Tag: south korea

  • ಆಟ ಆಡೋದ್ರಲ್ಲೇ ಕಾಲ ಕಳೆಯುತ್ತಿದ್ದ ಪತಿಯ ಗುಪ್ತಾಂಗವನ್ನೇ ಕತ್ತರಿಸಿದ್ಳು!

    ಆಟ ಆಡೋದ್ರಲ್ಲೇ ಕಾಲ ಕಳೆಯುತ್ತಿದ್ದ ಪತಿಯ ಗುಪ್ತಾಂಗವನ್ನೇ ಕತ್ತರಿಸಿದ್ಳು!

    ಸಿಯೋಲ್: ಪತ್ನಿಯೊಬ್ಬಳು ತನ್ನ ಪತಿಯ ಗುಪ್ತಾಂಗವನ್ನೇ ಕತ್ತರಿಸಿದ ಆಘಾತಕಾರಿ ಘಟನೆಯೊಂದು ದಕ್ಷಿಣ ಕೊರಿಯಾದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    50 ವರ್ಷದ ಕಿಮ್ ಎಂಬ ಮಹಿಳೆ ತನ್ನ 54 ವರ್ಷದ ಪತಿಯ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ. ಕಿಮ್ ತನ್ನ ಪತಿ ತನ್ನೊಂದಿಗೆ ಕಾಲ ಕಳೆಯದೇ ದಿನವಿಡೀ ಗಾಲ್ಫ್ ಆಡೋದ್ರಲ್ಲೇ ಕಾಲ ಕಳೆಯುತ್ತಾನೆ. ಅಲ್ಲದೇ ಖರ್ಚಿಗೆ ಹಣ ಕೊಡುತ್ತಿರಲಿಲ್ಲ. ಇದರಿಂದ ಬೇಸತ್ತು ಈ ಕೃತ್ಯ ಎಸಗಿರುವುದಾಗಿ ಪೊಲೀಸರಲ್ಲಿ ಹೇಳಿದ್ದಾಳೆ.

    ರಾತ್ರಿ ಗಂಡ ಮಲಗಿದ್ದ ಸಂದರ್ಭದಲ್ಲಿ ಅಡುಗೆ ಮನೆಯಿಂದ ಹರಿತವಾದ ಚಾಕು ತಂದು ಆತನ ಗುಪ್ತಾಂಗವನ್ನು ಕತ್ತರಿಸಿದ್ದಾಳೆ. ಬಳಿಕ ಅದನ್ನು ಟಾಯ್ಲೆಟ್ ನಲ್ಲಿ ಫ್ಲಶ್ ಮಾಡಿದ್ದಾಳೆ. ಘಟನೆಯಿಂದ ರಕ್ತದ ಮಡುವುನಲ್ಲಿ ಬಿದ್ದು ಕಿರುಚಾಡುತ್ತಿದ್ದ ಗಂಡಸಿನ ಧ್ವನಿಯನ್ನು ಆಲಿಸಿದ ನೆರೆಮೆನಯವರು ಬಂದು ನೋಡಿದ್ದಾರೆ.

    ಈ ವೇಳೆ ಆತ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದನು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಗಾಯಾಳು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ.

  • ಪ್ರಾಣಿಗಳಲ್ಲಿ ಒಗ್ಗಟ್ಟು ಎಷ್ಟಿದೆ ಅನ್ನೋದಕ್ಕೆ ಈ ವಿಡಿಯೋ ನೋಡಿ

    ಪ್ರಾಣಿಗಳಲ್ಲಿ ಒಗ್ಗಟ್ಟು ಎಷ್ಟಿದೆ ಅನ್ನೋದಕ್ಕೆ ಈ ವಿಡಿಯೋ ನೋಡಿ

    ಸಿಯೋಲ್: ನೀರು ಕುಡಿಯುವ ವೇಳೆ ಮರಿಯಾನೆಯೊಂದು ಕೊಳಕ್ಕೆ ಬಿದ್ದಿದ್ದು, ಈ ಮರಿಯಾನೆಯನ್ನು ಎರಡು ಆನೆಗಳು ರಕ್ಷಿಸಿದ ವಿಡಿಯೋವೊಂದು ಈಗ ವೈರಲ್ ಆಗಿದೆ.

    ದಕ್ಷಿಣ ಕೊರಿಯಾದ ಸಿಯೋಲ್‍ನ ಗ್ರಾಂಡ್ ಪಾರ್ಕ್ ಮೃಗಾಲಯದ ಪೂಲ್‍ನಲ್ಲಿ ನೀರು ಕುಡಿಯುತ್ತಿದ್ದ ಮರಿಯಾನೆ ಆಯತಪ್ಪಿ ನೀರಿನೊಳಗೆ ಬಿದ್ದಿದೆ. ಇದನ್ನು ನೋಡಿದ ತಕ್ಷಣ ಅಲ್ಲೇ ಇದ್ದ 2 ಆನೆಗಳು ಮರಿಯಾನೆ ರಕ್ಷಿಸಲು ಇಲ್ಲದ ಪಾಡುಪಟ್ಟು ಕೊನೆಗೂ ಪೂಲ್‍ನೊಳಗೆ ಇಳಿದು ನೀರಿನಿಂದ ಹೊರತಂದಿವೆ.

    ಇವರಿಬ್ಬರಿಗೆ ಸಹಾಯ ಮಾಡಲು ಆಗದ ಬೇಲಿ ಒಳಗಿದ್ದ ಆನೆಯೊಂದು ಅಯ್ಯೋ ಇವರಿಗೆ ನಾನು ಸಹಾಯ ಮಾಡಲಿಕ್ಕಿ ಆಗುತ್ತಿಲ್ಲವಲ್ಲ ಎಂದು ಅತ್ತಿಂದಿತ್ತ, ಇತ್ತಿಂದತ್ತ ಅಸಹಾಯಕನಂತೆ ಓಡಾಡುತ್ತಿದ್ದಿದ್ದನ್ನು ವಿಡಿಯೋದಲ್ಲಿ ನೋಡಬಹುದು.

    https://youtu.be/x0afNIy08IE

     

     

  • ಬಾಡಿ ಸ್ಕ್ಯಾನರ್ ಚೆಕ್ಕಿಂಗ್ ಇದ್ರೂ 8,474 ಫೋನ್‍ಗಳನ್ನು ಕದ್ದಿದ್ದ ಸ್ಯಾಮ್‍ಸಂಗ್ ಉದ್ಯೋಗಿ ಕೊನೆಗೂ ಅರೆಸ್ಟ್

    ಬಾಡಿ ಸ್ಕ್ಯಾನರ್ ಚೆಕ್ಕಿಂಗ್ ಇದ್ರೂ 8,474 ಫೋನ್‍ಗಳನ್ನು ಕದ್ದಿದ್ದ ಸ್ಯಾಮ್‍ಸಂಗ್ ಉದ್ಯೋಗಿ ಕೊನೆಗೂ ಅರೆಸ್ಟ್

    ಸಿಯೋಲ್: ವಿಶ್ವದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪೆನಿ ಸ್ಯಾಮ್‍ಸಂಗ್‍ನ ಉದ್ಯೋಗಿಯೊಬ್ಬ ಬರೋಬ್ಬರಿ 8,474 ಫೋನ್‍ಗಳನ್ನು ಕದ್ದು ಸಿಕ್ಕಿಬಿದ್ದಿದ್ದಾನೆ.

    ದಕ್ಷಿಣ ಕೊರಿಯಾದ ಸ್ಯಾಮ್‍ಸಂಗ್‍ನ ಮುಖ್ಯ ಕೇಂದ್ರ ಕಚೇರಿ ಸುವಾನ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೀ ಎಂಬಾತನನ್ನು ಪೊಲೀಸರು ಈಗ ಬಂಧಿಸಿದ್ದಾರೆ.

    2014ರ ಡಿಸೆಂಬರ್ ನಿಂದ 2016ರ ನವೆಂಬರ್‍ವರೆಗೆ ಕಾರ್ಯನಿರ್ವಹಿಸುತ್ತಿದ್ದ ವೇಳೆ ಈತ ಫೋನ್‍ಗಳನ್ನು ಕದ್ದಿದ್ದ.

    ಕದ್ದಿದ್ದು ಹೇಗೆ?
    2010ರಲ್ಲಿ ಸ್ಯಾಮ್‍ಸಂಗ್ ಹಳೆಯ ಫೋನ್ ಗಳ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ವಿಕಲಚೇತನರಿಗೆ ಉದ್ಯೋಗ ನೀಡುವ ಆಫರ್ ಪ್ರಕಟಿಸಿತ್ತು. ಈ ಆಫರ್ ಅಡಿಯಲ್ಲಿ ಲೀಗೆ ಉದ್ಯೋಗ ಸಿಕ್ಕಿತ್ತು.

    ಸ್ಯಾಮ್‍ಸಂಗ್ ಕಂಪೆನಿಯ ಎಲ್ಲ ಉದ್ಯೋಗಿಗಳು ಕಚೇರಿಯಿಂದ ಹೊರ ಹೋಗುವಾಗ ಬಾಡಿ ಸ್ಕ್ಯಾನರ್ ಮೂಲಕವೇ ನಿರ್ಗಮಿಸುತ್ತಿದ್ದರು. ಆದರ ಲೀ ಎಲೆಕ್ಟ್ರಾನಿಕ್ ವೀಲ್ ಚೇರ್ ಮೂಲಕ ಸಂಚರಿಸುತ್ತಿದ್ದ ಕಾರಣ ಆತನಿಗೆ ಈ ಭದ್ರತಾ ತಪಾಸಣೆಯಿಂದ ವಿನಾಯಿತಿ ಸಿಕ್ಕಿತ್ತು.

    ಈ ವಿನಾಯಿತಿಯನ್ನು ದುರುಪಯೋಗ ಪಡಿಸಿಕೊಂಡಿದ್ದ ಲೀ ತನ್ನ ವೀಲ್ ಚೇರ್ ಅಡಿಯಲ್ಲಿ ಫೋನ್ ಗಳನ್ನು ಇರಿಸಿ ಮನೆಗೆ ತೆರಳುತ್ತಿದ್ದ. 8 ಸಾವಿರಕ್ಕೂ ಅಧಿಕ ಫೋನ್‍ಗಳನ್ನು ಕದ್ದಿದ್ದ ಈತ ಒಟ್ಟು 7.11 ಲಕ್ಷ ಡಾಲರ್(ಅಂದಾಜು 4.57 ಕೋಟಿ ರೂ.) ಪಡೆದು ಸೆಕೆಂಡ್ ಹ್ಯಾಂಡ್ ಡೀಲರ್ ಗಳಿಗೆ ಮಾರಾಟ ಮಾಡಿದ್ದ.

    ಕಂಪೆನಿಗೆ ಗೊತ್ತಾಗಿದ್ದು ಹೇಗೆ?
    ವಿಯೆಟ್ನಾಂನಲ್ಲಿ ‘ನಾಟ್ ಫಾರ್ ಸೇಲ್’ ಬ್ಯಾಟರಿ ಹೊಂದಿದ್ದ ಸ್ಮಾರ್ಟ್ ಫೋನ್ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಯಾಮ್‍ಸಂಗ್ 2016ರ ಡಿಸೆಂಬರ್‍ನಲ್ಲಿ ಪೊಲೀಸ್ ದೂರು ನೀಡಿತ್ತು.

    ಜೂನ್ 7ರಂದು ದಕ್ಷಿಣ ಕೊರಿಯಾ ಪೊಲೀಸರು ಕಳ್ಳತನ ಮತ್ತು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೀಯನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ. ಸ್ಮಾರ್ಟ್ ಫೋನ್‍ನಿಂದ ಮಾರಾಟ ಮಾಡಿದ ಹಣವನ್ನು ಲೀ ಜೂಜಿಗೆ ಬಳಕೆ ಮಾಡುತ್ತಿದ್ದ.