸ್ಟ್ – ಪ್ರಜಾಪ್ರಭುತ್ವದ ಕೊಲೆ ಎಂದ ಜೆ.ಪಿ.ನಡ್ಡಾ

     

    ಕ್ರಿಸ್‍ಮಸ್ ಹಬ್ಬದಂದು ತರಕಾರಿಯನ್ನು ಜುವಾನ್ ಜೋಸ್ ಖರೀದಿಸಿದ್ದರು. ಸದ್ಯ ಈ ಘಟನೆ ಕುರಿತಂತೆ ಸೂಪರ್ ಮಾರ್ಕೆಟ್, ತಯಾರಕರು ಮತ್ತು ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದು, ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗ್ರಾಹಕರಿಗೆ ತಿಳಿಸಿದೆ.

  • ಸ್ಪೇನ್‍ನಲ್ಲಿರುವ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ

    ಸ್ಪೇನ್‍ನಲ್ಲಿರುವ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ

    ಮ್ಯಾಡ್ರಿಡ್: ಸ್ಪೇನ್‍ನ ವೃದ್ಧರೊಬ್ಬರು 112 ವರ್ಷ ಬದುಕಿರುವ ಮೂಲಕ ವಿಶ್ವದ ಅತ್ಯಂತ ಹಿರಿಯ ಜೀವಿಯಾಗಿ ಗಿನ್ನೆಸ್ ದಾಖಲೆ ಮಾಡಿದ್ದಾರೆ.

    112 ವರ್ಷ 211 ದಿನ ವಯಸ್ಸಾಗಿರುವ ಸ್ಯಾಟರ್ನಿನೋ ಡೆ ಲಾ ಫ್ಯೂಂಟೆ ಗಾರ್ಸಿಯಾ, 1909ರ ಫೆಬ್ರವರಿ 11ರಂದು ಲಿಯಾನ್‍ನಲ್ಲಿ ಜನಿಸಿದರು. ಆದರೆ ಅವರು ಯಾವಾಗಲೂ ತಮ್ಮ ಹುಟ್ಟುಹಬ್ಬವನ್ನು ಫೆಬ್ರವರಿ 8ರಂದು ಆಚರಿಸಿಕೊಳ್ಳುತ್ತಾರೆ.  ಇದನ್ನೂ ಓದಿ: ಕಾಬೂಲ್ ಮಸೀದಿ ಬಳಿ ಬಾಂಬ್ ಸ್ಫೋಟ – ಇಬ್ಬರು ಸಾವು, ಹಲವರಿಗೆ ಗಾಯ

    Spain Old man

    ಇದೀಗ ಅವರನ್ನು ಅತೀ ಹೆಚ್ಚು ವರ್ಷ ಬದುಕಿರುವ ವ್ಯಕ್ತಿ ಎಂದು ಹೇಳಲಾಗಿದೆ. ಇವರಿಗೆ ಏಳು ಜನ ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದರು. ಆದರೆ ಮಗ ಬಾಲ್ಯದಲ್ಲಿಯೇ ತೀರಿಕೊಂಡರು. ಸದ್ಯ ಸ್ಯಾಟರ್ನಿನೋ ಅವರು ತಮ್ಮ ಮಗಳು ಮತ್ತು ಅಳಿಯ ಜೊತೆಯಲ್ಲಿ ವಾಸವಾಗಿದ್ದು, ಇವರಿಗೆ 14 ಜನ ಮೊಮ್ಮಕ್ಕಳು ಮತ್ತು 22 ಜನ ಮರಿ ಮೊಮ್ಮಕ್ಕಳಿದ್ದಾರೆ.

    ತಮ್ಮ ದೀರ್ಘಾಯುಷ್ಯದ ರಹಸ್ಯದ ಬಗ್ಗೆ ಕೇಳಿದಾಗ ಅವರು, 112 ವರ್ಷ ಅವರು ನೆಮ್ಮದಿಯಿಂದ ಜೀವನ ನಡೆಸಿದ್ದು, ಯಾರನ್ನು ನೋಯಿಸಬೇಡಿ ಮತ್ತು ನೆಮ್ಮದಿಯಿಂದ ಜೀವನ ನಡೆಸಿ ಎಂದಿದ್ದಾರೆ. 4.92 ಅಡಿ ಎತ್ತರವಿರುವ ಸ್ಯಾಟರ್ನಿನೋ, 1936ರಲ್ಲಿ ಆರಂಭವಾದ ಸ್ಪ್ಯಾನಿಷ್ ಅಂತರ್ಯುದ್ಧದಲ್ಲಿ ನಾನು ಕಡಿಮೆ ಎತ್ತರ ಇದ್ದರಿಂದ ಯುದ್ಧದಲ್ಲಿ ಹೋರಾಡುವುದು ತಪ್ಪಿತು ಎಂದಿದ್ದಾರೆ. ಶೂ ತಯಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು, ತಮ್ಮ ಪತ್ನಿ ಆಂಟೋನಿನಾ ಬ್ಯಾರಿಯೊ ಜೊತೆ ನೆಮ್ಮದಿ ಜೀವನ ನಡೆಸುತ್ತಿದ್ದಾಗಿ ಹೇಳಿಕೊಂಡಿದ್ದಾರೆ.  ಇದನ್ನೂ ಓದಿ:  ನಿಮ್ಮ ಧೈರ್ಯಕ್ಕೆ ಅವರು ಹೆದರುತ್ತಾರೆ – ಪ್ರಿಯಾಂಕಾಗೆ ಧೈರ್ಯ ತುಂಬಿದ ಸಹೋದರ ರಾಹುಲ್

    112 ವರ್ಷ ವಯಸ್ಸಿನ ಸ್ಯಾಟರ್ನಿನೊ ಒಬ್ಬ ಫುಟ್ಬಾಲ್ ಅಭಿಮಾನಿಯಾಗಿದ್ದು, ಫುಟ್ಬಾಲ್ ಆಟವನ್ನು ಹಲವು ವರ್ಷಗಳಿಂದ ಆಡಿದ್ದಾರೆ ಮತ್ತು ಸ್ಥಳೀಯ ತಂಡವಾದ ಪ್ಯುಂಟೆ ಕ್ಯಾಸ್ಟ್ರೋ ಸಹ ಸ್ಥಾಪಿಸಿದ್ದಾರೆ.

  • ಸ್ಪೈನ್ ಮಹಿಳೆಗೆ ಭಾರತದ ಸಂಸ್ಕೃತಿ  ಕಲಿಸಿಕೊಟ್ಟ ಕೊರೊನಾ

    ಸ್ಪೈನ್ ಮಹಿಳೆಗೆ ಭಾರತದ ಸಂಸ್ಕೃತಿ ಕಲಿಸಿಕೊಟ್ಟ ಕೊರೊನಾ

    ಉಡುಪಿ: ಮಹಾಮಾರಿ ಕೊರೊನಾದಿಂದ ದೇಶದ್ಯಾಂತ ಜನರು ಕಷ್ಟಪಡುವಂತಹ ಪರಿಸ್ಥಿತಿ ಎದುರಾಗಿದೆ. ಆದರೆ ಈ ಮಧ್ಯೆ ಕೊರೊನಾದಿಂದ ಸ್ಪೈನ್ ಮಹಿಳೆಯೊಬ್ಬರು ಭಾರತದ ಸಂಸ್ಕೃತಿಯನ್ನು ಕಲಿತಿದ್ದಾರೆ.

    ಸ್ಪೈನ್ ಮಹಿಳೆ ಥೆರೆಸಾ ಕೊರೊನಾದಿಂದ ಭಾರತದ ಸಂಸ್ಕೃತಿ ಕಲಿತಿದ್ದಾರೆ. ತವರು ದೇಶ ಬಿಟ್ಟು ಭಾರತಕ್ಕೆ ಬಂದ ಥೆರೆಸಾ ಭಾರತವನ್ನೇ ತವರು ಮಾಡಿಕೊಂಡಿದ್ದಾರೆ. ಜಿಲ್ಲೆಯ ಬೈಂದೂರಿನಲ್ಲಿ ನೆಲೆಸಿರುವ ಈಕೆ ಸ್ಪೈನ್ ದೇಶದವರು. ಆದರೆ ಕರಾವಳಿ ಭಾಷೆ, ಕುಂದಾಪುರದ ಸಂಸ್ಕೃತಿಗೆ ಲಾಕ್‍ಡೌನ್ ನಡುವೆ ಒಗ್ಗಿದ್ದಾರೆ. ಸ್ನೇಹಿತರಾದ ಕೃಷ್ಣ ಪೂಜಾರಿ ಮನೆಯಲ್ಲಿ ಆಶ್ರಯ ಪಡೆದಿರುವ ಈಕೆ ನಾಲ್ಕು ತಿಂಗಳಲ್ಲಿ ಅಪ್ಪಟ ಭಾರತೀಯಳೇ ಆಗಿಬಿಟ್ಟಿದ್ದಾರೆ.

    ಥೆರೆಸಾ ಸ್ಪೈನ್ ದೇಶಕ್ಕೆ ಹೊರಟು ನಿಂತಾಗ ಭಾರತದಲ್ಲಿ ಲಾಕ್‍ಡೌನ್ ಆರಂಭವಾಯಿತು. ಹಾಗಾಗಿ ಸ್ನೇಹಿತರಾದ ಕೃಷ್ಣ ಪೂಜಾರಿ ಅವರ ಮನೆಯಲ್ಲೇ ಉಳಿದುಕೊಂಡಿದ್ದರು. ಸಮಯದ ಸದ್ಬಳಕೆ ಮಾಡಿಕೊಂಡು ಹಳ್ಳಿ ಹುಡುಗಿಯರ ರೀತಿಯಲ್ಲಿ ಗ್ರಾಮೀಣ ಬದುಕಿಗೆ ಒಗ್ಗಿಕೊಂಡಿದ್ದಾರೆ.

    ಭತ್ತದ ನೇಜಿ ನೆಡುವುದು, ಹಾಲು ಕರೆಯೋದು, ಗೊಬ್ಬರ ಬುಟ್ಟಿ ತುಂಬುವುದು, ರಂಗೋಲಿ ಹಾಕುವುದು ಎಲ್ಲವನ್ನು ಮಾಡುತ್ತಾರೆ. ಜೊತೆಗೆ ತೆಂಗಿನ ಸೋಗೆ ನೇಯುವುದು, ಇಂಡಿಯನ್ ಸ್ಟೈಲ್‍ನಲ್ಲಿ ಬಟ್ಟೆ ತೊಳೆಯೋದು, ಅಡುಗೆ ಮಾಡೋದು ಅಭ್ಯಾಸವಾಗಿದೆ. ನಮ್ಮ ಮನೆಯವರಿಂದ ಪ್ರತಿಯೊಂದೂ ಕೆಲಸ ಕಲಿತಿದ್ದಾರೆ ಎಂದು ಆಶ್ರಯ ನೀಡಿದ ಕೃಷ್ಣ ಪೂಜಾರಿ ಸಂತಸದಿಂದ ಹೇಳಿದ್ದಾರೆ.

    ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭವಾಗಿದ್ದು, ಸ್ಪೈನ್‍ಗೆ ಥರೆಸಾ ಹೊರಡುವ ಸಮಯವಾಗಿದೆ. ಆದರೆ ಭಾರತ ಬಿಟ್ಟು ಹೋಗಲು ಮನಸ್ಸಿಲ್ಲ ಎಂದು ಥೆರೆಸಾ ಬೇಸರದಿಂದ ಹೇಳುತ್ತಿದ್ದಾರೆ.

  • ದೇಶದಲ್ಲಿಂದು 37 ಸಾವಿರ ಮಂದಿಗೆ ಕೊರೊನಾ ಸೋಂಕು-648 ಮಂದಿ ಬಲಿ

    ದೇಶದಲ್ಲಿಂದು 37 ಸಾವಿರ ಮಂದಿಗೆ ಕೊರೊನಾ ಸೋಂಕು-648 ಮಂದಿ ಬಲಿ

    -ಸಾವಿನಲ್ಲಿ ಸ್ಪೇನ್ ಹಿಂದಿಕ್ಕಿ ಭಾರತ

    ನವದೆಹಲಿ: ದೇಶದಲ್ಲಿ ಕೊರೊನಾ ಕರಾಳನೃತ್ಯ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 37,724 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಪರಿಣಾಮ ದೇಶದಲ್ಲೀಗ ಸೋಂಕಿನ ಪ್ರಕರಣಗಳ ಸಂಖ್ಯೆ 11,92,915ಕ್ಕೇರಿದೆ.

    ದೇಶದ್ಯಾಂತ 648 ಮಂದಿ ಕೊರೊನಾಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 28,732ಕ್ಕೇರಿದೆ. ಜುಲೈ 1ರಿಂದ ಇಲ್ಲಿಯವರೆಗೆ ಅಂದಾಜು 5.70 ಲಕ್ಷ ಪ್ರಕರಣಗಳು ವರದಿಯಾಗಿದೆ. ಮರಣಗಳ ವಿಚಾರದಲ್ಲಿ ಭಾರತ ಸ್ಪೇನ್ ದೇಶವನ್ನು ಮೀರಿಸಿ 7ನೇ ಸ್ಥಾನಕ್ಕೆ ಜಿಗಿದಿದೆ.

    ಉಳಿದಂತೆ ದೇಶದಲ್ಲಿ ಜುಲೈ 21ವರೆಗೂ 1,47,24,546 ಕೊರೊನಾ ಸೋಂಕಿನ ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ. ನಿನ್ನೆ ಒಂದೇ ದಿನ 3,43,243 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ. ದೇಶದಲ್ಲಿ 7.5 ಲಕ್ಷ ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. 4 ಲಕ್ಷ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 6 ಲಕ್ಷ ಕೊರೊನಾ ಸೋಂಕಿನ ಪ್ರಕರಣಗಳು ಜುಲೈ ತಿಂಗಳ 20 ದಿನಗಳಲ್ಲಿ ದಾಖಲಾಗಿದೆ.