Tag: south films

  • ನಿತಿನ್‌ಗೆ ನಾಯಕಿಯಾಗಬೇಕಿದ್ದ ರಶ್ಮಿಕಾ ಜಾಗಕ್ಕೆ ಕೃತಿ ಶೆಟ್ಟಿ ಎಂಟ್ರಿ

    ನಿತಿನ್‌ಗೆ ನಾಯಕಿಯಾಗಬೇಕಿದ್ದ ರಶ್ಮಿಕಾ ಜಾಗಕ್ಕೆ ಕೃತಿ ಶೆಟ್ಟಿ ಎಂಟ್ರಿ

    ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಸೌತ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ರಶ್ಮಿಕಾ ಮಂದಣ್ಣ ಕೈಯಲ್ಲಿದ್ದ ಚಿತ್ರ ಕರಾವಳಿ ಬ್ಯೂಟಿ ಕೃತಿ ಶೆಟ್ಟಿ ಪಾಲಾಗಿದೆ. ನಿತಿನ್‌ಗೆ ನಾಯಕಿಯಾಗಬೇಕಿದ್ದ ರಶ್ಮಿಕಾ ಜಾಗಕ್ಕೆ ಕೃತಿ ಶೆಟ್ಟಿ ಎಂಟ್ರಿಯಾಗಿದ್ದು ಹೇಗೆ ಎಂಬ ಡಿಟೈಲ್ಸ್ ಇಲ್ಲಿದೆ.

    ಲಕ್ಕಿ ನಟಿ ರಶ್ಮಿಕಾ ಮಂದಣ್ಣಗೆ ಅದ್ಯಾಕೋ ಮೊದಲ ಬಾರಿಗೆ ಲಕ್ಕು ಕೈ ಕೊಟ್ಟಂತೆಯಿದೆ. ಟಾಲಿವುಡ್ ನಟ ನಿತಿನ್ ನಟನೆಯ ನಿರೀಕ್ಷಿತ `ಮಾಚರ್ಲ ನಿಯೋಜಕವರ್ಗಂ’ ಚಿತ್ರಕ್ಕೆ ಮೊದಲು ರಶ್ಮಿಕಾ ಆಯ್ಕೆ ಆಗಿದ್ದರು. ಚಿತ್ರದ ಪೋಸ್ಟರ್‌ ಮತ್ತು ಟ್ರೈಲರ್‌ ಮೂಲಕ ಸೌಂಡ್‌ ಈ ಸಿನಿಮಾ ಸದ್ಯದಲ್ಲೇ ತೆರೆಗೆ ಅಪ್ಪಳಿಸುತ್ತಿದೆ. ಕೃತಿ ಶೆಟ್ಟಿ ನಿತಿನ್‌ಗೆ ನಾಯಕಿಯಾಗಿ ಮಿಂಚ್ತಿದ್ದಾರೆ. ಆದರೆ ಈ ಮೊದಲು ಕೃತಿ ನಟಿಸಿರುವ ಪಾತ್ರಕ್ಕೆ ರಶ್ಮಿಕಾ ಆಯ್ಕೆಯಾಗಿದ್ದರು. ಆದರೆ ಪುಷ್ಪ ಬ್ಯೂಟಿ ಚಿತ್ರಕ್ಕೆ ನೋ ಅಂದಿದ್ದರು. ಇದನ್ನೂ ಓದಿ:`ಬ್ರಹ್ಮಾಸ್ತ್ರ’ ಚಿತ್ರ ರಿಲೀಸ್ ಬೆನ್ನಲ್ಲೇ ಇಟಲಿಗೆ ಹಾರಿದ ರಣ್‌ಬೀರ್ ಕಪೂರ್ ದಂಪತಿ

    ಈ ಹಿಂದೆ ನಿತಿನ್ ಮತ್ತು ರಶ್ಮಿಕಾ ನಟಿಸಿರುವ `ಭೀಷ್ಮ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಹಾಗಾಗಿ ಈ ಹೊಸ ಪ್ರಾಜೆಕ್ಟ್ ರಶ್ಮಿಕಾ ಅವರನ್ನೇ ನಾಯಕಿಯಾಗಿ ನಟಿಸಲು ಕೇಳಲಾಗಿದೆ. ಆದರೆ ಡೇಟ್ಸ್ ಹೊಂದಾಣಿಕೆ ಆಗದೇ ಸಿನಿಮಾವನ್ನ ರಶ್ಮಿಕಾ ಕೈ ಬಿಟ್ಟಿದ್ದಾರೆ. ಟಿಟೌನ್ ಗಾಸಿಪ್ ಪ್ರಕಾರ ಭೀಷ್ಮ ಸಿನಿಮಾದ ವೇಳೆಯೇ ರಶ್ಮಿಕಾ ಮತ್ತು ನಿತಿನ್‌ಗೆ ಕೆಲಸದ ವಿಚಾರದಲ್ಲಿ ಪೈಪೋಟಿಯಿತ್ತು ಎನ್ನಲಾಗಿದೆ. ಈ ಕುರಿತು ಸಾಕಷ್ಟು ಬಾರಿ ಜಗಳ ಕೂಡ ಮಾಡಿದ್ದಾರೆ ಎಂಬುದು ಟಿಟೌನ್ ಮಂದಿಯ ಗುಸು ಗುಸು. ಹಾಗಾಗಿ ರಶ್ಮಿಕಾ ಈ ಚಿತ್ರವನ್ನು ಕೈಬಿಟ್ಟಿದ್ದಾರೆ ಎಂಬುದು ವಂದತಿ.

    Live Tv
    [brid partner=56869869 player=32851 video=960834 autoplay=true]

  • ಸೀಮಂತ ಸಂಭ್ರಮದಲ್ಲಿ `ನೀಲಕಂಠ’ ನಟಿ ನಮಿತಾ

    ಸೀಮಂತ ಸಂಭ್ರಮದಲ್ಲಿ `ನೀಲಕಂಠ’ ನಟಿ ನಮಿತಾ

    ಸೌತ್ ಸಿನಿರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಾಯಕಿ ನಮಿತಾ, ಕನ್ನಡ ಸಿನಿಮಾಗಳಿಂದ ಕೂಡ ಕನ್ನಡ ಸಿನಿಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಸದ್ಯ ತಾಯ್ತನದ ಖುಷಿಯ ಕ್ಷಣಗಳನ್ನ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ನಮಿತಾ ಸೀಮಂತದ ಶಾಸ್ತ್ರದ ಸಂಭ್ರಮ ಅದ್ದೂರಿಯಾಗಿ ನೆರವೇರಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ತೆಲುಗು, ತಮಿಳು ಸಿನಿಮಾಗಳ ಜತೆ ಕನ್ನಡದ `ನೀಲಕಂಠ’ ಮತ್ತು `ಹೂ’ ಚಿತ್ರದಲ್ಲಿ ರವಿಚಂದ್ರನ್ ಜತೆ ನಮಿತಾ ಡ್ಯುಯೇಟ್ ಹಾಡಿದ್ದರು. ಹಾಗಾಗಿ ಕನ್ನಡ ಸಿನಿಪ್ರೇಕ್ಷಕರ ಮನದಲ್ಲಿ ನಮಿತಾ ಸ್ಥಾನ ಗಿಟ್ಟಿಸಿಕೊಂಡರು. ಚಿತ್ರರಂಗ ಜತೆ ರಾಜಕೀಯ ರಂಗದಲ್ಲೂ ನಮಿತಾ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ:ಸ್ವಿಮ್ ಸೂಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ `ರಾ’ಗಿಣಿ

    ಬಳಿಕ 2017ರಲ್ಲಿ ಉದ್ಯಮಿ ವೀರೇಂದ್ರ ಚೌಧರಿ ಜತೆ ಹಸೆಮಣೆ ಏರಿದ್ದರು. ಇತ್ತೀಚೆಗೆ ತಮ್ಮ ಹುಟ್ಟುಹಬ್ಬದಂದು ತಾವು ತಾಯಿಯಾಗುತ್ತಿರುವ ವಿಚಾರವನ್ನು ನಮಿತಾ ಹೇಳಿಕೊಂಡಿದ್ದರು. ಈಗ ಸೀಮಂತ ಶಾಸ್ತ್ರದ ಸಂಭ್ರಮದಲ್ಲಿದ್ದಾರೆ. ಸೀಮಂತದಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

    ಇತ್ತೀಚೆಗೆ ನಟಿ ನಮಿತಾ ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ಸೀಮಂತ ಶಾಸ್ತ್ರವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ನಮಿತಾ ಅವರ ಆಪ್ತ ಚಿತ್ರರಂಗದ ಸ್ನೇಹಿತರು ಭಾಗಿಯಾಗಿ ಶುಭಹಾರೈಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಇನ್ನು ಮದುವೆಯ ಬಳಿಕವೂ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದ ಬಹುಭಾಷಾ ನಟಿ ನಮಿತಾ ಈಗ ಹೊಸ ಅತಿಥಿಯ ಬರುವಿಕೆಯ ಖುಷಿಯಲ್ಲಿದ್ದಾರೆ. ತುಂಬು ಗರ್ಭೀಣಿಯಾಗಿರುವ ನಟಿ ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ. ಮಗುವಿನ ಆಗಮನದ ನಂತರ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಲಿದ್ದಾರೆ. ಮತ್ತೆ ಚಿತ್ರಗಳಲ್ಲಿ ನಮಿತಾ ಕಾಣಿಸಿಕೊಳ್ಳಲಿದ್ದಾರೆ.

    Live Tv

  • ಸೌತ್ ವರ್ಸಸ್ ನಾರ್ತ್ ಎಂದವರಿಗೆ ʻಸ್ಟುಪಿಡ್ʼ ಎಂದ ನ್ಯಾಚುರಲ್ ಸ್ಟಾರ್ ನಾನಿ

    ಸೌತ್ ವರ್ಸಸ್ ನಾರ್ತ್ ಎಂದವರಿಗೆ ʻಸ್ಟುಪಿಡ್ʼ ಎಂದ ನ್ಯಾಚುರಲ್ ಸ್ಟಾರ್ ನಾನಿ

    ಚಿತ್ರರಂಗದಲ್ಲಿ ಬಾಲಿವುಡ್ ಸಿನಿಮಾಗಳ ಎದುರು ದಕ್ಷಿಣದ ಚಿತ್ರಗಳು ಸೌಂಡ್ ಮಾಡುತ್ತಿದೆ. ಈ ವೇಳೆ ಭಾಷಾ ಚರ್ಚೆಗಳ ಬಗ್ಗೆ ನ್ಯಾಚುರಲ್ ಸ್ಟಾರ್ ನಾನಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಚಿತ್ರರಂಗವನ್ನ ಸೌತ್‌ ವರ್ಸಸ್‌ ನಾರ್ತ್‌ ಎಂದವರಿಗೆ ಸ್ಟುಪಿಡ್‌ ಎಂದು ನಟ ನಾನಿ ಪ್ರತಿಕ್ರಿಯೆ ನೀಡಿದ್ದಾರೆ.

    ಬಿಟೌನ್ ಅಂಗಳದಲ್ಲಿ ಹಿಂದಿ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲಲು ಹೆಣಗಾಡುತ್ತಿವೆ. ಆರ್‌ಆರ್‌ಆರ್, ಪುಷ್ಪ, `ಕೆಜಿಎಫ್ 2′ ಸೂಪರ್ ಸಕ್ಸಸ್ ನಂತರ ಬಾಲಿವುಡ್‌ನಲ್ಲಿ ಹಿಂದಿ ಚಿತ್ರಗಳಿಗೆ ನೆಲೆ ಇಲ್ಲದಂತಾಗಿದೆ. ಉತ್ತರ ಮತ್ತು ದಕ್ಷಿಣ ಸಿನಿಮಾಗಳು ಅಂತಾ ವಿಭಜನೆಯಾಗುತ್ತಿದೆ. ಈ ಕುರಿತು ಇದೀಗ ಸ್ಟಾರ್ ನಟ ನಾನಿ ಮಾತನಾಡಿದ್ದಾರೆ. ಇದನ್ನೂ ಓದಿ: ಥೈಲ್ಯಾಂಡ್ ಟ್ರಿಪ್‌ನಲ್ಲಿ ಪಟಾಕಿ ಪೋರಿ ಆಶಿಕಾ ರಂಗನಾಥ್

    ಒಳ್ಳೆಯ ಕಂಟೆಂಟ್ ಸಿನಿಮಾ ಕೊಟ್ಟರೆ ಗೆಲ್ಲುತ್ತದೆ ಅಂತಹ ಚಿತ್ರಗಳನ್ನು ಪ್ರೇಕ್ಷಕರು ಎಂದು ಕೈ ಬಿಡುವುದಿಲ್ಲ. ನಾವುಗಳೇ ಬಾಲಿವುಡ್,ಹಾಲಿವುಡ್, ಟಾಲಿವುಡ್, ಕಾಲಿವುಡ್ ಎಂದು ವಿಭಜಿಸಿದ್ದೇವೆ. ಎಲ್ಲರೂ ಯಾಕೆ ಈ ರೀತಿ ಕರೆಯುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ಭಾಷೆಗಳು ವಿಭಿನ್ನವಾಗಿರಬಹುದು ಆದರೆ ನಾವು ಒಂದೇ ರಾಷ್ಟ್ರ. ಭಾಷೆ ಬೇರೆ ಇರಬಹುದು, ನಾವೆಲ್ಲ ಒಂದೇ ಚಿತ್ರರಂಗ ಎಂದು ಮಾತನಾಡಿದ್ದಾರೆ.

    ಸೌರ್ತ್ ಮತ್ತು ನಾರ್ತ್ ಸಿನಿಮಾಗಳು ಎಂದು ಕರೆಯುವವರಿಗೆ `ಸ್ಟುಪಿಡ್’ ಎಂದು ನಟ ನಾನಿ ರಿಯಾಕ್ಟ್ ಮಾಡಿದ್ದಾರೆ. ಒಟ್ನಲ್ಲಿ ನಾನಿ ಹೇಳಿರುವ ವಿಚಾರ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.