Tag: sp

  • ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ

    ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ

    ನವದೆಹಲಿ: ಪಂಚರಾಜ್ಯಗಳ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಉತ್ತರ ಪ್ರದೇಶದಲ್ಲಿ ಚುನಾವಣೋತ್ತರ ಸಮೀಕ್ಷೆಯಂತೆ ಬಿಜೆಪಿ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

    ಬೆಳಗ್ಗೆ 9 ಗಂಟೆಯ ವೇಳೆ ಟ್ರೆಂಡ್ಸ್ ಪ್ರಕಾರ ಬಿಜೆಪಿ 205, ಎಸ್‍ಪಿ ಕಾಂಗ್ರೆಸ್ ಮೈತ್ರಿಕೂಟ 51, ಬಿಎಎಸ್‍ಪಿ 24, ಇತರರು 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಒಟ್ಟು 403 ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ 202 ಸ್ಥಾನಗಳನ್ನು ಗೆದ್ದವರು ಅಧಿಕಾರ ಹಿಡಿಯಲಿದ್ದಾರೆ.

    ಪಂಜಾಬ್‍ನಲ್ಲಿ ಕಾಂಗ್ರೆಸ್ 25, ಆಪ್ 8, ಅಕಾಲಿದಳ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

    ಉತ್ತರಾಖಂಡ್‍ನಲ್ಲಿ 20 ಕ್ಷೇತ್ರಗಳಲ್ಲಿ ಬಿಜೆಪಿ, 5ರಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದರೆ ಗೋವಾದ 3 ಕ್ಷೇತ್ರಗಳಲ್ಲಿ ಬಿಜೆಪಿ, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಮಣಿಪುರದ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್, 1ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

  • ಪಂಚರಾಜ್ಯಗಳ ಮಹಾ ಫಲಿತಾಂಶಕ್ಕೆ ಕ್ಷಣಗಣನೆ

    ಪಂಚರಾಜ್ಯಗಳ ಮಹಾ ಫಲಿತಾಂಶಕ್ಕೆ ಕ್ಷಣಗಣನೆ

    ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಮಹಾ ಫಲಿತಾಂಶಕ್ಕೆ 2 ಗಂಟೆಯಷ್ಟೇ ಬಾಕಿ ಇದೆ. ಕೆಲವೇ ಕ್ಷಣಗಳಲ್ಲಿ ಮತದಾನ ಎಣಿಕೆ ಕಾರ್ಯ ಶುರುವಾಗಲಿದೆ.

    ಸಾವಿರಾರು ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಮೊದಲ ಬಾರಿಗೆ ಉತ್ತರ ಪ್ರದೇಶ, ಮಣಿಪುರದಲ್ಲಿ ಬಿಜೆಪಿ ಬಹುಮತ ಪಡೆಯುತ್ತಾ 4 ದಶಕದ ಬಳಿಕ ಮತ್ತೆ ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಜಯ ಸಾಧಿಸುತ್ತಾ? ಎಂಬುದಕ್ಕೆ ಇಂದು ಉತ್ತರ ಸಿಗಲಿದೆ.

    ಹಾಗೆ ಪಂಜಾಬ್‍ನಲ್ಲಿ 14 ಬಾರಿ ಕಾಂಗ್ರೆಸ್, 8 ಬಾರಿ ಅಕಾಲಿದಳದ ಆಡಳಿತ ಅಂತ್ಯವಾಗುತ್ತಾ? 3ನೇ ಬಾರಿಗೆ ಗೋವಾ, ಉತ್ತರಾಖಂಡ್‍ನಲ್ಲಿ ಮತ್ತೆ ಕಮಲ ಅರಳುತ್ತಾ ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

  • ಲೋಕಸಭಾ ವೋಟ್ ನೋಡಿದ್ರೆ ಉತ್ತರ ಪ್ರದೇಶದಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಗಬಹುದು?

    ಲೋಕಸಭಾ ವೋಟ್ ನೋಡಿದ್ರೆ ಉತ್ತರ ಪ್ರದೇಶದಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಗಬಹುದು?

    ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಿರುವ ಉತ್ತರ ಪ್ರದೇಶದಲ್ಲಿ ಈ ಬಾರಿ ಗದ್ದುಗೆಯನ್ನು ಯಾರು ಏರಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

    2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಜಯಭೇರಿ ಬಾರಿಸಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಮತ್ತು ಎಸ್‍ಪಿ ಮೈತ್ರಿಕೂಟದಿಂದಾಗಿ ಬಿಜೆಪಿಗೆ ಸ್ವಲ್ಪ ಮತ ಹಂಚಿಕೆ ಕಡಿಮೆಯಾಗಬಹುದು. ಅಷ್ಟೇ ಅಲ್ಲದೇ ದಲಿತರ ಸಂಖ್ಯೆ ಹೆಚ್ಚು ಇರುವುದರಿಂದ ಲೋಕಸಭೆಯಲ್ಲಿ ಬಿಎಸ್‍ಪಿಗೆ ಯಾವುದೇ ಸ್ಥಾನ ಸಿಗದೇ ಇದ್ದರೂ ವಿಧಾನಸಭಾ ಚುನಾವಣೆಯಲ್ಲಿ ಕೆಲವೆಡೆ ಜಯಭೇರಿ ಭಾರಿಸಲಿದೆ ಎನ್ನುವ ವಿಶ್ಲೇಷಣೆ ಆರಂಭವಾಗಿದೆ.

    ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶ ಹೆಚ್ಚು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹೀಗಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಬಿದ್ದ ಮತಗಳನ್ನು ಲೆಕ್ಕಾಚಾರದಲ್ಲಿ ಈ ಬಾರಿ ಯಾರು ಎಷ್ಟು ಸ್ಥಾನವನ್ನು ಗೆಲ್ಲಬಹುದು ಎನ್ನುವ ವಿಶ್ಲೇಷಣಾ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಉತ್ತರಪ್ರದೇಶದಲ್ಲಿ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತಕ್ಕೆ 202 ಸ್ಥಾನಗಳು ಬೇಕು. 2012ರ ಚುನಾವಣೆಯಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ 224 ಸ್ಥಾನವನ್ನು ಗೆದ್ದುಕೊಂಡಿತ್ತು. ಈ ಮೂಲಕ ಅಖಿಲೇಶ್ ಯಾದವ್ ಮೊದಲ ಬಾರಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಪಟ್ಟವನ್ನು ಆಲಂಕರಿಸಿದ್ದರು.

    ಲೋಕಸಭಾ ಚುನಾವಣೆಗೆ ಹೋಲಿಸಿದ್ರೆ ಯಾರಿಗೆ ಎಷ್ಟು ಸ್ಥಾನ ಬರುತ್ತೆ?
    2012ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 47 ಸ್ಥಾನಗಳನ್ನು ಗೆದ್ದಿದ್ದರೆ, 2014 ಲೋಕಸಭಾ ಚುನಾವಣೆಯ 80 ಕ್ಷೇತ್ರಗಳಲ್ಲಿ 71ರಲ್ಲಿ ಜಯವನ್ನು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಶೇ.42.6 ಮತಗಳನ್ನು ಬಿಜೆಪಿ ಪಡೆಯುವ ಮೂಲಕ ಮೋದಿ, ಅಮಿತ್ ಶಾ ರಣತಂತ್ರ ಯಶಸ್ವಿಯಾಗಿತ್ತು. ಇಷ್ಟೇ ಶೇಕಡವಾರು ಮತಗಳು ಈ ಚುನಾವಣೆಯಲ್ಲಿ ಬಿದ್ದರೆ ಬಿಜೆಪಿ 318 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಜಯಭೇರಿ ಬಾರಿಸುವ ಸಾಧ್ಯತೆಯಿದೆ.

    ಎಸ್‍ಪಿ ಶೇ.22.3 ರಷ್ಟು ಮತಗಳನ್ನು ಪಡೆಯುವ ಮೂಲಕ 5 ಸ್ಥಾನವನ್ನು ಗಳಿಸಿತ್ತು. ಈ ಲೆಕ್ಕವನ್ನು ಪರಿಗಣಿಸಿದರೆ ಈ ಬಾರಿ 42 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಕಾಂಗ್ರೆಸ್ ಶೇ.7.5 ರಷ್ಟು ಮತಗಳನ್ನು ಪಡೆಯುವ ಮೂಲಕ 15 ಸ್ಥಾನವನ್ನು ಗೆಲ್ಲಬಹುದು.

     

  • ಉತ್ತರಪ್ರದೇಶದಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಅಖಾಡ ಹೇಗಿದೆ?

    ನವದೆಹಲಿ: ಉತ್ತರ ಪ್ರದೇಶ ಎಂದ ಕೂಡಲೇ ತಕ್ಷಣ ನೆನಪಾಗೋದು ಭಾರತದ ಅತಿದೊಡ್ಡ ರಾಜ್ಯ, ಅಷ್ಟೇ ಅಲ್ಲ ರಾಷ್ಟ್ರ ರಾಜಕಾರಣ ವನ್ನ ನಿರ್ಧರಿಸುವ ಸಮರ ಭೂಮಿ. ಇಲ್ಲಿ ಗೆದ್ದವರು ದೇಶವನ್ನೇ ಆಳ್ತಾರೆ ಅನ್ನೂ ಅಲಿಖಿತ ನಿಯಮ. ಜೊತೆಗೆ ದೇಶದ ಅತಿ ಹೆಚ್ಚು ಮತದಾರರು ಇರುವ ರಾಜ್ಯ ಅನ್ನೂ ಹೆಗ್ಗಳಿಕೆ ಉತ್ತರ ಪ್ರದೇಶದು. ಈ ಕಾರಣಕ್ಕೆ ಉತ್ತರ ಪ್ರದೇಶ ರಾಜಕೀಯ ವಿಚಾರದಲ್ಲಿ ರಾಷ್ಟ್ರದಲ್ಲಿ ಹೆಚ್ಚು ಸುದ್ದಿಯಾಗುತ್ತೆ.

    ಇಂತಹ ರಾಜಕೀಯ ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ಚುನಾವಣಾ ಕಾವು ಜೋರಾಗಿದೆ. ಏಳು ಹಂತದಲ್ಲಿ ನಡೆಯುವ ಚುನಾವಣೆಗೆ ಮುನ್ನುಡಿ  ಎನ್ನುವುಂತೆ ಶನಿವಾರ ಮೊದಲ ಹಂತದ ಚುನಾವಣೆಗೆ ಮತದಾನ ನಡೆಯಲಿದೆ.

    ಮೊದಲ ಹಂತದಲ್ಲಿ 15 ಜಿಲ್ಲೆಗಳ ಪೈಕಿ 73 ವಿಧಾನ ಸಭೆ ಕ್ಷೇತ್ರಗಳಿಗೆ ಚುನಾವಣೆ ಕಸರತ್ತು ನಡೆಯಲಿದೆ. ಶಾಮಲಿ, ಮಥುರಾ, ಮುಝಪ್ಫರ್ ನಗರ ಬಾಗ್ಫತ್, ಅಲಿಗಡ್ ಸೇರಿದಂತೆ ಹಲವು ಮತ ಕ್ಷೇತ್ರಗಳು ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸುನ ಕ್ಷೇತ್ರಗಳಳಾಗಿದ್ದು ಇದೇ 15 ರಂದು 11 ಜಿಲ್ಲೆಗಳ ಪೈಕಿ 67 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು ಎರಡು ಹಂತದಲ್ಲಿ ಉತ್ತರ ಪ್ರದೇಶದ ಪಶ್ಚಿಮ ಭಾಗದ ಚುನಾವಣೆ ಮಾಡಿ ಮುಗಿಸಲು  ಆಯೋಗ ನಿರ್ಧರಿಸಿದೆ.

    ಜಾತಿ ಲೆಕ್ಕಾಚಾರ: ಉತ್ತರ ಪ್ರದೇಶದ ರಾಜಕಾರಣ ನಿಂತಿರುವುದು ಜಾತಿ ಲೆಕ್ಕಾಚಾರದಲ್ಲಿ ಹಾಗಾಗೀ ಯಾದವ, ಜಾಟ್, ಮುಸ್ಲಿಂ, ದಲಿತರು ನಿರ್ಣಾಯಕ ಪಾತ್ರ ವನ್ನು ವಹಿಸ್ತಾರೆ. ಹಾಗಾಗೀ ಈ ಬಾರಿಯ ಮತದಾರರು ಎಷ್ಟಿದ್ದಾರೆ? ಜೊತೆಗೆ ಜಾತಿ ಲೆಕ್ಕಾಚಾರ ಹೇಗಿದೆ ಎಂದು ನೋಡುವುದಾದರೆ,

    ಉತ್ತರ ಪ್ರದೇಶ ದ ಒಟ್ಟು ಮತದಾರರ ಸಂಖ್ಯೆ -14.05 ಕೋಟಿ
    ಪುರುಷರು ಮತದಾರರು – 7.7 ಕೋಟಿ
    ಮಹಿಳಾ ಮತದಾರರು – 6.3 ಕೋಟಿ
    ತೃತೀಯ ಲಿಂಗ ಮತದಾರರು – 6,983
    ಒಟ್ಟು ಮತದಾರರ ಪೈಕಿ – 4.4 ಕೋಟಿಯಷ್ಟು ಯುವ ಮತದಾರರು ಉತ್ತರ ಪ್ರದೇಶದಲ್ಲಿದ್ದಾರೆ

    ಇನ್ನೂ ಜಾತಿ ಲೆಕ್ಕಚಾರ ನೋಡುವುದಾದ್ರೆ
    ದಲಿತರು – 21.5% (ಜಾಟ್ ದಲಿತರು 11% )
    ಮುಸ್ಲಿಂಮರು – 19. 3%
    ಮೆಲ್ವವರ್ಗದ ಜಾತಿಗಳು – 22%
    ಕ್ರಿಶ್ಚಿಯನ್ನರು -0.18%
    ಹಿಂದುಳಿದ ವರ್ಗ – 40% ರಷ್ಟಿದ್ದು ಅದರಲ್ಲಿ (ಯಾದವ – 8% , ಲೋಧಿ -7%, ಜಾಟ್ – 1.7% , ಗುಜ್ಜರ್ – 1.3%, ಹೀಗೆ ಹಲವು ಉಪ ಪಂಗಡಗಳಿವೆ)

    ಉತ್ತರ ಪ್ರದೇಶದ ಪಶ್ಚಿಮ ವಲಯ ಅತಿ ಹೆಚ್ಚು ಮುಸ್ಲಿಂ, ದಲಿತ ಹಾಗೂ ಹಿಂದೂಳಿದ ವರ್ಗದ ಮತದಾರರಿದ್ದಾರೆ. ಹಾಗಾಗೀ ಈಬಾರಿ 99 ಸೀಟುಗಳನ್ನು ಮುಸ್ಲಿಂರಿಗೆ ನೀಡುವ ಮೂಲಕ ದಲಿತ ಮತ್ತು ಮುಸ್ಲಿಮರಿಗೆ ಬಿಎಸ್ಪಿಯ ನಾಯಕಿ ಮಾಯಾವತಿ ಮಣೆ ಹಾಕಿದ್ರೆ, ಎಸ್ಪಿ ಕೂಡಾ 59 ಸೀಟುಗಳನ್ನು ಮುಸ್ಲಿಂ ರಿಗೆ ನೀಡಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಮುಸ್ಲಿಂ ಓಟ್ ಇಬ್ಭಾಗವಾಗದಂತೆ ಯಾದವ- ಮುಸ್ಲಿಂ ಧೃವೀಕರಣ ಮಾಡಿಕೊಂಡಿದ್ದಾರೆ.

    ಕಳೆದ ಲೋಕಸಭೆಯಲ್ಲಿ ಅತಿ ಹೆಚ್ಚು ಸೀಟುಗಳು ಗೆಲ್ಲುವ ಮೂಲಕ ಸದ್ದು ಮಾಡಿದ ಬಿಜೆಪಿ ಈ ಬಾರಿ ವಿಧಾನ ಸಭೆಯಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ. ನೋಟ್ ಬ್ಯಾನ್ ಎಫೆಕ್ಟ್, ಮೋದಿ ಅಲೆ ಮುಖ್ಯವಾಗಿದ್ದು ಸ್ವತಃ ಪ್ರಧಾನ ಮಂತ್ರಿ ಅಖಾಡಕ್ಕೆ ಇಳಿದು ಪ್ರಚಾರದಲ್ಲಿ ಭಾಗವಹಿಸುತ್ತಿದ್ದು,  ಜೊತೆಗೆ ರಾಮ ಮಂದಿರ ನಿರ್ಮಾಣದ ಆಸೆ ತೋರಿಸುವ ಬಿಜೆಪಿ ಗೆಲ್ಲುವ ತಂತ್ರ ಹೆಣೆದಿದೆ. ಇದರ ಜೊತೆಗೆ ಪಶ್ಚಿಮ ಭಾಗದಲ್ಲಿ ಅತಿ ಹೆಚ್ಚು ಪ್ರಭಾವಶಾಲಿಯಾದ ಪಕ್ಷ ಪಕ್ಷ ಆರ್‍ಎಲ್‍ಡಿ. ಆರ್‍ಎಲ್‍ಡಿ ಪ್ರತಿನಿಧಿಸುವ ಜಾಟ್ ಸಮುದಾಯದ ಸಂಖ್ಯೆ ಕಡಿಮೆ ಇದ್ದರೂ ಇತರರ ಮೇಲೆ ಪರಿಣಾಮ ಬೀರುವ ಪ್ರಭಾವ ಜಾಸ್ತಿ. ಮಾಜಿ ಪ್ರಧಾನಿ ಚೌದರಿ ಚರಣ್ ಸಿಂಗ್ ನೇತೃತ್ವದಲ್ಲಿ ಸಾಕಷ್ಟು ರಣ ತಂತ್ರಗಳನ್ನು ಹೂಡಿ ಒಂದಿಷ್ಟು ಸೀಟುಗಳು ಬಾಚ್ಚಿಕೊಳ್ಳುವ ಸಾಧ್ಯತೆಯಿದೆ.

    ಒಟ್ಟಿನಲ್ಲಿ ಮೊದಲ ಹಂತದಲ್ಲಿ ಹೆಚ್ಚು ಖಾತೆಗಳನ್ನು ತೆಗೆಯಲು ಹರ ಸಾಹಸಪಟ್ಟು ಪಕ್ಷಗಳು ಈಗಾಗಲೇ ಸಾಕಷ್ಟು ಪ್ರಚಾರ ಮಾಡಿದೆ. ಅಖಿಲೇಶ್ ಮತ್ತು ರಾಹುಲ್ ಗಾಂಧಿ ಯುವ ನಾಯಕರು, ಯುವಕರ ಮತ ತೆಕ್ಕೆಗೆ ತೆಗೆದುಕೊಳ್ಳುವುವರ ಅಥವಾ ಮೋದಿ ಅಲೆಯಲ್ಲಿ ಆನೆಯೂ ಕೂಡಾ ತೂರಿ ಹೋಗುತ್ತಾ ಎನ್ನುವುದನ್ನು ಮತದಾರ ಪ್ರಭುಗಳು ನಿರ್ಧರಿಸಲಿದ್ದಾರೆ.

  • ಅಕ್ಕನಿಗೆ ಬೇಡವಾದ ತಂಗಿಗೆ ಅಣ್ಣನಾದ ಎಸ್‍ಪಿ ಅಣ್ಣಾ ಮಲೈ

    ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾಗಿ ನನ್ನ ತಮ್ಮ-ತಂಗಿಯನ್ನ ನೋಡಿಕೊಳ್ಳುವುದಿಲ್ಲ ಎಂದ ಮಹಿಳಾ ಪೇದೆಯ ತಂಗಿಗೆ ಚಿಕ್ಕಮಗಳೂರು ಎಸ್‍ಪಿ ಅಣ್ಣಾ ಮಲೈ ಅಣ್ಣನಾಗಿ ನಿಂತಿರೋ ಘಟನೆಗೆ ಚಿಕ್ಕಮಗಳೂರು ಎಸ್‍ಪಿ ಕಚೇರಿ ಸಾಕ್ಷಿಯಾಗಿದೆ.

    ಬಾಳೂರು ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡ್ತಿದ್ದ ರೇಣುಕಾ ಅದೇ ಠಾಣೆಯ ಮಹಮದ್ ನೌಫರ್‍ನನ್ನ ಪ್ರೀತಿಸಿ ಓಡಿಹೋಗಿ ಮದುವೆಯಾಗಿದ್ದಳು. ತಂದೆ-ತಾಯಿ ಇಲ್ಲದ ರೇಣುಕಾ ಮದುವೆಯ ಮುಂಚೆ ತಮ್ಮ ಹಾಗೂ ತಂಗಿಯನ್ನ ಸಾಕುತ್ತಿದ್ದಳು. ಆದ್ರೆ, ಮದುವೆಯ ಬಳಿಕ ರೇಣುಕಾ, ತಮ್ಮ ಹಾಗೂ ತಂಗಿಯನ್ನ ನೋಡಿಕೊಳ್ಳುವುದಿಲ್ಲ ಎಂದಳು. ಅಪ್ಪ-ಅಮ್ಮ ಇಲ್ಲದ ರೇಣುಕಾಳ ತಂಗಿ-ತಮ್ಮನ ಕಣ್ಣೀರು ಆಕೆಗೆ ಕಾಣಿಸಲೇ ಇಲ್ಲ. ಕೂಡಲೇ ಹೆಣ್ಣುಮಗಳ ಕಣ್ಣೀರಿಗೆ ಕರಗಿದ ಎಸ್‍ಪಿ ಅಣ್ಣಾಮಲೈ, ನೀನು ಓದೋವರೆಗೂ ಓದಿಸಿ ನಿನಗೆ ಕೆಲಸ ಕೊಡಿಸೋ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದ್ದಾರೆ.

    ರೇಣುಕಾಗಿ ಸಂಬಂಧದಲ್ಲೇ ಮದುವೆ ಫಿಕ್ಸ್ ಆಗಿತ್ತು. ಆದ್ರೆ, ಮದುವೆಗೆ 10 ದಿನ ಬಾಕಿ ಇರೋವಾಗ್ಲೆ ಆಕೆ ನೌಫರ್‍ನೊಂದಿಗೆ ವಿವಾಹವಾಗಿ ಬಂದಿದ್ದಾಳೆ. ಮದುವೆಗೆ ರೇಣುಕಾ ಸಹೋದರರು ಹಾಗೂ ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ರು. ಸಂಬಂಧಿಕರು ನೌಫರ್ ಹಾಗೂ ರೇಣುಕಾರನ್ನ ಪೊಲೀಸ್ ಠಾಣೆಗೆ ಕರೆಸಿ ಎಸ್‍ಪಿ ಎದುರು ವಿಚಾರಣೆ ಮಾಡಿದ್ರು. ದಿಕ್ಕಿಲ್ಲದ ಸಂಸಾರದಲ್ಲಿ ಕಡುಬಡತನದಲ್ಲಿರುವ ನಮಗೆ ಇನ್ಯಾರು ದಿಕ್ಕು ಅಂತಾ ರೇಣುಕಾಳ ತಂಗಿ ಪೊಲೀಸ್ ಠಾಣೆಯಲ್ಲಿ ಕಣ್ಣೀರಿಟ್ಟಳು. ಆಕೆಯ ಕಣ್ಣೀರಿಗೆ ಕರಗಿದ ಅಣ್ಣಾಮಲೈ ಅಣ್ಣನ ಸ್ಥಾನದಲ್ಲಿ ನಿಂತು ಆಕೆಯ ಜವಾಬ್ದಾರಿ ಹೊತ್ತಿದ್ದಾರೆ.