Tag: soup

  • ‌ಸವಿಯಲು ಸಕತ್‌ ಟೇಸ್ಟಿ ಆಗಿರುತ್ತೆ ಮೂಲಂಗಿ ಸೂಪ್‌ – ನೀವೂ ಟ್ರೈ ಮಾಡಿ

    ‌ಸವಿಯಲು ಸಕತ್‌ ಟೇಸ್ಟಿ ಆಗಿರುತ್ತೆ ಮೂಲಂಗಿ ಸೂಪ್‌ – ನೀವೂ ಟ್ರೈ ಮಾಡಿ

    ಸೂಪ್‌ ಪ್ರಿಯರು ಟೇಸ್ಟ್‌ಗೆ ಹಾಗೂ ಆರೋಗ್ಯಕ್ಕೆ ಮೂಲಂಗಿ ಸೂಪ್ ಬಹಳ ಉತ್ತಮ. ಇದು ದೇಹಕ್ಕೆ ಬೇಕಾದ ʻಸಿ; ವಿಟಮಿನ್‌ ಒದಗಿಸುತ್ತದೆ. ಅಲ್ಲದೇ ಲಿವರ್‌ ಆರೋಗ್ಯಕ್ಕೂ ಬಹಳ ಒಳ್ಳೆಯದು. ಮೂಲಂಗಿ ಸೂಪ್‌ ತಯಾರಿಸುವ ವಿಧಾನ ನೋಡೋಣ.

    ಬೇಕಾಗುವ ಪದಾರ್ಥಗಳು:
    * ಮೂಲಂಗಿ: 200 ಗ್ರಾಂ
    * ಸಾಸಿವೆ: 1 ಟೀಸ್ಪೂನ್
    * ಜೀರಿಗೆ: 1 ಟೀಸ್ಪೂನ್
    * ಇಂಗು
    * ಕೆಂಪು ಮೆಣಸಿನಕಾಯಿ: 2
    * ಬೇವಿನ ಎಲೆಗಳು
    * ಅಡುಗೆ ಎಣ್ಣೆ
    * ಅರಿಶಿನ ಪುಡಿ: 1 ಟೀಸ್ಪೂನ್
    * ರಸಂ ಪುಡಿ: 1 ಟೀಸ್ಪೂನ್
    * ಉಪ್ಪು: ರುಚಿಗೆ ತಕ್ಕಷ್ಟು
    * ನೀರು

    ತಯಾರಿಸುವ ವಿಧಾನ
    ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಇಂಗು, ಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಹುರಿಯಬೇಕು. ನಂತರ ಸಾಸಿವೆ ಒಡೆದ ತಕ್ಷಣ, ಕತ್ತರಿಸಿದ ಮೂಲಂಗಿ ಸೇರಿಸಿ, 5-7 ನಿಮಿಷಗಳ ಕಾಲ ಮೂಲಂಗಿ ಮೃದುವಾಗುವವರೆಗೆ ಹುರಿಯಬೇಕು.

    ಅರಿಶಿನ ಪುಡಿ, ರಸಂ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಒಂದು ಲೀಟರ್ ನೀರು ಸೇರಿಸಿ, ಮುಚ್ಚಿ, 10-15 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಬೇಕು. ಮೂಲಂಗಿ ಸಂಪೂರ್ಣವಾಗಿ ಬೆಂದ ನಂತರ, ಸೂಪ್ ಸವಿಯಲು ಸಿದ್ಧ.

  • ಫಟಾಫಟ್ ಅಂತ ಮಾಡಬಹುದಾದ ಚಿಕನ್ ನೂಡಲ್ ಸೂಪ್ ರೆಸಿಪಿ

    ಫಟಾಫಟ್ ಅಂತ ಮಾಡಬಹುದಾದ ಚಿಕನ್ ನೂಡಲ್ ಸೂಪ್ ರೆಸಿಪಿ

    ಸೂಪ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಚಿಕನ್ ಸೂಪ್ ಎಂದರೆ ಎಂತಹವರ ಬಾಯಲ್ಲೂ ನೀರೂರುತ್ತದೆ. ಇಂದು ನಾವು ನೂಡಲ್ಸ್ ಕಾಂಬಿನೇಶನ್‌ನೊಂದಿಗೆ ಚಿಕನ್ ಸೂಪ್ ಹೇಗೆ ಮಾಡುವುದು ಎಂದು ಹೇಳಿಕೊಡುತ್ತೇವೆ. ರುಚಿಕರವಾದ ಚಿಕನ್ ನೂಡಲ್ ಸೂಪ್ (Chicken Noodle Soup) ಅನ್ನು ಒಮ್ಮೆ ನೀವು ಕೂಡಾ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಚಿಕನ್ ಅಥವಾ ತರಕಾರಿ ಸ್ಟಾಕ್ – 900 ಎಂಎಲ್
    ಚಿಕನ್ ಬ್ರೆಸ್ಟ್ – 200 ಗ್ರಾಂ
    ಸಣ್ಣಗೆ ಹೆಚ್ಚಿದ ಶುಂಠಿ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 1
    ಅಕ್ಕಿ ಅಥವಾ ಗೋಧಿ ನೂಡಲ್ಸ್ – 50 ಗ್ರಾಂ
    ಸ್ವೀಟ್ ಕಾರ್ನ್ – 2 ಟೀಸ್ಪೂನ್
    ಸಣ್ಣಗೆ ಕತ್ತರಿಸಿದ ಮಶ್ರೂಮ್ – 2-3
    ಸ್ಪ್ರಿಂಗ್ ಆನಿಯನ್ – 2
    ಸೋಯಾ ಸಾಸ್ – 2 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಪುದೀನ – 2 ಟೀಸ್ಪೂನ್ ಇದನ್ನೂ ಓದಿ: ಸಖತ್ ಟೇಸ್ಟಿ ಆಗಿರುತ್ತೆ ಚಿಕನ್ ಸ್ಟೀಮ್ಡ್ ಮೊಮೊಸ್ – ಒಮ್ಮೆ ಮಾಡಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಯಲ್ಲಿ ಚಿಕನ್ ಅಥವಾ ತರಕಾರಿ ಸ್ಟಾಕ್ ಅನ್ನು ಹಾಕಿ, ಕುದಿಸಿ.
    * ಚಿಕನ್ ಬ್ರೆಸ್ಟ್ ಅನ್ನು ಬಾಣಲೆಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
    * ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಸೇರಿಸಿ, ಚಿಕನ್ ಚೆನ್ನಾಗಿ ಬೇಯುವವರೆಗೆ 20 ನಿಮಿಷಗಳ ಕಾಲ ಕುದಿಸಿ.
    * ಈಗ ಬೆಂದ ಚಿಕನ್ ಬ್ರೆಸ್ಟ್ ಅನ್ನು ತೆಗೆದು, ಸಣ್ಣಗೆ ಹಾಗೂ ಉದ್ದಕ್ಕೆ ಚೂರುಗಳನ್ನಾಗಿ ಮಾಡಿ.

    * ಈಗ ಚೂರು ಮಾಡಿದ ಚಿಕನ್, ನೂಡಲ್ಸ್, ಸ್ವೀಟ್ ಕಾರ್ನ್, ಮಶ್ರೂಮ್, ಸ್ಪ್ರಿಂಗ್ ಆನಿಯನ್ ಹಾಗೂ ಸೋಯಾ ಸಾಸ್ ಅನ್ನು ಸ್ಟಾಕ್‌ಗೆ ಹಾಕಿ 3-4 ನಿಮಿಷಗಳ ವರೆಗೆ ಕುದಿಸಿ.
    * ಇದೀಗ ಚಿಕನ್ ನೂಡಲ್ ಸೂಪ್ ತಯಾರಾಗಿದ್ದು, ಪುದೀನ ಎಲೆಗಳನ್ನು ಹಾಕಿ, ಬೌಲ್‌ಗಳಿಗೆ ಸರ್ವ್ ಮಾಡಿ. ಇದನ್ನೂ ಓದಿ: ಮಸಾಲೆಯುಕ್ತ ಕುಶ್ಕಾ ರೈಸ್ ಮಾಡುವ ಸರಳ ವಿಧಾನ

    Live Tv
    [brid partner=56869869 player=32851 video=960834 autoplay=true]

  • ಈ ರೀತಿಯಾಗಿ ಮಾಡಿ ಆರೋಗ್ಯಕರ ಟೊಮೆಟೊ ಸೂಪ್

    ಈ ರೀತಿಯಾಗಿ ಮಾಡಿ ಆರೋಗ್ಯಕರ ಟೊಮೆಟೊ ಸೂಪ್

    ರೆಸ್ಟೋರೆಂಟ್‌ಗಳಲ್ಲಿ ಸಿಗುವ ರುಚಿಕರವಾದ ಟೊಮೆಟೊ ಸೂಪ್ ನೀವು ಯಾವಾಗಲೂ ಸವಿದಿರುತ್ತೀರಿ. ಆಗಾಗ ಅಂಗಡಿಗಳಲ್ಲಿ ಸಿಗುವ ಇನ್ಸ್ಟೆಂಟ್ ಪೌಡರ್‌ಗಳಿಂದಲೂ ಸೂಪ್ ಮಾಡಿರುತ್ತೀರಿ. ಆದರೆ ಹೊರಗಡೆ ಸಿಗುವ ಸೂಪ್ ಆರೋಗ್ಯಕರವಾಗಿರುತ್ತದೆಯೇ ಎಂಬ ಪ್ರಶ್ನೆ ಖಂಡಿತವಾಗಿಯೂ ನಿಮ್ಮಲ್ಲಿ ಮೂಡುತ್ತದೆ. ಮನೆಯಲ್ಲಿಯೇ ಟೊಮೆಟೊ ಸೂಪ್ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಅಲ್ವಾ. ರುಚಿಕರ ಹಾಗೂ ಆರೋಗ್ಯಕರ ಟೊಮೆಟೊ ಸೂಪ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಬೆಣ್ಣೆ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ
    ಬೆಳ್ಳುಳ್ಳಿ – 2
    ಕರಿಬೇವಿನ ಎಲೆ – 1
    ಕತ್ತರಿಸಿದ ಟೊಮೆಟೊ – 3
    ಕತ್ತರಿಸಿದ ಕ್ಯಾರೆಟ್ – ಅರ್ಧ
    ಉಪ್ಪು – ಅರ್ಧ ಟೀಸ್ಪೂನ್
    ನೀರು – 1 ಕಪ್
    ಸಕ್ಕರೆ – 1 ಟೀಸ್ಪೂನ್
    ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಫ್ರೆಶ್ ಕ್ರೀಂ – 2 ಟೀಸ್ಪೂನ್ ಇದನ್ನೂ ಓದಿ: ರುಚಿಕರ ಸೋಯಾಬೀನ್ 65 ಮಾಡಿ ಸವಿಯಿರಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಕಡಾಯಿಯಲ್ಲಿ ಬೆಣ್ಣೆ ಬಿಸಿ ಮಾಡಿ, ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಮತ್ತು ಕರಿಬೇವಿನ ಎಲೆ ಸೇರಿಸಿ ಫ್ರೈ ಮಾಡಿ.
    * ಬಳಿಕ ಟೊಮೇಟೊ, ಕ್ಯಾರೆಟ್ ಮತ್ತು ಉಪ್ಪು ಸೇರಿಸಿ, ಒಂದು ನಿಮಿಷ ಅಥವಾ ಟೊಮೆಟೊ ಬಣ್ಣ ಬದಲಾಯಿಸುವ ತನಕ ಹುರಿಯಿರಿ.
    * ಈಗ ನೀರು ಸೇರಿಸಿ, ಮುಚ್ಚಿ 10 ನಿಮಿಷಗಳ ಕಾಲ ಕುದಿಸಿ.
    * ಮಿಶ್ರಣ ತಣ್ಣಗಾದ ಬಳಿಕ ಮಿಕ್ಸರ್ ಜಾರ್‌ನಲ್ಲಿ ಹಾಕಿ ನುಣ್ಣಗೆ ರುಬ್ಬಿ.
    * ಈಗ ಜರಡಿಯಲ್ಲಿ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ, ಸೋಸಿಕೊಳ್ಳಿ.
    * ನಿಮಗೆ ಸೂಪ್ ಎಷ್ಟು ಗಾಢವಾಗಿ ಬೇಕು ಎಂಬ ಅಂದಾಜಿನಲ್ಲಿ ಹೆಚ್ಚುವರಿ ನೀರನ್ನು ಸೇರಿಸಿ, ಮತ್ತೊಮ್ಮೆ ಕುದಿಸಿ.
    * ಅದಕ್ಕೆ ಸಕ್ಕರೆ, ಕರಿಮೆಣಸಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಈಗ ಒಲೆಯನ್ನು ಆಫ್ ಮಾಡಿ, ಫ್ರೆಶ್ ಕ್ರೀಂ ಸೇರಿಸಿ ಮಿಕ್ಸ್ ಮಾಡಿ.
    * ಇದೀಗ ಆರೋಗ್ಯಕರ ಟೊಮೆಟೊ ಸೂಪ್ ತಯಾರಾಗಿದ್ದು, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಕ್ರಿಸ್ಪಿ ಪನೀರ್ ಫ್ರೈ ಮಾಡುವುದು ತುಂಬಾ ಸುಲಭ

    Live Tv
    [brid partner=56869869 player=32851 video=960834 autoplay=true]

  • ಸೂಪರ್ ಟೇಸ್ಟಿ ಚಿಕನ್ ಸೂಪ್ ಟ್ರೈ ಮಾಡಿ

    ಸೂಪರ್ ಟೇಸ್ಟಿ ಚಿಕನ್ ಸೂಪ್ ಟ್ರೈ ಮಾಡಿ

    ತ್ಯಧಿಕ ಪ್ರೊಟೀನ್ ಅಂಶವಿರುವ ಚಿಕನ್‌ನಿಂದ ಸೂಪ್ ಮಾಡಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಾತ್ರವಲ್ಲದೇ ನಿಮ್ಮ ದೇಹದ ತೂಕವನ್ನೂ ಸರಿದುಗಿಸಲು ಡಯಟ್‌ಗೆ ಚಿಕನ್ ಸೂಪ್ ಬೆಸ್ಟ್ ಆಪ್ಶನ್. ಅತ್ಯಂತ ಸುಲಭವಾಗಿ ಮಾಡಬಹುದಾದ ರುಚಿಕರ ಚಿಕನ್ ಸೂಪ್ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    * ಆಲೂಗೆಡ್ಡೆ – 2
    * ಚಿಕನ್ – ಅರ್ಧ ಕೆಜಿ
    * ಕ್ಯಾರೆಟ್ – 2
    * ಈರುಳ್ಳಿ – 2
    * ನೀರು – 10 ಕಪ್
    * ಪಲಾವ್ ಎಲೆ – 2
    * ಕರಿಮೆಣಸಿನ ಪುಡಿ – ಒಂದು ಚಮಚ
    * ಜೋಳದ ಪುಡಿ(ಕಾರ್ನ್ ಫ್ಲೋರ್) – ಅರ್ಧ ಕಪ್
    * ಉಪ್ಪು – 2 ಚಮಚ
    * ನಿಂಬೆ ಹಣ್ಣಿನ ರಸ
    * ಕೊತ್ತಂಬರಿ ಸೊಪ್ಪು

    8

    ಮಾಡುವ ವಿಧಾನ:
    * ಮೊದಲಿಗೆ 10 ಕಪ್ ನೀರನ್ನು ಕುದಿಯಲು ಇಟ್ಟು, ಅದಕ್ಕೆ ಚಿಕನ್, ಸಿಪ್ಪೆ ಸುಲಿದು ಕತ್ತರಿಸಿದ ಆಲೂಗೆಡ್ಡೆ, ಕ್ಯಾರೆಟ್, ಈರುಳ್ಳಿ, ಕೊತ್ತಂಬರಿ ಸೊಪ್ಪು, ಪಲಾವ್ ಎಲೆ, ಕರಿಮೆಣಸಿನ ಪುಡಿ ಹಾಗೂ ಉಪ್ಪು ಹಾಕಿ ಬೇಯಿಸಿ.
    * ಬಳಿಕ ರಸ ಹಾಗೂ ತರಕಾರಿಗಳನ್ನು ಪ್ರತ್ಯೆಕಿಸಿ.
    * ಆಲೂಗೆಡ್ಡೆಯನ್ನು ಚೆನ್ನಾಗಿ ಹಿಸುಕಿ ಮತ್ತೆ ರಸಕ್ಕೆ ಹಾಕಿ.
    * ಬಳಿಕ ಜೋಳದ ಹಿಟ್ಟನ್ನು ಹಾಕಿ. ಈಗ ರಸ ಸ್ವಲ್ಪ ಗಾಢವಾಗುತ್ತದೆ.
    * ಚಿಕನ್ ಅನ್ನು ಮೂಳೆಗಳಿಂದ ಬೇರ್ಪಡಿಸಿ, ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ, ರಸಕ್ಕೆ ಹಾಕಿ ಮತ್ತೆ ಚೆನ್ನಾಗಿ ಕುದಿಸಿ.
    * ಕೊನೆಯದಾಗಿ ನಿಂಬೆ ಹಣ್ಣಿನ ರಸ ಹಿಂಡಿದರೆ, ಸೂಪ್ ತಯಾರಾದಂತೆ.
    * ರುಚಿಕರ ಚಿಕನ್ ಸೂಪ್ ಅನ್ನು ಬೌಲ್‌ಗಳಿಗೆ ಹಾಕಿ, ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ‘ಚಿಕನ್ ಕಥಿ’ ಆಯ್ತು.. ಇಂದು ‘ಚಿಕನ್ ಕಾಲು ಸೂಪ್’ ಮಾಡಿ ಸವಿಯಿರಿ

    ‘ಚಿಕನ್ ಕಥಿ’ ಆಯ್ತು.. ಇಂದು ‘ಚಿಕನ್ ಕಾಲು ಸೂಪ್’ ಮಾಡಿ ಸವಿಯಿರಿ

    ವಾರವಷ್ಟೇ ‘ಚಿಕನ್ ಕಥಿ ರೋಲ್‘ ಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದೆವು. ಇಂದು ಎಲ್ಲ ನಾನ್‍ವೆಜ್ ಪ್ರಿಯರ ಇಷ್ಟವಾದ ಫುಡ್ ಚಿಕನ್ ಕಾಲಿನಿಂದ ಹೇಗೆ ಸೂಪ್ ಮಾಡಬಹುದು ಎಂದು ಹೇಳಿಕೊಡುತ್ತಿದ್ದೇವೆ. ಇದು ಕೀಲುಗಳ ನೋವುಗಳಿಗೂ ರಾಮಬಾಣದ ರೀತಿ ಕೆಲಸ ಮಾಡುತ್ತೆ. ನೀವು ನಿಮ್ಮ ಮನೆಯಲ್ಲಿ ಈ ಆರೋಗ್ಯಕರವಾದ ಮತ್ತು ರುಚಿಕಾರದವಾದ ಟೇಸ್ಟಿ ಸೂಪ್ ಮಾಡುವುದು ಹೇಗೆ ಎಂದು ಹೇಳಿಕೊಡುತ್ತಿದ್ದೇವೆ.

    ಬೇಕಾಗಿರುವ ಪದಾರ್ಥಗಳು:
    * ಚಿಕನ್ ಕಾಲುಗಳು – 8
    * ಕಟ್ ಮಾಡಿದ ಈರುಳ್ಳಿ – 2 ಕಪ್
    * ಕಟ್ ಮಾಡಿದ ಟೊಮೆಟೊ – 1 ಕಪ್
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1/2 ಟೀಸ್ಪೂನ್
    * ಗರಂ ಮಸಾಲ ಪುಡಿ – 1/2 ಟೀಸ್ಪೂನ್
    * ಏಲಕ್ಕಿ – 2
    * ಅರಿಶಿನ – 1/2 ಟೀಸ್ಪೂನ್
    * ಕರಿಮೆಣಸು – 1 ಟೀಸ್ಪೂನ್
    * ಎಣ್ಣೆ – 2 ಟೀಸ್ಪೂನ್
    * ಹಸಿರು ಮೆಣಸಿನಕಾಯಿ – 2
    * ಮೆಣಸಿನ ಪುಡಿ – 1 ಟೀಸ್ಪೂನ್
    * ಕೊತ್ತಂಬರಿ ಸೊಪ್ಪು – 1 ಕಪ್
    * ಹುರಿಗಡಲೆ – 1ವರೆ ಟೀಸ್ಪೂನ್
    * ತೆಂಗಿನ ಕಾಯಿ ತುರಿ – 2 ಟೀಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಅಗತ್ಯವಿರುವಷ್ಟು ನೀರು

    ಮಾಡುವ ವಿಧಾನ
    * ಚಿಕನ್ ಕಾಲನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಪ್ರೆಶರ್ ಕುಕ್ಕರ್‌ಗೆ ಹಾಕಿ ಅದಕ್ಕೆ ಅರಿಶಿನ ಪುಡಿ, ಏಲಕ್ಕಿ, ಉಪ್ಪು ಮತ್ತು ಕರಿಮೆಣಸನ್ನು ಸೇರಿಸಿ. 5 ಕಪ್ ನೀರು ಸುರಿಯಿರಿ. ಈ ಮಿಶ್ರಣವನ್ನು ಸುಮಾರು 10 ನಿಮಿಷಗಳ ಕಾಲ ಕುಕ್ಕರ್‍ನಲ್ಲಿ ಬೇಯಿಸಿ.
    * ಹುರಿಗಡಲೆ ಮತ್ತು ತುರಿದ ತೆಂಗಿನಕಾಯಿ ಎರಡನ್ನೂ ಒಟ್ಟಿಗೆ ಪುಡಿ ಮಾಡಿ. ಅವುಗಳ ನಯವಾದ ಪೇಸ್ಟ್ ತಯಾರಿಸಿ.
    * ಪ್ಯಾನ್‍ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಸೇರಿಸಿ. ಈರುಳ್ಳಿಯನ್ನು ಸ್ವಲ್ಪ ಬೇಯಿಸಿ.


    * ನಂತರ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಬೆರೆಸಿ. ಮಿಶ್ರಣವನ್ನು 30 ಸೆಕೆಂಡುಗಳ ಕಾಲ ಹುರಿಯಿರಿ.
    * ಟೊಮಾಟೊ, ಮೆಣಸಿನ ಪುಡಿ ಮತ್ತು ತೆಂಗಿನಕಾಯಿ-ಹುರಿಗಡಲೆ ಪೇಸ್ಟ್ ಅನ್ನು ಹಾಕಿ ಎಣ್ಣೆ ಬಿಡುವವರೆಗೂ ಫ್ರೈ ಮಾಡಿ.
    * ಈಗ, ಪ್ರೆಶರ್ ಕುಕ್ಕರ್ ತೆರೆಯಿರಿ, ಅದಕ್ಕೆ ಸಿದ್ಧವಾದ ಮಸಾಲಾ ಜೊತೆ ಗರಂ ಮಸಾಲ ಪುಡಿ ಹಾಕಿ. ಇದರ ನಂತರ, ಮತ್ತೆ ಮಿಶ್ರಣವನ್ನು ಸುಮಾರು 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ.
    * ಕುಕ್ಕರ್ ತಣ್ಣಗಾದ ನಂತರ ಕೊನೆಯದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ.

    – ಈಗ ಬಿಸಿ, ರುಚಿಯಾದ ಹಾಗೂ ಆರೋಗ್ಯಕರ ‘ಚಿಕನ್ ಕಾಲು ಸೂಪ್’ ಸವಿಯಲು ಸಿದ್ಧ.

    Live Tv
    [brid partner=56869869 player=32851 video=960834 autoplay=true]

  • ಸಬ್ಬಸ್ಸಿಗೆ ಸೊಪ್ಪಿನಿಂದ ತಯಾರಿಸಿ ಆರೋಗ್ಯಕರವಾದ ಸೂಪ್

    ಸಬ್ಬಸ್ಸಿಗೆ ಸೊಪ್ಪಿನಿಂದ ತಯಾರಿಸಿ ಆರೋಗ್ಯಕರವಾದ ಸೂಪ್

    ಳಿಗಾಲ ಬಂತೆಂದರೆ ಸಾಕು  ನಾಲಿಗೆಯ ಹಸಿವನ್ನು ತಣಿಸುವ ವಿವಿಧ ಖಾದ್ಯಗಳನ್ನು ಸವಿಯಲು ನಾಲಿಗೆ ಬಯಸುತ್ತದೆ. ಚಳಿಗಾಲಕ್ಕೆ ಎಂದೇ ಹೆಸರುವಾಸಿಯಾಗಿರುವ ಕೆಲವೊಂದು ರುಚಿಕರ ಮತ್ತು ಸ್ವಾದಿಷ್ಟವಾದ ಸೂಪ್‍ಗಳಿವೆ. ಬಿಸಿ ಬಿಸಿ, ಖಾರ ಖಾರದ ವಿಭಿನ್ನ ರುಚಿಯನ್ನು ಹೊಂದಿರುವ ಸಬ್ಬಸ್ಸಿಗೆ ಸೊಪ್ಪಿನ ಸೂಪ್ಎಂದಾದರೂ ಸೇವಿಸಿದ್ದೀರಾ..? ಈ ಸೂಪ್‌ ಮಾಡೋ ಸರಳ ವಿಧಾನ ನಿಮಗೆ ಗೊತ್ತಾ..?

    ಬೇಕಾಗುವ ಸಾಮಗ್ರಿಗಳು:
    * ಸಬ್ಬಸ್ಸಿಗೆ ಸೊಪ್ಪು -2 ಕಪ್
    * ಈರುಳ್ಳಿ -2
    * ಕ್ಯಾರೆಟ್ -1
    * ಬೆಳ್ಳುಳ್ಳಿ -1
    * ರುಚಿಗೆ ತಕ್ಕಷ್ಟು ಉಪ್ಪು
    * ಅಚ್ಚ ಖಾರದ ಪುಡಿ -1 ಚಮಚ
    * ಕಾಳುಮೆಣಸಿನ ಪುಡಿ -1 ಚಮಚ
    * ನಿಂಬೆಹಣ್ಣು- 1

    ಮಾಡುವ ವಿಧಾನ:
    * ಮೊದಲು ಕುಕ್ಕರ್‌ಗೆ ಸಬ್ಬಸ್ಸಿಗೆ ಸೊಪ್ಪು, ಈರುಳ್ಳಿ, ಕ್ಯಾರೆಟ್, ಬೆಳ್ಳುಳ್ಳಿ ಮತ್ತು ಒಂದು ಕಪ್ ನೀರು ಹಾಕಿ ಒಂದು ಸೀಟಿ ಕೂಗಿಸಿಕೊಳ್ಳಬೇಕು.
    * ನಂತರ ಸೊಪ್ಪು ಮತ್ತು ತರಕಾರಿಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು.ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ 

    * ರುಬ್ಬಿಕೊಂಡ ಮಿಶ್ರಣವನ್ನು ಒಂದು ಬಾಣಲೆಗೆ ಹಾಕಿ ಅದರ ಜೊತೆಗೆ ಶೋಧಿಸಿದ ನೀರನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಖಾರದ ಪುಡಿಯನ್ನು ಹಾಕಿ ಕುದಿಸಬೇಕು. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ
    * ಕುದಿಸಿದ ನಂತರ ಕಾಳುಮೆಣಸಿನ ಪುಡಿ ಮತ್ತು ನಿಂಬೆ ರಸವನ್ನು ಹಾಕಿ ಕೈಯಾಡಿಸಿದರೆ ಬಿಸಿಬಿಸಿಯಾದ ಸಬ್ಬಸ್ಸಿಗೆ ಸೊಪ್ಪಿನ ಸೂಪ್ ಸವಿಯಲು ಸಿದ್ಧವಾಗುತ್ತದೆ.

  • ಆರೋಗ್ಯಕರವಾದ ನುಗ್ಗೆಕಾಯಿ ಸೂಪ್ ಮಾಡುವ ವಿಧಾನ ನಿಮಗಾಗಿ

    ಆರೋಗ್ಯಕರವಾದ ನುಗ್ಗೆಕಾಯಿ ಸೂಪ್ ಮಾಡುವ ವಿಧಾನ ನಿಮಗಾಗಿ

    ಳಿಗಾಲ ಬಂತೆಂದರೆ ಸಾಕು  ನಾಲಿಗೆ ಹಸಿವನ್ನು ತಣಿಸುವ ವಿವಿಧ ಖಾದ್ಯಗಳನ್ನು ಸವಿಯಲು ನಾಲಿಗೆ ಬಯಸುತ್ತದೆ. ಚಳಿಗಾಲಕ್ಕೆ ಎಂದೇ ಹೆಸರುವಾಸಿಯಾಗಿರುವ ಕೆಲವೊಂದು ರುಚಿಕರ ಮತ್ತು ಸ್ವಾದಿಷ್ಟವಾದ ಕೆಲವು ಸೂಪ್‍ಗಳಿವೆ. ಬಿಸಿ ಬಿಸಿ, ಖಾರ ಖಾರದ ವಿಭಿನ್ನ ರುಚಿಯನ್ನು ಹೊಂದಿರುವ ನುಗ್ಗೆಕಾಯಿ ಸೂಪ್ ಎಂದಾದರೂ ಸೇವಿಸಿದ್ದೀರಾ..? ಈ ಸೂಪ್‌ ಮಾಡೋ ಸರಳ ವಿಧಾನ ನಿಮಗೆ ಗೊತ್ತಾ..?

    ಬೇಕಾಗುವ ಸಾಮಗ್ರಿಗಳು:
    * ನುಗ್ಗೆಕಾಯಿ -3
    * ಈರುಳ್ಳಿ -1
    * ಟೊಮೆಟೋ -1
    * ಶುಂಠಿ -ಸ್ವಲ್ಪ
    * ಬೆಳ್ಳುಳ್ಳಿ – 2
    * ರುಚಿಗೆ ತಕ್ಕಷ್ಟು ಉಪ್ಪು
    * ಅರಿಶಿನ ಪುಡಿ-1 ಚಮಚ
    * ಜೀರಿಗೆ ಪುಡಿ -1 ಚಮಚ
    * ಕಾಳುಮೆಣಸು -1 ಚಮಚ
    * ಕೊತ್ತಂಬರಿ ಸೊಪ್ಪು – ಸ್ವಲ್ಪ


    ಮಾಡುವ ವಿಧಾನ:
    * ಮೊದಲು ಕುಕ್ಕರ್‌ಗೆ ಹೆಚ್ಚಿದ ನುಗ್ಗೆಕಾಯಿ, ಈರುಳ್ಳಿ ಟೊಮೆಟೋ, ಶುಂಠಿ, ಬೆಳ್ಳುಳ್ಳಿ , ಉಪ್ಪು, ಅರಿಶಿನ ಪುಡಿ ಜೀರಿಗೆ ಪುಡಿ ಮತ್ತು 2 ಕಪ್ ನೀರನ್ನು ಹಾಕಿ 3 ಸೀಟಿ ಕೂಗಿಸಿಕೊಳ್ಳಬೇಕು.


    * ನಂತರ ಕುಕ್ಕರ್ ತಣ್ಣಗಾದ ಆದನಂತರ ಬೇಯಿಸಿದ ತರಕಾರಿಗಳನ್ನು ನೀರಿನಿಂದ ಬೇರ್ಪಡಿಸಿ ನುಗ್ಗೆಕಾ ಯಿ ತಿರುಳನ್ನು ಸಿಪ್ಪೆಯಿಂದ ಬೇರೆ ಪಡಿಸಿ ಉಳಿದ ತರಕಾರಿಯ ಜೊತೆಗೆ ರುಬ್ಬಿಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ 

    * ರುಬ್ಬಿದ ಮಿಶ್ರಣವನ್ನು ಬೇಯಿಸಿದ ನೀರಿನ ಜೊತೆ ಒಂದು ಬಾಣಲಿಗೆ ಹಾಕಿ ಅದಕ್ಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ 8 ನಿಮಿಷ ಕುದಿಸಬೇಕು. ಕೊನೆಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಸೂಪ್ ಸಿದ್ಧವಾಗುತ್ತದೆ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ

  • ಸ್ಪೆಷಲ್ ಟೇಸ್ಟ್​ಗಾಗಿ 45 ವರ್ಷದಿಂದ ಬೇಯುತ್ತಿರುವ ಸೂಪ್

    ಸ್ಪೆಷಲ್ ಟೇಸ್ಟ್​ಗಾಗಿ 45 ವರ್ಷದಿಂದ ಬೇಯುತ್ತಿರುವ ಸೂಪ್

    ಬ್ಯಾಂಕಾಕ್: ವರ್ಷಾನುಗಟ್ಟಲೆ ಮದ್ಯವನ್ನು ಸಂಗ್ರಹಿಸಿಟ್ಟರೆ ಅದರ ರುಚಿ ಚೆನ್ನಾಗಿರುತ್ತೆ ಎನ್ನುವ ಸಂಗತಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಆದರೆ ಬ್ಯಾಂಕಾಕಿನ ವಟ್ಟಾನ ಪ್ರದೇಶದಲ್ಲಿರುವ ರೆಸ್ಟೋರೆಂಟ್‍ನಲ್ಲಿ ಸ್ಪೆಷಲ್ ಟೇಸ್ಟ್​ಗಾಗಿ 45 ವರ್ಷಗಳಿಂದ ಸೂಪನ್ನು ಬೇಯಿಸುತ್ತಲೇ ಇದ್ದಾರೆ.

    ಹೌದು. ಈ ವಿಷಯ ಕೇಳಿದರೆ ವಿಚಿತ್ರ ಅನಿಸಬಹುದು. ಆದರೂ ಕೂಡ ಈ ರೀತಿ ಸೂಪ್ ತಯಾರಾಗುತ್ತಿರುವುದು ಸತ್ಯ. ವಟ್ಟಾನದ ಪನೀಚ್ ರೆಸ್ಟೋರೆಂಟ್‍ನಲ್ಲಿ ಈ ರೀತಿ ವಿಶೇಷ ಸೂಪ್ ತಯಾರಿಸಲಾಗುತ್ತೆ. ವರ್ಷಾನುಗಟ್ಟೆಲೆಯಿಂದ ಸೂಪ್ ಬೇಯುತ್ತಿರುವ ಕಾರಣಕ್ಕೆ ಇದರ ರುಚಿ ಬೇರೆ ಸೂಪ್‍ಗಳಿಗಿಂತ ವಿಭಿನ್ನವಾಗಿದೆ. ಆದರಿಂದ ಪನೀಚ್ ರೆಸ್ಟೋರೆಂಟ್ ಸೂಪ್ ಸಖತ್ ಫೇಮಸ್ ಆಗಿದೆ.

    ಪ್ರತಿದಿನ ರೆಸ್ಟೋರೆಂಟ್‍ನಲ್ಲಿ ರಾತ್ರಿ ಉಳಿಯುವ ಸೂಪನ್ನು ಪುನಃ ಬೆಳಿಗ್ಗೆ ಮಾಂಸ ಹಾಗೂ ಇತರೆ ವಸ್ತುಗಳನ್ನು ಹಾಕಿ ಬೇಯಿಸುತ್ತಾರೆ. ಈ ರೀತಿ ಮಾಡುವುದರಿಂದ ಸೂಪಿಗೆ ಟೆಸ್ಟ್ ಬರುತ್ತದೆ ಎಂದು ರೆಸ್ಟೋರೆಂಟ್ ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲದೆ ಈ ವಿಶಿಷ್ಟ ಸೂಪಿಗೆ ನಿವ್ವಾ ಟ್ಯೂನ್ ಎಂದು ಕರೆಯಲಾಗುತ್ತದೆ. ಈ ಸೂಪ್ ಅಲ್ಲಿನ ಜನಕ್ಕೆ ಹಾಗೂ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ಸೂಪ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಈ ಸೂಪ್ ಸಿಕ್ಕಾಪಟ್ಟೆ ಫೇಮಸ್. ನಿವ್ವಾ ಟ್ಯೂನ್ ಸೂಪ್ ಸೇವಿಸಿದವರು ಇದರ ರುಚಿಗೆ ಫಿದಾ ಆಗಿಬಿಟ್ಟಿದ್ದಾರೆ.

    ಸಂಗ್ರಹಿಸಿಟ್ಟ ವೈನಿನ ರುಚಿ ಹೇಗೆ ವರ್ಷ ಕಳೆದಂತೆ ಹೆಚ್ಚಾಗುತ್ತದೊ, ಅದೇ ರೀತಿ ಈ ಸೂಪಿನ ರುಚಿ ಕೂಡ ಹೆಚ್ಚಾಗುತ್ತಿದೆ ಎಂದು ಜನರು ಬಾಯಿ ಚಪ್ಪರಿಸಿಕೊಂಡು ಸೂಪ್ ಸವಿದು ಆನಂದಿಸುತ್ತಾರೆ.