Tag: Sovereignty

  • ಪಾಕಿಸ್ತಾನ ವಿರುದ್ಧ ಯುದ್ಧ ಸಾರುವುದಾಗಿ ಬೆದರಿಕೆ ಹಾಕಿದ ತಾಲಿಬಾನ್

    ಪಾಕಿಸ್ತಾನ ವಿರುದ್ಧ ಯುದ್ಧ ಸಾರುವುದಾಗಿ ಬೆದರಿಕೆ ಹಾಕಿದ ತಾಲಿಬಾನ್

    ಇಸ್ಲಾಮಾಬಾದ್: ಇದೇ ರೀತಿ ಪಾಕಿಸ್ತಾನದಲ್ಲಿ (Pakistan) ಸರ್ಕಾರ ನಡೆದುಕೊಂಡು ಹೋದರೆ ಮುಂದೆ ಪಾಕ್ ವಿರುದ್ಧ ಯುದ್ಧ ಸಾರಿ ಅಲ್ಲಿಯೂ ಕೂಡ ಅಘ್ಫಾನಿಸ್ತಾನದಂತೆ ತಾಲಿಬಾನ್ (Taliban) ಸರ್ಕಾರ ರಚಿಸುವುದಾಗಿ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (TTP) ಬೆದರಿಕೆ ಹಾಕಿದೆ.

    ಪಾಕಿಸ್ತಾನ ಸರ್ಕಾರ ತನ್ನ ರಾಷ್ಟ್ರದ ಮುಸ್ಲಿಮರಿಗೆ ಸರಿಯಾದ ಸಹಕಾರ ನೀಡುತ್ತಿಲ್ಲ. ಸಾರ್ವಭೌಮತ್ವವನ್ನು (Sovereignty) ಪ್ರಶ್ನಿಸುವಂತೆ ಮಾಡುತ್ತಿದೆ ಹೀಗೆ ಮುಂದುವರಿದರೆ, ಟಿಟಿಪಿ ರಕ್ಷಣೆಯಿಂದ ಹಿಡಿದು ಶಿಕ್ಷಣದವರೆಗೆ ತನ್ನದೇ ಆದ ಸಚಿವ ಸಂಪುಟವನ್ನು ಘೋಷಿಸಿ ಸರ್ಕಾರ ರಚಿಸಿ ಆಡಳಿತ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಭಯೋತ್ಪಾದನೆಯಿಂದ ಭಾರತ ನೊಂದಷ್ಟು ಬೇರಾವ ದೇಶವೂ ನೊಂದಿಲ್ಲ: ಜೈಶಂಕರ್

    ಇದಲ್ಲದೆ, ಟಿಟಿಪಿ ತನ್ನ ಸಡಿಲವಾದ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ಎರಡು ವಲಯಗಳಾಗಿ ವಿಂಗಡಿಸಿದೆ. ಪೇಶಾವರ್, ಮಲಕಾಂಡ್, ಮರ್ದಾನ್, ಮತ್ತು ಗಿಲ್ಗಿಟ್-ಬಲೂಚಿಸ್ತಾವನ್ನು ಉತ್ತರ ಮತ್ತು ಡೇರಾ, ಇಸ್ಮಾಯಿಲ್ ಖಾನ್, ಬನ್ನು ಮತ್ತು ಕೊಹತ್ ಸೇರಿದಂತೆ ಕೆಲ ಪ್ರದೇಶಗಳನ್ನು ದಕ್ಷಿಣ ಪ್ರಾಂತ್ಯವನ್ನಾಗಿ ವಿಂಗಡಿಸಿದೆ.

    ಟಿಟಿಪಿ 148 ಬಾರಿ ದಾಳಿ:
    ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ತನ್ನ ಬೆಂಬಲಿಗರೊಂದಿಗೆ ಒಂದು ವರ್ಷದಲ್ಲಿ ಪಾಕಿಸ್ತಾನದ ರಕ್ಷಣಾ ಪಡೆಗಳ ಮೇಲೆ 148 ಬಾರಿ ದಾಳಿ ಮಾಡಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‍ ಯಶಸ್ಸು ಕಂಡು ಸರ್ಕಾರ ರಚಿಸಿದ ಬಳಿಕ ಪಾಕಿಸ್ತಾನದ ಕಡೆ ಕಣ್ಣಿಟ್ಟಿದೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸ್‌ ದಾಖಲು- ಹರಿಯಾಣದ ಕ್ರೀಡಾ ಸಚಿವ ಸ್ಥಾನಕ್ಕೆ ಸಂದೀಪ್ ಸಿಂಗ್ ರಾಜೀನಾಮೆ

    https://twitter.com/Noorzay__/status/1609091024999047168

    2021ರಲ್ಲಿ ಟಿಟಿಪಿ ಪೊಲೀಸರ ಮೇಲೆ ಸಾಕಷ್ಟು ಬಾರಿ ಭಯೋತ್ಪಾದಕ ದಾಳಿಗಳನ್ನು ನಡೆಸಿದೆ. ಬಲೂಚಿಸ್ತಾನ್ ಪ್ರದೇಶದ ಖೈಬರ್ ಪಖ್ತುಂಖ್ವಾ ಮತ್ತು ಕ್ವೆಟ್ಟಾದಲ್ಲಿನ ಸೇನಾ ಪ್ರಧಾನ ಕಚೇರಿಯ ಮೇಲೂ ದಾಳಿ ನಡೆಸಿ ಶಕ್ತಿ ಪ್ರದರ್ಶಿಸಿದೆ. ಇದೀಗ ದೇಶದ ಬುಡಕಟ್ಟು ಪ್ರದೇಶಗಳಲ್ಲಿ ತಮ್ಮ ಭಯೋತ್ಪಾದಕ ಕಾರ್ಯಾಚರಣೆಯನ್ನು ವಿಸ್ತರಿಸಲು ಇತರ ಉಗ್ರಗಾಮಿ ಗುಂಪುಗಳು ಟಿಟಿಪಿಯೊಂದಿಗೆ ಕೈಜೋಡಿಸುತ್ತಿವೆ ಎಂದು ಖಾಮಾ ಪ್ರೆಸ್ ವರದಿ ಮೂಲಕ ಆರೋಪ ಮಾಡಿದೆ.

    Live Tv
    [brid partner=56869869 player=32851 video=960834 autoplay=true]