Tag: SP K. Parashurama

  • ಪ್ರಧಾನಿ ಮೋದಿ ಪರ ಪೋಸ್ಟ್ ಹಾಕಿದ ಹೆಡ್ ಕಾನ್ಸ್ ಸ್ಟೇಬಲ್ ಅಮಾನತು

    ಪ್ರಧಾನಿ ಮೋದಿ ಪರ ಪೋಸ್ಟ್ ಹಾಕಿದ ಹೆಡ್ ಕಾನ್ಸ್ ಸ್ಟೇಬಲ್ ಅಮಾನತು

    ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಪರ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಜಿಲ್ಲೆಯ ರಾಣೇಬೆನ್ನೂರು ನಗರ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಒಬ್ಬರನ್ನು ಅಮಾನತು ಮಾಡಲಾಗಿದೆ.

    ರಾಣೇಬೆನ್ನೂರು ನಗರ ಠಾಣೆಯ ಜಯಂತ ಬಳಿಗಾರ ಅಮಾನತಾದ ಹೆಡ್ ಕಾನ್ಸ್ ಸ್ಟೇಬಲ್. ಜಯಂತ ಬಳಿಗಾರ ಅವರನ್ನು ಎಸ್‍ಪಿ ಕೆ.ಪರಶುರಾಮ ಅಮಾನತು ಮಾಡುವಂತೆ ಆದೇಶ ಮಾಡಿದ್ದಾರೆ.

    ಕಾನ್ಸ್ ಸ್ಟೇಬಲ್ ಜಯಂತ ಬಳಿಗಾರ ಅವರು ಜಮ್ಮು ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ವಾಟ್ಸಾಪ್ ಗುಂಪಿನಲ್ಲಿ ಪೋಸ್ಟ್ ಹಾಕಿದ್ದರು ಎನ್ನಲಾಗಿದೆ. `ನಮ್ಮ ರಾಜ್ಯಕ್ಕೆ ಬೇಕು ಮೋದಿ ಬಲ’ ಎಂದು ಹೇಳಿ ಪೋಸ್ಟ್ ಮುಕ್ತಾಯ ಮಾಡಿದ್ದಾರೆ. ಇದನ್ನು ಎಸ್‍ಪಿ ಕೆ.ಪರಶುರಾಮ ಗಮನಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಇದೀಗ ಜಯಂತ ಅವರನ್ನು ಹುದ್ದೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.