Tag: sp

  • ಮತದಾರರನ್ನು ಪ್ರಚೋದಿಸುತ್ತಿದ್ದ ಕೈ, ಕಮಲದ ಕಾರ್ಯಕರ್ತರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಡಿಸಿ, ಎಸ್ಪಿ

    ಮತದಾರರನ್ನು ಪ್ರಚೋದಿಸುತ್ತಿದ್ದ ಕೈ, ಕಮಲದ ಕಾರ್ಯಕರ್ತರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಡಿಸಿ, ಎಸ್ಪಿ

    ಬಾಗಲಕೋಟೆ: ನಿರ್ಬಂಧಿತ ಪ್ರದೇಶದಲ್ಲಿ ಪಕ್ಷದ ಬಾವುಟ, ಶಾಲು ಹಿಡಿದು ಮತದಾರರಿಗೆ ಪ್ರಭಾವ ಬೀರುತ್ತಿದ್ದ ಕೈ-ಕಮಲ ಪಕ್ಷಗಳ ಕಾರ್ಯಕರ್ತರನ್ನ ಸ್ವತಃ ಡಿಸಿ ಮತ್ತು ಎಸ್ಪಿ ವಶಕ್ಕೆ ಪಡೆದಿದ್ದಾರೆ.

    ಜಮಖಂಡಿ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿರುವ ಮತಗಟ್ಟೆ ಸಂಖ್ಯೆ 125 ಕ್ಕೆ ಡಿಸಿ ಕೆ.ಜಿ ಶಾಂತಾರಾಮ್ ಹಾಗೂ ಎಸ್ಪಿ ಸಿ.ಬಿ ರಿಷ್ಯಂತ್ ಮತಗಟ್ಟೆಗೆ ದಿಢೀರ್ ಭೇಟಿ ನೀಡಿದ್ದಾರೆ.

    ಈ ಸಮಯದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಮತಕೇಂದ್ರದ ನೂರು ಮೀಟರ್ ಪ್ರದೇಶದ ಒಳಗಡೆ ರಾಜಕೀಯ ಪಕ್ಷಗಳ ಚಿಹ್ನೆ ಪ್ರದರ್ಶನ, ಪ್ರತ್ಯಕ್ಷವಾಗಿ ಚಿಹ್ನೆ ತೋರಿಸಿ ಮತಯಾಚನೆ ಮಾಡುತ್ತಿದ್ದರು. ವಿಷಯ ತಿಳಿದ ಎಸ್.ಪಿ ರಿಷ್ಯಂತ್ ಹಾಗೂ ಡಿಸಿ ಕೆ.ಜೆ ಶಾಂತಾರಾಮ್, ಮತಗಟ್ಟೆ ಬಳಿ ಪರಿಶೀಲನೆ ನಡೆಸಿ, ಎರಡೂ ಪಕ್ಷಗಳ ಇಬ್ಬರು ಆರೋಪಿ ಕಾರ್ಯಕರ್ತರನ್ನ ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೇ ಕರ್ತವ್ಯ ನಿರ್ಲಕ್ಷ್ಯ ವಹಿಸಿದ ಜಮಖಂಡಿ ಪಿಎಸ್.ಐ ದಿನೇಶ್ ಜಾವಳ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡರು.

    ನೀತಿಸಂಹಿತೆ ಉಲ್ಲಂಘಿಸಿದ ಮತ್ತಷ್ಟು ಆರೋಪಿಗಳ ಪತ್ತೆಗೆ ತನಿಖೆ ನಡೆಸಿದ್ದಾರೆ. ಅಲ್ಲದೇ ವಶಕ್ಕೆ ಪಡೆದ ಆರೋಪಿಗಳ ಮೇಲೆ ನೀತಿ ಸಂಹಿತೆ ಉಲ್ಲಂಘನೆಯಡಿ, ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದೇ ಮತಗಟ್ಟೆಯಲ್ಲಿ ಬೆಳಗ್ಗೆ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಮತದಾನ ಮಾಡಿದ್ದರು. ಆ ವೇಳೆ ಅವರೊಂದಿಗೆ ಬಂದಿದ್ದ ಬೆಂಬಲಿಗರು ಪಕ್ಷದ ಶಾಲು ಹಾಕಿದ್ದರು. ಆ ಕಾರಣಕ್ಕೆ ಅವರ ಮೇಲೂ ಪ್ರಕರಣ ದಾಖಲಿಸಲು ಚುನಾವಣಾಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದ್ದರು.

    ಈ ಘಟನೆಯಿಂದಾಗಿ ಬಿಜೆಪಿ ನಾಯಕರು ಡಿಸಿ, ಎಸ್ಪಿ ವಿರುದ್ಧ ಜಮಖಂಡಿ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ನಿರ್ಬಂಧಿತ ಪ್ರದೇಶದಲ್ಲಿ ಪ್ರಚಾರದ ಆರೋಪ ಹಿನ್ನೆಲೆಯಲ್ಲಿ ನಾಲ್ವರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ ಎಂದು ಡಿಸಿ ಕೆ.ಜಿ ಶಾಂತಾರಾಮ್ ಹಾಗೂ ಎಸ್ಪಿ ಸಿ.ಬಿ ರಿಷ್ಯಂತ್ ವಿರುದ್ಧ ಬಿಜೆಪಿ ಮುಖಂಡ ಉಮೇಶ್ ಮಹಾಬಳಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಡಿಸಿ, ಎಸ್ಪಿ ಅವರು ಕಾಂಗ್ರೆಸ್ ಏಜಂಟರಂತೆ ನಡೆದುಕೊಳ್ಳುತ್ತಿದ್ದಾರೆ. ಬೆಳಗ್ಗೆಯಿಂದ ಶಾಂತ ರೀತಿಯಲ್ಲಿ ಮತದಾನ ನಡೆದಿದ್ದು, ಮತದಾರರಲ್ಲಿ ಭಯ ಹುಟ್ಟಿಸಿ, ಕಡಿಮೆ ಮತದಾನ ಆಗುವಂತೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಕಡಿಮೆ ಮತದಾನವಾದಲ್ಲಿ ಕಾಂಗ್ರೆಸ್‍ಗೆ ಲಾಭ ಆಗುತ್ತೆ ಅಂತ ಅಧಿಕಾರಿಗಳು ಈ ರೀತಿ ಮಾಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯ ಸಮಿತಿಗೂ ಮಾಹಿತಿ ನೀಡಿದ್ದು, ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದ್ದಾರೆಂದು ಉಮೇಶ ಮಹಾಬಳಶೆಟ್ಟಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 70 ಲಕ್ಷ ರೂ. ಮೌಲ್ಯದ 18 ಕೆ.ಜಿ ಗಾಂಜಾ ಸುಟ್ಟ ಪೊಲೀಸರು

    70 ಲಕ್ಷ ರೂ. ಮೌಲ್ಯದ 18 ಕೆ.ಜಿ ಗಾಂಜಾ ಸುಟ್ಟ ಪೊಲೀಸರು

    ಉಡುಪಿ: 15 ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಪೊಲೀಸರು ವಶಪಡಿಸಿಕೊಂಡಿದ್ದ ಸುಮಾರು 18 ಕೆ.ಜಿ. ಗಾಂಜಾವನ್ನು ಎಸ್‍ಪಿ ಕಚೇರಿಯ ಆವರಣದಲ್ಲಿ ಸುಟ್ಟುಹಾಕಲಾಯಿತು.

    ಉಡುಪಿ ನಗರ ಸೇರಿದಂತೆ ಮಣಿಪಾಲ, ಹಿರಿಯಡ್ಕ, ಕಾರ್ಕಳ ಹಾಗೂ ಕುಂದಾಪುರ ಉಪ-ವಿಭಾಗ ಪೊಲೀಸರು ಸುಮಾರು 15 ಪ್ರಕರಣಗಳಲ್ಲಿ 18 ಕೆ.ಜಿ.ಯಷ್ಟು ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದರಲ್ಲಿ ಅತಿಹೆಚ್ಚು ಉಡುಪಿ ನಗರದಲ್ಲೇ ವಶಕ್ಕೆ ಪಡೆಯಲಾಗಿತ್ತು.

    ಜಿಲ್ಲಾ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಇಂದು ಜಿಲ್ಲಾವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಎಸ್ಪಿ ಕಚೇರಿಯ ಆವರಣದಲ್ಲೇ ಗಾಂಜಾವನ್ನು ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ. ಸುಮಾರು 70 ಲಕ್ಷ ಮೌಲ್ಯದ 18 ಕೆ.ಜಿ. ತೂಕದ ಗಾಂಜಾ ಸೊಪ್ಪನ್ನು ನಾಶಪಡಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್ಪಿ ಲಕ್ಷ್ಮಣ ನಿಂಬರ್ಗಿ, ವಿದ್ಯಾರ್ಥಿಗಳು ಗಾಂಜಾ ಸಂಕೋಲೆಗೆ ಸುಲಭವಾಗಿ ತುತ್ತಾಗುತ್ತಿದ್ದಾರೆ. ಜೊತೆಗಿರುವ ಗೆಳೆಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ, ಅಪರಾಧ ತಪ್ಪಿಸುವುದರ ಜೊತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು. ಗಾಂಜಾ ಎಂಬ ವಿದೇಶಿ ಕಪಿಮುಷ್ಟಿಗೆ ಭಾರತದ ಯುವ ಪೀಳಿಗೆ ತುತ್ತಾದರೆ, ದೇಶಕ್ಕೆ ನಷ್ಟವೆಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಣ್ಣಾಮಲೈ ಬಗ್ಗೆ ಗೊತ್ತಿರದ ಸಂಗತಿ ಇಲ್ಲಿದೆ

    ಅಣ್ಣಾಮಲೈ ಬಗ್ಗೆ ಗೊತ್ತಿರದ ಸಂಗತಿ ಇಲ್ಲಿದೆ

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಅವರನ್ನು ಸಾಕಷ್ಟು ಜನ ಸೂಪರ್ ಕಾಪ್, ಸಿಂಗಂ ಎಂದು ಕರೆಯುತ್ತಾರೆ. ಅವರು ಕೂಡ ದಕ್ಷ ಹಾಗೂ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿದ್ದು, ಅವರ ಬಗ್ಗೆ ಗೊತ್ತಿರದ ವಿಷಯಗಳ ಮಾಹಿತಿ ಇಲ್ಲಿದೇ;

    1. ಸಿವಿಲ್ ಡ್ರೆಸ್‍ನಲ್ಲಿ ಕಳ್ಳರನ್ನು ಹಿಡಿದುಕೊಂಡು ಬರುವಾಗ ಕಾರಿಗೆ ಕಾರು ಟಚ್ ಆಯಿತ್ತೆಂದು ಗ್ರಾಮಾಂತರ ಪಿಎಸ್‍ಐ ಮೇಲೆ ಕೆಲ ಯುವಕರು ಹಲ್ಲೆ ಮಾಡಿದ್ದರು. ಯುವಕರು ಪಿಎಸ್‍ಐಗೆ ಕಾಲಿನಿಂದ ಒದ್ದು ಬಟ್ಟೆ ಹರಿದಿದ್ದರು. ನಂತರ ಸ್ಥಳಕ್ಕೆ ಬಂದ ಎಸ್‍ಪಿ ಅಣ್ಣಾಮಲೈ ಪೊಲೀಸ್ ಮೇಲೆ ಹಲ್ಲೆ ಮಾಡಿದ ಯುವಕರ ವಿರುದ್ಧ ಫುಲ್ ಗರಂ ಆಗಿದ್ದರು. ಅಲ್ಲದೇ ಸ್ಥಳೀಯರು ರಸ್ತೆ ಬಂದ್ ಮಾಡಿದ್ದರೆಂದು ಫುಲ್ ರೆಬಲ್ ಆಗಿದ್ದರು. ನಿಮಗೆ ಟಿಪಿಕಲ್ ಪೊಲೀಸ್ ಪವರ್ ತೋರಿಸಬೇಕಾ. ರೇಷನ್ ಕಾರ್ಡ್ ಸಿಗದಂತೆ ಮಾಡ್ತೇನೆ, ಕೈ-ಕಾಲು ರಿಮೂವ್ ಮಾಡ್ತೇನೆಂದು ಫುಲ್ ಆವಾಜ್ ಹಾಕಿದ್ದರು. ಅಲ್ಲದೇ ನನ್ನ ಮೇಲೆ ಗೌರವ ಇದ್ದಿದ್ದೆ ಆಫೀಸ್‍ಗೆ ಬರಬೇಕಿತ್ತು. ರೋಡ್ ಬಂದ್ ಮಾಡಿದ್ಯಾಕೆಂದು ಸ್ಥಳೀಯರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದರು.

    2. ದತ್ತ ಜಯಂತಿ ವೇಳೆ ದತ್ತಪೀಠದಲ್ಲಿ ಗಲಾಟೆಯಾಗಿ ಗೋರಿಗಳು ನಾಶವಾಗಿತ್ತು. ಪೊಲೀಸ್ ವೈಫಲ್ಯ ಎಂದು ಸ್ಥಳೀಯರು ಎಸ್‍ಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಗೋರಿಗಳಿಗೆ ಏನಾದರೂ ಆದರೆ ಸರಿ ಮಾಡಬಹುದು. ನನ್ನ ಪೊಲೀಸರಿಗೆ ಏನಾದರೂ ಆದರೆ ಜವಾಬ್ದಾರಿ ಯಾರು? ಅವರ ಮನೆಯವರಿಗೆ ಉತ್ತರ ಏನ್ ಹೇಳೋದು ಎಂದು ಪೊಲೀಸರ ಪರ ಅಣ್ಣಾಮಲೈ ನಿಂತರು. ಇದರಿಂದ ಪೊಲೀಸರಿಗೆ ಅಣ್ಣಾಮಲೈ ಮೇಲಿನ ಗೌರವ ಹೆಚ್ಚಾಯಿತು.

    3. ತಂದೆ- ತಾಯಿ ಇಲ್ಲದ ಮಹಿಳಾ ಪೇದೆಯೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ನಂತರ ತನ್ನ ತಮ್ಮ-ತಂಗಿಯನ್ನು ನಾನು ನೋಡಿಕೊಳ್ಳುವುದಿಲ್ಲ ಎಂದಾಗ, ಅಣ್ಣನ ಸ್ಥಾನದಲ್ಲಿ ನಿಂತು ಅಣ್ಣಾಮಲೈ ಆ ಹೆಣ್ಣು ಮಗುವಿನ ಜವಾಬ್ದಾರಿ ಹೊತ್ತರು. ಸದ್ಯ ಆಕೆಯ ಓದಿನ ಖರ್ಚನ್ನು ಅಣ್ಣಾಮಲೈ ಭರಿಸುತ್ತಿದ್ದಾರೆ.

    4. ಭಾರೀ ಮಳೆಯಿಂದ ಚಾರ್ಮಾಡಿ ಫುಲ್ ಬಂದ್ ಆದಾಗ ಸ್ಥಳಕ್ಕೆ ಬಂದ ಎಸ್‍ಪಿ ಅಣ್ಣಾಮಲೈ ಮೊಣಕಾಲುದ್ದದ ಕೆಸರಿನಲ್ಲಿ, ಮಳೆಯಲ್ಲಿ ಸಂಪೂರ್ಣ ನೆನೆದು ಮರದ ಟೊಂಗೆ, ಕೊಂಬೆಗಳನ್ನು ಎತ್ತಿ ಹಾಕಿ ಟ್ರಾಫಿಕ್ ಕ್ಲಿಯರ್ ಮಾಡಿದರು.

    5. ಗಣಪತಿ ವಿಸರ್ಜನೆ ವೇಳೆ, ಲಾಠಿ ಚಾರ್ಜ್ ಆಗಿ ಪೇದೆಗಳು ಆಸ್ಪತ್ರೆಯಲ್ಲಿ ಮಲಗಿದ್ದಾಗ, ರಾತ್ರಿ 11 ಗಂಟೆಗೆ ಸ್ಟೇಷನ್‍ಗೆ ಬಂದು ಮಾಹಿತಿ ಪಡೆದು ಆಸ್ಪತ್ರೆಗೆ ಹೋಗಿ ತನ್ನ ಸಿಬ್ಬಂದಿಗಳ ಯೋಗ ಕ್ಷೇಮ ವಿಚಾರಿಸಿ, ವೈದ್ಯರಂತೆ ತಮ್ಮ ಮೊಬೈಲ್ ಟಾರ್ಚ್ ನಿಂದ ಪೇದೆಗಳ ಕಿವಿಯೊಳಗೆ ಬೆಳಕು ಬಿಟ್ಟು ಚೆಕ್ ಮಾಡಿ ಅವರಿಗೆ ಧೈರ್ಯ ಹೇಳಿದರು.

    6. ಕೊಪ್ಪದಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ಎಸ್‍ಪಿ ಅಣ್ಣಾಮಲೈ ರಸ್ತೆಯಲ್ಲಿ ಪ್ರವಾಸಿಗರ ಕಾರಿನ ಟೈರ್ ಪಂಚರ್ ಆಗಿತ್ತೆಂದು, ಮೊಬೈಲ್ ಟಾರ್ಚ್‍ನಲ್ಲಿ ಬೇರೆ ಟೈರ್ ಹಾಕಿಕೊಟ್ಟಿದ್ದರು. ಮತ್ತೊಂದು ಗಾಡಿ ಕೆಟ್ಟಿದ್ದು ಅದನ್ನೂ ಸರಿ ಮಾಡಿಕೊಟ್ಟಿದ್ದರು.

    7. 5 ತಿಂಗಳಲ್ಲಿ 5 ಕೆ.ಜಿ ತೂಕ ಇಳಿಸಿ ನಿಮಗೆ ಕೇಳಿದ ಕಡೆ ಟ್ರಾನ್ಸ್ ಫರ್ ಕೊಡುತ್ತೇನೆಂದು ಪೊಲೀಸರಿಗೆ ಆಫರ್ ನೀಡಿದರು. ಜಿಲ್ಲೆಯ 28 ಠಾಣೆಗಳಲ್ಲಿ 34 ಜನ ಹೆಸರು ನೊಂದಾಯಿಸಿದ್ದರು. ಕೊನೆಗೆ 23 ಜನ ಐದು ತಿಂಗಳಲ್ಲಿ ಐದು ಕೆ.ಜಿ. ತೂಕ ಇಳಿಸಿ. ಬೇಕಾದ ಕಡೆ ಟ್ರಾನ್ಸ್ ಫರ್ ತೆಗೆದುಕೊಂಡರು. ಎಸ್‍ಪಿ ಕೂಡ 23 ಜನರಿಗೂ ವರ್ಗಾವಣೆ ಮಾಡಿ ನಾನು ಮಾತು ತಪ್ಪದ ಮಗ ಎಂದು ಹೇಳಿದರು.

    ಸದ್ಯ ಎಸ್‍ಪಿ ಅಣ್ಣಮಲೈ ಅವರನ್ನು ಈಗಾಗಲೇ ಬೆಂಗಳೂರಿನ ಸೌತ್ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ರಿಯಲ್ ಎಸ್ಟೇಟ್ ದಂಧೆ ಮತ್ತು ಭೂ ಮಾಫಿಯಾದವರನ್ನು ಟಾರ್ಗೆಟ್ ಮಾಡಿರುವ ಸಿಎಂ ಕುಮಾರಸ್ವಾಮಿ, ಅದಕ್ಕೆ ಅಂತಾನೇ ಅಣ್ಣಮಲೈ ರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಪ್ರಮುಖವಾಗಿ ನಗರದ ರೌಡಿಸಂ ಮಾಡಿ, ಬಡ ಬಗ್ಗರ ಆಸ್ತಿ ಕಬಳಿಸಿ ರಿಯಲ್ ಎಸ್ಟೇಟ್ ದಂಧೆ ಮತ್ತು ಭೂ ಮಾಫಿಯಾ ನಡೆಸುತ್ತಿರುವ ಮೇಲೆ ದಾಳಿ ನಡೆಸಲು ಅಣ್ಣಮಲೈ ನೇತೃತ್ವದಲ್ಲಿ ವಿಶೇಷ ವಿಂಗ್ ಮಾಡಲು ತಯಾರಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಸ್ತೆ ಮೇಲಿನ ಮೃತದೇಹವನ್ನು ತೆಗೆದು, ಟ್ರಾಫಿಕ್ ಕ್ಲಿಯರ್ ಮಾಡಿ ಕರ್ತವ್ಯ ನಿಷ್ಠೆ ಮೆರೆದ ಚಿತ್ರದುರ್ಗ ಎಸ್ಪಿ

    ರಸ್ತೆ ಮೇಲಿನ ಮೃತದೇಹವನ್ನು ತೆಗೆದು, ಟ್ರಾಫಿಕ್ ಕ್ಲಿಯರ್ ಮಾಡಿ ಕರ್ತವ್ಯ ನಿಷ್ಠೆ ಮೆರೆದ ಚಿತ್ರದುರ್ಗ ಎಸ್ಪಿ

    ಚಿತ್ರದುರ್ಗ: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಮೃತದೇಹವನ್ನು ಸ್ವತಃ ತೆಗೆದು, ಟ್ರಾಫಿಕ್ ಕ್ಲಿಯರ್ ಮಾಡುವ ಮೂಲಕ ಜಿಲ್ಲೆಯ ಎಸ್ಪಿ ಅರುಣ್ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

    ಹಿರಿಯೂರು ತಾಲೂಕಿನ ಸೊಂಡೆಕೆರೆ ಗ್ರಾಮದ ಶ್ರೀನಿವಾಸ್ (55) ಮೃತ ದುರ್ದೈವಿ. ರಾಷ್ಟ್ರೀಯ ಹೆದ್ದಾರಿ 13ರ ಪಿಳ್ಳೆಕೆರೆನಹಳ್ಳಿ ಬಳಿ ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದು ಬಳಿಕ ಬೈಕ್ ಸವಾರನ ತಲೆಯ ಮೇಲೆ ಹರಿದ ಪರಿಣಾಮ ಶ್ರೀನಿವಾಸ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಪಘಾತವಾದ ಬಳಿಕ ಎರಡು ಗಂಟೆ ಕಳೆದರೂ ಸಹ ಯಾವುದೇ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿರಲಿಲ್ಲ.

    ಈ ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಚಿತ್ರದುರ್ಗ ಎಸ್ಪಿ ಅರುಣ್ ಸ್ವತಃ ರಸ್ತೆ ಮೇಲೆ ಬಿದ್ದಿದ್ದ ಮೃತ ದೇಹವನ್ನು ತೆರವು ಮಾಡಿದ್ದಾರೆ. ಅಲ್ಲದೇ ಎರಡು ಕಿಲೋ ಮೀಟರ್‍ವರೆಗೆ ಉಂಟಾಗಿದ್ದ ಟ್ರಾಫಿಕ್ ಜಾಮ್ ನ್ನು ಕ್ಲಿಯರ್ ಮಾಡುವ ಮೂಲಕ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

    ಅಪಘಾತವಾಗುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕನನ್ನು ಸ್ಥಳೀಯರು ಬೆನ್ನತ್ತಿದ್ದರು. ಆದರೆ ಚಾಲಕ ಲಾರಿಯನ್ನು ರಸ್ತೆ ಮಧ್ಯೆಯೇ ಬಿಟ್ಟು ಪರಾರಿಯಾಗಿ ಹೋಗಿದ್ದಾನೆ. ಸದ್ಯ ಲಾರಿಯನ್ನು ಸ್ಥಳೀಯರು ಟ್ರಾಫಿಕ್ ಪೊಲೀಸರ ವಶಕ್ಕೆ ನೀಡಿದ್ದಾರೆ. ಘಟನೆ ಸಂಬಂಧ ಚಿತ್ರದುರ್ಗ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಾಘಟಬಂಧನ್ ಹಿನ್ನಡೆಯ ಮುನ್ಸೂಚನೆ ನೀಡಿದ್ರಾ ಎನ್.ಮಹೇಶ್?

    ಮಹಾಘಟಬಂಧನ್ ಹಿನ್ನಡೆಯ ಮುನ್ಸೂಚನೆ ನೀಡಿದ್ರಾ ಎನ್.ಮಹೇಶ್?

    ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ರಾಜೀನಾಮೆ ನೀಡುವ ಮೂಲಕ ಮಹಾಘಟಬಂಧನ್ ಹಿನ್ನಡೆಯ ಮುನ್ಸೂಚನೆಯನ್ನು ಪರೋಕ್ಷವಾಗಿ ನೀಡಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

    ಹೌದು, ಎನ್.ಮಹೇಶ್ ರವರ ಏಕಾಏಕಿ ಮಂತ್ರಿಗಿರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಬಹು ದೊಡ್ಡ ಶಾಕ್ ನೀಡಿದ್ದಾರೆ. ಅಲ್ಲದೇ ಅವರು ರಾಜೀನಾಮೆ ನೀಡುತ್ತಾರೆ ಎನ್ನುವುದನ್ನು ಯಾರೂ ಸಹ ನಿರೀಕ್ಷಿಸಿರಲಿಲ್ಲ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿನ ಮಹಾಘಟಬಂಧನ್ ಹಿನ್ನಡೆಗೆ ಪರೋಕ್ಷವಾಗಿ ಮುನ್ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

    ಎನ್.ಮಹೇಶ್‍ರವರ ಮೂಲತಃ ಬಿಎಸ್‍ಪಿ ಶಾಸಕರು. ಅಲ್ಲದೇ ಬಿಎಸ್‍ಪಿ ಅಧಿನಾಯಕಿ ಇತ್ತೀಚೆಗೆ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿನ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ಹೇಳಿಕೆ ನೀಡಿದ್ದರು. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಹೊರಾಡಲು ಪರೋಕ್ಷವಾಗಿ ಸಮ್ಮಿಶ್ರ ಸರ್ಕಾರದ ಮಂತ್ರಿಗಿರಿಗೆ ರಾಜೀನಾಮೆ ಕೊಡಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ದೋಸ್ತಿ ಸರ್ಕಾರದ ಮೊದಲ ವಿಕೆಟ್ ಪತನ-ಸಚಿವ ಸ್ಥಾನಕ್ಕೆ ಎನ್. ಮಹೇಶ್ ರಾಜೀನಾಮೆ

    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್‍ನಲ್ಲಿ ರಾಹುಲ್ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿದರೇ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವನ್ನು ಪತನಗೊಳಿಸಲು ಸಾಧ್ಯವಿಲ್ಲ. ಇದನ್ನು ಮನಗಂಡಿರುವ ಬಿಎಸ್‍ಪಿಯು ಮಾಯಾವತಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವಂತೆ ಕಾಂಗ್ರೆಸ್ ಜೊತೆ ಚರ್ಚಿಸಿದ್ದಾರೆ. ಆದರೆ ಇದಕ್ಕೆ ಕಾಂಗ್ರೆಸ್ ಆಗಲಿ, ರಾಹುಲ್ ಗಾಂಧಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಕಾಂಗ್ರೆಸ್ ವಿರುದ್ಧ ಮಾಯಾವತಿ ಅಸಮಾಧಾನ ಹೊಂದಿದ್ದಾರೆ. ಅಲ್ಲದೇ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಹೋರಾಡಲು ಮುಂದಾಗುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

    ಇತ್ತೀಚೆಗೆ ಬಿಎಸ್‍ಪಿ ಹೇಳಿಕೆ ಬೆನ್ನಲ್ಲೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಹ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ಕಾಂಗ್ರೆಸ್ ನಮ್ಮನ್ನು ತುಂಬಾ ಸತಾಯಿಸುತ್ತಿದ್ದು, ಮುಂಬರುವ ರಾಜಸ್ಥಾನ ಹಾಗೂ ಮಧ್ಯಪ್ರದೇಶ ಚುನಾವಣೆಯಲ್ಲಿ ಈ ಕುರಿತು ಬಿಎಸ್‍ಪಿ ನಾಯಕಿ ಮಾಯಾವತಿ ಬಗ್ಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೀನಿ ಎನ್ನುವ ಹೇಳಿಕೆಯನ್ನು ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಸ್‍ಪಿ ವರ್ಗಾವಣೆ ಮಾಡಿದ್ರೆ, ಹೋರಾಟ ಮಾಡ್ತೇವೆ: ಶ್ರೀನಿವಾಸ್ ಪೂಜಾರಿ

    ಎಸ್‍ಪಿ ವರ್ಗಾವಣೆ ಮಾಡಿದ್ರೆ, ಹೋರಾಟ ಮಾಡ್ತೇವೆ: ಶ್ರೀನಿವಾಸ್ ಪೂಜಾರಿ

    ಉಡುಪಿ: ಕಾಂಗ್ರೆಸ್ ರಾಜಕೀಯ ಒತ್ತಡ ಬಳಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿಯವರನ್ನು ವರ್ಗಾವಣೆ ಮಾಡಲು ಯತ್ನಸುತ್ತಿದ್ದು, ಒಂದು ವೇಳೆ ಎಸ್‍ಪಿ ಅವರನ್ನು ವರ್ಗಾವಣೆ ಮಾಡಿದರೆ ಜಿಲ್ಲೆಯಲ್ಲಿ ಹೋರಾಟ ನಡೆಸುತ್ತೇವೆ ಎಂದು ವಿಧಾನಪರಿಷತ್ ವಿರೋಧ ಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ 10 ರಂದು ಕಾಂಗ್ರೆಸ್ ಹಮ್ಮಿಕೊಂಡಿದ್ದ ಭಾರತ್ ಬಂದ್ ವೇಳೆ ಕಾರ್ಯಕರ್ತರು ಬಲವಂತವಾಗಿ ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಿಸಿದ್ದಲ್ಲದೇ, ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಬಂಧ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿಯವರು ಉದ್ರಿಕ್ತರ ಮೇಲೆ ಲಾಠಿ ಚಾರ್ಜ್ ನಡೆಸಲು ಆದೇಶ ಕೊಟ್ಟಿದ್ದರು. ಆದರೆ ಆಳುವ ಪಕ್ಷ ಹೇಳಿದಂತೆ ಎಸ್‍ಪಿ ನಿಂಬರ್ಗಿ ನಡೆದುಕೊಂಡಿಲ್ಲ ಎಂದು ಅವರನ್ನು ವರ್ಗಾವಣೆ ಮಾಡಲು ಭಾರೀ ರಾಜಕೀಯ ಪಿತೂರಿ ನಡೆಯುತ್ತಿದೆ. ಇತ್ತೀಚೆಗೆ ಸಚಿವೆ ಜಯಮಾಲಾಗೆ ಉಡುಪಿ ಕಾಂಗ್ರೆಸ್ ಕಾರ್ಯಕರ್ತರು ಎಸ್‍ಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ಹೇಳಿದರು.

    ಒಂದು ವೇಳೆ ರಾಜಕೀಯ ಒತ್ತಡದಿಂದ ಎಸ್‍ಪಿಯವರನ್ನು ವರ್ಗಾವಣೆ ಮಾಡಿದರೆ, ಬಿಜೆಪಿ ಜಿಲ್ಲೆಯಾದ್ಯಂತ ಹೋರಾಟ ನಡೆಸುತ್ತದೆ. ಅಲ್ಲದೇ ಈಗಾಗಲೇ ನಾವು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಸ್ಪಷ್ಟವಾಗಿ ಹೇಳಿದ್ದೇವೆ. ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆ ಮಾಡಲಿ. ವರ್ಗಾವಣೆ ಮಾಡುವುದು ಸರ್ಕಾರದ ಹಕ್ಕು. ಸರ್ಕಾರದ ಹಕ್ಕನ್ನು ನಾವು ಪ್ರಶ್ನೆ ಮಾಡುವುದಿಲ್ಲ. ಆದರೆ ರಾಜಕೀಯ ಪ್ರೇರಿತ ವರ್ಗಾವಣೆ ಮಾಡಿದರೇ, ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಸ್‍ಪಿ, ಬಿಎಸ್‍ಪಿ, ಕಾಂಗ್ರೆಸ್ ಒಂದಾದ್ರೂ ಯುಪಿಯಲ್ಲಿ ನಮ್ಮದೇ ಗೆಲುವು: ಅಮಿತ್ ಶಾ

    ಎಸ್‍ಪಿ, ಬಿಎಸ್‍ಪಿ, ಕಾಂಗ್ರೆಸ್ ಒಂದಾದ್ರೂ ಯುಪಿಯಲ್ಲಿ ನಮ್ಮದೇ ಗೆಲುವು: ಅಮಿತ್ ಶಾ

    ಲಕ್ನೋ: 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಎಸ್‍ಪಿ (ಸಮಾಜಾವಾದಿ ಪಕ್ಷ) ಮತ್ತು ಬಿಎಸ್‍ಪಿ (ಬಹುಜನ ಸಮಾಜಾವಾದಿ ಪಕ್ಷ) ಮೂವರು ಒಂದಾದರೂ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಿನ ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಮೀರತ್‍ನ ಸುಭಾರತಿ ವಿಶ್ವವಿದ್ಯಾಲಯದಲ್ಲಿ ನಡೆದ ಸ್ಥಳೀಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಚುನಾವಣೆಯಲ್ಲಿನ ವಿರೋಧ ಪಕ್ಷಗಳು ಏನೇ ಕಸರತ್ತು ಮಾಡಿದ್ರೂ ಗೆಲುವು ನಮ್ಮದೇ ಆಗಲಿದೆ. ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಅವರ ಜನಪರ ಯೋಜನೆಗಳು ಎಲ್ಲ ವರ್ಗದವರಿಗೂ ತಲುಪಿದ್ದು, ಹಾಗಾಗಿ ನಾವೇ ಬಹುಮತ ಪಡೆಯಲಿದ್ದೇವೆ. ವಿರೋಧ ಪಕ್ಷಗಳು ರಚಿಸಿರುವ ಮಹಾಘಟ ಬಂಧನ್ ಬಗ್ಗೆ ಯಾರು ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದರು.

    ಉತ್ತರ ಪ್ರದೇಶದಲ್ಲಿ ಎಸ್‍ಪಿ, ಬಿಎಸ್‍ಪಿ ಒಂದಾಗಿದೆ ಏನು ಮಾಡೋದು ಎಂದು ಕೆಲವು ಕಾರ್ಯಕರ್ತರು ನನ್ನನ್ನು ಪ್ರಶ್ನಿಸುತ್ತಾರೆ. 2017ರಲ್ಲಿ ನಡೆದ ಚುನಾವಣೆಯಲ್ಲಿ ಇಬ್ಬರು ಯುವಕರು ಕೈ ಕೈ ಹಿಡಿದುಕೊಂಡು ಚುನಾವಣೆ ಎದುರಿಸಿದರು. ಪರಿಣಾಮ ಬಿಜೆಪಿ 300 ಅಧಿಕ ಕ್ಷೇತ್ರಗಳನ್ನು ಗೆಲುವನ್ನು ಸಾಧಿಸಿದ್ದೇವೆ. ಈ ಬಾರಿ ಕಾಂಗ್ರೆಸ್, ಎಸ್‍ಪಿ, ಬಿಎಸ್‍ಪಿ ಮೂವರು ಒಂದಾದ್ರೂ ಚುನಾವಣೆ 74ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಅಮಿತ್ ಶಾ ಭವಿಷ್ಯ ನುಡಿದಿದ್ದಾರೆ.

    ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಅಮಿತ್ ಶಾ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಸಂಬಂಧ ಸ್ಥಳೀಯ, ಜಿಲ್ಲಾ ಮಟ್ಟದ ಕಾರ್ಯಕರ್ತರೊಂದಿಗೆ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಭಾನುವಾರ ನಡೆದ ಸಭೆಯಲ್ಲಿಯೂ ಚುನಾವಣೆ ಪ್ರಚಾರ, ಮೋದಿ ಮತ್ತು ಯೋಗಿ ಸರ್ಕಾರದ ಯೋಜನಗೆಗಳ ಕೊನೆಯ ವರ್ಗದ ಜನರಿಗೆ ತಿಳಿ ಹೇಳುವುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಅಮಿತ್ ಶಾ ಚರ್ಚೆ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಎಸ್‍ಪಿ ಡಿವೈಎಸ್‍ಪಿ ನಡುವೆ ಹಗ್ಗ-ಜಗ್ಗಾಟ..!

    ಎಸ್‍ಪಿ ಡಿವೈಎಸ್‍ಪಿ ನಡುವೆ ಹಗ್ಗ-ಜಗ್ಗಾಟ..!

    ಬೆಂಗಳೂರು: ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳಿಗೆ ಕಿರುಕುಳ ನೀಡಿರುವ ಪ್ರಕರಣಗಳನ್ನು ನೋಡಿರುತ್ತೇವೆ. ಆದರೆ ಮಹಿಳಾ ಎಸ್.ಪಿ ಒಬ್ಬರು ತನ್ನ ಕಿರಿಯ ಅಧಿಕಾರಿಗಳಿಗೆ ಚಿತ್ರಹಿಂಸೆ ನೀಡುತ್ತಿರು ಆರೋಪಕ್ಕೆ ಗುರಿಯಾಗಿದ್ದು, ವರ್ತನೆ ಖಂಡಿಸಿ ಎಸ್‍ಪಿ ಕಚೇರಿ ಮುಂದೆಯೇ ಡಿವೈಎಸ್‍ಪಿ ಪ್ರತಿಭಟನೆ ನಡೆಸಿದ್ದಾರೆ.

    ರೈಲ್ವೇ ಎಸ್.ಪಿ ಚೈತ್ರಾ ಅವರ ವಿರುದ್ಧ ಇಂತಹ ಆರೋಪ ಕೇಳಿ ಬರುತ್ತಿದ್ದು, ತಮ್ಮ ಕೆಳಹಂತದ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಬೈಯುವುದು ಅಷ್ಟೇ ಅಲ್ಲದೆ, ಕುಟುಂಬದ ಸದಸ್ಯರನ್ನು ಅವಾಚ್ಯ ಪದಗಳಿಂದ ಬೈಯುತ್ತಾರೆ. ಅಷ್ಟೇ ಅಲ್ಲದೆ ಚೈತ್ರಾ ಅವರಿಗೆ ರಾಜಕೀಯ ಬೆಂಬಲ ಇದೆ ಅಂತಾ ಹೀಗೆ ವರ್ತಿಸುತ್ತಿದ್ದಾರೆ ಎನ್ನಲಾಗಿದೆ.

    ಚೈತ್ರಾ ಅವರ ನಡೆಯಿಂದಾಗಿ ಬೇಸತ್ತ, ರೈಲ್ವೇ ಡಿವೈಎಸ್‍ಪಿ ಶ್ರೀನಿವಾಸ್ ರೆಡ್ಡಿ ಎಸ್‍ಪಿ ಕೊಠಡಿ ಮುಂದೆ ಕುಳಿತು ಪ್ರತಿಭಟಿಸಿದ್ದಾರೆ. ರಜೆ ಕೇಳಿದರೆ ಸಕಾಲಕ್ಕೆ ಕೊಡುವುದಿಲ್ಲ. ಎಲ್ಲರಿಗೂ ಓಓಡಿ ಮಾಡುವಂತೆ ಹಿಂಸೆ ಕೊಡುತ್ತಾರೆ. ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದಾರೆ ಎಂದು ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಚೈತ್ರಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಡಿಜಿಪಿ ಎನ್ ಶಿವಕುಮಾರ್ ಅವರಿಗೆ ಶ್ರೀನಿವಾಸ ರೆಡ್ಡಿ ಮೌಖಿಕವಾಗಿ ದೂರು ನೀಡಿದ್ದಾರೆ.

  • ಸುದ್ದಿಯಲ್ಲಿದೆ ಶಿರೂರು ಶ್ರೀಗಳು ಸಾವಿಗೂ ಮುನ್ನ ಬರೆದ ಪತ್ರ

    ಸುದ್ದಿಯಲ್ಲಿದೆ ಶಿರೂರು ಶ್ರೀಗಳು ಸಾವಿಗೂ ಮುನ್ನ ಬರೆದ ಪತ್ರ

    ಉಡುಪಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಸಾವಿನ ಬಗ್ಗೆ ಕುರಿತಂತೆ ದಿನಕ್ಕೊಂದು ಮಾಹಿತಿ ಲಭ್ಯವಾಗುತ್ತಿದೆ. ಈಗ ಶಿರೂರು ಸ್ವಾಮೀಜಿ ಸಾವಿಗೂ ಮುನ್ನ ಬರೆದಿದ್ದ ಪತ್ರ ಈಗ ಸುದ್ದಿಯಲ್ಲಿದೆ.

    ಜೂನ್ 24 ರಂದು ಶಿರೂರು ಸ್ವಾಮೀಜಿ ಎಸ್ಪಿಗೆ ಒಂದು ಪತ್ರ ಬರೆದಿದ್ದರು. 7 ಮಠಾಧೀಶರ ಜೊತೆ ಮನಸ್ತಾಪವಾದಾಗ ಜೂನ್ 24 ರಂದು ಬರೆದ ಪತ್ರ ಇದಾಗಿದ್ದು, ಪತ್ರದ ಕೊನೆಯಲ್ಲಿ ಪಟ್ಟದ ದೇವರು ಸಿಗದೇ ಹೋದರೆ ಮುಂದಿನ ಅನಾಹುತಕ್ಕೆ ಉಳಿದ ಮಠಾಧೀಶರೇ ಹೊಣೆ ಎಂದು ಶಿರೂರು ಶ್ರೀ ಉಲ್ಲೇಖಿಸಿದ್ದಾರೆ.

    ಪಟ್ಟದ ದೇವರು ಕೈಗೆ ಸಿಗುವ ತನಕ ಉಪವಾಸ ನಡೆಸುವೆ. ದೇವರ ಪ್ರಸಾದ ಸ್ವೀಕರಿಸದೆ ಅನಾಹುತವಾದರೆ ಸಪ್ತ ಮಠಾಧೀಶರೇ ಹೊಣೆ, ಪಟ್ಟದ ದೇವರನ್ನು ಆದಷ್ಟು ಬೇಗ ನಮಗೆ ನೀಡುವಂತೆ ತಾವು ಸಹಕರಿಸುತ್ತೀರಿ ಅಂತಾ ನಂಬಿದ್ದೆನೆ ಎಂದು ಬರೆದಿದ್ದರು. ಆದರೆ ಈ ಪತ್ರದ ಸ್ವೀಕೃತಿ ಜುಲೈ 25ಕ್ಕೆ ಆಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಶಯ ವ್ಯಕ್ತಪಡಿಸಲಾಗಿತ್ತು. ಆದರೆ ಪೊಲೀಸ್ ವರಿಷ್ಟಾಧಿಕಾರಿಗಳು ಈಗ ಪತ್ರದ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ.

    ಜೂನ್ 24ಕ್ಕೆ ಈ ಪತ್ರ ಸಿಕ್ಕಿತ್ತು. ಆದರೆ ಸಿವಿಲ್ ವಿಚಾರ ಆದ ಕಾರಣ ಕೋರ್ಟ್ ನಲ್ಲಿ ನೋಡಿಕೊಳ್ಳಲು ಹಿಂಬರಹ ನೀಡಲಾಗಿತ್ತು. ಸ್ವಾಮೀಜಿ ಸಾವಿನ ನಂತರ ಅದೇ ಪತ್ರದ ಜೆರಾಕ್ಸ್ ಪ್ರತಿ ನಮ್ಮ ಕೈ ಸೇರಿತ್ತು. ಅದಕ್ಕೆ ಜುಲೈ 25 ರಂದು ಸ್ವೀಕೃತಿ ನೀಡಿದ್ದೇವೆ ಎಂದು ವರಿಷ್ಟಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಇಂದು ಶಿರೂರು ಸ್ವಾಮೀಜಿ ಅವರ ಮರಣೋತ್ತರ ಪರೀಕ್ಷೆ ಪೊಲೀಸರ ಕೈಗೆ ಸೇರಿದೆ. ಈ ವರದಿಯ ಪ್ರಕಾರ ಶ್ರೀಗಳ ಹೊಟ್ಟೆಯಲ್ಲಿ ವಿಷವಿರಲಿಲ್ಲ ಎಂದು ತಿಳಿಸಲಾಗಿದೆ. ಆದರೆ ಇದು ಪ್ರಾಥಮಿಕ ವರದಿಯಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್.ಎಸ್.ಎಲ್) ವರದಿ ಬರುವವರೆಗೆ ಕಾಯುವುದು ಅನಿವಾರ್ಯ ಎಂದು ಪೊಲೀಸರು ಹೇಳಿದ್ದಾರೆ.

    ಪೊಲೀಸರ ಕೈ ಸೇರಿರುವ ವೈದ್ಯಕೀಯ ವರದಿಯಲ್ಲಿ ಶಿರೂರು ಶ್ರೀಗಳ ಸ್ವಾಮೀಜಿಯ ಲಿವರ್ (ಯಕೃತ್) ಸಂಪೂರ್ಣ ಹಾನಿಯಾಗಿದ್ದು, ಎರಡೂ ಮೂತ್ರಕೋಶಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲವಂತೆ. ಅಷ್ಟೇ ಅಲ್ಲದೆ ಅನ್ನನಾಳದಲ್ಲಿ ಹಲವು ರಂಧ್ರಗಳಿದ್ದವು, ಹೊಟ್ಟೆಯಲ್ಲಿ ರಕ್ತನಾಳಗಳು ಒಡೆದು ರಕ್ತಸ್ರಾವವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಜುಲೈ 19ರಂಂದು ಶ್ರೀಗಳು ಅನುಮಾನಾಸ್ಪದ ರೀತಿಯಲ್ಲಿ ಹರಿಪಾದ ಸೇರಿದ್ದರು. ಶ್ರೀಗಳ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಶಿರೂರು ಮೂಲ ಮಠದಲ್ಲಿ ಕಾಂಡೋಮ್ ಗಳು, ಮಹಿಳೆಯರ ಬಟ್ಟೆಗಳು ಮತ್ತು ಬಾವಿಯಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಇತ್ತ ಶಿರೂರು ಶ್ರೀಗಳು ಪರಸ್ತ್ರೀ ವ್ಯಾಮೋಹಕ್ಕೆ ಸಿಲುಕಿ ಸಾವನ್ನಪ್ಪಿದ್ರಾ ಎಂಬ ಪ್ರಶ್ನೆಯೂ ಭಕ್ತಾದಿಗಳಲ್ಲಿ ಮನೆ ಮಾಡಿದೆ. ಪ್ರಾಥಮಿಕ ಮರಣೋತ್ತರ ವರದಿಯಲ್ಲಿ ಶಿರೂರು ಶ್ರೀಗಳಿಗೆ ವಿಷ ಪ್ರಾಷಾನ ಆಗಿಲ್ಲ ಎಂದು ಹೇಳಲಾಗುತ್ತಿದೆ. ಆದ್ರೆ ಎಫ್‍ಎಸ್‍ಎಲ್ ವರದಿ 6 ವಾರಗಳ ಬಳಿಕ ಪೊಲೀಸರ ಕೈ ಸೇರುವ ಸಾಧ್ಯತೆಗಳಿವೆ.

  • ಒಂದು ಪೇಜ್ ಜೆರಾಕ್ಸ್ ಗೂ ಎಸ್‍ಪಿ ಅನುಮತಿ ಬೇಕಂತೆ- ಸಿಐಡಿ ಅಧಿಕಾರಿಗಳಲ್ಲಿ ಅಸಮಾಧಾನ!

    ಒಂದು ಪೇಜ್ ಜೆರಾಕ್ಸ್ ಗೂ ಎಸ್‍ಪಿ ಅನುಮತಿ ಬೇಕಂತೆ- ಸಿಐಡಿ ಅಧಿಕಾರಿಗಳಲ್ಲಿ ಅಸಮಾಧಾನ!

    ಬೆಂಗಳೂರು: ಸಿಐಡಿ ಎಸ್‍ಪಿ ಕುಮಾರಸ್ವಾಮಿಯ ಸಣ್ಣತನದ ರೂಲ್ಸ್ ನಿಂದ ಅಧಿಕಾರಿಗಳಲ್ಲಿ ಅಸಮಾಧಾನವೊಂದು ಭುಗಿಲೆದ್ದಿದೆ.

    ಜೆರಾಕ್ಸ್ ಮಿಷಿನ್ ಆನ್ ಮಾಡೋಕೆ ಎಸ್‍ಪಿ ಅನುಮತಿ ಬೇಕು. ಒಂದೇ ಒಂದು ಶೀಟ್ ಜೆರಾಕ್ಸ್ ಮಾಡಿಸಬೇಕು ಅಂದ್ರೂ ಎಸ್ ಪಿ ಆರ್ಡರ್ ಬೇಕಂತೆ. ಸಿಐಡಿಯ ಅಡ್ಮಿನ್ ಎಸ್ ಪಿ ಕುಮಾರಸ್ವಾಮಿ ಸಹಿ ಇಲ್ಲದೇ ಜೆರಾಕ್ಸ್ ಮಾಡಿಸುವಂತಿಲ್ಲ.

    ಜೆರಾಕ್ಸ್ ಯಂತ್ರಗಳ ನಿರ್ವಹಣೆಗೆಂದೇ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದ್ರೆ ಎಸ್ ಪಿ ಕುಮಾರಸ್ವಾಮಿ ಸಹಿ ಮಾಡಿಸಿಕೊಂಡು ಬಂದ್ರೆ ಮಾತ್ರ ಇವರು ಜೆರಾಕ್ಸ್ ಮಾಡಿಕೊಡೋದು. ಒಂದು ವೇಳೆ ಅಡ್ಮಿನ್ ಎಸ್ ಪಿ ರಜೆ ಇದ್ದರೆ, ಅಡ್ಮಿನ್ ಡಿವೈಎಸ್ ಪಿ ಮತ್ತು ಇನ್ಸ್ ಪೆಕ್ಟರ್ ಸಹಿ ಪಡೆದು ಜೆರಾಕ್ಸ್ ಮಾಡಿಸಿಕೊಳ್ಳಬೇಕು.

    ಪ್ರತಿದಿನ ಸಾಕಷ್ಟು ಕೇಸ್ ಗಳು ಮತ್ತು ಆರ್ಡರ್ ಗಳು ಸಿಐಡಿಗೆ ಬರುತ್ತೆ. ಆದ್ರೆ ಒಂದು ಪೇಜ್ ಜೆರಾಕ್ಸ್ ಮಾಡಿಸೋಕು ಎಸ್ ಪಿ ಕುಮಾರಸ್ವಾಮಿ ಮುಂದೆ ಅಧಿಕಾರಿಗಳು ಹೋಗಬೇಕು. ಎಲ್ಲಾ ಕೇಸ್ ಗಳಲ್ಲಿ ಪೇಪರ್ ವರ್ಕ್ ಸಾಕಷ್ಟು ಇರೋದ್ರಿಂದ ಜೆರಾಕ್ಸ್ ಗಾಗಿ ಎಸ್ ಪಿ ಮುಂದೆ ನಿಲ್ಲೋದು ಇದೀಗ ಅಧಿಕಾರಿಗಳಲ್ಲಿ ಅಸಮಾಧಾನ ಉಂಟುಮಾಡಿದೆ.

    ಜೆರಾಕ್ಸ್ ಮಾಡಿಸಿ ಅಧಿಕಾರಿಗಳೇನು ಮನೆಗೆ ತೆಗೆದುಕೊಂಡು ಹೋಗಲ್ಲ. ಎಸ್ ಪಿ ಕುಮಾರಸ್ವಾಮಿಯರ ಈ ರೂಲ್ಸ್ ನಿಂದ ಸಾಕಷ್ಟು ಅಧಿಕಾಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಕೆಲಸ ಮಾಡೋದು ಬಿಟ್ಟು ಕೇವಲ ಜೆರಾಕ್ಸ್ ಗಾಗಿ ಎಸ್ ಪಿ ಚೇಂಬರ್ ಬಾಗಿಲು ಕಾಯಬೇಕಾ ಅನ್ನೋ ಆಕ್ರೋಶವನ್ನು ಅಧಿಕಾರಿಗಳು ಹೊರಹಾಕಿದ್ದಾರೆ.