Tag: SP Srinivas Gowda

  • ಹಾಸನ ಎಸ್‍ಪಿ ಶ್ರೀನಿವಾಸ್ ಗೌಡಗೆ ಕೊರೊನಾ ಸೋಂಕು

    ಹಾಸನ ಎಸ್‍ಪಿ ಶ್ರೀನಿವಾಸ್ ಗೌಡಗೆ ಕೊರೊನಾ ಸೋಂಕು

    ಹಾಸನ: ದಿನದಿಂದ ದಿನಕ್ಕೆ ಹಾಸನದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದು, ಎಸ್.ಪಿ.ಆರ್.ಶ್ರೀನಿವಾಸ್ ಗೌಡರಿಗೂ ಕೋವಿಡ್ ಸೋಂಕು ತಗುಲಿದೆ. ವೈದ್ಯರ ಸಲಹೆ ಮೇರೆಗೆ ಹೋಮ್ ಐಸೋಲೇಶನ್ ನಲ್ಲಿದ್ದಾರೆ.

    ಗುರುವಾರ ಸಂಜೆ ಆರೋಗ್ಯದಲ್ಲಿ ಸಮಸ್ಯೆಯುಂಟಾಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ವರದಿಯಲ್ಲಿ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಕೋವಿಡ್ ಆರಂಭದ ದಿನಗಳಿಂದಲೂ ಮಹಾಮಾರಿ ನಿಯಂತ್ರಣಕ್ಕಾಗಿ ಹಗರಲಿರುಳು ಎನ್ನದೇ ಕಾರ್ಯ ನಿರ್ವಹಿಸಿದ್ದರು.

    ಕಳೆದ ವರ್ಷದಿಂದ ಇಲ್ಲಿಯ ತನಕ ಹಾಸನದಲ್ಲಿ ಸುಮಾರು 31,379 ಪ್ರಕರಣಗಳು ಪತ್ತೆಯಾಗಿದ್ದು, 29,524 ಮಂದಿ ಗುಣಮುಖರಾಗಿದ್ದಾರೆ. ಒಂದು ವರ್ಷದಲ್ಲಿ 487 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 25 ಮಂದಿ ಐಸಿಯುವಿನಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಜಿಲ್ಲೆಯಲ್ಲಿ 1,368 ಸಕ್ರಿಯ ಪ್ರಕರಣಗಳಿವೆ.

  • ಇನ್ಮೇಲೆ ವಾರ್ನಿಂಗ್ ಇರಲ್ಲ, ಆ್ಯಕ್ಷನ್ ಅಷ್ಟೇ: ಹಾಸನ ಎಸ್‍ಪಿ

    ಇನ್ಮೇಲೆ ವಾರ್ನಿಂಗ್ ಇರಲ್ಲ, ಆ್ಯಕ್ಷನ್ ಅಷ್ಟೇ: ಹಾಸನ ಎಸ್‍ಪಿ

    ಹಾಸನ: ಇನ್ನು ಮೇಲೆ ವಾರ್ನಿಂಗ್ ಇರಲ್ಲ. ಆಕ್ಷನ್ ಅಷ್ಟೇ ಇರುತ್ತೆ ಎಂದು ಕಫ್ರ್ಯೂ ಉಲ್ಲಂಘಿಸುವ ಮಂದಿಗೆ ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ.

    ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ, ಎಸ್‍ಪಿ, ಜಿಪಂ ಸಿಇಒ ಜಂಟಿ ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಎಷ್ಟೇ ಬುದ್ಧಿವಾದ ಹೇಳಿದರೂ ಪದೇ ಪದೇ ಅಂಗಡಿ ತೆಗೆಯುವವರು ಮತ್ತು ಕಾನೂನು ಉಲ್ಲಂಘನೆ ಮಾಡುತ್ತಿರುವವರ ಬಗ್ಗೆ ಮಾತನಾಡಿದ ಎಸ್‍ಪಿ ಶ್ರೀನಿವಾಸ್ ಗೌಡ, ಮೊದಲು ಎಚ್ಚರಿಕೆ ಕೊಡುವುದು ನಮ್ಮ ಕರ್ತವ್ಯ. ಈಗ ಎಚ್ಚರಿಕೆ ಕೊಟ್ಟಾಗಿದೆ. ಇನ್ನು ನಿಯಮ ಮೀರಿ ನಡೆದರೆ ಆಕ್ಷನ್ ತೋರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಅಷ್ಟೇ ಅಲ್ಲದೆ ನಿಯಮ ಮೀರಿರುವ ಹೋಟೆಲ್, ಹೋಂಸ್ಟೇ ಮೇಲೆ ಈಗಾಗಲೇ ಮೂರು ಕೇಸ್ ದಾಖಲಾಗಿದೆ ಎಂದು ಕೂಡ ತಿಳಿದರು. ಈ ವೇಳೆ ಜಿಲ್ಲಾಧಿಕಾರಿ ಗಿರೀಶ್ ಮಾತನಾಡಿ ಯಾರಾದರೂ ವಿದೇಶದಿಂದ ಬಂದವರು ಮನೆಯಿಂದ ಹೊರಗೆ ಓಡಾಡುತ್ತಿದರೆ ನಮ್ಮ ಗಮನಕ್ಕೆ ತನ್ನಿ ಎಂದು ಜಿಲ್ಲೆಯ ಜನರಲ್ಲಿ ಮನವಿ ಮಾಡಿದರು.

    ಜಿಲ್ಲೆಯಲ್ಲಿ ಯಾವುದೇ ಕೊರೊನ ಪಾಸಿಟಿವ್ ಕೇಸ್ ಕಂಡು ಬಂದಿಲ್ಲ. ಎಲ್ಲರೂ ಒಟ್ಟಾಗಿ ಸರ್ಕಾರದ ನಿಯಮಗಳನ್ನು ಪಾಲಿಸಿ ರೋಗ ಹರಡದಂತೆ ತಡೆಯಬೇಕು ಎಂದು ಮನವಿ ಮಾಡಿದರು.