Tag: sp

  • ಮಂಡ್ಯ ಠಾಣೆಯಲ್ಲೇ ಆರೋಪಿ ನೇಣಿಗೆ ಶರಣು- ಲಾಕಪ್ ಡೆತ್ ಶಂಕೆ!

    ಮಂಡ್ಯ ಠಾಣೆಯಲ್ಲೇ ಆರೋಪಿ ನೇಣಿಗೆ ಶರಣು- ಲಾಕಪ್ ಡೆತ್ ಶಂಕೆ!

    ಮಂಡ್ಯ: ಬೈಕ್ ಕಳ್ಳತನ ಆರೋಪದ ಮೇಲೆ ಜಿಲ್ಲೆಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಬಂಧಿತನಾಗಿದ್ದ ಆರೋಪಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮೃತನ ಕುಟುಂಬದವರು ಲಾಕಪ್ ಡೆತ್ ಎಂದು ಆರೋಪಿಸಿದ್ದಾರೆ.

    ಮೂರ್ತಿ (40) ಪೊಲೀಸ್ ಠಾಣೆಯಲ್ಲೆ ಮೃತಪಟ್ಟ ಆರೋಪಿ. ಇವನು ಮೂಲತಃ ಜಿಲ್ಲೆಯ ಮದ್ದೂರು ತಾಲೂಕಿನ ಬೆಳ್ತೂರು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಸೋಮವಾರ ಬೈಕ್ ಕಳ್ಳತನ ಆರೋಪದ ಮೇಲೆ ಜಿಲ್ಲೆಯ ಪಶ್ಚಿಮ ಠಾಣೆಯ ಪೊಲೀಸರು ಬಂಧಿಸಿ ಕರೆದುಕೊಂಡು ಹೋಗಿದ್ದರು. ಆದರೆ ಇಂದು ಬೆಳಗ್ಗೆ ಠಾಣೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮೂರ್ತಿಯ ಮೃತದೇಹ ಪತ್ತೆಯಾಗಿದೆ.

    ಘಟನೆ ಸಂಬಂಧ ಪಶ್ಚಿಮ ಠಾಣೆಯ ಪೊಲೀಸರು ಮಾತನಾಡಿ, ಬೈಕ್ ಕಳ್ಳತನ ಆರೋಪದಡಿ ಸೋಮವಾರ ಮೂರ್ತಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ಆರೋಪಿ ಮೂರ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

    ಮೂರ್ತಿ ಮೇಲೆ ಪೊಲೀಸರು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ ಹಿನ್ನಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟರ್ ಜ್ಯೋತಿರವರು ಪೊಲೀಸ್ ಠಾಣೆಗೆ ಬಂದು ಪರಿಶೀಲನೆ ನಡೆಸಿದರು. ಪರಿಶೀಲನೆ ಬಳಿಕ ಮೃತದೇಹವನ್ನು ಜಿಲ್ಲೆಯ ಮಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡಯ್ಯಲಾಯಿತು.

    ಲಾಕಪ್ ಡೆತ್ ಎಂದು ತಿಳಿಯುತ್ತಿದ್ದಂತೆ ಶವಾಗಾರದ ಬಳಿ ಜಮಾಯಿಸಿದ ಕುಟುಂಬಸ್ಥರು ಹಾಗೂ ನೂರಾರು ಮಂದಿ ದಲಿತ ಸಂಘಟನೆಗಳ ಮುಖಂಡರು ಮಂಡ್ಯ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೃತ ಕುಟುಂಬಕ್ಕೆ ಪರಿಹಾರ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಮಂಡ್ಯ ಎಸ್ಪಿ ರಾಧಿಕಾರವರು, ಪಶ್ಚಿಮ ಪೊಲೀಸ್ ಠಾಣೆಯ ಇಬ್ಬರು ಪೇದೆಗಳನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೇ ಘಟನೆ ಸಂಬಂಧ ಸೂಕ್ತ ತನಿಖೆ ನಡೆಸಲಾಗುವುದು, ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ನೀಡುವ ಕುರಿತು ಹೇಳಿಕೆ ನೀಡಿದ್ದಾರೆ.

    https://www.youtube.com/watch?v=wChQSTtpjt4

  • ಸಿಪಿಐಗೆ ಕಾನೂನು ಪಾಠ ಹೇಳಿದ್ದಕ್ಕೆ ಸಿಂಗಂ ಖ್ಯಾತಿಯ ಪಿಎಸ್‍ಐ ಶ್ರೀನಿವಾಸ್‍ಗೆ ಅಮಾನತು ಭಾಗ್ಯ

    ಸಿಪಿಐಗೆ ಕಾನೂನು ಪಾಠ ಹೇಳಿದ್ದಕ್ಕೆ ಸಿಂಗಂ ಖ್ಯಾತಿಯ ಪಿಎಸ್‍ಐ ಶ್ರೀನಿವಾಸ್‍ಗೆ ಅಮಾನತು ಭಾಗ್ಯ

    ಚಿಕ್ಕಬಳ್ಳಾಪುರ: ದಂಧೆಕೋರರ ಪರವಾಗಿ ನಿಂತ ಸಿಪಿಐಗೆ ಕಾನೂನು ಪಾಠ ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದ್ದ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಪೊಲೀಸ್ ಠಾಣೆಯ ಪಿಎಸ್‍ಐ ಶ್ರೀನಿವಾಸ್ ಈಗ ಅಮಾನತುಗೊಂಡಿದ್ದಾರೆ.

    ಹಿರಿಯ ಅಧಿಕಾರಿಯ ಜೊತೆ ಅಸಭ್ಯ ವರ್ತನೆ ಆರೋಪದಡಿಯಲ್ಲಿ ಪಿಎಸ್‍ಐ ಶ್ರೀನಿವಾಸ್‍ರವರನ್ನು ಅಮಾನತುಗೊಳಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‍ಪಿ ಭೀಮಾಶಂಕರ ಗುಳೇದ ಆದೇಶ ಹೊರಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಎಸ್‍ಪಿಯವರು, ಹಿರಿಯ ಅಧಿಕಾರಿ ಜೊತೆ ಅಸಭ್ಯ ವರ್ತನೆ ಅಲ್ಲದೇ ಹಲವು ಕಾರಣಗಳಿಂದ ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಈ ಕುರಿತು ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ಪಿಎಸ್‍ಐ ಶ್ರೀನಿವಾಸ್‍ರವರು ಅಮಾನತು ಆದೇಶ ನೋವು ತಂದಿದ್ದು, ಈ ಕುರಿತು ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಪಬ್ಲಿಕ್ ಟಿವಿ ಜೊತೆ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

    ಏನಿದು ಪ್ರಕರಣ?
    ದೇವನಹಳ್ಳಿಯ ಜೆಡಿಎಸ್‍ನ ಮಾಜಿ ಅಧ್ಯಕ್ಷನಾದ ಕೃಷ್ಣಮೂರ್ತಿ ಕಡೆಯವರು ಅಕ್ರಮವಾಗಿ ಲಾರಿಗಳಲ್ಲಿ ಗ್ರಾನೈಟ್ ಸಾಗಿಸುತ್ತಿದ್ದರು. ಕಳೆದ ಭಾನುವಾರ ಕಾನೂನು ಬಾಹಿರವಾಗಿ ಗ್ರಾನೈಟ್ ಸಾಗಿಸುತ್ತಿರುವ ಖಚಿತ ಮಾಹಿತಿ ವಿಶ್ವನಾಥಪುರ ಪೊಲೀಸರಿಗೆ ಸಿಕ್ಕಿದೆ. ಈ ಕುರಿತು ಪೊಲೀಸ್ ಸಿಬ್ಬಂದಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾಗ ದಂಧೆಕೋರರು ಪೊಲೀಸರ ಮೇಲೆಯೇ ದಬ್ಬಾಳಿಕೆ ನಡೆಸಿದ್ದರು.

    ಸಿಬ್ಬಂದಿಗೆ ಲಾರಿಯನ್ನು ವಶಪಡಿಸಿಕೊಳ್ಳದಂತೆ ಬೆದರಿಕೆ ಹಾಕಿದ್ದರು. ಈ ಕುರಿತು ಸಿಬ್ಬಂದಿಯು ವಿಶ್ವನಾಥಪುರದ ಪಿಎಸ್‍ಐ ಶ್ರೀನಿವಾಸ್‍ಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಪಿಎಸ್‍ಐ ಮೇಲೆಯೂ ದಬ್ಬಾಳಿಕೆ ನಡೆಸಲಾಗಿತ್ತು. ಪಿಎಸ್‍ಐ ಬಗ್ಗದಿದ್ದಾಗ ಮೇಲಾಧಿಕಾರಿಗಳ ಮುಖಾಂತರ ಒತ್ತಡ ಮುಂದಾಗಿದ್ದರು. ಇದನ್ನೂ ಓದಿ: ದಂಧೆಕೋರರ ಪರ ನಿಂತ ಸಿಪಿಐಗೆ ಸಿಂಗಂ ಸ್ಟೈಲಲ್ಲಿ ಪಿಎಸ್‍ಐ ಅವಾಜ್!

    ದೂರವಾಣಿ ಮೂಲಕ ಮಾತನಾಡಿದ ವಿಜಯಪುರ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ದಂಧೆಕೋರರ ಪರನಿಂತು ಲಾರಿಗಳನ್ನು ಬಿಡುವಂತೆ ಒತ್ತಡ ಹೇರಿದ್ದಾರೆ. ಈ ವೇಳೆ ಪಿಎಸ್‍ಐಯು ಮೇಲಾಧಿಕಾರಿಯ ಒತ್ತಡಕ್ಕೆ ಮಣಿಯದೇ ಕಾನೂನು ಎಲ್ಲರಿಗೂ ಒಂದೇ ಅಂತ ಖಡಕ್ ಆಗಿ ಉತ್ತರಿಸಿದ್ದಾರೆ. ದಂಧೆಕೋರರ ಪರ ನಿಂತ ಮೇಲಾಧಿಕಾರಿಗೆ ಫೋನ್‍ನಲ್ಲಿಯೇ ತರಾಟೆ ತೆಗೆದುಕೊಂಡಿದ್ದರು.

    ಈ ಎಲ್ಲಾ ಘಟನೆಯನ್ನು ಸ್ಥಳೀಯರು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ ಸೋಷಿಯಲ್ ಮಿಡಿಯಾಗಳಲ್ಲಿ ವಿಡಿಯೋ ಹಾಕಿದ್ದಾರೆ. ಸದ್ಯ ಪಿಎಸ್‍ಐ ಶ್ರೀನಿವಾಸ್‍ರವರು ಮೇಲಾಧಿಕಾರಿಗೆ ಖಡಕ್ ಆವಾಜ್ ಹಾಕಿದ ವಿಡಿಯೋ ವೈರಲ್ ಆಗಿದ್ದು, ಪಿಎಸ್‍ಐ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    https://www.youtube.com/watch?v=1UsgtKiMocA&feature=youtu.be

  • ದನದ ವ್ಯಾಪಾರಿ ಸಾವು ಪ್ರಕರಣದಲ್ಲಿ ಅಮಾಯಕರನ್ನು ಶಿಕ್ಷಿಸಬೇಡಿ- ಉಡುಪಿ ಎಸ್‍ಪಿಗೆ ಶೋಭಾ ಕರಂದ್ಲಾಜೆ ಒತ್ತಾಯ

    ದನದ ವ್ಯಾಪಾರಿ ಸಾವು ಪ್ರಕರಣದಲ್ಲಿ ಅಮಾಯಕರನ್ನು ಶಿಕ್ಷಿಸಬೇಡಿ- ಉಡುಪಿ ಎಸ್‍ಪಿಗೆ ಶೋಭಾ ಕರಂದ್ಲಾಜೆ ಒತ್ತಾಯ

    ಉಡುಪಿ: ದನದ ವ್ಯಾಪಾರಿ ಸಾವು ಪ್ರಕರಣದಲ್ಲಿ ಅಮಾಯಕರನ್ನು ಶಿಕ್ಷಿಸಬೇಡಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯ ಮಾಡಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸಂಘಪರಿವಾರಕ್ಕೂ ವ್ಯಾಪಾರಿ ಸಾವಿಗೂ ಸಂಬಂಧವಿಲ್ಲ. ಪ್ರಕರಣ ಸಂಬಂಧ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ಮಾಡುತ್ತಿದ್ದಾರೆ. ಇದರ ಹಿಂದೆ ಸಮ್ಮಿಶ್ರ ಸರ್ಕಾರದ ಕುಮ್ಮಕ್ಕು ಇದೆ. ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳನ್ನಷ್ಟೇ ತನಿಖೆಗೆ ಒಳಪಡಿಸಿ, ನಿರಪರಾಧಿ ಕಾರ್ಯಕರ್ತರನ್ನು ಹಿಂಸಿಸದೆ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದಾರೆ.

    ಅಲ್ಲದೇ ದನ ಕಳ್ಳ ಸಾಗಣೆ ಸಂದರ್ಭ ಉಡುಪಿಯ ಪೆರ್ಡೂರಿನಲ್ಲಿ ಮಂಗಳೂರಿನ ಜೋಕಟ್ಟೆಯ ಹುಸೇನಬ್ಬ ಅನುಮಾನಾಸ್ಪದ ಸಾವನ್ನಪ್ಪಿದ್ದರು. ಹಿಂದೂ ಕಾರ್ಯಕರ್ತರು ದನಗಳ್ಳತನದ ಮಾಹಿತಿ ಪೊಲೀಸರಿಗೆ ಕೊಟ್ಟಿದ್ದರು. ಈ ವೇಳೆ ಎಸ್‍ಐ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದರೂ, ರಾಜ್ಯ ಸರ್ಕಾರ ಬಿಜೆಪಿ ಮತ್ತು ಸಂಘ ಪರಿವಾರದ ಮೇಲೆ ದೌರ್ಜನ್ಯ ಮಾಡುತ್ತಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಇದನ್ನು ಓದಿ: ದನದ ವ್ಯಾಪಾರಿ ಅನುಮಾನಾಸ್ಪದ ಸಾವು – ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು!

    ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ ನೀಡಿದ ಅವರು, ಬುಧವಾರ ರಾಜ್ಯ ಸರ್ಕಾರದ ವಿರುದ್ಧ ಉಡುಪಿಯಲ್ಲಿ ಪ್ರತಿಭಟನೆ ಮಾಡುತ್ತೇವೆ. ಹುಸೇನಬ್ಬ ಹೃದಯಾಘಾತದಿಂದ ಸಾವನ್ನಪ್ಪಿರಬಹುದು. ಅವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಇದ್ದವು ಎಂಬ ಮಾಹಿತಿ ಇದೆ. ಮರಣೋತ್ತರ ಪರೀಕ್ಷೆ ಬಂದ ಮೇಲೆ ಸತ್ಯಾಸತ್ಯತೆ ಹೊರ ಬರುತ್ತದೆ ಎಂದು ಹೇಳಿದರು. ಇದನ್ನು ಓದಿ:  ದನದ ವ್ಯಾಪಾರಿ ಅನುಮಾನಾಸ್ಪದ ಸಾವು ಪ್ರಕರಣ- ಹಿರಿಯಡ್ಕ ಎಸ್‍ಐ ಬಂಧನ

  • ಅಪರಾಧ ಮಾಡಲು ಜನರು ಹೆದರುತ್ತಿದ್ದಾರೆ, ಕ್ರಿಮಿನಲ್ ಗಳು ತರಕಾರಿ ಮಾರುತ್ತಿದ್ದಾರೆ : ಯೋಗಿ ಆದಿತ್ಯನಾಥ್

    ಅಪರಾಧ ಮಾಡಲು ಜನರು ಹೆದರುತ್ತಿದ್ದಾರೆ, ಕ್ರಿಮಿನಲ್ ಗಳು ತರಕಾರಿ ಮಾರುತ್ತಿದ್ದಾರೆ : ಯೋಗಿ ಆದಿತ್ಯನಾಥ್

    ಲಕ್ನೊ: ಬಿಜೆಪಿ ಸರ್ಕಾರ ಆಡಳಿತ ವಹಿಸಿಕೊಂಡ ಬಳಿಕ ಜನರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವುದು ಕಡಿಮೆಯಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

    ಅಪರಾಧ ಕೃತ್ಯಗಳಲ್ಲಿ ತೊಡಗುವುದನ್ನು ಬಿಟ್ಟು ಕ್ರಿಮಿನಲ್ ಗಳು ತರಕಾರಿಯನ್ನು ಮಾರಾಟ ಮಾಡುತ್ತಿದ್ದಾರೆ. ಹಿಂದಿನ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಿದ್ದವು ಎಂದು ದೂರಿದರು.

    ಇದೇ ವೇಳೆ ಯುವಕರಿಗೆ ಉದ್ಯೋಗವನ್ನು ಸೃಷ್ಟಿಸುವ ಭರವಸೆಯನ್ನು ನೀಡಿದರು. 1.62 ಲಕ್ಷ ಪೊಲೀಸ್ ಕಾನ್ಸ್ ಟೇಬಲ್ ಗಳನ್ನು ಮತ್ತು 1.37 ಲಕ್ಷ ಶಿಕ್ಷಕರನ್ನು ಸರ್ಕಾರ ನೇಮಕ ಮಾಡಿಕೊಳ್ಳುತ್ತದೆ. ಗುತ್ತಿಗೆ ಆಧಾರದ ಶಿಕ್ಷಕರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನವನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.

    2013ರಲ್ಲಿ ಮುಜಾಫರ್ ನಗರದಲ್ಲಿ ನಡೆದ ಹಿಂದು ಮುಸ್ಲಿಂ ಗಲಭೆಯಲ್ಲಿ ಹಲವಾರು ಮುಸಲ್ಮಾನ ಕುಟುಂಬಗಳು ಸ್ಥಳಾಂತರಗೊಂಡವು. 2016 ರಲ್ಲಿ ಶಾಮ್ಲಿ ಜಿಲ್ಲೆಯ ಕೈರಾನ ಬ್ಲಾಕ್ ನಲ್ಲಿ ಹಿಂದೂಗಳಿಗೆ ಅಪಾಯ ಇದೆ ಎಂದು ಹಲವಾರು ಹಿಂದು ಕುಟುಂಬಗಳು ಸ್ಥಳಾಂತರಗೊಂಡವು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಹಿಂದಿನ ಎಸ್ ಪಿ ಸರ್ಕಾರದಲ್ಲಿ ಎಲ್ಲಾ ಸಮುದಾಯದ ಯುವಕರಿಗೆ ಉದ್ಯೋಗ ಸಿಗಲಿಲ್ಲ. ಕೇವಲ ನಿರ್ಧಿಷ್ಟ ಸಮುದಾಯದವರಿಗೆ ಉದ್ಯೋಗಗಳು ದೊರೆತಿದೆ. ನಮ್ಮ ಸರ್ಕಾರದಲ್ಲಿ ಎಲ್ಲಾ ವರ್ಗದವರಿಗೂ ಉದ್ಯೋಗ ಸಿಗುವಂತೆ ನಿಯಮಗಳನ್ನು ರೂಪಿಸಿದ್ದೇವೆ ಎಂದು ತಿಳಿಸಿದರು.

  • ವಿದ್ಯುತ್ ಸೌಕರ್ಯ ಇಲ್ಲದಿದ್ರೂ ಈ ಹಳ್ಳಿಯ ಜನ ಬಿಲ್ ಪಾವತಿ ಮಾಡಲೇಬೇಕು!

    ವಿದ್ಯುತ್ ಸೌಕರ್ಯ ಇಲ್ಲದಿದ್ರೂ ಈ ಹಳ್ಳಿಯ ಜನ ಬಿಲ್ ಪಾವತಿ ಮಾಡಲೇಬೇಕು!

    ಉತ್ತರಪ್ರದೇಶ: ಸಂಭಾಲ್ ಜಿಲ್ಲೆಯ ಕರೇಲಾ ಹಳ್ಳಿಯಲ್ಲಿ ವಿದ್ಯುತ್ ಕಂಬಗಳನ್ನು ಹಾಕಿ ವರ್ಷ ಕಳೆದರೂ ಜನರಿಗೆ ವಿದ್ಯುತ್ ಸಂಪರ್ಕ ದೊರೆತಿಲ್ಲ. ಕಂಬಗಳಿಗೆ ವಿದ್ಯುತ್ ಲೈನ್ ಜೋಡಣೆ ಮಾಡದ ಕಾರಣ ಗ್ರಾಮದಲ್ಲಿ ಇದುವರೆಗೂ ಕತ್ತಲಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದ್ರೆ ವಿಚಿತ್ರವೆಂದ್ರೆ ವಿದ್ಯುತ್ ಸೌಲಭ್ಯ ಇಲ್ಲದಿದ್ದರು ಗ್ರಾಮದ ಜನ ಬಿಲ್ ಪಾವತಿ ಮಾಡಲೇಬೇಕಾಗಿದೆ.

    ವಿದ್ಯುತ್ ಸಂಪರ್ಕಕ್ಕಾಗಿ ಹಲವಾರು ಬಾರಿ ಅಧಿಕಾರಿಗಳನ್ನು ಭೇಟಿ ಮಾಡಿದರು ಪ್ರಯೋಜನವಾಗಿಲ್ಲ. ಸಂಜೆ ಆಗುತ್ತಿದ್ದಂತೆ ಅಡುಗೆ ಮಾಡಲು, ಮಕ್ಕಳಿಗೆ ಓದಲು ಬಹಳ ತೊಂದರೆ ಆಗುತ್ತಿದೆ ಅಂತಾ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಇಲ್ಲದಿದ್ದರು 40,000 ರಿಂದ 60,000 ರೂ ಬಿಲ್ ಪಾವತಿ ಮಾಡುವಂತೆ ಅಧಿಕಾರಿಗಳು ಒತ್ತಾಯ ಮಾಡುತ್ತಿದ್ದಾರೆ ಇದು ಅನ್ಯಾಯ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ

    ಸುಳ್ಳು ಭರವಸೆಗಳನ್ನು ನೀಡಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಸರ್ಕಾರಗಳು ಕರೇಲಾ ಹಳ್ಳಿಗೆ ವಿದ್ಯುತ್ ಸೌಲಭ್ಯವನ್ನು ಒದಗಿಸದೆ ಮೋಸ ಮಾಡಿವೆ. ಬಿಎಸ್‍ಪಿ ಅಧಿಕಾರದಲ್ಲಿ ಇದ್ದಾಗ 15,000 ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯವನ್ನು ಒದಗಿಸಲಾಗಿತ್ತು ಎಂದು ಬಿಎಸ್‍ಪಿ ಮಾಜಿ ಕೌನ್ಸಿಲರ್ ಗಿರೀಶ್ ಚಂದ್ರ ಆರೋಪಿಸಿದ್ದಾರೆ.

    ದೀನ್ ದಯಾಳ್ ಉಪಾಧ್ಯಾಯ ಗ್ರಾಮ್ ಜ್ಯೋತಿ ಯೋಜನೆ ಅಡಿಯಲ್ಲಿ ಬನಿಯಾಕೆರಾ ಬ್ಲಾಕ್ ಗೆ ವಿದ್ಯುತ್ ಒದಗಿಸಲು ಕಂಪೆನಿಗೆ ಪ್ರಾಜೆಕ್ಟ್ ನೀಡಿದ್ದೆವು ಕಾರಣಾಂತರಗಳಿಂದ ಮುಗಿಸಲು ಆಗಿಲ್ಲ. ಸೌಭಾಗ್ಯ ಯೋಜನೆ ಅಡಿಯಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಆ ಭಾಗದ ಮುಖ್ಯ ಇಂಜಿನಿಯರ್ ವಿನೋದ್ ಕುಮಾರ್ ತಿಳಿಸಿದ್ದಾರೆ.

  • ಯುಪಿಯಲ್ಲಿ ಸೈಕಲ್ ಕೇಕೆ, ಪ್ರಧಾನಿ ಮೋದಿಗೆ ಎಚ್ಚರಿಕೆ – ಮಹಾ ಮೈತ್ರಿಗೆ ಇದು ವೇದಿಕೆ!

    ಯುಪಿಯಲ್ಲಿ ಸೈಕಲ್ ಕೇಕೆ, ಪ್ರಧಾನಿ ಮೋದಿಗೆ ಎಚ್ಚರಿಕೆ – ಮಹಾ ಮೈತ್ರಿಗೆ ಇದು ವೇದಿಕೆ!

    ಮೋದಿ.. ಮೋದಿ.. ಯೋಗಿ.. ಯೋಗಿ.. ಇದು ಬಿಜೆಪಿ ಕಾರ್ಯಕರ್ತರ ಅಬ್ಬರಿಸಿ ಬೊಬ್ಬರಿದು ಘೋಷಣೆ ಕೂಗುತ್ತಿದ್ದ ಪರಿ. ಆದರೆ ಇವತ್ತು ಈ ಘೋಷಣೆ ಕೂಗು ತಗ್ಗಿ ಹೋಗಿತ್ತು. ಆನೆಯ ಸಹಾಯದಿಂದ ಸೈಕಲ್ ಸವಾರಿ ಮಾಡಿದವರಿಗೆ ಶಿಳ್ಳೆ, ಚಪ್ಪಾಳೆಯ ಸ್ವಾಗತ ಸಿಕ್ಕಿದೆ.

    ಪ್ರಧಾನಿ ಮೋದಿಯ ಆಶ್ವಮೇಧ ಕುದುರೆಯನ್ನು ಕಟ್ಟಿಹಾಕಲು ವಿಪಕ್ಷಗಳು ಒಂದಾಗಬೇಕು ಎನ್ನುವ ಕೂಗಿಗೆ ಪುಷ್ಠಿ ಸಿಕ್ಕಿದೆ. ಇದಕ್ಕೆಲ್ಲಾ ಕಾರಣ ಗಟ್ಟಿ ಕೇತ್ರಗಳಲ್ಲೇ ಬಿಜೆಪಿ ಮಕಾಡೆ ಮಲಗಿದೆ. ಉತ್ತರಪ್ರದೇಶದ ಗೋರಖ್‍ಪುರ್, ಫೂಲ್‍ಪುರ್ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ನೆಲಕೆಚ್ಚಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ನಡೆಸಿದ ಯೋಗಿ ಆರ್ಭಟ ನಿಂತಿದೆ. ಈ ಉಪಚುನಾವಣೆಗಳಲ್ಲಿನ ಸೋಲು ಮೋದಿ, ಯೋಗಿಯ ಜಬರ್ದಸ್ತ್ ಹವಾವನ್ನೇ ಪ್ರಶ್ನಿಸುವಂತಾಗಿದೆ.

    ಅಂದಿದ್ದ ಹವಾ, ಈಗ ಎಲ್ಲೋಯ್ತು ಶಿವಾ ಅನ್ನೋ ಪ್ರಶ್ನೆಗಳ ಸುರಿಮಳೆ ಜೋರಾಗಿವೆ. ಹಾಗಾದ್ರೆ ಈ ಉಪಚುನಾವಣೆ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿನಾ? ಮೋದಿಯ ನಾಗಲೋಟಕ್ಕೆ ಬ್ರೇಕ್ ಹಾಕಲು ಮಿತ್ರಪಕ್ಷಗಳನ್ನು ಕಾಂಗ್ರೆಸ್ ಗುಡ್ಡೆ ಹಾಕುತ್ತಾ ಎನ್ನುವ ಲೆಕ್ಕಚಾರಗಳು ಭರ್ಜರಿಯಾಗಿಯೇ ನಡೆದಿವೆ.

    ಈ ನಡುವೆ ಉಪಚುನಾವಣೆಯ ಫಲಿತಾಂಶದಿಂದ ಕಾಂಗ್ರೆಸ್‍ನ ಶಕ್ತಿಯೇನೂ ವೃದ್ಧಿಯಾಗಿಲ್ಲ. ಆದರೂ ಮೈತ್ರಿ ರಾಜಕಾರಣ ಗಟ್ಟಿಗೊಳಿಸಲು ಕೈಗೆ ವೇದಿಕೆ ಸಿಕ್ಕಂತಾಗಿದೆ. ಎಸ್‍ಪಿ, ಬಿಎಸ್‍ಪಿ ಕಾಂಬಿನೇಶನ್ ಫೈಟ್‍ನಿಂದಾಗಿಯೇ ಬಿಜೆಪಿ ಸೋಲಿಗೆ ಕಾರಣವಾಗಿರೋದು ಸ್ಪಷ್ಟವಾಗಿದ್ದು, ಇದೇ ಮೈತ್ರಿ ಮುಂದಿನ ಲೋಕಸಭಾ ಚುನಾವಣೆಗೆ ಮುಂದುವರಿದರೆ ಬಿಜೆಪಿಗೆ ಕಷ್ಟ ಎನ್ನುವ ಚರ್ಚೆಗಳು  ನಡೆಯಲು ಆರಂಭಿಸಿದೆ. ಅಷ್ಟೇ ಅಲ್ಲ ರಾಷ್ಟ್ರ ರಾಜಕಾರಣದ ದಿಕ್ಸೂಚಿಗೆ ಮುನ್ನುಡಿ ಬರೆದಿದ್ದು, ನಿನ್ನೆಯಷ್ಟೇ ಸೋನಿಯಾಗಾಂಧಿ 20 ಮಿತ್ರ ಪಕ್ಷಗಳ ಜತೆ ಭೋಜನ ಕೂಟ ನಡೆಸಿ ಮೈತ್ರಿ ಕಸರತ್ತು ಆರಂಭಿಸಿದ್ದಾರೆ. ಹಾಗಾಗಿಯೇ ಮೋದಿ ದುಷ್ಮನ್‍ಗಳೆಲ್ಲಾ ಒಂದಾದರೆ 2019ರ ಲೋಕಸಭಾ ಚುನಾವಣೆಯಲ್ಲಿ ಹಾದಿ ಕಠಿಣ ಎನ್ನುವ ಲೆಕ್ಕಾಚಾರಗಳು ಜೋರಾಗಿದೆ.

    ಕರ್ನಾಟಕ ಚುನಾವಣೆಯಲ್ಲೂ ಮೋದಿ, ಶಾ ಜೋಡಿ ಎಚ್ಚರಿಕೆಯ ಹೆಜ್ಜೆಯ ಇಡಬೇಕಾಗಿದ್ದು, ಕಾಂಗ್ರೆಸ್‍ನಿಂದ ಜೆಡಿಎಸ್ ಪಕ್ಷವನ್ನು ದೂರ ಇರುವಂತೆಯೇ ನೋಡಿಕೊಳ್ಳುವುದನ್ನು ಕಲಿಯಬೇಕಿದೆ. ಇಲ್ಲದಿದ್ದರೇ ಗಂಡಾಂತರ ಗ್ಯಾರಂಟಿ ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ವಿಶ್ಲೇಷಣೆ ಆರಂಭವಾಗಿದೆ.

    2014ರಿಂದ ಇಲ್ಲಿ ತನಕ ಕೆಲ ಸಣ್ಣ ಸಣ್ಣ ಸೋಲುಗಳನ್ನು ಹೊರತುಪಡಿಸಿದರೆ ಮೋದಿಗೆ ವಿಜಯದ ಮೇಲೆ ವಿಜಯ ದಕ್ಕಿದ್ದು ದೊಡ್ಡ ಸಾಧನೆಯೇ ಸರಿ. ಆದರೆ ಇದೇ ಹವಾದ ಉತ್ತರ ಪ್ರದೇಶದ ಉಪಚುನಾವಣೆಗಳ ಸೋಲಿನಿಂದ ಕಡಿಮೆಯಾಗಲು ಶುರುವಾಯ್ತಾ? ಕರ್ನಾಟಕ ಚುನಾವಣೆ ಮೋದಿ, ಶಾ ಪಾಲಿನ ಅತಿದೊಡ್ಡ ಅಗ್ನಿ ಪರೀಕ್ಷೆಯಲ್ಲವಾ? ಮೈತ್ರಿ ರಾಜಕಾರಣ ಮೋದಿಯ ಮಾಂತ್ರಿಕ ರಾಜಕಾರಣಕ್ಕೆ ಪೆಟ್ಟು ನೀಡುತ್ತಾ ಎಂಬೆಲ್ಲಾ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

  • ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುಖಭಂಗ- ಬಿಹಾರದಲ್ಲಿ ಆರ್ ಜೆಡಿಗೆ ಗೆಲುವು

    ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುಖಭಂಗ- ಬಿಹಾರದಲ್ಲಿ ಆರ್ ಜೆಡಿಗೆ ಗೆಲುವು

    ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಮೈತ್ರಿ ಮಾತುಕತೆಗೆ ಪ್ರತಿಪಕ್ಷಗಳು ಮುಂದಾಗುತ್ತಿರುವ ಬೆನ್ನಲ್ಲೇ ಉಪಚುನಾವಣೆಯಲ್ಲಿ ಸಿಹಿ ಸುದ್ದಿ ಸಿಕ್ಕಿದೆ.

    ಆಡಳಿತಾರೂಢ ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದೆ. ಫೂಲ್ಪುರ್ ಎಸ್‍ಪಿಯ ನಾಗೇಂದ್ರ ಪ್ರತಾಪ್ ಬಿಜೆಪಿಯ ಅಭ್ಯರ್ಥಿ ವಿರುದ್ಧ 59,613 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

    ಗೋರಖ್‍ಪುರ್ ದಲ್ಲಿ ಸಮಾಜವಾದಿ ಅಭ್ಯರ್ಥಿ 26,954 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. 25ನೇ ಸುತ್ತಿನ ಮತ ಎಣಿಕೆಯ ವೇಳೆ ಎಸ್‍ಪಿಯ ಪ್ರವೀಣ್ ಕುಮಾರ್ ನಿಶಾದ್ ಅವರಿಗೆ 3,77,146 ಮತಗಳು ಬಿದ್ದರೆ, ಬಿಜೆಪಿಯ ಉಪೇಂದ್ರ ದತ್ತಾ ಶುಕ್ಲಾ ಅವರಿಗೆ 3,54,192 ಮತಗಳು ಬಿದ್ದಿವೆ.

    ಫೂಲ್ಪುರ್ ದಲ್ಲಿ 28 ಸುತ್ತಿನ ಮತ ಎಣಿಕೆಯ ವೇಳೆ ಬಿಜೆಪಿಯ ಕೌಶಲೇಂದ್ರ ಸಿಂಗ್ ಪಟೇಲ್ ಅವರಿಗೆ 2,57,821 ಮತಗಳು ಬಿದ್ದಿದ್ದರೆ, ಎಸ್‍ಪಿಯ ನಾಗೇಂದ್ರ ಪ್ರತಾಪ್ ಸಿಂಗ್ ಅವರಿಗೆ 3,05,172 ಮತಗಳು ಬಿದ್ದಿತ್ತು.

    ಗೋರಖ್‍ಪುರ ಕ್ಷೇತ್ರ ಬಿಜೆಪಿಯ ಭದ್ರ ಕೋಟೆಯಾಗಿದ್ದು ಮಹಂತ್ ಅವೈದ್ಯದನಾತ್ ಅವರು ಪ್ರತಿನಿಧಿಸಿದ್ದರು. ಆ ಕ್ಷೇತ್ರದಲ್ಲಿ 1998 ರಲ್ಲಿ ಆದಿತ್ಯನಾಥ್ ಅವರು 2014ರವರೆಗೆ ನಿರಂತರ ಗೆಲುವು ಸಾಧಿಸಿಕೊಂಡು ಬಂದಿದ್ದರು. ಈ ಎರಡು ಕ್ಷೇತ್ರದಲ್ಲಿ ಬಿಎಸ್‍ಬಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಎಸ್‍ಪಿ ಅಭ್ಯರ್ಥಿಗೆ ಬೆಂಬಲ ನೀಡಿತ್ತು.

    ಆರ್ ಜೆಡಿಗೆ ಗೆಲುವು
    ಬಿಹಾರದ ಅರಾರಿಯಾ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ-ಜೆಡಿಯು ಮೈತ್ರಿ ಅಭ್ಯರ್ಥಿ ಸೋತಿದ್ದು ವಿಪಕ್ಷ ಆರ್ ಜೆಡಿ ಅಭ್ಯರ್ಥಿ ಗೆದ್ದಿದ್ದಾರೆ. 2014ರ ಚುನಾವಣೆಯಲ್ಲೂ ಆರ್ ಜೆಡಿ ಇಲ್ಲಿ ಗೆದ್ದುಕೊಂಡಿತ್ತು.

     

     

  • ತನ್ನ ಹೆಸರನ್ನು ದುರ್ಬಳಕೆ ಮಾಡೋ ಮಂದಿಗೆ ವಾರ್ನಿಂಗ್ ಕೊಟ್ಟ ಎಸ್‍ಪಿ ರವಿ ಚೆನ್ನಣ್ಣನವರ್

    ತನ್ನ ಹೆಸರನ್ನು ದುರ್ಬಳಕೆ ಮಾಡೋ ಮಂದಿಗೆ ವಾರ್ನಿಂಗ್ ಕೊಟ್ಟ ಎಸ್‍ಪಿ ರವಿ ಚೆನ್ನಣ್ಣನವರ್

    ಮೈಸೂರು: ತನ್ನ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ಆ ಖಾತೆಯನ್ನು ನಿರ್ವಹಿಸುತ್ತಿರುವ ಮಂದಿಗೆ ಎಸ್‍ಪಿ ರವಿ ಡಿ.ಚೆನ್ನಣ್ಣನವರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಫೇಸ್‍ಬುಕ್, ಟ್ವಿಟ್ಟರ್, ಇನ್ ಸ್ಟಾಗ್ರಾಮ್ ನಲ್ಲಿ ನನ್ನ ಹೆಸರಿನಲ್ಲಿ ನಕಲಿ ಖಾತೆಗಳಿದ್ದು, ಆ ವ್ಯಕ್ತಿಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಎಸ್‍ಪಿ ರವಿ ಡಿ.ಚನ್ನಣನವರ್ ಫೇಸ್ ಬುಕ್ ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿಕೊಂಡಿದ್ದಾರೆ.

    ಫೇಸ್ ಬುಕ್ ಸ್ಟೇಟಸ್ ನಲ್ಲಿ ಏನಿದೆ?
    ಟ್ವಿಟ್ಟರ್, ಫೇಸ್ ಬುಕ್, ಇನ್ ಸ್ಟಾಗ್ರಾಮ್, ವಾಟ್ಸಪ್ ನಲ್ಲಿ ನನ್ನ ಹೆಸರಿನಲ್ಲಿ ನಕಲಿ ಖಾತೆಗಳು ನಿರ್ವಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನನ್ನ ಫೋಟೋ ಮತ್ತು ಹೆಸರನ್ನು ಹಾಕಿ ಖಾತೆ ತೆರೆದಿರುವುದು ಸರಿಯಲ್ಲ. ಇದು ಕ್ರಿಮಿನಲ್ ಅಪರಾಧ. ಯಾರು ಈ ಖಾತೆಗಳನ್ನು ತೆರೆದು ಓಪನ್ ಮಾಡಿದ್ದಾರೋ ಅವರ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತೇನೆ. ನಾನು ಜನರ ಸೇವೆ ಮಾಡುವ ಸಾಮಾನ್ಯ ಮನುಷ್ಯನಾಗಿದ್ದು ನನಗೆ ಯಾವುದೇ ಪ್ರಚಾರದ ಅಗತ್ಯವಿಲ್ಲ. ನಿಮ್ಮ ಸಲಹೆ ಮತ್ತು ಬೆಂಬಲ ನನಗಿರಲಿ. ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    ಇದು ಎಸ್‍ಪಿ ರವಿ ಡಿ.ಚನ್ನಣನವರ್ ಅಧಿಕೃತ ಖಾತೆ 

  • ಎಸ್ಪಿ ಮೇಡಂ.. ರಕ್ಷಣೆ ಕೊಡಿ: ಕೈ ಕಳೆದುಕೊಂಡ ಮಂಡ್ಯದ ರೌಡಿಶೀಟರ್ ನಿಂದ ವಿಡಿಯೋ ರೆಕಾರ್ಡ್

    ಎಸ್ಪಿ ಮೇಡಂ.. ರಕ್ಷಣೆ ಕೊಡಿ: ಕೈ ಕಳೆದುಕೊಂಡ ಮಂಡ್ಯದ ರೌಡಿಶೀಟರ್ ನಿಂದ ವಿಡಿಯೋ ರೆಕಾರ್ಡ್

    ಮಂಡ್ಯ: ಎಸ್ಪಿ ಮೇಡಂ ನೀವು ತುಂಬಾ ನಿಷ್ಟಾವಂತರು ಅಂತಾರೆ. ನಿಮ್ಮ ಮೇಲೆ ತುಂಬಾ ನಂಬಿಕೆಯಿಟ್ಟಿದ್ದೇನೆ ರಕ್ಷಣೆ ಕೊಡಿ ಅಂತಾ ರೌಡಿಶೀಟರೊಬ್ಬ ವಿಡಿಯೋ ರೆಕಾರ್ಡ್ ಮಾಡಿ ಎಸ್ಪಿಗೆ ಕಳುಹಿಸಿ ಮೊರೆಯಿಟ್ಟಿದ್ದಾನೆ.

    ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ 21 ವರ್ಷದ ರೌಡಿ ಶೀಟರ್ ವರುಣ್ ಮೇಲೆ ಮತ್ತೊಂದು ಗುಂಪು ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ಹಲ್ಲೆಯಲ್ಲಿ ವರುಣ್ ಬಲಗೈ ತುಂಡಾಗಿದ್ದು, ತಲೆಗೆ ತೀವ್ರ ಪೆಟ್ಟಾಗಿತ್ತು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೌಡಿ ಶೀಟರ್ ವರುಣ್, ತನ್ನ ಮೇಲೆ ಹಲ್ಲೆ ನಡೆದ ರೀತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.

    ಏನಿದೆ ವಿಡಿಯೋದಲ್ಲಿ?: ನಾನು ಜುಲೈ 16 ರಂದು ಕ್ರಿಕೆಟ್ ಆಡಿ ಗೆಳೆಯರಾದ ರೇಣು, ಪ್ರಜ್ವಲ್ ಜೊತೆ ಕುಳಿತಿದ್ದೆ. ಈ ಸಂದರ್ಭದಲ್ಲಿ ವ್ಯಾಸ, ಪುಟಾಣಿ, ಸೋಮ ಸೇರಿದಂತೆ ಏಳು ಜನ ಕಾರಲ್ಲಿ ಬರ್ತಾರೆ. ಮೊದಲು ಕಾರಲ್ಲಿ ನನಗೆ ಗುದ್ದುತ್ತಾರೆ. ನಾನು ಎದ್ದು ಓಡುತ್ತೇನೆ. ಆದರೂ ಬಿಡದೇ ತಲೆಗೆ ಬಲವಾಗಿ ಹೊಡೀತಾರೆ, ಕೈ ಕತ್ತರಿಸುತ್ತಾರೆ. ಬದುಕಿದ್ದಾನೆ ಅಂತಾ ಮತ್ತೆ ಅಟ್ಯಾಕ್ ಮಾಡ್ತಾರೆ. ನನ್ನ ಮೇಲೆ ಅಟ್ಯಾಕ್ ಮಾಡಲು ತೊಪ್ಪನಹಳ್ಳಿ ಪ್ರಕಾಶ್, ಕೆಂಗಲ್, ಜೈಲಲ್ಲಿರುವ ಗೆಡ್ಡೆ ಗಿರಿ ಕಾರಣರು.

    ನನ್ನದು ಡಿಪ್ಲೊಮೋ ಆಗಿದೆ. ನಾನು ಇಂಜಿನಿಯರಿಂಗ್ ಸೇರಬೇಕಿತ್ತು. ನಮ್ಮ ಮನೆಯವರನ್ನು ಯಾರು ನೋಡ್ಕೋತಾರೆ. ಮೇಡಂ ನೀವು ತುಂಬಾ ನಿಷ್ಟಾವಂತರು ಅಂತಾರೆ. ಎಸ್ಪಿ ಮೇಡಂ ಇದ್ದಾರೆ. ತಲೆ ಕೆಡಿಸಿಕೊಳ್ಳಬೇಡ ಅಂತಿದ್ದಾರೆ. ನಿಮ್ಮ ಮೇಲೆ ನಂಬಿಕೆಯಿಟ್ಟಿದ್ದೇನೆ. ನನಗೆ ರಕ್ಷಣೆ ಕೊಡಿ ಅಂತಾ ರೌಡಿ ಶೀಟರ್ ಎಸ್ಪಿಗೆ ಮೊರೆಯಿಟ್ಟಿರುವ ವಿಡಿಯೋ ವಾಟ್ಸಪ್‍ನಲ್ಲಿ ಹರಿದಾಡುತ್ತಿದೆ.

    https://www.youtube.com/watch?v=3z3Lzx1FcF0&feature=youtu.be