Tag: SOP

  • ರಿಕವರಿ ಹೆಸರಲ್ಲಿ ಪೊಲೀಸರು ಕಿರುಕುಳ ಕೊಟ್ರೆ ಕಠಿಣ ಕ್ರಮ: ಪರಮೇಶ್ವರ್

    ಬೆಂಗಳೂರು: ರಿಕವರಿ ಹೆಸರಲ್ಲಿ ಪೊಲೀಸರು ಗಿರವಿ ಅಂಗಡಿ, ಚಿನ್ನದ ಅಂಗಡಿ ಮಾಲೀಕರಿಗೆ ಕಿರುಕುಳ ಕೊಟ್ಟರೆ ಅಂತಹವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಪರಮೇಶ್ವರ್ (G Parameshwara) ಎಚ್ಚರಿಕೆ ನೀಡಿದ್ದಾರೆ.

    ವಿಧಾನ ಪರಿಷತ್‌ನಲ್ಲಿ ನಿಯಮ 72ರ ಅಡಿ ಜೆಡಿಎಸ್‌ನ ಶರವಣ ವಿಷಯ ಪ್ರಸ್ತಾಪ ಮಾಡಿದರು. ಬೆಂಗಳೂರು ಮತ್ತು ರಾಜ್ಯದಲ್ಲಿ ಇತ್ತೀಚೆಗೆ ಪೊಲೀಸ್ ಅಧಿಕಾರಿಗಳು (Police officers) ರಿಕವರಿ ನೆಪದಲ್ಲಿ ಗಿರಿವಿ ಮತ್ತು ಚಿನ್ನದ ಅಂಗಡಿ ಮಾಲೀಕರಿಗೆ ಕಿರುಕುಳ ಕೊಡುತ್ತಿದ್ದಾರೆ. ಪೊಲೀಸರು ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಪೊಲೀಸರು ಸಮವಸ್ತ್ರ ಹಾಕಿಕೊಂಡು ರಿಕವರಿ ಹೋಗುತ್ತಿಲ್ಲ. ಅವರೇನು ಪೊಲೀಸರಾ? ರೌಡಿಗಳಾ?ರಿಕವರಿ ಮಾಡೋವಾಗ ವೀಡಿಯೋ ಮಾಡಬೇಕು ಆದರೆ ಯಾರು ವೀಡಿಯೋ ಮಾಡುತ್ತಿಲ್ಲ ಎಂದು ಆರೋಪ ಮಾಡಿದರು.

    ಮಾಲೀಕರನ್ನು ಪೊಲೀಸರು ಬೆದರಿಸುತ್ತಿದ್ದಾರೆ. ಕುತ್ತಿಗೆ ಪಟ್ಟಿ ಹಿಡಿದು ಕಾರ್‌ಗೆ ಹಾಕುತ್ತಾರೆ. ಬಾಣಸವಾಡಿ, ರಾಮಮೂರ್ತಿ ನಗದದಲ್ಲಿ ಇಂತಹ ಕೇಸ್ ಆಗುತ್ತಿದೆ. ಯಾವುದೇ ಮಾಹಿತಿ ನೀಡದೇ ಪೊಲೀಸರು ದೌರ್ಜನ್ಯ ಮಾಡುತ್ತಾರೆ. ಪೊಲೀಸರು ಅಂಗಡಿ ಬಂದ ಕೂಡಲೆ ಸಿಸಿ ಕ್ಯಾಮೆರಾಗಳನ್ನು ಆಫ್ ಮಾಡಿಸುತ್ತಾರೆ. ನನಗೆ ಸ್ವಲ್ಪ ಚಿನ್ನ ಕೊಡು ಕೇಸ್ ಮುಗಿಸುತ್ತೇನೆ ಎನ್ನುತ್ತಾರೆ ಎಂದರು. ಇದನ್ನೂ ಓದಿ: PTCL ಕಾಯ್ದೆ ತಿದ್ದುಪಡಿಗೆ ಬದ್ಧ; ದಲಿತರಿಗೆ ಭೂಮಿ ಪರಭಾರೆ ಆಗ್ಲೇಬೇಕು ಅನ್ನೋದ್ರಲ್ಲಿ ರಾಜಿ ಇಲ್ಲ: ಸಿದ್ದರಾಮಯ್ಯ

    ಎಸ್‌ಒಪಿಯಲ್ಲಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ನೋಟಿಸ್ ಕೊಡಬೇಕು ಅಂತ ಇದೆ. ಆದರೆ ಪೊಲೀಸರು ನೋಟಿಸ್ ತೋರಿಸೋದಿಲ್ಲ. ಜುವೆಲ್ಲರಿ ಎಕ್ಸಿಬಿಷನ್‌ಗೆ ಬರಬೇಕಾದರೆ ಏರ್ಪೋರ್ಟ್‌ನಿಂದಲೇ ಪೊಲೀಸರು ತಪಾಸಣೆ ಕಿರುಕುಳ ಕೊಡುತ್ತಾರೆ. ಒಂದೇ ಕಳ್ಳನನ್ನ 10 ಅಂಗಡಿಗೆ ಕರೆದುಕೊಂಡು ಹೋಗಿ ಪೊಲೀಸರು ಇದೇ ಅಂಗಡಿ ತೋರಿಸು ಎಂದು ಹೇಳುತ್ತಾರೆ. ಅರೆಸ್ಟ್ ಮಾಡಿದರೂ ಮಾಹಿತಿ ಕೊಡಲ್ಲ. ಎಸ್‌ಒಪಿಯನ್ನು (SOP) ಪೊಲೀಸರು ಗಾಳಿಗೆ ತೂರಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಇಂತಹ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದರು.

    ಇದಕ್ಕೆ ಉತ್ತರ ನೀಡಿದ ಸಚಿವ ಪರಮೇಶ್ವರ್, ಪೊಲೀಸರು ರಿಕವರಿ ಮಾಡಲು ನಿಯಮ ಇದೆ. ನಿಯಮ ಮೀರಿ ಅವರು ಕೆಲಸ ಮಾಡಲು ಆಗಲ್ಲ. 18 ನಿಯಮಗಳನ್ನು ಪೊಲೀಸರು ಪಾಲನೆ ಮಾಡಬೇಕು. ಪ್ರೊಸೀಜರ್ ಪ್ರಕಾರ ರಿಕವರಿ ಮಾಡದೇ ಇದ್ದರೆ ಅಂತಹ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು. ಇದನ್ನೂ ಓದಿ: NDA ಸಭೆಗೆ ಆಹ್ವಾನ ಬಂದರೆ ಹೋಗುತ್ತೇನೆ: ಕುಮಾರಸ್ವಾಮಿ

    ಪೊಲೀಸರಿಗೆ ಈಗಾಗಲೇ ಎಸ್‌ಒಪಿ ನೀಡಲಾಗಿದೆ. ಕಡ್ಡಾಯವಾಗಿ ವೀಡಿಯೋ ಮಾಡಲು ಸೂಚನೆ ನೀಡುತ್ತೇನೆ. ರಿಕವರಿ ಮಾಡಿದ ದಿನವೇ ಪಂಚನಾಮೆ ಮಾಡಬೇಕು. ಪೊಲೀಸರು ಕಡ್ಡಾಯವಾಗಿ ಎಸ್‌ಒಪಿ ಪಾಲನೆ ಮಾಡಲು ಸೂಚನೆ ನೀಡುತ್ತೇನೆ ಎಂದು ಭರವಸೆ ನೀಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಂತರ್ಜಾತಿ ವಿವಾಹ ಜೋಡಿಗಳ ರಕ್ಷಣೆಗೆ ಮುಂದಾದ ದೆಹಲಿ ಸರ್ಕಾರ

    ಅಂತರ್ಜಾತಿ ವಿವಾಹ ಜೋಡಿಗಳ ರಕ್ಷಣೆಗೆ ಮುಂದಾದ ದೆಹಲಿ ಸರ್ಕಾರ

     – ಜೋಡಿಗಳಿಗೆ ಸೇಫ್ ಹೌಸ್‍ನಲ್ಲಿ ರಕ್ಷಣೆ

    ನವದೆಹಲಿ: ಅಂತರ್ಜಾತಿ ವಿವಾಹವಾಗುವ ಮತ್ತು ವಿವಾಹವಾಗುವ ಯೋಜನೆಯನ್ನು ಹೊಂದಿರುವ ಜೋಡಿಗಳ ರಕ್ಷಣೆ, ಹಿತದೃಷ್ಟಿಯಿಂದ ದೆಹಲಿ ಸರ್ಕಾರ ಸುತ್ತೋಲೆಯನ್ನ ಹೊರಡಿಸಿದೆ.

    ಅಂತರ್ಜಾತಿ ಅಥವಾ ಅಂತರ್ ಧರ್ಮ ವಿವಾಹವಾದ ದಂಪತಿತಬ್ಬನ ಕಿರುಕುಳದಿಂದ ರಕ್ಷಿಸಲು ದೆಹಲಿ ಸರ್ಕಾರ ಈಗ ಸುತ್ತೋಲೆ ಹೊರಡಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ವಿಶೇಷ ವಲಯಗಳನ್ನು ಸ್ಥಾಪಿಸಲಾಗಿದೆ. ಈ ವಲಯಗಳ ಜವಾಬ್ದಾರಿಯನ್ನು ಪೊಲೀಸ್ ಉಪ ಆಯುಕ್ತರು ವಹಿಸಲಿದ್ದಾರೆ.

    ಅಂತರ್ಜಾತಿ ವಿವಾಹದ ದಂಪತಿಗಳು ತಮ್ಮ ಕುಟುಂಬಗಳಿಂದ ಅಥವಾ ಸ್ಥಳೀಯ ಸಮುದಾಯದಿಂದ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ದಂಪತಿಗಳಿಗೆ ಸರ್ಕಾರ ಸುರಕ್ಷಿತ ಮನೆಯಲ್ಲಿ (ಸೇಫ್ ಹೌಸ್) ವಸತಿ ಕಲ್ಪಿಸಲಾಗುವುದು ಎಂದು ಎಸ್‍ಒಪಿ ಸೂಚಿಸುತ್ತದೆ. ದೆಹಲಿ ಮಹಿಳಾ ಆಯೋಗದ 181 ಟೋಲ್-ಫ್ರೀ ಮಹಿಳಾ ಸಹಾಯವಾಣಿ ಕರೆ ಮಾಡಿ ತಿಳಿಸಬಹುದಾಗಿದೆ. ದಂಪತಿಗಳಿಗೆ ನೆರವು ನೀಡವಲ್ಲಿ ಸಹಾಯವಾಣಿಯಾಗಿ ಕಾರ್ಯನಿರ್ವಹಿಸುತ್ತದೆ.

    ಸಮಾಜ ಕಲ್ಯಾಣ ಇಲಾಖೆ ಹೊರಡಿಸಿದ ಎಸ್‍ಒಪಿ ದೂರವಾಣಿ ಕರೆ ಮಾಡುವ ದಂಪತಿಯ ತೊಂದರೆ ಕರೆಗಳನ್ನು ನಿರ್ವಹಿಸಲು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ದಂಪತಿಗಳಿಂದ ಪಡೆದ ದೂರನ್ನು ಡಿಸಿಪಿ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ರವಾನಿಸುತ್ತಾರೆ. ದಂಪತಿಗಳಿಗೆ ಸುರಕ್ಷಿತ ಮನೆಯಲ್ಲಿ ಉಳಿಯುವುದನ್ನು ಎಸ್‍ಒಪಿ ಸೂಚಿಸುತ್ತದೆ. ದಂಪತಿಗೆ ಸಾಕಷ್ಟು ಭದ್ರತೆ ನೀಡಲಾಗುತ್ತದೆ. ಒಂದುವೇಳೆ ದಂಪತಿಗಳು ಸುರಕ್ಷಿತ ಮನೆಯಲ್ಲಿ ಉಳಿಯಲು ಬಯಸದಿದ್ದರೆ, ಬೆದರಿಕೆ ಗ್ರಹಿಕೆ ದೂರಿನ ಆಧಾರದ ಮೇಲೆ ಅವರಿಗೆ ವಿಶೇಷ ಭದ್ರತೆಯನ್ನು ಒದಗಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

  • ಬ್ರಿಟನ್‌ನಿಂದ ಬಂದ 428 ಮಂದಿ ಮೇಲೆ ನಿಗಾ – ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಇದ್ದಾರೆ?

    ಬ್ರಿಟನ್‌ನಿಂದ ಬಂದ 428 ಮಂದಿ ಮೇಲೆ ನಿಗಾ – ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಇದ್ದಾರೆ?

    ಬೆಂಗಳೂರು: ಬ್ರಿಟನ್‍ನಲ್ಲಿ ಕಂಡು ಬಂದ ರೂಪಾಂತರಿ ಕೊರೊನಾದಿಂದ ಕರ್ನಾಟಕದಲ್ಲೂ ಆತಂಕ ಶುರುವಾಗಿದೆ. ಆಂಗ್ಲರ ನಾಡಿನಿಂದ ಬಂದ 428 ಮಂದಿ ಮೇಲೆಯೂ ತೀವ್ರ ನಿಗಾ ಇರಿಸಿದೆ.

    ಕೋವಿಡ್ ಟೆಸ್ಟ್ ಸರ್ಟಿಫಿಕೇಟ್ ಇಲ್ಲದೇ ಬ್ರಿಟನ್‍ನಿಂದ ವಾಪಸ್ ಆಗಿದ್ದ 138 ಮಂದಿಯನ್ನು ರಾಜ್ಯ ಸರ್ಕಾರ ಟ್ರೇಸ್ ಔಟ್ ಮಾಡಿದೆ. ಎಲ್ಲರನ್ನು ಆರ್‌ಟಿಪಿಎಸ್‌ ಟೆಸ್ಟ್‌ಗೆ ಒಳಪಡಿಸಲಾಗಿದೆ. ಇದರಲ್ಲಿ ಬೆಂಗಳೂರಿನ ಬೊಮ್ಮನಹಳ್ಳಿ ವ್ಯಾಪ್ತಿಯ ವಿಠಲನಗರದ ಇಬ್ಬರಿಗೆ ಸೋಂಕು ದೃಢಪಟ್ಟಿದೆ.

     

    ಬೊಮ್ಮನಹಳ್ಳಿಯಲ್ಲಿ ಇನ್ನೂ ಆರು ಮಂದಿ ವರದಿ ಬರಬೇಕಿದೆ. ಬ್ರಿಟನ್‍ನಿಂದ ವಾಪಸ್ ಆದವರ ಪೈಕಿ 211 ಮಂದಿ ಬೆಂಗಳೂರಿನಲ್ಲಿ ಇದ್ದಾರೆ. ದಕ್ಷಿಣ ಕನ್ನಡದ 15, ಉಡುಪಿಯ 8, ಶಿವಮೊಗ್ಗದ 6, ಧಾರವಾಡದ 5, ತುಮಕೂರಿನ ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು 5 ಮಂದಿ ಮತ್ತು ಮಂಡ್ಯದ ನಾಲ್ವರು, ಹಾಸನದ ಇಬ್ಬರು, ಬೆಳಗಾವಿ, ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ಬಾಗಲಕೋಟೆಯಲ್ಲಿ ಒಬ್ಬರು ಇದ್ದು, ಎಲ್ಲರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಇವರ ಜೊತೆ ಸಂಪರ್ಕಕ್ಕೆ ಬಂದ ಕುಟುಂಬಸ್ಥರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬ್ರಿಟನ್‍ನಿಂದ ವಾಪಸ್ ಆದವರ ಸಂಪರ್ಕದಲ್ಲಿ ಇದ್ದವರಿಗೂ ಎಚ್ಚರಿಕೆಯಿಂದ ಇರಲು ತಿಳಿಸಲಾಗಿದೆ.

    ಬೆಂಗಳೂರಿನಲ್ಲಿ ಎಲ್ಲಿ ಎಷ್ಟು ಮಂದಿ ಇದ್ದಾರೆ?
    – ಪೂರ್ವ ವಲಯ – 48
    – ಮಹದೇವಪುರ – 40
    – ಬೊಮ್ಮನಹಳ್ಳಿ – 38
    – ದಕ್ಷಿಣ ವಲಯ – 29
    – ಪಶ್ಚಿಮ ವಲಯ – 27
    – ಯಲಹಂಕ – 14
    – ಆರ್ ಆರ್ ನಗರ – 13
    – ದಾಸರಹಳ್ಳಿ – 02

  • 4 ವಾರದ ಹಿಂದೆ ಇಂಗ್ಲೆಂಡ್‌ನಿಂದ ಬಂದ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್‌ ಕಡ್ಡಾಯ – ಮಾರ್ಗಸೂಚಿಯಲ್ಲಿ ಏನಿದೆ?

    4 ವಾರದ ಹಿಂದೆ ಇಂಗ್ಲೆಂಡ್‌ನಿಂದ ಬಂದ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್‌ ಕಡ್ಡಾಯ – ಮಾರ್ಗಸೂಚಿಯಲ್ಲಿ ಏನಿದೆ?

    ನವದೆಹಲಿ: ಇಂಗ್ಲೆಂಡ್‌ನಲ್ಲಿ ಹೊಸ ರೀತಿ ಕೊರೊನಾ ವೈರಸ್‌ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಿಂದ ಆಗಮಿಸಿದ ಪ್ರಯಾಣಿಕರನ್ನು ಗುರಿಯಾಗಿಟ್ಟುಕೊಂಡು ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

    ನವೆಂಬರ್‌ 25 ರಿಂದ ಡಿಸೆಂಬರ್‌ 23ರವರೆಗೆ ಇಂಗ್ಲೆಂಡ್‌ನಿಂದ ಅಥವಾ ಇಂಗ್ಲೆಂಡ್‌ ಮೂಲಕ ದೇಶಕ್ಕೆ ಆಗಮಿಸಿದ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್‌ ಪರೀಕ್ಷೆ ಮಾಡಬೇಕೆಂದು ಸೂಚಿಸಿದೆ.

    ಮಾರ್ಗಸೂಚಿಯಲ್ಲಿ ಏನಿದೆ?
    ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದ ವ್ಯಕ್ತಿಗಳು ಐಸಿಎಂಆರ್‌ ಮಾನಂದಡದ ರಾಜ್ಯ ಸರ್ಕಾರ ಸೂಚಿಸಿದ ಕೇಂದ್ರಗಳಲ್ಲಿ ಐಸೋಲೇಷನ್‌ ಆಗಬೇಕು ಮತ್ತು ಮಾದರಿಯನ್ನು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ ಪುಣೆ ಅಥವಾ ಇತರ ಲ್ಯಾಬ್‌ಗಳಿಗೆ ಕಳುಹಿಸಬೇಕು ಎಂದು ಹೇಳಿದೆ.

    ಆರ್‌ಟಿ ಪಿಸಿಆರ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದರೆ ಅವರು ಮನೆಯಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ ಆಗಬೇಕು. ವಿಮಾನ ಸೇವಾ ಸಂಸ್ಥೆಗಳು ಪ್ರಯಾಣಿಕರಿಗೆ ಹೊಸ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ತಿಳಿಸಬೇಕು. ವಿಮಾನದಿಂದ ಇಳಿದು ನಿಲ್ದಾಣಕ್ಕೆ ಬರುವ ಜಾಗದಲ್ಲಿ ಹೊಸ ಮಾಹಿತಿಗಳನ್ನು ಪ್ರದರ್ಶಿಸಬೇಕು.

    ಎಲ್ಲ ರಾಜ್ಯ ಸರ್ಕಾರಗಳು ವಲಸೆ ವಿಭಾಗದಿಂದ ಇಂಗ್ಲೆಂಡ್‌ನಿಂದ ಬಂದ ಪ್ರಯಾಣಿಕರ ಮಾಹಿತಿಯನ್ನು ಪಡೆದು ಅವರ ಮೇಲೆ ನಿಗಾ ಇಡಬೇಕು.

    ಒಂದು ವೇಳೆ ಪಾಸಿಟಿವ್‌ ಬಂದರೆ ಆ ಪ್ರಯಾಣಿಕ ಕುಳಿತುಕೊಂಡ ಸೀಟಿನ ಹಿಂದೆ ಮತ್ತು ಮುಂದಿನ ಮೂರು ಸಾಲಿನ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರನ್ನು ಪ್ರತ್ಯೇಕವಾಗಿ ಇರಿಸಬೇಕು.

    ನವೆಂಬರ್‌ 25 ರಿಂದ ಡಿಸೆಂಬರ್‌ 8ವರೆಗೆ ಇಂಗ್ಲೆಂಡ್‌ನಿಂದ ಬಂದವರನ್ನು ಜಿಲ್ಲಾ ಅಧಿಕಾರಿಗಳು ಸಂಪರ್ಕಿಸಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು.

    ಡಿಸೆಂಬರ್‌ 9 ರಿಂದ ಡಿಸೆಂಬರ್‌ 23ರ ಅವಧಿಯಲ್ಲಿ ಆಗಮಿಸಿದ ಪ್ರಯಾಣಿಕರನ್ನು ಜಿಲ್ಲಾಮಟ್ಟದ ಆರೋಗ್ಯ ಅಧಿಕಾರಿಗಳು ಭಾರತಕ್ಕೆ ಆಗಮಿಸಿದ ದಿನದಿಂದ 14 ದಿನಗಳ ಕಾಲ ಪ್ರತಿದಿನ ಕರೆ ಮಾಡಿ ಆರೋಗ್ಯವನ್ನು ವಿಚಾರಿಸಬೇಕು.

    ಒಂದು ವೇಳೆ ಈ ಅವಧಿಯಲ್ಲಿ ಪ್ರಯಾಣಿಕರಿಗೆ ಜ್ವರ, ಶೀತ ಅಥವಾ ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ಮಾಸ್ಕ್‌ ಧರಿಸಿ ಮನೆಯಲ್ಲೇ ಪ್ರತ್ಯೇಕವಾಗಿರಬೇಕು ಮತ್ತು ಕೂಡಲೇ ಜಿಲ್ಲಾ ಆರೋಗ್ಯ ಅಧಿಕಾರಿಗೆ ಮಾಹಿತಿ ನೀಡಬೇಕು. ಅಥವಾ ರಾಷ್ಟ್ರೀಯ ಅಥವಾ ರಾಜ್ಯದ ಕೊರೊನಾ ಸಹಾಯವಾಣಿಗೆ ಕರೆ ಮಾಡಿ ತಿಳಿಸುವುದು.

    ಪಾಸಿಟಿವ್‌ ಬಂದ ವ್ಯಕ್ತಿಯ ಸಂಪರ್ಕಕ್ಕೆ ಬಂದ ಎಲ್ಲ ವ್ಯಕ್ತಿಗಳನ್ನು ರಾಜ್ಯ ಸರ್ಕಾರ ಸೂಚಿಸಿದ ಜಾಗದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಮಾಡಬೇಕು ಮತ್ತು 5-10 ದಿನದ ಒಳಗಡೆ ಅವರನ್ನು  ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಬೇಕು.

  • ಆರಂಭದಲ್ಲಿ 30 ಕೋಟಿ, 1 ಸೆಷನ್‌ನಲ್ಲಿ 100 ಮಂದಿಗೆ ಲಸಿಕೆ – ಮೊದಲು ಯಾರಿಗೆ ಸಿಗಲಿದೆ ಲಸಿಕೆ?

    ಆರಂಭದಲ್ಲಿ 30 ಕೋಟಿ, 1 ಸೆಷನ್‌ನಲ್ಲಿ 100 ಮಂದಿಗೆ ಲಸಿಕೆ – ಮೊದಲು ಯಾರಿಗೆ ಸಿಗಲಿದೆ ಲಸಿಕೆ?

    – ವಿತರಣೆ ಕೇಂದ್ರದಲ್ಲಿ ಇರಲಿದ್ದಾರೆ ಐವರು ಅಧಿಕಾರಿಗಳು
    – ಕೇಂದ್ರದಿಂದ ಮಾರ್ಗದರ್ಶಿ ಸೂತ್ರ ಬಿಡುಗಡೆ

    ನವದೆಹಲಿ: ಕೆಲ ದಿನಗಳಲ್ಲಿ ಕೊರೊನಾ ಲಸಿಕೆ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಲಸಿಕೆ ಹಂಚಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಒಂದು ಸೆಷನ್‌ನಲ್ಲಿ 100 ಮಂದಿ ಲಸಿಕೆ ನೀಡಬೇಕು ಎಂದು ಹೇಳಿದೆ.

    ಲಸಿಕೆ ವಿತರಿಸುವ ಕೇಂದ್ರಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಈ ಸೂತ್ರದ ಪ್ರಕಾರ 1 ʼಸೆಷನ್‌ʼನಲ್ಲಿ 100 ಮಂದಿಗೆ ಲಸಿಕೆ ವಿತರಣೆ ಮಾಡಬೇಕು ಎಂದು ಹೇಳಿದೆ. ಆರಂಭದಲ್ಲಿ ಒಟ್ಟು 60 ಕೋಟಿ ಲಸಿಕೆಯನ್ನು ಕೋಲ್ಡ್‌ ಚೈನ್‌ ಮೂಲಕ 30 ಕೋಟಿ ಜನರಿಗೆ ವಿತರಣೆ ಮಾಡುವ ಗುರಿಯನ್ನು ಹಾಕಲಾಗಿದೆ.

    ಮಾಧ್ಯಮಕ್ಕೆ ನೀತಿ ಆಯೋಗದ ಸದಸ್ಯ ವಿಕೆ ಪೌಲ್‌ ಪ್ರತಿಕ್ರಿಯಿಸಿ, 30 ಕೋಟಿ ಜನರ ಪೈಕಿ 50 ವರ್ಷ ಮೇಲ್ಪಟ್ಟ 26 ಕೋಟಿ ಜನ, 50 ವರ್ಷ ಒಳಗಡೆ ಇರುವ 1 ಕೋಟಿ ಕೋ ಮಾರ್ಬಿಡ್‌(ಕಿಡ್ನಿ, ಹೃದಯ, ಶ್ವಾಸಕೋಶ ಸಂಬಂಧಿತ ಕಾಯಿಲೆಗಳು, ಮಧುಮೇಹ ಇತ್ಯಾದಿ ಸಮಸ್ಯೆಗಳು ಇರುವ ರೋಗಿಗಳು) ಜನ ಮತ್ತು 3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಭಾರತ ಸರ್ಕಾರ ಸದ್ಯಕ್ಕೆ ಫೈಝರ್‌, ಆಸ್ಟ್ರಾಜೆನಿಕಾ ಮತ್ತು ಭಾರತ್‌ ಬಯೋಟೆಕ್‌ ಕಂಪನಿಗಳ ಜೊತೆ ಲಸಿಕೆ ಸಂಬಂಧ ಮಾತುಕತೆ ನಡೆಸಿದೆ. ಈ ಪೈಕಿ ಫೈಝರ್‌ ಲಸಿಕೆಯನ್ನು ಮೈನಸ್‌ 70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಬೇಕಾಗುತ್ತದೆ. ಉಷ್ಣಾಂಶ ಹೆಚ್ಚಿರುವ ಭಾರತದಲ್ಲಿ ಫೈಝರ್‌ ಲಸಿಕೆ ವಿತರಿಸುವುದು ಬಹಳ ಸವಾಲಿನ ಕೆಲಸವಾಗಿರುವ ಕಾರಣ ಕೇಂದ್ರ ಸರ್ಕಾರ ಆಸ್ಟ್ರಾಜೆನಿಕಾ, ಆಕ್ಸ್‌ಫರ್ಡ್‌ ವಿವಿ ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್‌ ಮತ್ತು ಭಾರತ್‌ ಬಯೋಟೆಕ್‌ ಕಂಪನಿಯ ಕೊವಾಕ್ಸಿನ್‌ ಲಸಿಕೆಯತ್ತ ಹೆಚ್ಚಿನ ಗಮನಹರಿಸಿದೆ.  ಇದನ್ನೂ ಓದಿ: 250 ರೂ.ಗೆ 1 ಡೋಸ್‌ – ಮಾರ್ಚ್‌ನಲ್ಲಿ ಮೆಡಿಕಲ್‌ ಸ್ಟೋರ್‌ನಲ್ಲಿ ಲಭ್ಯ?

    ಲಸಿಕೆ ವಿತರಣೆಗೆ ಸಂಬಂಧಿಸಿದ ಎಲ್ಲಾ ಜವಾಬ್ದಾರಿಗಳನ್ನು ನೋಡಿಕೊಳ್ಳಲು ರಾಷ್ಟ್ರೀಯ ತಜ್ಞರ ಸಮಿತಿಯೊಂದನ್ನು ಕೇಂದ್ರ ಸರ್ಕಾರ ಈಗಾಗಲೇ ನೇಮಿಸಿದೆ. ಆ ಸಮಿತಿಯು 112 ಪುಟಗಳ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿದ್ದು, ಅದನ್ನು ಕೇಂದ್ರ ಗೃಹ ಇಲಾಖೆ ಶನಿವಾರ ಬಿಡುಗಡೆ ಮಾಡಿದೆ.

    ಮಾರ್ಗದರ್ಶಿ ಸೂತ್ರದಲ್ಲಿ ಏನಿದೆ?
    ಲಸಿಕೆ ವಿತರಣೆ ಮಾಡುವ ಕೇಂದ್ರಗಳ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್‌ ಮತ್ತು 8 ಡಿಗ್ರಿ ಸೆಲ್ಸಿಯಸ್‌ ಮಧ್ಯೆ ಇರಬೇಕಾಗುತ್ತದೆ. ಒಂದು ‘ಸೆಷನ್‌’ನಲ್ಲಿ 100 ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ. ಕೇಂದ್ರದಲ್ಲಿ ಸಾಕಷ್ಟು ವ್ಯವಸ್ಥೆಯಿದ್ದರೆ ಒಂದು ‘ಸೆಷನ್‌’ನಲ್ಲಿ 200 ಜನರಿಗೂ ಲಸಿಕೆ ನೀಡಬಹುದು.

    ಒಂದು ‘ಸೆಷನ್‌’ನಲ್ಲಿ 100 ಜನರಿಗೆ ಲಸಿಕೆ ನೀಡಬೇಕು ಎಂದು ಹೇಳಿದ್ದರೂ ಒಂದು ಸೆಷನ್‌ ಅಂದರೆ ಒಂದು ದಿನವೇ ಅಥವಾ ನಿರ್ಧಿಷ್ಟ ಗಂಟೆಯೋ ಎಂಬದುನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ.

    ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕೊರೊನಾ ಯೋಧರಿಗೆ ನಿರ್ದಿಷ್ಟ ಕೇಂದ್ರದಲ್ಲೇ ಲಸಿಕೆ ನೀಡಲಾಗುತ್ತದೆ. ಲಸಿಕೆ ನೀಡುವ ಎಲ್ಲಾ ಕೇಂದ್ರದಲ್ಲಿ ಕಡ್ಡಾಯವಾಗಿ 5 ಸಿಬ್ಬಂದಿಯಿರಬೇಕು. ಹೈ ರಿಸ್ಕ್‌ ವರ್ಗದ ಜನರಿಗೆ ಲಸಿಕೆ ನೀಡಲು ಬೇರೆ ಬೇರೆ ಕಡೆ ಕೇಂದ್ರಗಳನ್ನು ತೆರೆಯಬೇಕಾಗಿ ಬರಬಹುದು ಅಥವಾ ಮೊಬೈಲ್‌ ಕೇಂದ್ರಗಳನ್ನು ಸ್ಥಾಪಿಸಬೇಕಾಗಬಹುದು ಎಂದು ಮಾರ್ಗದರ್ಶಿ ಸೂತ್ರದಲ್ಲಿ ಹೇಳಲಾಗಿದೆ.

    ಆ 5 ಮಂದಿ ಯಾರು?
    ಇಂಜೆಕ್ಷನ್‌ ನೀಡುವ ಕಾನೂನುಬದ್ಧ ಅಧಿಕಾರ ಹೊಂದಿರುವ ಡಾಕ್ಟರ್‌, ನರ್ಸ್‌ ಅಥವಾ ಫಾರ್ಮಸಿಸ್ಟ್‌ ಮುಖ್ಯ ಅಧಿಕಾರಿ ಆಗಿರುತ್ತಾರೆ. ಭದ್ರತಾ ವ್ಯವಸ್ಥೆ ನೋಡಿಕೊಳ್ಳುವ ವ್ಯಕ್ತಿ ಎರಡನೇ ಅಧಿಕಾರಿಯಾಗಿರುತ್ತಾರೆ. ಇವರು ಕೇಂದ್ರದ ಪ್ರವೇಶದ್ವಾರದಲ್ಲಿ ಕಾರ್ಯನಿರ್ವಹಿಸಿ ಲಸಿಕೆಗೆ ನೋಂದಣಿಯಾದ ಹೆಸರುಗಳನ್ನು ಪರಿಶೀಲಿಸಬೇಕು.

    ಲಸಿಕೆ ಹಾಕಿಸಲು ಬರುವ ಜನರ ದಾಖಲೆಯನ್ನು ಮೂರನೇ ಅಧಿಕಾರಿ ಪರಿಶೀಲಿಸಬೇಕು. ಲಸಿಕಾ ಕೇಂದ್ರದಲ್ಲಿ ಜನದಟ್ಟಣೆ ನಿರ್ವಹಣೆ ಹಾಗೂ ಸಂವಹನ ಮಾಡಲು ನಾಲ್ಕು ಮತ್ತು ಐದನೇ ಅಧಿಕಾರಿ ಸಹಕರಿಸಬೇಕು ಎಂದು ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ.‌

  • ಶಾಲೆ ತೆರೆಯಲು ಅನುಮತಿ – ಕೇಂದ್ರದ ಮಾರ್ಗಸೂಚಿಯಲ್ಲಿ ಏನಿದೆ?

    ಶಾಲೆ ತೆರೆಯಲು ಅನುಮತಿ – ಕೇಂದ್ರದ ಮಾರ್ಗಸೂಚಿಯಲ್ಲಿ ಏನಿದೆ?

    ನವದೆಹಲಿ: ಅನ್‌ಲಾಕ್‌ 5ರ ಮಾರ್ಗಸೂಚಿಯಲ್ಲಿ ಅಕ್ಟೋಬರ್ 15ರ ನಂತರ ದೇಶದಲ್ಲಿ ಶಾಲೆಗಳನ್ನು ತೆರೆಯಬಹುದು ಎಂದು ಕೇಂದ್ರ ಸರ್ಕಾರ ಆರು ದಿನಗಳ ಹಿಂದೆಯೇ ಹೇಳಿತ್ತು. ಈಗ ಗೃಹ ಸಚಿವಾಲಯ ಶಾಲೆಗಳನ್ನು ತೆರೆಯಲು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

    ಪೋಷಕರ ಒಪ್ಪಿಗೆ ಮೇರೆಗೆ ಮಕ್ಕಳು ಶಾಲೆಗೆ ತೆರಳಬಹುದು. ಮಕ್ಕಳಿಗೆ ಹಾಜರಾತಿ ಕಡ್ಡಾಯ ಮಾಡುವಂತಿಲ್ಲ. ಆನ್‍ಲೈನ್ ತರಗತಿಗಳನ್ನು ಆಯ್ಕೆಯಾಗಿ ಇಟ್ಟುಕೊಳ್ಳಬಹುದು ಎಂದು ತಿಳಿಸಿದೆ.

    ಮಾರ್ಗಸೂಚಿಯಲ್ಲಿ ಏನಿದೆ?
    ಶಾಲಾ ಕೊಠಡಿಗಳನ್ನು ನಿತ್ಯವೂ ಸ್ಯಾನಿಟೈಸ್ ಮಾಡುವುದು ಕಡ್ಡಾಯ. ಎಲ್ಲಾ ಸಂದರ್ಭಗಳಲ್ಲಿಯೂ ಮಕ್ಕಳು, ಶಿಕ್ಷಕರು, ಸಿಬ್ಬಂದಿ ಮಾಸ್ಕ್ ಧರಿಸಬೇಕು. ಶಿಕ್ಷಕರು, ಮಕ್ಕಳು ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯ.

    ತುರ್ತು ಅಗತ್ಯಕ್ಕೆ ಸ್ಪಂದಿಸಲು ಟಾಸ್ಕ್ ಟೀಂ ರಚಿಸಬೇಕು. ಕಾರ್ಯಕ್ರಮಗಳು, ಕ್ರೀಡೆಗಳನ್ನು ಆಯೋಜಿಸಬಾರದು. ಪಾಠ, ಪರೀಕ್ಷೆ, ರಜೆಗೆ ಸಂಬಂಧಿಸಿದಂತೆ ಬದಲಾದ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಅನುಸರಿಸಬೇಕು. ಮಧ್ಯಾಹ್ನದ ಬಿಸಿಯೂಟದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪೌಷ್ಠಿಕಾಂಶ ಇರುವ ಆಹಾರ ನೀಡಬೇಕು.

  • ಸಿನಿಮಾ, ಧಾರಾವಾಹಿ ಶೂಟಿಂಗ್‌ಗೆ ಅನುಮತಿ –  ಮಾರ್ಗಸೂಚಿಯಲ್ಲಿ ಏನಿದೆ?

    ಸಿನಿಮಾ, ಧಾರಾವಾಹಿ ಶೂಟಿಂಗ್‌ಗೆ ಅನುಮತಿ – ಮಾರ್ಗಸೂಚಿಯಲ್ಲಿ ಏನಿದೆ?

    ನವದೆಹಲಿ: ಕೋವಿಡ್‌ 19 ನಿಂದ ಸ್ಥಗಿತಗೊಂಡಿದ್ದ ಶೂಟಿಂಗ್‌ ಚಟುವಟಿಕೆಗಳಿಗೆ ಸುರಕ್ಷಾ ಮಾರ್ಗಸೂಚಿಯನ್ನು(ಎಸ್‌ಒಪಿ) ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

    ಗೃಹ ಸಚಿವಾಲಯ ಮತ್ತು ಆರೋಗ್ಯ ಇಲಾಖೆಯ ಜೊತೆ ಚರ್ಚಿಸಿದ ಬಳಿಕ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

    ಮಾರ್ಚ್‌ 25 ರಂದು ಲಾಕ್‌ಡೌನ್‌ ಘೋಷಣೆಯಾದ ಬಳಿಕ ಶೂಟಿಂಗ್‌ ಕಾರ್ಯಗಳು ಸ್ಥಗಿತಗೊಂಡಿತ್ತು. 68 ದಿನಗಳ ಬಳಿಕ ಕೇಂದ್ರ ಸರ್ಕಾರ ಜೂನ್‌ 1 ರಿಂದ ಮಾರ್ಗಸೂಚಿಯನ್ನು ಬಿಡುಗಡೆ ಒಂದೊಂದೇ ಕ್ಷೇತ್ರಗಳ ಚಟುವಟಿಕೆಗಳಿಗೆ ಅನುಮತಿ ನೀಡಿತ್ತು. ಈಗ ಸಿನಿಮಾ ಮತ್ತು ಟಿವಿ ಸೀರಿಯಲ್‌ ಶೂಟಿಂಗ್‌ಗೆ ಅನುಮತಿ ನೀಡಿದೆ.

    ಕರ್ನಾಟಕ ಸರ್ಕಾರ ಮೇ 25 ರಿಂದ ಕನ್ನಡ ಧಾರಾವಾಹಿಗಳ ಶೂಟಿಂಗ್‌ಗೆ ಅನುಮತಿಯನ್ನು ನೀಡಿತ್ತು. ಕೊರೊನಾ ಹಿನ್ನೆಲೆಯಲ್ಲಿ ಮಾರ್ಚ್ 19 ರಿಂದ ಧಾರಾವಾಹಿ, ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿತ್ತು. ಅನೇಕ ಕಲಾವಿದರು, ತಂತ್ರಜ್ಞರು ಕಿರುತೆರೆಯನ್ನು ಅವಲಂಬಿಸಿದ ಹಿನ್ನೆಲೆಯಲ್ಲಿ ಹೀಗಾಗಿ ಟೆಲಿವಿಷನ್ ಅಸೋಸಿಯೇಷನ್ ಮಾರ್ಗಸೂಚಿ ಪ್ರಕಾರ ಚಿತ್ರೀಕರಣ ಮಾಡುವಂತೆ ಸೂಚನೆ ನೀಡಲಾಗಿತ್ತು.

    ಮಾರ್ಗಸೂಚಿಯಲ್ಲಿ ಏನಿದೆ?
    – ಶೂಟಿಂಗ್ ವೇಳೆ ಹೀರೋ/ಹೀರೋಯಿನ್‍ಗೆ ಮಾಸ್ಕ್ ರಿಯಾಯಿತಿ
    – ಆರು ಅಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯ
    – ಸಾಮಾಜಿಕ ಅಂತರ ಇಟ್ಟುಕೊಂಡೇ ಶೂಟಿಂಗ್‌ ನಟಿಸಬೇಕು
    – ಚಿತ್ರೀಕರಣ ಬಳಿಕ ನಟ ನಟಿಯರು ಮಾಸ್ಕ್ ಧರಿಸಬೇಕು
    – ಶೂಟಿಂಗ್ ಸ್ಥಳಕ್ಕೆ ಪ್ರೇಕ್ಷಕರಿಗೆ ಅವಕಾಶ ಇಲ್ಲ
    – ಶೂಟಿಂಗ್ ವೇಳೆ ಕಲಾವಿದರು ಅಲ್ಲದವರು ಎಲ್ಲರೂ ಮಾಸ್ಕ್ ಧರಿಸಲೇಬೇಕು


    – ಕಾಸ್ಟೂಮ್ಸ್, ಮೇಕಪ್ ಕಿಟ್ ಹಂಚಿಕೊಳ್ಳುವಂತಿಲ್ಲ
    – ಎಲ್ಲ ವಸ್ತುಗಳನ್ನು ಸ್ಯಾನಿಟೈಜ್ ಮಾಡಿದ ನಂತರವೇ ಬಳಸಬೇಕು
    – ಮೇಕಪ್ ಮ್ಯಾನ್, ಹೇರ್ ಡಿಸೈನರ್ಸ್ ಪಿಪಿಇ ಕಿಟ್ ಧರಿಸಬೇಕು
    – ಲ್ಯಾಪಲ್ ಮೈಕ್‍ಗಳನ್ನು ಒಬ್ಬರಿಂದ ಮತ್ತೊಬ್ಬರು ಹಂಚಿಕೊಳ್ಳುವಂತಿಲ್ಲ
    – ಥರ್ಮಲ್ ಸ್ಕಾನರ್ ಮೂಲಕ ಎಲ್ಲರನ್ನು ಪರೀಕ್ಷೆ ನಡೆಸಿ ಒಳಗಡೆ ಬಿಡಬೇಕು.
    – ಏರ್‌ ಕಂಡಿಷನ್‌ಗಳು 20-30 ಡಿಗ್ರಿ ಸೆಲ್ಶಿಯಸ್‌ನಲ್ಲಿ ಇರಬೇಕು

    – ಎಲ್ಲರೂ ಹಂಚಿಕೊಳ್ಳಬಹುದಾದ ಕೆಫೆಟೇರಿಯಾ, ಮೇಕಪ್‌ ರೂಂ, ಎಡಿಟ್‌ ರೂಂ, ವ್ಯಾನಿಟಿ ವ್ಯಾನ್‌ಗಳು, ವಾಷ್‌ರೂಂಗಳನ್ನು ಆಗಾಗ ಸ್ಯಾಟಿಟೈಸ್‌ ಮಾಡಬೇಕು.
    – ಹೊರಾಂಗಣ ಶೂಟಿಂಗ್‌ ಮಾಡುವ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳ ಜೊತೆ ಮೊದಲೇ ಮಾತುಕತೆ ನಡೆಸಿರಬೇಕು.