Tag: Sound System

  • ದಸರಾ ಪೆಂಡಾಲ್ ಸೌಂಡ್ ಸಿಸ್ಟಮ್ ವಯರ್ ಕಿತ್ತು ದರ್ಪ ಮೆರೆದ KAS ಅಧಿಕಾರಿ

    ದಸರಾ ಪೆಂಡಾಲ್ ಸೌಂಡ್ ಸಿಸ್ಟಮ್ ವಯರ್ ಕಿತ್ತು ದರ್ಪ ಮೆರೆದ KAS ಅಧಿಕಾರಿ

    ಧಾರವಾಡ: ಕೆಎಎಸ್ ಅಧಿಕಾರಿಯೊಬ್ಬರು (KAS Officer) ಪೆಂಡಾಲ್‌ನಲ್ಲಿ ಸೌಂಡ್ ಸಿಸ್ಟಮ್ (Sound System) ವಯರ್ ಕಿತ್ತು ಹಾಕಿದ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.

    ನಗರದ ರಾಜ್ ನಗರದಲ್ಲಿ ದುರ್ಗಾ ದೇವಿ ಉತ್ಸವದ ಹಿನ್ನೆಲೆ ಪೆಂಡಾಲ್ ಹಾಕಲಾಗಿತ್ತು. ಈ ವೇಳೆ ಸೌಂಡ್ ಸಿಸ್ಟಂ ಹಚ್ಚಿದ್ದಕ್ಕೆ ಅಬಕಾರಿ ಇಲಾಖೆಯ ಪ್ರೊಬೆಷನರಿ ಡಿಸಿಯಾದ ಶಾರದಾ ಕೊಳಕರ್ ಅವರು ಅಡ್ಡಿಪಡಿಸಿದ್ದಾರೆ.

    ಶಾರದಾ ಕೊಳಕರ್ ಕೂಡಾ ರಾಜನಗರದಲ್ಲೇ ವಾಸವಾಗಿದ್ದು, ಬಡಾವಣೆಯಲ್ಲಿ ಹಾಕಲಾಗಿದ್ದ ಪೆಂಡಾಲ್‌ನಲ್ಲಿ ಸೌಂಡ್ ಸಿಸ್ಟಮ್ ಹಚ್ಚಿದ್ದ ವಯರ್ ಕಿತ್ತು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ದಸರಾಕ್ಕೆಂದು ಊರಿಗೆ ಬರುತ್ತಿದ್ದಾಗ ಬೈಕ್ ಅಪಘಾತ- ಇಬ್ಬರು ಸ್ಥಳದಲ್ಲೇ ಸಾವು

    ವಯರ್ ಕಿತ್ತು ಹಾಕುವ ಸಮಯದಲ್ಲಿ ಅಲ್ಲೇ ಇದ್ದ ಕೆಲವರು ವೀಡಿಯೋ ಕೂಡಾ ಮಾಡಿದ್ದಾರೆ. ಕೇಬಲ್ ಕಿತ್ತು ಹಾಕಿದ ಶಾರದಾ ಮೇಲೆ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿದೆ. ಇದನ್ನೂ ಓದಿ: ಚುನಾವಣೆ ವೇಳೆ ಉಚಿತ ಕೊಡುಗೆ ಆಫರ್ – ಪಕ್ಷಗಳಿಗೆ ಶಾಕ್, ಆಯೋಗದ ನಿರ್ಧಾರಕ್ಕೆ ವಿಪಕ್ಷಗಳು ಕಿಡಿ

    ಧಾರವಾಡ ಉಪನಗರ ಠಾಣೆಗೆ ಆಗಮಿಸಿದ ಸ್ಥಳೀಯರು, ಹಬ್ಬಕ್ಕೆ ಶಾರದಾ ಅವರು ಅಡ್ಡಿ ಪಡಿಸಿದ್ದಾರೆ. ಪದೇ ಪದೇ ಈ ರೀತಿ ಮಾಡಿರುವ ಅವರು, ಸರ್ಕಾರಿ ಅಧಿಕಾರಿ ಎಂದು ನಮ್ಮ ಮೇಲೆ ದರ್ಪ ತೊರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆರ್.ಟಿ.ಓ ಅಧಿಕಾರಿಗಳು, ಪೊಲೀಸರ ಜಂಟಿ ಕಾರ್ಯಾಚರಣೆ – ವಾಹನಗಳ ಕರ್ಕಶ ಶಬ್ದಕ್ಕೆ ಬ್ರೇಕ್

    ಆರ್.ಟಿ.ಓ ಅಧಿಕಾರಿಗಳು, ಪೊಲೀಸರ ಜಂಟಿ ಕಾರ್ಯಾಚರಣೆ – ವಾಹನಗಳ ಕರ್ಕಶ ಶಬ್ದಕ್ಕೆ ಬ್ರೇಕ್

    ನೆಲಮಂಗಲ: ಕರ್ಕಶ ಶಬ್ದವನ್ನುಂಟು ಮಾಡುವ ಮ್ಯೂಸಿಕ್ ಹಾರ್ನ್ ಮತ್ತು ಸೌಂಡ್ ಸಿಸ್ಟಮ್ ಹಾಕಿಕೊಂಡು ಓಡಾಡುವ ವಾಹನಗಳಿಗೆ ನೆಲಮಂಗಲ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಗ್ರಾಮಾಂತರ ಭಾಗದ ಬಿಲ್ಲಿನ ಕೋಟೆ, ಬೂದಿಹಾಳ್ ಬಳಿ ಆಟೋ ಚಾಲಕರಿಗೆ ಎಚ್ಚರಿಕೆ ನೀಡಿ ಕರ್ಕಶ ಹಾರ್ನ್ ಹೊಂದಿದ್ದ ಆಟೋಗಳನ್ನು ವಶಕ್ಕೆ ಅಧಿಕಾರಿಗಳು ಪಡೆದಿದ್ದಾರೆ. ಅಪಘಾತಕ್ಕೆ ಹಾರ್ನ್ ಮತ್ತು ಸೌಂಡ್ ಕೂಡ ಕಾರಣ ಎಂದು ನೆಲಮಂಗಲ-ತುಮಕೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಬಾರಿ ಸರಕು ವಾಹನಗಳು, ಟೂರಿಸ್ಟ್ ಬಸ್ ಗಳು, ಆಟೋ ರಿಕ್ಷಾ, ಲಗೇಜ್ ವಾಹನಗಳ ಜೊತೆ ಪ್ರತಿನಿತ್ಯ ತುಮಕೂರು ಬೆಂಗಳೂರು ನಡುವೆ ಸಂಚರಿಸುವ ಕಾರುಗಳು ಬೈಕ್ ಗಳ ಸಂಖ್ಯೆ ಹೆಚ್ಚಾಗಿದ್ದು, ರಸ್ತೆ ಅಪಘಾತಗಳು ಅಧಿಕವಾಗುತ್ತಿದ್ದು, ಅತಿವೇಗದ ಚಾಲನೆಯಿಂದ ಅಪಘಾತ ಉಂಟಾಗುತ್ತಿರುವುದು ಸಂಶೋಧನೆ ಮೂಲಕ ಕಂಡು ಬಂದಿದೆ.

    ಹೀಗಾಗಿ ಕರ್ಕಶ ಶಬ್ದವನ್ನು ಉಂಟುಮಾಡುವ ಹಾರ್ನ್, ಮ್ಯೂಸಿಕ್ ಹಾರ್ನ್, ಸೌಂಡ್ ಸಿಸ್ಟಮ್ ಹಾಕಿಕೊಂಡು ಶಬ್ದ ಮಾಡುವ ಆಟೋ ರಿಕ್ಷಾಗಳ ಮೇಲೆ ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿ ಮತ್ತು ಗ್ರಾಮಾಂತರ ಪೊಲೀಸ್ ತಂಡ ಜಂಟಿ ತಪಾಸಾಣೆ ಮಾಡಿದ್ದಾರೆ. ಇನ್ನೂ ಅತಿ ವೇಗವಾಗಿ ಚಲಿಸುತ್ತಿದ್ದ ಆಟೋ ರಿಕ್ಷಾವನ್ನು ಮುಟ್ಟುಗೋಲು ಹಾಕಿಕೊಂಡು ಆರ್.ಟಿ.ಓ ಅಧಿಕಾರಿಗಳು, ಇತರೆ ಆಟೋ ಚಾಲಕರಿಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಪ್ಪಿಸಿ ಜನರ ಜೀವನದ ಜೊತೆ ಆಟವಾಡ ಬೇಡಿ ಎಂದು ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಡಾ.ಧನ್ವಂತರಿ ಒಡೆಯರ್ ಕಿವಿ ಮಾತನ್ನು ತಿಳಿಸಿದ್ದಾರೆ.

    ಈ ಬಗ್ಗೆ ವೃತ್ತ ನಿರೀಕ್ಷಕರಾದ ಹರೀಶ್ ಮಾತನಾಡಿ, ಗ್ರಾಮಾಂತರ ವಿಭಾಗದಲ್ಲಿ ಅತೀ ಹೆಚ್ಚಿನ ಜನರನ್ನು ಕರೆದೊಯ್ಯುವ ಚಾಲಕರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಪ್ರಾದೇಶಿಕ ಸಾರಿಗೆ ಅಧಿಕಾರಿ ಗುರುಮೂರ್ತಿ ಹೆದ್ದಾರಿ ನಿಯಮಗಳನ್ನು ಉಲ್ಲಂಘಿಸುವ ಆಟೋ ರಿಕ್ಷಾಗಳ ರಹಾದಾರಿಯನ್ನು ಪರವಾನಗೆ ಅಮಾನತುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:ನಾಗರಹೊಳೆ ಅಭಯಾರಣ್ಯಕ್ಕೆ ರಾಜೀವ್ ಗಾಂಧಿ ಹೆಸರು ತೆಗೆದು, ಜನರಲ್ ಕಾರ್ಯಪ್ಪ ಹೆಸರಿಡಲಿ: ಅಪ್ಪಚ್ಚು ರಂಜನ್

  • ಮಸೀದಿಗಳಲ್ಲಿ ಹಾಕಿರುವ ಧ್ವನಿವರ್ಧಕ ತೆರವಿಗೆ ಸೂಚನೆ ನೀಡಿಲ್ಲ – ಕರ್ನಾಟಕ ಪೊಲೀಸ್ ಸ್ಪಷ್ಟನೆ

    ಮಸೀದಿಗಳಲ್ಲಿ ಹಾಕಿರುವ ಧ್ವನಿವರ್ಧಕ ತೆರವಿಗೆ ಸೂಚನೆ ನೀಡಿಲ್ಲ – ಕರ್ನಾಟಕ ಪೊಲೀಸ್ ಸ್ಪಷ್ಟನೆ

    ಬೆಂಗಳೂರು: ರಾಜ್ಯಾದ್ಯಂತ ಮಸೀದಿಗಳಲ್ಲಿ ಅಳವಡಿಸಿರುವ ಅನಧಿಕೃತ ಧ್ವನಿವರ್ಧಕಗಳನ್ನು ತೆರವು ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ ಎನ್ನಲಾದ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ.

    ಇದು ಫೇಕ್ ನ್ಯೂಸ್ ಆಗಿದ್ದು, ಪ್ರವೀಣ್ ಸೂದ್ ಅವರು ಆದೇಶ ಹೊರಡಿಸಿದ್ದಾರೆ ಎಂಬಂತೆ ಲೆಟರ್ ಹೆಡ್ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

    ಈ ಸಂಬಂಧ ಕರ್ನಾಟಕ ಸ್ಟೇಟ್ ಪೊಲೀಸ್ ಫ್ಯಾಕ್ಟ್ ಚೆಕ್ ವೆಬ್‍ಸೈಟ್ ಇದೊಂದು ಸುಳ್ಳು ಸುದ್ದಿಯಾಗಿದೆ ಎಂದು ತಿಳಿಸಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಈ ರೀತಿಯ ಆದೇಶವನ್ನು ಪ್ರಕಟಿಸಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಯಾರೂ ಈ ವದಂತಿಯನ್ನು ನಂಬಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

    ನಕಲಿ ಸುತ್ತೋಲೆ ಏನಿತ್ತು?
    ಕಳೆದ ತಿಂಗಳು ವಕೀಲರದ ಹರ್ಷ ಮುತಾಲಿಕ್, ಮಸೀದಿಯಲ್ಲಿನ ಧ್ವನಿ ವರ್ಧಕಗಳಿಂದ ಇತರೇ ಧರ್ಮದರಿಗೆ ತೊಂದರೆ ಆಗುತ್ತಿದೆ. ದಿನಕ್ಕೆ ಐದಾರು ಬಾರಿ ಪ್ರಾರ್ಥನೆ ಮಾಡಲಾಗತ್ತೆ. ಇದ್ದರಿಂದ ಮಕ್ಕಳಿಗೆ, ವಯಸ್ಸಾದವರಿಗೆ, ಹೃದಯ ಸಂಬಂಧಿ ಖಾಯಿಲೆ ಇರುವವರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ ನಿಷೇಧ ಮಾಡಬೇಕು ಎಂದು ದೂರು ನೀಡಿದ್ದರು.

    ಈಗ ಈ ದೂರಿಗೆ ಸ್ಪಂದಿಸಿದ ಡಿಜಿ ಪ್ರವೀಣ್ ಸೂದ್ ರಾಜ್ಯದ ಎಲ್ಲ ಜಿಲ್ಲೆಗಳ ಎಸ್‍ಪಿಗಳಿಗೆ ಹಾಗೂ ನಗರದ ಕಮಿಷನರ್‍ಗೆ ಪತ್ರ ಬರೆದಿದ್ದು, ರಾಜ್ಯಾದ್ಯಂತ ಮಸೀದಿಗಳಲ್ಲಿ ಹಾಕಿರುವ ಅನಧಿಕೃತ ಧ್ವನಿವರ್ಧಕ ತೆರವಿಗೆ ಆದೇಶ ಮಾಡಿದ್ದಾರೆ. ಜೊತೆಗೆ ಯಾವುದೇ ಅನಧಿಕೃತ ಧ್ವನಿವರ್ಧಕ ಬಳಕೆ ಮಾಡಿದ್ದರೆ, ಅದರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ತೆರವುಗೊಳಿಸಲು ಸೂಚಿಸಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿತ್ತು.

     

  • ಸರ್ಕಾರಿ ದುಡ್ಡಲ್ಲಿ ಜಿ.ಪಂ ಅಧ್ಯಕ್ಷರ ದರ್ಬಾರ್- ಕಾರಿಗೆ ಇರಲೇಬೇಕಂತೆ ಸೌಂಡ್ ಸಿಸ್ಟಮ್!

    ಸರ್ಕಾರಿ ದುಡ್ಡಲ್ಲಿ ಜಿ.ಪಂ ಅಧ್ಯಕ್ಷರ ದರ್ಬಾರ್- ಕಾರಿಗೆ ಇರಲೇಬೇಕಂತೆ ಸೌಂಡ್ ಸಿಸ್ಟಮ್!

    ಬೆಳಗಾವಿ: ರಸ್ತೆ ಕಾಮಗಾರಿಗೆ, ನೀರಿನ ವ್ಯವಸ್ಥೆ, ಚರಂಡಿ, ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಸರ್ಕಾರಿ ಕಾಮಗಾರಿಗಳಿಗೆ ಟೆಂಡರ್ ಕರೆಯೋದನ್ನ ಕೇಳಿದ್ದೀವಿ. ಆದರೆ ಬೆಳಗಾವಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಕಾರಿಗೆ ಸೌಂಡ್ ಸಿಸ್ಟಮ್ ಕೊಡಿಸುವ ಸಲುವಾಗಿ ಟೆಂಡರ್ ಕರೆದಿದ್ದಾರೆ.

    ಬೆಳಗಾವಿಯಲ್ಲಿ ಆಶಾ ಐಹೊಳೆ ಅಂಧದರ್ಬಾರ್ ನಡೆಸುತ್ತಿದ್ದಾರೆ. ಇವರು ಕಾರಿನಲ್ಲಿ ಕುಳಿತರೆ ಸಾಕು ಸೌಂಡ್ ಸಿಸ್ಟಮ್ ಆನ್ ಆಗ್ಲೇಬೇಕಂತೆ. ಒಂದು ವರ್ಷದ ಹಿಂದೆ ಹೊಸ ಕಾರನ್ನು ಸರ್ಕಾರ ಇವರಿಗೆ ನೀಡಿದೆ. ಅದರಲ್ಲಿ ಸೌಂಡ್ ಸಿಸ್ಟಮ್ ಇಲ್ಲದ್ದಕ್ಕೆ ಮೇಡಂ ಅವರು ಆರು ತಿಂಗಳ ಬಳಿಕ ಸುಮಾರು 60 ಸಾವಿರ ರೂ. ಸ್ವಂತ ಹಣ ಖರ್ಚು ಮಾಡಿ ಕಾರಿಗೆ ಸೌಂಡ್ ಸಿಸ್ಟಮ್ ಅಳವಡಿಸಿದ್ದಾರೆ. ಆದ್ರೆ ಇದೀಗ ಆ ಹಣವನ್ನ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಕೇಳುತ್ತಿದ್ದಾರೆ.

    ಅಧ್ಯಕ್ಷರು ಸಿಇಒ ಬಳಿ ಬಿಲ್ ಪಾಸ್ ಮಾಡಿಸುವಂತೆ ಕೇಳಿದಾಗ ಬಿಲ್ ಪಾಸ್ ಮಾಡುವ ಬದಲು ಸಿಇಒ ಟೆಂಡರ್ ಕರೆದಿದ್ದಾರೆ. ಅದು ಕೇವಲ 60 ಸಾವಿರ ರೂಪಾಯಿಗೆ ಟೆಂಡರ್ ಕರೆದಿದ್ದಾರೆ. ಸರ್ಕಾರಿ ನಿಯಮಗಳನುಸಾರ ಯಾವುದೇ ಕಾಮಗಾರಿ ಟೆಂಡರ್ ಕರೆಯಬೇಕೆಂದರೆ ಅದು ಒಂದು ಲಕ್ಷ ರೂಪಾಯಿ ದಾಟಿರಬೇಕು. ಆದರೆ ಅಧ್ಯಕ್ಷರ ಕಾರ್ ಮ್ಯೂಸಿಕ್ ಸಿಸ್ಟಮ್ ಸಲುವಾಗಿಯೇ ಸರ್ಕಾರಿ ನಿಯಮಗಳನ್ನ ಗಾಳಿಗೆ ತೂರಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಟೆಂಡರ್ ಕರೆದಿದ್ದಾರೆ. ಈ ಟೆಂಡರ್ ಗೂ ನನಗೂ ಯಾವುದೇ ಸಂಬಂಧವಿಲ್ಲ. ಆದರೆ ನಾನು ಕಾರಿಗೆ ಸೌಂಡ್ ಸಿಸ್ಟಮ್ ಮೂರು ತಿಂಗಳ ಹಿಂದೆಯೇ ಹಾಕಿಸಿದ್ದು, ಅದರ ಹಣ ನೀಡಿ ಎಂದು ಕೇಳಿದ್ದೇನೆ ಎಂದು ಜಿ.ಪಂ ಅಧ್ಯಕ್ಷರು ಹೇಳುತ್ತಿದ್ದಾರೆ.

    10 ರಿಂದ 20 ಸಾವಿರ ರೂ.ಗೆ ಬರುವ ಮ್ಯೂಸಿಕ್ ಸಿಸ್ಟಮ್ ಗೆ 60 ಸಾವಿರ ಗಟ್ಟಲೆ ಖರ್ಚು ಮಾಡುವ ಅವಶ್ಯಕತೆ ಏನಿತ್ತು ಅಂತಾ ಕೇಳಿದ್ರೆ, ಚೀನಾ ಮಾಡಲ್ ಗಳಿಗೆ ಬಿಲ್ ಕೊಡುವುದಿಲ್ಲ. ಅವು ಗ್ಯಾರಂಟಿ ಕೂಡ ಇರುವುದಿಲ್ಲ. ಹೀಗಾಗಿ ಒಳ್ಳೆಯ ಕ್ವಾಲಿಟಿ ಸಿಸ್ಟಮ್ ಅಳವಡಿಸಿದ್ದೇನೆ. ಆದರೆ ಪೂರ್ತಿ ಹಣವನ್ನ ಒಂದೇ ಬಾರಿ ಕೊಡಿ ಅಂತಾನು ನಾನು ಹೇಳಿಲ್ಲ ಹಂತ ಹಂತವಾಗಿ ಕೊಟ್ಟರೆ ಸಾಕು ಎಂಬುದು ಅಧ್ಯಕ್ಷರ ಮಾತಾಗಿದೆ.

    ಅಧ್ಯಕ್ಷರ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ನಡೆಗೆ ಸದ್ಯ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದ ಆಕ್ರೋಶ ಕೇಳಿಬರುತ್ತಿದೆ. ನಿಯಮಗಳನ್ನ ಗಾಳಿಗೆ ತೂರಿದ ಅಧಿಕಾರಿಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಜೊತೆಗೆ ಅಧ್ಯಕ್ಷರು ತಮಗೆ ಹೊಂದಿಕೆಯಾಗಿಲ್ಲವೆಂದಲ್ಲಿ ತಮ್ಮ ಸ್ವಂತ ವಾಹನದಲ್ಲಿ ಓಡಾಡಲಿ. ಈ ರೀತಿಯಾಗಿ ಸರ್ಕಾರಿ ಹಣವನ್ನ ಬೇಕಾಬಿಟ್ಟಿ ಖರ್ಚು ಮಾಡುವುದನ್ನ ಬಿಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

    ಅಧ್ಯಕ್ಷರಿಗೆ ಕಂಪರ್ಟ್ ಆಗಿಲ್ಲ ಅನ್ನುವ ಕಾರಣಕ್ಕೆ ಮ್ಯೂಸಿಕ್ ಸಿಸ್ಟಮ್ ಅಳವಡಿಸಿದ್ದು ಒಂದು ಕಡೆಯಾದರೆ, ಸರ್ಕಾರಿ ಕಾರುಗಳಲ್ಲಿ ದುಬಾರಿ ಸಿಸ್ಟಮ್ ಕೂಡಿಸುವ ಅವಶ್ಯಕತೆ ಏನಿತ್ತು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈ ಪ್ರಕರಣದ ಕುರಿತು ಅಧಿಕಾರಿಗಳನ್ನ ಸಂಪರ್ಕಿಸಿದರೆ ಇದಕ್ಕೂ ನಮಗೂ ಎನೂ ಸಂಬಂಧ ಇಲ್ಲ ಎನ್ನುವ ನಿಟ್ಟಿನಲ್ಲಿ ವರ್ತಿಸುತ್ತಿದ್ದಾರೆ ಅಂತ ಜನಸಾಮಾನ್ಯರು ದೂರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv