Tag: sp

  • ಲೋಕಸಭೆಯಲ್ಲಿ ಅಯೋಧ್ಯೆ ಸೋಲಿನ ಸೇಡನ್ನು ತೀರಿಸಿದ ಬಿಜೆಪಿ

    ಲೋಕಸಭೆಯಲ್ಲಿ ಅಯೋಧ್ಯೆ ಸೋಲಿನ ಸೇಡನ್ನು ತೀರಿಸಿದ ಬಿಜೆಪಿ

    ಲಕ್ನೋ: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಅಯೋಧ್ಯೆ (Ayodhya) ಸೋಲಿನ ಸೇಡನ್ನು ಬಿಜೆಪಿ ಈಗ ಮಿಲ್ಕಿಪುರ ಉಪಚುನಾವಣೆ ಗೆಲ್ಲುವ ಮೂಲಕ ತೀರಿಸಿಕೊಂಡಿದೆ.

    ಅಯೋಧ್ಯೆ ಜಿಲ್ಲೆಯ ಮಿಲ್ಕಿಪುರ ಉಪಚುನಾವಣೆಯಲ್ಲಿ (Milkipur Election) ಬಿಜೆಪಿಯ ಚಂದ್ರಬಾಬು ಪಾಸ್ವಾನ್‌ ಅವರು 61,710 ಮತಗಳಿಂದ ಗೆದ್ದಿದ್ದಾರೆ.

    ‌ಚಂದ್ರಬಾಬು ಪಾಸ್ವಾನ್‌ ಅವರು 1,46,397 ಮತಗಳನ್ನು ಪಡೆದರೆ ಸಮಾಜವಾದಿ ಪಕ್ಷದ ಅಜಿತ್‌ ಪ್ರಸಾದ್‌ ಅವರು 84,687 ಮತ ಪಡೆದರು. ಇದನ್ನೂ ಓದಿ: ದಿಲ್ಲಿ ಗೆದ್ದಾಯ್ತು.. 2026ಕ್ಕೆ ಬಂಗಾಳ ಟಾರ್ಗೆಟ್‌: ಮಮತಾ ಬ್ಯಾನರ್ಜಿಗೆ ಬಿಜೆಪಿ ಎಚ್ಚರಿಕೆ

    ಈ ಕ್ಷೇತ್ರದ ಎಸ್‌ಪಿ ಶಾಸಕರಾಗಿದ್ದ ಅವದೇಶ್‌ ಪ್ರಸಾದ್‌ ಅವರು ಅಯೋಧ್ಯೆ ಜಿಲ್ಲೆಯ ಫೈಜಾಬಾದ್‌ ಲೋಕಸಭಾ ಕ್ಷೇತ್ರವನ್ನು ಗೆದ್ದಿದ್ದರಿಂದ ಇಲ್ಲಿ ಉಪಚುನಾವಣೆ ನಡೆದಿತ್ತು. ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯಾದ ನಂತರ ನಡೆದ ಚುನಾವಣೆಯಲ್ಲಿ ಫೈಜಾಬಾದ್‌ನಲ್ಲಿ ಸೋತಿತ್ತು ಬಿಜೆಪಿಗೆ ಭಾರೀ ಹಿನ್ನಡೆಯಾಗಿತ್ತು ಮತ್ತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.


    2022ರಲ್ಲಿ ನಡೆದ ಚುನಾವಣೆಯಲ್ಲಿ ಅವದೇಶ್‌ ಪ್ರಸಾದ್‌ ಅವರು 13,338 ಮತಗಳ ಅಂತರದಿಂದ ಜಯಗಳಿಸಿದ್ದರು. ಅವದೇಶ್‌ ಪ್ರಸಾದ್‌ ಅವರು 1,03,905 ಮತ ಪಡೆದರೆ ಬಿಜೆಪಿಯ ಬಾಬಾ ಗೋರಖನಾಥ್‌ ಅವರು 90,567 ಮತಗಳನ್ನು ಪಡೆದಿದ್ದರು.

     

  • ಎಸ್‌ಪಿ ಸಂಸದೆಯ ಜೊತೆ ಕ್ರಿಕೆಟಿಗ ರಿಂಕು ಸಿಂಗ್‌ ಎಂಗೇಜ್‌, ಶೀಘ್ರವೇ ಮದ್ವೆ

    ಎಸ್‌ಪಿ ಸಂಸದೆಯ ಜೊತೆ ಕ್ರಿಕೆಟಿಗ ರಿಂಕು ಸಿಂಗ್‌ ಎಂಗೇಜ್‌, ಶೀಘ್ರವೇ ಮದ್ವೆ

    ಲಕ್ನೋ: ಟೀಂ ಇಂಡಿಯಾದ ಟಿ20 ಆಟಗಾರ ರಿಂಕು ಸಿಂಗ್‌ (Rinku Sigh) ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ (Priya Saroj) ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಶೀಘ್ರವೇ ಇಬ್ಬರ ಮದುವೆ (Marriage) ನಡೆಯಲಿದೆ ಎಂಬ ಸುದ್ದಿ ಈಗ ವೈರಲ್‌ ಆಗಿದೆ.

    ಈ ಸುದ್ದಿಯ ಬಗ್ಗೆ ಪ್ರಿಯಾ ಅವರ ತಂದೆ ತುಫಾನಿ ಸರೋಜ್‌ ಪ್ರತಿಕ್ರಿಯಿಸಿ, ರಿಂಕು ಅವರ ಕುಟುಂಬ ಮದುವೆ ಪ್ರಸ್ತಾಪ ಕಳುಹಿಸಿದೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ತಿಳಿಸಿದರು.

    ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಈ ಸುದ್ದಿಯ ಬಗ್ಗೆ ಇಲ್ಲಿಯವರೆಗೆ ರಿಂಕು ಸಿಂಗ್‌ ಆಗಲಿ ಸಂಸದೆ ಪ್ರಿಯಾ ಸರೋಜ್‌ ಖಚಿತಪಡಿಸಿಲ್ಲ.

    ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ (Team India) ಸದಸ್ಯರಾಗಿದ್ದ ರಿಂಕು ಮುಂದಿನ ವಾರದಿಂದ ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಲಿದ್ದಾರೆ.

    27 ವರ್ಷದ ರಿಂಕು ಆಗಸ್ಟ್ 2023 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನಂತರ ಇಲ್ಲಿಯವರೆಗೆ ಎರಡು ಏಕದಿನ ಮತ್ತು 30 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಇಲ್ಲಿಯವರೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 562 ರನ್ ಗಳಿಸಿದ್ದಾರೆ.

    ತಮ್ಮ ಫಿನಿಶಿಂಗ್ ಕೌಶಲ್ಯಕ್ಕೆ ಹೆಸರುವಾಸಿಯಾಗಿರುವ ರಿಂಕು ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಪ್ರತಿನಿಧಿಸುತ್ತಾರೆ. ಇದನ್ನೂ ಓದಿ: ಎಸ್‌ಪಿ ಸಂಸದೆಯ ಜೊತೆ ಕ್ರಿಕೆಟಿಗ ರಿಂಕು ಸಿಂಗ್‌ ಎಂಗೇಜ್‌, ಶೀಘ್ರವೇ ಮದ್ವೆ

    ಪ್ರಿಯಾ ಅವರು ಉತ್ತರ ಪ್ರದೇಶದ ಮಚ್ಲಿಶಹರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆ ಆಗಿದ್ದಾರೆ.  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬಿಪಿ ಸರೋಜ್ ಅವರನ್ನು 35,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು.

    ಪ್ರಿಯಾ ಅವರ ತಂದೆ ತುಫಾನಿ ಸರೋಜ್ ಅವರು ಮೂರು ಬಾರಿ ಸಂಸದರಾಗಿದ್ದಾರೆ ಮತ್ತು ಹಾಲಿ ಕೆರಕಟ್‌ ಕ್ಷೇತ್ರದ ಶಾಸಕರಾಗಿದ್ದಾರೆ.

  • ಎಸ್‌ಪಿ ಶಾಸಕನ ಪುತ್ರಿಯೊಂದಿಗೆ ಮಗನ ಮದ್ವೆ – ಪಕ್ಷದ ನಾಯಕನನ್ನೇ ಉಚ್ಛಾಟಿಸಿದ ಮಾಯಾವತಿ

    ಎಸ್‌ಪಿ ಶಾಸಕನ ಪುತ್ರಿಯೊಂದಿಗೆ ಮಗನ ಮದ್ವೆ – ಪಕ್ಷದ ನಾಯಕನನ್ನೇ ಉಚ್ಛಾಟಿಸಿದ ಮಾಯಾವತಿ

    ಲಕ್ನೋ: ಸಮಾಜವಾದಿ ಪಕ್ಷದ (SP) ಶಾಸಕನ ಮಗಳ ಜೊತೆ ಮಗನ ಮದುವೆ ಮಾಡಿಸಿದ್ದಕ್ಕೆ ಬಿಎಸ್‌ಪಿ (BSP) ಹಿರಿಯ ನಾಯಕನನ್ನು ಪಕ್ಷದಿಂದಲೇ ಮಾಯಾವತಿ (Mayawati) ಉಚ್ಛಾಟನೆ ಮಾಡಿದ್ದಾರೆ.

    ಬರೇಲಿಯ ಬಿಎಸ್‌ಪಿ ಪ್ರಭಾವಿ ನಾಯಕ ಸುರೇಂದ್ರ ಸಾಗರ್ (Surendra Sagar)  ಅವರ ಪುತ್ರನ ವಿವಾಹ ಎಸ್‌ಪಿ ಶಾಸಕ ತ್ರಿಭುವನ್ ದತ್ ಅವರ ಪುತ್ರಿಯ ಜೊತೆ ನಡೆದಿತ್ತು. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav ) ಇತ್ತೀಚೆಗೆ ಅಂಬೇಡ್ಕರ್ ನಗರದಲ್ಲಿರುವ ದತ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.

    ಬರೇಲಿ ವಿಭಾಗದ ಪ್ರಮುಖ ಬಿಎಸ್‌ಪಿ ನಾಯಕರಾದ ಸುರೇಂದ್ರ ಸಾಗರ್ ಅವರು ಐದು ಬಾರಿ ರಾಂಪುರದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಕ್ಯಾಬಿನೆಟ್ ಸಚಿವ ಸ್ಥಾನಮಾನವನ್ನು ಅಲಂಕರಿಸಿದ್ದರು. ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಅಶಿಸ್ತಿನ ಕಾರಣ ನೀಡಿ ಉಚ್ಚಾಟಿಸಲಾಗಿದೆ ಎಂದು ಬಿಎಸ್‌ಪಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

    ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುರೇಂದ್ರ ಸಾಗರ್, ನಾನು ಯಾವುದೇ ಅಶಿಸ್ತು ತೋರಿಲ್ಲ. ನನ್ನ ಮಗ ಅಂಕುರ್‌ನನ್ನು ಎಸ್‌ಪಿ ಶಾಸಕ ತ್ರಿಭುವನ್ ದತ್ ಅವರ ಮಗಳ ಜೊತೆ ಮದುವೆ ಮಾಡಿ ಕೊಟ್ಟಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ನಾನು 3 ನಿಮಿಷ ಮಾತ್ರ ಸ್ಥಳದಲ್ಲಿ ಕುಳಿತಿದ್ದೆ, 30 ನಿಮಿಷ ಕ್ಯಾಂಟೀನ್‌ನಲ್ಲಿ ಇದ್ದೆ: ಮನುಸಿಂಘ್ವಿ

    ಮಾಯಾವತಿ ಈ ರೀತಿಯ ಕ್ರಮ ಕೈಗೊಳ್ಳುವುದು ಇದೇ ಮೊದಲಲ್ಲ. ಮೀರಾಪುರ ಉಪಚುನಾವಣೆಯಲ್ಲಿ ಎಸ್‌ಪಿಯಿಂದ ಸ್ಪರ್ಧಿಸಿದ್ದ ಖಾದಿರ್ ರಾಣಾ ಅವರ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಭಾಗೀಯ ಉಸ್ತುವಾರಿಯಾಗಿದ್ದ ಪ್ರಶಾಂತ್ ಗೌತಮ್ ಅವರನ್ನು ಹುದ್ದೆಯಿಂದ ತೆಗೆದುಹಾಕಿದ್ದರು.

    ಎಸ್‌ಪಿಯೊಂದಿಗೆ ಮೈತ್ರಿ ಅಥವಾ ಒಡನಾಟ ಹೊಂದಿದ್ದರೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಮಾಯಾವತಿ ಈ ಮೊದಲೇ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದ್ದರು.

     

  • ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್‌ಗೆ 7 ವರ್ಷ ಜೈಲು ಶಿಕ್ಷೆ

    ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್‌ಗೆ 7 ವರ್ಷ ಜೈಲು ಶಿಕ್ಷೆ

    ಲಕ್ನೋ: ಕಾನ್ಪುರದ (Kanpur) ಜಾಜ್ಮೌ ಪ್ರದೇಶದಲ್ಲಿ ಬೆಂಕಿ ಹಚ್ಚಿ ಮನೆ ಸುಟ್ಟ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್‌ ಸೋಲಂಕಿಗೆ (Irfan Solanki) 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕಾನ್ಪುರದ ಸಂಸದ-ಶಾಸಕ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

    ಮನೆಗೆ ಬೆಂಕಿಯಿಟ್ಟ ಪ್ರಕರಣದಲ್ಲಿ ಸೋಲಂಕಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಆತನ ಸಹೋದರ ರಿಜ್ವಾನ್ ಸೋಲಂಕಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಲ್ಲರಿಗೂ ಶಿಕ್ಷೆ ವಿಧಿಸಲಾಗಿದೆ. 2022ರ ನವೆಂಬರ್‌ನಲ್ಲಿ ಜಾಜ್ಮೌದಲ್ಲಿ ವಿಡಿಪಿಡಬ್ಲ್ಯೂ ಅವರ ಮನೆಗೆ ಬೆಂಕಿ ಹಚ್ಚಿದ ಆರೋಪ ಸಮಾಜವಾದಿ ಪಕ್ಷದ ನಾಯಕರ ಮೇಲಿದೆ. ಇದನ್ನೂ ಓದಿ: ಮಹಾರಾಷ್ಟ್ರ ಡಿಸಿಎಂ ಫಡ್ನವೀಸ್‌ ರಾಜೀನಾಮೆ ಪ್ರಸ್ತಾಪ ತಿರಸ್ಕರಿಸಿದ ಅಮಿತ್‌ ಶಾ

    ಕೋರ್ಟ್‌ ಆದೇಶದಿಂದಾಗಿ ಸೋಲಂಕಿ, ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ. ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಒಳಗಾಗುವ ಯಾವುದೇ ಶಾಸಕರು ತಮ್ಮ ಸ್ಥಾನದಿಂದ ಅನರ್ಹರಾಗುತ್ತಾರೆ. ಗಂಭೀರ ಕ್ರಿಮಿನಲ್‌ ಅಪರಾಧ ಹೊಂದಿರುವ ವ್ಯಕ್ತಿ ಶಾಸಕರಾಗಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ ಎಂದು ಕಾನೂನು ಹೇಳುತ್ತದೆ. ಪ್ರತಿ ಅಪರಾಧಿಗೆ ಒಟ್ಟು 30,500 ರೂ. ದಂಡವನ್ನು ವಿಧಿಸಲಾಗಿದೆ.

    ನಜೀರ್‌ ಫಾತಿಮಾ ಪರವಾಗಿ ಜಾಜ್ಮೌ ಪೊಲೀಸ್‌ ಠಾಣೆಯಲ್ಲಿ 2022ರ ನವೆಂಬರ್‌ 8 ರಂದು ಪ್ರಕರಣ ದಾಖಲಾಗಿತ್ತು. ಶಾಸಕ ಸೇರಿ ಒಟ್ಟು 12 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ತನ್ನ ಮನೆಯನ್ನು ಎಲ್ಲರೂ ಸುಟ್ಟು ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. ಇದನ್ನೂ ಓದಿ: ನರೇಂದ್ರ ಮೋದಿ ಪ್ರಮಾಣವಚನಕ್ಕೆ ಬಿಎಸ್‌ವೈಗೆ ಆಹ್ವಾನ

  • ಅಧಿಕಾರಕ್ಕೆ ಬಂದರೆ ಮೊಬೈಲ್‌ ಡೇಟಾಗೆ 500 ರೂ. ಫ್ರೀ – ಅಖಿಲೇಶ್‌ ಯಾದವ್‌ ಘೋಷಣೆ

    ಅಧಿಕಾರಕ್ಕೆ ಬಂದರೆ ಮೊಬೈಲ್‌ ಡೇಟಾಗೆ 500 ರೂ. ಫ್ರೀ – ಅಖಿಲೇಶ್‌ ಯಾದವ್‌ ಘೋಷಣೆ

    ಲಕ್ನೋ: ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮೊಬೈಲ್ ಡೇಟಾಗೆ (Mobile Data) ಉಚಿತವಾಗಿ 500 ರೂ. ಹಣವನ್ನು ಎಲ್ಲಾ ಬಿಪಿಎಲ್‌ (BPL) ಪಡಿತರ ಕಾರ್ಡ್‌ ಹೊಂದಿದ ಗ್ರಾಹಕರಿಗೆ ನೀಡಲಾಗುವುದು ಎಂದು ಸಮಾಜವಾದಿ ಪಕ್ಷ ಹೇಳಿದೆ.

    ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ (Akhilesh Yadav) ಪಕ್ಷದ ಕಚೇರಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು ಉಚಿತ ಲ್ಯಾಪ್‌ಟಾಪ್ ನೀಡಿದ ನಂತರ ಸಮಾಜದಲ್ಲಿ ದೊಡ್ಡ ಬದಲಾವಣೆಯಾಗಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಗೆದ್ದು ಅಧಿಕಾರಕ್ಕೆ ಏರಿದರೆ ಮೊಬೈಲ್‌ ಡೇಟಾಗೆ 500 ರೂ. ನೀಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಮಂಗಳೂರಿನಲ್ಲಿ ರೋಡ್‌ ಶೋ, ಮೈಸೂರಿನಲ್ಲಿ ಸಮಾವೇಶ – ಮೋದಿ ಕಾರ್ಯಕ್ರಮದಲ್ಲಿ ಬದಲಾವಣೆ

    ಪ್ರಣಾಳಿಕೆಯಲ್ಲಿ ಏನಿದೆ?
    – 2025ರ ಒಳಗಡೆ ಜಾತಿ ಆಧಾರಿತ ಸಮೀಕ್ಷೆ
    – ‘ಅಗ್ನಿಪಥ್‌’ ಯೋಜನೆ ರದ್ದು- ಸಶಸ್ತ್ರ ಪಡೆಗಳಲ್ಲಿ ನಿಯಮಿತ ನೇಮಕಾತಿಯನ್ನು ಪರಿಚಯ
    – ಸರ್ಕಾರಿ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿ
    – ಸ್ವಾಮಿನಾಥನ್ ವರದಿಯಂತೆ ಕೃಷಿ ಬೆಳೆಗಳಿಗೆ ಎಂಎಸ್‌ಪಿ ಗೆ ಕಾನೂನು ಖಾತರಿ
    – ಅರೆಸೇನಾ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಹಳೆಯ ಪಿಂಚಣಿ ಯೋಜನೆ (OPS) ಪ್ರಾರಂಭ
    – ಎಲ್ಲಾ ಭೂರಹಿತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾಸಿಕ 5,000 ರೂಪಾಯಿ ಪಿಂಚಣಿ   ಇದನ್ನೂ ಓದಿ: ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಕಾಂಗ್ರೆಸ್‌ ಬಿಟ್ಟುಕೊಟ್ಟಿದೆಯಾ?; ದ್ವೀಪ ಎಲ್ಲಿದೆ? – ಭಾರತಕ್ಕೆ ಯಾಕೆ ಮುಖ್ಯ?

    ಎಸ್‌ಪಿ INDIA ಒಕ್ಕೂಟದ ಭಾಗವಾಗಿದ್ದು, ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್‌ ಜೊತೆಯಾಗಿ ಲೋಕಸಭಾ ಚುನಾವಣೆ ಎದುರಿಸುತ್ತಿದೆ.

     

  • ರಾಜ್ಯಸಭಾ ಚುನಾವಣೆ; ಬಿಜೆಪಿಗೆ ಅಡ್ಡಮತದಾನ ಮಾಡಿದ್ದ ನಾಲ್ವರು ಎಸ್‌ಪಿ ಶಾಸಕರಿಗೆ ‘ವೈ’ ಕೆಟಗರಿ ಭದ್ರತೆ

    ರಾಜ್ಯಸಭಾ ಚುನಾವಣೆ; ಬಿಜೆಪಿಗೆ ಅಡ್ಡಮತದಾನ ಮಾಡಿದ್ದ ನಾಲ್ವರು ಎಸ್‌ಪಿ ಶಾಸಕರಿಗೆ ‘ವೈ’ ಕೆಟಗರಿ ಭದ್ರತೆ

    ಲಕ್ನೋ: ಫೆ.27 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಡ್ಡ ಮತದಾನ ಮಾಡಿದ ಸಮಾಜವಾದಿ ಪಕ್ಷದ ನಾಲ್ವರು ಶಾಸಕರಿಗೆ ವೈ-ಕೆಟಗರಿ ಭದ್ರತೆ ನೀಡಲಾಗಿದೆ.

    ಅಭಯ್ ಸಿಂಗ್ (ಗೋಸೈಗಂಜ್), ಮನೋಜ್ ಕುಮಾರ್ ಪಾಂಡೆ (ಉಂಚಹರ್), ರಾಕೇಶ್ ಪ್ರತಾಪ್ ಸಿಂಗ್ (ಗೌರಿಗಂಜ್) ಮತ್ತು ವಿನೋದ್ ಚತುರ್ವೇದಿ (ಕಲ್ಪಿ) ಶಾಸಕರು ವೈ-ಕೆಟಗರಿ ಭದ್ರತೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಲೇಹ್‌ನಲ್ಲಿ ಸೈನಿಕರೊಂದಿಗೆ ಹೋಳಿ ಆಚರಿಸಿದ ರಾಜನಾಥ್ ಸಿಂಗ್

    ಈ ನಾಲ್ವರು ಶಾಸಕರು ಹಾಗೂ ಇತರ ಮೂರು ಪಕ್ಷದ ಶಾಸಕರಾದ ಪೂಜಾ ಪಾಲ್, ರಾಕೇಶ್ ಪಾಂಡೆ ಮತ್ತು ಅಶುತೋಷ್ ಮೌರ್ಯ, ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಡ್ಡ ಮತದಾನ ಮಾಡಿದ್ದರು. ಕೇಸರಿ ಪಕ್ಷದ ಅಭ್ಯರ್ಥಿ ಸಂಜಯ್ ಸೇಠ್ ಅವರಿಂದ, ಸಮಾಜವಾದಿ ಪಕ್ಷದ ಅಭ್ಯರ್ಥಿ ಅಲೋಕ್ ರಂಜನ್ ಸೋಲಿಗೆ ಈ ಬೆಳವಣಿಗೆ ಕಾರಣವಾಯಿತು.

    ಮತ್ತೊಬ್ಬ ಶಾಸಕ ಮಹಾರಾಜಿ ಪ್ರಜಾಪತಿ ಗೈರಾಗಿದ್ದರು. ರಾಕೇಶ್ ಪಾಂಡೆ ಅವರು ಸಂಸದ ರಿತೇಶ್ ಪಾಂಡೆ ಅವರ ತಂದೆ. ಅವರು ಇತ್ತೀಚೆಗೆ ಬಿಎಸ್ಪಿಯಿಂದ ಬಿಜೆಪಿಗೆ ಸೇರಿದ್ದರು. ಇದನ್ನೂ ಓದಿ: ನಿವೃತ್ತ ವಾಯುಸೇನೆ ಮುಖ್ಯಸ್ಥ ಭದೌರಿಯಾ ಬಿಜೆಪಿ ಸೇರ್ಪಡೆ

    ವೈ-ಕೆಟಗರಿ ಭದ್ರತೆಯ ಭಾಗವಾಗಿ ಎಂಟು ಸಿಆರ್‌ಪಿಎಫ್ ಸಿಬ್ಬಂದಿ ಈ ಶಾಸಕರ ಕಾವಲು ಕಾಯಲಿದ್ದಾರೆ. ಐವರು ಸಿಬ್ಬಂದಿಯು ಶಾಸಕರ ನಿವಾಸದಲ್ಲಿ ಕಾವಲಾಗಿರುತ್ತಾರೆ. ಉಳಿದವರು ಶಾಸಕರೊಂದಿಗೆ ಪ್ರಯಾಣಿಸುತ್ತಾರೆ.

  • Loksabha Election 2024: ದೆಹಲಿಯಲ್ಲಿ ಕೈಗೆ 3 ಸ್ಥಾನ ಬಿಟ್ಟು ಕೊಟ್ಟು 4 ಸ್ಥಾನಗಳಲ್ಲಿ AAP ಸ್ಪರ್ಧೆ?

    Loksabha Election 2024: ದೆಹಲಿಯಲ್ಲಿ ಕೈಗೆ 3 ಸ್ಥಾನ ಬಿಟ್ಟು ಕೊಟ್ಟು 4 ಸ್ಥಾನಗಳಲ್ಲಿ AAP ಸ್ಪರ್ಧೆ?

    ನವ ದೆಹಲಿ: ಲೋಕಸಭಾ ಚುನಾವಣೆ 2024ಕ್ಕೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ (SP) ಕಾಂಗ್ರೆಸ್‌ನ ಸೀಟು ಹಂಚಿಕೆ ಒಪ್ಪಂದದ ಬಳಿಕ ಆಮ್ ಆದ್ಮಿ ಪಕ್ಷವು (AAP) ದೆಹಲಿ, ಗುಜರಾತ್, ಅಸ್ಸಾಂ ಮತ್ತು ಹರಿಯಾಣದಲ್ಲಿ ಸ್ಥಾನಗಳ ಬಗ್ಗೆ ಹಳೆಯ ಪಕ್ಷದೊಂದಿಗೆ ಸಹಮತ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

    ಉಭಯ ಪಕ್ಷಗಳ ನಾಯಕರ ನಡುವೆ ಹಲವಾರು ಸುತ್ತಿನ ಮಾತುಕತೆಯ ನಂತರ ಅವರು ಸ್ಪರ್ಧಿಸುವ ಸ್ಥಾನಗಳ ಸಂಖ್ಯೆಯ ಬಗ್ಗೆ ಒಪ್ಪಂದಕ್ಕೆ ಒಪ್ಪಿಗೆ ನೀಡಲಾಗಿದೆ ಎನ್ನಲಾಗಿದೆ. ಆದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು, ಮೈತ್ರಿ ಕುರಿತು ಮಾತುಕತೆ ವಿಳಂಬವಾಗಿದೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಹೊಸ ಬೆಳವಣಿಗೆಗಳ ಸುಳಿವು ನೀಡಿದ್ದಾರೆ.

    ಒಪ್ಪಂದದ ಪ್ರಕಾರ, ದೆಹಲಿಯಲ್ಲಿ ಎಎಪಿ ನಾಲ್ಕು ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಚುನಾವಣೆ ಎದುರಿಸಲಿದೆ. ಗುಜರಾತ್‌ನಲ್ಲಿ ಕಾಂಗ್ರೆಸ್, ಎಎಪಿಗೆ ಎರಡು ಸ್ಥಾನಗಳನ್ನು ನೀಡಿದರೆ, ಹರಿಯಾಣ ಮತ್ತು ಅಸ್ಸಾಂನಲ್ಲಿ ತಲಾ ಒಂದು ಸ್ಥಾನಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆಯಂತೆ. ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಜೊತೆ SP ಮೈತ್ರಿ ಖಚಿತ: ಅಖಿಲೇಶ್‌ ಯಾದವ್‌

    ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷ ಎಸ್‌ಪಿ ಮತ್ತು ಕಾಂಗ್ರೆಸ್ ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಸೀಟು ಹಂಚಿಕೆಯನ್ನು ಬುಧವಾರ ಅಂತಿಮಗೊಳಿಸಿವೆ. ಸಮಾಜವಾದಿ ಪಕ್ಷ ಮತ್ತು ಇತರ ಮೈತ್ರಿ ಪಕ್ಷಗಳು 63 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಕಾಂಗ್ರೆಸ್‌ಗೆ 17 ಸೀಟು ಹಂಚಿಕೆ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 29 ಸ್ಥಾನಗಳಲ್ಲಿ 28 ರಲ್ಲಿ ಸ್ಪರ್ಧಿಸಲಿದೆ. ಎಸ್‌ಪಿ ಒಂದು ಸ್ಥಾನದಲ್ಲಿ ಬಲಪ್ರಯೋಗ ಮಾಡಲಿದೆ ಎಂಬುದಾಗಿ ತಿಳಿದುಬಂದಿದೆ.

  • ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಜೊತೆ SP ಮೈತ್ರಿ ಖಚಿತ: ಅಖಿಲೇಶ್‌ ಯಾದವ್‌

    ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಜೊತೆ SP ಮೈತ್ರಿ ಖಚಿತ: ಅಖಿಲೇಶ್‌ ಯಾದವ್‌

    ಲಕ್ನೋ: ಲೋಕಸಭಾ ಚುನಾವಣೆಗೂ ಮುನ್ನ ಛಿದ್ರಗೊಂಡ I.N.D.I.A ಒಕ್ಕೂಟಕ್ಕೆ ಇದೀಗ ಉತ್ತರಪ್ರದೇಶದಲ್ಲಿ (Uttarapradesh) ಬೆಂಬಲ ಸಿಕ್ಕಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಅವರು ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಖಚಿತಪಡಿಸಿದ್ದಾರೆ.

    ಕಳೆದ ಹಲವು ದಿನಗಳಿಂದ ಉಭಯ ಪಕ್ಷಗಳ ನಡುವಿನ ಹಗ್ಗಜಗ್ಗಾಟದ ಸುದ್ದಿಗಳು ನಿರಂತರವಾಗಿ ಮುನ್ನೆಲೆಗೆ ಬರುತಿತ್ತು. ಈ ನಡುವೆ ಇಂದು ಅಖಿಲೇಶ್ ಯಾದವ್ ಅವರು ಯುಪಿಯಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್ (Congress) ನಡುವೆ ಯಾವುದೇ ವಿವಾದವಿಲ್ಲ. ಈ ಎರಡೂ ಪಕ್ಷಗಳ ನಡುವೆ ಮೈತ್ರಿ ಇರುತ್ತದೆ ಎಂದು ತಿಳಿಸಿದರು.

    ಮೂಲಗಳ ಪ್ರಕಾರ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra)  ಅವರು ಅಖಿಲೇಶ್ ಯಾದವ್ ಅವರನ್ನು ಮೈತ್ರಿಗೆ ಮನವೊಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಖಿಲೇಶ್ ಮತ್ತು ಪ್ರಿಯಾಂಕಾ ನಡುವೆ ಡೀಲ್‌ ನಡೆದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಯೋಚನೆ ಮಾಡಿ ಹೇಳ್ತೀನಿ: ಡಾ.ಸಿ.ಎನ್.ಮಂಜುನಾಥ್

    ಡೀಲ್‌ ಏನು..?: INDIA ಮೈತ್ರಿಯಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್ ನಡುವಿನ ಹದಗೆಟ್ಟ ಪರಿಸ್ಥಿತಿಯನ್ನು ನಿಭಾಯಿಸಿದ ಕೀರ್ತಿಯನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನೀಡಲಾಗುತ್ತಿದೆ. ಪ್ರಿಯಾಂಕಾ ಗಾಂಧಿಯವರು ಅಖಿಲೇಶ್ ಯಾದವ್ ಅವರೊಂದಿಗೆ ಸೀಟು ಹಂಚಿಕೆ ವಿಚಾರವಾಗಿ ಫೋನ್‌ ಮೂಲಕ ಮಾತುಕತೆ ನಡೆಸಿದ್ದು, ಈ ವೇಳೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಒಪ್ಪಂದ ನಡೆದಿದೆ ಎಂಬುದಾಗಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

    ಯಾರು ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸುತ್ತಾರೆ?: ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಎಸ್‌ಪಿ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಸೂತ್ರದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ 17 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಲಾಗಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಉಳಿದ 63 ಸ್ಥಾನಗಳಲ್ಲಿ INDIA ಒಕ್ಕೂಟವು ಎಸ್‌ಪಿ ಮತ್ತು ಇತರ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.

  • ಸೈಬರ್ ಕಳ್ಳರ ಕೈಚಳಕ – ಪೊಲೀಸ್ ಇಲಾಖೆ ಹೆಸರಿನಲ್ಲೇ ಫೇಕ್ ಫೇಸ್‍ಬುಕ್ ಅಕೌಂಟ್ ಸೃಷ್ಠಿ

    ಸೈಬರ್ ಕಳ್ಳರ ಕೈಚಳಕ – ಪೊಲೀಸ್ ಇಲಾಖೆ ಹೆಸರಿನಲ್ಲೇ ಫೇಕ್ ಫೇಸ್‍ಬುಕ್ ಅಕೌಂಟ್ ಸೃಷ್ಠಿ

    ಬೀದರ್: ಪೊಲೀಸ್ ಇಲಾಖೆಯ (Police Department) ಹೆಸರಿನಲ್ಲಿ ನಕಲಿ ಫೇಸ್‍ಬುಕ್ (Facebook) ಅಕೌಂಟ್ ಓಪನ್ ಮಾಡಿರುವ ಪ್ರಕರಣ ಬೀದರ್‌ನಲ್ಲಿ (Bidar) ಸೋಮವಾರ ಬೆಳಕಿಗೆ ಬಂದಿದೆ.

    ಸೈಬರ್ ವಂಚಕರು (Cyber Crime), ಬೀದರ್ ಎಸ್‍ಪಿ (SP) ಎಂಬ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಅಕೌಂಟ್‍ನ್ನು ಸೃಷ್ಠಿಸಿದ್ದಾರೆ. ಅಲ್ಲದೆ ಜಲ್ಲೆಯ ಜನರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಇರುವ ಇಲಾಖೆಯ ಅಕೌಂಟ್‍ನಲ್ಲಿ ಇರುವ ಸ್ನೇಹಿತರನ್ನು ಗುರಿಯಾಗಿಸಿ ರಿಕ್ವೆಸ್ಟ್ ಕಳುಹಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಚಿನ್ನದ ಸರ ನುಂಗಿದ- ಗಂಟಲಲ್ಲಿ ಸಿಲುಕಿ ಆಸ್ಪತ್ರೆಯಲ್ಲಿ ನರಳಾಡಿದ!

    ಈ ಬಗ್ಗೆ ಇಲಾಖೆ ಸ್ಪಷ್ಟನೆ ನೀಡಿದ್ದು, ಅನಧಿಕೃತ ಫೇಸ್‍ಬುಕ್ ಅಕೌಂಟ್‍ನಿಂದ ಬರುತ್ತಿರುವ ರಿಕ್ವೆಸ್ಟ್‌ಗೆ ಸ್ಪಂದಿಸದಂತೆ ತಿಳಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಇಲಾಖೆ, ಸಾರ್ವಜನಿಕರು ಮೋಸ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದಿದೆ. ಅಲ್ಲದೆ ಈ ರೀತಿ ಫೇಕ್ ಅಕೌಂಟ್ ಸೃಷ್ಠಿಸಿದವರ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಇಲಾಖೆ ನೀಡಿದೆ. ಇದನ್ನೂ ಓದಿ: 5, 6 ವರ್ಷದ ಬಾಲಕಿಯರ ಮೇಲೆ ಸಂಬಂಧಿಕನಿಂದಲೇ ರೇಪ್‌ – ಆರೋಪಿ ಎಸ್ಕೇಪ್‌