Tag: sorry

  • ನಟಿ ತ್ರಿಷಾಗೆ ಕೊನೆಗೂ ಕ್ಷಮೆ ಕೇಳಿದ ಮನ್ಸೂರ್ ಅಲಿ ಖಾನ್

    ನಟಿ ತ್ರಿಷಾಗೆ ಕೊನೆಗೂ ಕ್ಷಮೆ ಕೇಳಿದ ಮನ್ಸೂರ್ ಅಲಿ ಖಾನ್

    ಖ್ಯಾತ ನಟಿ ತ್ರಿಷಾಗೆ ಮಾನಹಾನಿ ಆಗುವಂತಹ ಹೇಳಿಕೆ ನೀಡಿದ್ದ ಹಿರಿಯ ನಟ ಮನ್ಸೂರ್ ಅಲಿ ಖಾನ್ ಕೊನೆಗೂ ಕ್ಷಮೆ ಕೇಳಿದ್ದಾರೆ. ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲು ಏರುತ್ತಿದ್ದಂತಯೆ ಎಚ್ಚೆತ್ತುಕೊಂಡ ಮನ್ಸೂರ್, ತನ್ನಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿದ್ದಾರೆ. ನಿಮ್ಮ ವಿವಾಹದ ದಿನದಂದು ಮಾಂಗಲ್ಯವನ್ನು ಮುಟ್ಟಿ ಆಶೀರ್ವದಿಸುವಂತಹ ಅವಕಾಶ ನನಗೆ ಬರಲಿ ಎಂದು ಅವರು ಹೇಳಿದ್ದಾರೆ.

    ಮೊನ್ನೆಯಷ್ಟೇ ತ್ರಿಷಾಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದ ಮನ್ಸೂರ್ ಅಲಿ ಖಾನ್ ಮೇಲೆ ಲೈಂಗಿಕ ಕಿರುಕುಳ ದೂರು ದಾಖಲಾಗಿತ್ತು. ಚೆನ್ನೈನ ಥೌ‍ಸಂಡ್ ಲೈಟ್ಸ್ ಆಲ್ ವುಮೆನ್ ಪೊಲೀಸ್ ಠಾಣೆಗೆ ಬಂದು ಹಾಜರಾಗುವಂತೆ ನಟನಿಗೆ ನೋಟಿಸ್ ನೀಡಲಾಗಿತ್ತು. ಅನಾರೋಗ್ಯದ ನೆಪವೊಡ್ಡಿ ಬರಲು ಆಗುವುದಿಲ್ಲ ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದ. ಜೊತೆಗೆ ಜಾಮೀನು ಅರ್ಜಿಯನ್ನೂ (Court) ಸಲ್ಲಿಸಿದ್ದ. ಆದರೆ, ಡಿಢೀರ್ ಅಂತ ಮನಸ್ಸು ಬದಲಾಯಿಸಿ ಪೊಲೀಸ್ ಠಾಣೆಗೆ ಹಾಜರಾಗಿದ್ದ.

    ಇತ್ತ ಜಾಮೀನು ಅರ್ಜಿಯಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ನಿರೀಕ್ಷೆ ಜಾಮೀನು (Bail) ಸ್ವೀಕೃತವಾಗಿಲ್ಲ. ಹಾಗಾಗಿ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ. ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಸೆಷನ್ಸ್ ನ್ಯಾಯಾಲಯ ಗರಂ ಆಗಿದೆ ಎಂದು ವರದಿ ಆಗಿತ್ತು.

    ಮನ್ಸೂರ್ ಅಲಿ ಖಾನ್ (Mansoor Ali Khan) ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ತಮಿಳು ಚಿತ್ರೋದ್ಯಮದಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ. ಲಿಯೋ ಸಿನಿಮಾದಲ್ಲಿ ನಾಯಕಿ ತ್ರಿಷಾ (Trisha) ಅವರನ್ನು ರೇಪ್ (Rape) ಮಾಡುವಂತಹ ಸನ್ನಿವೇಶ ಇದೆ ಅಂದುಕೊಂಡಿದೆ. ಆದರೆ, ಇರಲಿಲ್ಲ. ಇದ್ದರೆ ಅನಾಮತ್ತಾಗಿ ಎತ್ತಿಕೊಂಡು ಹೋಗಿ ಬೆಡ್ ಮೇಲೆ ಬೀಸಾಕುತ್ತಿದ್ದೆ. ಈ ಹಿಂದೆ ಖುಷ್ಬೂ ಸೇರಿದಂತೆ ಹಲವರನ್ನು ಹಾಗೆಯೇ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದರು.

    ತ್ರಿಷಾ ಬಗೆಗಿನ ಮತ್ತು ಒಟ್ಟಾರೆ ನಟಿಯರ ಬಗ್ಗೆ ಆಡಿದ್ದ ಈ ಮಾತು ಭಾರೀ ವಿವಾದಕ್ಕೆ ಕಾರಣವಾಗಿತ್ತು. ತ್ರಿಷಾ ಸೇರಿದಂತೆ ಹಲವರು ನಟನೆ ನಡೆಯನ್ನು ಖಂಡಿಸಿದ್ದರು. ನಟನ ವ್ಯಕ್ತಿತ್ವವನ್ನು ಅವನ ಮಾತು ತೋರಿಸುತ್ತಿದೆ ಎಂದು ರಿಯ್ಯಾಕ್ಟ್ ಮಾಡಿದ್ದರು. ಜೊತೆಗೆ ಲಿಯೋ ಸಿನಿಮಾದ ನಿರ್ದೇಶಕರು ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದರು. ಮತ್ತೆ ಆತನೊಂದಿಗೆ ನಾನು ನಟಿಸುವುದಿಲ್ಲ ಎಂದು ತ್ರಿಷಾ ಹೇಳಿಕೊಂಡಿದ್ದರು.

     

    ಇದೀಗ ಖಷ್ಬೂ (Khushboo) ಈ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಮನ್ಸೂರ್ ಅಲಿ ಖಾನ್ ನಂತಹ ಕೊಳಕು ಮನಸ್ಥಿತಿಯವರಿಗೆ ಕಾನೂನು ಮೂಲಕ ಪಾಠ ಕಲಿಸಬೇಕು. ಇಲ್ಲದಿದ್ದರೆ ಇಂತಹ ಗಂಡಸರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಮಾತನಾಡಿದ್ದಾರೆ. ಮತ್ತು ತಾವು ಕಾನೂನು ಮೂಲಕವೇ ಉತ್ತರಿಸುವುದಾಗಿ ತಿಳಿಸಿದ್ದರು. ಇದೀಗ ಮನ್ಸೂರ್ ಕಾನೂನು ಕುಣಿಕೆಯಲ್ಲಿ ತೂಗಾಡುತ್ತಿದ್ದಾರೆ. ಈ ಮಧ್ಯೆ ಅವರು ಕ್ಷಮೆ ಕೇಳುವ ಮೂಲಕ ಘಟನೆಯನ್ನು ತಿಳಿಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

  • ಅಭಿಮಾನಿಗೆ ಕಪಾಳಮೋಕ್ಷ: ಕ್ಷಮೆ ಕೇಳಿದ ನಟ ನಾನಾ ಪಾಟೇಕರ್

    ಅಭಿಮಾನಿಗೆ ಕಪಾಳಮೋಕ್ಷ: ಕ್ಷಮೆ ಕೇಳಿದ ನಟ ನಾನಾ ಪಾಟೇಕರ್

    ಸೆಲ್ಫಿ ಕೇಳಲು ಬಂದ ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ದ ನಟ ನಾನಾ ಪಾಟೇಕರ್ (Nana Patekar) ಕೊನೆಗೂ ಕ್ಷಮೆ (Apologized) ಕೇಳಿದ್ದಾರೆ. ಶೂಟಿಂಗ್ ಸಮಯದಲ್ಲಿ ಫೋಟೋಗಾಗಿ ಅಭಿಮಾನಿಯೊಬ್ಬ ಪಾಟೇಕರ್ ಬಳಿ ಬಂದಿದ್ದ, ಅಭಿಮಾನಿಗೆ ಫೋಟೋ ಕೊಡುವ ಬದಲು, ಕಪಾಳಕ್ಕೆ ಬಾರಿಸಿದ್ದರು ನಾನಾ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    ನಾನಾ ಪಾಟೇಕರ್ ಅಭಿಮಾನಿಯ ಕೆನ್ನೆಗೆ ಹೊಡೆದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಆ ವಿಡಿಯೋ ವೈರಲ್ ಕೂಡ ಆಗಿತ್ತು. ಅನೇಕರು ನಾನಾ ನಡೆಯನ್ನು ಖಂಡಿಸಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅದು ಸಿನಿಮಾದ ದೃಶ್ಯ ಎನ್ನುವಂತೆ ಬಿಂಬಿಸಲಾಗಿತ್ತು. ಆದರೆ, ಅದು ಸಿನಿಮಾದ ವಿಡಿಯೋ ಅಲ್ಲ ಎನ್ನುವುದನ್ನು ನಾನಾ ಒಪ್ಪಿಕೊಂಡಿದ್ದಾರೆ.

     

    ಅಭಿಮಾನಿಗೆ ಹೊಡೆದಿರುವುದು ನನಗೂ ನೋವಾಗಿದೆ. ಅವರು ನನ್ನ ಸಿನಿಮಾ ತಂಡದವರು ಅಂದುಕೊಂಡಿದ್ದೆ. ಆ ನಂತರ ನಾನು ಅವರನ್ನು ಹುಡುಕಿ ಕ್ಷಮೆ ಕೇಳೋಣ ಅಂದುಕೊಂಡಿದ್ದೆ. ಆದರೆ, ಅವರು ಭಯದಿಂದ ಓಡಿದ್ದರು. ನನ್ನಿಂದ ತಪ್ಪಾಗಿದೆ ದಯವಿಟ್ಟು ಕ್ಷಮಿಸಿ. ನಾನು ಎಂದೂ ಆ ರೀತಿ ಮಾಡಿದವನು ಅಲ್ಲ ಎಂದು ನಾನಾ ಪಾಟೇಕರ್ ವಿಡಿಯೋವೊಂದನ್ನು ಮಾಡಿ ಕ್ಷಮೆ ಕೇಳಿದ್ದಾರೆ.

  • ನರ್ಸ್‌ಗಳ ಸೌಂದರ್ಯದ ಕುರಿತು ಹೇಳಿಕೆ- ರಾಜು ಕಾಗೆ ಕ್ಷಮೆಯಾಚನೆ

    ನರ್ಸ್‌ಗಳ ಸೌಂದರ್ಯದ ಕುರಿತು ಹೇಳಿಕೆ- ರಾಜು ಕಾಗೆ ಕ್ಷಮೆಯಾಚನೆ

    ಚಿಕ್ಕೋಡಿ: ತುಂಬಿದ ಸಭೆಯಲ್ಲಿ ನರ್ಸ್‌ಗಳ (Nurse) ಸೌಂದರ್ಯ ಬಗ್ಗೆ ಕಾಂಗ್ರೆಸ್ ಶಾಸಕ ರಾಜು ಕಾಗೆ (Raju Kage) ಮಾತನಾಡಿದ ವಿಚಾರಕ್ಕೆ ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ (Apology)  ಕೇಳುತ್ತೇನೆ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿದ್ದಾರೆ.

    ಈ ಕುರಿತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿ ಕಾಂಗ್ರೆಸ್ (Congress) ಶಾಸಕ ರಾಜು ಕಾಗೆ ಕ್ಷಮೆ ಕೋರಿದ್ದಾರೆ. ಭಾನುವಾರ ಸಮಾರಂಭದಲ್ಲಿ ಮಾತನಾಡಿದ್ದು ಯಾರನ್ನೂ ಉದ್ದೇಶಿಸಿ ಅಲ್ಲ. ನಾನೇನೂ ನಾಲ್ಕು ಗೋಡೆಯಲ್ಲಿ ಮಾತನಾಡಿಲ್ಲ. ಸಾವಿರಾರು ಜನರಿದ್ದ ಸಭೆಯಲ್ಲಿ ಮಾತನಾಡಿದ್ದೇನೆ. ನಾನು ಜವಾಬ್ದಾರಿಯಿಂದ ಮಾತನಾಡಿದ್ದೇನೆ. ನಾನು ಹೇಳಿದ್ದು ವಯಸ್ಸು ಆಯ್ತಲ್ಲ, ಮುದುಕನಾದೆನಲ್ಲ ಅಂತಾ ಮನಸ್ಸಿಗೆ ನೋವಾಯ್ತು ಅಂತಾ ಹೇಳಿದೆ ಎಂದರು. ಇದನ್ನೂ ಓದಿ:‌ ನರ್ಸ್‌ಗಳು, ಚೆಂದ ಚೆಂದ ಹುಡುಗಿಯರು ಇದ್ದಾರೆ.. ನನ್ನನ್ನು ಅಜ್ಜ ಅಂತಾರೆ: ರಾಜು ಕಾಗೆ ಬೇಸರ

    ಶಬ್ಧದ ಅರ್ಥ ಸಾವಿರಾರೂ ರೀತಿಯಲ್ಲಿ ನೀವು ಅರ್ಥ ಮಾಡಿಕೊಳ್ಳಬಹುದು. ನನಗೆ ವಯಸ್ಸಾಯ್ತು ಅಂತಾ ಮಾನಸಿಕ ನೋವಾಯ್ತು. ಏನಾದರೂ ನನ್ನ ಮಾತಿನಿಂದ ನೋವಾಗಿದ್ರೆ ಕ್ಷಮೆ ಕೇಳುತ್ತಿದ್ದೇನೆ. ಯಾವುದೇ ಉದ್ದೇಶದಿಂದ ನಾನು ಮಾತನಾಡಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದು ರಾಜು ಕಾಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಶೋಭಾ ಕರಂದ್ಲಾಜೆ ಹುಟ್ಟುಹಬ್ಬ – ಮಾವುತ, ಕಾವಾಡಿಗಳಿಗೆ ಉಪಹಾರಕೂಟ ಏರ್ಪಡಿಸಿ ಆಚರಣೆ

    ತುಂಬಿದ ಸಭೆಯಲ್ಲಿ ನರ್ಸ್‌ಗಳ ಸೌಂದರ್ಯದ ಬಗ್ಗೆ ಶಾಸಕ ರಾಜು ಕಾಗೆ ಮಾತನಾಡಿದ ವಿಡಿಯೋ ವೈರಲ್ ಆಗಿತ್ತು. ಬೆಳಗಾವಿ (Belagvi) ಜಿಲ್ಲೆ ಅಥಣಿ ತಾಲೂಕಿನ ಪಿ.ಕೆ.ನಾಗನೂರು ಗ್ರಾಮದಲ್ಲಿ ದಸರಾ ಮಹೋತ್ಸವದಲ್ಲಿ ಭಾಷಣ ಮಾಡಿದ್ದ ಅವರು, ಲಿವರ್ ಟ್ರಾನ್ಸ್‌ಪ್ಲಾಂಟ್ ಆದಾಗ ಒಂದು ತಿಂಗಳು ಆಸ್ಪತ್ರೆಯಲ್ಲಿದ್ದೆ. ವೈದ್ಯರು ದಿನವೂ ಬಂದು ಹೇಗಿದ್ದೀರಿ ಅಂತಾ ಕೇಳೋರು. ಆಗ ಆಸ್ಪತ್ರೆಯಲ್ಲಿ ಇದ್ದ ಡಾಕ್ಟರ್‌ಗೆ ನಾನು ಹೇಳಿದ್ದೆ. ನನ್ನ ಆರೋಗ್ಯಕ್ಕೆ ಏನೂ ಆಗಿಲ್ಲ. ನನ್ನ ಆಪರೇಷನ್ ಸಕ್ಸಸ್ ಮಾಡಿದ್ದೀರಿ, ಎಲ್ಲಾ ಆಗಿದೆ. ಆದರೆ ನಿಮ್ಮಲ್ಲಿ ನರ್ಸ್ಗಳು ಚೆಂದ ಚೆಂದ ಹುಡುಗಿಯರು ಇದ್ದಾರೆ. ಅವರು ನನಗೆ ಅಜ್ಜ ಅನ್ನುತ್ತಿದ್ದಾರೆ. ಅದು ನನಗೆ ಮಾನಸಿಕ ಹಿಂಸೆ ಆಗಿದೆ ಎಂದಿದ್ದೆ ಎಂದು ಶಾಸಕ ರಾಜು ಕಾಗೆ ಹೇಳಿದ್ದರು. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಕೌಂಟ್‍ಡೌನ್?- ಶೋಭಾ ಕರಂದ್ಲಾಜೆ ಹೆಸರು ಮುಂಚೂಣಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ಯಾರಿಕೇಡ್ ಮುರಿದು ನುಗ್ಗಿದ ಅಭಿಮಾನಿಗಳು: ಭೇಟಿ ನಿಲ್ಲಿಸಿ ಕ್ಷಮೆ ಕೇಳಿದ ಕಿಚ್ಚ

    ಬ್ಯಾರಿಕೇಡ್ ಮುರಿದು ನುಗ್ಗಿದ ಅಭಿಮಾನಿಗಳು: ಭೇಟಿ ನಿಲ್ಲಿಸಿ ಕ್ಷಮೆ ಕೇಳಿದ ಕಿಚ್ಚ

    ಕಿಚ್ಚ ಸುದೀಪ್ (Kiccha Sudeep) ನಿನ್ನೆಯಿಂದಲೇ ಅಭಿಮಾನಿಗಳ ಜೊತೆ ಹುಟ್ಟು ಹಬ್ಬವನ್ನು (birthday) ಆಚರಿಸಿಕೊಳ್ಳುತ್ತಿದ್ದಾರೆ. ಇಡೀ ರಾತ್ರಿ ಮತ್ತು ಇಂದು ಬೆಳಗ್ಗೆಯಿಂದ ನೆಚ್ಚಿನ ಅಭಿಮಾನಿಗಳ (fans) ಜೊತೆಯೇ ಇದ್ದು, ಅವರೊಂದಿಗೆ ಸಂಭ್ರಮಿಸಿದ್ದಾರೆ. ಆದರೆ, ಕೊನೆಯ ಕ್ಷಣದಲ್ಲಿ ಆದ ಘಟನೆಯಿಂದಾಗಿ ಅಭಿಮಾನಿಗಳ ಭೇಟಿ ನಿಲ್ಲಿಸಿದ್ದಾರೆ ಸುದೀಪ್.

    ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳ ಜೊತೆ ಸುದೀಪ್ ನಿದ್ದೆ ಬಿಟ್ಟು, ಅವರೊಂದಿಗೆ ಬೆರೆತಿದ್ದರು. ಅಭಿಮಾನಿಗಳನ್ನು ಭೇಟಿ ಮಾಡಿದ್ದರು. ಇಂದು ಸುದೀಪ್ ಮನೆ ಮುಂದೆ ಯಾರೂ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದರೂ ಅಭಿಮಾನಿಗಳು ಬಿಡಲಿಲ್ಲ. ಹಾಗಾಗಿ ಎಲ್ಲರ ಭೇಟಿಗಾಗಿ ಅವರ ಮನೆಮುಂದೆ ಬ್ಯಾರಿಕೇಡ್ ಹಾಕಿ ಭೇಟಿಯ ವ್ಯವಸ್ಥೆ ಮಾಡಲಾಗಿತ್ತು.

    ನೆಚ್ಚಿನ ನಟನಿಗೆ ಕೈ ಕುಲುಕಿ ಶುಭ ಹಾರೈಸುವುದಕ್ಕಾಗಿ ಮತ್ತೆ ಸಾವಿರಾರು ಜನರು ಮನೆ ಮುಂದೆ ಜಮಾಯಿಸಿದ್ದರು. ಮೊದ ಮೊದಲು ವ್ಯವಸ್ಥಿತವಾಗಿಯೇ ಭೇಟಿ ಸಾಧ್ಯವಾಯಿತು. ಸೆಕ್ಯೂರಿಟಿ ಕೂಡ ಚೆನ್ನಾಗಿತ್ತು. ಅಭಿಮಾನಿಗಳ ಸಂಖ್ಯೆ ಜಾಸ್ತಿಯಾಗುತ್ತಾ ನೂಕುನುಗ್ಗಲು ಉಂಟಾಯಿತು. ಸೆಕ್ಯೂರಿಟಿಗೆ ಎಂದೇ ಹಾಕಿದ್ದ ಬ್ಯಾರಿಕೇಡ್ ಗಳನ್ನು ಮುರಿದು ಹಾಕಿ ಅಭಿಮಾನಿಗಳು ಸುದೀಪ್ ಅವರತ್ತ ನುಗ್ಗಿದರು. ಸೆಕ್ಯೂರಿಟಿ ಅಸಾಧ್ಯವಾಯಿತು. ಹಾಗಾಗಿ ಭೇಟಿ ನಿಲ್ಲಿಸಿ ಮನೆಯೊಳಗೆ ಹೊರಟು ಬಿಟ್ಟರು.

     

    ಅಭಿಮಾನಿಗಳಿಗೆ ಅದರಿಂದ ನಿರಾಸೆಯಾಗಿದೆ ಎಂದು ಅರಿತ ಸುದೀಪ್, ವಿಡಿಯೋವೊಂದನ್ನು ಪೋಸ್ಟ್‌ ಮಾಡಿ ಕ್ಷಮೆ ಕೇಳಿದ್ದಾರೆ. ‘ಎಲ್ಲರನ್ನೂ ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. ಎಲ್ಲಾ ಬ್ಯಾರಿಕೇಡ್ ಗಳು ಮುರಿದು ಹೋಗಿದ್ದರಿಂದ ಮತ್ತು ಜನರು ವಿಶೇಷವಾಗಿ ಎಲ್ಲಾ ಮಕ್ಕಳು ಉಸಿರುಗಟ್ಟಲು ಪ್ರಾರಂಭಿಸಿದ್ದರಿಂದ ಅದರ ಭದ್ರತೆಯಿಂದ ಹಿಂತೆಗೆದುಕೊಳ್ಳಲಾಯಿತು. ಉತ್ತಮ ವ್ಯವಸ್ಥೆಗಳೊಂದಿಗೆ ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ’ ಎಂದು ಬರೆದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೇಕಂತಲೇ ಕಾರಿಗೆ ಡಿಕ್ಕಿ- ಓವರ್ ಟೇಕ್ ಮಾಡಿ ಸಾರಿ ಕೇಳುವ ನೆಪದಲ್ಲಿ ದೋಚಿ ಎಸ್ಕೇಪ್

    ಬೇಕಂತಲೇ ಕಾರಿಗೆ ಡಿಕ್ಕಿ- ಓವರ್ ಟೇಕ್ ಮಾಡಿ ಸಾರಿ ಕೇಳುವ ನೆಪದಲ್ಲಿ ದೋಚಿ ಎಸ್ಕೇಪ್

    ಬೆಂಗಳೂರು: ಸಾರಿ (Sorry) ಕೇಳುವ ನೆಪದಲ್ಲಿ ವಿದೇಶಿ ಪ್ರಜೆಗಳನ್ನು ದೋಚಿದ್ದ ಆರೋಪಿಯನ್ನು ಬಂಧಿಸಲಾಗಿದೆ.

    ಸೈಯ್ಯದ್ ಯಾಸೀನ್ (26) ಬಂಧಿತ ಆರೋಪಿಯಾಗಿದ್ದು, ಈತನನ್ನು ಬೆಂಗಳೂರಿನ ಬಾಣಸವಾಡಿ ಪೊಲೀಸ (Banasavadi Police) ರಿಂದ ಬಂಧಿಸಿದ್ದಾರೆ.

    ಆರೋಪಿಗಳಾದ ಸೈಯ್ಯದ್ ಯಾಸೀನ್ ಮತ್ತು ಮಹಮ್ಮದ್ ಮನ್ಸೂರ್ ತಡರಾತ್ರಿ ರೋಡಿಗಿಳಿಯುತ್ತಿದ್ದರು. ಒಂಟಿಯಾಗಿ ಓಡಾಡೋ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಸುತ್ತಿದ್ದರು. ನಂತರ ಕಾರನ್ನು ಓವರ್ ಟೇಕ್ ಮಾಡಿ, ಸಾರಿ ಕೇಳುವ ನೆಪದಲ್ಲಿ ಕಾರಿನಲ್ಲಿ ಯಾರಿದ್ದಾರೆ ಅನ್ನೋದನ್ನು ತಿಳಿದುಕೊಳ್ಳುತ್ತಿದ್ದರು. ಒಂಟಿಯಾಗಿಯಾಗಿರೋದು ಗೊತ್ತಾದ ತಕ್ಷಣ ಮೊಬೈಲ್ (Mobile), ಪರ್ಸ್ (Purse) ಹಣದ ಜೊತೆಗೆ ಕಾರನ್ನು ತೆಗೆದುಕೊಂಡು ಹೋಗುತ್ತಿದ್ದರು. ಇದನ್ನೂ ಓದಿ: ಕಾರವಾರದಲ್ಲಿ ನಿಂತಲ್ಲೇ ನಿಂತ ಪಶು ಅಂಬುಲೆನ್ಸ್

    ಆರೋಪಿಗಳು ನವೆಂಬರ್ 11 ರಂದು ಸುಡಾನ್ ದೇಶದ ಪ್ರಜೆಗೆ ಚಾಕು ತೋರಿಸಿ ಕಾರನ್ನ ಕದ್ದೊಯ್ದಿದ್ದರು. ಚಾಕು ತೋರಿಸಿ ಹ್ಯೂಂಡೈ ವರ್ನಾ ಕಾರನ್ನ ಕದ್ದೊಯ್ದಿದ್ದರು. ಈ ಸಂಬಂಧ ಸುಡಾನ್ ಪ್ರಜೆ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ನಾಪತ್ತೆಯಾಗಿರೋ ಮಹಮ್ಮದ್ ಮನ್ಸೂರ್ ಗಾಗಿ ಖಾಕಿ ಹುಡುಕಾಟ ನಡೆಸಲಾಯಿತು. ಸದ್ಯ ಬಂಧಿತನಿಂದ 2 ಲಕ್ಷ ಮೌಲ್ಯದ ಒಂದು ಹ್ಯೂಂಡೈ ಕಾರು ಹಾಗೂ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • Bigg Boss-ಕಿಚ್ಚ ಸುದೀಪ್ ಅವರನ್ನು ಕ್ಷಮೆ ಕೇಳಿದ ಸೋನು ಶ್ರೀನಿವಾಸ್ ಗೌಡ

    Bigg Boss-ಕಿಚ್ಚ ಸುದೀಪ್ ಅವರನ್ನು ಕ್ಷಮೆ ಕೇಳಿದ ಸೋನು ಶ್ರೀನಿವಾಸ್ ಗೌಡ

    ನಿವಾರ ಮತ್ತು ಭಾನುವಾರದ ಕಿಚ್ಚನ ವಾರದ ಪಂಚಾಯತಿ ಬಿಗ್ ಬಾಸ್ ಮನೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಸಾಕ್ಷಿ ಆಯಿತು. ವಾರದಿಂದ ದೊಡ್ಮನೆಯಲ್ಲಿ ಏನೆಲ್ಲ ನಡೆಯಿತು ಎನ್ನುವ ಸಂಕ್ಷಿಪ್ತ ವಿವರಣೆ ಜೊತೆಗೆ ತಮ್ಮದೇ ಆದ ಕೆಲ ಅನುಭವಗಳನ್ನು ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯಲ್ಲಿ ಇದ್ದವರ ಜೊತೆ ಹಂಚಿಕೊಂಡರು. ಅದರಲ್ಲೂ ಶನಿವಾರ ಒಬ್ಬರನ್ನು ಮನೆಯಿಂದ ಆಚೆ ಕಳುಹಿಸಿದ ಸುದೀಪ್, ಭಾನುವಾರ ಎಂದಿನಂತೆ ತಮ್ಮದೇ ಶೈಲಿಯಲ್ಲಿ ಸ್ಪರ್ಧಿಗಳನ್ನು ಕಿಚಾಯಿಸಿದರು.

    ಬಿಗ್ ಬಾಸ್ ಮನೆಯ ಭಾಗವೇ ಆಗಿರುವ ಎಸ್ ಆರ್ ನೋ ಆಟವನ್ನು ಸ್ಪರ್ಧಿಗಳೊಂದಿಗೆ ಆಡಿದ ಸುದೀಪ್, ಮೊದ ಮೊದಲು ತಮಾಷೆಯಾಗಿಯೇ ಎಲ್ಲವನ್ನೂ ತಗೆದುಕೊಂಡರು. ಒಳಗಿದ್ದವರಿಗೆ ಪ್ರಶ್ನೆಗಳನ್ನು ಕೇಳಿದರು. ಕಾಲೆಳೆಯುತ್ತಾ ಸಲಹೆಗಳನ್ನೂ ನೀಡಿದರು. ಅದರಲ್ಲೂ ಮಾತಾಡುತ್ತಾ ವಿಷಯದ ಹಾದಿ ತಪ್ಪಿಸುವವರು ಯಾರು? ಎಂಬ ಪ್ರಶ್ನೆ ಬಂದಾಗ ಬಹುತೇಕರು ಆರ್ಯವರ್ಧನ್ ಗುರೂಜಿಯತ್ತ ಬೆಟ್ಟು ಮಾಡು, ಕಾಲೆಳೆದರು. ನಂತರದಲ್ಲಿ ಸೋನು ಶ್ರೀನಿವಾಸ್ ಗೌಡ ವಿಷಯಕ್ಕೆ ಬಂದಾಗ, ವಿಷಯ ಗಂಭೀರವಾಯಿತು. ಇದನ್ನೂ ಓದಿ:ಹೆಣ್ಣು ಮಗುವಿಗೆ ತಂದೆಯಾದ `ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಚಂದು ಗೌಡ

    ಸೋನು ಶ್ರೀನಿವಾಸ್ ಗೌಡ ಅವರನ್ನು ಆರ್ಯವರ್ಧನ್ ಅವರ ಅಸಿಸ್ಟೆಂಟ್ ಆಗಿ ಮಾಡಿಬಿಡಿ ಎಂದು ಸಾನ್ಯ ಐಯರ್ ತಮಾಷೆಯಾಗಿಯೇ ಹೇಳಿದರು. ಅದರಿಂದ ಸೋನು ಗರಂ ಆದರು. ನನಗೆ ಹಾಗೆಲ್ಲ ಹೇಳಿದರೆ ಇಷ್ಟ ಆಗಲ್ಲ ಅಂದರು. ನಂತರ ರೂಪೇಶ್, ಜಸ್ವಂತ್ ಸೇರಿದಂತೆ ಹಲವರು ಸೋನು ಅವರ ಕುರಿತು ಮಾತನಾಡಿದಾಗ ಮತ್ತಷ್ಟು ಗರಂ ಆದರು ಸೋನು. ಆಗ ಸುದೀಪ್ ಮಧ್ಯೆ ಪ್ರವೇಶಿಸಿ, ಸೋನು ಅವರನ್ನು ತರಾಟೆಗೆ ತಗೆದುಕೊಂಡರು.

    ಬೇರೆಯವರಿಗೆ ನೀವು ತಮಾಷೆ ಮಾಡಬಹುದು. ನಿಮಗೆ ತಮಾಷೆ ಮಾಡಿದರೆ ಕೋಪ ಯಾಕೆ? ಎಂದೇ ಮಾತು ಶುರು ಮಾಡಿದ ಕಿಚ್ಚ, ನೀವು ಹೀಗೆ ಸಿಟ್ಟು ಮಾಡಿಕೊಳ್ಳುತ್ತೇನೆ ಅನ್ನುವುದಾದರೆ, ಇಲ್ಲಿಗೆ ಈ ಶೋ ಮುಗಿಸಿ ಬಿಡುತ್ತೇನೆ ಎಂದು ಆಟವನ್ನು ನಿಲ್ಲಿಸಿಯೇ ಬಿಟ್ಟರು. ಸೋನು ತಮ್ಮಿಂದಾದ ತಪ್ಪಿಗೆ ಕಿಚ್ಚನಲ್ಲಿ ಕ್ಷಮೆ ಕೇಳಿದರು. ಆದರೂ, ಆಟ ಮುಂದುವರೆಯಲಿಲ್ಲ.

    Live Tv

     

  • ರಾಗಿಣಿ ನಟನೆಯ ‘ಸಾರಿ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

    ರಾಗಿಣಿ ನಟನೆಯ ‘ಸಾರಿ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

    ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸುತ್ತಿರುವ “ಸಾರಿ” ಕರ್ಮ ರಿಟರ್ನ್ಸ್ ಚಿತ್ರದ ಲಿರಿಕಲ್ ಸಾಂಗ್  ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು.  ಕರ್ನಾಟಕ‌ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

    ನಾನು ಮೂಲತಃ ವಿ.ಎಫ್.ಎಕ್ಸ್ ತಂತ್ರಜ್ಞ. ಈ ಹಿಂದೆ “ಸಿದ್ದಿಸೀರೆ” ಚಿತ್ರ ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ. ಇದು ಸೂಪರ್ ಹೀರೊ ಕಾನ್ಸೆಪ್ಟ್ ನ ಚಿತ್ರ. ರಾಗಿಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಕನ್ನಡದ ಮೊದಲ ಸೂಪರ್ ಹೀರೊ ಕಾನ್ಸೆಪ್ಟ್ ನ ಚಿತ್ರ ಎನ್ನಬಹುದು. ಈ ಹಿಂದೆ ಕೆಲವು ಚಿತ್ರ ಬಂದಿದೆ ಎನ್ನುತ್ತಾರೆ. ಆದರೆ ಮೋಷನ್ ಕ್ಯಾಪ್ಚರ್ ಎಂಬ   ವಿಶೇಷ ತಂತ್ರಜ್ಞಾನ ಬಳಿಸಿ ನಿರ್ಮಾಣ ಮಾಡುತ್ತಿರುವ ಮೊದಲ ಸೂಪರ್ ಹೀರೊ ಕಾನ್ಸೆಪ್ಟ್ ನ ಕನ್ನಡ ಚಿತ್ರವಿದು. ಆ ಕುರಿತು ಈಗಾಗಲೇ ಮೇಕಿಂಗ್ ವಿಡಿಯೋ ಸಹ ಬಿಡುಗಡೆ ಮಾಡಿದ್ದೇವೆ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ನಿರ್ದೇಶಕ ಬ್ರಹ್ಮ ಮಾಹಿತಿ ನೀಡಿದರು. ಇದನ್ನೂ ಓದಿ: ಸೋನಮ್ ಕಪೂರ್ ಗ್ರ್ಯಾಂಡ್ ಬೇಬಿ ಶವರ್‌ಗೆ ದಿನಗಣನೆ: ಗೆಸ್ಟ್ ಲಿಸ್ಟ್ ಔಟ್

    ನಾನು ಚಿತ್ರರಂಗಕ್ಕೆ ಬಂದು ಹನ್ನೊಂದು ವರ್ಷಗಳಾಯಿತು. ಈತನಕ ಹೊಸತು ಎನಿಸಿದ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾ ಬಂದಿದ್ದೀನಿ. ಕಲಾವಿದರು ಸ್ವಲ್ಪ ರಿಸ್ಕ್ ಆದರೂ ಪರವಾಗಿಲ್ಲ, ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಬೇಕು ಎಂಬುದು ನನ್ನ ಅನಿಸಿಕೆ. ನಾನು ಆ ರೀತಿ ಮಾಡಿಕೊಂಡು ಬರುತ್ತಿದ್ದೇನೆ. ನನಗೆ ಮೊದಲಿನಿಂದಲೂ ಸೂಪರ್ ಹೀರೊ ಅಂದರೆ ಇಷ್ಟ. ಈಗ ಅದೇ ಪಾತ್ರ ನನಗೆ ಸಿಕ್ಕಿರುವುದು ಖುಷಿಯಾಗಿದೆ. ನಿರ್ದೇಶಕ ಬ್ರಹ್ಮ ಸೇರಿದಂತೆ ಎಲ್ಲಾ ತಂತ್ರಜ್ಞರ ಕಾರ್ಯ ಹಾಗೂ  ಅರ್ಜುನ್ ಶರ್ಮ ಸೇರಿದಂತೆ ಎಲ್ಲಾ ಸಹನಟರ ಅಭಿನಯ ಚೆನ್ನಾಗಿದೆ ಎಂದರು ರಾಗಿಣಿ ದ್ವಿವೇದಿ.

    ನಾನು ಈ ತನಕ ಐದಾರು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಆದರೆ  ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಇದೇ ಮೊದಲು. ರಾಗಿಣಿ ಅವರ ಜೊತೆ ಅಭಿನಯಿಸಿದ್ದು ಸಂತಸವಾಗಿದೆ ಎಂದರು ನಟ ಅರ್ಜುನ್ ಶರ್ಮ.  ಚಿತ್ರದಲ್ಲಿ ನಟಿಸಿರುವ ಅಫ್ಜಲ್, ಸಂಗೀತ ನೀಡಿರುವ  ರಾಜು ಎಮ್ಮಿಗನೂರು, ಛಾಯಾಗ್ರಾಹಕ ರಾಜೀವ್ “ಸಾರಿ” ಬಗ್ಗೆ ಮಾತನಾಡಿದರು. ನವೀನ್ ಕುಮಾರ್ ಈ ಚಿತ್ರದ ನಿರ್ಮಾಪಕರು . ಜೈ ಕೃಪ್ಲಾನಿ ಹಾಗೂ ಜೇನ್ ಜಾರ್ಜ್ ಸಹ ನಿರ್ಮಾಪಕರು. ಅಫ್ಜಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ

    Live Tv
    [brid partner=56869869 player=32851 video=960834 autoplay=true]

  • ಉಪೇಂದ್ರ ಮತ್ತು ಉಪ್ಪಿ ಅಣ್ಣನ ಮಗನಿಗೆ ಕ್ಷಮೆ ಕೇಳಿದ ಕಿಚ್ಚ ಸುದೀಪ್

    ಉಪೇಂದ್ರ ಮತ್ತು ಉಪ್ಪಿ ಅಣ್ಣನ ಮಗನಿಗೆ ಕ್ಷಮೆ ಕೇಳಿದ ಕಿಚ್ಚ ಸುದೀಪ್

    ಕಿಚ್ಚ ಸುದೀಪ್ ಸಿನಿಮಾ ರಂಗಕ್ಕೆ ಬರಲು ಹಲವರ ಪ್ರೋತ್ಸಾಹವಿದೆ. ಅದರಲ್ಲೂ ಉಪೇಂದ್ರ ಅವರು ಸುದೀಪ್ ಅವರಿಗೆ ಸಾಕಷ್ಟು ರೀತಿಯಲ್ಲಿ ಉತ್ತೇಜಿಸಿದ್ದಾರೆ. ಸುದೀಪ್ ಅವರು ಮೊದಲು ಫೋಟೋ ಶೂಟ್ ಮಾಡಿಸಲು ಕಾರಣವೂ ಉಪ್ಪಿ ಆಗಿದ್ದಾರೆ. ಹಾಗಾಗಿ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯವಿದೆ. ಈ ಕಾರಣಕ್ಕಾಗಿಯೇ ಉಪೇಂದ್ರ ಅವರು ತಮ್ಮ ಸಹೋದರನ ಮಗ ನಿರಂಜನ್ ಅವರ ಚೊಚ್ಚಲು ಸಿನಿಮಾ ನಮ್ಮ ಹುಡುಗರು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಆದರೆ, ಅಂದು ಕಿಚ್ಚ ಗೈರಾಗಿದ್ದರು.

    ಸಿನಿಮಾ ರಿಲೀಸ್ ಗೂ ಮುನ್ನ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಿಚ್ಚ ಸುದೀಪ್ ಬರಬೇಕಿತ್ತು. ಸ್ವತಃ ಉಪೇಂದ್ರ ಅವರೇ ಕಾಲ್ ಮಾಡಿ ಸುದೀಪ್ ಅವರನ್ನು ಆಹ್ವಾನಿಸಿದ್ದರಂತೆ. ಆದರೆ, ಕಿಚ್ಚನಿಗೆ ಆ ಕಾರ್ಯಕ್ರಮದಲ್ಲಿ ಭಾಗಿ ಆಗಲು ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಅವರ ಕಾಲು ನೋವು. ಈ ಕುರಿತು ವಿಡಿಯೋ ಮಾಡಿ ಕಳುಹಿಸಿದ್ದ ಸುದೀಪ್, ಈ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ. ಹಾಗಾಗಿ ಉಪ್ಪಿ ಸರ್ ಮತ್ತು ನಿರಂಜನ್ ಕ್ಷಮಿಸಿ ಎಂದು ಕೇಳಿದ್ದಾರೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ಸುದೀಪ್ ಮಂಡಿಗೆ ನೋವು ಮಾಡಿಕೊಂಡಿದ್ದಾರಂತೆ. ಹಾಗಾಗಿ ಓಡಾಡಲು ಆಗುತ್ತಿಲ್ಲವಂತೆ. ಹಾಗಾಗಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ. ಇದೇ ತಿಂಗಳು ಕೊನೆಯಲ್ಲಿ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗುತ್ತಿದೆ. ಇದರ ಪ್ರಚಾರದಲ್ಲೂ ಸುದೀಪ್ ತೊಡಗಿದ್ದು, ಮನೆಯಲ್ಲೇ ಕುಳಿತುಕೊಂಡು ಆ ಕೆಲಸವನ್ನು ಮಾಡುತ್ತಿದ್ದಾರಂತೆ. ವೈದ್ಯರು ವಿಶ್ರಾಂತಿ ಹೇಳಿದ್ದರಿಂದ ಮತ್ತು ಹೆಚ್ಚು ನಡೆಯದಿರಲು ಸಲಹೆ ಮಾಡಿದ್ದರಂತೆ, ಸುದೀಪ್ ಎಲ್ಲಿಯೂ ಓಡಾಡುತ್ತಿಲ್ಲವಂತೆ.

    Live Tv
    [brid partner=56869869 player=32851 video=960834 autoplay=true]

  • ಕಪಾಳಮೋಕ್ಷ ಪ್ರಕರಣ: 14 ವರ್ಷಗಳ ಬಳಿಕ ಶ್ರೀಶಾಂತ್‍ಗೆ ಕ್ಷಮೆಯಾಚಿಸಿದ ಭಜ್ಜಿ

    ಕಪಾಳಮೋಕ್ಷ ಪ್ರಕರಣ: 14 ವರ್ಷಗಳ ಬಳಿಕ ಶ್ರೀಶಾಂತ್‍ಗೆ ಕ್ಷಮೆಯಾಚಿಸಿದ ಭಜ್ಜಿ

    ಮುಂಬೈ: ಐಪಿಎಲ್ 2008ರ ಆವೃತ್ತಿಯ ಪಂದ್ಯವೊಂದರಲ್ಲಿ ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನ್ನರ್ ಹರ್ಭಜನ್ ಸಿಂಗ್, ಭಾರತ ತಂಡದ ಮಾಜಿ ಬೌಲರ್ ಶ್ರೀಶಾಂತ್‍ಗೆ 14 ವರ್ಷಗಳ ನಂತರ ಕ್ಷಮೆಯಾಚಿಸಿದ್ದಾರೆ.

    ಹರ್ಭಜನ್ ಸಿಂಗ್ ಅವರು ಲೈವ್ ವೀಡಿಯೋ ಚಾಟ್‍ನಲ್ಲಿ ಶ್ರೀಶಾಂತ್ ಜೊತೆ ಮಾತನಾಡಿ, 2008ರಲ್ಲಿ ನಡೆದ ಘಟನೆಯ ಬಗ್ಗೆ ಅವರು ಅನುಭವಿಸಿದ ಮುಜುಗರವನ್ನು ಬಹಿರಂಗಪಡಿಸಿದರು. ಅಂದು ನಡೆದದ್ದು ತಪ್ಪು. ನಾನು ತಪ್ಪು ಮಾಡಿದ್ದೆ. ನನ್ನಿಂದಾಗಿ ನನ್ನ ಸಹ ಆಟಗಾರ ಮುಜುಗರ ಎದುರಿಸಬೇಕಾಯಿತು. ನನಗೂ ಮುಜುಗರವಾಯಿತು. ಒಂದು ತಪ್ಪನ್ನು ತಿದ್ದಲೆಂದು ಮೈದಾನದಲ್ಲಿ ಶ್ರೀಶಾಂತ್ ಜೊತೆಗೆ ನಾನು ನಡೆದುಕೊಂಡ ರೀತಿ ಇದೆಯಲ್ಲ ಅದು ಆಗಬಾರದಿತ್ತು. ನಾನು ಅದರ ಬಗ್ಗೆ ಯೋಚಿಸಿದಾಗಲೆಲ್ಲ ಅದು ಆಗಬಾರದಿತ್ತು ಅಂತಾ ಅಂದುಕೊಳ್ಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ : ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ

    ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧದ ಪಂದ್ಯವೊಂದರಲ್ಲಿ ನಾಯಕ ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದ ಹರ್ಭಜನ್ ಸಿಂಗ್ ಅವರು, ಪಂಜಾಬ್ ತಂಡದ ಬೌಲರ್ ಶ್ರೀಶಾಂತ್ ಅವರ ಆಕ್ರಮಣಕಾರಿ ನಡುವಳಿಕೆಯಿಂದ ಆಕ್ರೋಶಗೊಂಡಿದ್ದರು. ಪಂದ್ಯದ ಫಲಿತಾಂಶದ ನಂತರ, ತಮ್ಮ ಬಳಿಗೆ ಬಂದ ಶ್ರೀಶಾಂತ್ ಅವರ ಕೆನ್ನೆಗೆ ಹರ್ಭಜನ್ ಹೊಡೆದಿದ್ದರು. ಮೊಹಾಲಿಯಲ್ಲಿ ನಡೆದ ಆ ಪಂದ್ಯದಲ್ಲಿ ಪಂಜಾಬ್ ತಂಡ ಮುಂಬೈ ವಿರುದ್ಧ 66 ರನ್‍ಗಳ ಗೆಲುವು ದಾಖಲಿಸಿತ್ತು. ಇದನ್ನೂ ಓದಿ: ಅತೀ ಎತ್ತರದಲ್ಲಿ ಯೋಗ ಮಾಡಿ ದಾಖಲೆ ಬರೆದ ಐಟಿಬಿಪಿ ತಂಡ

    ಘಟನೆ ನಂತರ ಕಣ್ಣೀರು ಹಾಕಿದ್ದ ಶ್ರೀಶಾಂತ್ ಅವರನ್ನು ನೋಡಿ ಹಲವರು ಮರುಗಿದ್ದರು. ಹರ್ಭಜನ್ ಅವರ ಕ್ರೀಡಾ ಸ್ಫೂರ್ತಿಯ ಬಗ್ಗೆ ಆಗ ಪ್ರಶ್ನೆಗಳು ಎದ್ದಿದ್ದವು. ಆ ಬಳಿಕ ಇವರಿಬ್ಬರ ನಡುವೆ ಮತ್ತೆ ಸ್ನೇಹ ಬೆಳೆದಿತ್ತು. ಟೀಂ ಇಂಡಿಯಾ ಪರ ಒಟ್ಟಾಗಿ ಆಡಿದ್ದರು.

  • ಸುಂಕದಕಟ್ಟೆಯ ಪಾಗಲ್ ಪ್ರೇಮಿ ವಿರುದ್ಧ ಎಫ್‍ಐಆರ್

    ಸುಂಕದಕಟ್ಟೆಯ ಪಾಗಲ್ ಪ್ರೇಮಿ ವಿರುದ್ಧ ಎಫ್‍ಐಆರ್

    ಬೆಂಗಳೂರು: ಸಿಲಿಕಾನ್ ಸಿಟಿಯ ಶಾಲೆಯೊಂದರ ಮೆಟ್ಟಿಲು, ಕಾಂಪೌಂಡ್ ಹಾಗೂ ರಸ್ತೆಯುದ್ದಕ್ಕೂ SORRY ಎಂದು ಬರೆದಿದ್ದ ಪಾಗಲ್ ಪ್ರೇಮಿ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಸುಂಕದಕಟ್ಟೆಯ ಶಾಂತಿಧಾಮ ಸ್ಕೂಲ್‍ನ ಕಾಂಪೌಂಡ್, ರಸ್ತೆ, ಮನೆಯ ಗೋಡೆಗಳು, ಕಾಲೇಜಿನ ಗೋಡೆ, ಮೆಟ್ಟಿಲು ಹೀಗೆ ಎಲ್ಲಾ ಕಡೆ ಇಂಗ್ಲೀಷ್‍ನಲ್ಲಿ SORRY ಎಂದು ಬರೆಯುವ ಮೂಲಕ ವ್ಯಕ್ತಿಯೋರ್ವ ಹುಚ್ಚಾಟ ಮೆರೆದಿದ್ದನು. ಇದನ್ನು ಬೆಳಗ್ಗೆ ಎದ್ದು ನೋಡಿದ ಸ್ಥಳೀಯರಿಗೆ ಶಾಕ್ ಆಗಿತ್ತು. ಯಾರು ಮತ್ತು ಯಾಕೆ ಈ ರೀತಿ SORRY ಕೇಳಿದ್ದಾರೆ ಎಂದು ಸ್ಥಳೀಯರು ಕೂಡ ತಲೆಕೆಡಿಸಿಕೊಂಡಿದ್ದರು. ಮೊದಮೊದಲು ಇವನ್ಯಾರೊ ಪಾಗಲ್ ಪ್ರೇಮಿ ಇರಬೇಕು ಅಂತ ನೆಗ್ಲೆಟ್ ಮಾಡಿದ್ದ ಪೊಲೀಸರು ಇದೀಗ ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಕಾಲೇಜು ಗೋಡೆ, ರಸ್ತೆ ಮೇಲೆ Sorry ಬರಹ ಪ್ರಕರಣ- ಕೆಟಿಎಂ ಡ್ಯೂಕ್‍ನಲ್ಲಿ ಬಂದ ಇಬ್ಬರಿಂದ ಕೃತ್ಯ?

    ಕೆಪಿಓಡಿ (ಕರ್ನಾಟಕ ಓಪನ್ ಪ್ಲೇಸ್ ಡಿಸ್ಪಿಗರೇಷನ್ ಆಕ್ಟ್ ) ಅಡಿ ಕೇಸ್ ಅಡಿ ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಮೇ 23ರ ರಾತ್ರಿ 11 ಗಂಟೆ ವೇಳೆಗೆ ಜೊಮ್ಯಾಟೊ ಬ್ಯಾಗ್ ನೊಂದಿಗೆ ಬಂದ ಇಬ್ಬರಿಂದ ಈ ಕೃತ್ಯ ಎಸಗಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಜೊಮ್ಯಾಟೊ ಬ್ಯಾಗ್ ತುಂಬಾ ಸ್ಪ್ರೇ ತಂದು ರೋಡಲ್ಲಿ ಸಾರಿ ಬರೆದಿದ್ದಾರೆ. ಆದರೆ ಸಾರಿ ಎಂದು ಬರೆದಿರುವ ಹಿಂದಿನ ಉದ್ದೇಶ ತಿಳಿದುಬಂದಿಲ್ಲ. ಇದನ್ನೂ ಓದಿ: ಸ್ಕೂಲ್ ಮೆಟ್ಟಿಲು, ಕಾಂಪೌಂಡ್, ರಸ್ತೆಯಲ್ಲೆಲ್ಲಾ Sorry- ವ್ಯಕ್ತಿಗಾಗಿ ಪೊಲೀಸರು ಹುಡುಕಾಟ