Tag: SP Vedamurthy

  • ಕಠಿಣ ಲಾಕ್‍ಡೌನ್ – ನಗರ ಪ್ರದಕ್ಷಿಣೆಗೆ ಸೈಕಲ್ ಏರಿದ ಎಸ್‍ಪಿ

    ಕಠಿಣ ಲಾಕ್‍ಡೌನ್ – ನಗರ ಪ್ರದಕ್ಷಿಣೆಗೆ ಸೈಕಲ್ ಏರಿದ ಎಸ್‍ಪಿ

    – ಕ್ರುಸರ್ ವಾಹನಗಳಲ್ಲಿ ಜನರ ಸಂಚಾರ

    ಯಾದಗಿರಿ: ಮೇ 30ರಿಂದ ಜೂನ್ 3 ರ ಬೆಳಗ್ಗೆ 6 ಗಂಟೆವರಗೆ ಯಾದಗಿರಿ ಕಠಿಣ ಲಾಕ್‍ಡೌನ್ ವಿಧಿಸಲಾಗಿದೆ. ಕಠಿಣ ಲಾಕ್‍ಡೌನ್ ಪರಿಶೀಲನೆ ಮಾಡಲು ಎಸ್‍ಪಿ ವೇದಮೂರ್ತಿ ನಗರ ಪ್ರದಕ್ಷಿಣೆ ಹಾಕಿದ್ದಾರೆ.

    ನಗರದ ಸುಭಾಷ್ ವೃತ್ತ, ಶಾಸ್ತ್ರೀ ವೃತ್ತ ಮೊದಲಾದ ಕಡೆ ಸೈಕಲ್ ಮೇಲೆ ನಗರ ಸಂಚಾರ ಮಾಡಿ ಪೊಲೀಸ್ ಅಧಿಕಾರಿಗಳ ಕಾರ್ಯ ಪರಿಶೀಲನೆ ನಡೆಸಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಹಿನ್ನೆಲೆ ಎಲ್ಲಾ ರೀತಿಯ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಹೀಗಿದ್ದರೂ ಸಹ ಜನ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಸಿಟಿಗೆ ಎಂಟ್ರಿ ನೀಡಲು ಡಿಫೆರೆಂಟ್, ಡಿಫೆರೆಂಟ್ ಪ್ಲಾನ್ ಮಾಡುತ್ತಿದ್ದಾರೆ.

    ಜಿಲ್ಲಾಡಳಿತದಿಂದ ಮದುವೆ, ಆರೋಗ್ಯ, ಅಗತ್ಯ ಸೇವೆ ಸರಬರಾಜಿಗೆ ಅನುಮತಿ ಪಡೆದುಕೊಂಡ ಕ್ರೂಸರ್ ಮಾಲೀಕರು, ಕಾನೂನು ಬಾಹಿರವಾಗಿ ಜನರ ಸಂಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕ್ರೂಸರ್ ವಾಹನದಲ್ಲಿ ಕುರಿಗಳಂತೆ ಜನರನ್ನು ತುಂಬಿಸಿಕೊಂಡು, ಶಾಪಿಂಗ್ ಗೆ ಕರೆದುಕೊಂಡು ಬರುತ್ತಿದ್ದಾರೆ. ಇನ್ನೂ ಅಂತರ್ ಜಿಲ್ಲಾ ಪ್ರಯಾಣಿಕ್ಕೆ ನಿಷೇಧವಿದ್ದರೂ ಕಾರ್ಮಿಕರ ನೆಪದಲ್ಲಿ ಜನರನ್ನು ಜಿಲ್ಲೆಗೆ ಕರೆತರಲಾಗುತ್ತಿದೆ.