Tag: Soubhagya Basavarajan

  • ಕಾಂಗ್ರೆಸ್ ಟಿಕೆಟ್ ಹರಾಜಾಗಿದ್ದು, ಚುನಾವಣೆ ಮಾಡುವಷ್ಟೇ ಹಣ ನೀಡಿದ್ದಾರೆ – ಎಸ್.ಕೆ ಬಸವರಾಜನ್ ಕಿಡಿ

    ಕಾಂಗ್ರೆಸ್ ಟಿಕೆಟ್ ಹರಾಜಾಗಿದ್ದು, ಚುನಾವಣೆ ಮಾಡುವಷ್ಟೇ ಹಣ ನೀಡಿದ್ದಾರೆ – ಎಸ್.ಕೆ ಬಸವರಾಜನ್ ಕಿಡಿ

    ಚಿತ್ರದುರ್ಗ: ಕಾಂಗ್ರೆಸ್ (Congress) ಟಿಕೆಟ್ ಹರಾಜಾಗಿದೆ. ನಾವೇನು ಹರಾಜು ನೋಡಿಲ್ಲ. ಆದರೆ ಚುನಾವಣೆ (Election) ಮಾಡುವಷ್ಟೇ ಹಣ ನೀಡಿದ್ದಾರೆ ಎಂದು ಕೆಪಿಸಿಸಿಯಲ್ಲಿ (KPCC) ಹೇಳುತ್ತಾರೆ. ಎಷ್ಟು ಹಣವೆಂಬುದು ನಮಗೆ ಖಚಿತವಾಗಿ ಗೊತ್ತಿಲ್ಲ. ನಾವು ಆ ಹಣ ಎಣಿಸಿದವರಲ್ಲ ಎಂದು ಮಾಜಿ ಶಾಸಕ ಎಸ್.ಕೆ.ಬಸವರಾಜನ್ (S.K.Basavarajan) ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.

    ಚಿತ್ರದುರ್ಗದಲ್ಲಿ (Chitradurga) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಪತ್ನಿ ಸೌಭಾಗ್ಯರನ್ನು ಕಣಕ್ಕಿಳಿಸುವುದಾಗಿ ಘೋಷಣೆ ಮಾಡಿದರು. ರಘು ಆಚಾರ್ ನಮ್ಮ ಮನೆಗೆ ಬಂದು ಜಿಲ್ಲಾ ಜೆಡಿಎಸ್ (JDS) ಉಸ್ತುವಾರಿ ನೀಡಿದ್ದಾರೆಂದು ಹೇಳಿಕೊಂಡರು. ಅಲ್ಲದೇ ಹಿರಿಯೂರು ಹೊಸದುರ್ಗದಿಂದ ಸ್ಪರ್ಧಿಸುವಂತೆ ಸಲಹೆ ನೀಡಿದರು. ನಾವು ಚಿತ್ರದುರ್ಗದಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿರ್ಧಾರ ಮಾಡಿದ್ದು, ಪಕ್ಷ ಹಾಗೂ ಎಲ್ಲಾ ವರ್ಗದ ಜನರ ಬೆಂಬಲವಿದೆ ಎಂದರು. ಇದನ್ನು ಓದಿ: ಈ ಬಾರಿ 20ಕ್ಕೂ ಹೆಚ್ಚು ಹಾಲಿ ಬಿಜೆಪಿ ಶಾಸಕರಿಗೆ ಕೊಕ್‌? 

    ಈ ಕುರಿತು ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ (Soubhagya Basavarajan), ನಾನು ಯಾವುದೇ ಚುನಾವಣೆಗಳಲ್ಲಿ ಸೋಲು ಕಂಡಿಲ್ಲ. ಗ್ರಾ.ಪಂ, ತಾ.ಪಂ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದಿದ್ದೇನೆ. ಗ್ರಾ.ಪಂ ಉಪಾಧ್ಯಕ್ಷೆ, ತಾ.ಪಂ. ಅಧ್ಯಕ್ಷೆ ಹಾಗೂ 3 ಬಾರಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿದ್ದೇನೆ. ನಾನು ಯಾವತ್ತೂ ಸೋತಿಲ್ಲ ಎಂಬುದು ಬೆಂಬಲಿಗರ ಅಭಿಪ್ರಾಯ. ಕೆಲವು ಸಂದರ್ಭದಲ್ಲಿ ಊರು ಖಾಲಿ ಮಾಡುತ್ತಾರೆ ಎಂದು ಕೆಲವರು ಭಾವಿಸಿದ್ದರು. ಇಂತಹ ಸಂಕಷ್ಟದ ಸಂದರ್ಭದಲ್ಲೂ ಬೆಂಬಲಿಗರು ನನ್ನ ಬೆನ್ನಿಗೆ ನಿಂತಿದ್ದರು. ಬೆಂಬಲಿಗರಿಗಾಗಿ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದರು. ಇದನ್ನು ಓದಿ: ಮೋದಿ ಕಾಡು ಪ್ರಾಣಿಗಳನ್ನು ನೋಡಿದರೆ ಜನ ವೋಟು ಒತ್ತುತ್ತಾರಾ: ಹೆಚ್ಡಿಕೆ ವ್ಯಂಗ್ಯ 

    ಶೇ.50ರಷ್ಟು ಮಹಿಳಾ ಮತದಾರರು ಇದ್ದಾರೆ. ನಾನು ಮಹಿಳಾ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿದ್ದೇನೆ. ಪ್ರೀತಿ ವಿಶ್ವಾಸದ ಮುಂದೆ ಹಣ ಲೆಕ್ಕಕ್ಕೆ ಬರುವುದಿಲ್ಲ. ದುಡ್ಡು ಖರ್ಚು ಮಾಡದೆ ಗೆದ್ದು ಬಿಡುತ್ತೇವೆಂಬ ಭ್ರಮೆಯಿಲ್ಲ. ಎಲ್ಲರಂತೆಯೆ ನಾವು ಸಹ ರಾಜಕಾರಣ (Politics) ಮಾಡುತ್ತೇವೆ. ಎಲ್ಲದಕ್ಕೂ ಸಿದ್ಧವಾಗಿಯೇ ನಾವು ಸ್ಪರ್ಧೆಗೆ ಬಂದಿದ್ದೇವೆ. ಜನರು ನನ್ನನ್ನು ಮನೆಮಗಳಂತೆ ಕಂಡಿದ್ದು, ಆಶೀರ್ವದಿಸುವ ನಂಬಿಕೆಯಿದೆ ಎಂದು ಹೇಳಿದರು. ಇದನ್ನು ಓದಿ: ಗದಗ ಜಿಲ್ಲೆಯಲ್ಲಿ ಮಾಜಿ, ಹಾಲಿ ಶಾಸಕರ ಕೊನೆಯ ಕಸರತ್ತು

  • ಪ್ರತಿಸ್ಪರ್ಧಿಗಳ ಕಾಲಿಗೆ ಬಿದ್ದು ಗೃಹಪ್ರವೇಶಕ್ಕೆ ಆಮಂತ್ರಣ ನೀಡಿದ ರಘು ಆಚಾರ್

    ಪ್ರತಿಸ್ಪರ್ಧಿಗಳ ಕಾಲಿಗೆ ಬಿದ್ದು ಗೃಹಪ್ರವೇಶಕ್ಕೆ ಆಮಂತ್ರಣ ನೀಡಿದ ರಘು ಆಚಾರ್

    ಚಿತ್ರದುರ್ಗ: ಕಾಂಗ್ರೆಸ್ (Congress) ಮಾಜಿ ಎಂಎಲ್‌ಸಿ ರಘು ಆಚಾರ್ (Raghu Achar) ನೂತನ ಗೃಹ ಪ್ರವೇಶದ ಹಿನ್ನೆಲೆಯಲ್ಲಿ ಚಿತ್ರದುರ್ಗದ (Chitradurga) ಜಿಜೆಪಿ (BJP) ಶಾಸಕ ಜಿಹೆಚ್ ತಿಪ್ಪಾರೆಡ್ಡಿಯವರ (GH Thippareddy) ಕಾಲು ಮುಗಿದು ಗೃಹಪ್ರವೇಶಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಆದರೆ ಕೈ ಕಾರ್ಯಕರ್ತರು ಆಚಾರ್ ನಡೆ ವಿರುದ್ಧ ಕಿಡಿ ಕಾರಿದ್ದಾರೆ.

    ಮುಂಬರುವ 2023ರ ವಿಧಾನಸಭಾ ಚುನಾವಣೆಯ ಪ್ರತಿಸ್ಪರ್ಧಿಗಳೆಂದು ಬಿಂಬಿತವಾಗಿರುವ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಹಾಗೂ ರಘು ಆಚಾರ್ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ತಿಪ್ಪಾರೆಡ್ಡಿ ಮನೆಗೆ ಭೇಟಿ ನೀಡಿರುವ ಆಚಾರ್, ಆಹ್ವಾನ ಪತ್ರಿಕೆ ಕೊಟ್ಟು, ಶಾಸಕ ತಿಪ್ಪಾರೆಡ್ಡಿ ಕಾಲಿಗೆ ಬಿದ್ದಿರುವುದು ಹೊಸ ಚರ್ಚೆಗೆ ದಾರಿಯಾಗಿದೆ.

    ಬಿಜೆಪಿ ಶಾಸಕರಲ್ಲದೇ, ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ಎಸ್.ಕೆ ಬಸವರಾಜನ್ ಮನೆಗೂ ಭೇಟಿ ನೀಡಿರುವ ಆಚಾರ್ ಅವರು, ಬಸವರಾಜನ್ ಪತ್ನಿ ಹಾಗೂ ಮಾಜಿ ಜಿ.ಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ (Soubhagya Basavarajan) ಕಾಲು ಮುಗಿದು ಆಹ್ವಾನ ಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ: ಜೆ.ಪಿ ನಡ್ಡಾ ಭೇಟಿಯಾದ ಸುಮಲತಾ- ಬಹುತೇಕ ಬಿಜೆಪಿ ಸೇರ್ಪಡೆ ಖಚಿತ

    ಇನ್ನೇನು ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಇಂತಹ ಸಂದರ್ಭದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪ್ರತಿಸ್ಪರ್ಧಿಗಳ ಕಾಲು ಮುಗಿದು ಆಹ್ವಾನಿಸಿರುವ ಮಾಜಿ ಎಂಎಲ್‌ಸಿ ರಘು ಆಚಾರ್ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ. ಹೀಗಾಗಿ 2023ರ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಜ್ಜಾಗಿರುವ ಆಚಾರ್ ನಡೆ ಬಗ್ಗೆ ಭಾರೀ ಅನುಮಾನ ಮೂಡಿಸಿದೆ.

    ಬಿಜೆಪಿಯಿಂದ ಸ್ಪರ್ಧಿಸಲಿರುವ ಶಾಸಕ ತಿಪ್ಪಾರೆಡ್ಡಿ ಹಾಗೂ ಕಾಂಗ್ರೆಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಬಸವರಾಜನ್ ಪತ್ನಿ ಕಾಲಿಗೆ ಬಿದ್ದಿರುವ ಆಚಾರ್ ನಡೆ ಬಗ್ಗೆ ಕೋಟೆನಾಡಲ್ಲಿ ಹೊಸ ಚರ್ಚೆ ಶುರುವಾಗಿದೆ. ಇದು ರಾಜಿ ಸಂಧಾನದ ಯತ್ನವೋ ಅಥವಾ ರಾಜಕೀಯ ಬೇರೆ, ವೈಯಕ್ತಿಕ ಸ್ನೇಹ ಸಂಬಂಧದ ಬಾವವೇ ಬೇರೆ ಎಂದು ಸಂದೇಶ ನೀಡುವ ಯತ್ನವೋ ಎಂಬ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಏಕವಚನದಲ್ಲಿಯೇ ವಾಗ್ದಾಳಿ ನಡೆಸಿ ಹೆಚ್‍ಡಿಕೆಗೆ ಶಿವನಗೌಡ ಸವಾಲ್