Tag: soya

  • ಹೆಚ್ಚು ಪ್ರೋಟೀನ್ ಇರುವ ‘ಸೋಯಾ ಕರಿ’ ಮಾಡುವ ರೆಸಿಪಿ

    ಹೆಚ್ಚು ಪ್ರೋಟೀನ್ ಇರುವ ‘ಸೋಯಾ ಕರಿ’ ಮಾಡುವ ರೆಸಿಪಿ

    ಸೋಯಾದಲ್ಲಿ ಹೆಚ್ಚು ಪ್ರೋಟೀನ್ ಇದ್ದು, ಜನರಿಗೆ ಬೇಕಾದ ಪೋಷಕಾಂಶವನ್ನು ಉತ್ತಮವಾಗಿ ನೀಡುತ್ತೆ. ಅದಕ್ಕೆ ಇಂದು ಆರೋಗ್ಯಕ್ಕೂ ಒಳ್ಳೆಯದು ಮತ್ತು ಬಾಯಿ ರುಚಿಗೂ ಸಿಗಬೇಕು ಎಂದು ‘ಸೋಯಾ ಕರಿ’ ಮಾಡುವುದನ್ನು ಹೇಳಿಕೊಡುತ್ತಿದ್ದೇವೆ. ಈ ವಿಧಾನವನ್ನು ಓದಿ ಹೇಗೆ ‘ಸೋಯಾ ಕರಿ’ ಮಾಡಬಹುದು ಎಂದು ತಿಳಿದುಕೊಳ್ಳಿ.

    ಬೇಕಾಗಿರುವ ಪದಾರ್ಥಗಳು:
    * ಸೋಯಾ – 2 ಕಪ್
    * ಸಾಸಿವೆ ಎಣ್ಣೆ – ಅರ್ಧ ಟೀಸ್ಪೂನ್
    * ಕೊತ್ತಂಬರಿ ಸೊಪ್ಪು – ಅರ್ಧ ಕಪ್
    * ರುಚುಗೆ ತಕ್ಕಷ್ಟು ಉಪ್ಪು
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಕಟ್ ಮಾಡಿದ ಟೊಮೆಟೊ – 1 ಕಪ್
    * ಹಸಿರು ಮೆಣಸಿನಕಾಯಿ – 2
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್


    ಮಸಾಲೆಗಳು:
    * ಕೆಂಪುಮೆಣಸು – 1 ಟೀಸ್ಪೂನ್
    * ಅರಿಶಿನ ಪುಡಿ – ಅರ್ಧ ಟೀಸ್ಪೂನ್
    * ಜೀರಿಗೆ ಪುಡಿ – 1 ಟೀಸ್ಪೂನ್
    * ದಾನಿಯಾ ಪುಡಿ – 1 ಟೀಸ್ಪೂನ್
    * ಗರಂ ಮಸಾಲಾ – ಅರ್ಧ ಟೀಸ್ಪೂನ್

    ಮಾಡುವ ವಿಧಾನ:
    * ಸೋಯಾ ಬೀನ್ಸ್‍ಗಳನ್ನು ಬಿಸಿ ನೀರಿನಲ್ಲಿ 15 ನಿಮಿಷಗಳ ಕಾಲ ಮುಚ್ಚಿಡಿ. ನಂತರ ಸೋಯಾ ಬೀನ್ಸ್ ಸೋಸಿ ತಣ್ಣಗಾಗುವವರೆಗೂ ಬಿಡಿ. ಸೋಯಾದಲ್ಲಿರುವ ನೀರನ್ನು ಸಂಪೂರ್ಣವಾಗಿ ಹಿಂಡಿ. ಪಕ್ಕಕ್ಕೆ ಹಿಡಿ.
    * ಒಂದು ಜಾರಿಗೆ ಕಟ್ ಮಾಡಿದ ಈರುಳ್ಳಿ, ಟೊಮೆಟೊ, ಹಸಿರು ಮೆಣಸಿನಕಾಯಿಗಳು, ಶುಂಠಿ, ಬೆಳ್ಳುಳ್ಳಿ ಪೇಸ್ಟ್‍ಗಳನ್ನು ಹಾಕಿ ನಯವಾದ ಪೇಸ್ಟ್ ಮಾಡಿ.
    * ಗ್ಯಾಸ್ ಮೇಲೆ ಬಾಣಲೆಯನ್ನು ಇಟ್ಟು ಅದಕ್ಕೆ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಮಸಾಲಾ ಪೇಸ್ಟ್ ನಿಧಾನವಾಗಿ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ.


    * ನಂತರ ಅದಕ್ಕೆ ಕೆಂಪುಮೆಣಸು, ಅರಿಶಿನ ಪುಡಿ, ಜೀರಿಗೆ ಪುಡಿ, ದಾನಿಯಾ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಫ್ರೈ ಮಾಡಿ. ನಂತರ ಎಣ್ಣೆಯು ಪಾತ್ರೆಯ ಬದಿಗಳನ್ನು ಬಿಡುವವರೆಗೆ ಚೆನ್ನಾಗಿ ಫ್ರೈ ಮಾಡಿ.
    * ಈಗ, ನೆನೆಸಿದ ಮತ್ತು ಹಿಂಡಿದ ಸೋಯಾ ತುಂಡುಗಳನ್ನು ಮಸಾಲೆಯೊಂದಿಗೆ ಮಿಕ್ಸ್ ಮಾಡಿ ಸುಮಾರು 2-3 ನಿಮಿಷಗಳ ಕಾಲ ಎಲ್ಲವನ್ನೂ ಫ್ರೈ ಮಾಡಿ.
    * ಅದಕ್ಕೆ 1.5 ಕಪ್ ನೀರನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಫ್ರೈ ಮಾಡಿ. 5 ನಿಮಿಷ ಬಿಡಿ.

    – ಕೊನೆಗೆ ಕಟ್ ಮಾಡಿದ ಕೊತ್ತಂಬರಿ ಸೊಪ್ಪಿನಿಂದ ಸೋಯಾ ಕರಿ ಅಲಂಕರಿಸಿ. ಬಿಸಿಯಾಗಿ ಬಡಿಸಿ. ಆನಂದಿಸಿ!

    Live Tv
    [brid partner=56869869 player=32851 video=960834 autoplay=true]

  • ಅಗ್ನಿ ಅವಘಡ- 5 ಲಕ್ಷ ರೂ. ಮೌಲ್ಯದ ಸೋಯಾ ಭಸ್ಮ

    ಅಗ್ನಿ ಅವಘಡ- 5 ಲಕ್ಷ ರೂ. ಮೌಲ್ಯದ ಸೋಯಾ ಭಸ್ಮ

    ಬೀದರ್: ಜಿಲ್ಲಾ ಉಸ್ತುವಾರಿ ಸಚಿವರ ಸ್ವ-ಗ್ರಾಮದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ತಡರಾತ್ರಿ 80 ಕ್ವಿಂಟಾಲ್ ಸೋಯಾ ಸಂಪೂರ್ಣ ಬೆಂಕಿ ಆಹುತಿಯಾಗಿದೆ.

    ದೇವರಾವ್ ಜಾದವ್ ಅವರಿಗೆ ಸೇರಿದ ಸುಮಾರು 5 ಲಕ್ಷ ರೂ.ನ ಸೋಯಾ ಅಗ್ನಿಗೆ ಆಹುತಿಯಾಗಿದೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೋಂತಿ ತಾಂಡದಲ್ಲಿ ಈ ಅವಘಡ ಸಂಭವಿಸಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತ ಕಣ್ಣೀರು ಹಾಕುತ್ತಿದ್ದಾರೆ.

    ಬೆಂಕಿ ಹತ್ತಿರುವುದನ್ನು ಕಂಡ ಸ್ಥಳೀಯರು ಪಕ್ಕದ ಬೋರವೆಲ್‍ನಿಂದ ಪೈಪ್ ಹಾಕಿ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ. ಏನೇ ಸಾಹಸ ಮಾಡಿದರೂ ಲಕ್ಷಾಂತರ ರೂ. ಮೌಲ್ಯದ ಸೋಯಾ ಮಾತ್ರ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಸ್ಥಳೀಯರು ಕರೆ ಮಾಡಿದರೂ ಅಗ್ನಿ ಶಾಮಕ ಸಿಬ್ಬಂದಿ ತಡವಾಗಿ ಆಗಮಿಸಿದ್ದು, ಸ್ಥಳೀಯರು ಕಿಡಿಕಾರಿದ್ದಾರೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸ್ವಗ್ರಾಮದಲ್ಲೇ ಅವಘಡ ಸಂಭವಿಸಿದ್ದು, ಸಚಿವರು ಮಾತ್ರ ಸ್ಥಳಕ್ಕೆ ಬಂದು ಸಾಂತ್ವನ ಹೇಳಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.