Tag: soujanya case

  • ಬೆಳ್ತಂಗಡಿ ಠಾಣೆಯಲ್ಲಿ ಸೌಜನ್ಯ ತಾಯಿ ವಿರುದ್ಧ ಎಫ್‌ಐಆರ್

    ಬೆಳ್ತಂಗಡಿ ಠಾಣೆಯಲ್ಲಿ ಸೌಜನ್ಯ ತಾಯಿ ವಿರುದ್ಧ ಎಫ್‌ಐಆರ್

    ಮಂಗಳೂರು: ಸೌಜನ್ಯ (Soujanya) ತಾಯಿ ಕುಸುಮಾವತಿ ಸೇರಿದಂತೆ 12 ಜನರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ (Belthangady Police Station) ಎಫ್‌ಐಆರ್ ದಾಖಲಾಗಿದೆ.

    ಅ.27 ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಅಕ್ರಮ ಕೂಟ ಸೇರಿದ ಆರೋಪದಲ್ಲಿ ತಿಮರೋಡಿ ಸಹೋದರ ಮೋಹನ್ ಶೆಟ್ಟಿ, ಪ್ರಸನ್ನ ರವಿ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ಆಗಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್ – ಸುಜಾತ ಭಟ್ ಹೊರತುಪಡಿಸಿ ವಿಚಾರಣೆಗೆ ಗೈರಾದ ಬುರುಡೆ ಗ್ಯಾಂಗ್

    ಸಾಮಾಜಿಕ ಜಾಲತಾಣಗಳಲ್ಲಿ ತಿಮರೋಡಿ ಗಡಿಪಾರು ವಿರುದ್ಧ ಪ್ರತಿಭಟನೆ ಅಂತಾ ಕರೆ ನೀಡಲಾಗಿತ್ತು. ಪೊಲೀಸರಿಂದ ಅನುಮತಿ ಸಿಗದೇ ಇದ್ದರೂ ಜನ ಸೇರುವಂತೆ ಕರೆ ಕೊಡಲಾಗಿತ್ತು. ಇದರಿಂದ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿದ್ದಾರೆ.

  • ಸೌಜನ್ಯ ಮಾವ ವಿಠಲ ಗೌಡ ವಿರುದ್ಧ ಧರ್ಮಸ್ಥಳ ಗ್ರಾಮಸ್ಥರಿಂದ ಎಸ್‌ಐಟಿಗೆ ದೂರು

    ಸೌಜನ್ಯ ಮಾವ ವಿಠಲ ಗೌಡ ವಿರುದ್ಧ ಧರ್ಮಸ್ಥಳ ಗ್ರಾಮಸ್ಥರಿಂದ ಎಸ್‌ಐಟಿಗೆ ದೂರು

    ಮಂಗಳೂರು: ಸೌಜನ್ಯ ಮಾವ ವಿಠಲ ಗೌಡ (Vittal Gowda) ವಿರುದ್ಧ ಧರ್ಮಸ್ಥಳ ಗ್ರಾಮಸ್ಥರು ಎಸ್‌ಐಟಿಗೆ ದೂರು ನೀಡಿದ್ದಾರೆ.

    ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಧರ್ಮಸ್ಥಳ ಗ್ರಾಮಸ್ಥ ಸಂದೀಪ್ ರೈ ದೂರು ಕೊಟ್ಟಿದ್ದಾರೆ. ತನಿಖಾ ಹಂತದಲ್ಲಿ ವಿಠಲ ಗೌಡನಿಂದ ಎಸ್ಐಟಿ ತನಿಖೆ ದಾರಿ ತಪ್ಪಿಸುತ್ತಿದ್ದಾರೆಂದು ಆರೋಪ ಹೊರಿಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್ | ಇಂದು ಚಿನ್ನಯ್ಯನನ್ನು ಬೆಳ್ತಂಗಡಿ ಕೋರ್ಟ್‍ಗೆ ಹಾಜರುಪಡಿಸಲಿರುವ ಎಸ್‍ಐಟಿ

    ವಿಚಾರಣೆ ಮುಗಿಸಿ ಹೊರಬಂದು ವಿಡಿಯೋ ಹರಿಬಿಟ್ಟಿದ್ದಾರೆ. ಎಸ್ಐಟಿ ಯಾವುದೇ ಮಾಹಿತಿ ನೀಡದೇ ಇದ್ದರೂ ವಿಡಿಯೋ ಹರಿಬಿಟ್ಟು ತನಿಖೆ ಹಾದಿ ತಪ್ಪಿಸುತ್ತಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

    ವಿಠಲ ಗೌಡನ ಹಿಂದೆ ಕೆಲ ವ್ಯಕ್ತಿಗಳು ಸೇರಿಕೊಂಡು ಷಡ್ಯಂತ್ರ ನಡೆಸುತ್ತಿದ್ದಾರೆ. ವಿಚಾರಣೆ ಮುಗಿಸಿ ಹೊರಗೆ ಬಂದ ಬಳಿಕ ಯೂಟ್ಯೂಬ್‌ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ಮೂಲಕ ತನಿಖೆಯ ಹಾದಿ ತಪ್ಪಿಸಲು ವಿಠಲ ಗೌಡ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಮತ್ತೆ ಅಸ್ಥಿಪಂಜರ ಸದ್ದು – ಬಂಗ್ಲೆಗುಡ್ಡದಲ್ಲಿ 5 ತಲೆಬುರುಡೆ, 113 ಮೂಳೆಗಳು ಪತ್ತೆ

    ಸಾಕ್ಷ್ಯ ನಾಶ ಮಾಡಲು ಸಾರ್ವಜನಿಕವಾಗಿ ಹೇಳಿಕೆ ನೀಡಿದ ಬಗ್ಗೆಯೂ ದೂರು ನೀಡಲಾಗಿದೆ. ವಿಠಲ ಗೌಡ ವಿರುದ್ಧ ತನಿಖೆ ನಡೆಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರು ಸ್ವೀಕರಿಸಿರುವ ಎಸ್‌ಐಟಿ ಅಧಿಕಾರಿಗಳು ಸ್ವೀಕೃತಿ ನೀಡಿದ್ದಾರೆ.

  • ಸೌಜನ್ಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದು ಮಾವ ವಿಠಲ ಗೌಡ: ಸ್ನೇಹಮಯಿ ಕೃಷ್ಣ ಸ್ಫೋಟಕ ಹೇಳಿಕೆ

    ಸೌಜನ್ಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದು ಮಾವ ವಿಠಲ ಗೌಡ: ಸ್ನೇಹಮಯಿ ಕೃಷ್ಣ ಸ್ಫೋಟಕ ಹೇಳಿಕೆ

    – ದಕ್ಷಿಣ ಕನ್ನಡ ಎಸ್‌ಪಿಗೆ ದೂರು ಸಲ್ಲಿಸಿದ ಸಾಮಾಜಿಕ ಹೋರಾಟಗಾರ

    ಮಂಗಳೂರು: ಸೌಜನ್ಯ ಕೊಲೆ ಮಾಡಿದ್ದು ಆಕೆಯ ಮಾವ ವಿಠಲ ಗೌಡ (Vittal Gowda) ಎಂದು ಮೈಸೂರಿನ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ (Snehamayi Krishna) ಆರೋಪಿಸಿದ್ದಾರೆ. ಈ ಕುರಿತು ದಕ್ಷಿಣ ಕನ್ನಡ ಎಸ್‌ಪಿ ಡಾ.ಅರುಣ್ ಕುಮಾರ್‌ಗೆ ದೂರು ಅರ್ಜಿ ಸಲ್ಲಿಸಿದ್ದಾರೆ.

    ಸೌಜನ್ಯಳ ಮೇಲೆ ಸೋದರಮಾವ ವಿಠಲ ಗೌಡಗೆ ಕೆಟ್ಟ ದೃಷ್ಟಿ ಇತ್ತು. ಆಕೆಯನ್ನು ಬಳಸಿಕೊಳ್ಳಲು ಬಹಳ ಸಮಯದಿಂದ ಹವಣಿಸುತ್ತಿದ್ದ. ಒಪ್ಪದೇ ಇದ್ದಂತ ಸಂದರ್ಭದಲ್ಲಿ ಆಕೆ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಂಗ್ಲೆಗುಡ್ಡಕ್ಕೆ ಸೌಜನ್ಯ ಮಾವ ವಿಠಲಗೌಡನ ಕರೆದೊಯ್ದ SIT

    ಸಾಂದರ್ಭಿಕ ಸಾಕ್ಷಿಗಳನ್ನು ಇಟ್ಟುಕೊಂಡು ದಕ್ಷಿಣ ಕನ್ನಡ ಎಸ್ಪಿ ತನಿಖೆ ನಡೆಸಬೇಕೆಂದು ಸ್ನೇಹಮಯಿ ಕೃಷ್ಣ ದೂರಿನ ಮೂಲಕ ಮಂಪರು ಪರೀಕ್ಷೆ ಮಾಡಲು ಆಗ್ರಹಿಸಿದ್ದಾರೆ.

    ಸೌಜನ್ಯ ತಾಯಿ ಕುಸುಮಾವತಿಗೂ ಸಹೋದರ ವಿಠಲ ಗೌಡನ ಮೇಲೆ ಸಂಶಯವಿತ್ತು. ಸೌಜನ್ಯ ಮೃತದೇಹವನ್ನು ನೋಡಲು ಕುಸುಮಾವತಿ ಹೋಗಿರಲಿಲ್ಲ. ಸಂತೋಷ್ ರಾವ್ ಅವರನ್ನು ಈ ಕೃತ್ಯಕ್ಕೆ ಬಳಸಿಕೊಂಡಿರಬಹುದು. ಈ ಬಗ್ಗೆ ನಾನು ಬಹಳ ದಿನಗಳಿಂದ ಮಾಹಿತಿಗಳನ್ನು ಕಲೆ ಹಾಕುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೌಜನ್ಯ ಕೇಸ್‌| ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಉದಯ್‌ ಜೈನ್‌ ಪತ್ರ

    ಸಂಪೂರ್ಣ ಮರುತನಿಖೆ ನಡೆಸಿ ಆರೋಪಿಗೆ ಶಿಕ್ಷೆ ವಿಧಿಸಬೇಕು. ವಿಠಲ ಗೌಡನ ಮಂಪರು ಪರೀಕ್ಷೆ ಮಾಡಬೇಕು. ಮಂಪರು ಪರೀಕ್ಷೆಯಿಂದ ಸತ್ಯ ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ.

  • ಸೌಜನ್ಯ ಕೇಸ್‌| ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಉದಯ್‌ ಜೈನ್‌ ಪತ್ರ

    ಸೌಜನ್ಯ ಕೇಸ್‌| ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಉದಯ್‌ ಜೈನ್‌ ಪತ್ರ

    ಮಂಗಳೂರು: ಧರ್ಮಸ್ಥಳ ಸೌಜನ್ಯ ಪ್ರಕರಣದಲ್ಲಿ (Soujanya Rape and Murder case) ವಿಚಾರಣೆ ಎದುರಿಸಿದ್ದ ಉದಯ್ ಕುಮಾರ್ ಜೈನ್ (Uday Kumar Jain) ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

    ಸೌಜನ್ಯ ಪ್ರಕರಣದಲ್ಲಿ ನನ್ನ ಹೆಸರನ್ನ ಉದ್ದೇಶಪೂರ್ವಕವಾಗಿ ಸೇರಿಸಲಾಗಿದೆ. 13 ವರ್ಷಗಳಿಂದ ನನ್ನ ಹೆಸರನ್ನು ಪ್ರಕರಣದಲ್ಲಿ ಸುಖಾಸುಮ್ಮನೆ ಸೇರಿಸಿದ್ದು ಸಮಾಜದಲ್ಲಿ ನನ್ನನ್ನು ಅನುಮಾನದಿಂದ ನೋಡುವಂತಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌| ಎಸ್‌ಐಟಿ ಕಸ್ಟಡಿ ಅಂತ್ಯ ಶಿವಮೊಗ್ಗ ಜೈಲಿಗೆ ಚಿನ್ನಯ್ಯ

     

    ಸಂತೋಷ್ ರಾವ್ ಆರೋಪಿ ಎಂದು ಬೆಳ್ತಂಗಡಿ ಪೊಲೀಸರು ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿದರು. ಸಿಐಡಿ, ಸಿಬಿಐ ತನಿಖೆಯಲ್ಲಿ ನನ್ನ ವಿರುದ್ಧ ಎಫ್‌ಐಆರ್ ದಾಖಲಾಗಿಲ್ಲ. ನಾನು ನಿರ್ದೋಷಿ ಎಂದು ಸಾಬೀತುಪಡಿಸಲು ಮಂಪರು ಪರೀಕ್ಷೆ ಕೂಡ ಮಾಡಿಸಿದ್ದೇನೆ. ಹೀಗಾಗಿ ನನಗೆ ನ್ಯಾಯ ಕೊಡಬೇಕು ಅಥವಾ ದಯಾಮರಣ ನೀಡಬೇಕೆಂದು ಉದಯ್ ಜೈನ್ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್;‌ ಕೇರಳ ಕಮ್ಯುನಿಸ್ಟ್‌ ಪಕ್ಷದ ಸಂಸದನ ಮುಂದೆ ಬುರುಡೆ ಇಟ್ಟಿದ್ದ ಗ್ಯಾಂಗ್‌

    ಸಿಐಡಿ, ಸಿಬಿಐ ತನಿಖೆಯಲ್ಲಿ ಕಳಂಕಮುಕ್ತರಾಗಿದ್ದ ಉದಯ್ ಕುಮಾರ್ ಜೈನ್‌ ಅವರಿಗೆ ವಿಶೇಷ ತನಿಖಾ ತಂಡ ನೋಟಿಸ್ ನೀಡಿ ವಿಚಾರಣೆ ನಡೆಸಿತ್ತು. ನೋಟಿಸ್‌ ಹಿನ್ನೆಲೆಯಲ್ಲಿ ಉದಯ್‌ ಜೈನ್‌ ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದರು.

     

  • ಧರ್ಮಸ್ಥಳ ಪ್ರಕರಣಕ್ಕೆ ದೊಡ್ಡ ತಿರುವು – ಸೌಜನ್ಯ ಪ್ರಕರಣದಲ್ಲಿ ಕ್ಲೀನ್‌ ಚಿಟ್‌ ಪಡೆದವರಿಗೆ SIT ಬುಲಾವ್‌

    ಧರ್ಮಸ್ಥಳ ಪ್ರಕರಣಕ್ಕೆ ದೊಡ್ಡ ತಿರುವು – ಸೌಜನ್ಯ ಪ್ರಕರಣದಲ್ಲಿ ಕ್ಲೀನ್‌ ಚಿಟ್‌ ಪಡೆದವರಿಗೆ SIT ಬುಲಾವ್‌

    – ಬುರುಡೆ ಪ್ರಕರಣ ದಿಕ್ಕು ತಪ್ಪಿಸುವ ಹುನ್ನಾರ, ಯಾವ್ದೇ ತನಿಖೆಗೆ ಸಿದ್ಧ: ಉದಯ್‌ ಕುಮಾರ್‌ ಜೈನ್‌
    – ಸೌಜನ್ಯ ಮನೆ ಮೇಲೆ ಇಡಿ ರೇಡ್‌ ಆಗಲಿ ಅಂತ ಒತ್ತಾಯ

    ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ (Dharmasthala Case) ಈಗ ಬಹುದೊಡ್ಡ ತಿರುವು ಸಿಕ್ಕಿದೆ. ಸೌಜನ್ಯ ಪ್ರಕರಣದ ತನಿಖೆಯನ್ನು ಎಸ್‌ಐಟಿ ಕೈಗೆತ್ತಿಕೊಂಡಿತಾ ಅನ್ನೋ ಕುತೂಹಲ ಶುರುವಾಗಿದೆ. ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ (Soujanya Case) ಆರೋಪ ಹೊತ್ತು ಕ್ಲೀನ್‌ಚಿಟ್‌ ಪಡೆದವರಿಗೆ ವಿಶೇಷ ತನಿಖಾ ತಂಡ ಬುಲಾವ್‌ ನೀಡಿರುವುದು ಇದಕ್ಕೆ ಕಾರಣವಾಗಿದೆ.

    ಕರ್ನಾಟಕ ಪೊಲೀಸ್‌, ಸಿಬಿಐ ತನಿಖೆ ಬಳಿಕವೂ ಪ್ರಕರಣದಲ್ಲಿ ಕ್ಲೀನ್‌ಚಿಟ್‌ ಪಡೆದುಕೊಂಡಿದ್ದ ಉದಯ್ ಕುಮಾರ್ ಜೈನ್ ಸೇರಿದಂತೆ ಧೀರಜ್ ಕೆಲ್ಲಾ, ಮಲ್ಲಿಕ್ ಜೈನ್‌ಗೆ ಎಸ್‌ಐಟಿ ಬುಲಾವ್‌ ನೀಡಿದೆ. ಹೀಗಾಗಿ ಆರೋಪ ಹೊತ್ತ ಉದಯ್‌ ಕುಮಾರ್ ಜೈನ್ ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶಿ ಫಂಡಿಂಗ್‌ – ತನಿಖೆಗೆ ಇಡಿ ಎಂಟ್ರಿ

    ಎಸ್‌ಐಟಿ ಕಚೇರಿಗೆ ಭೇಟಿ ನೀಡುವ ಮುನ್ನ ʻಪಬ್ಲಿಕ್ ಟಿವಿʼ ಜೊತೆಗೆ ಉದಯ್ ಕುಮಾರ್ ಜೈನ್ ಮಾತನಾಡಿದ್ದಾರೆ. ಸೌಜನ್ಯ ತಾಯಿ ಎಸ್‌ಐಟಿಗೆ ಕೊಟ್ಟ ದೂರಿನ ಮೇರೆಗೆ ಅಥವಾ ಚಿನ್ನಯ್ಯ ನೀಡಿದ ಕೇಳಿಕೆಯ ಕಾರಣದಿಂದಲೂ ನನ್ನನ್ನ ಎಸ್‌ಐಟಿ ಕರೆದಿರಬಹುದು. ಯಾವುದೇ ತನಿಖೆಗೂ ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸುಡಾನ್‌ನಲ್ಲಿ ಭೂಕುಸಿತಕ್ಕೆ ಇಡೀ ಗ್ರಾಮವೇ ಭೂಸಮಾಧಿ – 1,000 ಜನ ಬಲಿ; ಬದುಕುಳಿದಿದ್ದು ಒಬ್ಬ ಮಾತ್ರ

    ಮುಂದುವರಿದು.. ಇದು ಬುರುಡೆ ಪ್ರಕರಣದ ದಿಕ್ಕು ತಪ್ಪಿಸುವ ಹುನ್ನಾರ. ಒಂದು ವಿಡಿಯೋನಲ್ಲಿ ಸೌಜನ್ಯ ಕೊಲೆಯಾದ ಸಂದರ್ಭದಲ್ಲಿ ನಾನು ಇರಲಿಲ್ಲ ಅಂತ ಒಂದು ವಿಡಿಯೋನಲ್ಲಿ ಹೇಳಿದ್ದಾನೆ. ಮತ್ತೊಂದು ವಿಡಿಯೋನಲ್ಲಿ ನಾನೇ ಆಕೆಯನ್ನ ಹೊತ್ಕೊಂಡು ಹೋಗೋದು ನೋಡಿದ್ದೇನೆ ಅಂತ ಹೇಳಿದ್ದಾನೆ. ಸಿನಿಮೀಯ ರೀತಿಯಲ್ಲಿ ಕಥೆ ಕಟ್ಟಿದ್ದಾನೆ. ಈಗ ಸೌಜನ್ಯ ಪ್ರಕರಣದಲ್ಲಿ ನನ್ನ ಬಗ್ಗೆ ಆರೋಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಈಗಾಗಲೇ ಗುಂಡಿ ಎಲ್ಲಾ ತೋಡಿಯಾಗಿದೆ, ಈಗ ವಿಷಯಾಂತರ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಬುರುಡೆ ಪ್ರಕರಣ ಮುಚ್ಚಿ ಹಾಕಲು ಈ ಪ್ರಕರಣವನ್ನ ಮತ್ತೆ ಮುನ್ನಲೆಗೆ ತರುತ್ತಿದ್ದಾರೆ. ಸಿಐಡಿ, ಸಿಬಿಐ ನನ್ನನೂ ತನಿಖೆ ನಡೆಸಿದ್ದಾರೆ. ಬ್ರೈನ್ ಮ್ಯಾಪಿಂಗ್ ಕೂಡ ಮಾಡಿದ್ದಾರೆ, ಇವತ್ತು ಮತ್ತೆ ಎಸ್‌ಐಟಿ ಕರೆದಿದ್ದಾರೆ. ನಾವು ಯಾವುದೇ ವಿಚಾರಣೆಗೂ ಸಿದ್ಧ ಎಂದು ಉದಯ್‌ ಕುಮಾರ್‌ ಜೈನ್‌ ಹೇಳಿದ್ದಾರೆ. ಇದನ್ನೂ ಓದಿ: ಕಾನ್‌ಸ್ಟೆಬಲ್‌, ಸಹೋದರ ಸೇರಿ 7 ವರ್ಷಗಳಿಂದ ಚಿಕ್ಕಮ್ಮನ ಮೇಲೆ ಅತ್ಯಾಚಾರ ಆರೋಪ

    ಸೌಜನ್ಯ ಮನೆ ಮೇಲೆ ಇಡಿ ದಾಳಿಯಾಗಲಿ
    ಸೌಜನ್ಯ ಸತ್ತು ಒಂದು ವರ್ಷದ ನಂತರ ನಮ್ಮ ಹೆಸರು ಸೇರಿಸುವ ಕುತಂತ್ರ ನಡೆಯಿತು. ಆದ್ರೆ ಲೋಕಲ್‌ ಪೊಲೀಸ್‌ ತನಿಖೆ ವೇಳೆ ಎಫ್‌ಐಆರ್‌ನಲ್ಲಿ ನನ್ನ ಹೆಸರೇ ಇರಲಿಲ್ಲ. ಗೌರ್ಮೆಂಟ್‌ ವಕೀಲನನ್ನ ಕ್ಯಾಚ್‌ ಮಾಡಿ ಕುತಂತ್ರ ನಡೆಸಿದ್ರು. ಈಗ ನಮ್ಮನ್ನೆಲ್ಲಾ ದಿಕ್ಕಾಪಾಲು ಮಾಡಿ ಸೌಜ್ಯ ತಾಯಿ ದೊಡ್ಡ ಮನೆಯಲ್ಲಿ ಆರಾಮಾಗಿದ್ದಾರೆ. ಅವರ ಮನೆ ಮೇಲೂ ಇಡಿ ರೇಡ್‌ ಆಗಬೇಕು ಅಂತ ಒತ್ತಾಯಿಸಿದ್ದಾರೆ.

  • ಕೆಲವರು ಉದ್ದೇಶಪೂರ್ವಕವಾಗಿ ಧರ್ಮಸ್ಥಳದ ತೇಜೋವಧೆ ಮಾಡುತ್ತಿರಬಹುದು: ದಿನೇಶ್‌ ಗುಂಡೂರಾವ್‌

    ಕೆಲವರು ಉದ್ದೇಶಪೂರ್ವಕವಾಗಿ ಧರ್ಮಸ್ಥಳದ ತೇಜೋವಧೆ ಮಾಡುತ್ತಿರಬಹುದು: ದಿನೇಶ್‌ ಗುಂಡೂರಾವ್‌

    – ಸೌಜನ್ಯ ಇರಲಿ, ಬೇರೆ ಅತ್ಯಾಚಾರ, ಹತ್ಯೆ ಪ್ರಕರಣಗಳಿರಲಿ ನ್ಯಾಯ ಸಿಕ್ಕೇ ಸಿಗುತ್ತೆ ಎಂದ ಸಚಿವ

    ಬೆಂಗಳೂರು: ಧರ್ಮಸ್ಥಳ ಶ್ರೀ ಮಂಜುನಾಥ ಇರುವ ಪುಣ್ಯ ಕ್ಷೇತ್ರ. ಕೆಲವರು ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡುತ್ತಿರಬಹುದು. ಒಟ್ಟಿನಲ್ಲಿ ಸೌಜನ್ಯ ಪ್ರಕರಣವಿರಲಿ (Soujanya Case) ಬೇರೆ ಅತ್ಯಾಚಾರ, ಹತ್ಯೆ ಪ್ರಕರಣಗಳಿರಲಿ ನ್ಯಾಯ ಸಿಕ್ಕಿಯೇ ಸಿಗುತ್ತದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ (Dinesh Gundu Rao) ಹೇಳಿದ್ದಾರೆ.

    ಧರ್ಮಸ್ಥಳದಲ್ಲಿ (Dharmasthala) ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿದ್ದಾರೆ. ಅನುಮಾನಾಸ್ಪದ ಸಾವುಗಳ ಬಗ್ಗೆ ಎಸ್ಐಟಿ ತನಿಖೆ ಆಗಬೇಕು ಅಂತ ಒತ್ತಡ ಇತ್ತು. ದಕ್ಷಿಣ ಕನ್ನಡ ಪೊಲೀಸರು ತನಿಕೆಗೆ ಸಿದ್ಧವಿದ್ದರು ಅವರ ಮೇಲೆ ನಮಗೂ ನಂಬಿಕೆ ಇತ್ತು. ಇದೀಗ ಸಿಎಂ ಹಾಗೂ ಗೃಹ ಸಚಿವರು ಎಸ್ಐಟಿ ರಚಿಸಿ ಆದೇಶ ಮಾಡಿದ್ದಾರೆ ನಿಜಾಂಶ ಹೊರಗೆ ಬರಬೇಕು ನೂರಾರು ಹೆಣ ಅಂತ ಹೇಳ್ತಿದ್ದಾರೆ ಇದರ ಸತ್ಯಾಂಶ ಹೊರಗೆ ಬರಬೇಕು ಅಂತ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಕೇಸ್‌ | ಎಸ್‍ಐಟಿ ತನಿಖೆಗೆ ಸೌಜನ್ಯ ಕೇಸ್‌ ಇಲ್ಲ: ಪರಮೇಶ್ವರ್‌

    ಅಲ್ಲದೇ ಸಾಕ್ಷಿದಾರ ಯಾರು? ಅವರ ಹಿನ್ನೆಲೆ ಏನು ಎಂಬುದರ ಹಿಂದೆ ಹೋಗಲು ಆಗುವುದಿಲ್ಲ. ಮೊದಲು ಹೆಣ ಹೂತು ಹಾಕಿದ್ದಾರೆ ಎನ್ನಲಾದ ಸ್ಥಳಕ್ಕೆ ಹೋಗಬೇಕು. ವಿಧಿವಿಜ್ಞಾನ ತನಿಖೆ ಆಗಬೇಕು ಇದೆಲ್ಲವನ್ನೂ ನೋಡಬೇಕು. ಯಾರೋ ಒಬ್ಬರ ಮೇಲೆ ಮಾಡಿದ್ದೀವಿ ಅಂತ ಹೇಳಲು ಆಗುವುದಿಲ್ಲ. ಕೇವಲ ಸೌಜನ್ಯ ಕೇಸ್ ಮಾತ್ರವಲ್ಲ, ಎಲ್ಲವನ್ನೂ ಕೂಲಂಕುಷವಾಗಿ ತನಿಖೆ ಮಾಡಬೇಕು. ಸಾಕ್ಷಿದಾರ ಠಾಣೆಗೆ ಬಂದು ಹೇಳಿಕೆ ಕೊಟ್ಟಾಗಲೇ ತನಿಖೆ ಮುಂದುವರಿಸಬಹುದಿತ್ತು. ಆದ್ರೆ ಎಸ್‌ಐಟಿ ಮಾಡಲೇಬೇಕು ಎನ್ನುವ ಒತ್ತಡವಿತ್ತು. ಅದರಂತೆ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ- ಎಸ್‍ಐಟಿ ರಚಿಸಿದ ಸರ್ಕಾರ

    ಇದರ ಹೊರತಾಗಿ ಧರ್ಮಸ್ಥಳ ಪುಣ್ಯಕ್ಷೇತ್ರ, ಯಾರೂ ಅದನ್ನ ಗುರಿಯಾಗಿಟ್ಟುಕೊಂಡು ತೇಜೋವಧೆ ಮಾಡಬಾರದು. ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಇರುವ ಕ್ಷೇತ್ರ, ಜೈನ ಸಮುದಾಯದವರೂ ಇರುವ ಕ್ಷೇತ್ರ ಹೀಗಾಗಿ ಕೆಲವರು ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡುತ್ತಿರಬಹುದು. ಆದ್ರೆ ಜನರ ನಂಬಿಕೆಗಳಿಗೆ ಧಕ್ಕೆ ತರುವಂತ, ತೇಜೋವಧೆ ಮಾಡುವ ಕೆಲಸ ಯಾರೂ ಮಾಡಬಾರದು ಎಂದು ಹೇಳಿದ್ದಾರೆ.

    ತನಿಖೆಯ ಮೇಲೆ ಯಾರೂ ಒತ್ತಡ ಹೇರಲು ಸಾಧ್ಯವಿಲ್ಲ, ತನಿಖೆಯಿಂದ ಯಾರೂ ಪ್ರಭಾವಿಗಳನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ. ಸೌಜನ್ಯ ಇರಲಿ ಬೇರೆ ಅತ್ಯಾಚಾರ, ಹತ್ಯೆ ಪ್ರಕರಣಗಳಿರಲಿ ನ್ಯಾಯ ಸಿಕ್ಕಿಯೇ ಸಿಗುತ್ತದೆ ಎಂದು ಅಭಯ ನೀಡಿದರು. ಇದನ್ನೂ ಓದಿ: ಪಂಚಮಸಾಲಿ ಶ್ರೀ ಆರೋಗ್ಯದಲ್ಲಿ ಚೇತರಿಕೆ – ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ನಾಯಕರು

  • ಧರ್ಮಸ್ಥಳದಲ್ಲಿ ಹೆಗ್ಗಡೆ ಶಾಂತವಾಗಿದ್ದಾರೆ ಅಂದ್ರೆ ಅದಕ್ಕೆ ಮಂಜುನಾಥ ಸ್ವಾಮಿ ಕಾರಣ: ಡಾ.ವೀರೇಂದ್ರ ಹೆಗ್ಗಡೆ

    ಧರ್ಮಸ್ಥಳದಲ್ಲಿ ಹೆಗ್ಗಡೆ ಶಾಂತವಾಗಿದ್ದಾರೆ ಅಂದ್ರೆ ಅದಕ್ಕೆ ಮಂಜುನಾಥ ಸ್ವಾಮಿ ಕಾರಣ: ಡಾ.ವೀರೇಂದ್ರ ಹೆಗ್ಗಡೆ

    ಮಂಗಳೂರು: ಧರ್ಮಸ್ಥಳದಲ್ಲಿ ಹೆಗ್ಗಡೆ ಶಾಂತವಾಗಿದ್ದಾರೆ ಅಂದ್ರೆ ಅದಕ್ಕೆ ಮಂಜುನಾಥ ಸ್ವಾಮಿ, ಚಂದ್ರನಾಥ ಸ್ವಾಮಿ ಕಾರಣ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ (Dr.Veerendra Heggade) ಅವರು ಹೇಳಿದರು.

    ಧರ್ಮಸ್ಥಳದಲ್ಲಿ (Dharmasthala) ನಡೆದ ಧರ್ಮ ಸಂರಕ್ಷಣಾ ಯಾತ್ರೆ ವೇಳೆ ಮಾತನಾಡಿದ ಅವರು, ಭಕ್ತರು ಧರ್ಮ ಸೈನಿಕರು. ಧರ್ಮಸ್ಥಳದಲ್ಲಿ ಹೆಗ್ಗಡೆ ಶಾಂತವಾಗಿದ್ದಾರೆ ಎಂದರೆ ಅದಕ್ಕೆ ಮಂಜುನಾಥ ಸ್ವಾಮಿ, ಚಂದ್ರನಾಥ ಸ್ವಾಮಿ ಕಾರಣ. ದುಷ್ಟ ಶಕ್ತಿಗಳು ವಿಜೃಂಭಿಸುತ್ತಿವೆ. ನೀವೇ ಶಿಷ್ಟ ರಕ್ಷಣೆಯನ್ನ ಮಾಡಬೇಕು ಭಕ್ತರಿಗೆ ತಿಳಿಸಿದರು. ಇದನ್ನೂ ಓದಿ: ಪವರ್ ಶೇರಿಂಗ್ ಬಗ್ಗೆ ಪಕ್ಷ ತೀರ್ಮಾನಿಸುತ್ತೆ: ಕೃಷ್ಣ ಭೈರೇಗೌಡ

    ಕ್ಷೇತ್ರದ ಕಾರ್ಯವನ್ನು ಎಲ್ಲಾ ಜನರು ಮೆಚ್ಚಿದ್ದಾರೆ. ಇಲ್ಲಿಗೆ ಇಂದು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದೀರಿ. ನಮ್ಮ ವಾಹನವನ್ನ ಅಪೇಕ್ಷಿಸದೆ ನಿಮ್ಮ ಪರವಾಗಿ ಇದ್ದೇವೆ ಎಂದು ಬೆಂಬಲ ನೀಡಿದ್ದೀರಿ. ದೇಶವನ್ನ ಹಾಳು ಮಾಡಬೇಕಾದರೆ, ಮೊದಲು ಸಂಸ್ಕೃತಿಯನ್ನ ನಾಶ ಮಾಡುತ್ತಾರೆ. ನಮ್ಮ ಕ್ಷೇತ್ರಕ್ಕೆ ಬಂದ ಅಪಾಯ ಬೇರೆ ಕ್ಷೇತ್ರಗಳಿಗೂ ಬರಬಹುದು ಎಂದು ಕಳವಳ ವ್ಯಕ್ತಪಡಿಸಿದರು.

    ವಿಷವನ್ನು ಸೇವಿಸುವ ಶಕ್ತಿ ಎಲ್ಲರಿಗೂ ಬರುವುದಿಲ್ಲ. ಇದು ದೇವರ ಪರೀಕ್ಷೆ. ಮಳೆ ಬರುತ್ತಿದೆ, ಆದರೆ ಯಾರು ಸಹ ಓಡುತ್ತಿಲ್ಲ, ನಿಂತಿದ್ದೀರಿ. ವೈಯಕ್ತಿಕವಾದ ನಿಂದನೆಯಿಂದ ಸಂಸ್ಕೃತಿ ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ನೀವೆಲ್ಲರೂ ಸ್ವಾಸ್ಥ್ಯ ಸಂಕಲ್ಪವನ್ನ ಮಾಡಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಬಿಜೆಪಿಯವರಿಗೆ ಬೇರೆಯವರ ಕೆರೆಯಲ್ಲಿ ಮೀನು ಹಿಡಿಯುವುದೇ ಕೆಲಸ: ವೀರಪ್ಪ ಮೊಯ್ಲಿ

    ಸೌಜನ್ಯ ಪ್ರಕರಣದ ಆರೋಪಗಳ ಬಗ್ಗೆ ಮೌನ ಮುರಿದ ವೀರೇಂದ್ರ ಹೆಗ್ಗಡೆ ಅವರು, ಯಾವುದೇ ರೀತಿಯ ತನಿಖೆಯಾಗಲಿ. ನಾವೂ ಸಿದ್ಧ. ದಾಖಲೆಯಿಲ್ಲದೆ ಆರೋಪ ಮಾಡುತ್ತಿದ್ದಾರೆ. ನಿಮ್ಮ ದೀಕ್ಷೆಯಿಂದ ಈ ಎಲ್ಲಾ ಕಷ್ಟಗಳೂ ದೂರವಾಗಲಿ. ಧರ್ಮಸ್ಥಳಕ್ಕೆ ಆಪತ್ತು ಬಂದಾಗ ನೀವು ಕೈಗೊಂಡ ಈ ಪ್ರಾರ್ಥನೆಯನ್ನ ಸ್ವಾಮಿಯ ಪಾದಕ್ಕೆ ಅರ್ಪಿಸುತ್ತೇನೆ ಎಂದು ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅತ್ಯಾಚಾರ, ಕೊಲೆ ಪ್ರಕರಣ- ಸೌಜನ್ಯ ತಾಯಿ, ಆರೋಪ ಹೊತ್ತವರೂ ಅಣ್ಣಪ್ಪನ ಬೆಟ್ಟಕ್ಕೆ ಭೇಟಿ, ಪ್ರಾರ್ಥನೆ

    ಅತ್ಯಾಚಾರ, ಕೊಲೆ ಪ್ರಕರಣ- ಸೌಜನ್ಯ ತಾಯಿ, ಆರೋಪ ಹೊತ್ತವರೂ ಅಣ್ಣಪ್ಪನ ಬೆಟ್ಟಕ್ಕೆ ಭೇಟಿ, ಪ್ರಾರ್ಥನೆ

    ಮಂಗಳೂರು: ಹನ್ನೊಂದು ವರ್ಷಗಳ ಬಳಿಕ ಮತ್ತೆ ಮುನ್ನೆಲೆಗೆ ಬಂದ ಧರ್ಮಸ್ಥಳದ ಸೌಜನ್ಯಾ (Soujanya Murder Case) ಅತ್ಯಾಚಾರ, ಕೊಲೆ ಪ್ರಕರಣ ಇದೀಗ ಮುಂಜುನಾಥನ ಸನ್ನಿಧಿ ಬಳಿಯಲ್ಲಿರುವ ಅಣ್ಣಪ್ಪನ ಬೆಟ್ಟದವರೆಗೆ (Annappa Swamy Betta) ಹೋಗಿದೆ.

    ಹೌದು. ಇಂದು ಸೌಜನ್ಯ ತಾಯಿ (Soujanya Mother Kusumavathi) ಹಾಗೂ ಆರೋಪ ಹೊತ್ತವರು ಕೂಡ ಅಣ್ಣಪ್ಪನ ಬೆಟ್ಟಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಮೊದಲು ನೇತ್ರಾವತಿಯಿಂದ ಧರ್ಮಸ್ಥಳದವರೆಗೆ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗಳ ಕಾರ್ಯಕರ್ತರು ಪಾದಯಾತ್ರೆ ನಡೆಸಿದ್ದಾರೆ. ಈ ಪಾದಯಾತ್ರೆಯಲ್ಲಿ ನೇತ್ರಾವತಿ ಸ್ನಾನಘಟ್ಟದ ಬಳಿಯಿಂದ ಸೌಜನ್ಯ ತಾಯಿ ಕುಸುಮಾವತಿ ಕೂಡ ಸೇರಿಕೊಂಡಿದ್ದಾರೆ. ನೇತ್ರಾವತಿಯಿಂದ ಧರ್ಮಸ್ಥಳದವರೆಗೆ ಪಾದಯಾತ್ರೆ ಮಾಡಿ, ನಂತರ ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗಕ್ಕೆ ತೆರಳಿದೆ.

    ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಕಣ್ಣೀರಿಟ್ಟ ಸೌಜನ್ಯ ತಾಯಿ ಕುಸುಮಾವತಿ, ಅಣ್ಣಪ್ಪನಿಗೆ ನಾಣ್ಯ ಕಾಣಿಕೆ ಹಾಕಿ ಪ್ರಾರ್ಥನೆ ಸಲ್ಲಿಸಿದರು. ವಿಹಿಂಪ, ಬಜರಂಗಳ ಮುಖಂಡರ ಜೊತೆಗೂಡಿ ನೈಜ ಆರೋಪಿಗಳ ಪತ್ತೆ ಮಾಡಿಕೊಡುವಂತೆ ಅಣ್ಣಪ್ಪನಲ್ಲಿ ಬೇಡಿಕೊಂಡರು. ಕುಸುಮಾವತಿ ಪ್ರಾರ್ಥನೆಯ ಬಳಿಕ ಸೌಜನ್ಯ ತಾಯಿ ಆರೋಪಿಸಿದವರು ಕೂಡ ಪ್ರಾರ್ಥನೆ ಸಲ್ಲಿಸಲು ಬಂದಿದ್ದಾರೆ. ಮಲ್ಲಿಕ್ ಜೈನ್, ಉದಯ್ ಜೈನ್ ಹಾಗೂ ಧೀರಜ್ ಜೈನ್ ಕೂಡ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಬಂದು, ಈ ಪ್ರಕರಣದಲ್ಲಿ ನಮ್ಮ ಯಾವುದೇ ಪಾತ್ರ ಇಲ್ಲ. ನಮ್ಮ ಹೆಸರನ್ನು ಅನಾವಶ್ಯಕವಾಗಿ ಎಳೆದು ತರಲಾಗಿದೆ ಎಂದು ಕೈಮುಗಿದಿದ್ದಾರೆ. ಇದನ್ನೂ ಓದಿ: ಸೌಜನ್ಯ ಪ್ರಕರಣದ ರಹಸ್ಯಗಳನ್ನು ಬಿಚ್ಚಿಟ್ರೆ ನನ್ನನ್ನೂ ಸಾಯಿಸ್ಬೋದು: ವಸಂತ ಬಂಗೇರ

    ಒಟ್ಟಿನಲ್ಲಿ ಸಾವಿರಾರು ಜನರ ಮುಂಭಾಗ ಇಂದು ಎರಡೂ ಕಡೆಯವರು ಪ್ರಾರ್ಥನೆ ಸಲ್ಲಿಸಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಧರ್ಮಸ್ಥಳ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿತ್ತು. ಸೌಜನ್ಯ ತಾಯಿ ಅಣ್ಣಪ್ಪ ಸ್ವಾಮಿ ಬೆಟ್ಟದ ಬಳಿ ಬರುವಾಗ ಗೊಂದಲ ಆಗದಂತೆ ಕ್ರಮವಹಿಸಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]