Tag: sourav ganguly

  • ಮೋದಿ, ಶಾ ಜೊತೆ ಗಂಗೂಲಿ ಚರ್ಚೆ – ರಾಜಕೀಯ ಇನ್ನಿಂಗ್ಸ್‌ ಆಡ್ತಾರಾ ದಾದಾ?

    ಮೋದಿ, ಶಾ ಜೊತೆ ಗಂಗೂಲಿ ಚರ್ಚೆ – ರಾಜಕೀಯ ಇನ್ನಿಂಗ್ಸ್‌ ಆಡ್ತಾರಾ ದಾದಾ?

    ನವದೆಹಲಿ: ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದು ದಾದಾ ರಾಜಕೀಯ ಇನ್ನಿಂಗ್ಸ್‌ ಆಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

    2021ರ ಪಶ್ಚಿಮ ಬಂಗಾಳ ಚುನಾವಣೆಯ ಸಮಯದಲ್ಲಿ ಸೌರವ್‌ ಗಂಗೂಲಿ ಬಿಜೆಪಿ ಸೇರಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಚುನಾವಣೆ ಮುಗಿದ ಮೇಲೆ ಈ ವಿಚಾರ ಹೆಚ್ಚು ಚರ್ಚೆ ಆಗಿರಲಿಲ್ಲ. ಆದರೆ ಈಗ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.

    ಕಳೆದ ಶುಕ್ರವಾರ ಪ್ರಧಾನಿ ಮೋದಿ ಕಾಮನ್‌ವೆಲ್ತ್‌ ಪದಕ ವಿಜೇತರನ್ನು ದೆಹಲಿಯಲ್ಲಿ ಅಭಿನಂದಿಸಿದ್ದರು. ಈ ಕಾರ್ಯಕ್ರಮದಲ್ಲಿ ಸೌರವ್‌ ಗಂಗೂಲಿ ಸಹ ಭಾಗಿಯಾಗಿದ್ದರು. ಆದರೆ ಅವರು ರಾಜಕೀಯ ವಿಷಯ ಚರ್ಚಿಸಿಲ್ಲ. ಬದಲಾಗಿ ಐಸಿಸಿ, ಬಿಸಿಸಿಐ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.

    ಸೌರವ್‌ ಗಂಗೂಲಿ ಐಸಿಸಿ ಮುಖ್ಯಸ್ಥ ಹುದ್ದೆಯ ರೇಸ್‌ನಲ್ಲಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗಂಗೂಲಿ ಇಬ್ಬರು ನಾಯಕರ ಜೊತೆ ಮಾತನಾಡಲು ಬಂದಿರಬಹುದು ಎಂದು ವರದಿಯಾಗಿದೆ. ಇದನ್ನೂ ಓದಿ: ಟೆಲಿಪ್ರಾಂಪ್ಟರ್ ಬಳಸದೇ ಕೆಂಪುಕೋಟೆಯಲ್ಲಿ ಭಾಷಣ ಮಾಡಿದ ಮೋದಿ

    ಈಗಾಗಲೇ ಸೌರವ್‌ ಗಂಗೂಲಿ ಅವರ ಆಡಳಿತದ ಅವಧಿ ಅಂತ್ಯವಾಗಿದೆ. ಹೀಗಿದ್ದರೂ ಸೌರವ್‌ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್‌ ಶಾ ಅವರ ಕಾರ್ಯಾವಧಿಯನ್ನು 3 ವರ್ಷಕ್ಕೆ ವಿಸ್ತರಿಸುವಂತೆ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಖಾಜಾಂಚಿ ಅರುಣ್‌ ಧುಮಲ್‌ ಅರ್ಜಿ ಸಲ್ಲಿಸಿದ್ದಾರೆ.

    ಸಮಸ್ಯೆ ಏನಾಗಿದೆ?
    ಬಿಸಿಸಿಐ ಅಧ್ಯಕ್ಷರಾಗಿದ್ದುಕೊಂಡು ಗಂಗೂಲಿ ಅವರಿಗೆ ಐಸಿಸಿಯ ಮುಖ್ಯಸ್ಥರಾಗಲು ಸಾಧ್ಯವಿಲ್ಲ. ಒಂದು ವೇಳೆ ಬಿಸಿಸಿಐ ಅಧ್ಯಕ್ಷರಾಗದೇ ಇದ್ದಲ್ಲಿ ಗಂಗೂಲಿ ಐಸಿಸಿ ಅಧ್ಯಕ್ಷ ಸ್ಪರ್ಧೆಯಿಂದಲೇ ಹೊರಗುಳಿಯಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಸಿಸಿಐ ಪ್ರಭಾವ ಬಹಳ ಇರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ಸ್ಪರ್ಧಿಸಿದರೆ ಬಹುತೇಕ ದೇಶಗಳು ಬೆಂಬಲಿಸುವ ಸಾಧ್ಯತೆಯಿದೆ.

    ನ್ಯಾ.ಲೋಧಾ ಸಮಿತಿ ಶಿಫಾ​ರಸ್ಸಿನ ಅನ್ವಯ 6 ವರ್ಷದ ಅವಧಿ ಪೂರ್ಣಗೊಂಡ ಬಳಿಕ 3 ವರ್ಷಗಳ ಕೂಲಿಂಗ್‌ ಆಫ್‌ ಅವ​ಧಿಗೆ ತೆರ​ಳ​ಬೇಕು. ಆದರೆ ಈ ನಿಯ​ಮಕ್ಕೆ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಿಸಿಸಿಐ ತಿದ್ದುಪಡಿ ತಂದಿದೆ. ಈಗ ಗಂಗೂಲಿ ಮತ್ತು ಜಯ್‌ ಶಾ ಅವರ ಕೂಲಿಂಗ್‌ ಆಫ್‌ ಅವ​ಧಿ​ಯನ್ನು ತೆರ​ವು​ಗೊ​ಳಿ​ಸ​ಬೇಕು ಎಂದು ಸುಪ್ರೀಂನಲ್ಲಿ ಸಲ್ಲಿಸಲಾಗಿರುವ ಅರ್ಜಿ​ಯಲ್ಲಿ ಕೋರ​ಲಾ​ಗಿದೆ.

    ನ್ಯಾ.ಲೋಧಾ ಸಮಿತಿ ಶಿಫಾರಸುಗಳ ಪ್ರಕಾರ, ಬಿಸಿಸಿಐ ಪದಾಧಿಕಾರಿಗಳು ಗರಿಷ್ಠ ಆರು ವರ್ಷಗಳ ಹುದ್ದೆಯಲ್ಲಿ ಮುಂದುವರಿಯಬಹುದು. ಈ ಅವಧಿ ಮುಗಿದ ಮೂರು ವರ್ಷದವರೆಗೆ ಬಿಸಿಸಿಐಯ ಯಾವುದೇ ಹುದ್ದೆಯನ್ನು ಅಲಂಕರಿಸುವಂತಿಲ್ಲ. ಮೂರು ವರ್ಷ ಕೂಲಿಂಗ್‌ ಆಫ್‌ ಅವಧಿ ಮುಕ್ತಾಯಗೊಂಡ ಬಳಿಕ ಮತ್ತೆ ಸ್ಪರ್ಧಿಸಬಹುದಾಗಿದೆ. ಈ ಹಿಂದೆ ಸೌರವ್‌ ಗಂಗೂಲಿ ಬಂಗಾಳ ಕ್ರಿಕೆಟ್‌ ಮತ್ತು ಜಯ್‌ಶಾ ಗುಜರಾತ್‌ ಕ್ರಿಕೆಟ್‌ ಬೋರ್ಡ್‌ನಲ್ಲಿದ್ದರು. ಹೀಗಾಗಿ ಈಗ ಗಂಗೂಲಿ ಐಸಿಸಿಯ ಬಾಸ್‌ ಆಗುತ್ತಾರಾ? ಇಲ್ಲವೋ ಎನ್ನುವುದು ಸುಪ್ರೀಂ ಕೋರ್ಟ್‌ ನೀಡುವ ತೀರ್ಪಿನ ಮೇಲೆ ನಿಂತಿದೆ.

    ಈ ಮೊದಲು ಐಸಿಸಿಯ ಮುಖ್ಯಸ್ಥ ಹುದ್ದೆಗೆ ಏರುವ ಅಭ್ಯರ್ಥಿ 2/3 ಬಹುಮತ ಪಡೆಯಬೇಕೆಂಬ ನಿಯಮ ಇತ್ತು. ಆದರೆ ಈಗ ನಿಮಯ ಬದಲಾಗಿದ್ದು ಶೇ.51 ರಷ್ಟು ಮತ ಪಡೆದ ವ್ಯಕ್ತಿ ಐಸಿಸಿಯ ಮುಖ್ಯಸ್ಥನಾಗಲು ಸಾಧ್ಯವಿದೆ. ಒಟ್ಟು 16 ನಿರ್ದೇಶಕರ ಪೈಕಿ 9 ಮತ ಪಡೆದರೂ ಐಸಿಸಿ ಬಾಸ್‌ ಸ್ಥಾನವನ್ನು ಅಲಂಕರಿಸಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೊಮ್ಮೆ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ ದಾದಾ – ಭಾರತ ಮಹಾರಾಜರ ರಾಜನಾದ ಗಂಗೂಲಿ

    ಮತ್ತೊಮ್ಮೆ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ ದಾದಾ – ಭಾರತ ಮಹಾರಾಜರ ರಾಜನಾದ ಗಂಗೂಲಿ

    ಮುಂಬೈ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿರುವ ಹಿರಿಯ ಆಟಗಾರರಿಗಾಗಿ ಲೆಜೆಂಡ್ಸ್ ಲೀಗ್‍ನ್ನು ಭಾರತ ಆಯೋಜಿಸುತ್ತಿದೆ. ಭಾರತ ತಂಡವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಾಯಕನಾಗಿ ಮುನ್ನಡೆಸಲಿದ್ದಾರೆ.

    ಸೆಪ್ಟೆಂಬರ್ 15 ರಿಂದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಆರಂಭಗೊಳ್ಳುತ್ತಿದೆ. ಭಾರತದ ಒಂದು ತಂಡ ಮತ್ತು ಇತರ ದೇಶದ ಆಟಗಾರರೆಲ್ಲ ಸೇರಿ ಒಂದು ತಂಡ ರಚಿಸಲಾಗಿದೆ. ಭಾರತದ ತಂಡಕ್ಕೆ ಭಾರತ ಮಹರಾಜರು ಎಂದು ಹೆಸರು ನೀಡಲಾಗಿದೆ. ಇತರ ದೇಶಗಳ ಆಟಗಾರರನ್ನೊಳಗೊಂಡ ತಂಡಕ್ಕೆ ವರ್ಲ್ಡ್ ಜೈಂಟ್ಸ್ ಎಂದು ನಾಮಕರಣ ಮಾಡಲಾಗಿದೆ. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಸೆ.15ಕ್ಕೆ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ಬ್ರಾವೋ ವಿಶ್ವದಾಖಲೆ – ಫ್ರಾಂಚೈಸ್ ಲೀಗ್‍ನ ಬಾದ್‍ಶಾನಾಗಿ ಮೆರೆದಾಟ

    ಈಗಾಗಲೇ 2 ತಂಡಗಳನ್ನು ಅಂತಿಮಗೊಳಿಸಲಾಗಿದೆ. ಭಾರತ ತಂಡದಲ್ಲಿ ಗಂಗೂಲಿ, ಸೆಹ್ವಾಗ್, ಮೊಹಮ್ಮದ್ ಕೈಫ್ ಸೇರಿದಂತೆ ಹಿರಿಯ ಆಟಗಾರರ ದಂಡಿದ್ದರೆ, ಅತ್ತ ವರ್ಲ್ಡ್ ಜೈಂಟ್ಸ್ ತಂಡದಲ್ಲಿ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡದ ದೈತ್ಯ ಆಟಗಾರರ ಬಲಿಷ್ಠ ತಂಡ ಕಟ್ಟಲಾಗಿದೆ. ಇದನ್ನೂ ಓದಿ: ಚಿನ್ನದ ಹುಡುಗಿಯ ಪರಿಸರ ಪ್ರೀತಿ – ಹುಟ್ಟುಹಬ್ಬಕ್ಕೆ ಗಿಡ ನೆಟ್ಟ ಮೀರಾಬಾಯಿ ಚಾನು

    ತಂಡ ಹೀಗಿದೆ:
    ಭಾರತ ಮಹರಾಜರು: ಸೌರವ್ ಗಂಗೂಲಿ (ನಾಯಕ), ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಸುಬ್ರಮಣ್ಯಂ ಬದರಿನಾಥ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ಸ್ಟುವರ್ಟ್ ಬಿನ್ನಿ, ಎಸ್. ಶ್ರೀಶಾಂತ್, ಹರ್ಭಜನ್ ಸಿಂಗ್, ನಮನ್ ಓಜಾ, ಪ್ರಗ್ಯಾನ್ ಓಜಾ, ಅಜಯ್ ಜಡೇಜಾ, ಆರ್.ಪಿ ಸಿಂಗ್, ಜೋಗಿಂದರ್ ಶರ್ಮಾ, ರೀತೀಂದರ್ ಸಿಂಗ್ ಸೋಧಿ.

    ವರ್ಲ್ಡ್ ಜೈಂಟ್ಸ್: ಇಯಾನ್ ಮೋರ್ಗನ್ (ನಾಯಕ), ಲೆಂಡ್ಲ್ ಸಿಮನ್ಸ್, ಹರ್ಷಲ್ ಗಿಬ್ಸ್, ಜಾಕ್ ಕಾಲಿಸ್, ಸನತ್ ಜಯಸೂರ್ಯ, ಮ್ಯಾಟ್ ಪ್ರಯರ್, ನಥನ್ ಮೆಕಲಮ್, ಜಾಂಟಿ ರೋಡ್ಸ್, ಮುತ್ತಯ್ಯ ಮುರಳೀಧರನ್, ಡೇಲ್ ಸ್ಟೇನ್, ಹ್ಯಾಮಿಲ್ಟನ್ ಮಸಕಝ ಮುಶ್ರಫೆ ಮೊರ್ತಜಾ, ಅಸ್ಗರ್ ಅಫಘಾನ್, ಮಿಚೆಲ್ ಜಾನ್ಸನ್, ಬ್ರೆಟ್ ಲೀ, ಕೆವಿನ್ ಒ‌ ಬ್ರಿಯಾನ್, ದಿನೇಶ್ ರಾಮ್‍ದಿನ್

    Live Tv
    [brid partner=56869869 player=32851 video=960834 autoplay=true]

  • ಹೊಸ ಹೆಜ್ಜೆಯತ್ತ ದಾದಾ – ಗಂಗೂಲಿ ರಾಜಕೀಯ ಪ್ರವೇಶ ಫಿಕ್ಸ್?

    ಹೊಸ ಹೆಜ್ಜೆಯತ್ತ ದಾದಾ – ಗಂಗೂಲಿ ರಾಜಕೀಯ ಪ್ರವೇಶ ಫಿಕ್ಸ್?

    ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಯೊಂದು ಹರಿದಾಡುತ್ತಿದೆ. ಇದಕ್ಕೆ ಕಾರಣ ಗಂಗೂಲಿಯ ಒಂದು ಟ್ವೀಟ್. ಆ ಬಳಿಕ ಇದೀಗ ಗಂಗೂಲಿ ರಾಜಕೀಯಕ್ಕೆ ಎಂಟ್ರಿಕೊಡುವುದು ಖಚಿತ ಎಂಬ ಮಾತು ಎಲ್ಲಡೆ ಕೇಳಿ ಬರುತ್ತಿದೆ.

    ಹೌದು ಕ್ರಿಕೆಟ್‍ನಲ್ಲಿ ಭಾರತ ತಂಡದ ನಾಯಕನಾಗಿ ಯಶಸ್ವಿಯಾಗಿ ಮುನ್ನಡೆಸಿದ ಗಂಗೂಲಿ, 2019ರಲ್ಲಿ ತಮಗೆ ಒಲಿದು ಬಂದ ಬಿಸಿಸಿಐ ಅಧ್ಯಕ್ಷ ಪಟ್ಟವನ್ನು ಕೂಡ ಉತ್ತಮವಾಗಿ ನಿಭಾಯಿಸಿ ಹಲವು ಬದಲಾವಣೆಗಳೊಂದಿಗೆ ಯಶಸ್ಸಿನ ಮೇಟ್ಟಿಲೇರಿಸಿದ್ದಾರೆ. ಈ ನಡುವೆ ಇಂದು ದಿಢೀರ್ ಆಗಿ ಒಂದು ಟ್ವೀಟ್ ಮಾಡಿದ ಗಂಗೂಲಿ, 1992ರಲ್ಲಿ ನನ್ನ ಕ್ರಿಕೆಟ್ ವೃತ್ತಿ ಜೀವನ ಆರಂಭಗೊಂಡು ಇದೀಗ 2022ಕ್ಕೆ 30 ವರ್ಷಗಳು ಸಂದಿದೆ. ಅಲ್ಲಿಂದ ಇಲ್ಲಿವರೆಗೂ ಕ್ರಿಕೆಟ್ ನನಗೆ ಎಲ್ಲವನ್ನೂ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರ ಬೆಂಬಲ ನನಗೆ ಸಿಕ್ಕಿದೆ. ನನ್ನ ಕ್ರಿಕೆಟ್ ವೃತ್ತಿ ಬದುಕಿಗೆ ಸಹಕರಿಸಿದ, ನಾನು ಈ ಸ್ಥಾನಕ್ಕೆ ಬರಲು ಬೆಂಬಲ ನೀಡಿ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇನೆ. ನಾನು ಇಂದು ಇನ್ನೊಂದು ಹೊಸ ಪ್ರಾರಂಭದ ಹೆಜ್ಜೆಯನ್ನಿಟ್ಟಿದ್ದು ಇದು ಹಲವರಿಗೆ ನೆರವಾಗಲಿದೆ ಎನ್ನುವ ವಿಶ್ವಾಸ ನನಗಿದೆ. ನನ್ನ ಹೊಸ ಪ್ರಯತ್ನಕ್ಕೆ ನಿಮ್ಮಲ್ಲರ ಬೆಂಬಲ ಪ್ರೋತ್ಸಾಹ ಹೀಗೆ ಮುಂದುವರಿಯಲಿ ಎಂದು ನಾನು ಬೇಡಿಕೊಳ್ಳುತ್ತಿದ್ದೇನೆ ಎಂದಿದ್ದರು. ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ ನೀಡಿಲ್ಲ: ಜಯ್ ಶಾ ಸ್ಪಷ್ಟನೆ

    ಪೋಸ್ಟ್ ನೋಡಿದ ಪ್ರತಿಯೊಬ್ಬರು ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗುಡ್‍ಬೈ ಹೇಳಿ ಆರಂಭಿಸುವ ಹೊಸ ಅಧ್ಯಾಯ ಯಾವುದು ಎಂಬ ಕುತೂಹಲದಲ್ಲಿದ್ದಾರೆ. ಆದರೆ ಗಂಗೂಲಿ ರಾಜೀನಾಮೆ ಕೊಟ್ಟಿಲ್ಲ ಎಂದು ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಯ್ ಶಾ, ಗಂಗೂಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದ್ದಾರೆ.

    ಈ ನಡುವೆ ಗಂಗೂಲಿ ಟ್ವೀಟ್ ಬಗ್ಗೆ ಹಲವು ಅನುಮಾನಗಳು ಎದ್ದಿದ್ದು, ಗಂಗೂಲಿ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಮಾತು ಮತ್ತೆ ಮುನ್ನೆಲೆಗೆ ಬಂದಿದೆ. 2015 ರಿಂದಲೂ ಬಂಗಾಳದಲ್ಲಿ ಗಂಗೂಲಿ ಬಿಜೆಪಿ ಪರವಾಗಿ ಚುನಾವಣೆಯ ಅಖಾಡಕ್ಕೆ ಧುಮುಕಲಿದ್ದಾರೆ. ದಾದಾ ಬಿಜೆಪಿ ಸೇರಿ ದೀದಿಗೆ ಟಕ್ಕರ್ ನೀಡಲಿದ್ದಾರೆ ಎಂಬ ಮಾತು ವ್ಯಾಪಕವಾಗಿ ಕೇಳಿಬರುತ್ತಿತ್ತು. 2021ರ ಬಂಗಾಳ ವಿಧಾನಸಭಾ ಚುನಾವಣೆಗೂ ಮೊದಲು ಗಂಗೂಲಿ ಬಿಜೆಪಿ ಸೇರಲಿದ್ದಾರೆ ಎಂದು ವರದಿಯಾಗಿತ್ತು. ಆ ಬಳಿಕ ಗಂಗೂಲಿಗೆ ಲಘು ಹೃದಯಾಘಾತವಾಯಿತು. ನಂತರ ರಾಜಕೀಯ ಪ್ರವೇಶಿಸುವ ಗಾಳಿಸುದ್ದಿಗೆ ಬ್ರೇಕ್ ಬಿದ್ದಿತ್ತು. ಆ ಬಳಿಕ ಕೆಲ ತಿಂಗಳ ಹಿಂದೆ ಗಂಗೂಲಿ ಮನೆಗೆ ಅಮಿತ್ ಶಾ ಭೇಟಿ ನೀಡಿದ್ದರು. ಶಾ ಭೇಟಿ ರಾಜಕೀಯ ಚರ್ಚೆಗೆ ಗ್ರಾಸವಾಗಿತ್ತು. ಆದಾದ ಬಳಿಕ ಇದೀಗ ದಾದಾ ಮಾಡಿರುವ ಟ್ವೀಟ್ ರಾಜಕೀಯ ಎಂಟ್ರಿಗೆ ಪುಷ್ಠಿ ಕೊಡುತ್ತಿದೆ. ದಾದಾರ ಹೊಸ ಹೆಜ್ಜೆ ರಾಜಕೀಯ ಪ್ರವೇಶ ಎಂಬ ಮಾತು ಆರಂಭವಾಗಿದೆ. ರಾಜಕೀಯ ರಂಗದಲ್ಲಿ ಹೊಸ ಇನ್ಸಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಬಿಜೆಪಿಯಿಂದ ರಾಜ್ಯಸಭೆಗೆ ಸೌರವ್ ಗಂಗೂಲಿ ಹೋಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: ಎಂ.ಎಸ್ ಧೋನಿ ಸೇರಿ 8 ಮಂದಿ ವಿರುದ್ಧ FIR

    ಈ ನಡುವೆ ಗಂಗೂಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ವರದಿಯಾಗಿದೆ. ಭಾರತದಾದ್ಯಂತ ಗಂಗೂಲಿ ಕ್ರಿಕೆಟ್ ಆಕಾಡೆಮಿ ಆರಂಭಿಸಲು ತಯಾರಿ ನಡೆಸಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಆಕಾಡೆಮಿ ಆರಂಭಿಸುವ ಮೂಲಕ ಗಂಗೂಲಿ ಕ್ರಿಕೆಟ್‍ಗೆ ಇನ್ನಷ್ಟು ಪ್ರೋತ್ಸಾಹ ನೀಡಲು ಹೊರಟಿದ್ದಾರೆ ಇದೇ ಅವರ ಹೊಸ ಹೆಜ್ಜೆ ಎಂಬುದಾಗಿ ಗುಸುಗುಸು ಇದೆ.

    ದಾದಾ ಮಾಡಿರುವ ಆ ಒಂದು ಟ್ವೀಟ್ ದಾದಾ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಇದಕ್ಕೆಲ್ಲ ಗಂಗೂಲಿಯೇ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ಕೊಡಬೇಕಾಗಿದೆ.

  • ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ ನೀಡಿಲ್ಲ: ಜಯ್ ಶಾ ಸ್ಪಷ್ಟನೆ

    ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ ನೀಡಿಲ್ಲ: ಜಯ್ ಶಾ ಸ್ಪಷ್ಟನೆ

    ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಗೆ ತೆರೆಬಿದ್ದಿದೆ. ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಪಡಿಸಿದ್ದಾರೆ.

    ಇಂದು  ಟ್ವಿಟ್ಟರ್‌ನಲ್ಲಿ ಗಂಗೂಲಿ ಹಾಕಿಕೊಂಡಿದ್ದ ಪೋಸ್ಟ್ ಒಂದರ ಬಳಿಕ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಯ್ ಶಾ ಗಂಗೂಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಾಕಿ ಏಷ್ಯಾ ಕಪ್ 2022: ಭಾರತಕ್ಕೆ ಕಂಚಿನ ಪದಕ

    ಗಂಗೂಲಿ ಟ್ವೀಟ್‍ನಲ್ಲಿ ಏನಿದೆ?
    1992ರಲ್ಲಿ ನನ್ನ ಕ್ರಿಕೆಟ್ ವೃತ್ತಿ ಜೀವನ ಆರಂಭಗೊಂಡು ಇದೀಗ 2022ಕ್ಕೆ 30 ವರ್ಷಗಳು ಸಂದಿದೆ. ಅಲ್ಲಿಂದ ಇಲ್ಲಿವರೆಗೂ ಕ್ರಿಕೆಟ್ ನನಗೆ ಎಲ್ಲವನ್ನೂ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರ ಬೆಂಬಲ ನನಗೆ ಸಿಕ್ಕಿದೆ. ನನ್ನ ಕ್ರಿಕೆಟ್ ವೃತ್ತಿಬದುಕಿಗೆ ಸಹಕರಿಸಿದ, ನಾನು ಈ ಸ್ಥಾನಕ್ಕೆ ಬರಲು ಬೆಂಬಲ ನೀಡಿ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇನೆ. ನಾನು ಇಂದು ಇನ್ನೊಂದು ಹೊಸ ಪ್ರಾರಂಭದ ಹೆಜ್ಜೆಯನ್ನಿಟ್ಟಿದ್ದು ಇದು ಹಲವರಿಗೆ ನೆರವಾಗಲಿದೆ ಎನ್ನುವ ವಿಶ್ವಾಸ ನನಗಿದೆ. ನನ್ನ ಹೊಸ ಪ್ರಯತ್ನಕ್ಕೆ ನಿಮ್ಮಲ್ಲರ ಬೆಂಬಲ ಪ್ರೋತ್ಸಾಹ ಹೀಗೆ ಮುಂದುವರಿಯಲಿ ಎಂದು ನಾನು ಬೇಡಿಕೊಳ್ಳುತ್ತಿದ್ದೇನೆ. ಇದನ್ನೂ ಓದಿ: ಪಾಕಿಸ್ತಾನದವನಾಗಿ ನಾನು ಹೇಳುತ್ತೇನೆ ವಿರಾಟ್ ಕೊಹ್ಲಿ ಒಬ್ಬ ಸಾರ್ವಕಾಲಿಕ ಶ್ರೇಷ್ಠ ಆಟಗಾರ: ಶೋಯೆಬ್ ಅಕ್ತರ್

    ಈ ಪೋಸ್ಟ್ ಗಂಗೂಲಿ ಮಾಡಿದ ಬಳಿಕ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಸುಳ್ಳು ಸುದ್ದಿ ರಾಜೀನಾಮೆ ಕೊಟ್ಟಿಲ್ಲ ಎಂಬ ಸ್ಪಷ್ಟನೇ ಬಿಸಿಸಿಐ ಕಾರ್ಯದರ್ಶಿ ನೀಡಿದ್ದಾರೆ. ಈ ನಡುವೆ ಗಂಗೂಲಿ ಟ್ವೀಟ್ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

  • ಗಂಗೂಲಿ, ಅಮಿತ್ ಶಾ ಭೇಟಿ – ಬಿಜೆಪಿ ಸೇರ್ತಾರಾ ದಾದಾ?

    ಗಂಗೂಲಿ, ಅಮಿತ್ ಶಾ ಭೇಟಿ – ಬಿಜೆಪಿ ಸೇರ್ತಾರಾ ದಾದಾ?

    ಕೋಲ್ಕತ್ತಾ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ರಾತ್ರಿ ಭೋಜನ ಸವಿದು ಮಾತುಕತೆ ನಡೆಸಿದ್ದಾರೆ. ಈ ಮೂಲಕ ದಾದಾ ಬಿಜೆಪಿ ಪಕ್ಷ ಸೇರುತ್ತಾರೆಂಬ ಗುಸುಗುಸು ಮತ್ತೆ ಕೇಳಿಬಂದಿದೆ.

    2 ದಿನಗಳ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಮತ್ತು ಬಿಜೆಪಿ ನಾಯಕರು ನಿನ್ನೆ ರಾತ್ರಿ ಗಂಗೂಲಿ ಮನೆಯಲ್ಲಿ ಆಯೋಜಿಸಿದ್ದ ಡಿನ್ನರ್ ಪಾರ್ಟಿಯಲ್ಲಿ ಭಾಗವಹಿಸಿ ಕೆಲ ಕಾಲ ಮಾತುಕತೆ ನಡೆಸಿದರು. ಆ ಬಳಿಕ ಇದೀಗ ಗಂಗೂಲಿ ಬಿಜೆಪಿ ಸೇರ್ಪಡೆಗೊಳ್ಳುವ ಬಗ್ಗೆ ಚರ್ಚೆ ಜೋರಾಗಿದೆ. ಇತ್ತ ಅಮಿತ್ ಶಾ ಅವರ ಪುತ್ರ ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿರುವುದರಿಂದ ಕೋಲ್ಕತ್ತಾ ಭೇಟಿ ವೇಳೆ ಗಂಗೂಲಿ ಮನೆಗೆ ಸಹಜವಾಗಿಯೇ ಭೇಟಿ ಕೊಟ್ಟಿದ್ದಾರೆ ಎಂಬ ಮಾತು ಒಂದೆಡೆ ಹರಿದಾಡುತ್ತಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ – 5 ವಾರಗಳಲ್ಲಿ ಎರಡನೇ ಬಾರಿ ಹೇರಿಕೆ

    ಈ ಬಗ್ಗೆ ಭೋಜನ ಕೂಟದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸೌರವ್ ಗಂಗೂಲಿ, ನಮ್ಮ ಭೇಟಿಯಲ್ಲಿ ರಾಜಕೀಯವಾಗಿ ಏನೂ ನಡೆದಿಲ್ಲ. ಹಲವು ವರ್ಷಗಳಿಂದ ನಾನು ಅಮಿತ್ ಶಾ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದು, ಈ ಹಿಂದೆ ಹಲವು ಬಾರಿ ಭೇಟಿಯಾಗಿದ್ದೇನೆ. ಕೋಲ್ಕತ್ತಾಗೆ ಭೇಟಿ ನೀಡಿದ ಕಾರಣ ಅಮಿತ್ ಶಾರನ್ನು ಮನೆಗೆ ಊಟಕ್ಕೆ ಆಹ್ವಾನಿಸಿದ್ದೆ ಹಾಗಾಗಿ ಬಂದಿದ್ದಾರೆ ಎಂದರು.

    2015 ರಿಂದಲೂ ಬಂಗಾಳದಲ್ಲಿ ಗಂಗೂಲಿ ಬಿಜೆಪಿ ಪರವಾಗಿ ಚುನಾವಣೆಯ ಅಖಾಡಕ್ಕೆ ಧುಮುಕಳಿದ್ದಾರೆ. ದಾದಾ ಬಿಜೆಪಿ ಸೇರಿ ದೀದಿಗೆ ಟಕ್ಕರ್ ನೀಡಲಿದ್ದಾರೆ ಎಂಬ ಮಾತು ವ್ಯಾಪಕವಾಗಿ ಕೇಳಿಬರುತ್ತಿತ್ತು. 2021ರ ಬಂಗಾಳ ವಿಧಾನಸಭಾ ಚುನಾವಣೆಗೂ ಮೊದಲು ಗಂಗೂಲಿ ಬಿಜೆಪಿ ಸೇರಲಿದ್ದಾರೆ ಎಂದು ವರದಿಯಾಗಿತ್ತು. ಆ ಬಳಿಕ ಗಂಗೂಲಿಗೆ ಲಘು ಹೃದಯಾಘಾತವಾಯಿತು. ನಂತರ ರಾಜಕೀಯ ಪ್ರವೇಶಿಸುವ ಗಾಳಿಸುದ್ದಿಗೆ ಬ್ರೇಕ್ ಬಿದ್ದಿತ್ತು. ಇದನ್ನೂ ಓದಿ: ಮುಂಬೈ ತಂಡಕ್ಕೆ ರೋಚಕ ಜಯ – 3ನೇ ಸೋಲಿನ ಕಹಿ ಅನುಭವಿಸಿದ ಗುಜರಾತ್‌

    ಇದೀಗ ಮತ್ತೆ ಗಂಗೂಲಿ ಮತ್ತು ಅಮಿತ್ ಶಾ ಭೇಟಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಗಂಗೂಲಿ ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆ ದಾದಾ ಅಭಿಮಾನಿಗಳಲ್ಲಿ ಎದ್ದಿದ್ದು ಇದಕ್ಕೆಲ್ಲ ಗಂಗೂಲಿಯೇ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ಕೊಡಬೇಕಾಗಿದೆ.

     

  • 2023 ರಿಂದ ಮಹಿಳಾ ಐಪಿಎಲ್ ಪ್ರಾರಂಭಿಸಲು ಬಿಸಿಸಿಐ ಸಿದ್ಧತೆ

    2023 ರಿಂದ ಮಹಿಳಾ ಐಪಿಎಲ್ ಪ್ರಾರಂಭಿಸಲು ಬಿಸಿಸಿಐ ಸಿದ್ಧತೆ

    ನವದೆಹಲಿ: 2023 ರ ವೇಳೆಗೆ ಮಹಿಳಾ ಐಪಿಎಲ್ ಅನ್ನು ಪ್ರಾರಂಭಿಸಲು ಬಿಸಿಸಿಐ ಯೋಜಿಸುತ್ತಿದೆ ಎಂದು ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಶುಕ್ರವಾರ ಹೇಳಿದ್ದಾರೆ.

    ಮಹಿಳಾ ಐಪಿಎಲ್ ಅನ್ನು ಪ್ರಾರಂಭಿಸದಿದ್ದಕ್ಕಾಗಿ ಈ ಹಿಂದೆ ಟೀಕೆಗೊಳಗಾದ ಬಿಸಿಸಿಐ, ಮುಂದಿನ ಋತುವಿನಲ್ಲಿ ಲೀಗ್ ಅನ್ನು ಪ್ರಾರಂಭ ಮಾಡಲು ಎಜಿಎಂ ಅನುಮೋದನೆಯ ಅಗತ್ಯವಿದೆ. 2023ರಲ್ಲಿ ಪ್ರಾರಂಭವಾಗುವ ಲೀಗ್‍ನ ಉದ್ಘಾಟನಾ ಆವೃತ್ತಿಯಲ್ಲಿ ಐದು ಅಥವಾ ಆರು ತಂಡಗಳನ್ನು ಹೊಂದಲು ಮಂಡಳಿಯು ಯೋಜಿಸುತ್ತಿದೆ.

    ಶುಕ್ರವಾರ ಇಲ್ಲಿ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್ ಅನ್ನು ಎಜಿಎಂ ಅನುಮೋದಿಸಬೇಕಾಗಿದೆ. ಮುಂದಿನ ವರ್ಷದ ವೇಳೆಗೆ ಅದನ್ನು ಪ್ರಾರಂಭಿಸಲು ನಾವು ಯೋಜಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಸಿಎಸ್‍ಕೆ ನಾಯಕ ಸ್ಥಾನಕ್ಕೆ ಧೋನಿ ರಾಜೀನಾಮೆ

    ಈ ಹಿಂದೆ ಫೆಬ್ರವರಿಯಂದು ಸಂದರ್ಶನವೊಂದರಲ್ಲಿ ಗಂಗೂಲಿ ಮಹಿಳಾ ಐಪಿಎಲ್ ಅನ್ನು 2023 ರಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದ್ದರು.

    ಪುರುಷರ ಐಪಿಎಲ್ ಪ್ಲೇ-ಆಫ್ ಸುತ್ತು ಪ್ರಾರಂಭವಾಗುವ ಮೊದಲು ಮೂರು ಮಹಿಳಾ ತಂಡಗಳ ನಡುವೆ ಈ ಋತುವಿನಲ್ಲಿ ನಾಲ್ಕು ಪಂದ್ಯಗಳು ನಡೆಯಲಿವೆ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಸ್ಪಷ್ಟಪಡಿಸಿದ್ದಾರೆ. ಪ್ಲೇ-ಆಫ್‍ನ ಸಮಯದಲ್ಲಿ ಮೂರು ತಂಡಗಳನ್ನು ಒಳಗೊಂಡ ನಾಲ್ಕು ಪಂದ್ಯಗಳು ನಡೆಯಲಿವೆ ಎಂದು ಸಭೆಯ ನಂತರ ಹೇಳಿದರು. ಇದನ್ನೂ ಓದಿ: ಇಂದಿನಿಂದ ಐಪಿಎಲ್ ಆರಂಭ – ಅತಿ ಹೆಚ್ಚು ರನ್ ಸಿಡಿದ ಟಾಪ್ ಮ್ಯಾಚ್‍ಗಳು

    ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಐಪಿಎಲ್‍ನ ದ್ವಿತೀಯಾರ್ಧವನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಕಳೆದ ವರ್ಷ ಮಹಿಳಾ ತಂಡಗಳನ್ನು ಆಡಿಸಿರಲಿಲ್ಲ. 2020ರ ಐಪಿಎಲ್‍ನಲ್ಲಿ ಟ್ರೈಲ್‍ಬ್ಲೇಜರ್ಸ್ ತಂಡವು ಪ್ರಶಸ್ತಿಯನ್ನು ಗೆದ್ದಿತ್ತು.

    ಮಹಿಳಾ ತಂಡಗಳ ಆಟಗಳು ಹೆಚ್ಚಾಗಿ ಪುಣೆಯಲ್ಲಿ ನಡೆಯುತ್ತವೆ. ಈ ವರ್ಷದ ಐಪಿಎಲ್ ಶನಿವಾರ ವಾಂಖೆಡೆ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆಯಲಿದೆ.

  • ಹೃದಯಾಘಾತಕ್ಕೆ ತಾನೇ ಚಿಕಿತ್ಸೆ ಪಡೆದಿದ್ದ ಆಸ್ಪತ್ರೆಯ ICU ಬೆಡ್ ಉದ್ಘಾಟಿಸಿದ ಗಂಗೂಲಿ

    ಹೃದಯಾಘಾತಕ್ಕೆ ತಾನೇ ಚಿಕಿತ್ಸೆ ಪಡೆದಿದ್ದ ಆಸ್ಪತ್ರೆಯ ICU ಬೆಡ್ ಉದ್ಘಾಟಿಸಿದ ಗಂಗೂಲಿ

    ಬೆಂಗಳೂರು: ನಗರದ ಹೊರವಲಯ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಬಳಿ ಇರುವ ನಾರಾಯಣ ಹೆಲ್ತ್ ಸಿಟಿಗೆ ಮಾಜಿ ಕ್ಯಾಪ್ಟನ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭೇಟಿ ನೀಡಿದ್ದಾರೆ.

    ಭೇಟಿಯ ಬಳಿಕ ಹೃದಯಾಲಯದ 100 ಐಸಿಯು ಬೆಡ್ ಉದ್ಘಾಟನೆ ಮಾಡಿದ್ದಾರೆ. 100 ಬೆಡ್ ಸಾಮಥ್ರ್ಯದ ಕೋವಿಡ್ ಆಸ್ಪತ್ರೆ ಇದಾಗಿದ್ದು, ಡಾ. ದೇವಿ ಶೆಟ್ಟಿ ಮಾಲೀಕತ್ವದ ನಾರಾಯಣ ಹೆಲ್ತ್ ಸಿಟಿ ಇದಾಗಿದೆ. ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು

    ಈಚೆಗೆ ಗಂಗೂಲಿಯವರಿಗೆ ಹೃದಯಾಘಾತವಾಗಿತ್ತು. ಕೆಲ ದಿನಗಳ ಕಾಲ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಡಿಸ್ಚಾರ್ಜ್ ಆಗಿದ್ದರು. ಆಗಾಗ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ನಾರಾಯಣ ಹೃದಯಾಲಯ ಆಸ್ಪತ್ರೆಯ ನಾಲ್ಕನೆ ಮಹಡಿಯಲ್ಲಿ ಸೌರವ್ ಗಂಗೂಲಿ ಅವರಿಗೆ ತಪಾಸಣೆ ಮಾಡಲಾಗಿತ್ತು. ಇದನ್ನೂ ಓದಿ: RCB ತಂಡದಲ್ಲಿ ಇಬ್ಬರು ಕನ್ನಡಿಗರು – ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

    ಕಾರ್ಡಿಯಾಕ್ ಸ್ಪೆಷಲಿಸ್ಟ್ ಡಾ. ದೇವಿ ಶೆಟ್ಟಿ ನೇತೃತ್ವದಲ್ಲಿ ದಾದಾ ಅವರಿಗೆ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಕಳೆದ ಬಾರಿ ಅವರಿಗೆ ಹೃದಯಾಘಾತವಾದಾಗ ಡಾ. ದೇವಿ ಅವರನ್ನು ಸಂಪರ್ಕಿಸುವಂತೆ ಅವರ ಸ್ನೇಹಿತರೊಬ್ಬರು ಗಂಗೂಲಿ ಅವರಿಗೆ ಹೇಳಿದ್ದರಂತೆ.

  • ದಾದಾ ಮಾತನ್ನು ಡೋಂಟ್ ಕೇರ್ ಎಂದ್ರಾ ಹಾರ್ದಿಕ್ ಪಾಂಡ್ಯ?

    ದಾದಾ ಮಾತನ್ನು ಡೋಂಟ್ ಕೇರ್ ಎಂದ್ರಾ ಹಾರ್ದಿಕ್ ಪಾಂಡ್ಯ?

    ಮುಂಬೈ: ಫಿಟ್‍ನೆಸ್ ಸಮಸ್ಯೆ ಮತ್ತು ಫಾರ್ಮ್ ಕಳೆದುಕೊಂಡು ಹೊರಗುಳಿದಿರುವ ಆಟಗಾರರು ರಣಜಿ ಪಂದ್ಯವನ್ನಾಡಿ ಮತ್ತೆ ಟೀಂ ಇಂಡಿಯಾದಲ್ಲಿ ಆಡಲು ಸಿದ್ಧರಾಗಿ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೆಲದಿನಗಳ ಹಿಂದೆ ಆಟಗಾರರಿಗೆ ಸಂದೇಶ ನೀಡಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಮಾತ್ರ ಗಂಗೂಲಿ ಮಾತಿಗೆ ಡೋಂಟ್ ಕೇರ್ ಅಂದಂತಿದೆ.

    2021ರ ಟಿ20 ವಿಶ್ವಕಪ್ ಬಳಿಕ ಫಿಟ್‍ನೆಸ್ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ಹೊರಗುಳಿದಿರುವ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಈ ಬಾರಿಯ ರಣಜಿ ಟೂರ್ನಿಯಿಂದ ವಿಶ್ರಾಂತಿ ಬಯಸಿದ್ದಾರೆ. ಬರೋಡ ಪರ ರಣಜಿ ಪಂದ್ಯವಾಡುವ ಅವಕಾಶ ಪಾಂಡ್ಯಗೆ ಇತ್ತು ಆದರೆ ಪಾಂಡ್ಯ ಮಾತ್ರ ರಣಜಿ ಪಂದ್ಯ ಆಡದಿರಲು ನಿರ್ಧರಿಸಿದ್ದಾರೆ. ಕೆಲದಿನಗಳ ಹಿಂದೆ ಗಂಗೂಲಿ, ಫಿಟ್‍ಸಮಸ್ಯೆಯಿಂದ ಹೊರಗುಳಿದಿರುವ ಆಟಗಾರೆಲ್ಲರೂ ರಣಜಿ ಪಂದ್ಯವನ್ನಾಡಿ ಫಿಟ್‍ನೆಸ್ ಸಾಬೀತು ಪಡಿಸಿಕೊಳ್ಳಿ ಎಂದು ಸೂಚಿಸಿದ್ದರು. ಆದರೆ ಪಾಂಡ್ಯ ಮಾತ್ರ ರಣಜಿ ಆಡಲ್ಲ ಎಂದು ತಂಡದಿಂದ ದೂರ ಉಳಿದಿದ್ದಾರೆ. ಇದನ್ನೂ ಓದಿ: ಕೆಲವೇ ಗಂಟೆಗಳಲ್ಲಿ ಭಾರತ vs ಪಾಕಿಸ್ತಾನ ಪಂದ್ಯದ ಟಿಕೆಟ್ ಸೋಲ್ಡ್ ಔಟ್

    ಮೂಲಗಳ ಪ್ರಕಾರ ಪಾಂಡ್ಯ 2022ರ ಐಪಿಎಲ್ ಫ್ರಾಂಚೈಸ್ ಅಹಮದಾಬಾದ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಹಾಗಾಗಿ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ತೊರಲು ರಣಜಿ ಆಡುತ್ತಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಧೋನಿ ಸಿಕ್ಸರ್ ನೆನಪಿಸಿದ ದಿನೇಶ್ ಬಣ ಫಿನಿಶಿಂಗ್ ಶಾಟ್

    ಬಿಸಿಸಿಐ, ರಣಜಿ ಪಂದ್ಯವಾಡಿ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಲು ಆಟಗಾರರಿಗೆ ಅವಕಾಶ ನೀಡಿದೆ. ಆದರೆ ಪಾಂಡ್ಯ ರಣಜಿ ಆಡದೆ ಐಪಿಎಲ್ ಕಡೆ ಹೆಚ್ಚು ಗಮನ ಹರಿಸಿರುವುದು ಕಂಡು ಬರುತ್ತಿದೆ. ಹಾಗಾಗಿ ಪಾಂಡ್ಯ ಮುಂದೆ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡುವುದು ಕಷ್ಟ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

  • ಕೊಹ್ಲಿಗೆ ಶೋಕಾಸ್ ನೋಟಿಸ್ ನೀಡಿಲ್ಲ: ಗಂಗೂಲಿ

    ಕೊಹ್ಲಿಗೆ ಶೋಕಾಸ್ ನೋಟಿಸ್ ನೀಡಿಲ್ಲ: ಗಂಗೂಲಿ

    ಮುಂಬೈ: ವಿರಾಟ್ ಕೊಹ್ಲಿಗೆ ಶೋಕಾಸ್ ನೋಟಿಸ್ ಕಳುಹಿಸಲು ಬಯಸಿದ್ದೇವೆ ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದರು.

    ಕಳೆದ ವರ್ಷ ವಿರಾಟ್ ಕೊಹ್ಲಿ ಟಿ20 ಪಂದ್ಯದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಭಾರತೀಯ ಕ್ರಿಕೆಟ್‍ನಲ್ಲಿ ವಿವಾದವನ್ನು ಹುಟ್ಟುಹಾಕಿತ್ತು. ದಕ್ಷಿಣ ಆಫ್ರಿಕಾದ ಪ್ರವಾಸದ ಮುಂಚೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ್ದ ವಿರಾಟ್ ಕೊಹ್ಲಿ, ಏಕದಿನ ಪಂದ್ಯದಿಂದ ನಾಯಕತ್ವವನ್ನು ಹಿಂಪಡೆದಿರುವುದು ತಿಳಿದೇ ಇರಲಿಲ್ಲ ಎಂಬ ಹೇಳಿಕೆ ನೀಡಿದ್ದರು. ಇದು ವಿವಾದವನ್ನು ಹುಟ್ಟಿಸಿತ್ತು. ನಂತರದಲ್ಲಿ ಸೌರವ್ ಗಂಗೂಲಿ ಅವರು ದಕ್ಷಿಣ ಆಫ್ರಿಕಾ ಸರಣಿಗೆ ಮುಂಚಿತವಾಗಿ ಕೊಹ್ಲಿಗೆ ಶೋಕಾಸ್ ನೋಟಿಸ್ ಕಳುಹಿಸಲು ಬಯಸಿದ್ದರು ಎಂಬ ವರದಿ ಹೊರಬಿದ್ದಿದೆ.

    ಈ ವಿಷಯದ ಕುರಿತಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೌನ ಮುರಿದಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಇದು ನಿಜವಲ್ಲ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಕೊಹ್ಲಿ ಟಿ-20 ನಾಯಕತ್ವದಿಂದ ಕೆಳಗಿಳಿದಿದ್ದರು. ಇದರಿಂದಾಗಿ ವೈಟ್ ಬಾಲ್ ಸ್ವರೂಪಕ್ಕೆ ಒಬ್ಬರೇ ನಾಯಕರು ಬೇಕೆಂದು ಆಯ್ಕೆ ಸಮಿತಿ ಅವರನ್ನು ಏಕದಿನ ನಾಯಕನ ಸ್ಥಾನದಿಂದಲೂ ತೆಗೆದುಹಾಕಿದೆ. ಇದನ್ನೂ ಓದಿ: ಮೊದ್ಲು ಜನ್ರಿಗೆ ಆದಾಯ ಬರುವಂತೆ ಮಾಡಿ, ಆಮೇಲೆ ದರ ಏರಿಕೆ ಮಾಡಿ : ಡಿಕೆಶಿ

    ನಾಯಕತ್ವದ ಬದಲಾವಣೆಯ ಕುರಿತು ವಿರಾಟ್ ಕೊಹ್ಲಿ ಅವರ ಜೊತೆಗೂ ಮಾತನಾಡಿದ್ದೇನೆ. ಟಿ20 ಪಂದ್ಯದ ನಾಯಕತ್ವವನ್ನು ಬಿಟ್ಟುಕೊಡದಂತೆ ವಿನಂತಿಸಿಕೊಂಡಿದ್ದೆವು ಎಂದು ಹೇಳಿದರು.

    ಕಳೆದ ವಾರ ಟೆಸ್ಟ್ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ್ದಾರೆ. ಇದಾದ ನಂತರ ಸೌರವ್ ಗಂಗೂಲಿ ಟ್ವೀಟ್ ಮಾಡಿ, ಅದು ಕೊಹ್ಲಿ ಅವರ ವೈಯಕ್ತಿಕ ನಿರ್ಧಾರ ಎಂದು ಹೇಳಿದ್ದರು. ಇದನ್ನೂ ಓದಿ: ಕೋವಿಡ್‌ ಯಾರನ್ನೂ ಬಿಟ್ಟಿಲ್ಲ, ದೇವೇಗೌಡರಿಗೆ ಕೊರೊನಾ ತೀವ್ರತೆ ಇಲ್ಲ: ಬೊಮ್ಮಾಯಿ

  • ರಾಜೀನಾಮೆ ಕೊಹ್ಲಿ ವೈಯಕ್ತಿಕ ವಿಚಾರ: ಸೌರವ್ ಗಂಗೂಲಿ

    ರಾಜೀನಾಮೆ ಕೊಹ್ಲಿ ವೈಯಕ್ತಿಕ ವಿಚಾರ: ಸೌರವ್ ಗಂಗೂಲಿ

    ಮುಂಬೈ: ಟೆಸ್ಟ್ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ವಿರಾಟ್ ಕೊಹ್ಲಿ ಅವರ ವೈಯಕ್ತಿಕ ವಿಚಾರ. ಕೊಹ್ಲಿ ಅವರ ಈ ನಿರ್ಧಾರವನ್ನು ಬಿಸಿಸಿಐ ಗೌರವಿಸುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

    ನಿನ್ನೆ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಕ್ರಿಕೆಟ್‍ನ ಎಲ್ಲಾ ಮಾದರಿಯ ಕ್ಯಾಪ್ಟನ್‍ಶಿಪ್‍ನಿಂದಲೂ ದೂರ ಉಳಿದಿರುವ ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಗಂಗೂಲಿ ಶ್ಲಾಘಿಸಿದ್ದಾರೆ. ತಂಡವನ್ನು ಮುನ್ನಡೆಸುವಲ್ಲಿ ಸ್ಟಾರ್ ಬ್ಯಾಟ್ಸ್‍ಮನ್‍ಗಳ ಪಾತ್ರ ಬಹುಮುಖ್ಯ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ವಿರಾಟ್ ನಾಯಕತ್ವದಲ್ಲಿ ಭಾರತದ ಕ್ರಿಕೆಟ್ ತಂಡ ಎಲ್ಲಾ ಮಾದರಿಯ ಪಂದ್ಯದಲ್ಲೂ ಉನ್ನತ ಮಟ್ಟಕ್ಕೆ ಏರಿದೆ. ನಾಯಕತ್ವಕ್ಕೆ ರಾಜೀನಾಮೆ ನೀಡಿರುವ ನಿರ್ಧಾರವು ಅವರ ವೈಯಕ್ತಿಕ ವಿಷಯವಾಗಿದೆ. ಬಿಸಿಸಿಐ ಈ ನಿರ್ಧಾರವನ್ನು ಗೌರವಿಸುತ್ತದೆ. ಭವಿಷ್ಯದಲ್ಲಿ ಟೀಂ ಇಂಡಿಯಾವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಹಕರಿಸಿದವರಲ್ಲಿ ಇವರು ಪ್ರಮುಖರೆನಿಸಿದ್ದಾರೆ. ಕೊಹ್ಲಿಗೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

    ಈ ಹಿಂದೆ ಟೀಂ ಇಂಡಿಯಾದ ಟಿ20 ಮತ್ತು ಏಕದಿನ ತಂಡದ ನಾಯಕತ್ವವನ್ನು ತೊರೆದಿದ್ದ ಕೊಹ್ಲಿ ಇದೀಗ ದಕ್ಷಿಣ ಆಫ್ರಿಕಾ ಸರಣಿ ಸೋಲಿನ ಬಳಿಕ ಟೆಸ್ಟ್ ನಾಯಕತ್ವಕ್ಕೂ ಗುಡ್ ಬೈ ಹೇಳಿದ್ದಾರೆ. ಈ ಮೂಲಕ ಎಲ್ಲಾ ಮಾದರಿಯ ತಂಡದ ನಾಯಕತ್ವದಿಂದ ಕಿಂಗ್ ಕೊಹ್ಲಿ ಕೆಳಗಿಳಿದು ಆಟಗಾರನಾಗಿ ಮಾತ್ರ ತಂಡದೊಂದಿಗಿರಲು ಬಯಸಿದ್ದಾರೆ. ಇದನ್ನೂ ಓದಿ:  ನಾಯಕತ್ವ ತ್ಯಜಿಸಿ ಧೋನಿಗೆ ವಿಶೇಷ ಧನ್ಯವಾದ ಸಲ್ಲಿಸಿದ ಕೊಹ್ಲಿ!

    ಟೀಂ ಇಂಡಿಯಾವನ್ನು ಟೆಸ್ಟ್ ರ್ಯಾಂಕಿಂಗ್‍ನಲ್ಲಿ ನಂಬರ್ 1 ಸ್ಥಾನಕ್ಕೆ ಕೊಂಡೊಯ್ದಿದ್ದ ಕೊಹ್ಲಿ, ಐಸಿಸಿ ಟ್ರೋಫಿ ಜಯಿಸಲು ಮಾತ್ರ ವಿಫಲವಾಗಿದ್ದರು. ಇದನ್ನು ಹೊರತುಪಡಿಸಿ ಕೊಹ್ಲಿ ಉತ್ತಮವಾಗಿ ನಾಯಕತ್ವವನ್ನು ನಿರ್ವಹಿಸಿ ಇದೀಗ ಮೂರು ಮಾದರಿಯ ನಾಯಕತ್ವವನ್ನು ತ್ಯಜಿಸಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಒಟ್ಟು 68 ಟೆಸ್ಟ್ ಪಂದ್ಯಗಳನ್ನಾಡಿದ್ದು, 40 ಟೆಸ್ಟ್ ಪಂದ್ಯಗಳಲ್ಲಿ ಗೆಲುವು, 17 ಟೆಸ್ಟ್ ಪಂದ್ಯಗಳಲ್ಲಿ ಸೋಲು ಕಂಡಿದ್ದು, 11 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಇದನ್ನೂ ಓದಿ:  ಟೀಂ ಇಂಡಿಯಾದ ಟೆಸ್ಟ್ ನಾಯಕತ್ವ ತೊರೆದ ವಿರಾಟ್ ಕೊಹ್ಲಿ