Tag: SP office

  • ಮದ್ವೆಯಾಗಿ ದೇವಸ್ಥಾನದಿಂದ ನೇರ ಎಸ್ಪಿ ಕಚೇರಿಗೆ ಬಂದ ನವ ದಂಪತಿ

    ಮದ್ವೆಯಾಗಿ ದೇವಸ್ಥಾನದಿಂದ ನೇರ ಎಸ್ಪಿ ಕಚೇರಿಗೆ ಬಂದ ನವ ದಂಪತಿ

    ಚಿಕ್ಕಮಗಳೂರು: ನವಜೀವನಕ್ಕೆ ಕಾಲಿಟ್ಟ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಮೂಲದ ದಂಪತಿ ಮದುವೆಯಾಗಿ ದೇವಸ್ಥಾನದಿಂದ ಸೀದಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಬಂದಿದ್ದಾರೆ.

    ಎಸ್ಪಿ ಕಚೇರಿಗೆ ಬಂದ ನವಜೋಡಿ ನಮಗೆ ಹುಡುಗಿ ಮನೆಯವರಿಂದ ಜೀವ ಬೆದರಿಕೆ ಇದೆ ಎಂದು ರಕ್ಷಣೆ ಕೋರಿದ್ದಾರೆ. ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಕಬ್ಳಿ ಗ್ರಾಮದ ಯೋಗಾನಂದ್ ಹಾಗೂ ಜಿ.ಕೊಪ್ಪಲು ಗ್ರಾಮದ ಚಂದನ ಕಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುವಾಗಲೇ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಇಬ್ಬರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದನ್ನೂ ಓದಿ: ಕರ್ನಾಟಕದಲ್ಲೂ ಬಿಜೆಪಿಗೆ ಮತ್ತೆ ಅಧಿಕಾರ: ಅರುಣ್ ಸಿಂಗ್

    ಪದವಿ ಮುಗಿದು ಯೋಗನಾಂದ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಚಂದನ ಸೆಕೆಂಡ್ ಇಯರ್ ಬಿಕಾಂ ಓದುತ್ತಿದ್ದಾಳೆ. ಇಬ್ಬರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಇವರ ಪ್ರೀತಿ ವಿಚಾರ ಚಂದನ ಮನೆಯವರಿಗೆ ತಿಳಿದು ಆಕೆಯನ್ನು ಗೌಪ್ಯ ಸ್ಥಳದಲ್ಲಿ ಇಟ್ಟಿದ್ದನು. ಆಕೆಗೆ ಬೇರೆ ಹುಡುಗನನ್ನ ನೋಡಿ ಮದುವೆಗೆ ಎಲ್ಲಾ ಸಿದ್ಧತೆ ನಡೆಸಿದ್ದರು. ಆಗ ಪ್ರೇಮಿ ಯೋಗಾನಂದ್ ಚಂದನಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾನೆ. ಆದರೆ, ಆಕೆ ಎಲ್ಲೂ ಸಿಕ್ಕಿಲ್ಲ. ಕೊನೆಗೂ ಹೇಗೋ ಆಕೆ ಇರುವ ಜಾಗವನ್ನು ಪತ್ತೆ ಹಚ್ಚಿದ ಪ್ರೇಮಿ ಆಕೆಯನ್ನ ಕರೆದುಕೊಂಡು ಬಂದು ಸ್ನೇಹಿತರ ಸಮ್ಮುಖದಲ್ಲಿ ತರಾತುರಿಯಲ್ಲಿ ಮದುವೆಯಾಗಿದ್ದಾನೆ.

    ಇಬ್ಬರು ಈಗ ರಕ್ಷಣೆ ಕೋರುವಂತೆ ಎಸ್ಪಿಗೆ ಮನವಿ ಮಾಡಿದ್ದಾರೆ. ಓಡಿ ಹೋಗಿ ಮದುವೆಯಾದ ಇಬ್ಬರಿಗಾಗಿ ಹುಡುಗಿ ಮನೆಯವರು ತೀವ್ರ ಹುಡುಕಾಟ ನಡೆಸಿದ್ದಾರೆ. ಆದರೆ, ಅವರು ಸಿಕ್ಕಿಲ್ಲ. ಎಸ್ಪಿ ಕಚೇರಿಗೆ ಬಂದು ಮನವಿ ಸಲ್ಲಿಸಿರುವ ನವದಂಪತಿ, ನಮಗೆ ಓಡಿ ಹೋಗಿ ಮದುವೆಯಾಗಬೇಕೆಂಬ ಬಯಕೆ ಇರಲಿಲ್ಲ. ಆದರೆ, ನಮ್ಮ ಮನೆಯರು ಒಪ್ಪಲಿಲ್ಲ. ಕೊಲೆ ಬೆದರಿಕೆ ಹಾಕಿದರು. ಅದಕ್ಕೆ ಓಡಿ ಹೋಗಿ ಮದುವೆಯಾಗಿದ್ದೇವೆ. ಈಗ ನಮಗೆ ನಮ್ಮ ಮನೆಯವರು ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಹಾಗಾಗಿ, ನಮಗೆ ರಕ್ಷಣೆ ಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗಂಡಸ್ತನ ಎಂದು ವಿವಾದ ಹುಟ್ಟಿಹಾಕುವುದು ಗಂಡಸ್ತನ ಅಲ್ಲ: ರೇಣುಕಾಚಾರ್ಯ

    ನಮಗೆ ಏನಾದರೂ ಆದರೆ ನಮ್ಮ ಮಾವಂದಿರೇ ಕಾರಣ ಎಂದು ಚಂದನಾ ಹೇಳಿದ್ದಾಳೆ. ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ನವಜೋಡಿ ಎಸ್ಪಿಗೆ ಮನವಿ ಮಾಡಿದ್ದಾರೆ. ಮಗಳ ಮದುವೆ ಬಗ್ಗೆ ಹೆತ್ತವರು ನೂರಾರು ಕನಸು ಕಟ್ಟಿಕೊಂಡಿರುತ್ತಾರೆ ನಿಜ. ಆದರೆ, ನಾವು ಇಂತವರ ಜೊತೆ ಇದ್ದರೆ ಚೆನ್ನಾಗಿರುತ್ತೇವೆ ಅನ್ನುವುದಾದರೆ ಇರಲಿ ಅನ್ನೋದು ಯೋಗಾನಂದ್ ಸ್ನೇಹಿತರ ಮಾತು.

     

  • ಧಾರವಾಡ ಎಸ್‍ಪಿ ಕಚೇರಿಗೆ ಕೊರೊನಾ ಕಂಟಕ- ಎರಡು ದಿನ ಕಚೇರಿಗೆ ಬರದಂತೆ ಸಿಬ್ಬಂದಿಗೆ ಸೂಚನೆ

    ಧಾರವಾಡ ಎಸ್‍ಪಿ ಕಚೇರಿಗೆ ಕೊರೊನಾ ಕಂಟಕ- ಎರಡು ದಿನ ಕಚೇರಿಗೆ ಬರದಂತೆ ಸಿಬ್ಬಂದಿಗೆ ಸೂಚನೆ

    ಧಾರವಾಡ: ನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೂ ಕೊರೊನಾ ಕಂಟಕ ಎದುರಾಗಿದೆ. ಕಚೇರಿಯಲ್ಲಿ ಕೆಲಸ ಮಾಡುವ ಎಎಸ್‍ಐಗೆ ಸೋಂಕು ತಗುಲಿದೆ.

    ನಗರದ ಹೊಸ ಬಸ್ ನಿಲ್ದಾಣದ ಬಳಿ ಇರುವ ಎಸ್‍ಪಿ ಕಚೇರಿಯಲ್ಲಿ ಕೆಲಸ ಮಾಡುವ ಎಎಸ್‍ಐಗೆ ಕೊರೊನಾ ಸೋಂಕು ತಗುಲಿದ್ದು, ಇದರಿಂದ ಇಡೀ ಎಸ್‍ಪಿ ಕಚೇರಿಯೇ ತಲ್ಲಣಗೊಂಡಿದೆ. ಎಎಸ್‍ಐಗೆ ಸೋಂಕು ತಗುಲಿದೆ ಎಂದು ತಿಳಿದ ತಕ್ಷಣ ಧಾರವಾಡ ಎಸ್‍ಪಿ ವರ್ತಿಕಾ ಕಟಿಯಾರ್ ಕಚೇರಿಯ ಸಿಬ್ಬಂದಿಗೆ ಎರಡು ದಿನಗಳ ಕಾಲ ಕಚೇರಿಯ ಬಳಿ ಸುಳಿಯದಂತೆ ಸೂಚನೆ ನೀಡಿದ್ದಾರೆ.

    ಎಸ್‍ಪಿ ಕಚೇರಿಯಲ್ಲಿರುವ ಪೊಲೀಸ್ ಕಂಟ್ರೋಲ್ ರೂಮಿನ ಇಬ್ಬರು ಸಿಬ್ಬಂದಿ ಮಾತ್ರ ಕೆಲಸಕ್ಕೆ ಹಾಜರಾಗಿದ್ದಾರೆ. ಇವರನ್ನು ಹೊರತು ಪಡಿಸಿ ಕಚೇರಿಯ ಸಿಬ್ಬಂದಿ ಕೆಲಸದ ಮೇಲೆ ಹೊರಗೆನೇ ಓಡಾಟ ನಡೆಸಿದ್ದಾರೆ. ಇನ್ನುಳಿದ ಮಹಿಳಾ ಸಿಬ್ಬಂದಿಗೆ ರಜೆ ಘೋಷಿಸಲಾಗಿದೆ. ಇದು ಎಸ್‍ಪಿ ಕಚೇರಿಯಲ್ಲಿ ನಡೆದಿದ್ದರೆ, ಮತ್ತೊಂದು ಕಡೆ ಧಾರವಾಡ ಶಹರ ಪೊಲೀಸ್ ಠಾಣೆಯ ಇಬ್ಬರು ಪೇದೆಗಳಿಗೆ ಸೋಂಕು ತಗುಲಿದೆ. ಕಳೆದ ವಾರವಷ್ಟೇ ಇದೇ ಶಹರ ಪೊಲೀಸ್ ಠಾಣೆಯ ಮಹಿಳಾ ಮುಖ್ಯ ಪೇದೆಗೆ ಕೊರೊನಾ ದೃಢ ಪಟ್ಟಿತ್ತು.

  • ಉನ್ನಾವೋದಲ್ಲಿ ಮತ್ತೊಂದು ಆಘಾತಕಾರಿ ಘಟನೆ – ಎಸ್‍ಪಿ ಕಚೇರಿ ಎದುರು ಬೆಂಕಿ ಹಚ್ಚಿಕೊಂಡ ಮಹಿಳೆ

    ಉನ್ನಾವೋದಲ್ಲಿ ಮತ್ತೊಂದು ಆಘಾತಕಾರಿ ಘಟನೆ – ಎಸ್‍ಪಿ ಕಚೇರಿ ಎದುರು ಬೆಂಕಿ ಹಚ್ಚಿಕೊಂಡ ಮಹಿಳೆ

    ಲಕ್ನೋ: ಉತ್ತರ ಪ್ರದೇಶದ ಉನ್ನಾವೋದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದ್ದು, ಎಸ್‍ಪಿ ಕಚೇರಿ ಬಳಿ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡಿದ್ದಾರೆ.

    ಸುಟ್ಟ ಗಾಯಗಳಾಗಿದ್ದ ಮಹಿಳೆಯನ್ನು ಕಾನ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದು, ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕಾನ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಸ್ಥಳೀಯರು ಧಾವಿಸಿದ್ದಾರೆ. ಮಹಿಳೆ ಸ್ಥಿತಿ ಗಂಭೀರವಾಗಿದ್ದು, ಸುಮಾರು ಶೇ.60-70ರಷ್ಟು ಸುಟ್ಟ ಗಾಯಗಳಾಗಿವೆ.

    ಪ್ರಕರಣದ ಕುರಿತು ಎಸ್‍ಪಿ ವಿಕ್ರಾಂತ್ ವೀರ್ ಪ್ರತಿಕ್ರಿಯಿಸಿ, ಅಕ್ಟೋಬರ್ 2ರಂದು ಮಹಿಳೆ ವ್ಯಕ್ತಿಯ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದರು. ಕಳೆದ 10 ವರ್ಷಗಳಿಂದ ಮಹಿಳೆ ಆರೋಪಿಯೊಂದಿಗೆ ಸಂಬಂಧ ಹೊಂದಿದ್ದರು. ನಂತರ ವ್ಯಕ್ತಿ ಸಂತ್ರಸ್ತೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಹೀಗಾಗಿ ಮಹಿಳೆಯು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ಆದರೆ ನಾವು ಬಂಧನ ಮಾಡುವಷ್ಟರಲ್ಲಿ ಆರೋಪಿಯು ಹೈಕೋರ್ಟ್‍ನಿಂದ ಆಗಲೇ ನಿರೀಕ್ಷಣಾ ಜಾಮೀನು ಪಡೆದಿದ್ದ ಎಂದು ವಿವರಿಸಿದ್ದಾರೆ.

    ಪ್ರಕರಣದ ಸಂಬಂಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಹಿಳೆಯು ಕೆಲ ದಿನಗಳಿಂದ ಪೊಲೀಸ್ ಠಾಣೆಗೆ ಆಗಮಿಸುತ್ತಿದ್ದಳು. ಮಹಿಳೆ ಹಸಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಹಳ್ಳಿಯವಳು ಎಂದು ವರದಿಯಲ್ಲಿ ತಿಳಿಸಲಾಗಿದೆ.

  • ಹೆತ್ತಮ್ಮನಿಗೆ ಬೆದರಿಕೆ ಒಡ್ಡಿದ ಮಕ್ಕಳು- ಆಶ್ರಯವಿಲ್ಲದೆ ಕಣ್ಣೀರಿಡುತ್ತಿರುವ ವೃದ್ಧ ತಾಯಿ

    ಹೆತ್ತಮ್ಮನಿಗೆ ಬೆದರಿಕೆ ಒಡ್ಡಿದ ಮಕ್ಕಳು- ಆಶ್ರಯವಿಲ್ಲದೆ ಕಣ್ಣೀರಿಡುತ್ತಿರುವ ವೃದ್ಧ ತಾಯಿ

    ಬಾಗಲಕೋಟೆ: ಹೆತ್ತವರನ್ನು ಸಾಕಲು ಯೋಗ್ಯತೆ ಇರದ ಪಾಪಿ ಮಕ್ಕಳು ತಾಯಿಗೆ ಪ್ರಾಣ ಬೆದರಿಕೆ ಹಾಕಿದ್ದು, ಮಕ್ಕಳ ದುಷ್ಟತನಕ್ಕೆ ಹೆದರಿ ಮನನೊಂದ ತಾಯಿ ಕಣ್ಣೀರಿಡುತ್ತಿದ್ದ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ.

    ನವನಗರ ನಿವಾಸಿ ಶಾಂತವ್ವ ತಳವಾರ್ ಮಕ್ಕಳಿಂದ ಬೆದರಿಕೆಗೆ ಒಳಗಾಗಿರುವ ನತದೃಷ್ಟ ತಾಯಿ. ನವನಗರದ 28ನೇ ಸೆಕ್ಟರ್ ನಿವಾಸಿಯಾಗಿರುವ ಶಾಂತವ್ವ ಅವರನ್ನು ಹೆತ್ತ ಮಕ್ಕಳು ನೋಡಿಕೊಳ್ಳುತ್ತಿಲ್ಲ. ಶಾಂತವ್ವ ಅವರಿಗೆ ಇಬ್ಬರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಓರ್ವ ಮಗ ಪರಶುರಾಮ್ ಹೊನ್ನಾವರದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರೆ, ಇನ್ನೋರ್ವ ಮಗ ಆಕಾಶ್ ಬಾಗಲಕೋಟೆಯಲ್ಲಿ ಕ್ರೂಸರ್ ಡ್ರೈವರ್ ಆಗಿದ್ದಾನೆ. ದುಡಿಯುವ ಎರಡು ಗಂಡು ಮಕ್ಕಳಿದ್ದರೂ ಯಾರೂ ಕೂಡ ತಾಯಿಯನ್ನ ನೋಡಿಕೊಳ್ಳುತ್ತಿಲ್ಲ. ಹೆತ್ತು, ಹೊತ್ತು, ಸಾಕಿದ ತಾಯಿಯನ್ನೆ ಮಕ್ಕಳು ಬೀದಿಗೆ ಬಿಟ್ಟಿದ್ದಾರೆ.

    ಮಕ್ಕಳು ತನಗೆ ಮಾಡುತ್ತಿದ್ದ ಕಿರಿಕಿರಿಯಿಂದ ನೊಂದ ತಾಯಿ ಮನೆ ಬಿಟ್ಟು ಬಂದಿದ್ದಾರೆ. ಜೊತೆಗೆ ಮಕ್ಕಳ ಬೆದರಿಕೆಗೆ ಹೆದರಿ ಕಣ್ಣೀರು ಹಾಕಿದ್ದಾರೆ. ಯಾರಾದರೂ ನನ್ನನ್ನು ವೃದ್ಧಾಶ್ರಮಕ್ಕೆ ಸೇರಿಸಿ ಎಂದು ಬೇಡಿಕೊಂಡಿದ್ದಾರೆ. ವೃದ್ಧ ತಾಯಿಯ ಸಹಾಯಕ್ಕೆ ಬಂದ ಪಬ್ಲಿಕ್ ಟಿವಿ ಪ್ರತಿನಿಧಿ ಮಾನವೀಯತೆ ಮರೆದಿದ್ದಾರೆ. ನೊಂದ ತಾಯಿಗೆ ಸಾಂತ್ವಾನ ಹೇಳಿ, ಹಿರಿಯ ನಾಗರಿಕರ ಸಹಾಯವಾಣಿ ಕಚೇರಿಗೆ ಕರೆದುಕೊಂಡು ಹೋಗಿ ಮಕ್ಕಳ ಬಗ್ಗೆ ದೂರು ದಾಖಲಿಸಿದ್ದಾರೆ. ಜೊತೆಗೆ ಎಸ್.ಪಿ ಕಚೇರಿಗೆ ಕರೆದೊಯ್ದು ಎಸ್.ಪಿ ಲೋಕೇಶ್ ಅವರಿಗೆ ಈ ವಿಷಯ ತಿಳಿಸಿ ತಾಯಿಗೆ ಸಹಾಯ ಮಾಡಿದ್ದಾರೆ.

  • ಕಾಂಗ್ರೆಸ್ ಮುಖಂಡನಿಂದ್ಲೇ ಮಗಳಿಗೆ ಕಿರುಕುಳ- ಪ್ರೀತ್ಸಿ ಮದ್ವೆಯಾದಾಕೆ ತಂದೆಗೆ ಮನವಿ

    ಕಾಂಗ್ರೆಸ್ ಮುಖಂಡನಿಂದ್ಲೇ ಮಗಳಿಗೆ ಕಿರುಕುಳ- ಪ್ರೀತ್ಸಿ ಮದ್ವೆಯಾದಾಕೆ ತಂದೆಗೆ ಮನವಿ

    ಹಾವೇರಿ: ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಮಗಳಿಗೆ ಕಾಂಗ್ರೆಸ್ ಮುಖಂಡನೊಬ್ಬ ಕಿರುಕುಳ ಕೊಡುತ್ತಿದ್ದು, ರಕ್ಷಣೆಕೋರಿ ಹಾವೇರಿ ಎಸ್‍ಪಿ ಕಚೇರಿಗೆ ನವಜೋಡಿ ಆಗಮಿಸಿದ್ದಾರೆ.

    ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕೆರೆಮಲ್ಲಾಪುರದ ಜಯವರ್ದನ್ ಹಾಗೂ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ನಿಖಿತಾ ಮಹಾನಶೆಟ್ಟರ್ ಪರಸ್ಪರ ಪ್ರೀತಿ ಮದುವೆಯಾಗಿದ್ದಾರೆ. ನನ್ನ ತಂದೆ ಶಿವಪ್ರಕಾಶ್ ಅವರು ಕಾಂಗ್ರೆಸ್ ಮುಖಂಡ ಹಾಗೂ ಗದಗಿನ ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ. ಅವರಿಗೆ ಇರುವ ಅಧಿಕಾರ ದುರುಪಯೋಗ ಮಾಡಿಕೊಂಡು ಇಬ್ಬರಿಗೂ ಕಿರುಕುಳ ನೀಡುತ್ತಿದ್ದಾರೆ ಎಂದು ನಿಖಿತಾ ದೂರಿದ್ದಾರೆ.

    ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ. ಚೆನ್ನಾಗಿ ಬದುಕುತ್ತೇವೆ. ನಮ್ಮ ಮೇಲಿನ ದ್ವೇಷಕ್ಕೆ ಬೇರೆಯವರಿಗೆ ತೊಂದರೆ ಕೊಡಬೇಡಿ ಅಂತಾ ನಿಖಿತಾ ತಂದೆಗೆ ಮನವಿ ಮಾಡಿಕೊಂಡಿದ್ದಾಳೆ.

    ಏನಿದು ಪ್ರಕರಣ?:
    ನಾನು ಮತ್ತು ಜಯವರ್ದನ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೇವು. ಈ ಕುರಿತು ಆರು ತಿಂಗಳ ಹಿಂದೆಯೇ ತಂದೆಗೆ ಹೇಳಿದ್ದೆ. ಆದರೆ ಅದಕ್ಕೆ ಒಪ್ಪಿರಲಿಲ್ಲ. ಹೀಗಾಗಿ ನಾವು ನವಂಬರ್ 16ರಂದು ರಿಜಿಸ್ಟರ್ ಮದುವೆಯಾಗಿದ್ದೇವೆ. ನಿಖಿತಾರನ್ನು ಅಪಹರಣ ಮಾಡಲಾಗಿದೆ ಅಂತಾ ಆರೋಪಿಸಿ ಶಿವಪ್ರಕಾಶ್ ಲಕ್ಷ್ಮೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಜಯವರ್ದನ್ ಅವರ ಮಾವನನ್ನು ಬಂಧಿಸಿ, ಕಿರುಕುಳ ನೀಡುತ್ತಿದ್ದಾರೆ. ರಿಜಿಸ್ಟರ್ ಆಫೀಸ್‍ನಲ್ಲಿ ನಮ್ಮ ಮದುವೆಗೆ ಸಹಿ ಹಾಕಿದವರಿಗೆ ತೊಂದರೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ನನ್ನ ಗೆಳತಿಯ ಮನೆಗೆ ಹೋಗಿ ಅವರ ತಾಯಿಯ ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಅವರಿಗೆ ಇರುವ ರಾಜಕೀಯ ಶಕ್ತಿ ಬಳಸಿಕೊಂಡು ನಮಗೆ ತೊಂದರೆ ಕೊಡುತ್ತಿದ್ದಾರೆ ಎಂದು ನಿಖಿತಾ ದೂರಿದ್ದಾರೆ.

    ನಮ್ಮ ತಾಯಿಯ ತವರುಮನೆ ಬೆಳ್ಳಟ್ಟಿ. ಅಲ್ಲಿಯೇ ನಾನು ಬೆಳೆದಿದ್ದು. ಅದೇ ಊರಿನ ನಿಖಿತಾ ಜೊತೆಗೆ ಪರಿಚಯ ಕೂಡ ಆಗಿತ್ತು. ಬಳಿಕ ಪರಸ್ಪರ ಪ್ರೀತಿ ಮಾಡಿದೇವು. ಈ ಕುರಿತು ನಿಖಿತಾ ಮನೆಯವರಿಗೆ ತಿಳಿಸಲಾಗಿತ್ತು. ಆದರೆ ಅವರು ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಹೀಗಾಗಿ ಮನೆಯವರ ವಿರೋಧದ ನಡುವೆಯೂ ರಿಜಿಸ್ಟರ್ ಮದುವೆ ಆಗಿದ್ದಕ್ಕೆ ನಮ್ಮನ್ನು ಹತ್ಯೆ ಮಾಡಲು ಶಿವಪ್ರಕಾಶ್ ಯತ್ನಿಸಿದ್ದರು. ಇಬ್ಬರೂ ತಪ್ಪಿಸಿಕೊಂಡು ಕಾಲ ಕಳೆಯುತ್ತಿದ್ದೇವು ಎಂದು ಜಯವರ್ದನ್ ತಿಳಿಸಿದರು.

    ಶಿವಪ್ರಕಾಶ್ ಅವರು ನಮ್ಮ ಕುಟುಂಬದವರಿಗೆ ಹಾಗೂ ಸ್ನೇಹಿತರಿಗೆ ತೊಂದರೆ ಕೊಡುತ್ತಿದ್ದಾರೆ. ರಾಜಕೀಯ ಬಲ ಬಳಸಿಕೊಂಡು ನಮ್ಮನ್ನು ಶಿರಹಟ್ಟಿಗೆ ಕರೆಸಿಕೊಂಡು, ಹಲ್ಲೆ ಮಾಡಲು ಯತ್ನಿಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಯಿಂದ ಬೇಸತ್ತು ಜೀವ ರಕ್ಷಣೆ ಕೇಳಿಕೊಂಡು ಹಾವೇರಿ ಎಸ್‍ಪಿ ಕಚೇರಿಗೆ ಬಂದಿದ್ದೇವೆ ಎಂದು ಜಯವರ್ದನ್ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನ್ಯಾಯ ಕೊಡಿಸಿ ಎಂದು ಎಸ್‍ಪಿ ಕಚೇರಿಯಲ್ಲೇ ವಿಷ ಕುಡಿದು ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ!

    ನ್ಯಾಯ ಕೊಡಿಸಿ ಎಂದು ಎಸ್‍ಪಿ ಕಚೇರಿಯಲ್ಲೇ ವಿಷ ಕುಡಿದು ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ!

    ಬೆಳಗಾವಿ: ಆಸ್ತಿ ವಿವಾದ ಬಗೆಹರಿಸಿ ತಮಗಿರುವ ಪ್ರಾಣ ಬೆದರಿಕೆಯಿಂದ ರಕ್ಷಣೆ ನೀಡಿ ತಮಗೆ ನ್ಯಾಯ ಕೊಡಿಸಿ ಎಂದು ಮಹಿಳೆಯೊಬ್ಬಳು ಎಸ್.ಪಿ ಕಚೇರಿಯಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಬೆಳಗಾವಿ ನಗರದ ಅನಂತಶೈನ ಗಲ್ಲಿಯ ನಿವಾಸಿ ಬಸವ್ವ ಕೊಪ್ಪದ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ತಮ್ಮ ತಂದೆಯ ಆಸ್ತಿಯನ್ನ ಬೇರೆಯವರು ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ ಎಂದು ಕೋರ್ಟ್‌ಗೆ ಹೋಗಿದ್ದಕ್ಕೆ ಅದೇ ಗ್ರಾಮದ ನಿವಾಸಿ ರಾಜು ತಳವಾರ ಎಂಬಾತ ಇವರಿಗೆ ಕೇಸ್ ಮರಳಿ ಪಡೆದುಕೊಳ್ಳುವಂತೆ ಧಮ್ಕಿ ಹಾಕಿದ್ದನಂತೆ. ಹೀಗಾಗಿ ತಂದೆಯ ಆಸ್ತಿಯನ್ನು ಉಳಿಸಿಕೊಡಿ ಎಂದು ಎಸ್‍ಪಿ ಕಚೇರಿಯಲ್ಲಿ ದೂರು ನೀಡಲು ಬಂದಿದ್ದಳು.

    ಎಸ್‍ಪಿ ಕಚೇರಿಯಲ್ಲಿದ್ದ ಪೊಲೀಸ್ ಸಿಬ್ಬಂದಿ ನನ್ನ ದೂರಿಗೆ ಸರಿಯಾಗಿ ಸ್ಪಂದಿಸಿಲ್ಲ ಎಂಬ ಕಾರಣಕ್ಕೆ ಅಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

    ಈ ಕುರಿತು ಎಸ್.ಪಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದು, ಇದು ಅಕ್ಕ ತಂಗಿಯರ ಜಗಳವಾಗಿದ್ದು ಇದನ್ನ ಬಗೆಹರಿಸಿ ಕಳುಹಿಸಿಕೊಟ್ಟಿದ್ದೆವು. ಇದಕ್ಕೆ ಒಪ್ಪದ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ನಮ್ಮ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಹೀಗಾಗಿ ಆಕೆಯ ಮೇಲೆ ಐಪಿಸಿ ಸೆಕ್ಷನ್ 309(ಆತ್ಮಹತ್ಯೆ ಯತ್ನ) ಅಡಿಯಲ್ಲಿ ದೂರು ದಾಖಲಿಸಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಡ್ಯ ಎಸ್ಪಿ ಕಚೇರಿ ಮುಂದೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    ಮಂಡ್ಯ ಎಸ್ಪಿ ಕಚೇರಿ ಮುಂದೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    ಮಂಡ್ಯ: ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯದ ಎಸ್ಪಿ ಕಚೇರಿಯಲ್ಲಿ ನಡೆದಿದೆ.

    ಮಂಡ್ಯ ತಾಲೂಕು ಹೊಳಲು ಗ್ರಾಮದ ಸುಕನ್ಯಾ(35) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಎಸ್‍ಎಸ್‍ಎಲ್‍ಸಿ ಓದುತ್ತಿದ್ದ ಸುಕನ್ಯಾ ಅವರ ಪುತ್ರಿ ಜೂನ್ 22ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಆದರೆ ಈ ಕುರಿತು ಪೊಲೀಸರು ಪ್ರಕರಣ ದಾಖಲ ಮಾಡಿಕೊಂಡಿರಲಿಲ್ಲ. ಇದರಿಂದ ಮನನೊಂದ ಸುಕನ್ಯಾ ಅವರು ಮಗಳ ಸಾವಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವಂತೆ ಇಂದು ಎಸ್ಪಿ ಕಚೇರಿಗೆ ಬಂದಿದ್ದರು.

    ಎಸ್ಪಿ ಕಚೇರಿ ಮುಂದೆ ನಿಂತಿದ್ದ ಸುಕನ್ಯಾ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಯತ್ನಸಿದ್ದರು. ತಕ್ಷಣವೇ ಜಾಗೃತಗೊಂಡ ಪೊಲೀಸರು ಬೆಂಕಿ ಹತ್ತದಂತೆ ಎಚ್ಚರಿಕೆ ವಹಿಸಿ, ನಂತರ ಸುಕನ್ಯಾ ಅವರನ್ನು ವಶಕ್ಕೆ ಪಡೆದಿದ್ದಾರೆ.

  • ಟಾಯ್ಲೆಟ್ ಗುಂಡಿ ವಿಚಾರಕ್ಕೆ ಗಲಾಟೆ: ಮಂಡ್ಯ ಎಸ್‍ಪಿ ಕಚೇರಿಯ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಯತ್ನ

    ಟಾಯ್ಲೆಟ್ ಗುಂಡಿ ವಿಚಾರಕ್ಕೆ ಗಲಾಟೆ: ಮಂಡ್ಯ ಎಸ್‍ಪಿ ಕಚೇರಿಯ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಯತ್ನ

    ಮಂಡ್ಯ: ಶೌಚಾಲಯ ನಿರ್ಮಾಣದ ವಿಷಯವಾಗಿ ಉಂಟಾಗಿದ್ದ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ್ದರೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಮನನೊಂದು ವ್ಯಕ್ತಿಯೊಬ್ಬರು ಎಸ್‍ಪಿ ಕಚೇರಿಯ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಮಂಡ್ಯ ತಾಲೂಕಿನ ಕಿರಗಂದೂರು ಗ್ರಾಮದ ನಿವಾಸಿ ಸತ್ಯನಾರಾಯಣ ಎಂಬಾತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರು. ಇವರ ಮನೆ ಪಕ್ಕದಲ್ಲಿಯೇ ಸತೀಶ್ ಎಂಬುವರು ಶೌಚಾಲಯ ನಿರ್ಮಾಣಕ್ಕಾಗಿ ಗುಂಡಿಯನ್ನು ತೆಗೆಸುತ್ತಿದ್ದರು. ಆದರೆ ಗುಂಡಿ ತೆಗೆದರೆ ನಮ್ಮ ಮನೆಗೆ ಕೆಟ್ಟ ವಾಸನೆ ಬರುತ್ತದೆ ಎಂಬ ಕಾರಣಕ್ಕೆ ಸತ್ಯನಾರಾಯಣ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

    ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೊನೆಗೆ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಜೊತೆಗೆ ಗಲಾಟೆ ನಡೆದ ವೇಳೆ ಸತ್ಯನಾರಾಯಣ ಮತ್ತು ಅವರ ಕುಟುಂಬದವರನ್ನು ಅವ್ಯಾಚ್ಯ ಪದಗಳಿಂದ ನಿಂದಿಸಿದ್ದಾನೆ ಎಂದು ಆರೋಪಿಸುತ್ತಿದ್ದಾರೆ. ಆದರೆ ದೂರು ಕೊಟ್ಟು ಇಷ್ಟು ದಿನಗಳಾದರೂ ಸಮಸ್ಯೆ ಬಗೆಹರಿದಿಲ್ಲ. ಇದರಿಂದ ಮನನೊಂದು ಸತ್ಯನಾರಾಯಣ ಇಂದು ಎಸ್‍ಪಿ ಕಚೇರಿ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಕೂಡಲೇ ಅವರ ಜೊತೆಗಿದ್ದವರು, ಪೊಲೀಸರ ಸಹಾಯದೊಂದಿಗೆ ಸಮೀಪದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆದರೆ ಅವರು ಅವಧಿ ಮೀರಿದ ವಿಷವನ್ನು ಸೇವಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.