Tag: Soundarya Jagdish

  • ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಸ್ಪೋಟಕ ಟ್ವಿಸ್ಟ್

    ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಸ್ಪೋಟಕ ಟ್ವಿಸ್ಟ್

    ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagdish) ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಈ ಕುರಿತಂತೆ ಮನೆಯಲ್ಲಿ ಡೆತ್ ನೋಟ್ ದೊರೆತದ್ದು. ಈ ಡೆತ್ ನೋಟ್ ಆಧರಿಸಿ ಸೌಂದರ್ಯ ಜದೀಶ್ ಅವರ ಬ್ಯುಸಿನೆಸ್ ಪಾರ್ಟನರ್ಸ್ ಮೇಲೆ ಎಫ್ ಐ ಆರ್ ದಾಖಲಾಗಿದೆ. ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಎಂಬುವರ ಮೇಲೆ ಎಫ್‍್.ಐ.ಆ ರ್ ದಾಖಲಿಸಿದ್ದಾರೆ ಪೊಲೀಸರು.

    ಸೌಂದರ್ಯ ಜಗದೀಶ್ ಮನೆಯಲ್ಲಿ ಕೆಲವೇ ಸಾಲುಗಳು ಬರೆದಿದ್ದ ಡೆತ್ ನೋಟ್ ಪತ್ತೆಯಾಗಿದ್ದು, ಇದರಲ್ಲಿ  ಸೌಂದರ್ಯ ಕನ್ಸ್ಟ್ರಕ್ಷನ್ ಸಂಬಂಧ ಬ್ಯುಸಿನೆಸ್ ಲಾಸ್ ಬಗ್ಗೆ ಮಾಹಿತಿ ಇದೆ. ಸುಮಾರು 60 ಕೋಟಿ ನಷ್ಟವಾಗಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಈ ಡೆತ್ ನೋಟ್ ಅಧರಿಸಿ ಜಗದೀಶ್ ಪತ್ನಿ ಶಶಿರೇಖಾ ರಿಂದ ಮಹಾಲಕ್ಷ್ಮಿ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು.

    ಈ ಕುರಿತಂತೆ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ‘ರಿಸೆಂಟ್ ಆಗಿ ಡೆತ್ ನೋಟ್ ಸಿಕ್ತು.  ನಮ್ಮ ತಂದೆಗೆ ಬ್ಲಾಕ್ ಮೇಲ್ ಮಾಡಿ ಸುರೇಶ್ ಹಾಗೂ ಹೊಂಬಣ್ಣ ಖಾಲಿ ಚೆಕ್ ಗೆ ಸಹಿ ಹಾಕಿಸ್ಕೊಂಡಿದ್ರು. ದುಡ್ಡು ಹೋದ್ರೆ ಹೋಗ್ಲಿ ನಮ್ ತಂದೆನ ಯಾರ್ ತಂದು ಕೊಡ್ತಾರಾ? ನಮ್ ತಂದೆ ಅಂತವ್ರನ್ನೇ ಬೆಂಡ್ ಮಾಡಿದ್ದಾರೆ. ಇನ್ನ ನಮ್ಮನ್ನ ಸುಮ್ನೆ ಬಿಡ್ತಾರಾ ಅಂತಾ ನಮಗೆ ಭಯ ಇದೆ’ ಅಂತಾರೆ. ನಮ್ ತಂದೆ ಸಾವಿಗೆ ನ್ಯಾಯ ಸಿಗೋವರೆಗೂ ಬಿಡೊಲ್ಲ ಅನ್ನುವುದು ಸ್ನೇಹಿತ್ ಮಾತು.

    ಜಗದೀಶ್ ಪತ್ನಿ ಶಶಿರೇಖಾ ಕೂಡ ಈ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ‘ಒಂದು ವಾರದ ಹಿಂದೆ ನಮ್ ತಾಯಿ ತೀರಿಕೊಂಡಿದ್ರು. ಆದ್ಮೇಲೆ ಪತಿ ಹೀಗೆ ಮಾಡ್ಕೊಂಡ್ರು. ಸಡನ್ ಶಾಕ್ ತಡ್ಕೊಳ್ಳೋಕೆ ಆಗ್ಲಿಲ್ಲ. ಇದೇ 29ನೇ ತಾರೀಖು ಶ್ರೀರಂಗ ಪಟ್ಟಣದಲ್ಲಿ  ಅವ್ರ ಪೂಜೆ ಇದೆ. ಅವ್ರ ಹಳೆ ಬಟ್ಟೆ ತಗೊಳ್ಳೋಣ ಅಂತ ವಾರ್ಡ್ ರೋಬ್ ತೆಗೆದೆ. ಆ ಟೈಂನಲ್ಲಿ ಡೆತ್ ನೋಟ್ ಸಿಕ್ತು. ನಮ್ ಯಜಮಾನ್ರ ಸಾವಿಗೆ ಸುರೇಶ್ ಹೊಂಬಣ್ಣನೇ ಕಾರಣ. ಕೊನೆ ಕಾಲ್ ಕೊನೆ ಮೆಸೇಜ್ ಸುರೇಶ್ ದೆ ಬಂದಿದ್ದು. ತುಂಬಾ ಟಾರ್ಚರ್ ಕೊಡ್ತಿದ್ದಾರೆ ಅಂತ ಒಂದೊಂದು ಸಾರಿ ಹೇಳ್ತಿದ್ರು. ನಮ್ ಫ್ಯಾಮಿಲಿ ತುಂಬಾ ಚನ್ನಾಗಿತ್ತು. ಕಂಪ್ಲೇಂಟ್ ಕೊಟ್ಟಿದ್ದೀನಿ. ಕಾನೂನು ರೀತಿ ಹೋರಾಟ ಮಾಡ್ತೀನಿ’ ಅಂದಿದ್ದಾರೆ.

  • ಸೌಂದರ್ಯ ಜಗದೀಶ್ ಕುಟುಂಬದಿಂದ 3ನೇ ದಿನದ ಕಾರ್ಯ

    ಸೌಂದರ್ಯ ಜಗದೀಶ್ ಕುಟುಂಬದಿಂದ 3ನೇ ದಿನದ ಕಾರ್ಯ

    ರಡು ದಿನಗಳ ಹಿಂದೆಯಷ್ಟೇ ಆತ್ಮಹತ್ಯೆಗೆ (suicide) ಶರಣಾಗಿದ್ದ ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagdish) ಅವರ ಸಮಾಧಿಗೆ 3ನೇ ದಿನವಾದ ಇಂದು ಹಾಲು ತುಪ್ಪು  (Haalu Tuppa) ಕಾರ್ಯವನ್ನು ಅವರ ಕುಟುಂಬಸ್ಥರು ಇಂದು ನೆರವೇರಿಸಲಿದ್ದಾರೆ. ಹಾಲು ತುಪ್ಪ ಕಾರ್ಯಕ್ಕಾಗಿ ಸಮಾಧಿ ಸ್ಥಳಕ್ಕೆ ಕುಟುಂಬಸ್ಥರು ತೆರಳಿದ್ದಾರೆ.

    ಜಗದೀಶ್ ಪತ್ನಿ ಶಶಿರೇಖ ಹಾಗೂ ಪುತ್ರ ಸ್ನೇಹಿತ್ ಹಾಗೂ ಕುಟುಂಬದ ಸದಸ್ಯರು ಹಿರಿಸಾವೆಗೆ ತೆರಳಿದ್ದು, 3ನೇ ದಿನದ ಕಾರ್ಯವನ್ನು ಪೂರೈಸಲಿದ್ದಾರೆ. ರವಿವಾರ ಬೆಳ್ಳಂಬೆಳಗ್ಗೆ ಆತ್ಮಹತ್ಯೆಗೆ ಶರಣಾಗುವ ಮೂಲಕ ಇಡೀ ಕುಟುಂಬಕ್ಕೆ ಶಾಕ್ ನೀಡಿದ್ದರು ಸೌಂದರ್ಯ ಜಗದೀಶ್. ಅವರ ಅಗಲಿಕೆ ಕುಟುಂಬಕ್ಕೆ ಮಾತ್ರವಲ್ಲ, ಅಭಿಮಾನಿಗಳಲ್ಲ ಅಪಾರ ದುಃಖ ತಂದಿತ್ತು.

     

    ಸಿನಿಮಾ ಮತ್ತು ನಾನಾ ಉದ್ಯಮಗಳಲ್ಲಿ ತೊಡಗಿಕೊಂಡಿದ್ದ ಸೌಂದರ್ಯ ಜಗದೀಶ್, ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಕುಟುಂಬ ಪೊಲೀಸರ ಮುಂದೆ ಹೇಳಿರುವ ಹೇಳಿಕೆಯಲ್ಲಿ ಜಗದೀಶ್ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರಂತೆ.

  • ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ಬೆನ್ನಿಗೆ ನಿಂತ ಉಪೇಂದ್ರ : ಸ್ನೇಹಿತ್ ಒಳ್ಳೆಯ ಹುಡುಗ

    ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ಬೆನ್ನಿಗೆ ನಿಂತ ಉಪೇಂದ್ರ : ಸ್ನೇಹಿತ್ ಒಳ್ಳೆಯ ಹುಡುಗ

    ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಸಲ್ಲದ ಕಾರಣಕ್ಕಾಗಿ ಸುದ್ದಿ ಆಗುತ್ತಿದ್ದಾರೆ. ಅಪ್ಪು ಪಪ್ಪು ಸಿನಿಮಾದ ಮೂಲಕ ಬಾಲ ನಟನಾಗಿ ಸಿನಿಮಾ ರಂಗ ಪ್ರವೇಶಿಸಿದ ಸ್ನೇಹಿತ್, ಆನಂತರ ವಿದ್ಯಾಭ್ಯಾಸದ ಕಾರಣಕ್ಕಾಗಿ ಸಿನಿಮಾ ರಂಗದಿಂದ ದೂರವಿದ್ದಾರೆ. ಸದ್ಯ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಮತ್ತೆ ಸಿನಿಮಾ ರಂಗಕ್ಕೆ ಬರುವುದಕ್ಕಾಗಿ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಈ ಹೊತ್ತಿನಲ್ಲಿ ಅವರ ಮೇಲೆ ಆರೋಪಗಳು ಬರುತ್ತಿವೆ.

    ತಮ್ಮ ಮನೆಯ ಎದುರಿನ ಮಹಿಳೆ ಮತ್ತು ಆಕೆಯ ಪತಿಯ ಜೊತೆ ಗಲಾಟೆ ಮಾಡಿದರು, ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎನ್ನುವ ಕಾರಣಕ್ಕಾಗಿ ದೂರು ದಾಖಲಾಗಿದೆ. ವರ್ಷದ ಹಿಂದೆಯೇ ಇಂಥದ್ದೇ ಮತ್ತೊಂದು ಕಾರಣಕ್ಕಾಗಿಯೂ ದೂರು ದಾಖಲಾಗಿತ್ತು. ನಂತರ ದೂರುದಾರರೇ ಸ್ನೇಹಿತ್ ಪಾತ್ರವಿಲ್ಲ ಎಂದು ಹೇಳಿದ್ದರು. ಈ ಬಾರಿಯೂ ಸ್ನೇಹಿತ್ ಮೇಲೆ ಎಫ್.ಐ.ಆರ್ ದಾಖಲಾಗಿದ್ದು, ಮತ್ತೆ ಸ್ನೇಹಿತ್ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:ಐಶ್ವರ್ಯ ಪಿಸ್ಸೆ ನಂತರ ದೀಪಿಕಾ ದಾಸ್ ಅಂದ್ರೆ ನನಗಿಷ್ಟ ಎಂದ ಸೈಕ್ ನವಾಜ್

    ನಿನ್ನೆಯಷ್ಟೇ ಸೌಂದರ್ಯ ಜಗದೀಶ್ ಮತ್ತು ಪತ್ನಿ ರೇಖಾ ಅವರು ಮಾಧ್ಯಮ ಗೋಷ್ಠಿ ಕರೆದು, ಮಗನ ಬಗ್ಗೆ ಮಾತನಾಡಿದ್ದರು. ಅವನು ಆ ರೀತಿಯ ಹುಡುಗನಲ್ಲ, ಅಂತಹ ಮಕ್ಕಳನ್ನು ಪಡೆಯುವುದಕ್ಕಾಗಿ ನಾವು ಪುಣ್ಯ ಮಾಡಿದ್ದೆವು ಎಂದು ಹೇಳಿದ್ದರು. ಮಗನ ಮೇಲೆ ಯಾಕೆ ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದೂ ಹೇಳಿದ್ದರು. ಇದೀಗ ಸ್ನೇಹಿತ್ ಪರ ರಿಯಲ್ ಸ್ಟಾರ್ ಉಪೇಂದ್ರ ಕೂಡ ಬ್ಯಾಟ್ ಮಾಡಿದ್ದಾರೆ. ಸ್ನೇಹಿತ್ ನ ಒಳ್ಳೆತನವನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ‘ಸೌಂದರ್ಯ ಜಗದೀಶ್ ಹಾಗೂ ನನ್ನ ಪರಿಚಯ, ಸ್ನೇಹ ಸುಮಾರು 25 ವರ್ಷಗಳಷ್ಟು ಹಳೆಯದು. ಅಂದಿನಿಂದ ಇಂದಿನವರೆಗೂ ನಾನು ಕಂಡಂತೆ ಜಗದೀಶ್ ತುಂಬಾ ಮೃಧು ಸ್ವಭಾವದವರು, ಸ್ನೇಹ ಜೀವಿ ಅವರ ಶ್ರೀಮತಿ ರೇಖಾ ಮತ್ತು ಮಗ ಸ್ನೇಹಿತ್ ಹಾಗೂ ಮಗಳು ಸೌಂದರ್ಯ ಕೂಡಾ ನಮ್ಮ ಕುಟುಂಬಕ್ಕೆ ಪರಿಚಯ. ಇತ್ತೀಚೆಗೆ ಸ್ನೇಹಿತ್ ಬಗ್ಗೆ ಕೇಳಿಬರುತ್ತಿರುವ ಆರೋಪಗಳನ್ನು ಕೇಳಿ ದಿಗ್ಭ್ರಮೆ ಆಯಿತು. ನಾನು ಕಂಡಂತೆ ಈತ ತುಂಬಾ ವಿನಯವಂತ, ಬೆಳೆಯುತ್ತಿರುವ ಹುಡುಗ, ಏಕೆ ಈ ರೀತಿ ಆರೋಪ ಮಾಡಿದ್ದಾರೆ ಎಂದು ನನಗೆ ತಿಳಿಯದು. ಏನಾದರೂ ಭಿನ್ನಾಭಿಪ್ರಾಯಗಳಿದ್ದರೆ ಸಮಾಧಾನದಿಂದ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಒಂದಂತೂ ಎಲ್ಲರಿಗೂ ಅನ್ವಯಿಸುವ ಸತ್ಯ. ಅಜ್ಞಾನದ ಫಲ ಅಹಂಕಾರ, ಅಹಂಕಾರದ ಫಲ ದ್ವೇಷ, ದ್ವೇಷದ ಫಲ ಸರ್ವನಾಶ ಎಂದು ಉಪೇಂದ್ರ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Interview- ಸ್ನೇಹಿತ್ ನಂತಹ ಮಗನ ಪಡೆಯೋಕೆ ಪುಣ್ಯ ಮಾಡಿದ್ದೀವಿ, ಅವನು ಚಿನ್ನ : ಸೌಂದರ್ಯ ಜಗದೀಶ್

    Interview- ಸ್ನೇಹಿತ್ ನಂತಹ ಮಗನ ಪಡೆಯೋಕೆ ಪುಣ್ಯ ಮಾಡಿದ್ದೀವಿ, ಅವನು ಚಿನ್ನ : ಸೌಂದರ್ಯ ಜಗದೀಶ್

    ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagdish)  ಅವರ ಮಗ, ನಟ ಸ್ನೇಹಿತ್ ಮೇಲೆ ಎರಡನೇ ಬಾರಿ ಎಫ್.ಐ.ಆರ್ (FIR) ದಾಖಲಾಗಿದೆ. ಅವರ ಮನೆ ಹತ್ತಿರದ ವ್ಯಕ್ತಿಗಳಿಂದಲೇ ಈ ರೀತಿ ಪದೇ ಪದೇ ದೂರು ದಾಖಲಾಗುತ್ತಿದೆ. ಸ್ನೇಹಿತ್  (Snehith) ಈ ಬಾರಿಯೂ ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ದದಿಂದ ಬೈದರು ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ಮತ್ತೆ ದೂರು ದಾಖಲಾಗಿದೆ. ಈ ಕುರಿತು ಸೌಂದರ್ಯ ಜಗದೀಶ್ ಅವರು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

    ಪದೇ ಪದೇ ನಿಮ್ಮ ಮಗನೇ ಟಾರ್ಗೆಟ್ ಆಗ್ತಿರೋದು ಯಾಕೆ?

    ಅದು ನಮಗೂ ಕೂಡ ಗೊತ್ತಾಗುತ್ತಿಲ್ಲ. ಅವನು ಓದುತ್ತಿರುವ ಹುಡುಗ. ಮುಂದಿನ ಭವಿಷ್ಯವನ್ನು ಕಟ್ಟಿಕೊಳ್ಳುತ್ತಿದ್ದಾನೆ. ಅಂಥ ಹುಡುಗನ ಮೇಲೆ ಈ ರೀತಿ ಪದೇ ಪದೇ ದೂರು ನೀಡಿದರೆ, ಅವನ ಬಗ್ಗೆ ಸಮಾಜ ಏನನ್ನುಕೊಳ್ಳೋದು ಬೇಡ.  ಟಾರ್ಗೆಟ್ ಮಾಡುತ್ತಿರುವವರ ಉದ್ದೇಶ ಏನು ಅಂತಾನೇ ಅರ್ಥ ಆಗ್ತಿಲ್ಲ. ನನ್ನ ಮಗ ಒಳ್ಳೆಯವನು. ಅವನು ಯಾರ ತಂಟೆಗೂ ಹೋಗುವುದಿಲ್ಲ.

    ಸ್ನೇಹಿತ್ ಜೊತೆ ಬೌನ್ಸರ್ ಇರೋದು ಯಾಕೆ? ಅವರಿಗೆ ಜೀವ ಭಯ ಏನಾದರೂ ಇದೆಯಾ?

    ಅವನ ಜೊತೆ ಯಾವ ಬೌನ್ಸರೂ ಇರೋದಿಲ್ಲ. ರಕ್ಷಿತ್ ಅಂತ ಕಾರು ಡ್ರೈವರ್ ಇರ್ತಾನೆ. ರಕ್ಷಿತ್ ಇಲ್ಲದೇ ಇರೋ ವೇಳೆಯಲ್ಲಿ ಅವನೊಬ್ಬನೇ ಕಾಲೇಜಿಗೆ ಕಾರು ತಗೆದುಕೊಂಡು ಹೋಗುತ್ತಾನೆ. ಫ್ಯಾಮಿಲಿ ಎಲ್ಲಿಗಾದರೂ ಟ್ರೀಪ್ ಗೆ ಹೋದರೆ, ಮನೆಯಲ್ಲಿ ಕೆಲಸ ಮಾಡುವವರನ್ನೂ ಕರೆದುಕೊಂಡು ಹೋಗುತ್ತೇವೆ. ಈಗ ಅವನ ಜೊತೆ ಯಾರೂ ಇರುವುದಿಲ್ಲ. ಇದನ್ನೂ ಓದಿ:ಐಶ್ವರ್ಯ ಪಿಸ್ಸೆಗೆ ಐ ಲವ್‌ ಯೂ ಎಂದ ಸೈಕ್‌ ನವಾಜ್

     

    ಮಗನ ಮೇಲೆ ಎಫ್.ಐ.ಆರ್ ದಾಖಲೆ ಆದರೆ, ಅವರ ಭವಿಷ್ಯ ಹಾಳಾಗಲ್ವೆ?

    ನಮಗೂ ಅದೇ ಯೋಚನೆ. ಓದುವ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ದೂರು ದಾಖಲಿಸುವವರೂ ಯೋಚನೆ ಮಾಡಬೇಕು. ನಾವು ಯಾವತ್ತೂ ಒಬ್ಬರ ತಂಟೆಗೆ ಹೋದವರಲ್ಲ, ನಮ್ಮ ಮಗನನ್ನೂ ಹಾಗೆಯೇ ಬೆಳೆಸಿದ್ದೇವೆ. ಅವನಾಯಿತು, ಅವನ ಓದು, ಜಿಮ್ ಆಯಿತು ಅಷ್ಟೇ ಇರುವಂತಹ ಹುಡುಗ. ಅಂಥವನ ಮೇಲೆ ನಿರಂತರ ತೊಂದರೆ ಮಾಡಲಾಗುತ್ತಿದೆ. ಹೀಗೆ ಮಾಡಿದರೆ ಕಂಡಿತಾ ಭವಿಷ್ಯ ಹಾಳಾಗತ್ತೆ.

    ಒಂದು ವರ್ಷದ ಹಿಂದಿನ ಪ್ರಕರಣ ಏನಾಗಿದೆ?

    ಕೇಸ್ ನಡೆತಾ ಇದೆ. ಆದರೆ, ಈ  ಪ್ರಕರಣದಿಂದ ಸ್ನೇಹಿತ್ ಮತ್ತು ನನ್ನ ಪತ್ನಿಯನ್ನು ಕೈ ಬಿಡಲಾಗಿದೆ. ದೂರು ಕೊಟ್ಟವರೇ ಈ ಘಟನೆ ನಡೆದಾಗ ಸ್ನೇಹಿತ್ ಮತ್ತು ನನ್ನ ಪತ್ನಿ ಇರಲಿಲ್ಲವೆಂದು ಹೇಳಿದ್ದಾರೆ. ಹಾಗಾಗಿ ಬಿ ರಿಪೋರ್ಟ್‌ ಆಗಿದೆ.

     

    ಮಹಿಳೆ ನಿಂದನೆ ಮಾಡುವಂತಹ ಘಟನೆ ನಡೆದದ್ದು ಹೇಗೆ? ನಿಮ್ಮ ಗಮನಕ್ಕೆ ಬಂದಿದ್ದು ಯಾವಾಗ?

    ಸೆಪ್ಟೆಂಬರ್ 26 ರಂದು ನಮ್ಮ ಗಮನಕ್ಕೆ ಬಂತು. ವಿಷಯ ಕೇಳಿದ ತಕ್ಷಣವೇ ಶಾಕ್ ಆದೆ. ದೂರಿನಲ್ಲಿ ಬರೆದ ಅಂಶಗಳನ್ನು ನೋಡಿ ಅಸಹ್ಯ ಅನಿಸಿತು. ಇಷ್ಟೊಂದು ಕೆಳಮಟ್ಟಕ್ಕೆ ಅವರು ಇಳಿಯಬಾರದಿತ್ತು. ನನ್ನ ಮಗ ಯಾವತ್ತೂ ಅಂತ ಭಾಷೆಯನ್ನು ಬಳಸಲ್ಲ. ಮತ್ತು ಆ ಘಟನೆ ನಡೆದಾಗ ಅವನು ಆ ಸ್ಥಳದಲ್ಲೂ ಇರಲಿಲ್ಲ. ನನ್ನ ಮಗ ಎಲ್ಲಿದ್ದ ಅಂತ ಹೇಳೋದಕ್ಕೆ ನಮ್ಮ ಹತ್ತಿರ ವಿಡಿಯೋ ಸಾಕ್ಷಿಗಳಿವೆ.

     

    ಸ್ನೇಹಿತ್ ಈಗ ಏನ್ ಮಾಡ್ತಿದ್ದಾರೆ?

    ಮೊದಲ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದಾನೆ. ಅವನ ಪಾಡಿಗೆ ಅವನು ಓದಿಕೊಂಡು ಇದ್ದವನಿಗೆ ಈ ರೀತಿ ತೊಂದರೆ ಮಾಡುತ್ತಿದ್ದಾರೆ.

    ಮತ್ತೆ ಸಿನಿಮಾ ರಂಗಕ್ಕೆ ಬರುವ ತಯಾರಿ ಮಾಡ್ಕೋತಿದ್ದಾರಾ?

    ಓದು ಮುಗಿಯಲಿ ಅಂತ ಕಾಯುತ್ತಿದ್ದೇವೆ. ಇನ್ನೂ ಎರಡು ವರ್ಷ ಬಿಟ್ಟು ಸಿನಿಮಾ ರಂಗಕ್ಕೆ ನಾಯಕನಟನಾಗಿ  ಲಾಂಚ್ ಮಾಡುವ ಉದ್ದೇಶವಿದೆ. ಓದಿನ ಜೊತೆ ಜೊತೆಗೆ ಅವನು ನಟನಾಗಲು ಏನೆಲ್ಲ ತಯಾರಿ ಬೇಕೋ ಅದನ್ನು ಮಾಡಿಕೊಳ್ಳುತ್ತಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ‘ಸೀರೆ ಬಿಚ್ಚಿ ಹೊಡಿತೀನಿ’ ಎಂದು ಮಹಿಳೆಗೆ ಅವಾಜ್: ಸೌಂದರ್ಯ ಜಗದೀಶ್ ಪುತ್ರ, ನಟ ಸ್ನೇಹಿತ್ ಮೇಲೆ ಕೇಸ್

    ‘ಸೀರೆ ಬಿಚ್ಚಿ ಹೊಡಿತೀನಿ’ ಎಂದು ಮಹಿಳೆಗೆ ಅವಾಜ್: ಸೌಂದರ್ಯ ಜಗದೀಶ್ ಪುತ್ರ, ನಟ ಸ್ನೇಹಿತ್ ಮೇಲೆ ಕೇಸ್

    ಸ್ಯಾಂಡಲ್ ವುಡ್ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagdish) ಅವರ ಪುತ್ರ, ಅಪ್ಪು ಪಪ್ಪು ಸಿನಿಮಾ ಖ್ಯಾತಿಯ ನಟ ಸ್ನೇಹಿತ್ (Snehith) ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ.  ಈ ಹಿಂದೆ ಎದುರು ಮನೆ ನಿವಾಸಿ ಮಹಿಳೆಗೆ ಅವಾಚ್ಯ ಪದಗಳಿಂದ ನಿಂದಿಸಿದ್ದರು ಎನ್ನುವ ಕಾರಣಕ್ಕಾಗಿ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಹೊತ್ತು ಸ್ಟೇಶನ್ ಮೆಟ್ಟಿಲು ಹತ್ತಿದ್ದರು. ಇದೀಗ ಮತ್ತೆ ಮಹಿಳೆಯೊಬ್ಬರಿಗೆ ನಿಂದಿಸಿದ ಕಾರಣಕ್ಕಾಗಿ ಎಫ್.ಐ.ಆರ್ ದಾಖಲಾಗಿದೆ.

    ಸೆಪ್ಟಂಬರ್ 24 ರಂದು ಸ್ನೇಹಿತ್ ನ ಎದುರು ಮನೆಯ ಮಹಿಳೆ ಅನ್ನಪೂರ್ಣ (Annapurna)  ತನ್ನ ಪತಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ವೇಗವಾಗಿ ತನ್ನ ಜಾಗ್ವಾರ್ (Jaguar) ಕಾರಿನಲ್ಲಿ  ಬಂದ ಸ್ನೇಹಿತ್, ಮಹಿಳೆಯ ಕಾರಿಗೆ ಡಿಕ್ಕಿ ಹೊಡೆಯುವಂತೆ ಬಂದು ಚಮಕ್ ಕೊಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ಅನ್ನಪೂರ್ಣ ಮತ್ತು ಅವರ ಪತಿ ಈ ವಿಚಾರಕ್ಕೆ ಪ್ರಶ್ನಿಸಿದ್ದಾರೆ. ತನ್ನನ್ನು ಪ್ರಶ್ನಿಸಿದರು ಎನ್ನುವ ಕಾರಣಕ್ಕಾಗಿ ಕೋಪಗೊಂಡ ಸ್ನೇಹಿತ್ ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:`ಜೂನಿಯರ್’ ಆಗಿ ಸಿನಿರಸಿಕರನ್ನು ಗೆಲ್ಲಲು ಬಂದ್ರು ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ

    ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದು, ಅನ್ನಪೂರ್ಣ ಗೆ ಸೀರೆ ಬಿಚ್ಚಿ ಹೊಡಿತಿನಿ, ಇಲ್ಲಿಂದ ಹೋಗ್ತಾ ಇರು ಅಂತಾ ಸ್ನೇಹಿತ್ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಮಹಿಳೆಯರ ಪತಿಗೆ ಕಾರಿನಲ್ಲೇ ಹಲ್ಲೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಈ‌ ಹಿಂದೆ ಕೂಡ ಮನೆ ಬಳಿ‌ ಕಾರು ಪಾರ್ಕಿಂಗ್ ಮಾಡುವ ವಿಚಾರಕ್ಕೆ ಗಲಾಟೆ ನಡೆದು ಸ್ನೇಹಿತ್ ಮೇಲೆ ಎಫ್.ಐಆರ್ (FIR) ದಾಖಲಾಗಿತ್ತು. ನಿರ್ಮಾಪಕರೊಬ್ಬರ ಮಧ್ಯಸ್ಥಿಕೆಯಲ್ಲಿ ಪ್ರಕರಣ ರಾಜಿಯಾಗಿತ್ತು.  ಮನೆಯ ಮುಂಭಾಗ ಕಾರು ಕ್ಲೀನ್ ಮಾಡುವ ವೇಳೆ ಜಾತಿ ನಿಂದೆ ಮಾಡಿ ಅವಾಚ್ಯವಾಗಿ ನಿಂದನೆ ಮಾಡಿದ್ದಾರೆ ಅಂತಾ ಪ್ರತಿ ದೂರು ದಾಖಲಿಸಿದ್ದರು. ಮಹಾಲಕ್ಷ್ಮಿ ಲೇಔಟ್ ನಲ್ಲಿ ಎರಡು ಕಡೆಯವರಿಂದ ದೂರು ದಾಖಲಾಗಿ ಆನಂತರ ರಾಜಿ ಮಾಡಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]