Tag: soundarya jagadish

  • ಪವಿತ್ರಾಗೌಡಗೆ ಕೋಟಿ ಕೋಟಿ ಹಣ ಕೊಟ್ಟಿದ್ರಾ ಸೌಂದರ್ಯ ಜಗದೀಶ್?

    ಪವಿತ್ರಾಗೌಡಗೆ ಕೋಟಿ ಕೋಟಿ ಹಣ ಕೊಟ್ಟಿದ್ರಾ ಸೌಂದರ್ಯ ಜಗದೀಶ್?

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಪವಿತ್ರಾ ಗೌಡ (Pavithra Gowda) ಅವರ ಮನೆ ಖರೀದಿ ವಿಚಾರದಲ್ಲಿ ದಿ. ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadish) ಅವರ ಹೆಸರು ಕೇಳಿಬರುತ್ತಿದೆ. ಮನೆ ಖರೀದಿ ಪತ್ರಕ್ಕೆ ಸೌಂದರ್ಯ ಜಗದೀಶ್ ಸಾಕ್ಷಿಯಾಗಿ ಸಹಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಬಹಿರಂಗವಾಗಿಲ್ಲ.

    ದರ್ಶನ್ ಅವರ ಆಪ್ತ ವಲಯದಲ್ಲಿ ಸೌಂದರ್ಯ ಜಗದೀಶ್ ಅವರು ಸಹ ಗುರುತಿಸಿಕೊಂಡಿದ್ದರು. ಅಲ್ಲದೇ ಪವಿತ್ರಾ ಗೌಡ ಅವರ ಖಾತೆಗೆ ಜಗದೀಶ್ ಸುಮಾರು 2 ಕೋಟಿ ರೂ. ಹಣ ಕಳುಹಿಸಿದ್ದರು ಎಂದು ಹೇಳಲಾಗುತ್ತಿದೆ. ಜಗದೀಶ್ ಅಕೌಂಟ್‍ನಿಂದ ಟ್ರಾನ್ಸಫರ್ ಆಗಿರೋ 2 ಕೋಟಿ ರೂ. ಹಣ ಯಾಕಾಗಿ ಕಳುಹಿಸಲಾಗಿದೆ? ಜಗದೀಶ್ ಆತ್ಮಹತ್ಯೆಗೂ ಇದಕ್ಕೂ ಸಂಬಂಧ ಇದೆಯೇ? ಯಾವ ವಿಚಾರಕ್ಕಾಗಿ ಪವಿತ್ರಾಗೆ ಹಣ ಕೊಟ್ಟಿದ್ದರು? ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ. ಇದನ್ನೂ ಓದಿ: ಕೇಜ್ರಿವಾಲ್ ಜಾಮೀನು ಪ್ರಕರಣ- ತುರ್ತು ಪರಿಹಾರ ನೀಡಲು ಸುಪ್ರೀಂ ನಕಾರ

    2017 ನವೆಂಬರ್ 13 ರಂದು ಪವಿತ್ರಾಗೌಡಗೆ 1 ಕೋಟಿ ರೂ. ವರ್ಗಾವಣೆಯಾಗಿದೆ. 2018, ಜನವರಿ 23 ರಂದು ಪವಿತ್ರಾಗೌಡಗೆ ಮತ್ತೆ 1 ಕೋಟಿ ರೂ. ವರ್ಗಾವಣೆ ಮಾಡಲಾಗಿತ್ತು. 2018, ಜನವರಿ 24 ರಂದು ಪವಿತ್ರಾಗೌಡ ಮನೆ ಖರೀದಿಸಿದ್ದರು. ಟಿಜಿಎಂಸಿ ಬ್ಯಾಂಕ್ ಲಿಮಿಟೆಡ್ ರಾಜಾಜಿನಗರ ಬ್ರಾಂಚ್‍ನಲ್ಲಿ ವ್ಯವಹಾರ ಮಾಡಲಾಗಿದೆ. ಪವಿತ್ರಾಗೌಡಗೆ ಸೌಂದರ್ಯ ಜಗದೀಶ್ ಹಣ ಕೊಟ್ಟ ದಾಖಲೆ ಮಾತ್ರ ಲಭ್ಯವಾಗಿದೆ. ಈವರೆಗೂ ಸೌಂದರ್ಯ ಜಗದೀಶ್‍ಗೆ ಹಣ ವಾಪಸ್ ನೀಡಿರುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

    ಸೌಂದರ್ಯ ಜಗದೀಶ್ ಅವರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ ಉದ್ಯಮದಲ್ಲಿ ನಷ್ಟವಾಗಿತ್ತು ಎಂಬ ಸುದ್ದಿ ಹರಿದಾಡಿತ್ತು. ಅದಕ್ಕೆ ಸಂಬಂಧಿಸಿ ಡೆತ್‍ನೋಟ್ ಸಹ ಸಿಕ್ಕಿತ್ತು. ಸೌಂದರ್ಯ ಜಗದೀಶ್ ಆತ್ಮಹತ್ಯೆ ಬಳಿಕ ಪಾಲುದಾರರ ಮೇಲೆ ಅವರ ಪತ್ನಿ ವಂಚನೆಯ ಆರೋಪ ಮಾಡಿದ್ದರು. ಇದನ್ನೂ ಓದಿ: 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭ – ಮೊದಲ ದಿನವೇ ಪ್ರತಿಭಟನೆಯ ಬಿಸಿ!

  • ಬೆಳಗ್ಗೆ 9.30ರವರೆಗೂ ನಿರ್ಮಾಪಕ ಸೌಂದರ್ಯ ಜಗದೀಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ಬೆಳಗ್ಗೆ 9.30ರವರೆಗೂ ನಿರ್ಮಾಪಕ ಸೌಂದರ್ಯ ಜಗದೀಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ನಿನ್ನೆ ಮಹಾಲಕ್ಷ್ಮಿ ಲೇಔಟ್ ನ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ (Death) ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadish) ಅವರ ಅಂತಿಮ ದರ್ಶನಕ್ಕೆ ಇಂದು ಬೆಳಗ್ಗೆ 9:30 ಗಂಟೆವರೆಗೂ ಸಾರ್ವಜನಿಕರು ಹಾಗೂ ಚಿತ್ರರಂಗದ ಮಂದಿಗೆ ವ್ಯವಸ್ಥೆ ಮಾಡಲಾಗಿದೆ. ಅವರ ನಿವಾಸ ಕುಟೀರದಲ್ಲೇ ಅಂತಿಮ ದರ್ಶನವನ್ನು ಮಾಡಬಹುದಾಗಿದೆ.

    ಬೆಳಗ್ಗೆ 9:30 ಗಂಟೆಯ ನಂತರ ಚನ್ನರಾಯಪಟ್ಟಣದ ಹಿರಿಸಾವೆ ಬಳಿಯ ಫಾರಂ ಹೌಸ್ ನತ್ತ ಪಾರ್ಥಿವ ಶರೀರವನ್ನು ತಗೆದುಕೊಂಡು ಹೋಗಲಾಗುತ್ತಿದ್ದು, ಸೌಂದರ್ಯ ಜಗದೀಶ್ ಅವರ ಫಾರಂ ಹೌಸ್ ನಲ್ಲಿ ಮಧ್ಯಾಹ್ನ 12 ಗಂಟೆಯ ನಂತರ ಅಂತ್ಯಕ್ರಿಯೆ ನೆರವೇರಲಾಗುವುದು.

    ಅಂತಿಮ ವಿಧಿವಿಧಾನವನ್ನು ಜಗದೀಶ್ ಅವರ ಪುತ್ರ ಸ್ನೇಹಿತ್ ನೆರವೇರಿಸುತ್ತಾರೆ ಎಂದು ಕುಟುಂಬದ ಮೂಲಗಳ ತಿಳಿಸಿವೆ. ಪಾರ್ಥಿವ ಶರೀರ ಕೊಂಡೊಯ್ಯಲು ಚಿರಶಾಂತಿ ವಾಹನದ ಸಿದ್ದತೆ ಕೂಡ ಮಾಡಲಾಗಿದೆ.

     

    ನಿನ್ನೆ ದರ್ಶನ್, ಪ್ರೇಮ್, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಅಮೂಲ್ಯ, ಗುರುಕಿರಣ್ ಸೇರಿದಂತೆ ಅನೇಕ ತಾರೆಯರು ಅಂತಿಮ ದರ್ಶನ ಪಡೆದಿದ್ದಾರೆ. ಇವತ್ತು ಕೂಡ ಚಿತ್ರರಂಗದ ಅನೇಕ ಗಣ್ಯರು ಮತ್ತು ಉದ್ಯಮಿಗಳು ಕೂಡ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

  • ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಕೇಸ್ – ಪತ್ನಿ ರೇಖಾ, ಪುತ್ರ ಸ್ನೇಹಿತ್‍ಗೆ ಜಾಮೀನು

    ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಕೇಸ್ – ಪತ್ನಿ ರೇಖಾ, ಪುತ್ರ ಸ್ನೇಹಿತ್‍ಗೆ ಜಾಮೀನು

    ಬೆಂಗಳೂರು: ಸ್ಯಾಂಡಲ್‍ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಪತ್ನಿ ರೇಖಾ ಜಗದೀಶ್, ಪುತ್ರ ಸ್ನೇಹಿತ್‍ಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.

    ಕಸ ಹಾಕುವ ವಿಚಾರಕ್ಕೆ ಸೌಂದರ್ಯ ಜಗದೀಶ್ ಕುಟುಂಬಕ್ಕೂ ಹಾಗೂ ಮಾಜಿ ಮೇಯರ್ ಪುತ್ರಿ ಮಂಜುಳ ಪುರುಷೋತ್ತಮ ನಡುವೆ ಗಲಾಟೆ ನಡೆದಿದ್ದು, ಮಂಜುಳ ಪುರುಷೋತ್ತಮ್ ಅವರ ಮನೆ ಕೆಲಸದಾಕೆ ಅನುರಾಧ ಹಾಗೂ ಅವರ ತಾಯಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು. ಸೌಂದರ್ಯ ಜಗದೀಶ್ ಕುಟುಂಬಸ್ಥರು, ಬೌನ್ಸರ್ ಸೇರಿ ಹಲ್ಲೆ ಮಾಡಿರುವುದಾಗಿ ಮಂಜುಳಾ ಪುರುಷೋತ್ತಮ್ ತಿಳಿಸಿದ್ದರು. ಹೀಗಾಗಿ ಕಸ ಗಲಾಟೆ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದನ್ನೂ ಓದಿ: ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಕೇಸ್ – ಪತ್ನಿ ರೇಖಾ, ಪುತ್ರ ಸ್ನೇಹಿತ್‍ಗೆ ಪೊಲೀಸರಿಂದ ನೋಟಿಸ್

    ಪ್ರಕರಣ ಬಳಿಕ ನಾಪತ್ತೆ ಆಗಿದ್ದ ಆರೋಪಿಗಳು ಬಳಿಕ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 46ನೇ ಸಿಟಿ ಸಿವಿಲ್ ಕೋರ್ಟ್‍ನಿಂದ ರೇಖಾ ಜಗದೀಶ್, ಸ್ನೇಹಿತ್, ಅಲ್ಲದೆ ಪ್ರಕರಣದಲ್ಲಿ ಭಾಗಿಯಾದ ಎಲ್ಲರಿಗೂ ನಿರೀಕ್ಷಣಾ ಜಾಮೀನು ದೊರೆತಿದೆ. ವಿಚಾರಣೆ ನಡೆಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವ ಕೋರ್ಟ್ 30 ದಿನಗಳೊಳಗಾಗಿ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ. ಇದನ್ನೂ ಓದಿ: ಠಾಣೆ ಮೆಟ್ಟಿಲೇರಿದ ಕಸ ಫೈಟ್ – ಪ್ರೊಡ್ಯೂಸರ್ ಪುತ್ರ, ಪತ್ನಿ ವಿರುದ್ಧ FIR

  • ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಕೇಸ್ – ಪತ್ನಿ ರೇಖಾ, ಪುತ್ರ ಸ್ನೇಹಿತ್‍ಗೆ ಪೊಲೀಸರಿಂದ ನೋಟಿಸ್

    ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಕೇಸ್ – ಪತ್ನಿ ರೇಖಾ, ಪುತ್ರ ಸ್ನೇಹಿತ್‍ಗೆ ಪೊಲೀಸರಿಂದ ನೋಟಿಸ್

    ಬೆಂಗಳೂರು: ಸ್ಯಾಂಡಲ್‍ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ಮಧ್ಯೆ ಸ್ಟಾರ್ ನಟರೊಬ್ಬರು ಮಂಜುಳ ಪುರುಷೋತ್ತಮ್‍ಗೆ ಕರೆ ಮಾಡಿ ರಾಜಿ ಮಾಡಿಕೊಳ್ಳುವಂತೆ ತಿಳಿ ಹೇಳಿದ್ದಾರೆ.

    ಸೌಂದರ್ಯ ಜಗದೀಶ್ ಪತ್ನಿ ರೇಖಾ ಜಗದೀಶ್, ಅಪ್ಪುಪಪ್ಪು ಖ್ಯಾತಿಯ ಸ್ನೇಹಿತ್ ಮತ್ತು ಬೌನ್ಸರ್‌ಗಳು ಮಂಜುಳ ಪುರುಷೋತ್ತಮ್ ಅವರ ಮನೆಯ ಮಹಿಳಾ ಕೆಲಸಗಾರರ ಬಟ್ಟೆ ಹರಿದು ದೌರ್ಜನ್ಯ ಎಸಗಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಹಲ್ಲೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ, ಹಲ್ಲೆಗೆ ಒಳಗಾದವರಿಂದ ಮಾಹಿತಿ ಪೊಲೀಸರು ಈಗಾಗಲೇ ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ: ಠಾಣೆ ಮೆಟ್ಟಿಲೇರಿದ ಕಸ ಫೈಟ್ – ಪ್ರೊಡ್ಯೂಸರ್ ಪುತ್ರ, ಪತ್ನಿ ವಿರುದ್ಧ FIR

    ಇನ್ನೊಂದು ಕಡೆ ಮಂಜುಳ ಪುರುಷೋತ್ತಮ್‍ಗೆ ಸ್ಟಾರ್ ನಟರೊಬ್ಬರು ಕರೆ ಮಾಡಿ ಗಲಾಟೆ ದೊಡ್ಡದು ಮಾಡದಂತೆ ತಿಳಿಸಿ ರಾಜೀ ಪಂಚಾಯತಿ ಮಾಡಲು ಯತ್ನಿಸಿದ್ದಾರೆ. ಆದರೆ ಎರಡು ದಿನ ಕಳೆದರೂ ಪೊಲೀಸರು ಆರೋಪಿಗಳನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಎಫ್‍ಐಆರ್ ನಂತರ ರಾಜಿ ನಡೆಸಲು ಪೊಲೀಸರು ಪರೋಕ್ಷವಾಗಿ ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಸಿಗದ ಜಾಮೀನು – ಜೈಲಿನಲ್ಲಿ ರಾಮನ ಮೊರೆ ಹೋದ ಆರ್ಯನ್ ಖಾನ್

    ಕಸ ಹಾಕುವ ವಿಚಾರಕ್ಕೆ ಸೌಂದರ್ಯ ಜಗದೀಶ್ ಕುಟುಂಬಕ್ಕೂ ಹಾಗೂ ಮಾಜಿ ಮೇಯರ್ ಪುತ್ರಿ ಮಂಜುಳ ಪುರುಷೋತ್ತಮ ನಡುವೆ ಗಲಾಟೆ ನಡೆದಿದ್ದು, ಮಂಜುಳ ಪುರುಷೋತ್ತಮ್ ಅವರ ಮನೆ ಕೆಲಸದ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು. ಸೌಂದರ್ಯ ಜಗದೀಶ್ ಕುಟುಂಬಸ್ಥರು, ಬೌನ್ಸರ್ ಸೇರಿ ಹಲ್ಲೆ ಮಾಡಿರುವುದಾಗಿ ಮಂಜುಳಾ ಪುರುಷೋತ್ತಮ್ ತಿಳಿಸಿದ್ದರು. ಇಷ್ಟೇ ಅಲ್ಲದೇ ಸೌಂದರ್ಯ ಜಗದೀಶ್ ಮತ್ತು ಮಂಜುಳಾ ಪುರುಷೋತ್ತಮ್ ನಡುವೆ ಈ ಹಿಂದೆಯೂ ಹಲವು ಬಾರಿ ಜಗಳ ನಡೆದಿತ್ತು ಎನ್ನಲಾಗಿತ್ತು. ಹೀಗಾಗಿ ಕಸ ಗಲಾಟೆ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಕಿನ್ನೌರ್‌ನಲ್ಲಿ ಭಾರೀ ಹಿಮಪಾತಕ್ಕೆ ಮೂವರು ಬಲಿ – 10 ಮಂದಿಯ ರಕ್ಷಣೆ

    ಈ ವಿಚಾರವಾಗಿ ಈ ಮುನ್ನ ಪ್ರತಿಕ್ರಿಯಿಸಿದ್ದ ರೇಖಾ ಜಗದೀಶ್, ಇದು ಉದ್ದೇಶಪೂರ್ವಕವಾಗಿ ಮಾಡಿರುವ ಗಲಾಟೆ ಎಂದಿದ್ದರು. ನಾವು ಬೆಳೆಯುತ್ತಿರುವುದನ್ನು ಸಹಿಸಿಕೊಳ್ಳಲಾಗದೇ ಈ ರೀತಿ ಮಾಡಿದ್ದಾರೆ. ನನ್ನ ಮಕ್ಕಳು ದೇವರಿದ್ದಂತೆ ಎಂದು ಸಮರ್ಥನೆ ಮಾಡಿಕೊಂಡಿದ್ದರು. ಸೋಮವಾರ ಕೂತು ಮಾತಾಡೋಣ ಎಂದಿದ್ದೆ. ಆದರೆ ಬೇಕು ಅಂತಲೇ ಹೀಗೆಲ್ಲ ಮಾಡಿದ್ದಾರೆ ಎಂದು ಮಂಜುಳ ಪುರುಷೋತ್ತಮ್ ವಿರುದ್ಧ ಆರೋಪಿಸಿದ್ದರು.