ಚಾಮರಾಜನಗರ: ನಗರದ ಪೊಲೀಸ್ ಠಾಣೆಗೆ ನ್ಯಾಯಾಧೀಶರು ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಬಾಗಿಲು ಮುಚ್ಚಿದ್ದ ಇನ್ಸ್‌ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ.
ಚಾಮರಾಜನಗರ ಸಿಇಎನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಂಜಪ್ಪ ಅಮಾನತುಗೊಂಡಿದ್ದಾರೆ. ಚಾಮರಾಜನಗರ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ಗಣಪತಿ ಗುರುಸಿದ್ದ ಬಾದಾಮಿಯವರು ಜ. 3 ರಂದು ಸಿಇಎನ್ (ಸೈಬರ್, ಎಕಾನಾಮಿಕ್ ಅಂಡ್ ನಾರ್ಕೋಟಿಕ್) ಠಾಣೆಗೆ ದಿಢೀರ್ ಭೇಟಿ ನೀಡಿದ್ದರು. ಇದನ್ನೂ ಓದಿ: ವೊಡಾಫೋನ್ ಐಡಿಯಾದಲ್ಲಿ ಈಗ ಭಾರತ ಸರ್ಕಾರವೇ ಅತಿ ದೊಡ್ಡ ಪಾಲುದಾರ
ಮಂಡ್ಯ: ಜಿಲ್ಲೆಯಲ್ಲಿ ಎಸ್‍ಪಿಯಾಗಿದ್ದ ಅಶ್ವಿನಿ ಅವರನ್ನು ವರ್ಗಾವಣೆ ಮಾಡಿ ಮೈಸೂರಿನ ಕೆಪಿಎಯಲ್ಲಿ ಇದ್ದ ಸುಮನ್ ಡಿ.ಪೆನ್ನೇಕರ್ ಅವರನ್ನು ಮಂಡ್ಯ ಎಸ್‍ಪಿ ಆಗಿ ಸರ್ಕಾರ ನೇಮಕ ಮಾಡಿರುವುದಾಗಿ ಆದೇಶ ಹೊರಡಿಸಿದೆ. ಆದರೆ ಪೆನ್ನೇಕರ್ ಅವರನ್ನು ಮಂಡ್ಯ ಎಸ್‍ಪಿ ಆಗಿ ನೇಮಕ ಮಾಡಿರುವ ಆದೇಶವನ್ನು ವಾಪಸ್ ಪಡೆಯುವಂತೆ ಸರ್ಕಾರಕ್ಕೆ ರಾಜಕೀಯ ಪ್ರಭಾವಿಗಳು ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಂಡ್ಯ ಎಸ್‍ಪಿ ಆಗಿದ್ದ ಅಶ್ವಿನಿ ಅವರ ವಿರುದ್ಧ ಕೇಳಿ ಬಂದಿದ್ದ ಆರೋಪದ ಬೆನ್ನಲ್ಲೇ ರಾಜ್ಯ ಸರ್ಕಾರ ಅಶ್ವಿನಿ ಅವರನ್ನು ಮಂಡ್ಯದಿಂದ ವರ್ಗಾವಣೆ ಮಾಡಿ, ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ಇದ್ದ ಐಪಿಎಸ್ ಆಫೀಸರ್ ಸುಮನ್ ಡಿ.ಪೆನ್ನೇಕರ್ ಅವರನ್ನು ನೇಮಿಸುವುದಾಗಿ ರಾಜ್ಯ ಸರ್ಕಾರ ನಿನ್ನೆ ಆದೇಶ ಹೊರಡಿಸಿತ್ತು. ಇದೀಗ ಪೆನ್ನೇಕರ್ ಅವರು ಅಧಿಕಾರ ಸ್ವೀಕಾರ ಮಾಡದಂತೆ ಮೌಖಿಕವಾಗಿ ಗೃಹ ಸಚಿವರು ಆದೇಶ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಿವಾಸದಲ್ಲಿದ್ದ ಮರಗಳಿಗೆ ಕೊಡಲಿ – ಮಂಡ್ಯ ಎಸ್‍ಪಿಯಿಂದ ಸರ್ವಾಧಿಕಾರಿ ಧೋರಣೆ
ಸುಮನ್ ಡಿ.ಪೆನ್ನೇಕರ್ ಅವರು ಈ ಹಿಂದೆ ಕಾರ್ಯನಿರ್ವಹಿಸಿದ್ದ ಜಾಗದಲ್ಲಿ ಉತ್ತಮ ಅಧಿಕಾರಿ ಹಾಗೂ ಖಡಕ್ ಆಫೀಸರ್ ಎಂಬ ಹೆಸರನ್ನು ತೆಗೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಮಂಡ್ಯಗೆ ಅವರು ಬಂದರೆ ಮಂಡ್ಯ ಪೊಲೀಸ್ ಇಲಾಖೆಯಲ್ಲಿ ಕಟ್ಟುನಿಟ್ಟಿನ ಆದೇಶಗಳನ್ನು ತರುತ್ತಾರೆ ಎಂದು ಜಿಲ್ಲೆಯ ಕೆಲವು ಪೊಲೀಸ್ ಅಧಿಕಾರಿಗಳು ರಾಜಕೀಯ ಪ್ರಭಾವಿಗಳ ಬಳಿ ಅವರು ಬೇಡಾ ಬೇರೆ ಅವರನ್ನು ನೇಮಕ ಮಾಡಿಸಿ ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಇದಲ್ಲದೇ ಮಂಡ್ಯದಲ್ಲಿ ಡಿಸಿ, ಎಡಿಸಿ, ಜಿಲ್ಲಾ ಪಂಚಾಯತ್ ಸಿಓ ಸೇರಿದಂತೆ ಎಲ್ಲಾ ಪ್ರಮುಖ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳು ಇದ್ದಾರೆ ಎಂದು ಪೆನ್ನೇಕರ್ ಅವರು ಬರುವುದನ್ನು ತಡೆಯಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಭಾರತದ ಐತಿಹಾಸಿಕ ಸಾಧನೆ- ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ವಿತರಿಸಲಾಗಿದೆ?
ಆನೇಕಲ್: ಕಳೆದ ಶನಿವಾರ ಆನೇಕಲ್ ತಾಲೂಕಿನ ತಮ್ಮನಾಯಕನಹಳ್ಳಿಯ ಹಸಿರು ವ್ಯಾಲಿ ರೆಸಾರ್ಟ್ ನಲ್ಲಿ ಅಕ್ರಮವಾಗಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರು ಗ್ರಾಮಾಂತರ ಎಸ್‍ಪಿ ವಂಶಿಕೃಷ್ಣ ಹಸಿರು ವ್ಯಾಲಿ ರೆಸಾರ್ಟ್ ಗೆ ಭೇಟಿ ಕೊಟ್ಟಿದ್ದಾರೆ.
ಪಾರ್ಟಿ ನಡೆದಿದ್ದ ಜಾಗದಲ್ಲಿ ರಾತ್ರೋರಾತ್ರಿ ಗೋಶಾಲೆ ನಿರ್ಮಾಣವಾಗಿದ್ದು, ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿದ್ಯಾ? ಎಂಬ ಅನುಮಾನ ವ್ಯಕ್ತವಾಗಿದೆ. ನಿನ್ನೆ ಪಾರ್ಟಿ ನಡೆದ ಸುತ್ತಮುತ್ತಲ ಜಾಗದಲ್ಲಿದ್ದ ಟೆಂಟ್ ಹೌಸ್, ಊಟದ ಟೇಬಲ್‍ಗಳು ಇಂದು ಮಾಯವಾಗಿದ್ದವು. ಇದನ್ನೂ ಓದಿ: ವಿಸರ್ಜನೆ ಸಂಬಂಧ ಜಿಲ್ಲಾಡಳಿತ, ಗಣಪತಿ ಮಂಡಳಿ ನಡುವೆ ಜಟಾಪಟಿ
ಬಿದಿರಿನ ಒಳಭಾಗದಲ್ಲಿ ಪಾರ್ಟಿ ನಡೆದಿದ್ದ ಜಾಗ ಸಂಪೂರ್ಣ ಸ್ವಚ್ಛವಾಗಿತ್ತು. ಹೀಗಾಗಿ ಪಾರ್ಟಿ ವೇಳೆ ಅನೈತಿಕ ಚಟುವಟಿಕೆಗಳು ನಡೆದಿದ್ಯಾ? ಎಂಬ ಅನುಮಾನ ಪೊಲೀಸರಿಗೆ ಕಾಡತೊಡಗಿದೆ. ಅಲ್ಲದೇ ಪಾರ್ಟಿ ವೇಳೆ ವಶಕ್ಕೆ ಪಡೆದಿರುವ 37 ಜನರನ್ನು ಮಾಜಿಸ್ಟ್ರೆಟ್ ಮುಂದೆ ಹಾಜರುಪಡಿಸಿದ್ದು, ಅವರ ರಕ್ತ ಹಾಗೂ ಮೂತ್ರದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಅಲ್ಲದೇ ಅದರ ವರದಿಗಾಗಿ ಕಾಯಲಾಗುತ್ತಿದೆ ಎಂದು ವಂಶಿಕೃಷ್ಣ ತಿಳಿಸಿದ್ದಾರೆ.
ಪಾರ್ಟಿ ಆಯೋಜನೆ ಮಾಡಿದ್ದು ಹೇಗೆ? ಯುವಕ-ಯುವತಿಯರನ್ನು ಹೇಗೆ ಸಂಪರ್ಕ ಮಾಡಿದ್ದಿರಾ? ಪಾರ್ಟಿಗೆ ಒಬ್ಬರಿಗೆ ಎಷ್ಟು ಶುಲ್ಕ ನಿಗದಿ ಮಾಡಿದ್ರಿ? ಇದೇ ಮೊದಲ ಪಾರ್ಟಿಯಾ? ಈ ಹಿಂದೆ ಬೇರೆ ಎಲ್ಲಾದರೂ ಇದೇ ರೀತಿಯ ಪಾರ್ಟಿ ಆಯೋಜನೆ ಮಾಡಿದ್ದಿರಾ? ಎಂಬ ಪ್ರಶ್ನೆಗಳನ್ನು ಆಯೋಜಕರನ್ನು ಕೇಳಲಾಗುತ್ತಿದೆ. ಈ ನಡುವೆ ಹಸಿರು ವ್ಯಾಲಿ ರೆಸಾರ್ಟ್ ನಡೆಸಲು ಅನುಮತಿ ಇದೆಯೇ? ಇಲ್ಲ ಅಕ್ರಮವಾಗಿ ಹಸಿರು ವ್ಯಾಲಿ ರೆಸಾರ್ಟ್ ನಡೆಸಲಾಗುತ್ತಿದೆಯೇ ಎಂಬ ಬಗ್ಗೆ ಮಾಹಿತಿಗಾಗಿ ಆನೇಕಲ್ ತಹಶೀಲ್ದಾರ್ ಅವರಿಗೆ ಪತ್ರವನ್ನು ಬರೆದಿರುವುದಾಗಿ ಎಸ್‍ಪಿ ತಿಳಿಸಿದ್ದಾರೆ.
ಪಾರ್ಟಿ ನಡೆದು ಆರೋಪಿಗಳನ್ನು ಬಂಧಿಸಿದ ಎರಡು ದಿನಗಳ ಬಳಿಕ ಬೆಂಗಳೂರು ಗ್ರಾಮಾಂತರ ಎಸ್‍ಪಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಸಿರು ವ್ಯಾಲಿ ರೆಸಾರ್ಟ್ ಸಿಬ್ಬಂದಿಯ ಕಳ್ಳಾಟವೂ ಕೂಡ ಬಯಲಾಗಿದ್ದು, ಹೆಸರಾಂತ ಪ್ರವಾಸಿತಾಣ ಮುತ್ಯಾಲಮಡುವಿಗೆ ಹೋಗುವ ಗೂಗಲ್ ಮ್ಯಾಪ್ ಅನ್ನು ಹಸಿರು ವ್ಯಾಲಿಗೆ ಬದಲಾವಣೆ ಮಾಡುವ ಮೂಲಕ ತಮ್ಮ ಕಳ್ಳಾಟವನ್ನು ತೋರಿದ್ದಾರೆ. ಇದನ್ನೂ ಓದಿ: ಕೊನೆಗೂ ತನ್ನ ಆಸೆ ನೆರವೇರಿಸಿಕೊಂಡ ವಿಜಯ್ ದೇವರಕೊಂಡ
– ಕುಸಿದು ಬಿದ್ದ ಸಿಬ್ಬಂದಿ, ಮಾನವೀಯತೆ ಮೆರೆದ ಚಿಕ್ಕಮಗಳೂರು ಎಸ್ಪಿ
ಚಿಕ್ಕಮಗಳೂರು: 85 ಗಂಟೆಯಲ್ಲಿ ಮೈಸೂರಿನ ಅತ್ಯಾಚಾರ ಪ್ರಕರಣ ಭೇದಿಸಿದ ಪೊಲೀಸರಿಗೆ ನನ್ನ ಕೃತಜ್ಞತೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರಶಂಸಿದ್ದಾರೆ.
ಜಿಲ್ಲೆಯ ಕಡೂರಿನಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ 5ನೇ ತಂಡ ತರಬೇತಿ ಪಡೆದು ನಿರ್ಗಮಿತ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾಧ್ಯಮಗಳ ಜೊತೆ ಮೈಸೂರಿನ ಗ್ಯಾಂಗ್ ರೇಪ್ ವಿಚಾರವಾಗಿ ಮಾತನಾಡಿದ್ದು, ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಯಾವ ಸಾಕ್ಷಿಗಳು ಇಲ್ಲ. ತೊಂದರೆಗೊಳಗಾದವರು ಹೇಳಿಕೆ ನೀಡಿಲ್ಲ. ಆದರೂ ನಮ್ಮ ಪೊಲೀಸರು ಪ್ರಕರಣವನ್ನು ಹೇಗೆ ಭೇದಿಸುತ್ತಾರೆ ಎಂದು ಅನ್ನಿಸಿತ್ತು. ಮಂತ್ರಿಯಾಗಿ ನಾನೇ ಕುತೂಹಲದಿಂದ ವೀಕ್ಷಿಸುತ್ತಿದ್ದೆ. ನಮ್ಮ ಪೊಲೀಸರು 85 ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಆಗ ನನ್ನ ಹೃದಯ ತುಂಬಿ ಬಂತು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ನಮ್ಮ ಪೊಲೀಸರ ಇಮೇಜ್ ಜಾಸ್ತಿಯಾಯ್ತು. ನಮ್ಮ ಪೊಲೀಸ್ ವ್ಯವಸ್ಥೆ ಅತ್ಯಂತ ಬಿಗಿಯಾಗಿದೆ. ವೈಜ್ಞಾನಿಕವಾಗಿ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚುವ ಎಲ್ಲಾ ಕಲೆ ನಮ್ಮ ಪೊಲಿಸರಿಗೆ ಕರಗತವಾಗಿದೆ. ನಮ್ಮ ಸೇನಾ ಪಡೆ ಜಗತ್ತಿನ ಅತ್ಯಂತ ಮೂರನೇ ದೊಡ್ಡ ಪಡೆ. ಜಗತ್ತಿನಲ್ಲಿ ನಮ್ಮ ಪೊಲೀಸ್ ಪಡೆಗೆ ಒಳ್ಳೆಯ ಹೆಸರಿದೆ. ಅದರಲ್ಲೂ ನಮ್ಮ ಕರ್ನಾಟಕದ ಪೊಲೀಸರಿಗೆ ಇದೆ ಎಂದು ತರಬೇತಿ ಪಡೆದ ನೂತನ ನಿರ್ಗಮಿತ ಪೊಲೀಸರಿಗೆ ಹುರಿದುಂಬಿಸಿದ್ದಾರೆ.ಇದನ್ನೂ ಓದಿ:KSRTC ಬಸ್ ತಡೆದು ವಿದ್ಯಾರ್ಥಿಗಳು, ಜನರಿಂದ ಪ್ರತಿಭಟನೆ
ಮೈಸೂರು ಪ್ರಕರಣದ ಎಲ್ಲಾ ಅಪರಾಧಿಗಳನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಅವರಿಗೆ ಶಿಕ್ಷೆ ಆಗುವಂತೆ ನಮ್ಮ ಪೊಲೀಸರು ವಿಶೇಷ ಶ್ರಮ ವಹಿಸಿದ್ದಾರೆ. ಸರ್ಕಾರ ಕೂಡ ಅದರ ಬಗ್ಗೆ ವಿಶೇಷವಾದ ಆದ್ಯತೆ ನೀಡಿದೆ. ಮೈಸೂರಿನ ಎರಡೂ ಪ್ರಕರಣಗಳನ್ನು ಕಡಿಮೆ ಸಮಯದಲ್ಲಿ ಭೇದಿಸಿದ ಎಲ್ಲಾ ಪೊಲೀಸ್ ತಂಡಕ್ಕೆ ನನ್ನ ಕೃತಜ್ಞತೆ ಎಂದು ಪ್ರಶಂಸಿದ್ದಾರೆ.
ಯಾರು ಅಪರಾಧ ಮಾಡುತ್ತಾರೋ ಅವರಿಗೆ ದೊಡ್ಡ ಸಂದೇಶ ಹೋಗಿದೆ. ಏನಾದರೂ ಮಾಡಿ ಹೇಗಾದರೂ ಬಚಾವ್ ಆಗಬಹುದು ಅನ್ನೋದು ಆಗಲ್ಲ. ಪೊಲೀಸರು ಅದರ ಹಿಂದೆ ಬೀಳುತ್ತಾರೆ. ಅದನ್ನು ಯಶಸ್ವಿಯಾಗಿ ಭೇದಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ..ಇದನ್ನೂ ಓದಿ:ಚುನಾವಣೆ ಪ್ರಚಾರದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಕಟೀಲ್
ಸಂತ್ರಸ್ತೆ ಈಗ ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇಲ್ಲ. ಇಂತಹಾ ಸಮಯದಲ್ಲಿ ಹೆಚ್ಚು ಒತ್ತಡ ಹಾಕುವುದು ಸರಿಯಲ್ಲ. ನಮ್ಮ ಮಹಿಳಾ ಪೊಲೀಸ್ ಅಧಿಕಾರಿಗಳು ವಿಶೇಷ ಪ್ರಯತ್ನ ಮಾಡಿದರು. ಸ್ವಲ್ಪ ಸಮಯದ ನಂತರ ಹೇಳಬಹುದು. ಮಣಿಪಾಲ್ ಘಟನೆಯಲ್ಲಿ ಹೇಳಿಕೆ ಕೊಡುವುದಿಲ್ಲ ಎಂದವರು ಮೂರು ತಿಂಗಳ ಬಳಿಕ ಹೇಳಿಕೆ ನೀಡಿದ್ದರು. ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜ್ಞಾನೇಂದ್ರ ಅವರು ಭಾಷಣ ಮಾಡುವ ವೇಳೆ ವೇದಿಕೆ ಮುಂಭಾಗ ಎಡ ಹಾಗೂ ಬಲಭಾಗದಲ್ಲಿ ನಿಂತಿದ್ದ ಪೊಲೀಸರಲ್ಲಿ ಮೈಸೂರಿನ ಅಶ್ವದಳದ ಮೈಲುದ್ದೀನ್ ಎಂಬ ಸಿಬ್ಬಂದಿ ಬಿಸಿಲಿಗೆ ತಲೆಸುತ್ತು ಬಂದು ಬಿದ್ದರು. ಕೂಡಲೇ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ವೇದಿಕೆ ಮೇಲಿಂದ ಎದ್ದು ಬಂದು ಸಿಬ್ಬಂದಿಯನ್ನು ಎತ್ತಿ ನೀರು ಕುಡಿಸಿ ಆಂಬುಲೆನ್ಸ್ ಗೆ ಕಾಲ್ ಮಾಡಿದ್ದಾರೆ. ಸ್ವತಃ ಎಸ್ಪಿಯೇ ಆ ಸಿಬ್ಬಂದಿಯನ್ನು ಎತ್ತಿಕೊಂಡು ಹೋಗಿ ಆಂಬುಲೆನ್ಸ್ ನಲ್ಲಿ ಕೂರಿಸಿದರು. ಅಲ್ಲಿವರೆಗೆ ಜ್ಞಾನೇಂದ್ರ ಅವರು ಕೂಡ ಮಾತು ನಿಲ್ಲಿಸಿದ್ದರು..ಇದನ್ನೂ ಓದಿ:ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ನೀಡಿದ ಎನ್.ಆರ್.ರಮೇಶ್
ಬೆಂಗಳೂರು: ಶಿವಮೊಗ್ಗದ ಹುಣಸೋಡು ಮತ್ತು ಚಿಕ್ಕಬಳ್ಳಾಪುರದ ಗುಡಿಬಂಡೆ ಸ್ಫೋಟ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಸ್ಫೋಟ ಸಂಭವಿಸಿದೆ. ಕನಕಪುರ ತಾಲೂಕಿನ ಸಂಗಮ ರಸ್ತೆಯ ಮರಳೇಗವಿ ಮಠದ ಕಲ್ಲು ಕ್ವಾರಿ ಬಳಿ ಕಾರ್ ಸ್ಫೋಟಗೊಂಡು ವ್ಯಕ್ತಿಯೊಬ್ಬ ಛಿದ್ರ ಛಿದ್ರವಾಗಿ ಸಾವನ್ನಪ್ಪಿದಾನೆ. ಆದರೆ ಕ್ವಾರಿಯಲ್ಲಿ ಜಿಲೆಟಿನ್ ಬಳಸುತ್ತಿರಲಿಲ್ಲ ಎಂದು ಅಲ್ಲಿನ ಎಸ್‍ಪಿ ಗಿರೀಶ್ ಹೇಳಿಕೆ ನೀಡಿದ್ದಾರೆ.
ಕನಕಪುರದ ಮಹೇಶ್ ಎಂಬವರು ಸಾವನ್ನಪ್ಪಿರುವ ದುರ್ದೈವಿ. ಮರಳೇಗವಿ ಮಠದ ಕ್ವಾರಿಯಲ್ಲಿ ಮಹೇಶ್ ಅವರು ಕ್ವಾರಿಗೆ ಕಬ್ಬಿಣದ, ಸಲಕರಣೆಗಳನ್ನು ಸಾಗಿಸುವ ಕೆಲಸ ಮಾಡಿಕೊಂಡಿದ್ದರು. ಯಾವ ಕಾರಣಕ್ಕೆ ಕಾರು ಸ್ಫೋಟವಾಗಿದೆ ಅನ್ನೋದು ಗೊತ್ತಾಗಿಲ್ಲ. ಆದರೆ ಮಠದ ಕ್ವಾರಿಯಲ್ಲಿ ಜಿಲೆಟಿನ್ ಬಳಸುತ್ತಿರಲಿಲ್ಲ ಎಂದು ಎಸ್‍ಪಿ ಗಿರೀಶ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾಬೂಲ್‍ನಿಂದ ಭಾರತೀಯರ ಕರೆತರಲು ಕಸರತ್ತು
ಕ್ವಾರಿಯಲ್ಲಿ ಕಲ್ಲು ಕಟ್ ಮಾಡುವ ಕೆಲಸ ಮಾಡಲಾಗುತ್ತಿದೆ. ಕಲ್ಲು ಕಟ್ ಮಾಡಲು ಜಿಲೆಟಿನ್ ಬೇಕಾಗಿಲ್ಲ. ಕ್ವಾರಿಯಿಂದ ಎರಡು ಕಿಮೀ ದೂರದಲ್ಲಿ ಕಾರು ಸ್ಫೋಟವಾಗಿದೆ. ಕ್ವಾರಿಯಿಂದ ವಾಪಸ್ ಎರಡು ಕಿಮೀ ದೂರದವರೆಗೆ ಮಹೇಶ್ ಕಾರನ್ನು ಓಡಿಸಿಕೊಂಡು ಹೋಗಿದ್ದಾರೆ, ಆ ಬಳಿಕ ಕಾರು ಸ್ಫೋಟವಾಗಿದ್ದು ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಸ್ಫೋಟದ ರಭಸಕ್ಕೆ ಮಹೇಶ್ ಅವರ ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿದ್ದು, ಘಟನಾ ಸ್ಥಳಕ್ಕೆ ಬಾಂಬ್ ಸ್ಕ್ಯಾಡ್ ಕರೆಸಿ ಪರಿಶೀಲನೆ ಮಾಡುವ ಕೆಲಸ ಮಾಡಲಾಗುತ್ತಿದೆ. ಅವರ ತನಿಖೆಯ ಬಳಿಕ ಸ್ಫೋಟದ ಕಾರಣ ತಿಳಿಯಲಿದೆ.ಈ ನಡುವೆ ಕಾರ್ ನಲ್ಲಿ ಜಿಲೆಟಿನ್ ಇತ್ತಾ, ಇಲ್ವಾ ಅನ್ನೋದು ಸದ್ಯಕ್ಕೆ ಗೊತ್ತಾಗಿಲ್ಲ. ಈ ಬಗ್ಗೆ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ನಾಳೆ ಬಹುದೊಡ್ಡ ಘೋಷಣೆ ಮಾಡಲಿದ್ದೇನೆ: ಅರವಿಂದ್ ಕೇಜ್ರಿವಾಲ್
ಬೆಂಗಳೂರು: ತಮ್ಮ ವಿರುದ್ಧದ ಆರೋಪಕ್ಕೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸ್ಪಷ್ಟನೆ ನೀಡಿದ್ದಾರೆ.
ಅಕ್ರಮ ಮರಳುಗಾರಿಕೆ ಮೇಲೆ ಪೊಲೀಸ್ ಇಲಾಖೆ ದಾಳಿ ಮಾಡಿದ್ದಕ್ಕೆ ‘ರೇಣುಕಾಚಾರ್ಯ ಅವರು ಪೊಲೀಸರಿಗೆ ಅವಾಜ್’ ಎನ್ನುವ ಸುದ್ದಿ ಕೆಲವು ಸುದ್ದಿ ಮಾಧ್ಯಮಗಳಲ್ಲಿ ಸೋಮವಾರ ಪ್ರಸಾರವಾಗಿರುವುದು ನನ್ನ ಗಮನಕ್ಕೆ ಬಂದಿದ್ದು ಇದು ಸತ್ಯಕ್ಕೆ ದೂರವಾದ ವಿಷಯ.
ನಿನ್ನೆ ನನ್ನ ಮತ ಕ್ಷೇತ್ರದ ಬೇಲಿಮಲ್ಲೂರು ಸೇರಿದಂತೆ ಕೆಲವು ಗ್ರಾಮಗಳ ಬಡತನ ರೇಖೆಗಿಂತ ಕೆಳಗಿರುವ ರೈತರುಗಳು ಮನೆ ಕಟ್ಟಿಕೊಳ್ಳಲು #ಎತ್ತಿನ ಗಾಡಿ ಮತ್ತು #ಬೈಕ್ ಗಳಲ್ಲಿ ಲೀಗಲ್ ಕ್ವಾರೆಗಳಿಲ್ಲದ ನದಿ ದಡದಿಂದ ಮರಳನ್ನು ಹೊಡೆದುಕೊಳ್ಳುತ್ತಿದ್ದು ಇಷ್ಟು ದಿನ ಸುಮ್ಮನಿದ್ದ ಪೊಲೀಸ್ ಇಲಾಖೆಯವರು ಈಗ ತೊಂದರೆ ನೀಡುತ್ತಿದ್ದರೆ ಎಂದು ನನ್ನ ಬಳಿ ನೋವನ್ನು ಹೇಳಿಕೊಂಡರು.
ಎಸ್‍ಪಿ ಸೂಚನೆ ಮೇರೆಗೆ ಮರಳನ್ನು ಸೀಜ್ ಮಾಡಲು ಹೋಗಿದ್ದ ಹೊನ್ನಾಳಿ ಸಿಪಿಐ ದೇವರಾಜ್ ಅವರಿಗೆ ತಕ್ಷಣ ದೂರವಾಣಿ ಕರೆ ಮಾಡಿ ಯಾವುದೇ ಕಾರಣಕ್ಕೂ ಬಡವರು ಮನೆ ಕಟ್ಟಿಕೊಳ್ಳಲು ಎತ್ತಿನ ಗಾಡಿ ಹಾಗು ಬೈಕ್ ಗಳಲ್ಲಿ ಹೊಡೆದು ಕೊಂಡಿರುವ ಮರಳನ್ನು ಸೀಜ್ ಮಾಡದಿರಲು ಸೂಚಿಸಿದೆನು. ಹಿಂದಿನ ಸರ್ಕಾರದ ಅವಧಿಯಲ್ಲಿ ಒಂದು ಟ್ರ್ಯಾಕ್ಟರ್ ಮರಳಿಗೆ ರೂ.10,000 ದರ ಇತ್ತು, ಈಗ ನಮ್ಮ ಸರ್ಕಾರ ಬಂದ ಮೇಲೆ ಸಾರ್ವಜನಿಕರಿಗೆ ಮೂರರಿಂದ ನಾಲ್ಕು ಸಾವಿರ ರೂಪಾಯಿಗಳಿಗೆ ಮರಳು ಸಿಗುತ್ತಿದೆ. ಇದನ್ನೂ ಓದಿ: ಮರಳು ದಂಧೆಗೆ ಅಂಕುಶ ಹಾಕಲು ಹೋದ ಎಸ್‍ಪಿಗೆ ರೇಣುಕಾಚಾರ್ಯ ಅವಾಜ್
ಈ ಹಿಂದೆ ನನ್ನ ಮತ ಕ್ಷೇತ್ರದ ಬಡವರಿಗೆ ಕಡಿಮೆ ದರದಲ್ಲಿ ಮರಳನ್ನು ಕೊಡಿಸುವ ಸಲುವಾಗಿ ನಾನು ಅನೇಕ ಹೋರಾಟಗಳನ್ನು ಮಾಡಿದ್ದು ಈಗ ನಮ್ಮ ಸರ್ಕಾರದ ಅವಧಿಯಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಮರಳನ್ನು ಕೊಡಿಸುವುದಕ್ಕೆ ನಾನು ಈಗಲೂ ಬದ್ದವಾಗಿದ್ದೇನೆ. ದೇವಸ್ಥಾನ ಮಂದಿರ ಮಸೀದಿಗಳನ್ನು ಕಟ್ಟಿಕೊಳ್ಳಲು ನದಿ ದಡದಲ್ಲಿರುವ ಗ್ರಾಮಗಳಿಗೆ ಉಚಿತವಾಗಿ ಹಾಗು ನದಿ ದಡದಲ್ಲಿಲ್ಲದ ಗ್ರಾಮಗಳಿಗೆ ಅತಿ ಕಡಿಮೆ ದರದಲ್ಲಿ ಮರಳನ್ನು ಕೊಡಿಸುತ್ತಿದ್ದೇನೆ.
ಪೊಲೀಸ್ ಇಲಾಖೆ ಅಕ್ರಮ ಮರಳುಗಾರಿಕೆ ಮೇಲೆ ದಾಳಿ ಮಾಡಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ನನ್ನ ಅಭ್ಯಂತರವಿಲ್ಲ ಹಾಗು ಅಕ್ರಮ ಮರಳುಗರಿಕೆಯನ್ನು ನಾನು ಪ್ರೋತ್ಸಾಹಿಸುವುದೂ ಇಲ್ಲ. ಆದ್ರೆ ಬಡ ಜನತೆಗೆ ತೊಂದರೆ ನೀಡಿದರೆ ನಾನು ಯಾವುದೇ ಕಾರಣಕ್ಕೂ ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಶಾಸಕರು ಪ್ರಕಟಣೆ ಹೊರಡಿಸಿದ್ದಾರೆ.
ಬೆಂಗಳೂರು: ರವಿ.ಡಿ.ಚನ್ನಣ್ಣನವರ್, ಮೈಸೂರು ಎಸ್‍ಪಿ ಸೇರಿ 12 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‍ಪಿಯಾಗಿದ್ದ ರವಿ.ಡಿ.ಚನ್ನಣ್ಣನವರ್ ಅವರನ್ನು ಸಿಐಡಿ ಎಸ್‍ಪಿಯಾಗಿ ವರ್ಗಾವಣೆಗೊಳಿಸಲಾಗಿದೆ. ಉಡುಪಿಯಲ್ಲಿ ಕರಾವಳಿ ಭದ್ರತಾ ಪೊಲೀಸ್ ಪಡೆಯ ಎಸ್‍ಪಿಯಾಗಿದ್ದ ಆರ್.ಚೇತನ್ ಅವರನ್ನು ಮೈಸೂರು ಎಸ್‍ಪಿಯಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಲಾಗಿದೆ.
ಕೋಲಾರ ಎಸ್‍ಪಿಯಾಗಿದ್ದ ಕಾರ್ತಿಕ್ ರೆಡ್ಡಿಯವರನ್ನು ಬೆಂಗಳೂರಿನ ವೈರ್‍ಲೆಸ್ ವಿಭಾಗಕ್ಕೆ, ಸಿಐಡಿ ಎಸ್‍ಪಿಯಾಗಿದ್ದ ರಾಹುಲ್ ಕುಮಾರ್ ಶಹಪೂರ್‍ವಾಡ್ ಅವರನ್ನು ತುಮಕೂರು ಎಸ್‍ಪಿಯಾಗಿ ವರ್ಗಾಯಿಸಲಾಗಿದೆ.
ದಾವಣಗೆರೆ ಎಸ್‍ಪಿಯಾಗಿದ್ದ ಹನುಮಂತರಾಯ ಅವರನ್ನು ಹಾವೇರಿ ಎಸ್‍ಪಿಯಾಗಿ, ಮೈಸೂರಿನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿದ್ದ ಪ್ರಕಾಶ್ ಗೌಡ ಅವರನ್ನು ಆಂತರಿಕ ಭದ್ರತಾ ಪಡೆ ಎಸ್‍ಪಿಯಾಗಿ ಹಾಗೂ ಹಾವೇರಿ ಎಸ್‍ಪಿಯಾಗಿದ್ದ ಕೆ.ಜಿ.ದೇವರಾಜು ಅವರನ್ನು ಸಿಐಡಿ ಎಸ್‍ಪಿಯಾಗಿ ಬೆಂಗಳೂರಿಗೆ ವರ್ಗಾಯಿಸಲಾಗಿದೆ.
ಮೈಸೂರು ಎಸ್‍ಪಿಯಾಗಿದ್ದ ಸಿ.ಬಿ.ರಿಷ್ಯಂತ್ ಅವರನ್ನು ದಾವಣಗೆರೆ ಎಸ್‍ಪಿಯಾಗಿ, ಕಲಬುರಗಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿದ್ದ ದೆಕ್ಕಾ ಕಿಶೋರ್ ಬಾಬು ಅವರನ್ನು ಕೋಲಾರ ಎಸ್‍ಪಿಯಾಗಿ, ತುಮಕೂರು ಎಸ್‍ಪಿಯಾಗಿದ್ದ ಕೋನ ವಂಶಿ ಕೃಷ್ಣ ಅವರನ್ನು ಬೆಂಗಳೂರು ಗ್ರಾಮಾಂತರ ಎಸ್‍ಪಿಯಾಗಿ, ಬೆಂಗಳೂರಿನ ಆಂತರಿಕ ಭದ್ರತಾ ಪಡೆಯ ಎಸ್‍ಪಿಯಾಗಿದ್ದ ಪ್ರದೀಪ್ ಗುಂಟಿ ಅವರನ್ನು ಮೈಸೂರಿನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ, ಬೆಂಗಳೂರಿನ ವೈರ್‍ಲೆಸ್ ವಿಭಾಗದ ಎಸ್‍ಪಿಯಾಗಿದ್ದ ಅದ್ದೂರು ಶ್ರೀನಿವಾಸುಲು ಅವರನ್ನು ಕಲಬುರಗಿಯ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.
– ತಂದೆಯಿಂದಾದರೂ ಮಗ ಪ್ರೇರಣೆ ಪಡೆಯಲಿ ಎಂದು ಬಿಜೆಪಿ ತಿರುಗೇಟು
ಲಕ್ನೋ: ಬಿಜೆಪಿ ವ್ಯಾಕ್ಸಿನ್ ಮೇಲೆ ನಂಬಿಕೆ ಇಲ್ಲ ಎಂದು ಹೇಳುವ ಮೂಲಕ ಚರ್ಚೆಗೆ ಗುರಿಯಾಗಿದ್ದ ಸಮಾಜವಾದಿ ಪಕ್ಷ(ಎಸ್‍ಪಿ)ದ ನಾಯಕ, ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ತಂದೆ ಹಾಗೂ ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ಇಂದು ಲಸಿಕೆ ಪಡೆದಿದ್ದಾರೆ. ಈ ವಿಚಾರ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ತಂದೆಯಿಂದಾದರೂ ಮಗ ಪ್ರೇರಣೆ ಪಡೆಯಲಿ ಎಂದು ಬಿಜೆಪಿ ತಿರುಗೇಟು ನೀಡಿದೆ.
ಸೋಮವಾರ ಮುಲಾಯಂ ಸಿಂಗ್ ಯಾದವ್ ಲಸಿಕೆ ಪಡೆದಿರುವ ಫೋಟೋವನ್ನು ಪಕ್ಷದ ಅಧೀಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಆದರೆ ಅವರು ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೋ ಅಥವಾ ಎರಡನೇ ಡೋಸ್ ಪಡೆದಿದ್ದಾರೋ ಎಂಬುದರ ಕುರಿತು ಮಾಹಿತಿ ಹಂಚಿಕೊಂಡಿಲ್ಲ. 81 ವರ್ಷದ ಯಾದವ್ ಮೇದಂತ ಆಸ್ಪತ್ರೆಯಲ್ಲಿ ಲಸಿಕೆ ಪಡೆದಿದ್ದಾರೆ. ಇದನ್ನೂ ಓದಿ: ಮೊದಲು ಮೋದಿ ಲಸಿಕೆ ತೆಗೆದುಕೊಳ್ಳಲಿ, ನಂತ್ರ ನಾವು ಪಡೆದುಕೊಳ್ತೀವಿ: ತೇಜ್ ಪ್ರತಾಪ್ ಯಾದವ್
आज समाजवादी पार्टी के संस्थापक, पूर्व रक्षा मंत्री, पूर्व मुख्यमंत्री, आदरणीय नेताजी जी ने लगवाई कोरोना वैक्सीन। pic.twitter.com/DfZzcXMGAk
ಮುಲಾಯಂ ಸಿಂಗ್ ಯಾದವ್ ಲಸಿಕೆ ಪಡೆಯುತ್ತಿದ್ದಂತೆ ಉತ್ತರ ಪ್ರದೇಶದ ಬಿಜೆಪಿ ಅಖಿಲೇಶ್ ಯಾದವ್ ಅವರಿಗೆ ಟಾಂಗ್ ನೀಡಿದ್ದು, ಯಾದವ್ ಅವರು ಲಸಿಕೆ ಪಡೆಯುವ ಮೂಲಕ ಉತ್ತಮ ಸಂದೇಶ ರವಾನಿಸಿದ್ದಾರೆ. ಎಸ್‍ಪಿ ಅಧ್ಯಕ್ಷ ಹಾಗೂ ಕಾರ್ಯಕರ್ತರು ಇವರನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದೆ. ಇದನ್ನೂ ಓದಿ: ಬಿಜೆಪಿ ಲಸಿಕೆ ತೆಗೆದುಕೊಳ್ಳಲ್ಲ ಅಂದಿದ್ದ ಅಖಿಲೇಶ್ ಯಾದವ್‍ಗೆ ಕೊರೊನಾ ಪಾಸಿಟಿವ್
ಉತ್ತಮ ಸಂದೇಶ, ಎಸ್‍ಪಿ ಅಧ್ಯಕ್ಷ ಹಾಗೂ ಕಾರ್ಯಕರ್ತರು ತಮ್ಮ ಪಕ್ಷ ಸಂಸ್ಥಾಪಕರನ್ನು ಪ್ರೇರಣೆಯಾಗಿ ಪಡೆಯಲಿದ್ದಾರೆ ಎಂಬ ಭರವಸೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ಹಿಂದೆ ಸಮಾಜವಾದಿ ಪಕ್ಷದ ನಾಯಕ, ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಬಿಜೆಪಿ ಲಸಿಕೆಯಲ್ಲಿ ನನಗೆ ನಂಬಿಕಲೆ ಇಲ್ಲ ಎಂದು ಹೇಳುವ ಮೂಲಕ ಭಾರೀ ಚರ್ಚೆಗೆ ಗ್ರಾಸವಾಗಿದ್ದರು. ಸದ್ಯಕ್ಕೆ ನಾನು ಲಸಿಕೆ ಹಾಕಲು ಹೋಗುತ್ತಿಲ್ಲ. ಬಿಜೆಪಿಯ ಲಸಿಕೆಯನ್ನು ನಾನು ಹೇಗೆ ನಂಬುವುದು ಎಂದು ಪ್ರಶ್ನಸಿದ್ದರು. ನಮ್ಮ ಸರ್ಕಾರ ರಚನೆಯಾದಾಗ ಎಲ್ಲರಿಗೂ ಉಚಿತ ಲಸಿಕೆ ಸಿಗುತ್ತದೆ. ನಾವು ಬಿಜೆಪಿಯ ಲಸಿಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಚಾಮರಾಜನಗರ: ಲಾಕ್‍ಡೌನ್ ವೇಳೆ ಮಾತ್ರೆ ಖರೀದಿಸಲು ಬಂದಿದ್ದ ಯುವಕನಿಗೆ ದರ್ಪ ತೋರಿ ಕಾಲಿನಿಂದ ಒದ್ದು ನಿಂದಿಸಿದ್ದ ಎಎಸ್‍ಐ ಅವರನ್ನು ಎಸ್ಪಿ ಅಮಾನತು ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಮೇ 23 ರಂದು ಯುವಕನೋರ್ವ ಮಾತ್ರೆ ಖರೀದಿಸಲು ಬೈಕ್‍ನಲ್ಲಿ ನಗರಕ್ಕೆ ಬಂದಿದ್ದ. ಈ ವೇಳೆ ಕೊಳ್ಳೇಗಾಲ ಪಟ್ಟಣ ಠಾಣೆಯ ಎಎಸ್‍ಐ ರಾಮಸ್ವಾಮಿ, ಯುವಕನಿಗೆ ದರ್ಪ ತೋರಿ ಕಾಲಿಂದ ಒದ್ದು ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದರು. ಯುವಕನಿಗೆ ನಿಂದಿಸಿ, ಒದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆಯ ಬಳಿಕ ಎಎಸ್‍ಐ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದನ್ನೂ ಓದಿ: ಬೈಕ್ ಬಿಟ್ಟು ಬಿಡಿ – ಡಿವೈಎಸ್ಪಿ ಕಾಲಿಗೆ ಬಿದ್ದು ಮಹಿಳೆ ಕಣ್ಣೀರು
ಈ ಹಿನ್ನಲೆಯಲ್ಲಿ ಚಾಮರಾಜನಗರ ಎಸ್ಪಿ ದಿವ್ಯ ಸಾರಾ ಥಾಮಸ್, ಘಟನೆಯ ಬಗ್ಗೆ ಸರಿಯಾಗಿ ತನಿಖೆ ನಡೆಸಿ ಯುವಕನಿಗೆ ಕಾಲಿನಿಂದ ಒದ್ದು ಅಶಿಸ್ತು ತೋರಿದ ಎಎಸ್‍ಐ ರಾಮಸ್ವಾಮಿ ವಿರುದ್ಧ ಕ್ರಮ ಕೈಗೊಂಡಿದ್ದು, ರಾಮಸ್ವಾಮಿ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.
ಚಿತ್ರದುರ್ಗ: ಕೊರೊನಾ ಎರಡನೇ ಹಿನ್ನೆಲೆ ಜಿಲ್ಲೆಯಾದ್ಯಂತ 12 ದಿನ ಕಠಿಣ ಲಾಕ್‍ಡೌನ್ ಜಾರಿಗೊಳಿಸಿದರೂ ಜನ ಮಾತ್ರ ಡೋಂಟ್‍ಕೇರ್ ಎನ್ನುತಿದ್ದಾರೆ. ಅನಗತ್ಯವಾಗಿ ಓಡಾಡುತ್ತ ಹಳ್ಳಿಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿಸುತಿದ್ದಾರೆ. ಹೀಗಾಗಿ ಎಚ್ಚೆತ್ತಿರುವ ಚಿತ್ರದುರ್ಗ ಪೊಲೀಸ್ ಎಸ್‍ಪಿ ರಾಧಿಕಾ ಡ್ರೋಣ್ ಕ್ಯಾಮೆರಾ ಮೂಲಕ ಲಾಕ್‍ಡೌನ್ ಉಲ್ಲಂಘನೆಯ ದೃಶ್ಯಗಳನ್ನು ಸೆರೆ ಹಿಡಿಯುವ ಕಾರ್ಯಕ್ಕೆ ಇಂದು ಚಾಲನೆ ನೀಡಿದ್ದಾರೆ.
ಲಾಕ್‍ಡೌನ್ ವೇಳೆ ಅನಾವಶ್ಯಕವಾಗಿ ರಸ್ತೆಗಿಳಿದು, ಕೊರೊನಾ ಹರಡಲು ಕಾರಣರಾಗುವವರ ಚಲನವಲನವನ್ನು ಡ್ರೋಣ್ ಕ್ಯಾಮೆರಾ ಮೂಲಕ ಸೆರೆ ಹಿಡಿದು, ದಂಡ ವಿಧಿಸಿ, ಕೇಸ್ ಧಾಖಲಿಸುವ ಕ್ರಮಕ್ಕೆ ಮುಂದಾಗಿದ್ದಾರೆ. ಈ ಡ್ರೋಣ್ ಕ್ಯಾಮೆರಾ ಸುಮಾರು 5 ಕಿ.ಮೀ. ವರೆಗೆ ನಡೆಯುವ ಎಲ್ಲ ಚಲನವಲನಗಳನ್ನು ಸೆರೆ ಹಿಡಿಯಲಿದ್ದು, ಉತ್ತಮ ಗುಣಮಟ್ಟದ ದೃಶ್ಯಗಳನ್ನು ಸೆರೆ ಹಿಡಿಯಲಿದೆ. ಇದರಿಂದಾಗಿ ಲಾಕ್‍ಡೌನ್ ಉಲ್ಲಂಘನೆಗೆ ಬ್ರೇಕ್ ಹಾಕಲು ಇದೊಂದು ಉತ್ತಮ ತಂತ್ರಜ್ಞಾನವಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿವೆ, ಲಾಕ್‍ಡೌನ್ ಅವಶ್ಯವಿಲ್ಲ: ಸೋಮಣ್ಣ
ಅನವಶ್ಯಕವಾಗಿ ಓಡಾಡುವವರು, ಜೂಜುಕೋರರು ಹಾಗೂ ಲಾಕ್‍ಡೌನ್ ಉಲ್ಲಂಘಿಸುವವರಿಗೆ ಬ್ರೇಕ್ ಹಾಕಲು ಈ ಡ್ರೋಣ್ ಮೂಲಕ ವೀಡಿಯೋ ರೆಕಾರ್ಡ್ ಮಾಡಿ ಮತ್ತೊಮ್ಮೆ ತಪ್ಪಿ ಮಾಡದಂತೆ ಮೊದಲು ಎಚ್ಚರಿಕೆ ನೀಡಲಾಗುವುದು. ಒಮ್ಮೆ ಎಚ್ಚರಿಸಿದ ಬಳಿಕವೂ ಮತ್ತೆ ಕಾನೂನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.