Tag: sorutihudu mane maalige

  • ಆಲ್ ಓಕೆ ಕಂಠದಿಂದ ಕೇಳಿ ಶರೀಫಜ್ಜನ ‘ಸೋರುತಿವುದು ಮನೆಯ ಮಾಳಿಗಿ’ ಹಾಡು

    ಆಲ್ ಓಕೆ ಕಂಠದಿಂದ ಕೇಳಿ ಶರೀಫಜ್ಜನ ‘ಸೋರುತಿವುದು ಮನೆಯ ಮಾಳಿಗಿ’ ಹಾಡು

    ಗಾಗಲೇ ಶಿಶುನಾಳ ಶರೀಫ ಅವರ ತತ್ವಪದಗಳನ್ನು ಸಿ.ಅಶ್ವತ್ಥ್ ಸೇರಿದಂತೆ ಹಲವು ಗಾಯಕರಿಂದ ಕೇಳಿದ್ದೀರಿ. ರಘು ದೀಕ್ಷಿತ್ ಕೂಡ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಅವರ ಗೀತೆಗಳನ್ನು ಹಾಡಿದ್ದಾರೆ. ಇದೀಗ ಕನ್ನಡದ ರಾಪರ್ ಅಲೋಕ್ ಅಲಿಯಾಸ್ ಆಲ್ ಓಕೆ ತಮ್ಮದೇ ಆದ ಸ್ಟೈಲ್‌ನಲ್ಲಿ ʻಸೋರುತಿಹುದು ಮನೆಯ ಮಾಳಿಗಿʼ ಗೀತೆಯನ್ನು ಹಾಡಿದ್ದಾರೆ.

    ಕನ್ನಡದ ಮಟ್ಟಿಗೆ ಹೊಸತನ, ವಿಶೇಷತೆಯಿಂದ ಕೂಡಿರುವ ’ಸೋರುತಿಹುದು ಮನೆಯ ಮಾಳಿಗಿ’ ಆಲ್ಬಂ ಹಾಡಿನಲ್ಲಿ ಅಜ್ಞಾನದ ಕುರಿತು ಪ್ರತಿಯೊಬ್ಬರಿಗೂ ಪ್ರೇರಣೆ ತುಂಬುವಂತಹ ಸಾಹಿತ್ಯವಿದೆ. ಈ ಹಾಡಿಗೆ ಆಲ್ ಓಕೆ ಸಾಹಿತ್ಯ, ಸಂಗೀತ, ನಿರ್ಮಾಣ-ನಟನೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಬ್ಲಾಕ್ ಅಂಡ್ ವೈಟ್ ಥೀಮ್‌ನಲ್ಲಿ ಮೂರು ಶೇಡ್‌ನಲ್ಲಿ ಕಾಣಿಸಿಕೊಂಡಿರುವ ಆಲ್ ಓಕೆ ಕಾಸ್ಟ್ಯೂಮ್ ಸ್ಟೈಲ್, ಲೋಕೇಷನ್, ಮೇಕಿಂಗ್ ಎಲ್ಲವೂ ಅದ್ಧೂರಿಯಾಗಿ ಮೂಡಿ ಬಂದಿದೆ.  ಇದನ್ನೂ ಓದಿ: ಸಿನಿಮಾ ನೋಡಲು 5 ಹೆಚ್ಚುವರೆ ಅಂಕ ಮತ್ತು 1 ದಿನ ರಜೆ ಘೋಷಿಸಿದ ಪ್ರಿನ್ಸಿಪಾಲ್ : ಪಾಲಕರು ಏನ್ ಹೇಳ್ತಾರೆ?

    ಸಂತ ಶಿಶುನಾಳ ಶರೀಫರ ಹಾಡಿನಿಂದ ಸ್ಫೂರ್ತಿ ಪಡೆದು ತಯಾರಿಸುವ ಹಾಡಿಗೆ ರಾಜಾ ರಾಮ್ ರಾಜೇಂದ್ರನ್ ನಿರ್ದೇಶನ ಹಾಗೂ ಛಾಯಾಗ್ರಾಹಣ, ಜೋಲ್ಸನ್ ಪಣಿಕರ್ ಸಂಕಲನ ಹಾಗೂ ಗ್ರಾಫಿಕ್ ಜವಾಬ್ದಾರಿ ನಿರ್ವಹಿಸಿದ್ದಾರೆ. ಕಳೆದ 19 ವರ್ಷಗಳಿಂದ ಕನ್ನಡ ರ‍್ಯಾಪ್ ದುನಿಯಾದಲ್ಲಿ ತಮ್ಮದೇ ಸ್ಟೈಲ್ ಕ್ರಿಯೇಟ್ ಮಾಡಿರುವ ಆಲ್ ಓಕೆ ಈಗ ಜನಪದ ಸಾಹಿತ್ಯದ ಉಳಿವಿಗಾಗಿ ಹೊಸ ಪ್ರಯೋಗ ಮಾಡಿದ್ದು, ಈ ವಿಭಿನ್ನ ಹಾಡು ಪ್ರತಿಯೊಬ್ಬರಿಗೂ ಇಷ್ಟವಾಗುವುದರಲ್ಲಿ ಯಾವುದೇ ಸಂದೇಹ ಬೇಡ.

    Live Tv