Tag: South Korean

  • ರಹಸ್ಯವಾಗಿ ಅಣ್ಣ-ಅತ್ತಿಗೆಯ ಸೆಕ್ಸ್‌ ವೀಡಿಯೋ ಚಿತ್ರೀಕರಣ – ಕೋರ್ಟ್‌ನಲ್ಲಿ ಕ್ಷಮೆ ಕೇಳಿದ ಫುಟ್‌ಬಾಲರ್‌

    ರಹಸ್ಯವಾಗಿ ಅಣ್ಣ-ಅತ್ತಿಗೆಯ ಸೆಕ್ಸ್‌ ವೀಡಿಯೋ ಚಿತ್ರೀಕರಣ – ಕೋರ್ಟ್‌ನಲ್ಲಿ ಕ್ಷಮೆ ಕೇಳಿದ ಫುಟ್‌ಬಾಲರ್‌

    ಸಿಯೋಲ್:‌ ತನ್ನ ಅಣ್ಣ-ಅತ್ತಿಯು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ಚಿತ್ರೀಕರಿಸಿದ್ದಕ್ಕಾಗಿ ದಕ್ಷಿಣ ಕೊರಿಯಾದ ಫುಟ್‌ಬಾಲ್ (South Korean Footballer) ಆಟಗಾರ ಹ್ವಾಂಗ್ ಉಯಿ-ಜೊ ಕ್ಷಮೆ ಕೇಳಿದ್ದಾರೆ.

    31 ವರ್ಷ ವಯಸ್ಸಿನ ಫುಟ್‌ಬಾಲರ್‌ 2022ರ ಜೂನ್‌ ಮತ್ತು ಸೆಪ್ಟೆಂಬರ್‌ ನಡುವೆ ಈ ನಾಲ್ಕು ಸಂದರ್ಭದಲ್ಲಿ ಅವರಿಬ್ಬರ ಒಪ್ಪಿಗೆಯಿಲ್ಲದೇ ಖಾಸಗಿ ಕ್ಷಣಗಳನ್ನು ವೀಡಿಯೋ ಚಿತ್ರೀಕರಣ ಮಾಡಿದ್ದಾನೆ ಎಂದು ಸಿಯೋಲ್‌ ಕೋರ್ಟ್‌ನ (Seoul Court) ಪ್ರಾಸಿಕ್ಯೂಟರ್‌ ಹೇಳಿದ್ದಾರೆ. ಇದನ್ನೂ ಓದಿ: ಕಣ್ತೆರೆದ ನ್ಯಾಯದೇವತೆ – ಇಲ್ಲಿಯವರೆಗೂ ಕಣ್ಣಿಗೆ ಕಟ್ಟಿದ್ದ ಬಟ್ಟೆ ತೆರವುಗೊಳಿಸಿದ ಸುಪ್ರೀಂ ಕೋರ್ಟ್

    ಸ್ಥಳೀಯ ಮಾಧ್ಯಮಗಳ ಪ್ರಕಾರ, ಸಿಯೋಲ್‌ ಕೋರ್ಟ್‌ನಲ್ಲಿ ಪ್ರಾಸಿಕ್ಯೂಟರ್‌ ಫುಟ್‌ಬಾಲ್ ಆಟಗಾರನಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದರು. ಈ ವೇಳೆ ವೀಡಿಯೋ ಚಿತ್ರೀಕರಿಸಿದ್ದಕ್ಕಾಗಿ ಫುಟ್‌ಬಾಲ್‌ ಪಟು ಕ್ಷಮೆಯಾಚಿಸಿದ್ದಾನೆ. ಇದನ್ನೂ ಓದಿ: ಬೆಳಗಾವಿ| ತಂದೆಯ ಸಾವಿನ ಬಗ್ಗೆ ಮಗಳ ಅನುಮಾನ – ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

    ವೀಡಿಯೋ ಹಿಂದಿನ ರಹಸ್ಯ ಏನು?
    ಕಳೆದ ತಿಂಗಳಷ್ಟೇ ಹ್ವಾಂಗ್‌, ಟರ್ಕಿಯ ಅಲನ್ಯಾಸ್ಪೋರ್‌ಗೆ ಹೋಗಲು ಇಂಗ್ಲೆಂಡ್‌ನ ನಾಟಿಂಗ್‌ಹ್ಯಾಮ್‌ ಅರಣ್ಯದಿಂದ ಹೊರಟಿದ್ದರು. ಅಲ್ಲಿಗೆ ಹೋದ ನಂತರ ತನ್ನ ಅತ್ತಿಗೆಗೆ ಬ್ಲ್ಯಾಕ್‌ಮೇಲ್‌ ಮಾಡಲೆಂದು ಪತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯಗಳನ್ನು ರಹಸ್ಯವಾಗಿ ವೀಡಿಯೋ ಮಾಡಿದ್ದ. ಈ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಇದರ ಹೊರತಾಗಿಯೂ ಆಕೆಯ ವಿರುದ್ಧ ಹ್ವಾಂಗ್‌ ಮೊಕದ್ದಮ್ಮೆ ಹೂಡಿದ ನಂತರ‌ ಆಕೆಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

    ಬಳಿಕ ಬ್ಲ್ಯಾಕ್‌ಮೇಲ್‌ ಆರೋಪದ ಮೇಲೆ ವಕೀಲರು ಪ್ರಕರಣ ಮುಂದುವರಿಸಿದರು. ಕೋರ್ಟ್‌ ವಿಚಾರಣೆ ವೇಳೆ ಹ್ವಾಂಗ್‌ ತಾನೇ ತಪ್ಪನ್ನು ಒಪ್ಪಿಕೊಂಡಿದ್ದಲ್ಲದೇ ಭವಿಷ್ಯದಲ್ಲಿ ನಾನು ಯಾವುದೇ ತಪ್ಪು ಮಾಡುವುದಿಲ್ಲ. ನನ್ನ ಕ್ರಮಗಳಿಂದ ಸಂತ್ರಸ್ತರಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಫುಟ್ಬಾಲ್ ಆಟಗಾರನಾಗಿ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದು ಕೇಳಿಕೊಂಡರು.

    ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ಸಿಯೋಲ್‌ ಕೋರ್ಟ್‌ ಡಿಸೆಂಬರ್‌ 18ಕ್ಕೆ ವಿಚಾರಣೆ ಮುಂದೂಡಿದೆ.

  • ಕಾಫಿ ಶಾಪ್‌ನಲ್ಲಿ ಶುರುವಾದ ಪ್ರೀತಿ – ಭಾರತದ ಪ್ರೇಮಿಗಾಗಿ ದಕ್ಷಿಣ ಕೊರಿಯಾದಿಂದ ಹಾರಿ ಬಂದ ಮಹಿಳೆ!

    ಕಾಫಿ ಶಾಪ್‌ನಲ್ಲಿ ಶುರುವಾದ ಪ್ರೀತಿ – ಭಾರತದ ಪ್ರೇಮಿಗಾಗಿ ದಕ್ಷಿಣ ಕೊರಿಯಾದಿಂದ ಹಾರಿ ಬಂದ ಮಹಿಳೆ!

    ಲಕ್ನೋ: ಪ್ರೀತಿಗೆ ಗಡಿ ಅನ್ನೋದಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಪಾಕಿಸ್ತಾನ, ಪೋಲೆಂಡ್‌, ಬಾಂಗ್ಲಾದೇಶದ ಬಳಿಕ ಇದೀಗ ದಕ್ಷಿಣ ಕೊರಿಯಾದಿಂದ ಮಹಿಳೆಯೊಬ್ಬಳು ಭಾರತಕ್ಕೆ ಹಾರಿ ಬಂದಿದ್ದಾಳೆ. ಪಾಕಿಸ್ತಾನಿ ಮಹಿಳೆ (Pakistann Women) ಸೀಮಾ ಹೈದರ್‌ ಪಬ್‌ಜೀ ಪ್ರೇಮಿಗಾಗಿ (PUBG Lover) ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ನಂತರ ಇಂತಹ ಅನೇಕ ಘಟನೆಗಳು ಕಂಡುಬಂದಿದೆ. ಆದರೆ ದಕ್ಷಿಣ ಕೊರಿಯಾ ಮಹಿಳೆ ಅಧಿಕೃತವಾಗಿಯೇ ಭಾರತಕ್ಕೆ ಬಂದಿದ್ದಾಳೆ.

    ದಕ್ಷಿಣ ಕೊರಿಯಾದ ಮಹಿಳೆ (South Korean Women) ಕಿಮ್ ಬೋಹ್-ನೀ, ಉತ್ತರ ಪ್ರದೇಶದ ತನ್ನ ಪ್ರೇಮಿ ಸುಖ್‌ಜಿತ್ ಸಿಂಗ್ ಜೊತೆಗೆ ಸಿಖ್‌ ಸಂಪ್ರದಾಯದಂತೆ ಗುರುದ್ವಾರದಲ್ಲಿ ಮದುವೆಯಾಗಿದ್ದು, ಮತ್ತೆ ದಕ್ಷಿಣ ಕೊರಿಯಾಕ್ಕೆ ಮರಳುವ ಯೋಜನೆಯಲ್ಲಿದ್ದಾಳೆ. ಇದನ್ನೂ ಓದಿ: Chandrayaan-3 ಲ್ಯಾಂಡಿಂಗ್‌ ದಿನಾಂಕ, ಸಮಯ ಘೋಷಿಸಿದ ಇಸ್ರೋ – ಇಲ್ಲಿದೆ ನೋಡಿ ವಿವರ..

    ಕಾಫಿ ಶಾಪ್‌ನಲ್ಲಿ ಶುರುವಾದ ಪ್ರೀತಿ:
    ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಸುಖ್‌ಜಿತ್‌ ಸಿಂಗ್‌ ಕೆಲಸಕ್ಕಾಗಿ ದಕ್ಷಿಣ ಕೊರಿಯಾಕ್ಕೆ ಹೋಗಿದ್ದರು. ಅಲ್ಲಿ ಕಾಫಿ ಶಾಪ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದರು. 23 ವರ್ಷದ ಕಿಮ್‌ ಕೂಡ ಅದೇ ಕಾಫಿಶಾಪ್‌ನಲ್ಲಿ ಬಿಲ್ಲಿಂಗ್‌ ಕೌಂಟರ್‌ ಎಕ್ಸಿಕ್ಯೂಟಿವ್‌ ಆಗಿ ಕೆಲಸ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ಪ್ರೀತಿಸಲು ಶುರು ಮಾಡಿದ್ದರು. ಸಿಂಗ್‌ 6 ತಿಂಗಳ ಕಾಲ ಭಾರತಕ್ಕೆ ಬರಬೇಕಾಯಿತು, ಅವರನ್ನು ಹಿಂಬಾಲಿಸಿಕೊಂಡೇ ಭಾರತಕ್ಕೆ ಬಂದಿದ್ದಾಳೆ.

    ಈ ಕುರಿತು ಮಾತನಾಡಿರುವ ಸಿಂಗ್‌, ನಾನು ಕೊರಿಯಾದ ಬುಸಾನ್‌ನಲ್ಲಿದ್ದಾಗ ಇಬ್ಬರು ಮಾತನಾಡಲು ಪ್ರಾರಂಭಿಸಿದೆವು. ನಾನು ಕೊರಿಯನ್‌ ಭಾಷೆ ಕಲಿಯುತ್ತಿದ್ದರಿಂದ ಅವಳೊಂದಿಗೆ ಮಾತನಾಡುತ್ತಿದೆ. 4 ವರ್ಷಗಳ ಕಾಲ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದೆವು. ನಾನು ಭಾರತಕ್ಕೆ ವಾಪಸ್‌ ಬಂದು 2 ತಿಂಗಳು ಕಳೆದ ಮೇಲೆ ನನ್ನನ್ನ ಹಿಂಬಾಲಿಸಿಕೊಂಡು ಬಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: Welcome, buddy.. ಚಂದ್ರಯಾನ-3ಗೆ ಸ್ವಾಗತ ಕೋರಿದ ಚಂದ್ರಯಾನ-2 ಆರ್ಬಿಟರ್‌; ಇಸ್ರೋಗೆ ಇನ್ನಷ್ಟು ತಾಂತ್ರಿಕ ಬಲ

    ಕಿಮ್ ಬೋಹ್-ನೀ ಭಾರತೀಯ ಸಂಸ್ಕೃತಿಯನ್ನ (Sikh Traditions) ಹೆಚ್ಚಾಗಿ ಪ್ರೀತಿಸುತ್ತಾರೆ, ಪಂಜಾಬಿ ಹಾಡುಗಳ ಮೇಲೂ ಅವರಿಗೆ ವಿಶೇಷ ಪ್ರೀತಿ. ಇಲ್ಲಿನ ಪರಿಸರ ಅವಳಿಗೆ ಹೊಸದು. ಸದ್ಯ ಮಹಿಳೆ ಸುಖ್‌ಜಿತ್‌ ಸಿಂಗ್‌ ಕುಟುಂಬದೊಂದಿಗೆ ಫಾರ್ಮ್‌ಹೌಸ್‌ನಲ್ಲಿ ವಾಸಿಸುತ್ತಿದ್ದಾಳೆ. ಮೂರು ತಿಂಗಳ ವೀಸಾದಲ್ಲಿ ಭಾರತಕ್ಕೆ ಬಂದಿದ್ದು, ಇನ್ನೊಂದು ತಿಂಗಳಲ್ಲಿ ತನ್ನ ತಾಯ್ನಾಡಿಗೆ ಮರಳಲಿದ್ದಾಳೆ ಎಂದು ಸಿಂಗ್‌ ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 26 ವರ್ಷದ ನಟಿ, ರೂಪದರ್ಶಿ ನಿಧನ

    26 ವರ್ಷದ ನಟಿ, ರೂಪದರ್ಶಿ ನಿಧನ

    ನಿಯೋಲ್: ದಕ್ಷಿಣ ಕೊರಿಯಾದ ನಟಿ ರೂಪದರ್ಶಿ ಸಾಂಗ್ ಯೂ ಜಂಗ್ 26ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

    ರೂಪದರ್ಶಿ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಆಕೆಯ ಸಾವಿನ ಕುರಿತಾಗಿ ಸಬ್ಲೈಮ್ ಆರ್ಟಿಸ್ಟ್ ಏಜೆಸ್ಸಿ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದೆ. ಜನವರಿ 23 ರಂದು ರೂಪದರ್ಶಿ ಸಾವನ್ನಪ್ಪಿದ್ದಳೆ. ಆಕೆಯ ಕುಟುಂಬಸ್ಥರು ನಿನ್ನೆ ಅಂತ್ಯಕ್ರಿಯೆಯನ್ನು ಮಾಡಿದ್ದಾರೆ.

    ಮೃತ ರೂಪದರ್ಶಿ ಸಾಂಗ್‍ನ ಆಪ್ತರೊಬ್ಬರು ಹೇಳುವ ಪ್ರಕಾರ ಸಾಂಗ್ ಯೂ ಜಂಗ್ ನನ್ನ ಆಪ್ತ ಸ್ನೇಹಿತರಾಗಿದ್ದು, ಅವರು ಎಲ್ಲರೊಂದಿಗೆ ಸಂತೋಷದಿಂದ ಮಾತನಾಡುತ್ತಿದ್ದರು. ಆಕೆ ಅದ್ಭುತ ಮತ್ತು ಉತ್ತಮ ನಟಿಯಾಗಿದ್ದಳು. ಯಾವುದೇ ಕೆಲಸವನ್ನಾದರೂ ಉತ್ಸಾಹದಿಂದ ಮಾಡುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

  • ಪ್ರೇಕ್ಷಕರ ಗ್ಯಾಲರಿಯಲ್ಲಿ ಸೆಕ್ಸ್ ಡಾಲ್ಸ್ ಇಟ್ಟ ಫುಟ್ಬಾಲ್ ಟೀಂ

    ಪ್ರೇಕ್ಷಕರ ಗ್ಯಾಲರಿಯಲ್ಲಿ ಸೆಕ್ಸ್ ಡಾಲ್ಸ್ ಇಟ್ಟ ಫುಟ್ಬಾಲ್ ಟೀಂ

    – ಕೊನೆಗೆ ಪ್ರೇಕ್ಷಕರ ಕ್ಷಮೆಯಾಚಿಸಿದ ಆಡಳಿತ ಮಂಡಳಿ

    ಸಿಯೋಲ್: ದಕ್ಷಿಣ ಕೊರಿಯಾದ ವೃತ್ತಿಪರ ಫುಟ್ಬಾಲ್ ತಂಡವೊಂದು ವಾರಾಂತ್ಯದಲ್ಲಿ ನಡೆಸಿದ ಪಂದ್ಯದಲ್ಲಿ ಅಭಿಮಾನಿಗಳ ಬದಲಾಗಿ ಸೆಕ್ಸ್ ಡಾಲ್ಸ್ ಗಳನ್ನು ಇಟ್ಟು ಫಜೀತಿಗೆ ಸಿಲುಕಿದೆ.

    ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ವಿಶ್ವಾದ್ಯಂತ ಕ್ರಿಕೆಟ್, ಫುಟ್ಬಾಲ್, ಬೇಸ್‍ಬಾಲ್ ಸೇರಿದಂತೆ ಅನೇಕ ಟೂರ್ನಿಗಳು ಹಾಗೂ ಕ್ರೀಡಾಕೂಟಗಳು ಮುಂದೂಡಲ್ಪಟ್ಟರೆ, ಕೆಲವು ರದ್ದಾಗಿವೆ. ಹೀಗಿರುವಾಗ ಖಾಲಿ ಮೈದಾನದಲ್ಲಿ ಮೇ 16ರಂದು ಮೊದಲ ಬಾರಿಗೆ ಫುಟ್ಬಾಲ್ ಪಂದ್ಯ ನಡೆಸಿದ ಹೆಗ್ಗಳಿಕೆಗೆ ದಕ್ಷಿಣ ಕೋರಿಯಾದ ಕೆ-ಲೀಗ್ ಪಾತ್ರವಾಗಿದೆ. ಜೊತೆಗೆ ತನ್ನ ತಪ್ಪಿನಿಂದ ಭಾರೀ ಟೀಕೆಗೂ ಗುರಿಯಾಗಿದೆ.

    ಪ್ರೇಕ್ಷಕರಿಲ್ಲದೆ ಖಾಲಿ ಸ್ಟೇಡಿಯಂನಲ್ಲಿ ಪಂದ್ಯ ನಡೆಸುವುದು ಆಟಗಾರರಿಗೆ ಸ್ಫೂರ್ತಿ ತರುವುದಿಲ್ಲ ಎಂದು ಕೆ-ಲೀಗ್ ಕ್ಲಬ್ ಭಾವಿಸಿತ್ತು. ಈ ಹಿನ್ನೆಲೆ ಗ್ವಾಂಗ್ಜು ಎಫ್‍ಸಿ ವಿರುದ್ಧದ ಪಂದ್ಯಕ್ಕೆ ಎಫ್‍ಸಿ ಸಿಯೋಲ್ ತಂಡವು ಗೊಂಬೆಗಳನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಇರಿಸಿತ್ತು. ಈ ಆಟವನ್ನು ವಿಶ್ವಾದ್ಯಂತ ಅನೇಕ ಅಭಿಮಾನಿಗಳು ವೀಕ್ಷಿಸಿದ್ದರು.

    ಪ್ರೇಕ್ಷಕರ ಗ್ಯಾಲರಿಯಲ್ಲಿ ಇರಿಸಿದ್ದ ಗೊಂಬೆಗಳಲ್ಲಿ ಕೆಲವು ಸೆಕ್ಸ್ ಡಾಲ್ಸ್ ಗಳು ಎಂದು ಗುರುತಿಸಿದ್ದಾರೆ. ಇದರಿಂದಾಗಿ ಕೆ-ಲೀಗ್ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದರು. ಈ ಸಂಬಂಧ ಕೆ-ಲೀಗ್ ಹಾಗೂ ಗೊಂಬೆಗಳನ್ನು ಪೂರೈಕೆ ಮಾಡಿದವರು ಪ್ರೇಕ್ಷಕರ ಕ್ಷಮೆ ಕೋರಬೇಕು. ಅಷ್ಟೇ ಅಲ್ಲದೆ ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದರು.

    ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದ್ದಂತೆ ಕೆ-ಲೀಗ್‍ನ ಎಫ್‍ಸಿ ಸಿಯೋಲ್ ಆಡಳಿತ ಮಂಡಳಿಯು ಸಾರ್ವಜನಿಕರ ಕ್ಷಮೆ ಕೋರಿದೆ. “ಆಟಗಾರರನ್ನ ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಟೇಡಿಯಂನಲ್ಲಿ ಗೊಂಬೆಗಳನ್ನು ಇರಿಸಲಾಗಿತ್ತು. ಅವು ಸೆಕ್ಸ್ ಡಾಲ್‍ಗಳು ಎನ್ನುವುದು ತಿಳಿದಿರಲಿಲ್ಲ. ಈ ತಪ್ಪಿಗೆ ಕ್ಷಮೆ ಕೋರುತ್ತೇವೆ ಎಂದು ಎಫ್‍ಸಿ ಸಿಯೋಲ್ ಕ್ಷಮೆಯಾಚಿಸಿದೆ.

  • ದೇವರ ಆದೇಶದಂತೆ ರೇಪ್ ಮಾಡಿದ್ದೇನೆ ಎಂದಿದ್ದ ದೇವಮಾನವನಿಗೆ 15 ವರ್ಷ ಜೈಲು

    ದೇವರ ಆದೇಶದಂತೆ ರೇಪ್ ಮಾಡಿದ್ದೇನೆ ಎಂದಿದ್ದ ದೇವಮಾನವನಿಗೆ 15 ವರ್ಷ ಜೈಲು

    ಸಿಯೋಲ್: ಚರ್ಚ್‍ನಲ್ಲಿ 8 ಜನ ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ್ದ ಧರ್ಮ ಗುರುವಿಗೆ ದಕ್ಷಿಣ ಕೊರಿಯಾ ಕೋರ್ಟ್ 15 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

    ಸಿಯೋಲ್‍ನ ಮಮಿನ್ ಸೆಂಟ್ರಲ್ ಚರ್ಚ್‍ನ ಲೀ ಜೇ ರಾಕ್ (75) ಜೈಲು ಶಿಕ್ಷೆಗೆ ಗುರಿಯಾದ ಧರ್ಮಗುರು. ಇತನು ಕ್ರಿಶ್ಚಿಯನ್ನರು ನಡೆಸುತ್ತಿದ್ದ ಸಂಸ್ಥೆಯ ಮುಖ್ಯಸ್ಥನಾಗಿದ್ದು, 1.30 ಲಕ್ಷ ಅನುಯಾಯಿಗಳನ್ನು ಹೊಂದಿದ್ದ. ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಆರೋಪದಡಿ ಮೇ ತಿಂಗಳಿನಲ್ಲಿ ಬಂಧಿಸಲಾಗಿದ್ದ ಲೀ ಜೇ ರಾಕ್‍ಗೆ ಬುಧವಾರ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

    ಕೆಲಸ ಮಾಡುವಂತೆ ದೇವರಿಂದ ಆದೇಶ ಬಂದಿತ್ತು. ನಾನು ದೇವಮಾನವನಾಗಿದ್ದು ಹೀಗಾಗಿ ಮಾಡಿರುವೆ ಎಂದು ಲೀ ಜೇ ರಾಕ್, ಕೋರ್ಟ್ ಆದೇಶ ಬಳಿಕ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ.

    ಏನಿದು ಪ್ರಕರಣ?:
    ಲೀ ಜೇ ರಾಕ್ ತನ್ನ ಅಪಾರ್ಟಮೆಂಟ್‍ಗೆ ಬರುವಂತೆ ಹಾಗೂ ಲೈಂಗಿಕ ಕ್ರಿಯೆಗೆ ಒಳಗಾಗುವಂತೆ ಒತ್ತಾಯಿಸುತ್ತಿದ್ದಾನೆ ಎಂದು ಮೂರು ಜನರ ಮಹಿಳೆ ದೂರು ನೀಡಿದ್ದರು. ನಾನು ಅವನ ವಿರುದ್ಧ ನಿಲ್ಲಲು ಸಾಧ್ಯವಾಗುತ್ತಿಲ್ಲ. ಅವನು ರಾಜ, ದೇವರು ಇದ್ದಂತೆ ಎಂದು ಸಂತ್ರಸ್ತ ಮಹಿಳೆಯೊಬ್ಬಳು ಭಯದಿಂದಲೇ ಮಾಧ್ಯಮಗಳ ಮುಂದೆ ತನ್ನ ಅಳಲು ತೋಡಿಕೊಂಡಿದ್ದಳು. ಈ ಮಹಿಳೆ ಹುಟ್ಟಿನಿಂದಲೇ ಚರ್ಚ್‍ನಲ್ಲಿ ವಾಸ್ತವ್ಯ ಪಡೆದಿದ್ದಳು.

    ಒಟ್ಟು 8 ಜನ ಸಂತ್ರಸ್ತ ಮಹಿಳೆಯರು ಲೀ ಜೇ ರಾಕ್ ವಿರುದ್ಧ ಧ್ವನಿ ಎತ್ತಿದ್ದರು. ಆರೋಪ ಬಂದ ಹಿನ್ನೆಲೆಯಲ್ಲಿ ಆತನನ್ನು ಮೇ ತಿಂಗಳಿನಲ್ಲಿ ಬಂಧಿಸಲಾಗಿತ್ತು. ಆರೋಪಿಯು ಸಂತ್ರಸ್ತ ಮಹಿಳೆಯರ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ ಹಾಗೂ ಕಿರುಕುಳ ನೀಡಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಕೋರ್ಟ್ ವಿಚಾರಣೆ ವೇಳೆ ಧರ್ಮಗುರುವಿನ ಮೇಲಿನ ಆರೋಪ ಸಾಬೀತಾಗಿತ್ತು.

    ನಾನು ದೇವಮಾನವ, ಪವಿತ್ರವಾದ ವ್ಯಕ್ತಿ, ಪರಿಶುದ್ಧ ಆತ್ಮ, ದೈವಿಕ ಶಕ್ತಿಯನ್ನು ಹೊಂದಿರುವುದಾಗಿ ಹೇಳಿಕೊಂಡು ಚರ್ಚ್ ಪ್ರಾರ್ಥನೆಗೆ ಬಂದು ಭಕ್ತರಿಗೆ ಮೋಸ ಮಾಡುತ್ತಿದ್ದ ಎಂದು ವರದಿಯಾಗಿದೆ.

    ಮಹಿಳೆಯ ಚರ್ಚ್ ಪ್ರವೇಶವನ್ನು ತಡೆದಿದ್ದಕ್ಕೆ ಲೈಂಗಿಕ ದೌರ್ಜನ್ಯ ಕೇಸ್ ಹಾಕಲಾಗಿದೆ ಎಂದು ಆರೋಪಿ ಪರ ವಕೀಲರು ವಾದ ಮಂಡಿಸಿದ್ದರು. ಆದರೆ ಆರೋಪ ಸಾಬೀತು ಆಗುತ್ತಿದ್ದಂತೆ ಕೋರ್ಟ್ 15 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv