Tag: SP Leader

  • 23 ತಿಂಗಳ ಜೈಲುವಾಸದ ಬಳಿಕ ಜಾಮೀನು – ಎಸ್ಪಿ ನಾಯಕ ಅಜಮ್ ಖಾನ್ ಬಿಡುಗಡೆ

    23 ತಿಂಗಳ ಜೈಲುವಾಸದ ಬಳಿಕ ಜಾಮೀನು – ಎಸ್ಪಿ ನಾಯಕ ಅಜಮ್ ಖಾನ್ ಬಿಡುಗಡೆ

    ಲಕ್ನೋ: 23 ತಿಂಗಳ ಜೈಲುವಾಸದ ಬಳಿಕ ಇಂದು (ಸೆ.23) ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಮ್ ಖಾನ್ (Azam Khan) ಅವರು ಉತ್ತರಪ್ರದೇಶದ (Uttara Pradesh) ಸೀತಾಪುರ (Sitapur) ಜೈಲಿನಿಂದ ಬಿಡುಗಡೆಯಾದರು.

    ಸೆ.10ರಂದು ಅಲಹಾಬಾದ್ ಹೈಕೋರ್ಟ್ ಅಜಮ್ ಖಾನ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ನ್ಯಾಯಾಲಯ ವಿಧಿಸಿದ ದಂಡ ಪಾವತಿ ಹಾಗೂ ಇನ್ನಿತರ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸದ ಹಿನ್ನೆಲೆ ಬಿಡುಗಡೆ ತಡವಾಗಿತ್ತು. ಬಳಿಕ ಇಂದು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಬಿಡುಗಡೆ ಮಾಡಲಾಯಿತು.ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆ – 7 ಮಂದಿ ಬಲಿ

    ಇನ್ನೂ ಅಜಮ್ ಖಾನ್ ಬಿಡುಗಡೆ ಹಿನ್ನೆಲೆ ಸೀತಾಪುರ ನಗರದಲ್ಲಿ ಸೆಕ್ಷನ್ 144ರ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಹೀಗಾಗಿ ಅಜಮ್ ಖಾನ್ ಬಿಡುಗಡೆ ವೇಳೆ ಬಂದಿದ್ದ ಬೆಂಬಲಿಗರ ಗುಂಪನ್ನು ಹೆಚ್ಚು ಕಾಲ ಜೈಲಿನ ಗೇಟ್ ಬಳಿ ನಿಲ್ಲಲು ಅವಕಾಶ ನೀಡಲಿಲ್ಲ ಎಂದು ತಿಳಿದುಬಂದಿದೆ.

    ಎಸ್ಪಿ ನಾಯಕ ಅಜಮ್ ಖಾನ್ ಅವರ ವಿರುದ್ಧ ಒಟ್ಟು 104 ಪ್ರಕರಣಗಳಿದ್ದು, ಆ ಪೈಕಿ 12 ಪ್ರಕರಣಗಳಲ್ಲಿ ತೀರ್ಪು ನೀಡಲಾಗಿದೆ. ಇನ್ನೂ 5 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದ್ದು, 7 ಪ್ರಕರಣಗಳು ಖುಲಾಸೆಯಾಗಿವೆ. ಪ್ರಸ್ತುತ 59 ಪ್ರಕರಣಗಳು ಸೆಷನ್ಸ್ ನ್ಯಾಯಾಲಯದಲ್ಲಿ ಹಾಗೂ 19 ಪ್ರಕರಣಗಳು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ಸದ್ಯ ಹೈಕೋರ್ಟ್‌ನಿಂದ ಜಾಮೀನು ಮಂಜೂರಾದ ಹಿನ್ನೆಲೆ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಇಬ್ಲೂರು ಜಂಕ್ಷನ್ ಟ್ರಾಫಿಕ್ ಸಮಸ್ಯೆ: ಅಜೀಂ ಪ್ರೇಮ್ ಜೀಗೆ ಸಿಎಂ ಪತ್ರ

     

  • ಮೋದಿ ಮತ್ತೆ ಪ್ರಧಾನಿಯಾಗಲಿ: ಮುಲಾಯಂ ಸಿಂಗ್ ಯಾದವ್

    ಮೋದಿ ಮತ್ತೆ ಪ್ರಧಾನಿಯಾಗಲಿ: ಮುಲಾಯಂ ಸಿಂಗ್ ಯಾದವ್

    ನವದೆಹಲಿ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಹೇಳುವ ಮೂಲಕ ವಿಪಕ್ಷಗಳಿಗೆ ಶಾಕ್ ನೀಡಿದ್ದಾರೆ.

    ಇಂದು ಲೋಕಸಭಾ ಅಧಿವೇಶನಲ್ಲಿ ಮಾತನಾಡಿದ ಅವರು, ಸದನದಲ್ಲಿ ಸೇರಿರುವ ಎಲ್ಲ ಸದಸ್ಯರಿಗೂ ನಾನೊಂದು ಮನನಿ ಸಲ್ಲಿರುತ್ತಿರುವೆ. ನರೇಂದ್ರ ಮೋದಿ ಅವರನ್ನು ನಾನು ಅಭಿನಂದಿಸುತ್ತಿದ್ದೇನೆ. ಮೋದಿ ಮತ್ತೊಂದು ಅವಧಿಗೆ ಪ್ರಧಾನಿಯಾಗಿ ಮಾಡಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಕೈಮುಗಿದು ಕೇಳಿಕೊಂಡಿದ್ದಾರೆ.

    ನಾನು ಮೋದಿ ಅವರನ್ನು ಭೇಟಿಯಾಗಿ ಯಾವೆಲ್ಲ ಕೆಲಸ ಮಾಡಬೇಕು ಎಂದು ಹೇಳಿದ್ದೇನೋ ಆ ಎಲ್ಲ ಕೆಲಸಗಳು ಪೂರ್ಣವಾಗಿದೆ. ಈ ಅನುಭವ ನನಗೆ ಆಗಿದೆ ಎಂದು ಹೇಳಿ ಪ್ರಧಾನಿ ಕೆಲಸವನ್ನು ಹೊಗಳಿದ್ದಾರೆ. ಮುಲಾಯಂ ಸಿಂಗ್ ಈ ರೀತಿ ಹೇಳುವಾಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಹತ್ತಿರವೇ ಕುಳಿತಿದ್ದರು.

    ಈ ವೇಳೆ ಆಡಳಿತ ಪಕ್ಷದ ಸದಸ್ಯರು ಮೆಜು ತಟ್ಟಿ ಮುಲಾಯಂ ಸಿಂಗ್ ಯಾದವ್ ಅವರಿಗೆ ಬೆಂಬಲ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಕೂಡ ಕೈಮುಗಿದು ನಗೆ ಬೀರಿ ಕೈ ಮುಗಿದು ಧನ್ಯವಾದ ತಿಳಿಸಿದರು.

    ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರನ್ನು ಕಟ್ಟಿಹಾಕಲು ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ಅಖಿಲೇಶ್ ಯಾದವ್ ರಣತಂತ್ರ ರೂಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ಜೊತೆ ಸೇರಿ ಉತ್ತರ ಪ್ರದೇಶದ ಸೀಟ್‍ಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ರಾಷ್ಟ್ರಮಟ್ಟದಲ್ಲಿ ಮಹಾಘಟಬಂಧನದಲ್ಲೂ ಅಖಿಲೇಶ್ ಯಾದವ್ ಗುರುತಿಸಿಕೊಂಡಿದ್ದಾರೆ.

    ಒಂದು ಕಡೆ ಪುತ್ರ ಅಖಿಲೇಶ್ ಯಾದವ್ ಅವರು ಬಿಜೆಪಿಯನ್ನು ಸೋಲಿಸಲು ಮುಂದಾಗಿದರೆ, ತಂದೆ ಮುಲಾಯಂ ಸಿಂಗ್ ಯಾದವ್ ನರೇಂದ್ರ ಮೋದಿ ಅವರೇ ಮತ್ತೊಂದು ಅವಧಿಗೆ ಪ್ರಧಾನಿಯಾಗಲಿ ಎಂದು ಮನವಿ ಮಾಡಿಕೊಂಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv