Tag: south korea

  • 6 ವರ್ಷಗಳ ನಂತರ ದ.ಕೊರಿಯಾದಲ್ಲಿ ಅಮೆರಿಕ-ಚೀನಾ ಅಧ್ಯಕ್ಷರ ಭೇಟಿ; ಜಿನ್‌ಪಿಂಗ್‌ ಶ್ರೇಷ್ಠ ನಾಯಕ ಎಂದ ಟ್ರಂಪ್‌

    6 ವರ್ಷಗಳ ನಂತರ ದ.ಕೊರಿಯಾದಲ್ಲಿ ಅಮೆರಿಕ-ಚೀನಾ ಅಧ್ಯಕ್ಷರ ಭೇಟಿ; ಜಿನ್‌ಪಿಂಗ್‌ ಶ್ರೇಷ್ಠ ನಾಯಕ ಎಂದ ಟ್ರಂಪ್‌

    ಸಿಯೋಲ್: ಆರು ವರ್ಷಗಳ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (Xi Jinping) ದಕ್ಷಿಣ ಕೊರಿಯಾದಲ್ಲಿ ಮುಖಾಮುಖಿಯಾಗಿದ್ದಾರೆ.

    ಟ್ರಂಪ್‌ ಮತ್ತು ಜಿನ್‌ಪಿಂಗ್‌ ಭೇಟಿಯಾಗಿ ಪರಸ್ಪರರು ಹಸ್ತಾಲಾಘವ ಮಾಡಿದರು. ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಸಂಭಾವ್ಯ ವ್ಯಾಪಾರ ಯುದ್ಧ ನಡೆದಿತ್ತು. ಈ ಭೇಟಿಯು ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದದ ಭರವಸೆ ಮೂಡಿಸಿದೆ. ಇದನ್ನೂ ಓದಿ: ಮೋದಿ ಕಠಿಣ ವ್ಯಕ್ತಿ, ಶೀಘ್ರವೇ ಭಾರತದ ಜೊತೆ ವ್ಯಾಪಾರ ಒಪ್ಪಂದ: ಟ್ರಂಪ್‌ ಸುಳಿವು

    ನಾವು ಒಬ್ಬರಿಗೊಬ್ಬರು ಚೆನ್ನಾಗಿ ಅರಿತಿದ್ದೇವೆ. ನಮಗೆ ಉತ್ತಮ ಸಂಬಂಧವಿದೆ. ನಾವು ಅತ್ಯಂತ ಯಶಸ್ವಿ ಸಭೆ ನಡೆಸಲಿದ್ದೇವೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಜಿನ್‌ಪಿಂಗ್ ಬಹಳ ಕಠಿಣ ಸಂಧಾನಕಾರರು. ಅವರು ಒಂದು ದೊಡ್ಡ ದೇಶದ ಶ್ರೇಷ್ಠ ನಾಯಕ. ನಾವು ಬಹಳ ಸಮಯದವರೆಗೆ ಉತ್ತಮ ಸಂಬಂಧವನ್ನು ಹೊಂದಲಿದ್ದೇವೆ‌ ಟ್ರಂಪ್‌ ತಿಳಿಸಿದ್ದಾರೆ.

    ಹಲವು ಸವಾಲುಗಳ ನಡುವೆಯೂ ಚೀನಾ ಮತ್ತು ಯುಎಸ್‌ ಸಂಬಂಧ ಉತ್ತಮವಾಗಿದೆ. ನಾವಿಬ್ಬರೂ ಸರಿಯಾದ ಹಾದಿಯಲ್ಲಿ ಉಳಿಯಬೇಕು. ಚೀನಾ-ಯುಎಸ್‌ ಸಂಬಂಧಗಳನ್ನು ಖಚಿತಪಡಿಸಿಕೊಳ್ಳಬೇಕು. ಚೀನಾದ ಅಭಿವೃದ್ಧಿಯು ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠವಾಗಿಸುವ ನಿಮ್ಮ ದೃಷ್ಟಿಕೋನದೊಂದಿಗೆ ಕೈಜೋಡಿಸುತ್ತದೆ ಎಂದು ನಾನು ಭಾವಿಸಿದ್ದೇನೆ. ಎರಡೂ ದೇಶಗಳು ಪರಸ್ಪರ ಯಶಸ್ವಿಯಾಗಲು ಮತ್ತು ಒಟ್ಟಿಗೆ ಸಮೃದ್ಧಿಯಾಗಲು ಸಂಪೂರ್ಣವಾಗಿ ಸಮರ್ಥವಾಗಿವೆ. ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ಪಾಲುದಾರರು ಮತ್ತು ಸ್ನೇಹಿತರಾಗಿರಬೇಕು ಎಂದು ನಾನು ಹಲವು ಬಾರಿ ಸಾರ್ವಜನಿಕವಾಗಿ ಹೇಳಿದ್ದೇನೆ. ಇತಿಹಾಸವು ನಮಗೆ ಕಲಿಸಿದ್ದು ಇದನ್ನೇ ಎಂದು ಜಿನ್‌ಪಿಂಗ್‌ ಮಾತನಾಡಿದ್ದಾರೆ. ಇದನ್ನೂ ಓದಿ: ಕೆನಡಾದಲ್ಲಿ ಉದ್ಯಮಿ ಹತ್ಯೆ, ಗಾಯಕನ ಮನೆಗೆ ಬೆಂಕಿಯಿಟ್ಟ ಬಿಷ್ಣೋಯ್‌ ಗ್ಯಾಂಗ್‌

    ದಕ್ಷಿಣ ಬಂದರು ನಗರಿ ಬುಸಾನ್‌ನಲ್ಲಿ ನಡೆದ ಸಭೆ ಬಳಿಕ ಅಮೆರಿಕ ಅಧ್ಯಕ್ಷರ ಏಷ್ಯಾದಾದ್ಯಂತದ ಕಾರ್ಯನಿರತ ಪ್ರವಾಸ ಕೊನೆಗೊಂಡಿದೆ. ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯ ಹೊರತಾಗಿ ನಡೆದ ಮಾತುಕತೆಯ ಸಂದರ್ಭದಲ್ಲಿ ಕ್ಸಿ ಜೊತೆ ಒಪ್ಪಂದಕ್ಕೆ ಬರುವ ಬಗ್ಗೆ ಟ್ರಂಪ್ ಆಶಾವಾದ ವ್ಯಕ್ತಪಡಿಸಿದ್ದಾರೆ.

  • ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ, ಪ್ರವಾಹ, ಭೂಕುಸಿತ – 17 ಮಂದಿ ಸಾವು

    ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ, ಪ್ರವಾಹ, ಭೂಕುಸಿತ – 17 ಮಂದಿ ಸಾವು

    ಸಿಯೋಲ್: ದಕ್ಷಿಣ ಕೊರಿಯಾದ (South Korea) ಗ್ಯಾಪ್ಯೊಂಗ್ ಕೌಂಟಿಯಲ್ಲಿ ಭಾನುವಾರ ಸಂಭವಿಸಿದ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, 17 ಮಂದಿ ಮೃತಪಟ್ಟಿದ್ದಾರೆ.

    ಮನೆಗಳು ಮತ್ತು ಶಿಬಿರಗಳು ಜಲಾವೃತಗೊಂಡಿದ್ದು, ವಾಹನಗಳು ಪ್ರವಾಹಕ್ಕೆ ಸಿಲುಕಿವೆ. ಹಲವಾರು ಮಂದಿ ಕಾಣೆಯಾಗಿದ್ದಾರೆ. ಇದನ್ನೂ ಓದಿ: ಇಸ್ಕಾನ್‌ ರೆಸ್ಟೋರೆಂಟ್‌ಗೆ ಚಿಕನ್‌ ತಂದು ತಿಂದ ವ್ಯಕ್ತಿ – ನೆಟ್ಟಿಗರು ಗರಂ

    ಬುಧವಾರ ಮಳೆ ಆರಂಭವಾದಾಗಿನಿಂದ ದೇಶಾದ್ಯಂತ ಸಾವಿನ ಸಂಖ್ಯೆ 17 ಕ್ಕೆ ಏರಿದ್ದು, 11 ಜನರು ಕಾಣೆಯಾಗಿದ್ದಾರೆ, 13,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

    ಗ್ಯಾಪ್ಯೊಂಗ್‌ನಲ್ಲಿನ ಶಿಬಿರದ ಮೇಲೆ ಭೂಕುಸಿತ ಸಂಭವಿಸಿದ್ದು, 40 ರ ಹರೆಯದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರು ಕುಟುಂಬ ಸದಸ್ಯರು ಕಾಣೆಯಾಗಿದ್ದಾರೆ. ಇತರ 24 ಜನರು ಸಿಲುಕಿಕೊಂಡಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಥಾಯ್ಲೆಂಡ್‌ನಲ್ಲಿ ದರ್ಶನ್ ಕೂಲ್ ಕೂಲ್

    ಉಕ್ಕಿ ಹರಿಯುತ್ತಿದ್ದ ನದಿಗೆ ಅಡ್ಡಲಾಗಿ ಜಿಪ್-ಲೈನ್ ಮೂಲಕ ಶಿಬಿರದ ಬಳಿ ಒಬ್ಬ ವ್ಯಕ್ತಿಯನ್ನು ರಕ್ಷಿಸಲಾಗಿದೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರು, ಹಾನಿಯ ತ್ವರಿತ ಮೌಲ್ಯಮಾಪನಕ್ಕೆ ಸೂಚನೆ ನೀಡಿದ್ದಾರೆ. ವಿಶೇಷ ವಿಪತ್ತು ವಲಯಗಳನ್ನು ತ್ವರಿತವಾಗಿ ಗೊತ್ತುಪಡಿಸಲು ಆದೇಶಿಸಿದ್ದಾರೆ.

  • ಫ್ಯುಯೆಲ್ ಸ್ವಿಚ್ ನಿರ್ವಹಿಸುವಾಗ ಜಾಗ್ರತೆ – ಪೈಲಟ್‍ಗಳಿಗೆ ಆದೇಶಿಸಿದ ಇತಿಹಾದ್ ಏರ್‌ಲೈನ್ಸ್‌

    ಫ್ಯುಯೆಲ್ ಸ್ವಿಚ್ ನಿರ್ವಹಿಸುವಾಗ ಜಾಗ್ರತೆ – ಪೈಲಟ್‍ಗಳಿಗೆ ಆದೇಶಿಸಿದ ಇತಿಹಾದ್ ಏರ್‌ಲೈನ್ಸ್‌

    – ದ.ಕೊರಿಯಾದಲ್ಲೂ ಬೋಯಿಂಗ್ ವಿಮಾನಗಳ ಫ್ಯುಯೆಲ್ ಕಂಟ್ರೋಲ್ ಸ್ವಿಚ್ ಪರಿಶೀಲನೆ

    ಅಬುಧಾಬಿ: ಏರ್ ಇಂಡಿಯಾ (Air India) ವಿಮಾನ ಅಪಘಾತದ ಬಳಿಕ, ದುಬೈನ (Dubai) ಇತಿಹಾದ್ ಎರ್‌ಲೈನ್ಸ್ (Etihad Airlines) ಬೋಯಿಂಗ್ 787 (Boeing 787) ವಿಮಾನಗಳಲ್ಲಿನ ಇಂಧನ ಸ್ವಿಚ್ ಲಾಕ್‌ಗಳನ್ನು ಪರಿಶೀಲಿಸಲು ಮುಂದಾಗಿದೆ. ಬೋಯಿಂಗ್ 787 ಡ್ರೀಮ್‌ಲೈನರ್‌ಗಳ ಲಾಕಿಂಗ್ ಫ್ಲೀಟ್-ವೈಡ್ ತಪಾಸಣೆಗೆ ವಿಮಾನಯಾನ ಸಂಸ್ಥೆ ಆದೇಶಿಸಿದೆ. ಅಲ್ಲದೇ ಪೈಲಟ್‌ಗಳಿಗೆ ಇಂಧನದ ಸ್ವಿಚ್‌ ನಿರ್ವಹಿಸುವಾಗ ಜಾಗ್ರತೆವಹಿಸುವಂತೆ ಸೂಚಿಸಲಾಗಿದೆ.

    ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನದ ಎರಡೂ ಎಂಜಿನ್ ಇಂಧನ ನಿಯಂತ್ರಣ ಸ್ವಿಚ್‌ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ‘RUN’ ನಿಂದ ‘CUTOFF’ ಸ್ಥಾನಕ್ಕೆ ಬಂದಿತ್ತು ಎಂದು AAIB ವರದಿ ಬಹಿರಂಗಪಡಿಸಿದೆ. ಇದು ವಿಮಾನದ ಎಂಜಿನ್ ಒತ್ತಡ ಕಳೆದುಕೊಳ್ಳಲು ಕಾರಣವಾಯಿತು. ಈ ಬಗ್ಗೆ ಪೈಲಟ್‌ಗಳ ಸಂಭಾಷಣೆ ಬ್ಲಾಕ್‌ ಬಾಕ್ಸ್‌ನಲ್ಲಿ ರೆಕಾರ್ಡ್‌ ಆಗಿದ್ದು, ನೀವು ಇಂಧನದ ಸ್ವಿಚ್ ಏಕೆ ಆಫ್‌ ಮಾಡಿದ್ದೀರಿ ಎಂದು ಸಹಪೈಲಟ್‌ ಕೇಳಿದ್ದು ದಾಖಲಾಗಿದೆ. ಅಲ್ಲದೇ ಇದಕ್ಕೆ ಉತ್ತರಿಸಿರುವ ಮತ್ತೊಬ್ಬ ಪೈಲಟ್‌ ನಾನು ಆಫ್ ಮಾಡಲಿಲ್ಲ ಎಂದಿದ್ದರು. ಇದನ್ನೂ ಓದಿ: Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ

    ಇದೀಗ ಈ ವರದಿ ಬಿಡುಗಡೆಯಾದ ಬಳಿಕ ಇತಿಹಾದ್ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಇಂಧನ ನಿಯಂತ್ರಣ ಸ್ವಿಚ್‌ಗಳ ಲಾಕಿಂಗ್ ಕಾರ್ಯವಿಧಾನಗಳ ಫ್ಲೀಟ್-ವೈಡ್ ತಪಾಸಣೆಗೆ ಪ್ರತ್ಯೇಕ ಎಂಜಿನಿಯರಿಂಗ್ ಬುಲೆಟಿನ್‌ನ್ನು ಸಹ ಬಿಡುಗಡೆ ಮಾಡಲಾಗಿದೆ.

    2018ರಲ್ಲಿ ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ನವೀಕರಣ ಸಲಹೆ ಹೊರಡಿಸಿದ ಬಳಿಕ ಇತಿಹಾದ್ ಈ ಕ್ರಮ ಕೈಗೊಂಡಿದೆ. ಈ ಮೂಲಕ ಬೋಯಿಂಗ್ ವಿಮಾನಗಳ ನಿರ್ವಾಹಕರಿಗೆ ಇಂಧನ ನಿಯಂತ್ರಣ ಸ್ವಿಚ್‌ಗಳ ಮೇಲಿನ ಲಾಕಿಂಗ್ ಕಾರ್ಯವಿಧಾನಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ಅಲ್ಲದೇ, ಏರ್ ಇಂಡಿಯಾ ಈ ಸಲಹೆಯ ಮೇಲೆ ಕಾರ್ಯನಿರ್ವಹಿಸಲು ವಿಫಲವಾಗಿದೆ ಎಂದು ಇತಿಹಾದ್ ತನ್ನ ವರದಿಯಲ್ಲಿ ಹೇಳಿದೆ.

    ದಕ್ಷಿಣ ಕೊರಿಯಾದ (South Korea) ರಸ್ತೆ, ಮೂಲಸೌಕರ್ಯ ಮತ್ತು ಸಾರಿಗೆ ಸಚಿವಾಲಯ (MOLIT) ಬೋಯಿಂಗ್ 787 ವಿಮಾನಗಳನ್ನು ನಿರ್ವಹಿಸುವ ಎಲ್ಲಾ ಕೊರಿಯನ್ ವಿಮಾನಯಾನ ಸಂಸ್ಥೆಗಳಿಗೆ ಇಂಧನ ಸ್ವಿಚ್ ಕಾರ್ಯವಿಧಾನ ಪರಿಶೀಲನೆ ನಡೆಸುವುದು ಕಡ್ಡಾಯ ಎಂದು ಘೋಷಿಸಿದೆ. ಏರ್ ಇಂಡಿಯಾ ಅಪಘಾತದ ಬಳಿಕ ಮತ್ತು 2018ರ FAA ಸುರಕ್ಷತಾ ವರದಿಯ ಎಚ್ಚರಿಕೆಯ ಶಿಫಾರಸುಗಳಿಗೆ ಅನುಗುಣವಾಗಿ ಈ ಪರಿಶೀಲನೆಗೆ ಸೂಚಿಸಲಾಗುತ್ತಿದೆ. ಇದನ್ನೂ ಓದಿ: Ahmedabad Plane Crash | ನಾಗರಿಕ ವಿಮಾನಯಾನ ಸಚಿವಾಲಯಕ್ಕೆ 2 ಪುಟಗಳ ಪ್ರಾಥಮಿಕ ವರದಿ ಸಲ್ಲಿಸಿದ AAIB

  • ಪತ್ನಿಯ ವಿಚ್ಛೇದನದಿಂದ ಕೋಪಗೊಂಡ ಪತಿ – ರೈಲಿಗೆ ಬೆಂಕಿ ಹಚ್ಚಿ ಹುಚ್ಚಾಟ

    ಪತ್ನಿಯ ವಿಚ್ಛೇದನದಿಂದ ಕೋಪಗೊಂಡ ಪತಿ – ರೈಲಿಗೆ ಬೆಂಕಿ ಹಚ್ಚಿ ಹುಚ್ಚಾಟ

    – 22 ಜನರಿಗೆ ಉಸಿರಾಟದ ಸಮಸ್ಯೆ, 129 ಜನರಿಗೆ ಸ್ಥಳದಲ್ಲೇ ಚಿಕಿತ್ಸೆ

    ಸಿಯೋಲ್: ಹೆಂಡತಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡ ಪತಿ ರೈಲಿಗೆ ಬೆಂಕಿ ಹಚ್ಚಿ ಹುಚ್ಚಾಟ ಮಾಡಿದ ಘಟನೆ ದಕ್ಷಿಣ ಕೊರಿಯಾದ (South Korea) ಸಿಯೋಲ್‌ನಲ್ಲಿ (Seoul) ನಡೆದಿದೆ.

    ರೈಲಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಯನ್ನು ವಾನ್ (67) ಎಂದು ಗುರುತಿಸಲಾಗಿದೆ. ಪತ್ನಿ ವಿಚ್ಛೇದನ ಕೊಟ್ಟ ಕೋಪದಲ್ಲಿಯೇ ಪತಿ ಯೆಯೋಯಿನಾರು ನಿಲ್ದಾಣದಿಂದ ಮಾಪೋ ನಿಲ್ದಾಣಕ್ಕೆ ತೆರಳುವ ರೈಲಿಗೆ ಹತ್ತಿದ್ದ. ಜೊತೆಗೆ ಬೆಂಕಿ ಹಚ್ಚುವ ಪ್ಲ್ಯಾನ್‌ ಕೂಡ ಮಾಡಿಕೊಂಡಿದ್ದ. ಬೆಳಿಗ್ಗೆ 8:42ರ ಸುಮಾರಿಗೆ ರೈಲು ಹಾನ್ ನದಿಯ ಕೆಳಗಿರುವ ಸಿಯೋಲ್ ಸುರಂಗ ಮಾರ್ಗ ೫ರಲ್ಲಿ ಚಲಿಸುತ್ತಿದ್ದಂತೆಯೇ ದಿಢೀರನೇ ಗ್ಯಾಸೋಲಿನ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಹತ್ತುತ್ತಲೇ ತನ್ನ ಬಟ್ಟೆಗೂ ಬೆಂಕಿ ಹಚ್ಚಿಕೊಂಡಿದ್ದಾನೆ. ಇದರ ಪರಿಣಾಮ ರೈಲಿನಲ್ಲಿದ್ದ ೨೨ ಜನರು ಉಸಿರಾಟದ ಸಮಸ್ಯೆಯಾಗಿದೆ. ಉಸಿರಾಟದ ಸಮಸ್ಯೆಯಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಇದನ್ನೂ ಓದಿ: ದಾವಣಗೆರೆ | ವಂದೇ ಭಾರತ್‌ ರೈಲಲ್ಲಿ ಕಾಣಿಸಿಕೊಂಡ ಬೆಂಕಿ – ತಪ್ಪಿದ ಭಾರೀ ಅನಾಹುತ

    129 ಜನರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ವಾನ್‌ನನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿಯಿಂದಾಗಿ ರೈಲಿಗೆ ಸುಮಾರು 330 ಮಿಲಿಯನ್‌ನಷ್ಟು (33 ಕೋಟಿ ರೂ.) ಹಾನಿಯಾಗಿದೆ ಎಂದು ಮೂಲಗಳು ತಿಳಿಸಿದೆ.

    ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕೊಲೆ ಯತ್ನ ಹಾಗೂ ರೈಲ್ವೆ ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಆತನ ವಿರುದ್ಧ ಕೇಸ್ ದಾಖಲಿಸಿದ್ದಾರೆ.ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ದಾರುಣ ಸಾವು – ಸ್ಫೋಟಕ ರಹಸ್ಯ ಬಿಚ್ಚಿಟ್ಟ ಆ ಪತ್ರ

  • ದಕ್ಷಿಣ ಕೊರಿಯಾದಲ್ಲಿ ಕಾಡ್ಗಿಚ್ಚು – 24 ಸಾವು, 27 ಸಾವಿರ ಜನರ ಸ್ಥಳಾಂತರ

    ದಕ್ಷಿಣ ಕೊರಿಯಾದಲ್ಲಿ ಕಾಡ್ಗಿಚ್ಚು – 24 ಸಾವು, 27 ಸಾವಿರ ಜನರ ಸ್ಥಳಾಂತರ

    – 200 ಕಟ್ಟಡಗಳಿಗೆ ಹಾನಿ

    ಸಿಯೋಲ್: ದಕ್ಷಿಣ ಕೊರಿಯಾದ (South Korea) ಆಗ್ನೇಯ ಭಾಗಗಳಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚಿಗೆ 24 ಮಂದಿ ಸಾವನ್ನಪ್ಪಿದ್ದು, 200 ಕಟ್ಟಡಗಳಿಗೆ ಹಾನಿಯಾಗಿದೆ. ಅಲ್ಲದೇ ಆ ಪ್ರದೇಶದಲ್ಲಿದ್ದ 27,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಉತ್ತರ ಜಿಯೋಂಗ್ ಸಾಂಗ್ ಪ್ರಾಂತ್ಯದ ಸ್ಯಾಚಿಯಾಂಗ್ (Sancheong) ಕೌಂಟಿಯಲ್ಲಿ ಮಾ. 21ರಂದು ಸಂಜೆ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ರಾಜಧಾನಿ ಸಿಯೋಲ್‌ನಿಂದ ಸುಮಾರು 180 ಕಿ.ಮೀ ಆಗ್ನೇಯಕ್ಕಿರುವ ಉಯಿಸಿಯಾಂಗ್ ಕೌಂಟಿ ಭಾಗಕ್ಕೆ ಈ ಬೆಂಕಿಯು ವ್ಯಾಪಿಸಿತ್ತು. ಇದನ್ನೂ ಓದಿ: ಸತ್ಯವಂತರಿಗಿದು ಕಾಲವಲ್ಲ.. ದುಷ್ಟಜನರಿಗೆ ಸುಭಿಕ್ಷಕಾಲ: ಉಚ್ಚಾಟನೆಗೆ ದಾಸರ ಹಾಡಿನ ಮೂಲಕ ಯತ್ನಾಳ್ ಕೌಂಟರ್

    ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಐತಿಹಾಸಿಕ ಗೌನ್ಸಾ ದೇವಾಲಯ ಸೇರಿದಂತೆ ನೂರಾರು ಕಟ್ಟಡಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಜೊತೆಗೆ ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿರುವ ಪ್ರವಾಸಿ ತಾಣ ಹಾಹೋ ಫೋಕ್ ಗ್ರಾಮದ 8 ಕಿ.ಮೀ ಪ್ರದೇಶಕ್ಕೆ ಬೆಂಕಿ ಆವರಿಸಿಕೊಂಡಿದೆ. ಇದನ್ನೂ ಓದಿ: Aashiqui 3: ಕಾರ್ತಿಕ್‌ ಆರ್ಯನ್‌, ಶ್ರೀಲೀಲಾ ನಟನೆಯ ಸಿನಿಮಾ ಶೂಟಿಂಗ್‌ ಶುರು

    ಉಯಿಸಿಯಾಂಗ್‌ನಲ್ಲಿ (Uiseong) ಕಾಡ್ಗಿಚ್ಚು ನಿಯಂತ್ರಣ ಕಾರ್ಯದಲ್ಲಿದ್ದ ಹೆಲಿಕಾಪ್ಟರೊಂದು ಪತನಗೊಂಡಿದೆ. ಪರಿಣಾಮ ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್ ಸಾವನ್ನಪ್ಪಿದ್ದಾರೆ. ಕಾಡ್ಗಿಚ್ಚಿನಲ್ಲಿ 26ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ಜೈಕಾರ ಹಾಕೋನೇ ಬೇರೆ, ಜಿಲೇಬಿ ತಿನ್ನೋರೆ ಬೇರೆ: ಶಿವರಾಮ್ ಹೆಬ್ಬಾರ್

    ಉಯಿಸಿಯಾಂಗ್ ಕೌಂಟಿ ಪ್ರದೇಶದಲ್ಲಿ ಹೆಚ್ಚು ಗಾಳಿ ಬೀಸುತ್ತಿದ್ದು, ಬೆಂಕಿಯ ಕೆನ್ನಾಲಿಗೆಯೂ ಅನೇಕ ಪ್ರದೇಶಗಳಿಗೆ ಆವರಿಸಿಕೊಳ್ಳುತ್ತಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲೇ ಪರಮೇಶ್ವರ್‌ಗೆ ಮುಖ್ಯಮಂತ್ರಿ ಭಾಗ್ಯ: ಹಾಲುಮತ ಗೊರವಯ್ಯರಿಂದ ಕಾರ್ಣಿಕ ಭವಿಷ್ಯ

    130 ಹೆಲಿಕಾಪ್ಟರ್, 4,650 ಅಗ್ನಿಶಾಮಕ ದಳ ಹಾಗೂ ಸೈನಿಕರ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

  • ದ.ಕೊರಿಯಾ| ಯುದ್ಧ ವಿಮಾನದಿಂದ ಜನವಸತಿ ಪ್ರದೇಶಕ್ಕೆ ಆಕಸ್ಮಿಕವಾಗಿ ಬಿತ್ತು ಬಾಂಬ್

    ದ.ಕೊರಿಯಾ| ಯುದ್ಧ ವಿಮಾನದಿಂದ ಜನವಸತಿ ಪ್ರದೇಶಕ್ಕೆ ಆಕಸ್ಮಿಕವಾಗಿ ಬಿತ್ತು ಬಾಂಬ್

    ಸಿಯೋಲ್: ದಕ್ಷಿಣ ಕೊರಿಯಾದ (South Korea) ಕೆಎಫ್-16 ಯುದ್ಧ ವಿಮಾನವು ತರಬೇತಿಯ ವೇಳೆ ಪೋಚಿಯಾನ್ ಪ್ರದೇಶದ ಮೇಲೆ ಆಕಸ್ಮಿಕವಾಗಿ ಎಂಟು ಬಾಂಬ್‌ಗಳನ್ನು ಬೀಳಿಸಿದ್ದು, 8 ಜನರು ಗಾಯಗೊಂಡಿದ್ದಾರೆ.

    ಉತ್ತರ ಕೊರಿಯಾದ ಗಡಿ ಪ್ರದೇಶಕ್ಕೆ ಹತ್ತಿರವಿರುವ ಪೋಚಿಯಾನ್‌ನಲ್ಲಿ ಸಂಭವಿಸಿದೆ. ಈ ಪ್ರದೇಶವು ರಾಜಧಾನಿ ಸಿಯೋಲ್‌ನಿಂದ 40 ಕಿಲೋಮೀಟರ್ ದೂರದಲ್ಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಗಾಯಕಿ ಶಿವಶ್ರೀ ಜೊತೆ ಸಪ್ತಪದಿ ತುಳಿದ ಸಂಸದ ತೇಜಸ್ವಿ ಸೂರ್ಯ

    ಕೆಎಫ್-16 ಯುದ್ಧ ವಿಮಾನದಿಂದ ಎಂಕೆ-82 ಬಾಂಬ್‌ಗಳು ಆಕಸ್ಮಿಕವಾಗಿ ಪೋಚಿಯಾನ್ ಮೇಲೆ ಬಿದ್ದಿದೆ. ಇದರಿಂದಾಗಿ ಜನವಸತಿಗೆ ಹಾನಿಯಾಗಿದೆ. ಯುದ್ಧ ವಿಮಾನವು ಲೈವ್-ಫೈಯರಿಂಗ್ ತರಬೇತಿ ನಡೆಸುವ ವೇಳೆ ಈ ಅವಘಡ ಸಂಭವಿಸಿದೆ ಎಂದು ದಕ್ಷಿಣ ಕೊರಿಯಾದ ವಾಯುಪಡೆಯು ಹೇಳಿಕೆ ನೀಡಿದೆ. ಇದನ್ನೂ ಓದಿ: ಪಿಯು ವಿದ್ಯಾರ್ಥಿನಿ ಬದಲು ರಾಜ್ಯಶಾಸ್ತ್ರ ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆ ಅರೆಸ್ಟ್

    ಜನರಿಗಾದ ಹಾನಿಗೆ ಕ್ಷಮೆಯಾಚಿಸಿದ ವಾಯುಪಡೆ, ಸಂತ್ರಸ್ತರಿಗೆ ಪರಿಹಾರ ಮತ್ತು ಇತರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ಲಂಡನ್‌ನಲ್ಲಿ ಖಲಿಸ್ತಾನಿ ಉಗ್ರರಿಂದ ವಿದೇಶಾಂಗ ಸಚಿವ ಜೈಶಂಕರ್‌ ಮೇಲೆ ದಾಳಿಗೆ ಯತ್ನ

    6 ಮಂದಿ ನಾಗರಿಕರು ಮತ್ತು ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆಯಿಂದ 7 ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್‌ ಸುಕ್‌ ಬಂಧನ

    ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್‌ ಸುಕ್‌ ಬಂಧನ

    ಸಿಯೋಲ್: ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ಅವರನ್ನು ಕಾನೂನು ಜಾರಿ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಇದು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಅಧ್ಯಕ್ಷರ ಬಂಧನವಾಗಿದೆ.

    ಈ ತಿಂಗಳ ಆರಂಭದಲ್ಲಿ ನಡೆದ ವಿಫಲ ಪ್ರಯತ್ನದ ನಂತರ ಈ ಬಂಧನವಾಗಿದೆ. ಕಳೆದ ತಿಂಗಳು ಅಲ್ಪಾವಧಿಗೆ ಮಾರ್ಷಲ್‌ ಲಾ ಹೇರಿದ್ದಕ್ಕಾಗಿ ಯೂನ್ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು.

    ತನ್ನ ಅಧಿಕಾರ ವ್ಯಾಪ್ತಿ ಮೀರಿದ ಮತ್ತು ಮಾರ್ಷಲ್‌ ಲಾ ಜಾರಿಗೆ ತರಲು ಪ್ರಯತ್ನಿಸಿದ್ದರು. ತಮ್ಮ ವಿರುದ್ಧದ ಭಿನ್ನಾಭಿಪ್ರಾಯ ನಿಗ್ರಹಿಸಲು ಪ್ರಯತ್ನಿಸಿದ ಆರೋಪದ ಮೇಲೆ ಯೂನ್ ಅವರನ್ನು ತನಿಖೆಗೆ ಒಳಪಡಿಸಲಾಗಿದೆ. ಇದನ್ನು ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ ವ್ಯಾಪಕವಾಗಿ ಖಂಡಿಸಲಾಯಿತು.

    ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ಬಂಧನಕ್ಕಾಗಿ ಅವರ ನಿವಾಸಕ್ಕೆ ಬುಧವಾರ ಮುಂಜಾನೆ 1,000 ಕ್ಕೂ ಹೆಚ್ಚು ಭ್ರಷ್ಟಾಚಾರ ನಿಗ್ರಹ ತನಿಖಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ತೆರಳಿದ್ದರು.

  • 179 ಮಂದಿ ಸಾವು ಪ್ರಕರಣ – ದೇಶದ ಎಲ್ಲಾ ಬೋಯಿಂಗ್ 737-800 ವಿಮಾನ ಪರೀಕ್ಷೆಗೆ ಮುಂದಾದ ದ. ಕೊರಿಯಾ

    179 ಮಂದಿ ಸಾವು ಪ್ರಕರಣ – ದೇಶದ ಎಲ್ಲಾ ಬೋಯಿಂಗ್ 737-800 ವಿಮಾನ ಪರೀಕ್ಷೆಗೆ ಮುಂದಾದ ದ. ಕೊರಿಯಾ

    ಸಿಯೋಲ್: ದೇಶದ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಎಲ್ಲಾ ಬೋಯಿಂಗ್ 737-800 ವಿಮಾನಗಳ (Boeing 737-800 aircraft) ಸುರಕ್ಷತಾ ತಪಾಸಣೆ ನಡೆಸುವುದಾಗಿ ದಕ್ಷಿಣ ಕೊರಿಯಾದ (South Korea) ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

    ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ (Muan International Airport) ಲ್ಯಾಂಡಿಂಗ್‌ ವೇಳೆ ಸಂಭವಿಸಿದ ದುರಂತದಲ್ಲಿ 179 ಮಂದಿ ಸಾವಿಗೀಡಾದ ಬೆನ್ನಲ್ಲೇ ದೇಶದ ವಿಮಾನಯಾನ ಸಂಸ್ಥೆಗಳು ಈ ಕ್ರಮಕ್ಕೆ ಮುಂದಾಗಿದೆ. ಅಪಘಾತಕ್ಕೆ ನಿಖರ ಕಾರಣ ಏನೆಂಬುದನ್ನು ಪತ್ತೆಹಚ್ಚುವ ತನಿಖೆಯ ಭಾಗವಾಗಿ ತಪಾಸಣೆಗೆ ಮುಂದಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ದಕ್ಷಿಣ ಕೊರಿಯಾ | ಲ್ಯಾಂಡಿಂಗ್ ಗೇರ್‌ ವೈಫಲ್ಯದಿಂದ ವಿಮಾನ ಪತನ – 179 ಮಂದಿ ದುರ್ಮರಣ

    ದಕ್ಷಿಣ ಕೊರಿಯಾದ ಹಂಗಾಮಿ ಅಧ್ಯಕ್ಷ ಚೋಯ್ ಸಾಂಗ್-ಮೊಕ್ ಅವರಿಂದು ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ದೇಶದ ವಿಮಾನ ಕಾರ್ಯಾಚರಣೆ ವ್ಯವಸ್ಥೆಗಳ ತುರ್ತು ಪರಿಶೀಲನೆ ನಡೆಸಿದರು. ಅಲ್ಲದೇ ಇಂತಹ ಘಟನೆಗಳು ಪುನರಾವರ್ತನೆ ಆಗಬಾರದು. ಅದಕ್ಕಾಗಿ ಬೋಯಿಂಗ್ 737-800 ವಿಮಾನಗಳ ಸುರಕ್ಷತಾ ತಪಾಸಣೆ ನಡೆಸಿ, ದೇಶದ ಒಟ್ಟಾರೆ ವಾಯುಯಾನ ಸುರಕ್ಷತಾ ವ್ಯವಸ್ಥೆಯನ್ನ ನವೀಕರಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

    ಬೋಯಿಂಗ್‌ 737-800 ವಿಮಾನವು ಬೋಯಿಂಗ್‌-737 ಮ್ಯಾಕ್ಸ್‌ ಸರಣಿಗಿಂತಲೂ ವಿಭಿನ್ನವಾಗಿದೆ. ಆದ್ದರಿಂದ ಜೆಟ್‌ ಏರ್‌ಲೈನ್‌ಗಳ ಲೆಕ್ಕಪರಿಶೋಧನೆ ಮತ್ತು ಸುರಕ್ಷತಾ ಮಾನದಂಡಗಳ ಕುರಿತು ವಿಮರ್ಷೆ ನಡೆಸುವುದಾಗಿ ಡೆಲ್ಟಾ ಏರ್ ಲೈನ್ಸ್‌ನ ಮಾಜಿ ಮುಖ್ಯ ಪೈಲಟ್ ಮತ್ತು ಈಗ ಸಲಹೆಗಾರರಾಗಿರುವ ಅಲನ್ ಪ್ರೈಸ್ ಹೇಳಿದ್ದಾರೆ. ಇದನ್ನೂ ಓದಿ: ಮಹಿಳೆಯರನ್ನು ಉದ್ಯೋಗದಿಂದ ಕೈಬಿಡಿ – ಎನ್‌ಜಿಒಗಳಿಗೆ ತಾಲಿಬಾನ್‌ ಎಚ್ಚರಿಕೆ

    ಒಂದು ದಿನದ ಹಿಂದೆಯಷ್ಟೇ ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ಪತನಗೊಂಡ ವಿಮಾನ ಕಂಪನಿಯು 39 ಬೋಯಿಂಗ್ 737-800 ಸರಣಿಯ ವಿಮಾನಗಳನ್ನು ನಿರ್ವಹಿಸುತ್ತದೆ. ಒಟ್ಟು 181 ಮಂದಿ ಪ್ರಯಾಣಿಕ ಪೈಕಿ ಇಬ್ಬರು ಮಾತ್ರ ಬದುಕುಳಿದು ಪವಾಡ ಸೃಷ್ಟಿಸಿದ್ದಾರೆ, ಆದ್ರೆ ಅವರ ಆರೋಗ್ಯ ಸ್ಥಿತಿಯೂ ಗಂಭೀರವಾಗಿದೆ ಏನ್ನಲಾಗಿದೆ. ಇದನ್ನೂ ಓದಿ: ಗ್ರೀನ್‌ಲ್ಯಾಂಡ್‌ ಮೇಲೆ ಟ್ರಂಪ್‌ಗೆ ಕಣ್ಣೇಕೆ? ಲಾಭವೇನು?

  • ದಕ್ಷಿಣ ಕೊರಿಯಾ | ಲ್ಯಾಂಡಿಂಗ್ ಗೇರ್‌ ವೈಫಲ್ಯದಿಂದ ವಿಮಾನ ಪತನ – 179 ಮಂದಿ ದುರ್ಮರಣ

    ದಕ್ಷಿಣ ಕೊರಿಯಾ | ಲ್ಯಾಂಡಿಂಗ್ ಗೇರ್‌ ವೈಫಲ್ಯದಿಂದ ವಿಮಾನ ಪತನ – 179 ಮಂದಿ ದುರ್ಮರಣ

    ಸಿಯೋಲ್: 181 ಜನ ಪ್ರಯಾಣಿಕರಿದ್ದ ವಿಮಾನ ಲ್ಯಾಂಡಿಂಗ್ ವೇಳೆ ಪತನಗೊಂಡ ಘಟನೆ ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 179 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ದಕ್ಷಿಣ ಜಿಯೋಲ್ಲಾ ಪ್ರಾಂತ್ಯದಲ್ಲಿ ಈ ಅಪಘಾತ ಸಂಭವಿಸಿದೆ. ಜೆಜು ಏರ್ ಫ್ಲೈಟ್ 2216 ಥೈಲ್ಯಾಂಡ್‌ನಿಂದ ಹಿಂದಿರುಗಿತ್ತು. ವಿಮಾನದಲ್ಲಿದ್ದ 181 ಜನರಲ್ಲಿ 175 ಮಂದಿ ಪ್ರಯಾಣಿಕರು ಮತ್ತು 6 ಮಂದಿ ವಿಮಾನ ಸಿಬ್ಬಂದಿ ಸೇರಿದ್ದಾರೆ. ಲ್ಯಾಂಡಿಂಗ್ ಗೇರ್‌ ಸಮಸ್ಯೆಯಿಂದ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಲ್ಯಾಂಡಿಂಗ್ ವಿಫಲವಾದ ಬಳಿಕ ವಿಮಾನವು ನಿಲ್ದಾಣದ ತಡೆಗೋಡೆಗೆ ಅಪ್ಪಳಿಸಿದೆ. ಇದರಿಂದ ದೊಡ್ಡ ಸ್ಫೋಟ ಸಂಭವಿಸಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಹಕ್ಕಿಗಳಿಗೆ ವಿಮಾನ ಡಿಕ್ಕಿಯಾದ ಪರಿಣಾಮ ಲ್ಯಾಂಡಿಂಗ್ ಗೇರ್ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ ವೇಳೆ ಇಬ್ಬರು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • ದಕ್ಷಿಣ ಕೊರಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    ದಕ್ಷಿಣ ಕೊರಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    ಸಿಯೋಲ್: ಹಠಾತ್‌ ಬೆಳವಣಿಗೆಯಲ್ಲಿ ದಕ್ಷಿಣ ಕೊರಿಯಾದ (South Korea) ತುರ್ತು ಪರಿಸ್ಥಿತಿಯನ್ನು  ಘೋಷಣೆ ಮಾಡಲಾಗಿದೆ.

    ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೆಲ್ (Yoon Suk Yeol) ಅವರು ಮಂಗಳವಾರ ರಾತ್ರಿ ದೂರದರ್ಶನ ಭಾಷಣದಲ್ಲಿ ತುರ್ತು ಮಿಲಿಟರಿ ಆಡಳಿತವನ್ನು (Martial Law) ಘೋಷಣೆ ಮಾಡುವುದಾಗಿ ಪ್ರಕಟಿಸಿದರು.

    ಉತ್ತರ ಕೊರಿಯಾದ (North Korea) ಕಮ್ಯುನಿಸ್ಟ್ ಪಡೆಗಳ ಬೆದರಿಕೆಗಳಿಂದ ದಕ್ಷಿಣ ಕೊರಿಯಾವನ್ನು ರಕ್ಷಿಸಲು ಮತ್ತು ಜನರ ಸ್ವಾತಂತ್ರ್ಯ ಮತ್ತು ಸಂತೋಷವನ್ನು ಲೂಟಿ ಮಾಡುವ ರಾಜ್ಯ ವಿರೋಧಿ ಅಂಶಗಳನ್ನು ನಿರ್ಮೂಲನೆ ಮಾಡಲು ತುರ್ತು ಸಮರ ಕಾನೂನನ್ನು ಘೋಷಿಸುತ್ತೇನೆ ಎಂದು ಯೂನ್ ಸುಕ್ ಯೆಲ್ ತಮ್ಮ ಭಾಷಣದಲ್ಲಿ ತಿಳಿಸಿದರು.

    ಜನರ ಜೀವನೋಪಾಯವನ್ನು ಪರಿಗಣಿಸದೆ, ವಿರೋಧ ಪಕ್ಷವು ಕೇವಲ ದೋಷಾರೋಪಣೆ ಮಾಡುತ್ತಿದೆ. ವಿಶೇಷ ತನಿಖೆಗಳು ಮತ್ತು ತಮ್ಮ ನಾಯಕನನ್ನು ನ್ಯಾಯದಿಂದ ರಕ್ಷಿಸುವ ಸಲುವಾಗಿ ಆಡಳಿತವನ್ನು ನಿಷ್ಕ್ರಿಯಗೊಳಿಸಿದೆ ಎಂದು ದೂರಿದರು.


    ದಕ್ಷಿಣ ಕೊರಿಯಾದಲ್ಲಿ 1980 ರ ನಂತರ ಮೊದಲ ಬಾರಿಗೆ ಮಿಲಿಟರಿ ಆಡಳಿತ ಜಾರಿಗೆ ಬಂದಿದೆ. ಮಿಲಿಟರಿ ಆಡಳಿತದ ಸಮಯದಲ್ಲಿ ಸಂಸತ್ತು ಮತ್ತು ರಾಜಕೀಯ ಪಕ್ಷಗಳ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಮಾಧ್ಯಮಗಳು ಮಿಲಿಟರಿ ನಿಯಂತ್ರಣದಲ್ಲಿರುತ್ತಾರೆ ಎಂದು ವರದಿಯಾಗಿದೆ.