Tag: spa

  • ಹೊರಗೆ ಸ್ಪಾ, ಒಳಗೆ ಸೆಕ್ಸ್ ದಂಧೆ- ಮಹಿಳಾ ಆಯೋಗದ ದಾಳಿ

    ಹೊರಗೆ ಸ್ಪಾ, ಒಳಗೆ ಸೆಕ್ಸ್ ದಂಧೆ- ಮಹಿಳಾ ಆಯೋಗದ ದಾಳಿ

    -ಕಾಂಡೋಮ್, ಆಕ್ಷೇಪಾರ್ಹ ವಸ್ತುಗಳು ಪತ್ತೆ
    -ಸ್ಪಾದಲ್ಲಿದ್ದ ಐದು ಜನ ಗ್ರಾಹಕರು ವಶಕ್ಕೆ

    ನವದೆಹಲಿ: ದೇಶದ ರಾಜಧಾನಿಯ ತಿಲಕ್ ನಗರದಲ್ಲಿ ಸ್ಪಾ ಹೆಸರಲ್ಲಿ ನಡೆಯುತ್ತಿದ್ದ ಸೆಕ್ಸ್ ದಂಧೆಯ ಮೇಲೆ ದೆಹಲಿಯ ಮಹಿಳಾ ಆಯೋಗ ದಾಳಿ ನಡೆಸಿದೆ.

    ದೆಹಲಿ ಮಹಿಳಾ ಆಯೋಗದ ಹೆಲ್ಪ್‍ಲೈನ್ 181 ಸಂಖ್ಯೆಗೆ ಕರೆ ಮಾಡಿದ ಅನಾಮಧೇಯ ವ್ಯಕ್ತಿ ತಿಲಕ್ ನಗರದ ಸ್ಪಾದಲ್ಲಿ ನಡೆಯುತ್ತಿರೋ ಸೆಕ್ಸ್ ದಂಧೆಯ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ಮಹಿಳಾ ಅಯೋಗದವರು ದೆಹಲಿ ಪೊಲೀಸರ ಜೊತೆ ಮಾಂಸದಂಧೆಯ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ದೆಹಲಿ ಮಹಿಳಾ ಆಯೋಗದ ಸದಸ್ಯೆ ಕಿರಣ್ ನೇಗಿ, ಈ ಸಂಬಂಧ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಮಾಹಿತಿ ನೀಡಿದ್ರು. ಸೂಚನೆ ಸಿಗುತ್ತಿದ್ದಂತೆ ದಾಳಿ ನಡೆಸಲು ನಾವು ಎರಡು ತಂಡಗಳ ರಚನೆ ಮಾಡಲಾಯ್ತು. ಸರಿಯಾದ ಸಮಯಕ್ಕೆ ಪೊಲೀಸರು ಅಲ್ಲಿಗೆ ಬಂದಾಗ ಅವರ ಜೊತೆ ಸ್ಪಾ ಒಳಗೆ ಹೋದೆವು ಎಂದು ಹೇಳಿದ್ರು.

    ರಿಸೆಪ್ಷನ್ ನಲ್ಲಿ ಕುಳಿತಿದ್ದ ಯುವತಿಗೆ ಮಾಲೀಕನನ್ನ ಕರೆಸುವಂತೆ ಹೇಳಲಾಯ್ತು. ದಾಳಿಯ ವಿಷಯ ತಿಳಿಯುತ್ತಲ್ಲೇ ಮಾಲೀಕ ತನ್ನ ಫೋನ್ ಸ್ವಿಚ್ಛ್ ಮಾಡಿದ. ಸ್ಪಾದಲ್ಲಿದ್ದ ಐವರು ಗ್ರಾಹಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ನಂತರ ಅಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯರ ಹೇಳಿಕೆಯನ್ನ ದಾಖಲಿಸಿಕೊಳ್ಳಲಾಗಿದೆ. ಸ್ಪಾದ ಸಿಸಿಟಿವಿ ಫೋಟೋಜ್ ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಕಿರಣ್ ನೇಗಿ ತಿಳಿಸಿದ್ದಾರೆ.

    ಮಹಿಳಾ ಆಯೋಗಕ್ಕೆ ಮೂರು ಸ್ಪಾಗಳ ಬಗ್ಗೆ ಮಾಹಿತಿ ಬಂದಿತ್ತು. ಒಂದರ ಮೇಲೆ ದಾಳಿ ನಡೆಯುತ್ತಿದ್ದಂತೆ ಇನ್ನೆರಡು ಸ್ಪಾಗಳ ಬಾಗಿಲು ಹಾಕಿವೆ. ಮಹಾಮಾರಿ ಕೊರೊನಾ ಹಿನ್ನೆಲೆ ಸ್ಪಾಗಳನ್ನ ತೆರೆಯದಂತೆ ಸರ್ಕಾರ ಹೇಳಿದೆ. ಮಾರ್ಗಸೂಚಿಯಲ್ಲಿ ಸ್ಪಾಗಳ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿಲ್ಲ. ಆದ್ರೂ ದೆಹಲಿಯಲ್ಲಿ ಸ್ಪಾಗಳು ಆರಂಭವಾಗಿದ್ದು ಹೇಗೆ? ಈ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ವಾ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಪ್ರಶ್ನಿಸಿದ್ದಾರೆ.

  • ಹೊರಗೆ ಸ್ಪಾ & ಬ್ಯೂಟಿ ಪಾರ್ಲರ್- ಒಳಗೆ ಬ್ಯೂಟಿಗಳ ಮಾಂಸ ದಂಧೆ

    ಹೊರಗೆ ಸ್ಪಾ & ಬ್ಯೂಟಿ ಪಾರ್ಲರ್- ಒಳಗೆ ಬ್ಯೂಟಿಗಳ ಮಾಂಸ ದಂಧೆ

    -ಛೋಟಾ ಮುಂಬೈನಲ್ಲಿ ವೇಶ್ಯಾವಾಟಿಕೆ ಅಡ್ಡ

    ಧಾರವಾಡ/ಹುಬ್ಬಳ್ಳಿ: ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ದಂಧೆ ಜೋರಾಗಿ ಸಾಗಿದೆ. ಸ್ಪಾ ಹಾಗೂ ಬ್ಯೂಟಿ ಪಾರ್ಲರ ಹೆಸರಿನಲ್ಲಿ ಮಾಂಸದ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಹೀಗಾಗಿ ಸ್ಪಾ ಹಾಗೂ ಬ್ಯೂಟಿ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ದಾಳಿ ನಡೆಸಿ ಒಬ್ಬನನ್ನ ಬಂಧಿಸಿ ನಾಲ್ವರು ಮಹಿಳೆಯರ ರಕ್ಷಣೆ ಮಾಡಿದ್ದಾರೆ.

    ಹುಬ್ಬಳ್ಳಿಯ ವಿದ್ಯಾನಗರದ ಶಿರೂರ ಪಾರ್ಕ್ ಬಳಿಯ ನೇತ್ರಾವತಿ ಸ್ವ್ಕೇರ್ ನಲ್ಲಿ ಲೋಟಸ್ ಸ್ಪಾ ಮತ್ತು ಬ್ಯೂಟಿ ಪಾರ್ಲರ್ ಮಾಲೀಕ ತುಳಸಿದಾಸ ಬೋರಕರ್ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ಅಡ್ಡೆ ನಡೆಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿದ್ಯಾನಗರ ಪೊಲೀಸರು ಆರೋಪಿ ತುಳಸಿದಾಸನನ್ನ ಬಂಧಿಸಿ ನಾಲ್ವರು ಮಹಿಳೆಯರನ್ನ ರಕ್ಷಣೆ ಮಾಡಿದ್ದಾರೆ. ದಾಳಿ ವೇಳೆ ನಗದು ಹಣ ಹಾಗೂ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆಗೆ ಬಳಸುತ್ತಿದ್ದ ವಸ್ತುಗಳನ್ನ ಪೊಲೀಸರು ಜಪ್ತಿ ಮಾಡಿ ಆರೋಪಿಯನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ವಿದ್ಯಾನಗರ ಪೊಲೀಸರ ಈ ಕಾರ್ಯಾಚರಣೆಗೆ ಪೊಲೀಸ ಆಯುಕ್ತ ಆರ್ ದಿಲೀಪ್ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ. ಘಟನೆಯ ಕುರಿತು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಸಿಲಿಕಾನ್ ಸಿಟಿಯ ಸ್ಪಾ ಮೇಲೆ ಸಿಸಿಬಿ ದಾಳಿ- ಆರು ಯುವತಿಯರ ರಕ್ಷಣೆ

    ಸಿಲಿಕಾನ್ ಸಿಟಿಯ ಸ್ಪಾ ಮೇಲೆ ಸಿಸಿಬಿ ದಾಳಿ- ಆರು ಯುವತಿಯರ ರಕ್ಷಣೆ

    ಬೆಂಗಳೂರು: ಅಕ್ರಮ ಚಟುವಟಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನ ಕೋರಮಂಗಲದಲ್ಲಿರುವ ಸ್ಪಾ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಸ್ಪಾನಲ್ಲಿದ್ದ ಆರು ಯುವತಿಯರನ್ನು ರಕ್ಷಿಸಲಾಗಿದೆ.

    ಕೋರಮಂಗಲದಲ್ಲಿರುವ ಜಾಕ್ ಸೆಲೂನ್ ಆ್ಯಂಡ್ ವೆಲ್‍ನೆಸ್ ಸ್ಪಾ ಮೇಲೆ ದಾಳಿ ನಡೆಸಲಾಗಿದೆ. ಸ್ಪಾನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

    ಸ್ಪಾ ವ್ಯವಸ್ಥಾಪಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಸ್ಪಾ ಮಾಲೀಕ ಅರವಿಂದ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ವಿಶೇಷ ಜಾಲ ಬೀಸಿದ್ದಾರೆ. ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಜನವರಿಯಲ್ಲಿ ಕೋರಮಂಗಲ ಬಳಿಯ ಈಜಿಪುರದಲ್ಲಿ ಬಾಡಿ ಟು ಬಾಡಿ ಮಸಾಜ್ ಹೆಸರನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಪಾರ್ಲರ್ ಮೇಲೆ ಸಿಸಿಬಿ ಪೊಲೀಸ್ರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದರು. ಸ್ಪಾ ಹೆಸರಲ್ಲಿ ಗಿರಾಕಿಗಳನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದರು. ಹೆಣ್ಣುಮಕ್ಕಳಿಂದ ಬಾಡಿ ಟು ಬಾಡಿ ಮಸಾಜ್ ಹೆಸರಲ್ಲಿ ಆಕರ್ಷಕರಾಗುವಂತೆ ಮಾಡಿ ಸೆಕ್ಸ್ ನಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

    ಕೆಲಸ ಕೊಡಿಸೋದಾಗಿ ಹೆಣ್ಣುಮಕ್ಕಳನ್ನು ಕರೆತಂದು ಹಣದ ಆಸೆ ತೋರಿಸಿ ಸೆಕ್ಸ್ ನಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಿದ್ದರು. ಹ್ಯಾಪಿ ಎಂಡಿಂಗ್, ಬಾಡಿ ಟು ಬಾಡಿ ಮಸಾಜ್ ಹೆಸರಲ್ಲಿ ಗ್ರಾಹಕರಿಗೆ ಆಹ್ವಾನ ನೀಡುತ್ತಿರುವುದು ರೇಡ್ ವೇಳೆ ಬಯಲಿಗೆ ಬಂದಿತ್ತು.

  • ಬಾಡಿ ಮಸಾಜ್ ಹೆಸರಲ್ಲಿ ಸೆಕ್ಸ್ ದಂಧೆ – ಆರು ಯುವತಿಯರ ರಕ್ಷಣೆ

    ಬಾಡಿ ಮಸಾಜ್ ಹೆಸರಲ್ಲಿ ಸೆಕ್ಸ್ ದಂಧೆ – ಆರು ಯುವತಿಯರ ರಕ್ಷಣೆ

    ಬೆಂಗಳೂರು: ಬಾಡಿ ಟು ಬಾಡಿ ಮಸಾಜ್ ಹೆಸರನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಪಾರ್ಲರ್ ಮೇಲೆ ಸಿಸಿಬಿ ಪೊಲೀಸ್ರು ದಾಳಿ ಮಾಡಿ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.

    ಕೋರಮಂಗಲ ಬಳಿಯ ಈಜಿಪುರದಲ್ಲಿ ಮಸಾಜ್ ಅಂಡ್ ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಸ್ಪಾ ಹೆಸರಲ್ಲಿ ಗಿರಾಕಿಗಳನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದರು. ಹೆಣ್ಣುಮಕ್ಕಳಿಂದ ಬಾಡಿ ಟು ಬಾಡಿ ಮಸಾಜ್ ಹೆಸರಲ್ಲಿ ಆಕರ್ಷಕರಾಗುವಂತೆ ಮಾಡಿ ಸೆಕ್ಸ್ ನಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

    ಸಾಮ್ರಾಟ್ ಮತ್ತು ರಾಕೇಶ್ ಬಂಧಿತ ಆರೋಪಿಗಳು. ಕೆಲಸ ಕೊಡಿಸೋದಾಗಿ ಹೆಣ್ಣುಮಕ್ಕಳನ್ನು ಕರೆತಂದು ಹಣದ ಆಸೆ ತೋರಿಸಿ ಸೆಕ್ಸ್ ನಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಿದ್ದರು. ಹ್ಯಾಪಿ ಎಂಡಿಂಗ್, ಬಾಡಿ ಟು ಬಾಡಿ ಮಸಾಜ್ ಹೆಸರಲ್ಲಿ ಕಸ್ಟಮರ್‍ಗಳಿಗೆ ಆಹ್ವಾನ ನೀಡುತ್ತಿರುವುದು ರೇಡ್ ವೇಳೆ ಬಯಲಿಗೆ ಬಂದಿದೆ. ಸದ್ಯ ಆರು ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

  • ಮಸಾಜ್ ಮಾಡುವಾಗ ಆಂಟಿಯನ್ನೇ ರೇಪ್ ಮಾಡಿದ ಯುವಕ

    ಮಸಾಜ್ ಮಾಡುವಾಗ ಆಂಟಿಯನ್ನೇ ರೇಪ್ ಮಾಡಿದ ಯುವಕ

    ಚಂಡೀಗಢ: 28 ವರ್ಷದ ಮಸಾಜ್ ಮಾಡುವ ಯುವಕ 54 ವರ್ಷದ ವಿದೇಶಿ ಮಹಿಳೆಯನ್ನು ಅತ್ಯಾಚಾರ ಮಾಡಿರುವ ಘಟನೆ ಹರಿಯಾಣದ ಐಟಿ ಪಾರ್ಕ್ ನಲ್ಲಿರುವ ಪಂಚತಾರಾ ಹೋಟೆಲ್ ನಲ್ಲಿ ನಡೆದಿದೆ.

    ಸಂತ್ರಸ್ತೆ ಡಿಸೆಂಬರ್ 27 ರಂದು ಪೊಲೀಸರಿಗೆ ಈ ಬಗ್ಗೆ ದೂರು ಕೊಟ್ಟಿದ್ದು, ತಾನು ಪಾದದ ಮಸಾಜ್ ಮಾಡಿಸಿಕೊಳ್ಳುವಾಗ ಸ್ಪಾದಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ದೂರಿದ್ದಾರೆ. ಸದ್ಯಕ್ಕೆ ಆರೋಪಿ ತಲೆ ಮರೆಸಿಕೊಂಡಿದ್ದು, ಆತನು ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿ ಅಂತ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಿದೇಶಿ ಮಹಿಳೆ ಡಿಸೆಂಬರ್ 19 ರಂದು ತನ್ನ ಪಾಟ್ನರ್ ಜೊತೆ ಪ್ರವಾಸಿ ವೀಸಾದಲ್ಲಿ ಚಂಡೀಗಢಕ್ಕೆ ಬಂದಿದ್ದರು. ಬಳಿಕ ಚಂಡೀಗಢದ ಐಟಿ-ಪಾರ್ಕ್ ನ ಸ್ಟಾರ್ ಹೋಟೆಲೊಂದರಲ್ಲಿ ತಂಗಿದ್ದರು. ಮಹಿಳೆ ಅಲ್ಲಿನ ಸ್ಪಾದಲ್ಲಿ ಮಸಾಜ್ ಗೆಂದು ಹೋಗಿದ್ದಾಗ ಆರೋಪಿ ಅಸಭ್ಯವಾಗಿ ಮುಟ್ಟಿ, ನನ್ನ ಜೊತೆ ಕೆಟ್ಟದ್ದಾಗಿ ವರ್ತಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಅದೇ ದಿನ ಮಹಿಳೆ ಹೋಟೆಲ್ ಆಡಳಿತ ಮಂಡಳಿಗೆ ಈ ಬಗ್ಗೆ ತಿಳಿಸಿದ್ದಾರೆ. ಆದರೆ ಡಿಸೆಂಬರ್ 27 ರಂದು ಶಿಮ್ಲಾದ ಪ್ರವಾಸಕ್ಕೆ ಹೋಗಿ ಅಲ್ಲಿಂದ ವಾಪಸ್ ಬಂದ ಬಳಿಕ ಪೊಲೀಸ್ ಠಾಣೆಗೆ ಬಂದು ದೂರನ್ನು ದಾಖಲಿಸಿದ್ದಾರೆ. ಅದೇ ದಿನ ಹೋಟೆಲ್ ಆಡಳಿತ ಮಂಡಳಿ ಆರೋಪಿಯನ್ನು ಕೆಲಸದಿಂದ ವಜಾ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆ ಸ್ಥಳೀಯ ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳಲು ಭಾರತಕ್ಕೆ ಭೇಟಿ ಕೊಡುತ್ತಿದ್ದರು. ಸದ್ಯಕ್ಕೆ ಆರೋಪಿ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಸಂತ್ರಸ್ತೆಗೆ ಈಗಾಗಲೇ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಲಾಗಿದೆ. ಅಷ್ಟೇ ಅಲ್ಲದೇ ಸಂತ್ರಸ್ತೆಯ ಹೇಳಿಕೆಯನ್ನು ಮಾಜಿಸ್ಟ್ರೇಟ್ ಅವರು ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ನೀಲಾಂಬರಿ ಜಗ್ದಾಲೆ ತಿಳಿಸಿದ್ದಾರೆ.

    ಐಟಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಈ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಾರು ಚಲಾಯಿಸುತ್ತಲೇ ಸ್ಪಾ ಮಾಡ್ತಿರೋ ವಿಡಿಯೋ ವೈರಲ್

    ಕಾರು ಚಲಾಯಿಸುತ್ತಲೇ ಸ್ಪಾ ಮಾಡ್ತಿರೋ ವಿಡಿಯೋ ವೈರಲ್

    ಪಾರ್ಲರ್ ಗಳಲ್ಲಿ ಬಾಡಿ ಮಸಾಜ್, ಸ್ಪಾ ಮೊದಲಾದವುಗಳನ್ನು ಮಾಡುವುದನ್ನು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಆದ್ರೆ ವ್ಯಕ್ತಿಯೊಬ್ಬ ತನ್ನ ಕಾರನಲ್ಲೇ ಸ್ಪಾ ಮಾಡುತ್ತಿರೋ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಹೌದು. ಕಾಲಿನ್ ಫರ್ಜೆ ಎಂಬ ವ್ಯಕ್ತಿ ತನ್ನ ಕಾರನ್ನು ಟಬ್ ಆಗಿ ಮಾಡಿ ಅದಕ್ಕೆ ನೀರು ಸುರಿದು ಚಲಾಯಿಸುವ ಮೂಲಕ ಸ್ಪಾ ಮಾಡಿಕೊಳ್ಳುತ್ತಾನೆ. ಕಾರಿನ ಇತರ ಎಲೆಕ್ಷಟಿಕಲ್ ಭಾಗಗಳನ್ನು ವಾಟರ್ ಪ್ರೂಫ್ ಮಾಡಿಕೊಂಡಿದ್ದಾನೆ.

    ಕಾರು ಚಾಲನೆ ಮಾಡುವಾಗ ಎಂಜಿನ್ ಮೂಲಕ ನೀರು ಬಿಸಿಯಾಗುವಂತೆ ಮಾಡಿದ್ದಾನೆ. ಅಲ್ಲದೇ ಕಾರಿನ ಎರಡು ಬದಿಯಲ್ಲಿ ಕಾಯಿಲ್ ಇಟ್ಟಿದ್ದಾನೆ. ಈ ಮೂಲಕ ಕಾರು ಚಾಲನೆ ಮಾಡುತ್ತಲೇ ಸ್ಪಾ ಮಾಡಿಸಿಕೊಳ್ಳುತ್ತಾನೆ. ಈ ವಿಡಿಯೋ ಇದೀಗ ಯೂಟ್ಯೂಬ್ ನಲ್ಲಿ 10 ಲಕ್ಷಕ್ಕೂ ಅಧಿಕ ವ್ಯೂವ್ ಕಂಡಿದೆ.

    ಇದು ನಾನು ಮಾಡಿರೋ ಅತ್ಯುತ್ತಮ ಅನ್ವೇಷಣೆ ಅಂತ ಸ್ವತಃ ಫರ್ಜೆ ತನ್ನ ಕಾರ್ಯವನ್ನು ಶ್ಲಾಘಿಸಿಕೊಂಡಿದ್ದಾನೆ. ಕಾರು ಚಲಾಯಿಸುತ್ತಲೇ ಎಂಜಾಯ್ ಮಾಡಿಕೊಂಡು ಸ್ಪಾ ಮಾಡಿಸಿಕೊಳ್ಳುವ ದೃಶ್ಯವನ್ನು ಸೆರೆಹಿಡಿದ ಫರ್ಜೆ ಇದೊಂದು ಗೂಗಲ್ ಜಾಹೀರಾತು ಅಂತ ಬಹಿರಂಗಪಡಿಸಿದ್ದಾನೆ.