Tag: South Indian

  • ಸೌತ್ ಇಂಡಿಯನ್ ಹೀರೋಗೆ ಉಪ್ಪಿ ಸಾಥ್

    ಸೌತ್ ಇಂಡಿಯನ್ ಹೀರೋಗೆ ಉಪ್ಪಿ ಸಾಥ್

    ಹಿಂದೆ ಫಸ್ಟ್ ರ‍್ಯಾಂಕ್ ರಾಜು, ರಾಜು ಕನ್ನಡ ಮೀಡಿಯಂ ನಂಥ ಯಶಸ್ವೀ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ನರೇಶ್‌ಕುಮಾರ್ ಹೆಚ್.ಎನ್. ಹೊಸಳ್ಳಿ ಈಗ ಮತ್ತೊಂದು ಚಿತ್ರವನ್ನು ತೆರೆಗೆ ತರಲು ಅಣಿಯಾಗಿದ್ದಾರೆ. ಆ ಚಿತ್ರದ  ಹೆಸರು ಸೌತ್ ಇಂಡಿಯನ್ ಹೀರೋ. ನಿರ್ದೇಶನದ  ಜೊತೆಗೆ ಪತ್ನಿ ಶಿಲ್ಪಾ ಅವರ ಜೊತೆಗೂಡಿ  ಚಿತ್ರಕ್ಕೆ ಬಂಡವಾಳವನ್ನೂ ಸಹ ಹಾಕಿದ್ದಾರೆ. ಈ ಚಿತ್ರದಲ್ಲಿ ಕಿರುತೆರೆ ನಟ  ಸಾರ್ಥಕ್ ನಾಯಕನಾಗಿದ್ದು, ನಾಯಕಿಯರಾಗಿ ಕಾಶಿಮಾ ಹಾಗೂ ಮುಂಬೈ ಮೂಲದ ಊರ್ವಶಿ ನಟಿಸಿದ್ದಾರೆ.  ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಚಿತ್ರತಂಡ  ಹಮ್ಮಿಕೊಂಡಿತ್ತು. ನಟ ಉಪೇಂದ್ರ ಟ್ರೈಲರ್ ರಿಲೀಸ್ ಮಾಡಿ ಶುಭ ಹಾರೈಸಿದರು.

    ತಮ್ಮ ನಿರ್ಮಾಣ ಹಾಗೂ ನಿರ್ದೇಶನದ ಸೌತ್ ಇಂಡಿಯನ್ ಹೀರೋ ಚಿತ್ರದ ಕುರಿತಂತೆ ಮಾಹಿತಿ ಹಂಚಿಕೊಂಡ  ನರೇಶಕುಮಾರ್, ನನ್ನ ನಿರ್ದೇಶನದ 4ನೇ ಚಿತ್ರವಿದು. ಒಂದು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಚಿತ್ರವನ್ನು ಉಪೇಂದ್ರ ಅವರಿಗೆ ತೋರಿಸಿದಾಗ ಅವರು ತುಂಬಾ ಇಷ್ಟಪಟ್ಟರು. ಚಿತ್ರದ ನಾಯಕ  ಭೌತಶಾಸ್ತ್ರದ ಶಿಕ್ಷಕ ಲಾಜಿಕ್ ಲಕ್ಷ್ಮಣರಾವ್, ಚಿತ್ರರಂಗದ ಯಾವುದೇ ಸಂಪರ್ಕವಿಲ್ಲದ ಆತ ಹೇಗೆ ಚಿತ್ರರಂಗಕ್ಕೆ ಬರುತ್ತಾನೆ, ಬಂದಮೇಲೆ ಏನೆಲ್ಲ ಸಂಕಷ್ಟ ಎದುರಿಸುತ್ತಾನೆ ಎನ್ನುವುದೇ ಚಿತ್ರದ ತಿರುಳು. ನಾಯಕನ ಪಾತ್ರಕ್ಕೆ ಮೂರು ಶೇಡುಗಳಿವೆ. ಒಂದರಲ್ಲಿ ಹಳ್ಳಿಯ ಬ್ಯಾಕ್‌ಡ್ರಾಪ್ ಇದ್ದರೆ, ಮತ್ತೊಂದು ಸಿಟಿಯ ಹಿನ್ನೆಲೆಯಲ್ಲಿರುತ್ತದೆ. ಟ್ರೈಲರ್ ಬಿಟ್ಟು ಇನ್ನೊಂದು ಸ್ಪೆಷಲ್ ಕ್ಯಾರೆಕ್ಟರ್  ಕೂಡ ಚಿತ್ರದಲ್ಲಿದೆ. ಇಮೇಜ್ ಇಲ್ಲದ ಒಬ್ಬ ಯುವಕ ಮುಂದೆ ದೊಡ್ಡ ನಾಯಕನಾಗಿ ಏನೆಲ್ಲಾ   ಸಮಸ್ಯೆಗಳನ್ನು ಎದುರಿಸುತ್ತಾನೆಂದು ಚಿತ್ರದ ಮೂಲಕ ಹೇಳಿದ್ದೇನೆ ಎಂದು ಹೇಳಿದರು.

    ನಾಯಕನಟ ಸಾರ್ಥಕ್ ಮಾತನಾಡುತ್ತ ಅವನು ಮತ್ತು ಶ್ರಾವಣಿ ಸೇರಿದಂತೆ ಕೆಲ  ಧಾರಾವಾಹಿಗಳಲ್ಲಿ ಅಭಿನಯಿಸಿದ್ದೆ, ಇದೊಂದು ವಿಭಿನ್ನವಾದ ಪಾತ್ರ, ಒಬ್ಬ ಸ್ಟಾರ್ ನಟನ ಪರ್ಸನಲ್ ಲೈಫ್ ಹೇಗಿರುತ್ತೆ,  ಲಾಜಿಕ್ ಲಕ್ಷ್ಮಣರಾವ್ ಎಲ್ಲಾ  ವಿಷಯಗಳನ್ನು ಲಾಜಿಕ್‌ನಲ್ಲಿ ನೋಡುವಾತ, ಅವನು ಸಿನಿಮಾಗೆ ಬಂದನಂತರ ಮುಂದೇನಾಗುತ್ತದೆ ಎನ್ನುವುದು ಕಥೆಯ ತಿರುಳು ಎಂದರು. ಇದನ್ನೂ ಓದಿ: ಹೊಸ ಕಥೆ ಇದ್ದರೆ ಜನ ಒಪ್ಪಿಕೊಳ್ತಾರೆ, `ಕಾಂತಾರ’ ಸಕ್ಸಸ್ ಬಗ್ಗೆ ಕಿಚ್ಚನ ಮಾತು

    ನಾಯಕಿ ಕಾಶಿಮಾ ಮಾತನಾಡುತ್ತ ಈ ಚಿತ್ರದಲ್ಲಿ ನಾನು ಹಳ್ಳಿಯ ಶಿಕ್ಷಕಿ ಮಾನಸಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,  ಉತ್ತರ ಕರ್ನಾಟಕ  ಬಾಷೆಯನ್ನು ಮಾತನಾಡಿದ್ದೇನೆ ಎಂದು ಹೇಳಿದರು. ನಿರ್ಮಾಪಕಿ ಶಿಲ್ಪಾ ಮಾತನಾಡುತ್ತ  ಮನರಂಜನೆಯ ಉದ್ದೇಶ ಇಟ್ಟುಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ ಎಂದರು. ಚಿತ್ರದಲ್ಲಿ ಒಬ್ಬ ನಿರ್ದೇಶಕನಾಗಿ  ವಿಜಯ್ ಚೆಂಡೂರು ಕಾಣಿಸಿಕೊಂಡಿದ್ದಾರೆ. ಅಮಿತ್, ಅಶ್ವಿನ್ ಕೊಡಂಗಿ, ಅಶ್ವಿನ್‌ರಾವ್ ಪಲ್ಲಕ್ಕಿ ಎಲ್ಲರೂ ತಂತಮ್ಮ ಪಾತ್ರಗಳ ಬಗ್ಗೆ  ಹೇಳಿಕೊಂಡರು. ಸಂಗೀತ ನಿರ್ದೇಶಕ ಹರ್ಷವರ್ಧನ್ ಮಾತನಾಡಿ ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ತುಂಬಾ ಚೆನ್ನಾಗಿ ಮೂಡಿಬಂದಿವೆ ಎಂದರು. ಘಮಘಮ ಎಂಬ ಉತ್ತರ ಕರ್ನಾಟಕ ಶೈಲಿಯ ಹಾಡಿಗೆ ಸಂಗೀತ ನೀಡಿದ್ದಾರೆ. ರಾಜಶೇಖರ್ ಹಾಗೂ ಪ್ರವೀಣ್ ಎಸ್. ಅವರ ಛಾಯಾಗ್ರಹಣ, ನರೇಶಕುಮಾರ್ ಅವರ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಈ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೇಳೆ ಬಳಸದೇ ಮಾಡಿ ರುಚಿಕರವಾದ ರಸಂ

    ಬೇಳೆ ಬಳಸದೇ ಮಾಡಿ ರುಚಿಕರವಾದ ರಸಂ

    ಕ್ಷಿಣ ಭಾರತದಲ್ಲಿ (South Indian) ಅನ್ನ ಹಾಗೂ ರಸಂನ (Rasam) ಸಂಯೋಜನೆ ಇಲ್ಲದೇ ಹೋದರೆ ಊಟ ಅಪೂರ್ಣವಾದಂತೆ. ದಕ್ಷಿಣ ಭಾರತವಾದರೂ ವಿವಿಧ ರಾಜ್ಯಗಳಲ್ಲಿ ಬೇರೇ ಬೇರೆ ರೀತಿಯಲ್ಲಿಯೇ ರಸಂ ತಯಾರಿಸಲಾಗುತ್ತದೆ. ನಾವಿಂದು ಪ್ರೆಶರ್ ಕುಕ್ಕರ್ ಹಾಗೂ ಬೇಳೆಯನ್ನು ಬಳಸದೇ ರಸಂ ಮಾಡುವ ವಿಧಾನವನ್ನು ಹೇಳಿಕೊಡುತ್ತೇವೆ. ನೀವೂ ಕೂಡಾ ಇದನ್ನು ಮನೆಯಲ್ಲಿ ಮಾಡಿ ಆನಂದಿಸಿ.

    ಬೇಕಾಗುವ ಪದಾರ್ಥಗಳು:
    ಪೇಸ್ಟ್ ತಯಾರಿಸಲು:
    ಜೀರಿಗೆ – 1 ಟೀಸ್ಪೂನ್
    ಕರಿಮೆಣಸು – 1 ಟೀಸ್ಪೂನ್
    ಬೆಳ್ಳುಳ್ಳಿ – 3 ಎಸಳು
    ಕೊತ್ತಂಬರಿ ಬೀಜ – 2 ಟೀಸ್ಪೂನ್

    ರಸಂ ತಯಾರಿಸಲು:
    ಎಣ್ಣೆ – 2 ಟೀಸ್ಪೂನ್
    ಸಾಸಿವೆ – 1 ಟೀಸ್ಪೂನ್
    ಒಣ ಕೆಂಪು ಮೆಣಸಿನಕಾಯಿ – 2
    ಕರಿಬೇವಿನ ಎಲೆ – ಸ್ವಲ್ಪ
    ಇಂಗ್ – ಚಿಟಿಕೆ
    ಹೆಚ್ಚಿದ ಟೊಮೆಟೊ – 1
    ಅರಿಶಿನ – ಕಾಲು ಟೀಸ್ಪೂನ್
    ಉಪ್ಪು – 1 ಟೀಸ್ಪೂನ್
    ಸೀಳಿದ ಮೆಣಸಿನಕಾಯಿ – 1
    ಹುಣಸೆಹಣ್ಣಿನ ಸಾರ – 1 ಕಪ್
    ನೀರು – 3 ಕಪ್
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಮನೆಯಲ್ಲಿಯೇ ಮಾಡಿ ಗರಿಗರಿಯಾದ ನೆಲಗಡಲೆ ಮಸಾಲಾ

    ಮಾಡುವ ವಿಧಾನ:
    * ಮೊದಲಿಗೆ ಬ್ಲೆಂಡರ್‌ಗೆ ಜೀರಿಗೆ, ಕರಿಮೆಣಸು, ಬೆಳ್ಳುಳ್ಳಿ ಮತ್ತು ಕೊತ್ತಂಬರಿ ಬೀಜ ಹಾಕಿ, ನೀರನ್ನು ಸೇರಿಸದೇ ಒರಟಾಗಿ ಪೇಸ್ಟ್ ತಯಾರಿಸಿ ಪಕ್ಕಕ್ಕಿಡಿ.
    * ದೊಡ್ಡ ಕಡಾಯಿಯಲ್ಲಿ ಎಣ್ಣೆ, ಸಾಸಿವೆ, ಒಣ ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆ ಹಾಗೂ ಚಿಟಿಕೆ ಇಂಗ್ ಹಾಕಿ ಹುರಿಯಿರಿ.
    * ಮೊದಲೇ ತಯಾರಿಸಿಟ್ಟ ಪೇಸ್ಟ್ ಅನ್ನು ಸೇರಿಸಿ, ಒಂದು ನಿಮಿಷ ಬೇಯಿಸಿ.
    * ಈಗ ಟೊಮೆಟೊ, ಅರಿಶಿನ, ಉಪ್ಪು ಮೆಣಸಿನಕಾಯಿ ಸೇರಿಸಿ, ಟೊಮೆಟೊ ಮೃದುವಾಗುವವರೆಗೆ ಸಾಟ್ ಮಾಡಿ.
    * ಬಳಿಕ ಹುಣಸೆಹಣ್ಣಿನ ಸಾರ ಮತ್ತು 3 ಕಪ್ ನೀರು ಸೇರಿಸಿ, ಚೆನ್ನಾಗಿ ಬೆರೆಸಿ.
    * ಈಗ ಕಡಾಯಿಯನ್ನು ಮುಚ್ಚಿ, ಹಸಿ ಪರಿಮಳ ಹೋಗುವವರೆಗೆ ಸುಮಾರು 8 ನಿಮಿಷ ಕುದಿಸಿ.
    * ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ.
    * ಈಗ ರುಚಿಕರವಾದ ರಸಂ ತಯಾರಾಗಿದ್ದು, ಬಿಸಿಯಾದ ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ಆರೋಗ್ಯಕರ ಮೆಂತ್ಯ ಸೊಪ್ಪಿನ ಬಾಜಿ ಮಾಡಿ ನೋಡಿ

    Live Tv
    [brid partner=56869869 player=32851 video=960834 autoplay=true]

  • ದಕ್ಷಿಣ ಭಾರತೀಯರಿಗೆ ಯುದ್ಧದ ಅನುಭವವಾಯ್ತು- ನನಗೆ ಮಾತೃಭೂಮಿ ಮೇಲೆ ಪ್ರೀತಿ ಜಾಸ್ತಿಯಾಯ್ತು: ಅನೀಫ್ರೆಡ್ ಡಿಸೋಜಾ

    ದಕ್ಷಿಣ ಭಾರತೀಯರಿಗೆ ಯುದ್ಧದ ಅನುಭವವಾಯ್ತು- ನನಗೆ ಮಾತೃಭೂಮಿ ಮೇಲೆ ಪ್ರೀತಿ ಜಾಸ್ತಿಯಾಯ್ತು: ಅನೀಫ್ರೆಡ್ ಡಿಸೋಜಾ

    ಉಡುಪಿ: ರಷ್ಯಾ-ಉಕ್ರೇನ್ ನಡುವಿನ ಯುದ್ಧದಿಂದ ದಕ್ಷಿಣ ಭಾರತೀಯರಿಗೆ ಯುದ್ಧದ ಅನುಭವವಾದರೆ, ನನಗೆ ಮಾತೃಭೂಮಿ ಮೇಲೆ ಪ್ರೀತಿ ಜಾಸ್ತಿಯಾಯ್ತು ಎಂದು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಕಹಿ ಅನುಭವಗಳನ್ನು ಉಡುಪಿಯ ಅನೀಫ್ರೆಡ್ ರೆಡ್ಲೀ ಡಿಸೋಜಾ ವಿವರಿಸಿದರು.

    ಪಬ್ಲಿಕ್ ಟಿವಿ ಜೊತೆ ಯುದ್ಧಭೂಮಿಯ ಅನುಭವ ಬಿಚ್ಚಿಟ್ಟ ಅವರು,ನಾವು ದಕ್ಷಿಣ ಭಾರತದವರು. ನಾವು ಯುದ್ಧ, ಬಾಂಬ್, ಶೆಲ್, ವಿಮಾನಗಳ ಓಡಾಟ ಯಾವುದನ್ನು ಕೂಡ ನಾವು ನೋಡಿಲ್ಲ. ಜೀವನದಲ್ಲಿ ಮೊದಲ ಬಾರಿಗೆ ಯುದ್ಧ ವಿಮಾನಗಳನ್ನು ನೋಡಿದ್ದೇನೆ. ಬಾಂಬ್‍ಗಳು ಶೆಲ್ ದಾಳಿ ಎಲ್ಲವೂ ಮೊದಲು. ಉತ್ತರ ಭಾರತದ ನನ್ನ ಫ್ರೆಂಡ್ಸ್ ಬಂಕರ್ ಒಳಗೆ ಇದ್ದಾಗಲೂ ಪಿಕ್ನಿಕ್ ರೀತಿಯಲ್ಲಿ ಇದ್ದರು. ಆದರೆ ನಾವು ಬಹಳ ಕಷ್ಟಪಟ್ಟು ಹತ್ತು ದಿನಗಳನ್ನು ಕಳೆದೆವು. ನಮಗೆ ಜೋರು ಹಸಿವಾಗ್ತಾ ಇದ್ರೂ ಸ್ವಲ್ಪ ಊಟ ಮಾಡಬೇಕಾಗಿತ್ತು. ಇಂದಿನ ಆಹಾರವನ್ನು ನಾಳೆ ಮತ್ತು ನಾಡಿದ್ದಿಗೆ ತೆಗೆದು ಇಡಬೇಕಾದ ಪರಿಸ್ಥಿತಿ ಎದುರಿಸಿದೆವು. ಏನೂ ಶಬ್ದ ಮಾಡದೆ ಸುಮ್ಮನೆ ಕುಳಿತುಕೊಳ್ಳುವುದೇ ನಮಗೆ ದೊಡ್ಡ ಶಿಕ್ಷೆಯ ಹಾಗೆ ಅನ್ನಿಸುತ್ತಿತ್ತು. ಹಗಲು ಮತ್ತು ರಾತ್ರಿ ನಾವು ಲೈಟ್ ಹಾಕದೆ ಕತ್ತಲಲ್ಲೇ ಕಳೆಯಬೇಕಾಗಿತ್ತು. ಇದು ನಮ್ಮ ಮನಸ್ಸಿಗೆ ಬಹಳ ಕಿರಿಕಿರಿಯಾಗುತ್ತಿತ್ತು ಎಂದು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಕಹಿ ಅನುಭವಗಳನ್ನು ವಿವರಿಸಿದರು. ಇದನ್ನೂ ಓದಿ: ಹೋಟೆಲ್‍ನಲ್ಲಿ ಅತ್ಯಾಚಾರಕ್ಕೆ ಯತ್ನ – ಬಿಹಾರ ಕ್ರಿಕೆಟ್ ಮುಖ್ಯಸ್ಥನ ವಿರುದ್ಧ ಆರೋಪ

    ಖಾರ್ಕಿವ್‍ನ ಬಂಕರ್‍ನಲ್ಲಿ ನಾವು 10 ದಿನ ಕಳೆಯಬೇಕಾಯಿತು. ಸರಿಯಾಗಿ ನಿದ್ದೆ ಇಲ್ಲ ಊಟ ಇಲ್ಲ ಅದರ ಜೊತೆಗೆ ಜೀವಭಯ. ನಮಗೆ ರಾಯಭಾರಿ ಕಚೇರಿಯಿಂದ ಸಂದೇಶ ಬಂತು. ಕೂಡಲೇ ಬಂಕರ್ ಖಾಲಿ ಮಾಡಿ ಎಂದು. ಹೊರಬಂದು ನಾವು ಬಸ್‍ಗಾಗಿ ಬಹಳ ಕಾದೆವು. ಪ್ರೈವೇಟ್ ವಾಹನಗಳನ್ನು ಮಾಡಲು ಪ್ರಯತ್ನಪಟ್ಟೆವು. ಅದು ಸಾಧ್ಯವಾಗದಿದ್ದಾಗ ಸುಮಾರು ಎಂಟು ಕಿಲೋಮೀಟರ್‌ಗಳ ದೂರವನ್ನು ನಡೆದುಕೊಂಡು ಹೋಗಲು ನಿರ್ಧಾರ ಮಾಡಿದೆವು. ಶೆಲ್ ದಾಳಿ, ಬಾಂಬ್ ಸದ್ದು ವಿಮಾನಗಳ ಹೋರಾಟಗಳ ನಡುವೆ ನಡೆದುಕೊಂಡು ರೈಲು ನಿಲ್ದಾಣ ಸೇರಿದೆವು. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿ

    ವಿಮಾನಗಳ ಓಡಾಟದ ಶಬ್ದ ಬಾಂಬ್‍ಗಳ ಶಬ್ದ ಕೇಳಿಸಿಕೊಂಡು ನಾವು ವಾಪಸ್ ಬರುತ್ತೇವೆ ಅಂತ ಅಂದುಕೊಂಡಿರಲಿಲ್ಲ. ನನ್ನ ಮನಸ್ಸಿನಲ್ಲಿ ನಾವು ವಾಪಸ್ ಬರಬೇಕು, ನಾನು ವಾಪಸ್ ಇಂಡಿಯಾಕ್ಕೆ ತಲುಪಬೇಕು. ನನ್ನ ಕುಟುಂಬವನ್ನು ಸೇರಿಕೊಳ್ಳಬೇಕು ಎಂದು ಗಟ್ಟಿ ನಿರ್ಧಾರ ಮಾಡಿದ ಕಾರಣ ನನಗೆ ವಾಪಸ್ ಬರಲು ಸಾಧ್ಯವಾಯಿತು. ನಾನು ವಾಪಸ್ ಉಡುಪಿಗೆ ಹೋಗಿ ತಂದೆ ತಾಯಿಯ ಮುಖ ನೋಡಬೇಕು ಎಂದು ಮನಸ್ಸಿನಲ್ಲಿ ಇದ್ದ ಕಾರಣ ನಾವು ವಾಪಸ್ ಬಂದೆ. ಇಲ್ಲದಿದ್ದರೆ ಅಲ್ಲೇ ಬಾಕಿಯಾಗಬೇಕಾಗಿತ್ತು ಎಂದು ನೆನಪು ಮಾಡಿಕೊಂಡರು.

    ಉಕ್ರೇನಿಗರು ಥಳಿಸಿದರು:
    ಹೊರಗೆ ನಾವು ರೈಲು ಹತ್ತುವಾಗ ಉಕ್ರೇನಿನ ಸ್ಥಳೀಯರು ನಮ್ಮ ಗುಂಪಿನ ಮೇಲೆ ಪೆಪ್ಪರ್ ಸ್ಪ್ರೇ ಮಾಡಿದರು. ರೈಲು ಹತ್ತಲು ಬಿಡಲಿಲ್ಲ. ಬಾಗಿಲಿನಲ್ಲಿ ತಳ್ಳಿದರು, ಹೊಡೆದರು. ನೀವು ಭಾರತೀಯರು ನಿಮ್ಮ ದೇಶಬಿಟ್ಟು ಇಲ್ಲಿ ಬಂದದ್ದು ಯಾಕೆ? ನೀವು ಇಲ್ಲೇ ಸತ್ತುಹೋಗಿ ಎಂದು ನಮ್ಮನ್ನು ರೈಲು ಹತ್ತಲು ಬಿಡುತ್ತಿರಲಿಲ್ಲ. ನಾವು ಅಲ್ಲಿನ ಪ್ರಜೆಗಳಿಗೆ ಸರಿಯಾಗಿ ಉತ್ತರಕೊಟ್ಟು ಅವರನ್ನು ತಳ್ಳಿ ರೈಲಿನಲ್ಲಿ ಜಾಗ ಮಾಡಿಕೊಂಡು ವಾಪಸ್ ಬಂದಿದ್ದೇವೆ ಎಂದು ಅನೀಫ್ರೆಡ್ ಡಿಸೋಜಾ ಅನುಭವ ಹಂಚಿಕೊಂಡರು.

    ಖಾರ್ಕಿವ್ ಅಥವಾ ಕೀವ್‍ಗೆ ಹೆಲಿಕಾಪ್ಟರ್ ಅಥವಾ ವಿಮಾನವನ್ನು ತೆಗೆದುಕೊಂಡು ಭಾರತ ದೇಶ ಅಲ್ಲಿಗೆ ಬರಲು ಸಾಧ್ಯವಿರಲಿಲ್ಲ. ನಿರಂತರವಾಗಿ ಏರ್‍ಸ್ಟ್ರೈಕ್, ಮಿಸೈಲ್ ದಾಳಿ ಮತ್ತು ಬಾಂಬಿಂಗ್ ನಡೆಯುತ್ತಿರುವುದರಿಂದ ಹೊರದೇಶದವರು ಯಾರು ಉಕ್ರೇನಿಗೆ ಬರಲು ಸಾಧ್ಯವಿರಲಿಲ್ಲ. ಇಲ್ಲಿ ಬಂದು ಹೇಳಿದಷ್ಟು ಸುಲಭ ಇಲ್ಲ. ರಾಯಭಾರ ಕಚೇರಿ ಸಲಹೆಗಳನ್ನು ಕೊಟ್ಟು, ಬಂಕರ್‌ನಲ್ಲಿ ನಮ್ಮನ್ನು ಕಾಪಾಡಿದೆ. ಹಂಗೇರಿಯಿಂದ ನಮ್ಮನ್ನು ಸೇಫಾಗಿ ಸರ್ಕಾರ ಮನೆಗೆ ತಲುಪಿಸಿದೆ. ನಮಗೆ ನಮ್ಮ ಮಾತೃಭೂಮಿಯ ಮೇಲೆ ಮೊದಲೇ ಪ್ರೀತಿಯಿತ್ತು. ಈಗ ದೇಶದ ಮೇಲೆ ಪ್ರೀತಿ ಜಾಸ್ತಿಯಾಗಿದೆ ಎಂದರು. ಇದನ್ನೂ ಓದಿ: ಡ್ರಗ್ಸ್ ನಶೆಯಲ್ಲಿ ಕಲರ್ ಲೈಟ್ ನೋಡಿದ್ರೆ ಮತ್ತಷ್ಟು ಕಿಕ್ ಸಿಕ್ತಿತ್ತು

    ನನ್ನ ಮಗಳಿಗೆ ಆರೋಗ್ಯ ಸಮಸ್ಯೆ ಇತ್ತು. ಡಸ್ಟ್ ಅಲರ್ಜಿ ಮತ್ತು ಆಸ್ತಮಾ ಇದ್ದ ಕಾರಣ ನಮಗೆ ಬಹಳ ಆತಂಕ ಆಗುತ್ತಿತ್ತು. ಯುದ್ಧ ಆರಂಭವಾಗಿದೆ ಎಂದು ತಿಳಿದ ಕೂಡಲೇ ನಾವು ಇಡೀ ದಿನ ಪ್ರಾರ್ಥನೆ ಮಾಡುತ್ತಿದ್ದೆವು. ದಿನಕ್ಕೆ ಎರಡು ಮೂರು ಬಾರಿ ಚರ್ಚಿಗೆ ಹೋಗಿ ದೇವರಲ್ಲಿ ಪೂಜೆ ಸಲ್ಲಿಸುತ್ತಿದ್ದೆವು. ಮಗಳ ಫೋನಿಗಾಗಿ ಕಾಯುವುದು ಮತ್ತು ಅವಳಿಗೆ ಕೆಲವು ಸಲಹೆಗಳನ್ನು ಕೊಡುವುದು ನಮ್ಮ ದಿನಚರಿಯಾಗಿತ್ತು. ಕಳೆದ ಹತ್ತು ದಿನಗಳಲ್ಲಿ ನಾವು ಬೇರೆ ಏನನ್ನು ಮಾಡಿಲ್ಲ. ನಮ್ಮ ಪ್ರಾರ್ಥನೆಯ ಫಲ ಮಗಳು ನಮ್ಮ ಮನೆಗೆ ಬಂದಿದ್ದಾಳೆ. ನಮಗೆ ಸರ್ಕಾರ ಮತ್ತು ರಾಯಭಾರ ಕಚೇರಿ ಬಹಳ ಸಹಾಯ ಆಗಿದೆ. ಕ್ಷಣಕ್ಷಣಕ್ಕೂ ಅಲ್ಲಿನ ಬೆಳವಣಿಗೆಗಳನ್ನು ನಮಗೆ ತಿಳಿಸಿದ್ದಾರೆ. ಮಕ್ಕಳಿಗೆ ಸರಿಯಾಗಿ ಮಾರ್ಗದರ್ಶನ ಮಾಡಿದ್ದಾರೆ. ಚಾನಲ್‌ ಮತ್ತು ವೆಬ್‌ಸೈಟ್‌ಗಳ ಮೂಲಕ ನಮಗೆ ನಿರಂತರ ಮಾಹಿತಿಗಳನ್ನು ಕೊಡುತ್ತಿದ್ದರು ಇದು ನಮಗೆ ಬಹಳ ಉಪಕಾರವಾಯಿತು ಎಂದು ತಾಯಿ ಶೋಭಾ ಡಿಸೋಜಾ ಹೇಳಿದರು.