ದಕ್ಷಿಣ ಕೊರಿಯಾದಲ್ಲಿ (South Korea) ಕಳೆದ ಮೂರ್ನಾಲ್ಕು ವರ್ಷಗಳಿಂದ ನಟರು ಹಾಗೂ ಗಾಯಕರು ನಿಗೂಢವಾಗಿ ಸಾವನ್ನಪ್ಪುತ್ತಿದ್ದಾರೆ (Death). ಈ ಹಿಂದೆ ಖ್ಯಾತ ಪಾಪ್ ಗಾಯಕರಾದ ಜೊಂಗ್ಹ್ಯನ್, ಗೂ ಹಾರಾ, ಸುಲ್ಲಿ ಹೀಗೆ ಅನೇಕ ಗಾಯಕರು ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಯುವ ಪಾಪ್ ಗಾಯಕ ಮೂನ್ ಬಿನ್ (Moon Bin) ಮೃತದೇಹ ಅವರ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ.
ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ 25ರ ಹರೆಯದ ಗಾಯಕ ಕೊರಿಯಾದ ಪ್ರಸಿದ್ಧ ಬಾಯ್ ಬ್ಯಾಂಡ್ ಆಸ್ಟ್ರೋದ (Boy Band Astro) ಸದ್ಯಸನಾಗಿದ್ದರು. ನಿನ್ನೆ ರಾತ್ರಿ ಶವವಾಗಿ ಪತ್ತೆಯಾಗುವ ಮೂಲಕ ಅಸಂಖ್ಯಾತ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಅವರ ಹಠಾತ್ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮೂನ್ ಬಿನ್ ದಕ್ಷಿಣ ಕೊರಿಯಾದ ಸಿಯೋಲ್ ಎಂಬಲ್ಲಿ ವಾಸಿಸುತ್ತಿದ್ದರು. ನಿನ್ನೆ ರಾತ್ರಿ ಅವರ ಮ್ಯಾನೇಜರ್ ಮೂನ್ ಬಿನ್ ಮನೆಗೆ ಬಂದಾಗ ಅವರು ಸಾವನ್ನಪ್ಪಿರುವುದು ತಿಳಿದು ಬಂದಿದೆ. ಕೂಡಲೇ ಅವರು ದಕ್ಷಿಣ ಕೊರಿಯಾದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಇದೊಂದು ಆತ್ಮಹತ್ಯೆ ಇರಬಹುದು ಎಂದು ಶಂಕೆ ವ್ಯಕ್ತ ಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದ ಬಂದ ನಂತರವೇ ಅಸಲಿ ಕಾರಣ ಗೊತ್ತಾಗಲಿದೆ.
ಎಂಟು ವರ್ಷಗಳ ಹಿಂದೆ ಪಾಪ್ ಲೋಕಕ್ಕೆ ಕಾಲಿಟ್ಟವರು ಮೂನ್ ಬಿನ್. 2016ರಲ್ಲಿ ಫ್ಯಾಂಟಜಿಯೊ ಲೇಬಲ್ ಮೂಲಕ ಗಾಯಕರಾಗಿ ಗುರುತಿಸಿಕೊಂಡವರು. ಆನಂತರ ಸಾಕಷ್ಟು ಗೀತೆಗಳಿಗೆ ದನಿಯಾಗಿದ್ದಾರೆ. ತಮ್ಮದೇ ಶೈಲಿಯ ಹಾಡುಗಳ ಮೂಲಕ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಪೋಂಗ್ಯಾಂಗ್: ನೀರಿನಲ್ಲೂ ದಾಳಿ ಮಾಡಿ ಶತ್ರುಸೈನ್ಯವನ್ನು ನಾಶಮಾಡಬಲ್ಲ ಅಣು ಸಾಮರ್ಥ್ಯದ ಅಂಡರ್ ವಾಟರ್ ಡ್ರೋನ್ (Underwater Attack Drone) `ಹೈಲ್’ (Haeil) ಪ್ರಯೋಗ ಯಶಸ್ವಿಯಾಗಿದೆ ಎಂದು ಉತ್ತರ ಕೋರಿಯಾ ಹೇಳಿಕೊಂಡಿದೆ. ಈ ಮೂಲಕ ಉತ್ತರ ಕೊರಿಯಾ (North Korea) ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಅಮೆರಿಕ-ದಕ್ಷಿಣ ಕೊರಿಯಾದ ಜಂಟಿ ಮಿಲಿಟರಿ ಸಮರಾಭ್ಯಾಸ ನಿಲ್ಲಿಸಬೇಕೆಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ.
ಹೈಲ್ ಡ್ರೋನ್ ಮೂಲಕ ಭಾರೀ ಸುನಾಮಿಯನ್ನೇ ಸೃಷ್ಟಿಸಿ ತೀರ ಪ್ರದೇಶದ ನೌಕಾನೆಲೆ, ಸಮುದ್ರದ ಮಧ್ಯೆ ಇರುವ ಶತ್ರುಸ್ಥಾವರಗಳನ್ನ ನಾಶ ಮಾಡುವ ಶಕ್ತಿಯೂ ತಮ್ಮ ದೇಶಕ್ಕೆ ಸಿದ್ಧಿಸಿದೆ ಎಂದು ಉತ್ತರ ಕೋರಿಯಾ ಹೇಳಿಕೊಂಡಿದೆ.
ಉತ್ತರ ಕೊರಿಯಾದ ಪಶ್ಚಿಮ ಭಾಗದಲ್ಲಿ ಜಲಾಂತರ್ಗಾಮಿ ಮೂಲಕ ನ್ಯೂಕ್ಲಿಯರ್ ಡ್ರೋನ್ ಅನ್ನು 80 ರಿಂದ 150 ಮೀಟರ್ ನಷ್ಟು (260 ರಿಂದ 500 ಅಡಿ ಆಳ) ಸಾಗರದ ಆಳಕ್ಕೆ ಕಳುಹಿಸಲಾಗಿತ್ತು. ಸುಮಾರು 59 ಗಂಟೆಗಳ ಕಾಲ ಈ ಪರೀಕ್ಷೆ ನಡೆಯಿತು ಎಂದು ತಿಳಿದುಬಂದಿದೆ. ಇದನ್ನೂ ಓದಿ: PublicTV Explainer: ನಿತ್ಯಾನಂದನ ಕೈಲಾಸದಲ್ಲಿರಲು ಈ ರೂಲ್ಸ್ ಫಾಲೋ ಮಾಡ್ಲೇಬೇಕಂತೆ
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ವಿಶ್ಲೇಷಕರೊಬ್ಬರು, ಉತ್ತರ ಕೊರಿಯಾ ನಡೆಸುತ್ತಿರುವ ವಿವಿಧ ರೀತಿಯ ನ್ಯೂಕ್ಲಿಯರ್ ಪರೀಕ್ಷೆಗಳು ಕೇವಲ ಪ್ರದರ್ಶನವಷ್ಟೇ. ಇದರಿಂದಾಗಿ ಅಮೆರಿಕ ಮತ್ತು ದಕ್ಷಿಣ ಕೊರಿಯಾಕ್ಕೆ ಒತ್ತಡ ಹೆಚ್ಚುತ್ತದೆಯೇ ಹೊರತು, ಈ ಜಲಾಂತರ್ಗಾಮಿ ನ್ಯೂಕ್ಲಿಯರ್ ಡ್ರೋನ್‌ನನ್ನು ಕಾರ್ಯಾಚರಣೆಗೆ ಉತ್ತರ ಕೊರಿಯಾ ಬಳಸುವುದು ಸಂಶಯಾಸ್ಪದ ಎಂದಿದ್ದಾರೆ.
ಹೈಲ್ ವಿಶೇಷತೆ ಏನು?
`ಹೈಲ್’ ಅಥವಾ ಸುನಾಮಿ ಎಂದೇ ಕರೆಯಲ್ಪಡುವ ಈ ಡ್ರೋನ್ ವ್ಯವಸ್ಥೆಯು ನೀರಿನಲ್ಲಿಯೂ ಶತ್ರುಗಳ ಸುಳಿವನ್ನು ಪತ್ತೆಹಚ್ಚುತ್ತದೆ. ಜೊತೆಗೆ ನೀರಿನಲ್ಲೂ ಸ್ಫೋಟಿಸುವ ಮೂಲಕ ಸೂಪರ್ ಸ್ಕೇಲ್ ವಿಕಿರಣ ತರಂಗಗಳನ್ನ ಸೃಷ್ಟಿಸಿ ಪ್ರಮುಖ ಕಾರ್ಯಾಚರಣೆಯ ಬಂದರುಗಳನ್ನು ನಾಶಪಡಿಸುತ್ತದೆ. ಶತ್ರು ಸೈನ್ಯಕ್ಕೆ ಸುಲಭವಾಗಿ ಮಣ್ಣುಮುಕ್ಕಿಸಲು ಸಹಕಾರಿಯಾಗುತ್ತದೆ. ಮಾಹಿತಿ ಪ್ರಕಾರ ಈ ಕ್ಷಿಪಣಿಗಳು ಸುಮಾರು 1,500 ರಿಂದ 1,800 ಕಿಮೀ (930-1,120 ಮೈಲಿ) ದೂರಗಳವರೆಗೆ ದಾಳಿ ಮಾಡುವ ಸಾಮರ್ಥ್ಯ ಹೊಂದಿವೆ ಎಂದು ಹೇಳಲಾಗಿದೆ.
ಪ್ಯೊಂಗ್ಯಾಂಗ್: ಅಮೆರಿಕ (America) ಹಾಗೂ ದಕ್ಷಿಣ ಕೊರಿಯಾಗೆ (South Korea) ಎಚ್ಚರಿಕೆ ನೀಡುವ ಸಲುವಾಗಿ ಉತ್ತರ ಕೊರಿಯಾ (North Korea) ಖಂಡಾಂತರ ಕ್ಷಿಪಣಿ ಪರೀಕ್ಷೆಯನ್ನು (Missile Test) ನಡೆಸಿರುವುದಾಗಿ ತಿಳಿಸಿದೆ. ಕ್ಷಿಪಣಿ ಜಪಾನ್ (Japan) ಬಳಿಯಲ್ಲಿ ಪತನಗೊಂಡಿದ್ದು, ತೀವ್ರ ಆತಂಕ ಸೃಷ್ಟಿಸಿದೆ.
ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಶನಿವಾರ ಹಠಾತ್ತನೆ ಕ್ಷಿಪಣಿ ಪರೀಕ್ಷೆ ನಡೆಸಲು ಆದೇಶಿಸಿರುವುದಾಗಿ ವರದಿಯಾಗಿದೆ. ಉತ್ತರ ಕೊರಿಯಾ ಮೊದಲ ಬಾರಿಗೆ ಪರೀಕ್ಷಿಸಿರುವ ಹ್ವಾಸಾಂಗ್-15 ಕ್ಷಿಪಣಿ ಪ್ಯೊಂಗ್ಯಾಂಗ್ ವಿಮಾನ ನಿಲ್ದಾಣದಿಂದ ಹಾರಿಸಲಾಗಿದೆ. ಇದನ್ನೂ ಓದಿ: RCB ನಾಯಕಿಯಾಗಿ ಸ್ಮೃತಿ ಮಂದಾನ ಆಯ್ಕೆ – ಕೊಹ್ಲಿ ವಿಶೇಷ ಸಂದೇಶ ಏನು?
ಶನಿವಾರ ಈ ಕ್ಷಿಪಣಿ ಜಪಾನಿನ ಬಳಿ ಪತನವಾಗಿದೆ. ಕ್ಷಿಪಣಿ ಗುರಿಯನ್ನು ಹೊಡೆಯುವುದಕ್ಕೂ ಮೊದಲು 66 ನಿಮಿಷ ವಾಯುಪ್ರದೇಶದಲ್ಲಿ ಸಂಚರಿಸಿದೆ. ಇದು ಅಮೆರಿಕದ ರಾಜಧಾನಿ ವಾಷಿಂಗ್ಟನ್ ಅನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ.
ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಜಂಟಿಯಾಗಿ ಯುದ್ಧಭ್ಯಾಸಗಳನ್ನು ನಡೆಸಲು ಮುಂದಾಗಿರುವುದರಿಂದ ಉತ್ತರ ಕೊರಿಯಾ ಇದನ್ನು ವಿರೋಧಿಸಲು ಕ್ಷಿಪಣಿ ಪರೀಕ್ಷೆಯನ್ನು ನಡೆಸಿದೆ ಎನ್ನಲಾಗಿದೆ. ಕಳೆದ ವಾರ ಉತ್ತರ ಕೊರಿಯಾ ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿತ್ತು. ಇದೀಗ ಕ್ಷಿಪಣಿ ಪರೀಕ್ಷೆಯನ್ನು ಉತ್ತರ ಕೊರಿಯಾದ ನಾಯಕತ್ವ ಶ್ಲಾಘಿಸಿಕೊಂಡಿದೆ. ಇದು ಮಾರಣಾಂತಿಕ ಪರಮಾಣು ಪ್ರತಿದಾಳಿಯ ಸಾಮರ್ಥ್ಯಕ್ಕೆ ನಿಜವಾದ ಪುರಾವೆಯಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಭಿನ್ನಮತ ಸ್ಫೋಟ – ಬಿಜೆಪಿಗೆ ಮಾಜಿ ಶಾಸಕ ಕಿರಣ್ ಕುಮಾರ್ ಗುಡ್‌ಬೈ
LIVE TV
[brid partner=56869869 player=32851 video=960834 autoplay=true]
ಟೋಕಿಯೊ: ಜಪಾನ್‌ನ (Japan) ನಾಗಸಾಕಿ ಪ್ರಾಂತ್ಯದ ಪೂರ್ವ ಚೀನಾ (China) ಸಮುದ್ರದಲ್ಲಿ ಬುಧವಾರ ಹಡಗು ಮುಳುಗಿ ಎಂಟು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ.
ಪೂರ್ವ ಚೀನಾ ಸಮುದ್ರದಲ್ಲಿ ಜಪಾನ್‌ನ ಡಾಂಜೋ ದ್ವೀಪಗಳ ಪಶ್ಚಿಮಕ್ಕಿರುವ ಸುಮಾರು 110 ಕಿಲೋಮೀಟರ್ ದೂರದ ಭಾಗದಿಂದ ರಾತ್ರಿ 11:15 ರ ಸುಮಾರಿಗೆ ಹಡಗು ದುರಂತದ ಕರೆ ಬಂದಿತ್ತು. ಚಂಡಮಾರುತದ ಎಚ್ಚರಿಕೆ ನೀಡಿಲಾಗಿತ್ತು. ಆ ಸಂದರ್ಭದಲ್ಲೇ ಈ ದುರಂತ ಸಂಭವಿಸಿದೆ.
ಸರಕು ಹಡಗಿನಲ್ಲಿ 14 ಮಂದಿ ಚೀನೀಯರು ಮತ್ತು 8 ಮಂದಿ ಮ್ಯಾನ್ಮಾರ್ ಸಿಬ್ಬಂದಿ ಇದ್ದರು. ಮರದ ತುಂಡುಗಳನ್ನು ಹಾಕಿಕೊಂಡು ಮಲೇಷ್ಯಾದಿಂದ ದಕ್ಷಿಣ ಕೊರಿಯಾದ ಇಂಚಿಯಾನ್‌ಗೆ ಹಡಗು ತೆರಳುತ್ತಿತ್ತು. ಇದನ್ನೂ ಓದಿ: ಅಮೆರಿಕದಲ್ಲಿ ಮುಂದುವರಿದ ಗುಂಡಿನ ಮೊರೆತ – ಶೂಟೌಟ್‌ಗೆ 3 ಬಲಿ
ಎಎಸ್‌ಡಿಎಫ್‌ನಿಂದ ರಕ್ಷಿಸಲ್ಪಟ್ಟ ಇಬ್ಬರನ್ನು ನಾಗಸಾಕಿಯಿಂದ ವಿಮಾನದ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಬ್ಬರೂ ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದರು.
Live Tv
[brid partner=56869869 player=32851 video=960834 autoplay=true]
ಇತ್ತೀಚೆಗಷ್ಟೇ ದಕ್ಷಿಣ ಕೊರಿಯಾದಲ್ಲಿ (South Korea) ವ್ಯಕ್ತಿಯೊಬ್ಬರು ವಿಚಿತ್ರ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಮೆದುಳು ತಿನ್ನುವ ಅಮೀಬಾ (Brain Eating Amoeba) ಎನ್ನಲಾಗುವ ಈ ಸೋಂಕು ಕೋವಿಡ್ ಹೆಚ್ಚಳದ ಭೀತಿಯ ಬೆನ್ನಲ್ಲೇ ಜನರಲ್ಲಿ ಮತ್ತೆ ಆತಂಕ ಮೂಡಿಸಿದೆ. ನೆಗ್ಲೇರಿಯಾ ಫೌಲೆರಿ (Naegleria fowleri) ಹೆಸರಿನ ಈ ರೋಗಕ್ಕೆ ದಕ್ಷಿಣ ಕೋರಿಯಾದಲ್ಲಿ ಮೊದಲ ಬಲಿಯಾಗಿದೆ. ಈ ಮಾರಣಾಂತಿಕ ಸೋಂಕಿನ ಲಕ್ಷಣ ಕಂಡುಬಂದ 10 ದಿನಗಳ ನಂತರ 50 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಏನಿದು ಮೆದುಳು ತಿನ್ನುವ ಅಮೀಬಾ? ಮನುಷ್ಯರಿಗೆ ಇದು ಹೇಗೆ ಹರಡುತ್ತೆ? ಆರೋಗ್ಯದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತೆ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಘಟನೆಯೇನು?
ಥಾಯ್ಲೆಂಡ್ ಪ್ರವಾಸ ಮುಗಿಸಿ ಬಂದ ಕೊರಿಯಾದ ವ್ಯಕ್ತಿಗೆ ನೆಗ್ಲೇರಿಯಾ ಫೌಲೆರಿ ಸೋಂಕು ತಗುಲಿತ್ತು. ಕೊರಿಯಾ ಆಗಮಿಸಿದ ದಿನವೇ ಅವರಿಗೆ ತೀವ್ರವಾದ ತಲೆನೋವು ಸೇರಿದಂತೆ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಮಂಗಳವಾರ ಅವರು ಮೃತಪಟ್ಟಿದ್ದಾರೆ.
ನೆಗ್ಲೇರಿಯಾ ಫೌಲೆರಿ ಅಂದ್ರೇನು?
ನೇಗ್ಲೇರಿಯಾ ಫೌಲೆರಿ ಎಂಬುದು ಒಂದು ಬಗೆಯ ಅಮೀಬಾ ರೀತಿಯ ಜೀವಿ. ಇವು ಸಾಮಾನ್ಯವಾಗಿ ಕೊಳಗಳು, ನದಿಗಳು, ಕೆರೆಗಳಂತಹ ನೀರಿನ ಪ್ರದೇಶ ಹಾಗೂ ಮಣ್ಣಿನಲ್ಲಿಯೂ ಕಂಡುಬರುತ್ತವೆ.
ನೆಗ್ಲೇರಿಯಾ ಫೌಲೆರಿ ಹರಡೋದು ಹೇಗೆ?
ಈ ಜೀವಿಗಳಿರುವ ನೀರು ಮನುಷ್ಯನ ಮೂಗಿನಲ್ಲಿ ಸೇರಿಕೊಂಡರೆ, ಆತ ಸೋಂಕಿಗೆ ಒಳಗಾಗುತ್ತಾನೆ. ಇದು ಮೂಗಿನ ಮೂಲಕ ಮೆದುಳನ್ನು ಪ್ರವೇಶ ಮಾಡಿ, ಮೆದುಳಿಗೆ ಹಾನಿಮಾಡಲು ಪ್ರಾರಂಭಿಸುತ್ತದೆ. ಇದು ಮೆದುಳಿನ ಅಂಗಾಂಶಗಳನ್ನು ನಾಶಪಡಿಸುವುದರಿಂದ ಇದಕ್ಕೆ ಮೆದುಳು ತಿನ್ನುವ ಅಮೀಬಾ ಎಂದು ಕರೆಯಲಾಗುತ್ತದೆ.
ರೋಗದ ಲಕ್ಷಣವೇನು?
ನೆಗ್ಲೇರಿಯಾ ಫೌಲೆರಿ ಬಾಧಿತರು ತೀವ್ರವಾದ ತೆಲೆನೋವು, ವಾಂತಿ, ಗಂಟಲಿನಲ್ಲಿ ಬಿಗಿತ ಹಾಗೂ ಮಂದಗೊಂಡ ಮಾತಿನ ಲಕ್ಷಣಗಳನ್ನು ಹೊಂದುತ್ತಾರೆ. ಮನುಷ್ಯನಿಗೆ ಸೋಂಕು ತಗುಲಿದ 1-12 ದಿನಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ರೋಗದ ಲಕ್ಷಣ ತೀವ್ರವಾಗಿ ಮನುಷ್ಯನಿಗೆ ಜ್ವರ ಬರುವ ಸಾಧ್ಯತೆಯೂ ಇರುತ್ತದೆ. ಇದು ಮುಂದುವರಿದಂತೆ ವ್ಯಕ್ತಿಯಲ್ಲಿ ಸ್ನಾಯು ಸೆಳೆತಗಳು, ಭ್ರಾಂತಿ, ಕೋಮಾಗೂ ಹೋಗುವ ಸಾಧ್ಯತೆಯಿರುತ್ತದೆ. ಇದರ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿ ವ್ಯಕ್ತಿ 5 ದಿನಗಳಲ್ಲಿ ಸಾವನ್ನಪ್ಪುತ್ತಾನೆ ಎನ್ನಲಾಗಿದೆ.
ಸೋಂಕಿನ ಇತರ ವರದಿಗಳು:
ವರದಿಗಳ ಪ್ರಕಾರ 1962 ರಿಂದ ಇಲ್ಲಿಯವರೆಗೆ 154 ಜನರಲ್ಲಿ ಈ ಸೋಂಕು ಪತ್ತೆಯಾಗಿದೆ. ಅವುಗಳ ಪೈಕಿ ಇಲ್ಲಿಯವರೆಗೆ ಕೇವಲ 4 ಜನರು ಬದುಕುಳಿದಿದ್ದಾರೆ ಎನ್ನಲಾಗಿದೆ. ಅಮೆರಿಕ ಮೂಲದ 22 ವರ್ಷದ ವ್ಯಕ್ತಿ ಈ ಸೋಂಕಿಗೆ ತುತ್ತಾಗಿ ಬದುಕುಳಿದ ಅದೃಷ್ಟಶಾಲಿಗಳಲ್ಲಿ ಒಬ್ಬರಾಗಿದ್ದಾರೆ. ಸೆಬಾಸ್ಟಿನ್ ಡಿಲಿಯಾನ್ 16 ವರ್ಷದವನಾಗಿದ್ದಾಗ ಫ್ಲೋರಿಡಾದ ಈಜುಕೊಳದಲ್ಲಿ ಈಜಾಡಿದ ಬಳಿಕ ಅಮೀಬಾ ಸೋಂಕಿಗೆ ಒಳಗಾಗಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಗುಣಪಡಿಸಲಾಗಿತ್ತು.
ರೋಗದ ಬಗ್ಗೆ ಸೋಂಕಿತರು ಹೇಳೋದೇನು?
ಈ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿರುವ ಸೆಬಾಸ್ಟಿನ್, ಸೋಕಿಗೆ ಒಳಗಾದ ಸಂದರ್ಭ ತೀವ್ರವಾದ ತಲೆನೋವು ಕಾಣಿಸಿಕೊಂಡಿತ್ತು. ಅದರ ತೀವ್ರತೆ ಎಷ್ಟಿತ್ತೆಂದರೆ ನನ್ನ ತಲೆ ಮೇಲೆ ದೊಡ್ಡ ಕಲ್ಲನ್ನು ಇಟ್ಟು ಒತ್ತಿದಂತೆ ಎನಿಸುತ್ತಿತ್ತು ಎಂದು ತಿಳಿಸಿದ್ದಾರೆ.
ಚಿಕಿತ್ಸೆ ಏನು?
ಸೆಬಾಸ್ಟಿನ್ ಅವರನ್ನು ಪರೀಕ್ಷಿಸಿದ ತಕ್ಷಣ ವೈದ್ಯರು ಅದು ಅಮೀಬಾ ಎಂದು ಪತ್ತೆ ಹಚ್ಚಿದ್ದರು. ಈ ಸೋಕಿಗೆ ಇಂಪಾವಿಡೋ ಎಂಬ ಔಷಧಿ ನೀಡಿ ಗುಣಪಡಿಸಲಾಗಿತ್ತು. 72 ಗಂಟೆ ಕೋಮಾದಲ್ಲಿದ್ದ ಸೆಬಾಸ್ಟಿನ್ ಬಳಿಕ ನಿಧಾನವಾಗಿ ಚೇತರಿಸಿಕೊಂಡರು. ಆದರೆ ಅವರು ಸಂಪೂರ್ಣವಾಗಿ ಗುಣಮುಖರಾಗಿರಲಿಲ್ಲ. ಇದೆಲ್ಲದರ ಬಳಿಕ ಅವರ ಮೆದುಳು ಉಬ್ಬಿಕೊಂಡಿದ್ದು, ತಮ್ಮ ಕೆಲ ಸಾಮರ್ಥ್ಯ ಹಾಗೂ ಕೌಶಲ್ಯಗಳನ್ನು ಮರೆತಿದ್ದರು. ಬಳಿಕ ಅವರನ್ನು ಪುನರುಜ್ಜೀವನ ಕೇಂದ್ರಕ್ಕೆ ದಾಖಲಿಸಲಾಯಿತು. ಅಲ್ಲಿ ಅವರು ನಡೆಯುವುದು, ಓಡುವುದು, ಬರೆಯುವುದನ್ನು ಮತ್ತೆ ಕಲಿತುಕೊಂಡರು.
ಭಾರತದಲ್ಲಿ ಭೀತಿ?
ನೆಗ್ಲೇರಿಯಾ ಫೌಲೆರಿ ಅಮೀಬಾ ಜಗತ್ತಿನ ಎಲ್ಲ ಖಂಡಗಳಲ್ಲಿ ಕಂಡುಬರುತ್ತವೆ ಎನ್ನಲಾಗಿದೆ. 2015 ರಲ್ಲಿ ಪ್ರಕಟವಾದ ಸಂಶೋಧನಾ ಅಧ್ಯಯನವೊಂದರ ಪ್ರಕಾರ, ಈ ಅಮೀಬಾ ಹರಿಯಾಣ ರಾಜ್ಯದ ರೋಹ್ತಕ್ ಹಾಗೂ ಝಜ್ಜರ್ ಜಿಲ್ಲೆಯಲ್ಲಿರುವ ನೀರಿನ ಪ್ರದೇಶಗಳಲ್ಲಿ ಕಂಡುಬಂದಿದೆ ಎನ್ನಲಾಗಿದೆ.
ಮುನ್ನೆಚ್ಚರಿಕಾ ಕ್ರಮ:
ಅಮೀಬಾ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಬದಲಿಗೆ ನೀರಿನ ಮೂಲಗಳಿಂದ ಹರಡುವ ಸಾಧ್ಯತೆಯಿದೆ. ಮೂಗಿನ ಮೂಲಕ ಸೋಂಕು ಮನುಷ್ಯನ ದೇಹ ಪ್ರವೇಶಿಸುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸೋಂಕು ವರದಿಯಾದ ಪ್ರದೇಶಗಳಲ್ಲಿ ನೀರಿನಲ್ಲಿ ಈಜಾಡದಂತೆ ಸೂಚಿಸಲಾಗುತ್ತದೆ.
Live Tv
[brid partner=56869869 player=32851 video=960834 autoplay=true]
ತೆಲುಗು ಸಿನಿಮಾ ರಂಗದ ಖ್ಯಾತ ನಟಿ ಸಮಂತಾ ಆರೋಗ್ಯದ ಬಗ್ಗೆ ಆಗಾಗ್ಗೆ ಹೊಸ ಹೊಸ ಸುದ್ದಿಗಳು ಬರುತ್ತಲೇ ಇವೆ. ಸಮಂತಾ ಅವರು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಮೊದಲು ಸುದ್ದಿ ಆಯಿತು. ಅದನ್ನು ಅವರ ಮ್ಯಾನೇಜರ್ ಅಲ್ಲಗಳೆದರು. ನಂತರ ಸ್ವತಃ ಸಮಂತಾ ಅವರೇ ತಮಗಿರುವ ಮಯೋಸಿಟಿಸ್ ಕಾಯಿಲೆ ಕುರಿತಂತೆ ಬರೆದುಕೊಂಡರು. ಫೋಟೋ ಸಮೇತ ಹಾಕಿ, ಚಿಕಿತ್ಸೆ ಪಡೆಯುತ್ತಿರುವ ಕುರಿತು ಹೇಳಿಕೊಂಡರು.
ಇದಾದ ನಂತರ ಅವರು ಯಶೋದಾ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡರು. ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಮತ್ತೆ ಅವರ ಆರೋಗ್ಯದ ಬಗ್ಗೆಯೇ ಮತ್ತೊಂದು ಸುತ್ತಿನ ಚರ್ಚೆ ಶುರುವಾಯಿತು. ಅವರ ಮ್ಯಾನೇಜರ್ ಈ ಕುರಿತು ಮತ್ತೆ ಸ್ಪಷ್ಟಪಡಿಸಿ ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದರು. ಆದರೆ, ಸಿನಿಮಾ ರಿಲೀಸ್ ಸಂದರ್ಭದಲ್ಲಿ ಅವರು ಯಾವುದೇ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಕ್ಯಾಮೆರಾ ಮುಂದೆಯೂ ಬರಲಿಲ್ಲ. ಹೀಗಾಗಿ ಕಾಯಿಲೆಯಿಂದ ಅವರು ಗುಣಮುಖರಾಗಿಲ್ಲ ಎಂದಾಯಿತು. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಬಯೋಪಿಕ್‌ನಲ್ಲಿ ತಮಿಳು ನಟ ವಿಜಯ್ ಸೇತುಪತಿ
ಈಗ ಟಾಲಿವುಡ್ ಅಂಗಳದಲ್ಲಿ ಸುಮಂತಾ ಅವರ ಕಾಯಿಲೆ ಬಗ್ಗೆ ಮತ್ತೆ ಚರ್ಚೆ ಆಗುತ್ತಿದೆ. ಇದೀಗ ಮಯೋಸಿಟಿಸ್ ಕಾಯಿಲೆ ಉಲ್ಬಣವಾಗಿದ್ದು, ಅವರನ್ನು ದಕ್ಷಿಣ ಕೊರಿಯಾಗೆ ಶಿಫ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ. ಮೊದಲು ಅವರು ಅಮೆರಿಕಾದಲ್ಲಿ ಚಿಕಿತ್ಸೆ ಪಡೆದರು ಎಂದು ಹೇಳಲಾಗಿತ್ತು. ಅಲ್ಲಿಂದ ಬಂದ ನಂತರ ಅವರು ಭಾರತದಲ್ಲೇ ಅದಕ್ಕೆ ಔಷಧಿ ಪಡೆದರು. ಇದೀಗ ದಕ್ಷಿಣ ಕೊರಿಯಾಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಯಾವುದೇ ಸ್ಪಷ್ಟನೆ ಬಂದಿಲ್ಲ.
Live Tv
[brid partner=56869869 player=32851 video=960834 autoplay=true]
ಸಿಯೋಲ್: ದಕ್ಷಿಣ ಕೊರಿಯಾದ (South Korea) ರಾಜಧಾನಿ ಸಿಯೋಲ್‌ನಲ್ಲಿ (Seoul) ಶನಿವಾರ ನಡೆದ ಹ್ಯಾಲೋವೀನ್ (Halloween) ದುರಂತದ ಆಘಾತದಿಂದ ಅಲ್ಲಿನ ಜನತೆ ಇನ್ನೂ ಹೊರ ಬಂದಿಲ್ಲ. ಅಷ್ಟರಲ್ಲಾಗಲೇ ಘಟನೆಯಲ್ಲಿ ಮೃತಪಟ್ಟವರ ಗುಂಪಿನಲ್ಲಿ ಖ್ಯಾತ ಗಾಯಕ ಹಾಗೂ ನಟನೊಬ್ಬನೂ ಸೇರಿದ್ದ ಎಂಬ ಸುದ್ದಿ ತಿಳಿದು ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿಯೋಲ್‌ನ ಇಟಾವಾನ್ (Itaewon) ಜಿಲ್ಲೆಯಲ್ಲಿ ನಡೆದ ಭೀಕರ ಕಾಲ್ತುಳಿತದಲ್ಲಿ (Stampede) ನಟ, ಗಾಯಕ ಲೀ ಜಿಹಾನ್ (Lee Jihan) ಮೃತಪಟ್ಟಿರುವುದಾಗಿ ದೃಢವಾಗಿದೆ. 24 ವರ್ಷದ ತಾರೆಯ ಹಠಾತ್ ನಿಧನಕ್ಕೆ ಅವರ ಕುಟುಂಬ, ಅಭಿಮಾನಿಗಳು ಸೇರಿದಂತೆ ಅಲ್ಲಿನ ಜನತೆ ಸಂತಾಪ ವ್ಯಕ್ತಪಡಿಸಿದ್ದಾರೆ.
2 ವರ್ಷದ ಕೋವಿಡ್ ನಿರ್ಬಂಧವನ್ನು ತೆಗೆದು ಹಾಕಿದ ಬಳಿಕ ಇದು ದಕ್ಷಿಣ ಕೊರಿಯಾದ ಮೊದಲ ಹ್ಯಾಲೋವೀನ್ ಆಚರಣೆಯಾಗದೆ. ಶನಿವಾರ ಹಬ್ಬದ ವಾತಾವರಣದಲ್ಲಿ ಇಟಾವಾನ್‌ನ ಕಿರಿದಾದ ಒಂದು ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗಿ, ಕಾಲ್ತುಳಿತ ಉಂಟಾಗಿತ್ತು. ಘಟನೆಯಲ್ಲಿ ಹೆಚ್ಚಿನವರು ಉಸಿರುಗಟ್ಟಿ, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅದರಲ್ಲೂ ಮೃತಪಟ್ಟವರಲ್ಲಿ ಹೆಚ್ಚಿನವರು 20 ವರ್ಷದ ಆಸುಪಾಸಿನವರು ಎಂಬುದು ಇನ್ನಷ್ಟು ಆಘಾತ ತಂದಿದೆ.
ವರದಿಗಳ ಪ್ರಕಾರ ಸಿಯೋಲ್‌ನ ಹ್ಯಾಲೋವೀನ್ ದುರಂತದಲ್ಲಿ 151 ಜನರು ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್-ಯೋಲ್ ರಾಷ್ಟ್ರೀಯ ಶೋಕಾಚರಣೆಯ ಅವಧಿಯನ್ನು ಘೋಷಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಟಿ ರಂಭಾ ಕಾರು ಭೀಕರ ಅಪಘಾತ : ರಂಭಾ ಪುತ್ರಿಗೆ ತೀವ್ರ ಗಾಯ
Live Tv
[brid partner=56869869 player=32851 video=960834 autoplay=true]
ತೆಹ್ರಾನ್: ದಕ್ಷಿಣ ಕೊರಿಯಾದಲ್ಲಿ ನಡೆದ ಗೋಡೆ ಹತ್ತುವ ಕ್ರೀಡಾಕೂಟದಲ್ಲಿ (ಕ್ಲೈಂಬಿಂಗ್ ಚಾಂಪಿಯನ್‌ಶಿಪ್) ಇರಾನ್ ಕ್ರೀಡಾಪಟು ಎಲ್ನಾಜ್ ರೆಕಾಬಿ (Elnaz Rekabi) ಹಿಜಬ್ (Hijab) ಧರಿಸದೇ ಭಾಗವಹಿಸಿದ್ದುದು ಈಗ ವಿವಾದಕ್ಕೆ ಕಾರಣವಾಗಿದೆ. ಅದಕ್ಕೆ ಪೂರಕವಾಗಿ ಸಿಯೋಲ್‌ನಲ್ಲಿ ಇರುವ ಇರಾನ್ ಅಧಿಕಾರಿಗಳು ಕ್ರೀಡಾಪಟುವನ್ನು ಸ್ವದೇಶಕ್ಕೆ ಕರೆದೊಯ್ಯಲು ಮಂಗಳವಾರ ವಿಮಾನ (Flight) ಹತ್ತಿಸಿದ್ದಾರೆ.
Ms. Elnaz REKABI, departed from Seoul to Iran, early morning of October 18, 2022, along with the other members of the Team. The Embassy of the Islamic Republic of Iran in South Korea strongly denies all the fake, false news and disinformation regarding Ms. Elnaz REKABI. pic.twitter.com/053pFWs96m
33 ವರ್ಷದ ರೆಕಾಬಿ ಸಿಯೋಲ್‌ನಲ್ಲಿ ನಡೆದ ಏಷ್ಯನ್ ಸ್ಪೋರ್ಟ್ಸ್ (Sports) ಕ್ಲೈಂಬಿಂಗ್ ಚಾಂಪಿಯನ್‌ಶಿಪ್‌ನಲ್ಲಿ (Climbing Championships) ಹಿಜಬ್ ಧರಿಸದೇ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಅದಕ್ಕಾಗಿ ಅವರು ರಾಜಧಾನಿ ತೆಹ್ರಾನ್ ತಲುಪಿದ ನಂತರ ಇರಾನ್ ಪೊಲೀಸರು ಬಂಧಿಸುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಯಾಗಿದೆ. ಇನ್ನೂ ಓದಿ: ಪ್ರೆಗ್ನೆಂಟ್ ಅಂತ ತಿಳಿದ 48 ಗಂಟೆಯಲ್ಲೇ ಮಗುವನ್ನು ಹೆತ್ತ ತಾಯಿ
ಈ ಕುರಿತು ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ಎಲ್ನಾಜ್ ರೆಕಾಬಿ, ಆಕಸ್ಮಿಕವಾಗಿ ತಲೆಯಿಂದ ಹಿಜಬ್ ಜಾರಿತು. ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಬರೆದುಕೊಂಡಿದ್ದಾಳೆ.
ಇರಾನ್ ಸಹ ವರದಿಗಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ್ದು, ರೆಕಾಬಿ ಕುರಿತು ಸುಳ್ಳು ಸುದ್ದಿಗಳು ಹರಡಲಾಗುತ್ತಿದೆ ಎಂದು ಹೇಳಿದೆ. ಸೋಲ್‌ನಲ್ಲಿರುವ ಇರಾನ್ ರಾಯಭಾರಿ ಕಚೇರಿ ಈ ಕುರಿತು ಪ್ರತಿಕ್ರಿಯೆ ನೀಡುವ ವೇಳೆ ಈ ಹಿಂದೆ ಹಿಜಬ್ ಧರಿಸಿ ರೆಕಾಬಿ ಅವರು ಸ್ಪರ್ಧೆಯಲ್ಲಿ ಪಾಲ್ಗೊಂಡ ಫೋಟೋವನ್ನು ಹಂಚಿಕೊಂಡಿದೆ. ಇನ್ನೂ ಓದಿ: ಭಾರತಕ್ಕೆ ನೀಡಿದ ದರದಲ್ಲೇ ರಷ್ಯಾದಿಂದ ಇಂಧನ ಖರೀದಿಗೆ ಪಾಕ್ ಸಿದ್ಧ – ಹಣಕಾಸು ಸಚಿವ
ಹಿಜಬ್ ಧರಿಸದೇ ಇದ್ದಿದ್ದಕ್ಕೆ 22ರ ಹರೆಯದ ಮಹ್ಸಾ ಅಮಿನಿ (Mahsa Amini) ಹೆಸರಿನ ಯುವತಿ ನೈತಿಕ ಪೊಲೀಸ್‌ಗಿರಿಗೆ ಬಲಿಯಾಗಿದ್ದಳು. ಆಕೆ ಸಾವಿನ ವಿರುದ್ಧ ಇರಾನ್‌ನಲ್ಲಿ ಪ್ರತಿಭಟನೆ ಭುಗಿಲೆದ್ದಿತು. ಸಾವಿರಾರು ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದರು. ಇರಾನ್‌ನಲ್ಲಿ ಹಿಜಬ್ ಸುಟ್ಟು, ತಮ್ಮ ಜಡೆಯನ್ನು ಕತ್ತರಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಈವರೆಗೆ ಇಬ್ಬರು ಹುಡುಗಿಯರು ಸೇರಿ ಮೂವರು ಮೃತಪಟ್ಟಿದ್ದಾರೆ. ಆದರೂ ಪ್ರತಿಭಟನೆ ಮುಕ್ತಾಯಗೊಂಡಂತೆ ಕಾಣುತ್ತಿಲ್ಲ.
Live Tv
[brid partner=56869869 player=32851 video=960834 autoplay=true]
ಸಿಯೋಲ್: ಉತ್ತರ ಕೊರಿಯಾ ಪರಮಾಣು ಪರೀಕ್ಷೆ ನಡೆಸಲು ಯೋಜಿಸುತ್ತಿದೆ ಎಂಬ ಆತಂಕಕಾರಿ ಸಂಗತಿಯ ನಡುವೆಯೇ ಭಾನುವಾರ ಮತ್ತೊಂದು ಅಪರಿಚಿತ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಿಸಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ತಿಳಿಸಿದೆ.
ಜಪಾನ್ ಮಾಹಿತಿ ಉಲ್ಲೇಖಿಸಿ, ದಕ್ಷಿಣ ಕೊರಿಯಾ ಅಧಿಕಾರಿಗಳು ಉತ್ತರ ಕೊರಿಯಾ ಅಪರಿಚಿತ ಕ್ಷಿಪಣಿಯನ್ನು ತನ್ನ ಪೂರ್ವ ಸಮುದ್ರದ ಕಡೆ ಹಾರಿಸಿದೆ ಎಂದು ತಿಳಿಸಿದ್ದಾರೆ. ಆದರೆ ಕ್ಷಿಪಣಿಯನ್ನು ಎಲ್ಲಿಂದ ಹಾರಿಸಲಾಯಿತು ಹಾಗೂ ಯಾವ ಗುರಿಗೆ ಹಾರಿಸಲಾಯಿತು ಎಂಬ ಬಗ್ಗೆ ತಿಳಿಸಿಲ್ಲ. ಇದನ್ನೂ ಓದಿ: ಕಂಟೈನರ್ ಡಿಪೋದಲ್ಲಿ ಬೆಂಕಿ: 16 ಸಾವು, 450ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ಉತ್ತರ ಕೊರಿಯಾ ಆರ್ಥಿಕ ನಿರ್ಬಂಧಗಳನ್ನು ಎಸುರಿಸುತ್ತಿದ್ದರೂ ಈ ವರ್ಷ ತನ್ನ ಶಸ್ತ್ರಾಸ್ತ್ರ ನವೀಕರಣ ಯೋಜನೆಗಳನ್ನು ದ್ವಿಗುಣಗೊಳಿಸಿದೆ. ತನ್ನ 7ನೇ ಪರಮಾಣು ಕ್ಷಿಪಣಿ ಪರೀಕ್ಷೆಯನ್ನು ಶೀಘ್ರವೇ ನಡೆಸಲಿದೆ ಎಂದು ಅಮೆರಿಕ ಹಾಗೂ ದಕ್ಷಿಣ ಕೊರಿಯ ಅಧಿಕಾರಿಗಳು ಕಳೆದ 1 ವಾರದಿಂದ ಹೇಳುತ್ತಲೇ ಇದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್ ಹತ್ಯೆಗೆ ಸಂಚು- ಬಿಗಿ ಭದ್ರತೆ
ಕಳೆದ ತಿಂಗಳು 3 ಕ್ಷಿಪಣಿಗಳನ್ನು ಉತ್ತರ ಕೊರಿಯಾ ಪರೀಕ್ಷಿಸಿದ್ದು, ಅವುಗಳಲ್ಲಿ ಅತಿದೊಡ್ಡ ಖಂಡಾಂತರ ಕ್ಷಿಪಣಿ ಹ್ವಾಸಾಂಗ್-17 ಕೂಡಾ ಇತ್ತು ಎಂದು ತಿಳಿದುಬಂದಿದೆ.
ಸಿಯೋಲ್: ದಕ್ಷಿಣ ಕೊರಿಯಾದ ವಾಯುಪಡೆಯ ಎರಡು ತರಬೇತಿ ವಿಮಾನಗಳು ಶುಕ್ರವಾರ ಹಾರಾಟ ನಡೆಸುತ್ತಿದ್ದ ವೇಳೆ ಪರಸ್ಪರ ಡಿಕ್ಕಿಯಾಗಿವೆ. ಅಪಘಾತದಲ್ಲಿ ಮೂವರು ಪೈಲಟ್‌ಗಳು ಸಾವಿಗೀಡಾಗಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.