Tag: sp

  • ಕರ್ತವ್ಯಲೋಪ ಎಸಗಿದ ಪಿಎಸ್‍ಐಯನ್ನು ಸಸ್ಪೆಂಡ್ ಮಾಡಿದ ಎಸ್‍ಪಿ

    ಕರ್ತವ್ಯಲೋಪ ಎಸಗಿದ ಪಿಎಸ್‍ಐಯನ್ನು ಸಸ್ಪೆಂಡ್ ಮಾಡಿದ ಎಸ್‍ಪಿ

    ಮಂಡ್ಯ: ಶಿಂಷಾ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ದಂಧೆ ಹಾಗೂ ಸಾಗಾಣಿಕೆಯನ್ನು ನಿಯಂತ್ರಿಸುವಲ್ಲಿ ಕೆಸ್ತೂರು ಪೊಲೀಸ್ ಠಾಣಾ ಪಿಎಸ್‍ಐ ಪ್ರಭಾ ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಅಮಾನತ್ತು ಮಾಡಿ ಎಂದು ಆದೇಶ ಹೊರಡಿಸಿದ್ದಾರೆ.

    ಫೆಬ್ರವರಿ 4ರಂದು ಮದ್ದೂರು ತಾಲೂಕಿನ ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲನ ಕುಪ್ಪೆ ಗ್ರಾಮದ ತುಮಕೂರು- ಮದ್ದೂರು ರಾಜ್ಯ ಹೆದ್ದಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿಯೊಂದು ಆಟೋಗೆ ಡಿಕ್ಕಿ ಹೊಡೆದು ಮೂವರು ಯುವಕರು ಸ್ಥಳದಲ್ಲೆ ಮೃತಪಟ್ಟಿದ್ದರು. ಅಪಘಾತವಾದ ತಕ್ಷಣವೇ ಲಾರಿಯಲ್ಲಿದ್ದ ಮರಳನ್ನು ದಂಧೆಕೋರರು ಹೆದ್ದಾರಿ ಪಕ್ಕದ ಜಮೀನಿನಲ್ಲಿ ಸುರಿದು ಮರಳು ಸಾಗಾಣಿಕೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ.

    ಪಿಎಸ್‍ಐ ಪ್ರಭಾ

    ಲಾರಿ ಮಾಲೀಕರೊಂದಿಗೆ ಪಿಎಸ್‍ಐ ಪ್ರಭಾ ಶಾಮೀಲಾಗಿದ್ದಾರೆ ಎಂದು ಗ್ರಾಮಸ್ಥರು ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಎಸ್‍ಪಿ ಕೆ. ಪರಶುರಾಮ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಸಂಬಂಧ ಪಿಎಸ್‍ಐ ಪ್ರಭಾ ಅವರನ್ನು ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಎಂದು ಎಸ್‍ಪಿ ಆದೇಶ ಹೊರಡಿಸಿದ್ದಾರೆ.

  • ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸ್‍ಪಿ ಖಡಕ್ ತೀರ್ಮಾನ – 12 ದಿನದಲ್ಲಿ ಇಬ್ಬರು ಪಿಎಸ್‍ಐ ಅಮಾನತು

    ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸ್‍ಪಿ ಖಡಕ್ ತೀರ್ಮಾನ – 12 ದಿನದಲ್ಲಿ ಇಬ್ಬರು ಪಿಎಸ್‍ಐ ಅಮಾನತು

    ತುಮಕೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ ಖಡಕ್ ತೀರ್ಮಾನ ತೆಗೆದುಕೊಂಡು ಭ್ರಷ್ಟ ಅಧಿಕಾರಿಗಳಿಗೆ ಚಾಟಿ ಬೀಸುತ್ತಿದ್ದಾರೆ.

    ಫೆಬ್ರವರಿ 1ರಂದು ತುಮಕೂರಿನ ಜಯನಗರ ಪೊಲೀಸ್ ಠಾಣೆಯ ಪಿಎಸ್‍ಐ ಮುತ್ತುರಾಜು ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತುಗೊಳಿಸಿದರ ಬೆನ್ನಲ್ಲೇ ಈಗ ಇನ್ನೊಬ್ಬ ಪಿಎಸ್‍ಐಯನ್ನು ಕರ್ತವ್ಯ ಲೋಪದ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ.

    ಪಿಎಸ್‍ಐ ರಾಘವೇಂದ್ರ

    ಪಾವಗಡ ಪಟ್ಟಣ ಠಾಣೆಯ ಪಿಎಸ್‍ಐ ರಾಘವೇಂದ್ರ ಅವರನ್ನು ಕರ್ತವ್ಯ ಲೋಪ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಎಂದು ಆದೇಶ ಹೊರಡಿಸಲಾಗಿದೆ.

    ಸುಮಾರು ನಾಲ್ಕು ಪ್ರಕರಣಗಳಲ್ಲಿ ದೂರು ದಾಖಲಿಸಿಕೊಳ್ಳದೆ ಅರ್ಜಿದಾರರಿಗೆ ಮೋಸ ಮಾಡುವ ಹುನ್ನಾರ ನಡೆಸಿದ್ದು ಸಾಬೀತಾಗಿದೆ. ಹೀಗಾಗಿ ಯಾವುದೇ ಮುಲಾಜಿಲ್ಲದೆ ಪಿಎಸ್‍ಐ ರಾಘವೇಂದ್ರ ಅವರನ್ನು ಅಮಾನತುಗೊಳಿಸಲಾಗಿದೆ.

  • ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ರೌಡಿಗಳ ಚಳಿ ಬಿಡಿಸಿದ ಕೋಟೆನಾಡಿನ ಲೇಡಿ ಸಿಂಗಂ

    ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ರೌಡಿಗಳ ಚಳಿ ಬಿಡಿಸಿದ ಕೋಟೆನಾಡಿನ ಲೇಡಿ ಸಿಂಗಂ

    – ಅಡ್ಡದಾರಿ ಬಿಟ್ಟು ಕಷ್ಟಪಟ್ಟು ದುಡಿದು ಜೀವನ ಕಟ್ಟಿಕೊಳ್ಳಿ

    ಚಿತ್ರದುರ್ಗ: ಕೋಟೆನಾಡಿನಲ್ಲಿ ನಡೆಯುತಿದ್ದ ಮರಳು ದಂಧೆ, ಓಸಿ, ಮಟ್ಕಾ ಹಾಗೂ ಜೂಜುಕೋರರ ಸಿಂಹ ಸ್ವಪ್ನ ಎನಿಸಿದ್ದ ಎಸ್‍ಪಿ ಡಾ. ಅರುಣ್ ವರ್ಗಾವಣೆಯಾಗುತ್ತಿದ್ದಂತೆ ದಂಧೆಕೋರರು ಹಾಗೂ ರೌಡಿಶೀಟರ್‌ಗಳು ಫುಲ್ ರಿಲಾಕ್ಸ್ ಮೂಡ್‍ನಲ್ಲಿದ್ದರು. ಇದೀಗ ಕೋಟೆನಾಡಿನ ಲೇಡಿ ಸಿಂಗಂ ರಾಧಿಕಾ ಅವರ ಚಳಿ ಬಿಡಿಸಿದ್ದಾರೆ.

    ಕಳೆದ ಒಂದು ವಾರದ ಹಿಂದೆಯಷ್ಟೇ ಡ್ಯೂಟಿ ರಿಪೋರ್ಟ್ ಮಾಡಿಕೊಂಡಿರುವ ಚಿತ್ರದುರ್ಗದ ನೂತನ ಎಸ್‍ಪಿ ರಾಧಿಕಾ ಅವರು ಇಂದು ರೌಡಿಶೀಟರ್‌ಗಳ ಪರೇಡ್ ನಡೆಸಿದರು. ಈ ವೇಳೆ ರೌಡಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವು ಸರಿ ದಾರಿಯಲ್ಲಿ ನಡೆದರೆ ಸರಿ, ಇಲ್ಲಾಂದ್ರೆ ನಾನು ಮಾತ್ರ ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದು ಖಡಕ್ ವಾರ್ನ್ ಕೊಟ್ಟಿದ್ದಾರೆ.

    ನಗರದ ಡಿ.ಆರ್.ಗ್ರೌಂಡ್‍ನಲ್ಲಿ ಹಮ್ಮಿಕೊಂಡಿದ್ದ ರೌಡಿಗಳ ಪರೇಡ್‍ನಲ್ಲಿ ಭಾಗವಹಿಸಿ ರೌಡಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಒಳ್ಳೆತನದಿಂದ ಇದ್ದು ಸರಿ ದಾರಿಯಲ್ಲಿ ನಡೆಯುತ್ತೀನಿ ಅಂದರೆ ನಮ್ಮ ಸಪೋರ್ಟ್ ಇರುತ್ತೆ. ಮತ್ತೆ ಏನಾದರು ಬಾಲ ಬಿಚ್ಚಿ ತಮ್ಮ ಹಳೆ ಕಸುಬನ್ನು ಮುಂದವರಿಸಿದರೆ, ನಾನು ಮಾತ್ರ ನಿಮ್ಮನ್ನು ಸುಮ್ಮನೆ ಬಿಡಲ್ಲ. ಹಾಗೆಯೇ ಅಡ್ಡದಾರಿಗಳನ್ನೆಲ್ಲಾ ಬಿಟ್ಟು ಕಷ್ಟಪಟ್ಟು ದುಡಿದು ತಮ್ಮ ಜೀವನವನ್ನು ಕಟ್ಟಿಕೊಳ್ಳಿ ಎಂದು ಸೂಚಿಸಿದ್ದಾರೆ.

  • ಓಬವ್ವನ ನಾಡಲ್ಲಿ ಮಹಿಳೆಯರ ಆಡಳಿತ- ಮಹಿಳಾಮಣಿಗಳ ಕೈಯಲ್ಲಿ ಜಿಲ್ಲೆಯ ಚುಕ್ಕಾಣಿ

    ಓಬವ್ವನ ನಾಡಲ್ಲಿ ಮಹಿಳೆಯರ ಆಡಳಿತ- ಮಹಿಳಾಮಣಿಗಳ ಕೈಯಲ್ಲಿ ಜಿಲ್ಲೆಯ ಚುಕ್ಕಾಣಿ

    ಚಿತ್ರದುರ್ಗ: ಮಹಿಳೆಯರು ಅಂದ್ರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಕುಟುಂಬ ನಿರ್ವಹಣೆ ಮಾಡುತ್ತಾ, ಅಡುಗೆ ಮನೆಗಷ್ಟೇ ಸೀಮಿತ ಎಂಬ ಕಾಲವೊಂದಿತ್ತು. ಆದರೆ ಈಗ ಒನಕೆ ಓಬವ್ವನ ನಾಡು ಚಿತ್ರದುರ್ಗದಲ್ಲಿ ಮಹಿಳೆಯರ ಕೈಯಲ್ಲೇ ಆಡಳಿತದ ಚುಕ್ಕಾಣಿ ಇದೆ.

    ಹೌದು. ಚಿತ್ರದುರ್ಗದ ನೂತನ ಎಸ್‍ಪಿಯಾಗಿ ರಾಧಿಕಾ ವರ್ಗಾವಣೆಯಾದ ಬೆನ್ನಲ್ಲೇ ಸಾಮಾಜಿಕ ಜಾಲಾತಾಣಗಳಲ್ಲಿ ಮಹಿಳೆಯರ ದರ್ಬಾರ್ ಎಂಬ ಮಾತುಗಳು ಹರಿದಾಡುತ್ತಿದ್ದು ಭಾರೀ ಚರ್ಚೆ ಶುರುವಾಗಿದೆ.

    ಕಳೆದ ಎರಡು ವರ್ಷಗಳಿಂದ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ವಿನೋತ್ ಪ್ರಿಯಾ, ಜಿ.ಪಂ ಸಿಇಓ ಸತ್ಯಭಾಮಾ ಹಾಗೂ ಜಿ.ಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಮಾತ್ರ ಪ್ರಮುಖ ಹುದ್ದೆಗಳಲ್ಲಿ ಆಡಳಿತ ನಡೆಸುತ್ತಿದ್ದರು. ಆದರೆ ಎಸ್‍ಪಿಯಾಗಿ ರಾಧಿಕಾ ಕೂಡ ವರ್ಗಾವಣೆಯಾಗಿ ಚಿತ್ರದುರ್ಗಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಪ್ರಮುಖ ಆಡಳಿತಾತ್ಮಕ ಹುದ್ದೆಗಳಲ್ಲಿ ಮಹಿಳೆಯರೇ ಚುಕ್ಕಾಣಿ ಹಿಡಿದಿರೋದು ಒನಕೆ ಓಬವ್ಬನ ಕೋಟೆನಾಡಲ್ಲಿ ವಿಶೇಷ ಅನ್ನಿಸಿದೆ.

    ಜಿಲ್ಲೆಯ ಅಭಿವೃದ್ಧಿ ಹಾಗೂ ಪ್ರಮುಖ ನಿರ್ಧಾರ ಕೈಗೊಳ್ಳುವ ನಿರ್ಣಾಯಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿಸಿ ವಿನೋತ್ ಪ್ರಿಯ, ಜಿಲ್ಲಾಪಂಚಾಯ್ತಿ ಸಿಇಓ ಸತ್ಯಭಾಮ ಸಹ ಪುರುಷ ಅಧಿಕಾರಿಗಳಿಗಿಂತ ನಾವೇನೂ ಕಡಿಮೆ ಇಲ್ಲವೆಂಬಂತೆ ಕಾರ್ಯ ನಿರ್ವಹಿಸುತ್ತಾ, ಖಡಕ್ ಆಫೀಸರ್ಸ್ ಎನಿಸಿದ್ದಾರೆ. ಇದೀಗ ಅವರೊಂದಿಗೆ ಜಿಲ್ಲೆಯ ಲಾ ಅಂಡ್ ಆರ್ಡರ್ ನಲ್ಲೂ ಭಾರೀ ಬದಲಾವಣೆ ತರಬೇಕೆಂಬ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಗೆ ವರ್ಗಾವಣೆ ಆಗಿ ಬಂದಿರುವ ನೂತನ ಮಹಿಳಾ ಎಸ್‍ಪಿ ರಾಧಿಕಾ ಅವರ ಮೇಲೆಯೂ ಜಿಲ್ಲೆಯ ಜನರು ಭಾರೀ ನಿರೀಕ್ಷೆ ಹೊಂದಿದ್ದಾರೆ.

    ಹೀಗಾಗಿ ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಯಾರೊಂದಿಗೂ ರಾಜಿಯಾಗದೇ ಈವರೆಗೆ ಹಲವು ಬದಲಾವಣೆಗಳನ್ನು ತಂದು ಸ್ಟ್ರಿಕ್ಟ್ ಆಫೀಸರ್ ಎನಿಸಿದ್ದ ಡಾ. ಅರುಣ್ ಅವರ ಸ್ಥಾನಕ್ಕೆ ಬಂದಿರುವ ರಾಧಿಕಾ ಅವರ ಮೇಲೆ ಭಾರೀ ಜವಾಬ್ದಾರಿ ಸಹ ಇದೆ. ಆದರೆ ಕಾಂಗ್ರೆಸ್ ನಾಯಕರೊಬ್ಬರ ಸಂಬಂಧಿ ಎಂದು ಜಿಲ್ಲೆಗೆ ಬಂದಿರುವ ಎಸ್.ಪಿ ರಾಧಿಕಾ ಅವರು ಹೇಗೆ ಎಲ್ಲಾ ಮ್ಯಾನೇಜ್ ಮಾಡ್ತಾರೆಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

  • ಸುಳ್ಳು ಸುದ್ದಿ ಶೇರ್ ಮಾಡಿದ್ರೆ ಹುಷಾರ್ – ಯಾದಗಿರಿ ಎಸ್‍ಪಿ ಖಡಕ್ ವಾರ್ನಿಂಗ್

    ಸುಳ್ಳು ಸುದ್ದಿ ಶೇರ್ ಮಾಡಿದ್ರೆ ಹುಷಾರ್ – ಯಾದಗಿರಿ ಎಸ್‍ಪಿ ಖಡಕ್ ವಾರ್ನಿಂಗ್

    ಯಾದಗಿರಿ: ಫೇಸ್‍ಬುಕ್ ಮತ್ತು ವಾಟ್ಸಾಪ್ ಗ್ರೂಪ್‍ಗಳಲ್ಲಿ ಯಾದಗಿರಿ ಜಿಲ್ಲಾ ಪೊಲೀಸ್ ಪ್ರಕಟಣೆ ಹೆಸರಿನಲ್ಲಿ ಜನವರಿ 15ರಿಂದ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಸಾರ್ವಜನಿಕರು ಇದಕ್ಕೆ ಕಿವಿಗೊಡಬಾರದು ಮತ್ತು ಬೇರೆಯವರಿಗೆ ಕಳುಹಿಸಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ್ ಭಗವಾನ್ ಸೋನವಣೆ ಎಚ್ಚರಿಕೆ ನೀಡಿದ್ದಾರೆ.

    ಕಳೆದ ಒಂದು ವಾರಗಳಿಂದ ಯಾದಗಿರಿ ಜಿಲ್ಲಾ ಪೊಲೀಸ್ ಪ್ರಕಟಣೆ ಎಂದು ನಮೂದಿಸಿ,  “ಯಾರಾದರು ಮನೆ ಹತ್ತಿರ ಬಂದು ನಾವು ಸರ್ಕಾರಿ ಆಸ್ಪತ್ರೆಯಿಂದ ಬಂದಿದ್ದೇವೆ. ಇನ್ಸುಲಿನ್, ವಿಟಾಮಿನ್ ಇಂಜೆಕ್ಷನ್ ಮಾಡ್ತೀವಿ ಅಂದು ಹೇಳಿದರೆ ಮಾಡಿಸಿಕೊಳ್ಳದಿರಿ. ಜಿಹಾದಿ ಟೆರರಿಸ್ಟ್ ಗಳು ಈ ರೀತಿ ಯಾಮಾರಿಸಿ ಹಿಂದೂಗಳಿಗೆ ಏಡ್ಸ್ ಇಂಜೆಕ್ಷನ್ ಕೊಡುತ್ತಿದ್ದಾರೆಂತೆ ಜಾಗೃತರಾಗಿರಿ. ನಿಮಗೆ ಸಂಬಂಧಿಸಿದ ಎಲ್ಲಾ ಗ್ರೂಪ್‍ಗಳಿಗೆ ಕಳುಹಿಸಿ ಅಮಾಯಕರ ಪ್ರಾಣ ಉಳಿಸಿರಿ” ಎಂದು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹೆಸರಿನಲ್ಲಿ ಸುಳ್ಳು ಸಂದೇಶ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಇದು ಜಿಲ್ಲಾ ಪೊಲೀಸ್ ಇಲಾಖೆಗೆ ಮುಜುಗರದ ಸಂಗತಿಯಾಗಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಅಥವಾ ಶೇರ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‍ಪಿ ಎಚ್ಚರಿಕೆ ನೀಡಿದ್ದಾರೆ.

  • ಕೃಷ್ಣನೂರಿನ ಕಾವಲಿಗೆ ಎಸ್ ಪಿ ವಿಷ್ಣುವರ್ಧನ್ ನೇಮಕ

    ಕೃಷ್ಣನೂರಿನ ಕಾವಲಿಗೆ ಎಸ್ ಪಿ ವಿಷ್ಣುವರ್ಧನ್ ನೇಮಕ

    ಉಡುಪಿ: ಕೃಷ್ಣನೂರು ಉಡುಪಿಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ವಿಷ್ಣುವರ್ಧನ್ ಐಪಿಎಸ್ ಅಧಿಕಾರ ವಹಿಸಿಕೊಂಡಿದ್ದಾರೆ. ಎಸ್‍ಪಿ ನಿಶಾ ಜೇಮ್ಸ್ ಅವರನ್ನು ಭಡ್ತಿಕೊಟ್ಟು ಬೆಂಗಳೂರಿಗೆ ವರ್ಗ ಮಾಡಲಾಗಿದೆ.

    ಎಸ್‍ಪಿ ವಿಷ್ಣುವರ್ಧನ್ ಅವರು ಮೂರು ವರ್ಷಗಳ ಹಿಂದೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಒಂದೂವರೆ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಆ ಮೊದಲು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಉಡುಪಿಯಿಂದ ವರ್ಗಾವಣೆಗೊಂಡ ಬಳಿಕ ಮೈಸೂರು ಎಸ್‍ಪಿಯಾಗಿ ಸೇವೆ ಸಲ್ಲಿಸಿದ್ದರು.

    ಎಸ್‍ಪಿ ನಿಶಾ ಜೇಮ್ಸ್ ಅವರನ್ನು ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕರಾಗಿ ಭಡ್ತಿ ನೀಡಿ ವರ್ಗಾವಣೆಗೊಳಿಸಿ ಸರ್ಕಾರ ಡಿ.31ರಂದು ಆದೇಶ ಹೊರಡಿಸಿತ್ತು. ನಂತರ ಅಕ್ಷಯ್ ಹಾಕೆ ಮಚ್ಚಿಂದ್ರ ಅವರಿಗೆ ಭಡ್ತಿ ನೀಡಿ ಉಡುಪಿ ಜಿಲ್ಲೆಯ ನೂತನ ಎಸ್‍ಪಿಯಾಗಿ ಸರ್ಕಾರ ಆದೇಶಿಸಿತ್ತು.

    ಒಂದೇ ದಿನದಲ್ಲಿ ಹೊಸ ಎಸ್‍ಪಿಯನ್ನು ಬದಲಾಯಿಸಲಾಗಿದೆ. ರಾಜಕೀಯ ಪ್ರಭಾವ ಬಳಸಿ ಗೃಹ ಸಚಿವರ ಉಸ್ತುವಾರಿ ಜಿಲ್ಲೆಗೆ ಎಸ್‍ಪಿ ವಿಷ್ಣುವರ್ಧನ್ ಅವರನ್ನು ನೇಮಕ ಮಾಡಲಾಗಿದೆ.

  • ಹೊಸ ವರ್ಷಾಚರಣೆಯಲ್ಲಿ ಸಿನಿಮಾ ಹಾಡು ಹಾಡಿ ರಂಜಿಸಿದ ರಾಯಚೂರು ಎಸ್‍ಪಿ

    ಹೊಸ ವರ್ಷಾಚರಣೆಯಲ್ಲಿ ಸಿನಿಮಾ ಹಾಡು ಹಾಡಿ ರಂಜಿಸಿದ ರಾಯಚೂರು ಎಸ್‍ಪಿ

    ರಾಯಚೂರು: ಜಿಲ್ಲೆಯಲ್ಲಿ ನೂತನ ವರ್ಷದ ಸಂಭ್ರಮಾಚರಣೆಗಳು ಜೋರಾಗಿ ನಡೆಯಿತು. ನಗರದ ನೀಲನಕ್ಷತ್ರ ಲೇಔಟ್ ನಲ್ಲಿ ಫ್ಯಾಮಿಲಿ ಪಾರ್ಟಿ ಆಯೋಜಿಸಲಾಗಿತ್ತು. ಮಕ್ಕಳು, ಯುವಕರು ವಯಸ್ಸಿನ ಭೇದವಿಲ್ಲದೆ ಕುಣಿದು ಸಂಭ್ರಮಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ.ವೇದಮೂರ್ತಿ ಸಿನಿಮಾ ಹಾಡುಗಳಿಗೆ ಧ್ವನಿಗೂಡಿಸಿ ನೆರೆದಿದ್ದವರನ್ನು ರಂಜಿಸಿದರು. ಮಕ್ಕಳು ಚಳಿಯನ್ನೂ ಲೆಕ್ಕಿಸದೇ ನೀರಿನಲ್ಲಿ ಕುಣಿದು ಖುಷಿಪಟ್ಟರು. ಭರ್ಜರಿ ಶೃಂಗಾರಗೊಂಡಿದ್ದ ಕಾರ್ಯಕ್ರಮದಲ್ಲಿ ನೂರಾರು ಜನ ಭಾಗವಹಿಸಿ ಸಂಭ್ರಮಿಸಿದ್ದರು.

    ನಗರದ ಸಾಯಿಸೀನಾ ಅಪಾರ್ಟ್ ಮೆಂಟ್ ಸೇರಿದಂತೆ ನಗರದ ಹಲವೆಡೆ ಹೊಸ ವರ್ಷಾಚರಣೆಯ ಸಂಭ್ರಮ ಮನೆ ಮಾಡಿತ್ತು. ಯುವಕ ಯುವತಿಯರು ಡಿಜೆ ಹಾಡಿಗೆ ಸಖತ್ ಡ್ಯಾನ್ಸ್ ಮಾಡಿದರು. ಈ ಮೂಲಕ ಜಿಲ್ಲೆಯ ಜನತೆ ಹೊಸ ವರ್ಷವನ್ನು ಖುಷಿಯಿಂದ ಬರಮಾಡಿಕೊಂಡರು.

  • ರಾಯಚೂರಿನಲ್ಲಿ ಬಿಗಿ ಭದ್ರತೆಯಲ್ಲೇ ಹೊಸ ವರ್ಷಾಚರಣೆ- ಯುವಕರಿಗೆ ಎಸ್‌ಪಿ ಖಡಕ್ ಎಚ್ಚರಿಕೆ

    ರಾಯಚೂರಿನಲ್ಲಿ ಬಿಗಿ ಭದ್ರತೆಯಲ್ಲೇ ಹೊಸ ವರ್ಷಾಚರಣೆ- ಯುವಕರಿಗೆ ಎಸ್‌ಪಿ ಖಡಕ್ ಎಚ್ಚರಿಕೆ

    ರಾಯಚೂರು: ಹೊಸ ವರ್ಷಾಚರಣೆ ಹೆಸರಿನಲ್ಲಿ ಕಾನೂನು ಮೀರಿ ನಡೆದರೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಿ.ಬಿ.ವೇದಮೂರ್ತಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಕುಡಿದು ವಾಹನಗಳನ್ನು ಚಲಾಯಿಸುವಂತವರನ್ನು ಪರಿಶೀಲನೆ ಮಾಡಲು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ಕುಡಿದ ಮತ್ತಿನಲ್ಲಿ ವಾಹನಗಳನ್ನು ಚಲಾಯಿಸದೆ, ತಮ್ಮ ಸ್ವಂತ ವಾಹನಗಳನ್ನು ಮನೆಯಲ್ಲಿ ಬಿಟ್ಟು ಆಟೋ ಅಥವಾ ಸಾರ್ವಜನಿಕ ವಾಹನಗಳನ್ನು ಉಪಯೋಗಿಸಿ. ಕುಡಿದು ವಾಹನ ಚಲಾಯಿಸಿದಲ್ಲಿ ಸೂಕ್ತ ಶಿಸ್ತಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಎಸ್‍ಪಿ ಹೇಳಿದ್ದಾರೆ.

    ನಗರದ ಮುಖ್ಯ ರಸ್ತೆಗಳಾದ ಸ್ಟೇಷನ್ ಸರ್ಕಲ್, ಅಂಬೇಡ್ಕರ್ ಸರ್ಕಲ್, ಗಂಜ್ ರಸ್ತೆ ಇನ್ನು ಮುಂತಾದ ಕಡೆ ವಾಹನದ ಸೈಲನ್ಸರ್ ತೆಗೆದು ಕರ್ಕಶವಾಗಿ ಶಬ್ದ ಮಾಡುತ್ತಾ, ವಾಹನ ಚಲಾಯಿಸಿ ತೊಂದರೆ ಕೊಡುವವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಮದ್ಯಪಾನ ಮಾಡಿ ಆಗಲಿ ಅಥವಾ ಹೊಸ ವರ್ಷದ ಆಚರಣೆಯ ಭರಾಟೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ತೊಂದರೆ ಕೊಡುವವರ ಮೇಲೆ ಕ್ರಮಕೈಗೊಳ್ಳಲು ಓಬವ್ವನ ಪಡೆ ನಿರಂತರವಾಗಿ ಗಸ್ತು ಮಾಡುತ್ತದೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ರಾತ್ರಿಯಿಡಿ ಗಸ್ತು ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಬಂದೋಬಸ್ತ್ ನಡೆಸಲಿದ್ದಾರೆ. ರಾತ್ರಿ 10.30 ಗಂಟೆಯ ನಂತರ ಲೌಡ್ ಸ್ಪೀಕರ್ ಮತ್ತು ಪಟಾಕಿಯನ್ನು ಯಾರೂ ಹಚ್ಚ ಕೂಡದು ಎಂದು ಎಚ್ಚರಿಸಿದ್ದಾರೆ.

    4 ಡಿವೈಎಸ್‍ಪಿ, 20 ಸಿಪಿಐ, 40 ಪಿಎಸ್‍ಯ, 10 ಡಿಎಆರ್, 2 ಕೆಎಸ್‍ಆರ್ ಪಿ ತುಕಡಿ ಒಟ್ಟು 250 ಪೊಲೀಸ್ ಪೇದೆಗಳು ಬಂದೋಬಸ್ತ್ ಕರ್ತವ್ಯದಲ್ಲಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಜಿಲ್ಲಾದ್ಯಾಂತ ಶಾಂತಿ-ಸುವ್ಯಸ್ಥೆಯನ್ನು ಕಾಪಾಡಲು ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಡಾ.ಸಿ.ಬಿ.ವೇದಮೂರ್ತಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

  • ಸಹೋದ್ಯೋಗಿಗಳ ಜೊತೆ ಕಬಡ್ಡಿ ಆಡಿದ ಎಸ್‍ಪಿ ರವಿ.ಡಿ ಚೆನ್ನಣ್ಣನವರ್

    ಸಹೋದ್ಯೋಗಿಗಳ ಜೊತೆ ಕಬಡ್ಡಿ ಆಡಿದ ಎಸ್‍ಪಿ ರವಿ.ಡಿ ಚೆನ್ನಣ್ಣನವರ್

    ಬೆಂಗಳೂರು: ಕರ್ನಾಟಕದ ಖಡಕ್ ಪೊಲೀಸ್ ಅಧಿಕಾರಿ ಎಂದೇ ಖ್ಯಾತರಾಗಿರುವ ಎಸ್‍ಪಿ ರವಿ. ಡಿ ಚನ್ನಣ್ಣನವರ್ ಅವರು ತಮ್ಮ ಸಹೋದ್ಯೋಗಿ ಜೊತೆ ಕಬಡ್ಡಿ ಆಟ ಆಡಿ ತಮ್ಮ ಬಾಂಧವ್ಯವನ್ನು ಮೆರೆದಿದ್ದಾರೆ.

    ಬೆಂಗಳೂರು ಹೊರವಲಯ ಬ್ಯಾಡರಹಳ್ಳಿ ಪೊಲೀಸ್ ಮೈದಾನದಲ್ಲಿ, ವಾರ್ಷಿಕ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದೆ. ಈ ವೇಳೆ ಕಬಡ್ಡಿ ಆಟ ಆಡಿ ದೇಶಿಯ ಕ್ರೀಡೆಗೆ ಒತ್ತು ನೀಡಿದ್ದಾರೆ. ಸಹೋದ್ಯೋಗಿಗಳ ಜೊತೆ ಆಟಕ್ಕೂ ಸೈ, ಕಾನೂನು ಪಾಲನೆಗೂ ಸೈ ಎನ್ನುವಂತೇ ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ.ಡಿ ಚನ್ನಣ್ಣನವರ್ ಅಧಿಕಾರಿಗಳ ಜೊತೆ ಅಂಗಳದಲ್ಲಿ ಕಾದಾಟ ನಡೆಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಎಸ್‍ಪಿ ರವಿ ಚನ್ನಣ್ಣನವರ್ ಗ್ರಾಮ ವಾಸ್ತವ್ಯ

    ಎಸ್‍ಪಿ ರವಿ.ಡಿ ಚೆನ್ನಣ್ಣವರ್ ಅವರಿಗೆ ನೆಲಮಂಗಲ ಉಪವಿಭಾಗದ ಪೊಲೀಸ್ ಸಿಬ್ಬಂದಿಗಳು ಸಾಥ್ ನೀಡಿದ್ದಾರೆ. ಕಬಡ್ಡಿ ಆಟದ ಹಲವಾರು ತಂತ್ರಗಳನ್ನು ಬಳಸಿ ಆಟ ವಾಡುತ್ತಿರುವುದು ಕಂಡು ಬಂದಿದ್ದು, ಕ್ರೀಡಾಪಟುಗಳಿಗೆ ಇನ್ನಷ್ಟು ಹುರುಪು ತಂದಿದೆ.

  • ನಿಮ್ನೆಲ್ಲಾ ಆಂಧ್ರದಲ್ಲಿ ಮಾಡಿದಂತೆ ಎನ್‍ಕೌಂಟರ್ ಮಾಡ್ಬೇಕು- ಬೈಕ್ ಕಳ್ಳರಿಗೆ ಎಸ್‍ಪಿ ಅವಾಜ್

    ನಿಮ್ನೆಲ್ಲಾ ಆಂಧ್ರದಲ್ಲಿ ಮಾಡಿದಂತೆ ಎನ್‍ಕೌಂಟರ್ ಮಾಡ್ಬೇಕು- ಬೈಕ್ ಕಳ್ಳರಿಗೆ ಎಸ್‍ಪಿ ಅವಾಜ್

    ಚಾಮರಾಜನಗರ: ಹೈದರಾಬಾದ್ ಪಶುವೈದ್ಯೆ ಅತ್ಯಾಚಾರಿಗಳ ಎನ್‍ಕೌಂಟರ್ ವಿಚಾರ ಎಲ್ಲಾ ಕಡೆ ಪ್ರತಿಧ್ವನಿಸುತ್ತಿದ್ದು, ಇದೀಗ ಎಸ್‍ಪಿಯೊಬ್ಬರು ಬೈಕ್ ಕಳ್ಳರಿಗೆ ಎನ್ ಕೌಂಟರ್ ಮಾಡಬೇಕೆಂದು ಅವಾಜ್ ಹಾಕಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

    ಕೊಳ್ಳೇಗಾಲ ಪೊಲೀಸರು ಮೂವರು ಖದೀಮರನ್ನು ಬಂಧಿಸಿ ಒಂಬತ್ತು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಬೈಕ್ ಕಳ್ಳರ ವಿಚಾರಣೆ ವೇಳೆ ಚಾಮರಾಜನಗರ ಎಸ್‍ಪಿ ಆನಂದ್ ಕುಮಾರ್ ಗರಂ ಆಗಿದ್ದು, ಆಂಧ್ರದಲ್ಲಿ ಎನ್‍ಕೌಂಟರ್ ಮಾಡಿದಂತೆ ನಿಮ್ಮನ್ನೂ ಎನ್‍ಕೌಂಟರ್ ಮಾಡಬೇಕು ಎಂದು  ಅವಾಜ್ ಹಾಕಿದ್ದಾರೆ.

    ಅಪ್ಪ-ಅಮ್ಮನಿಗೂ ಕೆಟ್ಟ ಹೆಸರು ತರ್ತೀರಾ, ಸಾಲಸೋಲ ಮಾಡಿ ಬೈಕ್ ತಗೊಂಡಿರುವವರಿಗೂ ಹಿಂಸೆ ಕೊಡುತ್ತೀರಿ. ಸ್ವಲ್ಪನೂ ಫೀಲಿಂಗ್ಸೆ ಇಲ್ಲ, ಏನ್ ಶಾ….ವ್ಯಾಪಾರ ಮಾಡ್ತೀಯಾ, ಬೋ…ಮಗನೇ ಎಂದು ಬೈಕ್ ಕಳ್ಳರನ್ನು ಎಸ್‍ಪಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ; ನಗ್ತೀಯಾ ತಗೋ – ರೌಡಿಶೀಟರ್‌ಗೆ ಎಸ್‍ಪಿಯಿಂದ ಕಪಾಳಮೋಕ್ಷ

    ಎಸ್ ಪಿ ಆನಂದ್ ಕುಮಾರ್ ಅವರು ಈ ಹಿಂದೆ ರೌಡಿಶೀಟರ್ ಪರೇಡ್ ವೇಳೆ ರೌಡಿಶೀಟರ್ ಗೆ ಕಪಾಳಮೋಕ್ಷ ಮಾಡಿದ್ದರು.