Tag: South america

  • ಗಯಾನಾದಲ್ಲಿ ಸಿಲುಕಿದ ಕೊಡಗಿನ ವ್ಯಕ್ತಿ – ಅನಾರೋಗ್ಯಕ್ಕೆ ತುತ್ತಾಗಿ ಸಾವು-ಬದುಕಿನ ಮಧ್ಯೆ ಹೋರಾಟ

    ಗಯಾನಾದಲ್ಲಿ ಸಿಲುಕಿದ ಕೊಡಗಿನ ವ್ಯಕ್ತಿ – ಅನಾರೋಗ್ಯಕ್ಕೆ ತುತ್ತಾಗಿ ಸಾವು-ಬದುಕಿನ ಮಧ್ಯೆ ಹೋರಾಟ

    ಮಡಿಕೇರಿ: ಕೆಲಸಕ್ಕೆಂದು ದಕ್ಷಿಣ ಅಮೆರಿಕದ ಗಯಾನಾಕ್ಕೆ (Guyana) ತೆರಳಿದ್ದ ಕೊಡಗಿನ ಪ್ರಜೆಯೊಬ್ಬರು ಅನಾರೋಗ್ಯಕ್ಕೆ ತುತ್ತಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅಲ್ಲಿ ನೋಡಿಕೊಳ್ಳುವವರೂ ಇಲ್ಲದೇ ಇತ್ತ ತಾಯ್ತಾಡಿಗೂ ಮರಳಲಾಗದ ಸ್ಥಿತಿಯಲ್ಲಿ ಸಿಲುಕಿದ್ದಾರೆ.

    ಮಡಿಕೇರಿ (Madikeri) ತಾಲೂಕಿನ ಮದೆನಾಡು ಗ್ರಾಮದ ಪಿ.ಪಿ ಗಿರೀಶ್ ಕಳೆದ ಎರಡೂವರೆ ವರ್ಷಗಳಿಂದ ಗಯಾನಾದ ಜಾರ್ಜ್ ಟೌನ್‌ನ ಪನಾಮ (Panama) ಎಂಬಲ್ಲಿ ಖಾಸಗಿ ಆರೋಗ್ಯ ಸಂಸ್ಥೆಯೊಂದರಲ್ಲಿ ನರ್ಸಿಂಗ್ ಉದ್ಯೋಗಿಯಾಗಿದ್ದಾರೆ. ಜುಲೈ 3ರಂದು ಇದ್ದಕ್ಕಿದ್ದಂತೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಹೃದಯದ ಸಮಸ್ಯೆ, ಪಾರ್ಶ ವಾಯು ಕಾಣಿಸಿಕೊಂಡು ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ. ಸದ್ಯ ಕೋಮ ಸ್ಥಿತಿಯಲ್ಲಿರುವ ಅವರಿಗೆ ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

    ಗಿರೀಶ್ ಕುಟುಂಬದವರು ಅಲ್ಲಿನ ಆಸ್ಪತ್ರೆ ಸಿಬ್ಬಂದಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಅವರನ್ನು ಇತ್ತ ಭಾರತಕ್ಕೂ ಕರೆಸಿಕೊಳ್ಳಲಾಗದೇ, ಅಲ್ಲಿಯೂ ಹೋಗಿ ನೋಡಿಕೊಳ್ಳಲೂ ಸಾಧ್ಯವಿಲ್ಲದೇ ಅವರ ಕುಟುಂಬದವರು ಪರಿತಪಿಸುವಂತಾಗಿದೆ. ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಕಿಚ್ಚ – ಸುದೀಪ್‌ 47ನೇ ಸಿನಿಮಾ ಅನೌನ್ಸ್

    ಪಾಸ್‌ಪೋರ್ಟ್ ಕೂಡ ಇಲ್ಲ:
    ಗಿರೀಶ್ ಅವರ ಕುಟುಂಬದಲ್ಲಿ ಯಾರಿಗೂ ಪಾಸ್‌ಪೋರ್ಟ್ ಇಲ್ಲ. 4 ವರ್ಷದ ಹಿಂದೆ ಗಿರೀಶ್ ಅವರನ್ನು ವಿವಾಹವಾಗಿರುವ ಪತ್ನಿ ಜಾನಕಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ 2 ವರ್ಷದ ಮಗುವಿನೊಂದಿಗೆ ಅಲ್ಲಿಯೇ ನೆಲೆಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ | ರಾಗಿಗುಡ್ಡದಲ್ಲಿ ಅನ್ಯಕೋಮಿನ ಯುವಕರ ದುಷ್ಕೃತ್ಯ – ಗಣಪತಿ ವಿಗ್ರಹ, ನಾಗರ ಕಲ್ಲಿಗೆ ಅಪಮಾನ ಆರೋಪ 

    ಕೊಡಗು ಜಿಲ್ಲಾಡಳಿತದಲ್ಲಿ ವಿಪತ್ತು ನಿರ್ವಹಣಾಧಿಕಾರಿಯಾಗಿರುವ ಅನನ್ಯ ವಾಸುದೇವ್ ಅವರು ಈ ಹಿಂದೆ ವಿದೇಶಗಳಲ್ಲಿ ಸಿಲುಕಿರುವ ಅನೇಕರನ್ನು ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದ್ದು, ಗಿರೀಶ್ ಸಂಬಂಧಿಕರು ಸಂಪರ್ಕಿಸಿದ್ದಾರೆ. ಜಾನಕಿ ಅವರನ್ನು ಅಮೆರಿಕಕ್ಕೆ ಕಳುಹಿಸುವುದು ಅಥವಾ ಗಿರೀಶ್ ಅವರನ್ನು ಅಲ್ಲಿಂದ ಏರ್ ಲಿಫ್ಟ್ ಮಾಡಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಗಿರೀಶ್ ಪತ್ನಿಗೆ ತಾತ್ಕಾಲ್ ಪಾಸ್‌ಪೋರ್ಟ್‌ ಮಾಡಿಸಿದರೂ ಪ್ರಕ್ರಿಯೆಗಳೆಲ್ಲ ಮುಗಿಸಿ ಅಲ್ಲಿಗೆ ತೆರಳಲು 4-5 ದಿನಗಳು ಬೇಕು ಎನ್ನಲಾಗಿದೆ. ಇದನ್ನೂ ಓದಿ: ರಶ್ಮಿಕಾ ಕನ್ನಡದವಳಲ್ಲ ಅಂದ್ರು ಅವಳನ್ನ ನಾವ್ ಬಿಡೋಲ್ಲ: ಭಾವನಾ ರಾಮಣ್ಣ

  • ಸಂಗಾತಿ ಜೊತೆಗೆ ಸ್ನಾನ ಮಾಡಿ ನೀರು ಉಳಿಸಿ; ನೀರಿನ ಮಿತಬಳಕೆಗೆ ಮೇಯರ್‌ ಸಲಹೆ

    ಸಂಗಾತಿ ಜೊತೆಗೆ ಸ್ನಾನ ಮಾಡಿ ನೀರು ಉಳಿಸಿ; ನೀರಿನ ಮಿತಬಳಕೆಗೆ ಮೇಯರ್‌ ಸಲಹೆ

    ಬೊಗೋಟಾ: ಈ ಬಾರಿ ಬೇಸಿಗೆಗೆ ಸಿಲಿಕಾನ್‌ ಸಿಟಿ ಬೆಂಗಳೂರು (Bengaluru) ಮಾತ್ರವಲ್ಲ ವಿಶ್ವದ ವಿವಿಧೆಡೆ ಮಹಾನಗರಗಳೂ ತೀವ್ರ ನೀರಿನ ಕೊರತೆ ಎದುರಿಸುತ್ತಿವೆ.

    ಅದರಲ್ಲೂ ದಕ್ಷಿಣ ಅಮೆರಿಕದ (South America) ಬೊಗೋಟಾ ನಗರವಂತೂ ಗಂಭೀರ ಸ್ಥಿತಿಯಲ್ಲಿದೆ. ಜನರಿಗೆ ಆಶಾಕಿರಣದಂತಿದ್ದ ಜಲಾಶಯಗಳೇ ಬತ್ತಿಹೋಗುತ್ತಿವೆ. ಹಾಗಾಗಿ, ನೀರು ಮಿತವ್ಯಯಕ್ಕೆ ಅಲ್ಲಿನ ಮೇಯರ್, ಜನರಿಗೆ ವಿಚಿತ್ರ ಸಲಹೆಯೊಂದನ್ನ ನೀಡಿದ್ದಾರೆ. ಜನ ತಮ್ಮ ಸಂಗಾತಿಯೊಂದಿಗೆ ಒಟ್ಟಿಗೆ ಸ್ನಾನ ಮಾಡುವ ಮೂಲಕ ನೀರು ಉಳಿಸಬೇಕು ಎಂದು ಸಲಹೆ ನೀಡಿದ್ದಾರೆ.

    ಇತ್ತೀಚೆಗೆ ನಗರದ ಪ್ರಮುಖ ಪ್ರದೇಶಗಳಲ್ಲಿ ನೀರು ಪೂರೈಕೆ ತಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಬೊಗೋಟಾ ಮೇಯ‌ರ್ ಕಾರ್ಲೋಸ್ ಫರ್ನಾಂಡೊ ಗ್ಯಾಲನ್ ಅವರು, ಸಂಗಾತಿಯಾದವರು ಜೋಡಿಯಾಗಿ ಸ್ನಾನ ಮಾಡುವ ಮೂಲಕ ನೀರು ಮಿತವ್ಯಯ ಬಳಕೆಯ ಅಭ್ಯಾಸ ಮಾಡಿಕೊಳ್ಳಬೇಕು. ಈ ರೀತಿಯಾಗಿ ಮಾಡುವುದರಿಂದ ಸಾಕಷ್ಟು ಸಹಾಯಕವಾಗಲಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಭಾನುವಾರ ಮೈಸೂರಿನಲ್ಲಿ ರ‍್ಯಾಲಿ, ಮಂಗಳೂರಿನಲ್ಲಿ ರೋಡ್‌ ಶೋ – ಎಷ್ಟು ಗಂಟೆಗೆ ಎಲ್ಲಿ ಮೋದಿ ಕಾರ್ಯಕ್ರಮ?

    ಜೋಡಿಯಾಗಿ ಸ್ನಾನ ಮಾಡಿ ಎಂದು ಕರೆ ನೀಡಿರುವ ಮೇಯರ್, ಒಂದು ವೇಳೆ ರಜಾ ದಿನಗಳಲ್ಲಿ ಮನೆಯಲ್ಲೇ ಇರುವುದಾದರೆ ಅಂದು ಸ್ನಾನ ಮಾಡಬೇಡಿ ಎಂದೂ ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಇರಾನ್‌ನಿಂದ ಇಸ್ರೇಲ್‌ ಮೇಲೆ 100 ಕ್ಕೂ ಹೆಚ್ಚು ಡ್ರೋನ್‌ ದಾಳಿ

    1980ರ ಬಳಿಕ ಬೊಗೋಟಾ ನಗರದಲ್ಲಿ ಅಪಾರ ಪ್ರಮಾಣದ ಜಲಕ್ಷಾಮ ಎದುರಾಗುತ್ತಿದೆ. ಜಲಾಶಯದ ಮಟ್ಟ ಸಹಜ ಪ್ರಮಾಣಕ್ಕಿಂತ 17 ಪ್ರತಿಶತದಷ್ಟು ಕಡಿಮೆಯಾಗಿದೆ. ಹಾಗಾಗಿ ನೀರಿನ ಮಿತ ಬಳಕೆಗೆ ಜನರು ಮುಂದಾಗಬೇಕು. ಜನರಿಗೆ ಕುಡಿಯುವ ನೀರನ್ನು ಪೂರೈಸಲು ಬೇಕಾಗ ಅಗತ್ಯ ಕ್ರಮಗಳನ್ನು ನಾವು ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

  • ಚಿಲಿಯಲ್ಲಿ ಕಾಡ್ಗಿಚ್ಚಿಗೆ 51 ಮಂದಿ ಬಲಿ

    ಚಿಲಿಯಲ್ಲಿ ಕಾಡ್ಗಿಚ್ಚಿಗೆ 51 ಮಂದಿ ಬಲಿ

    ಸ್ಯಾಂಟಿಯಾಗೊ: ದಕ್ಷಿಣ ಅಮೆರಿಕದ ಚಿಲಿಯಲ್ಲಿ ಹರಡಿದ ಕಾಡ್ಗಿಚ್ಚಿಗೆ  ಕನಿಷ್ಠ 51ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

    ಮಧ್ಯ ಚಿಲಿಯ ಸುಮಾರು 10 ಲಕ್ಷ ನಿವಾಸಿಗಳು ವಾಸಿಸುವ ವಾಲ್ಪಾರೈಸೊ ಪ್ರದೇಶದ ಅನೇಕ ಭಾಗಗಳಲ್ಲಿ ಕಾಡ್ಗಿಚ್ಚು ವೇಗವಾಗಿ ಹರಡುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಹೆಲಿಕಾಪ್ಟರ್‌ಗಳು ಮತ್ತು ಟ್ರಕ್‌ಗಳನ್ನು ಬಳಸಿ ಬೆಂಕಿ ನಂದಿಸಲು ಹೆಣಗಾಡುತ್ತಿದ್ದಾರೆ.  ಇದನ್ನೂ ಓದಿ: ಮೊನ್ನೆ ಸತ್ತಿದ್ದ ಪೂನಂ ಪಾಂಡೆ ನಿನ್ನೆ ಜೀವಂತ – ನಟಿ ವಿರುದ್ಧ ಕೇಸ್‌ ದಾಖಲಿಸಲು ಸೂಚನೆ

    ಕರಾವಳಿಯ ಪ್ರವಾಸಿ ನಗರವಾದ ವಿನಾ ಡೆಲ್ ಮಾರ್ ಸುತ್ತಮುತ್ತಲಿನ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ ಮತ್ತು ರಕ್ಷಣಾ ತಂಡಗಳು ಎಲ್ಲಾ ಪೀಡಿತ ಪ್ರದೇಶಗಳನ್ನು ತಲುಪಲು ಹರಸಾಹಸ ಪಡುತ್ತಿದ್ದಾರೆ ಎಂದು ಚಿಲಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂತು ಮಳಲಿ ಮಸೀದಿ – ಆಸ್ತಿ ತನ್ನದೆಂದು ಸಾಬೀತುಪಡಿಸಲು ವಕ್ಫ್‌ ಬೋರ್ಡ್‌ ತಯಾರಿ

    ಕಳೆದ ದಶಕದಿಂದ ಚಿಲಿಯಲ್ಲಿ ಕಾಡ್ಗಿಚ್ಚಿನ ಪ್ರಮಾಣ ಏರಿಕೆಯಾಗುತ್ತಿದೆ. ದೇಶದ್ಯಾಂತ 92 ಕಡೆ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಿಂದ 43,000 ಹೆಕ್ಟೇರ್‌ಗೂ ಹೆಚ್ಚು ಪ್ರದೇಶಗಳಿಗೆ ಹಾನಿಯಾಗಿದೆ.

    ಬೇಸಿಗೆ ತಿಂಗಳಿನಲ್ಲಿ ಚಿಲಿಯಲ್ಲಿ ಕಾಡ್ಗಿಚ್ಚು ಸಾಮಾನ್ಯ. ಕಳೆದ ವರ್ಷ ಸುಮಾರು 27 ಜನರು ಸಾವನ್ನಪ್ಪಿದ್ದರೆ  4,00,000 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶಕ್ಕೆ ಹಾನಿಯಾಗಿತ್ತು.

    ಅರಣ್ಯ ಪ್ರದೇಶದ ಬಳಿ ಜನ ವಸತಿ ಬಹಳ ಬೇಗ ಹೆಚ್ಚಾಗುತ್ತಿದೆ. ಇದರಿಂದಾಗಿ ಸಾವು ನೋವುಗಳ ಸಂಖ್ಯೆ ಏರಿಕೆಯಾಗುತ್ತಿದೆ.

  • ಆಗಸದಲ್ಲಿ ಅಪ್ಪು ರೋಚಕ ಸಾಹಸಯಾನ!

    ಆಗಸದಲ್ಲಿ ಅಪ್ಪು ರೋಚಕ ಸಾಹಸಯಾನ!

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇಲ್ಲಿ ಆಗಸದಲ್ಲಿ ಸಾಹಸ ಮಾಡಿದ್ದಾರೆ.

    ಸದ್ಯ ದಕ್ಷಿಣ ಅಮೆರಿಕದಲ್ಲಿ ಕುಟುಂಬಸ್ಥರೊಂದಿಗೆ ಪುನಿತ್ ರಾಜ್‍ಕುಮಾರ್ ಬೇಸಿಗೆ ರಜೆ ಕಳೆಯುತ್ತಿದ್ದಾರೆ. ಈ ವೇಳೆ ದಕ್ಷಿಣ ಅಮೇರಿಕಾದ ಪ್ರಸಿದ್ಧ ಪ್ರವಾಸಿ ತಾಣಗಳನ್ನು ನೋಡುತ್ತಾ ಹಾಲಿಡೇ ಸಂಭ್ರಮದಲ್ಲಿದ್ದಾರೆ.

    ಈ ಪ್ರವಾಸದ ವೇಳೆ ಪುನೀತ್ ರಾಜ್‍ಕುಮಾರ್ ಸ್ಕೈ ಡೈವಿಂಗ್ ಮಾಡಿದ್ದು, ಈ ರೋಮಾಂಚನ ಸಾಹಸದ ದೃಶ್ಯಗಳನ್ನು ಪಿಆರ್‌ಕೆ ಸ್ಟೂಡಿಯೋ ಅಧಿಕೃತ ಯೂ ಟ್ಯೂಬ್ ಚಾನೆಲಿನಲ್ಲಿ ಅಪ್ಲೋಡ್ ಆಗಿದೆ.

    ಪುನೀತ್ ಸ್ಕೈ ಡೈವಿಂಗ್ ದೃಶ್ಯಗಳು, ಬೋಟಿಂಗ್, ಜಲಪಾತ, ದಕ್ಷಿಣ ಅಮೇರಿಕದ ಸುಂದರ ಪ್ರಕೃತಿಯ ಚಿತ್ರಣಗಳು ಸೆರೆಯಾಗಿದೆ.

    ದಕ್ಷಿಣ ಅಮೇರಿಕಾದ ಭೇಟಿಯ ಕೆಲವು ಅತ್ಯುತ್ತಮ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಇಷ್ಟಪಡುತ್ತೇನೆ. ಈ ವಿಡಿಯೋ ವೀಕ್ಷಿಸಿ ಮತ್ತು ಆನಂದಿಸಿ ಎಂದು ಕ್ಯಾಪ್ಷನ್ ಕೂಡ ಹಾಕಲಾಗಿದೆ.