Tag: sowmya

  • ಪ್ರೊಫೆಸರ್ ನಾಗರಾಜ್ ಮನೆಗೆ ಆಗಾಗ್ಗೆ ಹೋಗ್ತಿದ್ದೆ – ಪ್ರಶ್ನೆ ಪತ್ರಿಕೆ ಲೀಕ್ ಒಪ್ಕೊಂಡ ಸೌಮ್ಯಾ

    ಪ್ರೊಫೆಸರ್ ನಾಗರಾಜ್ ಮನೆಗೆ ಆಗಾಗ್ಗೆ ಹೋಗ್ತಿದ್ದೆ – ಪ್ರಶ್ನೆ ಪತ್ರಿಕೆ ಲೀಕ್ ಒಪ್ಕೊಂಡ ಸೌಮ್ಯಾ

    ಬೆಂಗಳೂರು: ಅಸಿಸ್ಟೆಂಟ್ ಫ್ರೊಫೆಸರ್ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣ ಸಂಬಂಧ ತನ್ನ ತಪ್ಪನ್ನು ಆರೋಪಿ ಸೌಮ್ಯಾ ಒಪ್ಪಿಕೊಂಡಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಭೂಗೋಳ ಶಾಸ್ತ್ರ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ತಂಡದಲ್ಲಿದ್ದ ನಾಗರಾಜ್ ಮನೆಗೆ ಆಗಾಗ ಹೋಗುತ್ತಿದ್ದಾಗಿ ಆರೋಪಿ ಸೌಮ್ಯ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾಳೆ. ನಾಗರಾಜ್ ಬಳಿ ಇದ್ದ ಬುಕ್ಸ್ ಗಳನ್ನ ಓದುವುದು ಮಾಡ್ತಿದ್ದೆ. ಅವರು ಪ್ರಶ್ನೆ ಪೇಪರ್ ತಯಾರು ಮಾಡುವ ಕಮಿಟಿಯಲ್ಲಿರೋದು ಗೊತ್ತಿತ್ತು ಎಂದಿದ್ದಾಳೆ.

    ನಾಗರಾಜ್ ಟೇಬಲ್ ಮೇಲೆ ಕ್ವೆಶ್ಚೆನ್ ಪೇಪರ್ ನ ಎನ್ವಲಪ್ ಇತ್ತು. ನಾನು ಯಾರಿಗೂ ಗೊತ್ತಾಗದ ಹಾಗೆ ಫೋಟೋ ತೆಗೆದುಕೊಂಡು ಬಂದಿದ್ದೆ. ಮರುದಿನ ಕಾಲೇಜಿನ ಬಳಿ ಫ್ರೊಫೆಸರ್ ತಂಗಿ ಮಗಳು ಕುಸುಮಾಗೆ ಪ್ರಶ್ನೆ ಪತ್ರಿಕೆ ಫೋಟೋ ಕಾಪಿ ಕಳಿಸುವಂತೆ ಹೇಳಿದ್ದೆ. ಆಕೆ ಕೂಡ ಕೆಲವೊಂದು ಪ್ರಶ್ನೆಗಳ ಫೋಟೋ ಕಳುಹಿಸಿದ್ದಳು. ಹೀಗೆ ಕ್ವೆಶ್ಚೆನ್ ಪೇಪರ್ ಲೀಕ್ ಹಿಂದಿನ ಇಂಚಿಂಚು ಮಾಹಿತಿಯನ್ನ ಎಳೆ ಎಳೆಯಾಗಿ ಪೊಲೀಸರ ಮುಂದೆ ಸೌಮ್ಯ ಬಿಚ್ಚಿಟ್ಟಿದ್ದಾಳೆ. ಇದನ್ನೂ ಓದಿ: ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ- ಪ್ರೊಫೆಸರ್ ನಾಗರಾಜ್ ಅರೆಸ್ಟ್

    ಸದ್ಯ ಸೌಮ್ಯ ಹೇಳಿಕೆ ಹಾಗೂ ಪ್ರೊಫೆಸರ್ ಹೇಳಿಕೆಯನ್ನ ಹೋಲಿಕೆ ಮಾಡಿ ನೋಡಿರುವ ಪೊಲೀಸರು ಸೌಮ್ಯಳೇ ಕೆಲ ಕ್ವೆಶ್ಚೆನ್ಸ್ ಗಳನ್ನ ಪ್ರೊಫೆಸರ್ ಗೆ ಕಳಿಸಿರುವ ಬಗ್ಗೆ ಸಹ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಅಕ್ರಮ – ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಎತ್ತಂಗಡಿ

  • ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಶ್ನೆ ಪತ್ರಿಕೆ ಲೀಕ್ – ಸೌಮ್ಯಾಗೆ 13 ದಿನ ಪೊಲೀಸ್ ಕಸ್ಟಡಿ

    ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಶ್ನೆ ಪತ್ರಿಕೆ ಲೀಕ್ – ಸೌಮ್ಯಾಗೆ 13 ದಿನ ಪೊಲೀಸ್ ಕಸ್ಟಡಿ

    ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಸೌಮ್ಯಾರನ್ನು 13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

    ಹೆಚ್ಚಿನ ತನಿಖೆ ನಡೆಸುವ ಅವಶ್ಯಕತೆ ಇದ್ದು, ಸೌಮ್ಯಾರನ್ನು ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿಕೊಂಡಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಒಂದನೇ ಎಸಿಎಂಎಂ ನ್ಯಾಯಾಧೀಶರಾದ ಮಧು ಅವರು ಈ ಆ ಆದೇಶ ನೀಡಿದ್ದಾರೆ. ಇದನ್ನೂ ಓದಿ: ದಿವ್ಯಾ ಹಾಗರಗಿ ಬಂಧನ ಯಾವಾಗ? – ಪ್ರಭಾವಿಗಳ ಶ್ರೀರಕ್ಷೆಯಲ್ಲಿದ್ದಾರಾ ದಿವ್ಯಾ

    ಪರೀಕ್ಷೆ ದಿನ ಎಲ್ಲರ ಹಾಜರಾತಿಗೂ ಮೊದಲು ಪರೀಕ್ಷಾ ಕೇಂದ್ರ ಉಸ್ತುವಾರಿಗಳು ಹಾಜರಿರುತ್ತಾರೆ. ಅಂದರೆ 40 ನಿಮಿಷ ಮೊದಲು ವಿದ್ಯಾರ್ಥಿಗಳಿಗಿಂತ ಮುಂಚೆ ಪ್ರಶ್ನೆಪತ್ರಿಕೆ ಕೊಠಡಿ ಇನ್ವಿಜಿಲೇಟರ್‌ಗೆ ಸಿಕ್ಕಿರುತ್ತದೆ. ಈ ಅವಧಿಯಲ್ಲಿ ಸೌಮ್ಯಾರಿಗೆ ಪ್ರಶ್ನೆಪತ್ರಿಕೆ ಸಿಕ್ಕಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

    ಕೆಲ ಪ್ರಶ್ನೆಗಳನ್ನು ಅಭ್ಯರ್ಥಿಗಳಿಗೆ ಸೌಮ್ಯಾ ಕಳುಹಿಸಿರಬಹುದು. 18 ಪ್ರಶ್ನೆಗಳು ಮೊಬೈಲ್ ಸ್ಕ್ರೀನ್‌ಶಾಟ್‌ನಲ್ಲಿದ್ದು 11 ಪ್ರಶ್ನೆಗಳು ಒಂದೇ ಥರ ಇದ್ದವು. ಸದ್ಯ ಇದೇ ಆಂಗಲ್‌ನಲ್ಲಿ ಮಲ್ಲೇಶ್ವರಂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಹಗರಣದಲ್ಲಿ ಪ್ರಾಧ್ಯಾಪಕರೊಬ್ಬರ ಪಾತ್ರ ಇದೆ ಎನ್ನಲಾಗುತ್ತಿದ್ದು, ಪ್ರಕರಣವನ್ನು ಮುಚ್ಚಿಡುವ ಯತ್ನ ಕೂಡ ನಡೆಯುತ್ತಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಸಮನ್ಸ್ ಕಳುಹಿಸಿದರೆ ಅಲ್ಲಿಗೆ ಬಂದು ಉತ್ತರಿಸಬೇಕಿತ್ತು: ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಕಿಡಿ