Tag: Southern Railway

  • ದೀಪಾವಳಿ ಹಬ್ಬಕ್ಕೆ ಬೆಂಗ್ಳೂರಿನಿಂದ ವಿಶೇಷ ರೈಲು ಸೇವೆ – ಇಲ್ಲಿದೆ ಸಂಪೂರ್ಣ ಮಾಹಿತಿ

    ದೀಪಾವಳಿ ಹಬ್ಬಕ್ಕೆ ಬೆಂಗ್ಳೂರಿನಿಂದ ವಿಶೇಷ ರೈಲು ಸೇವೆ – ಇಲ್ಲಿದೆ ಸಂಪೂರ್ಣ ಮಾಹಿತಿ

    ಬೆಂಗಳೂರು: ದೀಪಾವಳಿ (Deepavali)  ಹಬ್ಬಕ್ಕೆ ಭಾರತೀಯ ರೈಲ್ವೇ (Indian Railway) ವಿಶೇಷ 38 ರೈಲುಗಳನ್ನು ಘೋಷಣೆ ಮಾಡಿದೆ. ಬೆಂಗಳೂರಿನಿಂದ (Bengaluru) ಕರ್ನಾಟಕದ ವಿವಿಧ ಊರುಗಳಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ವಿಶೇಷ ರೈಲುಗಳ ಸಂಚಾರ ಘೋಷಿಸಿದೆ.

    ಬೆಂಗಳೂರಿನಿಂದ ನಿಮ್ಮೂರುಗಳಿಗೆ ದೀಪಾವಳಿ ಹಬ್ಬಕ್ಕೆ ಹೋಗಿ, ವಾಪಾಸ್ ಆಗುವ ಪ್ಲಾನ್ ಮಾಡಿದ್ದರೆ ಈ ವಿಶೇಷ ರೈಲುಗಳಲ್ಲಿ ಬುಕ್ಕಿಂಗ್‌ ಮಾಡಬಹುದು. ಬೆಂಗಳೂರಿನಿಂದ ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ, ಮಂಗಳೂರು ಸೇರಿದಂತೆ ಹೊರ ರಾಜ್ಯಗಳಿಗೂ ಈ ರೈಲುಗಳು ಸೇವೆ ನೀಡಲಿವೆ. ಅಕ್ಟೋಬರ್ 21 ರಿಂದಲೇ ವಿಶೇಷ ರೈಲುಗಳು ಸಂಚಾರವಾಗ್ತಿದ್ದು, ಈ ಸೇವೆ ಈ ನವೆಂಬರ್ 6ರ ತನಕ ಇರಲಿದೆ. ಇದನ್ನೂ ಓದಿ: ಬ್ರಿಟಿಷರು ನಮ್ಮನ್ನು ಇನ್ನೂರು ವರ್ಷಗಳ ಕಾಲ ಆಳಿದರು, ಈಗ ಚಕ್ರ ತಿರುಗಿದೆ: ಬೊಮ್ಮಾಯಿ

    ಯಾವೆಲ್ಲ ರೈಲು:
    06253 ಮೈಸೂರು- ಟ್ಯೂಟಿಕೋರಿಯನ್ (Tuticorin) – 21-10-2022- ಒಂದು ದಿನದ ಸೇವೆ
    0625 ಟ್ಯೂಟಿಕೋರಿಯನ್ – ಮೈಸೂರು- ಅ. 22-10-2022 – ಟ್ರಿಪ್ 1
    06563- ಯಶವಂತಪುರ- ಮುರುಡೇಶ್ವರ- ಅ. 22, 29, ನವೆಂಬರ್ 5ಕ್ಕೆ – 3 ಟ್ರಿಪ್
    06564- ಮುರುಡೇಶ್ವರ – ಯಶವಂತಪುರ- ಅ. 23, 30 ಹಾಗೂ ನವೆಂಬರ್ 22ಕ್ಕೆ – 3 ಟ್ರಿಪ್
    06565- ಯಶವಂತಪುರ – ತಿರುನೆಲ್ವೇಲಿ- ಅ. 18 ಮತ್ತು 25 – 2 ಟ್ರಿಪ್
    06566 – ತಿರುನೆಲ್ವೆಲಿ- ಯಶವಂತಪುರ- ಅ. 19 ಹಾಗೂ 26ಕ್ಕೆ – 2 ಟ್ರಿಪ್
    06283- ಯಶವಂತಪುರ- ಕನ್ನೂರು- ಅ. 19, 26 ನವೆಂಬರ್ 2ಕ್ಕೆ- 3 ಟ್ರಿಪ್
    06284 – ಕನ್ನೂರು- ಯಶವಂತಪುರ – ಅ. 10, 26 ಹಾಗೂ ನವೆಂಬರ್ 2ಕ್ಕೆ- 3 ಟ್ರಿಪ್
    06223 ಶಿವಮೊಗ್ಗ ಟೌನ್ – ಎಂಜಿಆರ್ ಚೆನ್ನೈ ಸೆಂಟ್ರಲ್ – ಅ. 18 ರಿಂದ 30ರ ವರೆಗೆ- 4 ಟ್ರಿಪ್
    06224 ಎಂಜಿಆರ್ ಚೆನ್ನೈ ಸೆಂಟ್ರಲ್- ಶಿವಮೊಗ್ಗ ಟೌನ್- ಅ. 19 ರಿಂದ 31ರ ವರಗೆ – 4 ಟ್ರಿಪ್
    06509 ಕೆಎಸ್ ಆರ್ ಬೆಂಗಳೂರು- ದನಪುರ್ – ಅ. 17 ರಿಂದ 31 ರವರೆಗೆ – 3 ಟ್ರಿಪ್
    06510- ದಾನಪುರ- ಕೆಎಸ್ ಆರ್ ಬೆಂಗಳೂರು- ಅ. 19, ನವೆಂಬರ್ 2ಕ್ಕೆ- 3 ಟ್ರಿಪ್
    06545- ಯಶವಂತಪುರ – ವಿಜಯಪುರ- ಅ. 20 ರಿಂದ 31ರ ವರೆಗೆ- 12 ಟ್ರಿಪ್
    06546 ವಿಜಯಪುರ- ಯಶವಂತಪುರ ಅ. 20 ರಿಂದ 31ರ ವರೆಗೆ – 12 ಟ್ರಿಪ್
    07329- ಎಸ್ ಎಸ್ ಎಸ್ ಹುಬ್ಬಳಿ- ವಿಜಯಪುರ- ಅ. 20 ರಿಂದ 31ರ ವರೆಗೆ – 12 ಟ್ರಿಪ್
    07330 ವಿಜಯಪುರ- ಎಸ್ ಎಸ್ ಎಸ್ ಹುಬ್ಬಳ್ಳಿ- ಅ. 20 ರಿಂದ 31ರ ವರೆಗೆ – 12 ಟ್ರಿಪ್
    07355 ಎಸ್ ಎಸ್ ಎಸ್ ಹುಬ್ಬಳ್ಳಿ- ರಾಮೇಶ್ವರಂ – ಅ. 15 ರಿಂದ 29ರ ವರಗೆ – 3 ಟ್ರಿಪ್
    07356 – ರಾಮೇಶ್ವರಂ – ಎಸ್ ಎಸ್ ಎಸ್ ಹುಬ್ಬಳ್ಳಿ ಅ. 16 ರಿಂದ 30ರ ವರಗೆ – 3 ಟ್ರಿಪ್
    07377 ವಿಜಯಪುರ – ಮಂಗಳೂರು ಜಂಕ್ಷನ್ – ಅ. 20 ರಿಂದ 31ರ ವರೆಗೆ – 12 ಟ್ರಿಪ್
    07378 – ಮಂಗಳೂರು ಜಂಕ್ಷನ್ – ವಿಜಯಪುರ ಅ. 20 ರಿಂದ 31ರ ವರಗೆ- 12 ಟ್ರಿಪ್
    06271 ಯಶವಂತಪುರ- ಎಸ್ ಎಸ್ ಎಸ್ ಹುಬ್ಬಳ್ಳಿ – ಅ. 21ಕ್ಕೆ – 1 ಟ್ರಿಪ್
    06272 – ಎಸ್ ಎಸ್ ಎಸ್ ಹುಬ್ಬಳ್ಳಿ -ಯಶವಂತಪುರ- ಅ. 22ಕ್ಕೆ – 1 ಟ್ರಿಪ್
    06507 ಯಶವಂತಪುರ- ಶಿವಮೊಗ್ಗ ಟೌನ್- ಅ. 22ಕ್ಕೆ- ಒಂದೇ ಟ್ರಿಪ್
    07305 ಬೆಳಗಾವಿ – ಯಶವಂತಪುರ – ಅ. 26ಕ್ಕೆ- ಒಂದು ಟ್ರಿಪ್
    06505 ಯಶವಂತಪುರ- ಬೆಳಗಾವಿ – ಅ. 21 ರಿಂದ 22ರ ತನಕ- 2 ಟ್ರಿಪ್
    06506 ಬೆಳಗಾವಿ – ಯಶವಂತಪುರ ಅ. 22 – 1 ಟ್ರಿಪ್
    06557 ಕೆಎಸ್ ಆರ್ ಬೆಂಗಳೂರು- ಕಲ್ಬುರ್ಗಿ – ಅ. 22 ರಿಂದ 29ರ ವರಗೆ- 2 ಟ್ರಿಪ್
    06558 ಕಲ್ಬುರ್ಗಿ-  ಬೆಂಗಳೂರು-22 ಹಾಗೂ 29ನೇ ತಾರೀಖಿಗೆ – 2 ಟ್ರಿಪ್
    06597 ಯಶವಂತಪುರ- ಬೀದರ್- ಅ. 22 – 1 ಟ್ರಿಪ್
    06598 ಬೀದರ್ – ಯಶವಂತಪುರ – ಅ. 23  – 1 ಟ್ರಿಪ್
    06052 ನಾಗಕೋಲ್ – ಬೆಂಗಳೂರು- ಅ. 25 – 1 ಟ್ರಿಪ್
    06051 ಬೆಂಗಳೂರು- ನಾಗರಕೋಲ್ – ಅ. 26 – 1 ಟ್ರಿಪ್
    07265 ಹೈದ್ರಾಬಾದ್ – ಯಶವಂತಪುರ – ಅ. 18 ಹಾಗೂ 25 – 2 ಟ್ರಿಪ್
    07266 ಯಶವಂತಪುರ- ಹೈದರಾಬಾದ್ – 19 ರಿಂದ 26ರ ವರಗೆ- 2 ಟ್ರಿಪ್
    08543 ವಿಶಾಖಪಟ್ಟಣಂ- ಬೆಂಗಳೂರು- 23 ರಿಂದ 30ರ ವರೆಗೆ- 2 ಟ್ರಿಪ್
    08544 ಬೆಂಗಳೂರು- ವಿಶಾಖಪಟ್ಟಣಂ- 24 ರಿಂದ 31ರ ವರಗೆ- 2 ಟ್ರಿಪ್
    02986 ದಿಬ್ರುಗಢ್ (Dibrugarh) – ಬೆಂಗಳೂರು- ಅ. 18 ರಿಂದ 25ಕ್ಕೆ- 2 ಟ್ರಿಪ್
    02987 – SMVT ಬೆಂಗಳೂರು- (Dibrugarh) 21 ರಿಂದ 28ರ ವರೆಗೆ- 2 ಟ್ರಿಪ್

    Live Tv
    [brid partner=56869869 player=32851 video=960834 autoplay=true]

  • ಭಾರತದಲ್ಲಿ ಮೊದಲ ಖಾಸಗಿ ರೈಲು ಸಂಚಾರ ಆರಂಭ- ಖಾಸಗೀಕರಣಕ್ಕೆ ರೈಲ್ವೆ ನೌಕರರ ವಿರೋಧ

    ಭಾರತದಲ್ಲಿ ಮೊದಲ ಖಾಸಗಿ ರೈಲು ಸಂಚಾರ ಆರಂಭ- ಖಾಸಗೀಕರಣಕ್ಕೆ ರೈಲ್ವೆ ನೌಕರರ ವಿರೋಧ

    ಚೆನ್ನೈ: ಭಾರತೀಯ ರೈಲ್ವೆ ಸೇವೆ ಆರಂಭವಾದ ಬಳಿಕ ಮೊದಲ ಬಾರಿಗೆ ಖಾಸಗಿ ಸಂಸ್ಥೆಗಳು ನಿರ್ವಹಿಸುವ ಪ್ರಯಾಣಿಕರ ರೈಲು ಸೇವೆ ಆರಂಭವಾಗಿದೆ. ದೇಶದ ಮೊದಲ ಖಾಸಗಿ ರೈಲು ಇದಾಗಿದೆ.

    ಕೇಂದ್ರ ಸರ್ಕಾರದ `ಭಾರತ್ ಗೌರವ್’ ಯೋಜನೆಯಡಿ ಚಾಲನೆಗೊಂಡ ಈ ರೈಲು ಕೊಯಮತ್ತೂರು ಮತ್ತು ಶಿರಡಿ ನಡುವೆ ಸಂಚರಿಸುತ್ತದೆ. ಜೂನ್ 14ರ ಸಂಜೆ ಕೊಯಮತ್ತೂರಿನಲ್ಲಿ ಖಾಸಗಿ ರೈಲುಸೇವೆಗೆ ಚಾಲನೆ ದೊರೆತಿದ್ದು, ರೈಲು ತಮಿಳುನಾಡಿನ ಕೊಯಮತ್ತೂರು ಉತ್ತರ ರೈಲು ನಿಲ್ದಾಣದಿಂದ ಶಿರಡಿ ನಡುವೆ ಸಂಚರಿಸುತ್ತದೆ. ಇದನ್ನೂ ಓದಿ: 4 ದಿನ, 80 ಅಡಿ ಕೊಳವೆ ಬಾವಿಯಲ್ಲೇ ಸಿಲುಕಿದ್ದ ಹುಡುಗ – 104 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ

    ಶಿರಡಿಗೆ ತಲುಪುವ ಮೊದಲು, ರೈಲು ತಿರುಪುರ್, ಈರೋಡ್, ಸೇಲಂ ಜೋಲಾರ್‌ಪೇಟ್, ಬೆಂಗಳೂರು ಯಲಹಂಕ, ಧರ್ಮಾವರ, ಮಂತ್ರಾಲಯ ರಸ್ತೆ (ನಿಲುಗಡೆ), ಮತ್ತು ವಾಡಿಯಲ್ಲಿ ನಿಲ್ಲುತ್ತದೆ.

    ಖಾಸಗಿ ರೈಲಿನ ದರಗಳು ಭಾರತೀಯ ರೈಲ್ವೇಗಳು ವಿಧಿಸುವ ನಿಯಮಿತ ರೈಲು ಟಿಕೆಟ್ ದರಗಳಿಗೆ ಸಮನಾಗಿರುತ್ತದೆ ಮತ್ತು ಶಿರಡಿ ಸಾಯಿ ಬಾಬಾ ದೇವಸ್ಥಾನದಲ್ಲಿ ವಿಶೇಷ ವಿಐಪಿ ದರ್ಶನವನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಶರದ್ ಪವಾರ್ 

    ದಕ್ಷಿಣ ರೈಲ್ವೇ ಮಜ್ದೂರ್ ಯೂನಿಯನ್‌ಗೆ ಸೇರಿದ ರೈಲ್ವೇ ನೌಕರರ ಗುಂಪು ಖಾಸಗಿ ರೈಲುಸೇವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಖಾಸಗಿ ರೈಲು ಸೇವೆ ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯೋಜನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

    Live Tv

  • ಊಟಿ ಹನಿಮೂನ್‍ಗಾಗಿ ಇಡೀ ಟ್ರೈನ್ ಬುಕ್ ಮಾಡಿದ್ರು!

    ಊಟಿ ಹನಿಮೂನ್‍ಗಾಗಿ ಇಡೀ ಟ್ರೈನ್ ಬುಕ್ ಮಾಡಿದ್ರು!

    -48 ಕಿ.ಮೀ. ಪ್ರಯಾಣಕ್ಕೆ 2.5 ಲಕ್ಷ ಖರ್ಚು

    ಚೆನ್ನೈ: ತಮಿಳುನಾಡು ರಾಜ್ಯದ ದಕ್ಷಿಣ ರೈಲ್ವೆಯ ಸೇಲಂ ವಿಭಾಗದಲ್ಲಿ ಇಂಗ್ಲೆಂಡ್ ದಂಪತಿ ಹನಿಮೂನ್ ಗಾಗಿ ಭಾರತಕ್ಕೆ ಬಂದಿದ್ದು, ನೀಲಗಿರಿ ಮೌಂಟೇನ್ ರೈಲ್ವೇ (ಎನ್‍ಎಂಆರ್)ಯನ್ನು ಪೂರ್ಣ ಬುಕ್ ಮಾಡಿದ್ದಾರೆ. ಎನ್‍ಎಂಆರ್ ನಲ್ಲಿ ಚಾರ್ಟೆಡ್ ಸರ್ವಿಸ್ ಮತ್ತೊಮ್ಮೆ ಪರಿಚಯಿಸಲಾಗಿದ್ದು, ಇಂಗ್ಲೆಂಡ್ ದಂಪತಿ ಮೊದಲ ಪ್ರಯಾಣಿಕರಾಗಿದ್ದಾರೆ.

    ಇಂಗ್ಲೆಂಡ್‍ನ ಗ್ರ್ಯಾಹಂ ವಿಲಿಯಂ ಲಿನ್ ಮತ್ತು ಸೈಲ್ವಿಯಾ ಪ್ಲಾಸಿಕ್ ಪೂರ್ಣ ರೈಲ್ವೇ ಬುಕ್ ಮಾಡಿದ ದಂಪತಿ. ತಮಿಳನಾಡಿನ ನೀಲಗಿರಿ ಮೌಂಟೇನ್ ರೈಲ್ವೇ ವಿಭಾಗವನ್ನು ಯುನೆಸ್ಕೋ ಪಟ್ಟಿಯಲ್ಲಿಯೂ ಸೇರಿಸಲಾಗಿದೆ. ಲಿನ್ ದಂಪತಿ ಐಆರ್‍ಸಿಟಿಸಿ ನಲ್ಲಿ 2.5 ಲಕ್ಷ ರೂ. ಖರ್ಚು ಮಾಡಿ ಮೆಟ್ಟಪಾಲಾಯಂ ನಿಂದ ಊಟಿ (48 ಕಿ.ಮೀ)ಯವರೆಗೆ ಮೂರು ಬೋಗಿಗಳುಳ್ಳ ರೈಲನ್ನು ಬುಕ್ ಮಾಡಿದ್ದರು.

    ಸಾಂದರ್ಭಿಕ ಚಿತ್ರ

    143 ಪ್ರಯಾಣಿಕರ ಸಾಮಾರ್ಥ್ಯವುಳ್ಳ ಮೂರು ಬೋಗಿಗಳಳ್ಳು ರೈಲ್ವೇಯನ್ನು ಲಿನ್ ಖಾಸಗಿ ಪ್ರಯಾಣಕ್ಕಾಗಿ ಬುಕ್ ಮಾಡಿಕೊಂಡಿದ್ದರು. ನೀಲಗಿರಿ ಬೆಟ್ಟಗಳ ಮಧ್ಯೆ ಮೀಟರ್ ಗೇಜ್ ನಲ್ಲಿ ಸಾಗುವ ಈ ಮಾರ್ಗದಲ್ಲಿ 13 ಸುರಂಗ ಬರುತ್ತವೆ. ಹಸಿರು ಪರಿಸರದಲ್ಲಿ ಸಾಗುವ ಈ ಮಾರ್ಗದಲ್ಲಿ ಪ್ರಯಾಣಿಸಿದ್ರೆ ಮನಸ್ಸಿಗೆ ಒಂದು ರೀತಿಯ ಹೊಸ ಉಲ್ಲಾಸವನ್ನು ನೀಡುತ್ತದೆ. ಶುಕ್ರವಾರ ಬೆಳಗ್ಗೆ 9.10ಕ್ಕೆ ಪ್ರಯಾಣ ಆರಂಭಿಸಿದ ಟ್ರೈನ್ ಮಧ್ಯಾಹ್ನ 2.20ಕ್ಕೆ ಊಟಿಯನ್ನು ತಲುಪಿದೆ.

    ಮೆಟ್ಟಪಾಲಯಂನಿಂದ ಕುನ್ನೂರು ಮಾರ್ಗವರೆಗೆ ಕಲ್ಲಿದ್ದಲು ಇಂಜಿನ್ ರೈಲು ಬೋಗಿಗಳನ್ನು ಎಳೆದ್ರೆ, ಕುನ್ನೂರನಿಂದ ಊಟಿಯವರಗೆ ಡೀಸೆಲ್ ಇಂಜಿನ್ ಬಳಕೆ ಮಾಡಲಾಗಿತ್ತು. ಕುನ್ನೂರು ಮತ್ತು ಊಟಿಯಲ್ಲಿ ಲಿನ್ ದಂಪತಿಗೆ ಭವ್ಯ ಸ್ವಾಗತ ಮಾಡಿಕೊಳ್ಳಲಾಗಿತ್ತು.

    ಸಾಂದರ್ಭಿಕ ಚಿತ್ರ

    ನೀಲಗಿರಿ ಮೌಂಟೇನ್ ರೈಲ್ವೇ ಪ್ರಚಾರಕ್ಕಾಗಿ ಈ ವಿಶೇಷ ಪ್ಯಾಕೇಜ್ ನ್ನು ಜಾರಿಗೊಳಿಸಲಾಗಿದೆ. ನೀಲಗಿರಿ ಬೆಟ್ಟಗಳನ್ನು ವಿಶ್ವದಾದ್ಯಂತ ಪರಿಚಯಿಸಲು ಚಾರ್ಟೆಡ್ ಸೇವೆಯನ್ನು ಜಾರಿಗೊಳಿಸಲಾಗಿದೆ. 1997 ರಿಂದ 2000ರಲ್ಲಿ ಮೊದಲ ಬಾರಿಗೆ ಚಾರ್ಟೆಡ್ ಸರ್ವಿಸ್ ಆರಂಭಿಸಲಾಗಿತ್ತು. ನಂತರ 2002ರಿಂದ 200ರ ಅವಧಿಯಲ್ಲಿಯೂ ಚಾರ್ಟೆಡ್ ಸರ್ವಿಸ್ ಲಭ್ಯವಿತ್ತು. ಈಗ ಮತ್ತೊಮ್ಮೆ ಚಾರ್ಟೆಡ್ ಸರ್ವಿಸ್ ಮತ್ತೊಮ್ಮೆ ಪುನಾರಂಭವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ನೀಲಗಿರಿ ಮೌಂಟೇನ್ ರೈಲ್ವೇ ಪ್ರಯಾಣ ಹೇಗಿರುತ್ತೆ? ಈ ಕೆಳಗಿನ ವಿಡಿಯೋ ನೋಡಿ

    https://www.youtube.com/watch?time_continue=1477&v=dSdq6oRcjyc

  • ಅಭಿಯಾನಕ್ಕೆ ಸಿಕ್ತು ಜಯ: ಕನ್ನಡದಲ್ಲೂ ಸಿಗುತ್ತೆ ರೈಲ್ವೇ ಟಿಕೆಟ್

    ಅಭಿಯಾನಕ್ಕೆ ಸಿಕ್ತು ಜಯ: ಕನ್ನಡದಲ್ಲೂ ಸಿಗುತ್ತೆ ರೈಲ್ವೇ ಟಿಕೆಟ್

    ಬೆಂಗಳೂರು: ಇನ್ನು ಮುಂದೆ ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಮುದ್ರಣಗೊಂಡಿರುವ  ಟಿಕೆಟ್ ರೈಲು ಪ್ರಯಾಣಿಕರಿಗೆ ಸಿಗಲಿದೆ.

    ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಫೇಸ್‍ಬುಕ್, ಟ್ವಿಟ್ಟರ್ ನಲ್ಲಿ ಕನ್ನಡದಲ್ಲಿ ಮುದ್ರಣಗೊಂಡಿರುವ ಟಿಕೆಟ್ ಫೋಟೋ ಪ್ರಕಟಿಸಿ ಈ ವಿಚಾರವನ್ನು ತಿಳಿಸಿದ್ದಾರೆ. ಹೀಗಾಗಿ ಇನ್ನು ಮುಂದೆ ಇಂಗ್ಲಿಷ್, ಹಿಂದಿ ಅಲ್ಲದೇ ದಕ್ಷಿಣ ಭಾರತದಲ್ಲಿ ಆಯಾ ರಾಜ್ಯಗಳ ಭಾಷೆಯಲ್ಲಿ ಮುದ್ರಣಗೊಂಡಿರುವ ಟಿಕೆಟ್ ಸಿಗಲಿದೆ.

    ಈ ವಿಚಾರದ ಬಗ್ಗೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಕರ್ನಾಟಕದ ಎಲ್ಲ ಕೌಂಟರ್ ಗಳಲ್ಲಿ ಕನ್ನಡ ಭಾಷೆಯಲ್ಲಿ ಮುದ್ರಣಗೊಂಡಿರುವ ಟಿಕೆಟ್ ಸಿಗಲಿದೆ. ಆದರೆ ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದವರಿಗೆ ಈ ಟಿಕೆಟ್ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ.

    ಈ ಮೂಲಕ ಹಿಂದಿ ಹೇರಿಕೆ ವಿರುದ್ಧ ನಡೆಸಲಾಗಿದ್ದ ಅಭಿಯಾನಕ್ಕೆ ಜಯ ಸಿಕ್ಕಂತಾಗಿದೆ. ರೈಲ್ವೆ ಟಿಕೆಟ್‍ಗಳಲ್ಲಿ ಕನ್ನಡ ಇರಲಿದೆ ಎಂಬುದನ್ನು ಕೇಳಲು ಖುಷಿಯ ವಿಚಾರ ಎಂದು ಹಿಂದಿ ಹೇರಿಕೆಯನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದ ಕನ್ನಡರಿಗರು ಫೇಸ್‍ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಗೋವಾದಿಂದ ಮುಂಬೈಗೆ ಮರಳಿದ ತೇಜಸ್ ರೈಲಿನ ಸ್ಥಿತಿ ನೋಡಿ ಅಧಿಕಾರಿಗಳಿಗೆ ಶಾಕ್!

    ಕನ್ನಡ ಬಂದಿದ್ದು ಹೇಗೆ?
    ದಕ್ಷಿಣ ಭಾರತದ ಜನರಿಗೆ ಆಯಾ ರಾಜ್ಯ ಭಾಷೆಯಲ್ಲಿ ರೈಲು ಟಿಕೆಟ್ ನೀಡಬೇಕೆಂದು ಜನ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದರು. ಈ ಅಭಿಯಾನಕ್ಕೆ ರೈಲ್ವೇ ಸಚಿವಾಲಯ 2017ರ ಜೂನ್ ನಲ್ಲಿ ಸಮ್ಮತಿ ಸೂಚಿಸಿತ್ತು. 2018ರಲ್ಲಿ ರೈಲ್ವೆ ಟಿಕೆಟ್‍ಗಳನ್ನು ಹಿಂದಿ ಹಾಗೂ ಇಂಗ್ಲಿಷ್ ಜೊತೆಗೆ ಸ್ಥಳೀಯ ಭಾಷೆಯಲ್ಲೂ ಮುದ್ರಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ ಪ್ರಯಾಣಿಕರ ಸೌಲಭ್ಯ ಸಮಿತಿ ಹೇಳಿತ್ತು.

    ಮೊದಲಿಗೆ ಅಧಿಕಾರಿಗಳು ಮೂರನೇ ಭಾಷೆಯನ್ನ ಸೇರಿಸಲು ತಯಾರಿರಲಿಲ್ಲ. ಯಾಕೆಂದರೆ ದೀರ್ಘ ಕಾಲದಿಂದ ದ್ವಿಭಾಷಾ ನೀತಿಯ ಜೊತೆಗೆ ಕೆಲಸ ಮಾಡಿದ್ದರು. ಮತ್ತೊಂದು ಕಾರಣವೆಂದರೆ ಅವರು ಇನ್ನೂ ಆರ್ಕಿಯಾಕ್ ಕೊಬೊಲ್ ಸಾಫ್ಟ್ ವೇರ್ ಬಳಸುತ್ತಿದ್ದು, ಇದನ್ನು ಕೂಡಲೇ ಬದಲಾಯಿಸೋದು ಕಷ್ಟವಾಗಿತ್ತು. ಅದ್ರೆ ಡಿಜಿಟಲ್ ಯುಗದಲ್ಲಿ ಇದನ್ನ ಪರಿಗಣಿಸಲು ಸಾಧ್ಯವಿಲ್ಲ. ದೇಶದಲ್ಲಿ ರೈಲ್ವೇ ಇಲಾಖೆ ಅತ್ಯಂತ ದೊಡ್ಡ ಸೇವಾ ಪೂರೈಕೆದಾರ ಆಗಿದೆ. ಈಗಿನ ದಿನಗಳಲ್ಲಿ ಸೆಲ್‍ಫೋನ್ ಸಂಸ್ಥೆಗಳೂ ಕೂಡ ಶುಲ್ಕ ರಹಿತ ನಂಬರ್ ಗೆ ಕರೆ ಮಾಡಿದಾಗ 3 ಭಾಷೆಗಳಲ್ಲಿ ಸೇವೆ ನೀಡುತ್ತಿವೆ. ಹಿಂದಿ ಮಾತನಾಡದ ರಾಜ್ಯಗಳಲ್ಲಿ ಮೂರನೆಯ, ಸ್ಥಳೀಯ ಭಾಷೆಯನ್ನು ತರುವುದು ನಮ್ಮ ಕರ್ತವ್ಯವಲ್ಲವೇ ಎಂದು ರೈಲ್ವೇ ಪ್ರಯಾಣಿಕರ ಸೌಲಭ್ಯ ಸಮಿತಿಯ ಸದಸ್ಯ ಆಚಾರಿ ಈ ಹಿಂದೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದರು.

    ದಕ್ಷಿಣ ಭಾರತದಲ್ಲಿ ಸಾಕಷ್ಟು ಜನ ರೈಲ್ವೆ ಟಿಕೆಟ್‍ನಿಂದ ತೊಂದರೆ ಅನುಭವಿಸುತ್ತಿದ್ದರು. ಕೆಲವರಿಗೆ ಅವರು ಸರಿಯಾದ ಟಿಕೆಟ್ ಹೊಂದಿದ್ದಾರಾ ಇಲ್ಲವಾ ಎಂಬುದೇ ಗೊತ್ತಿರುತ್ತಿರಲಿಲ್ಲ. ಟಿಕೆಟ್ ಮೇಲೆ ಮುದ್ರಣವಾಗಿರೋದನ್ನು ಓದಲು ಬಾರದೇ ಹಲವು ಬಾರಿ ತಮ್ಮದಲ್ಲದ ತಪ್ಪಿಗೆ ಜನ ದಂಡ ಕಟ್ಟಿದ್ದರು. ಈಗ ಸಾಫ್ಟ್ ವೇರ್ ಅಪ್‍ಡೇಟ್ ಆಗಿದ್ದು ಟಿಕೆಟ್ ವಿತರಿಸಲಾಗುವ ಪ್ರದೇಶಕ್ಕೆ ತಕ್ಕಂತೆ ಆಯಾ ರಾಜ್ಯದ ಭಾಷೆಯಲ್ಲಿ ಟಿಕೆಟ್ ಮುದ್ರಣವಿರಲಿದೆ. ಅಂದರೆ ನೀವು ಕನ್ಯಾಕುಮಾರಿಯಿಂದ ಶುರುವಾಗಿ 5 ರಾಜ್ಯಗಳನ್ನ ಸಂಚರಿಸುವ ರೈಲಿಗೆ ಕರ್ನಾಟಕದಲ್ಲಿ ರೈಲ್ವೇ ಟಿಕೆಟ್ ಬುಕ್ ಮಾಡಿದ್ರೆ ನಿಮ್ಮ ಟಿಕೆಟ್ ಕನ್ನಡದಲ್ಲೇ ಇರಲಿದೆ.

    ಇದು ಎಲ್ಲಾ ವರ್ಗದ ಪ್ರಯಾಣಕ್ಕೆ ಹಾಗೂ ಕೌಂಟರ್ ಗಳಲ್ಲಿ ವಿತರಿಸಲಾಗುವ ಪ್ಯಾಸೆಂಜರ್ ರೈಲುಗಳ ಟಿಕೆಟ್‍ಗಳಿಗೆ ಮಾತ್ರ ಅನ್ವಯವಾಗಲಿದೆ. ಆದ್ರೆ ಆನ್‍ಲೈನ್‍ನಲ್ಲಿ ಬುಕ್ಕಿಂಗ್ ಮಾಡಿದಾಗ ಅನ್ವಯವಾಗುವುದಿಲ್ಲ. ಜಗತ್ತಿನ ಯಾವುದೇ ಭಾಗದಲ್ಲಿದ್ರೂ ಆನ್‍ಲೈನ್ ಟಿಕೆಟ್ ಬುಕ್ ಮಾಡಬಹುದಾಗಿದ್ದು, ಈ ವೇಳೆ ಸ್ಥಳೀಯ ಭಾಷೆಯನ್ನು ಅಳವಡಿಸುವುದು ಕಷ್ಟವಾದ ಹಿನ್ನೆಲೆಯಲ್ಲಿ ಆನ್‍ಲೈನ್ ಗ್ರಾಹಕರಿಗೆ ಈ ಸೇವೆ ಸಿಗುವುದಿಲ್ಲ. ಇದನ್ನೂ ಓದಿ: 42 ಕೋಟಿ ರೂ. ವೆಚ್ಚದಲ್ಲಿ 3,350 ಟ್ರಕ್ ಸಗಣಿ ಖರೀದಿಸಲಿದೆ ಭಾರತೀಯ ರೈಲ್ವೇ!