Tag: soya chiken

  • 6 ಸಾಮಗ್ರಿಗಳನ್ನ ಬಳಸಿ ಸಿಂಪಲ್ ಆಗಿ ಸೋಯಾ ಚಿಕನ್ ಮಾಡಿ

    6 ಸಾಮಗ್ರಿಗಳನ್ನ ಬಳಸಿ ಸಿಂಪಲ್ ಆಗಿ ಸೋಯಾ ಚಿಕನ್ ಮಾಡಿ

    ಸೋಯಾ ಚಿಕನ್: ಚಿಕನ್ ಸಾಂಬಾರುಗಳನ್ನು ಹಲವು ವಿಧಾನಗಳಲ್ಲಿ ಮಾಡಬಹುದು. ಅವುಗಳಲ್ಲಿ ಸೋಯ ಚಿಕನ್ ಕೂಡ ಒಂದು ವಿಧ.  ಕೇವಲ 6 ಸಾಮಾಗ್ರಿಗಳನ್ನು ಬಳಸಿಕೊಂಡು ಸೋಯಾ ಚಿಕನ್ ಮಾಡೋ ಸಿಂಪಲ್ ವಿಧಾನ  ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು: 

    1. ಚಿಕನ್- 1/2 ಕೆಜಿ
    2. ಸೋಯಾ ಸಾಸ್- 5 ಚಮಚ
    3. ಶುಂಠಿ ಬೆಳ್ಳುಳ್ಳಿ ಪೇಸ್ಟ್- 3 ಚಮಚ
    4. ಖಾರದ ಪುಡಿ- 3 ಚಮಚ
    5. ಉಪ್ಪು – ರುಚಿಗೆ ತಕ್ಕಷ್ಟು
    6. ಸಕ್ಕರೆ- ಒಂದು ಚಿಟಿಕೆ

    ಮಾಡುವ ವಿಧಾನ:

    * ಮೊದಲಿಗೆ ಒಂದು ಪಾತ್ರೆಯಲ್ಲಿ ಚಿಕನ್ ಹಾಕಿ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸೋಯಾ ಸಾಸ್, ಖಾರದಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ. (ಸೋಯಾಸಾಸ್‍ನಲ್ಲಿ ಉಪ್ಪಿನ ಅಂಶ ಇರುವುದರಿಂದ ಕಡಿಮೆ ಉಪ್ಪು ಹಾಕುವುದು)
    * ಕಲಸಿಟ್ಟ ಚಿಕನ್ ಮಿಶ್ರಣವನ್ನು ಒಂದು ಗಂಟೆಯ ಕಾಲ ಫ್ರಿಡ್ಜ್‍ನಲ್ಲಿಟ್ಟು ನೆನೆಯಲು ಬಿಡಿ.
    * ನಂತರ ಫ್ರಿಡ್ಜ್‍ನಿಂದ ಚಿಕನ್ ತೆಗೆದು 10 ನಿಮಿಷ ರೂಂ ಟೆಂಪರೇಚರ್‍ನಲ್ಲಿಡಿ(ಯಾವುದೇ ಪದಾರ್ಥವನ್ನು ಫ್ರಿಡ್ಜ್‍ನಿಂದ ತೆಗೆದ ತಕ್ಷಣವೇ ಉಪಯೋಗಿಸಬಾರದು)
    * ಒಂದು ಪ್ಯಾನ್‍ಗೆ ಒಂದು ಚಿಟಿಕೆ ಸಕ್ಕರೆ ಹಾಕಿ ಬಾಡಿಸಿ. ಅದು ಕರಗಿದ ನಂತರ ನೆನೆಸಿದ ಚಿಕನ್ ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ಇದಕ್ಕೆ ಎಣ್ಣೆ ಹಾಕುವ ಅವಶ್ಯಕತೆ ಇಲ್ಲ. ಬೇಕಾದಲ್ಲಿ ಸ್ವಲ್ಪ ನೀರು ಚುಮುಕಿಸಬಹುದು.
    * ಆಗಾಗ ಕೈಯ್ಯಾಡಿಸುತ್ತಾ ಚಿಕನ್‍ನಲ್ಲಿ ಸಂಪೂರ್ಣವಾಗಿ ನೀರು ಇಂಗುವವೆರೂ ಫ್ರೈ ಮಾಡಿದರೆ ಸೋಯಾ ಚಿಕನ್ ರೆಡಿ.