Tag: soorma

  • ಬ್ಯೂಟಿ ತಾಪ್ಸಿಯ `ಸೂರ್ಮಾ’ವತಾರ!

    ಬ್ಯೂಟಿ ತಾಪ್ಸಿಯ `ಸೂರ್ಮಾ’ವತಾರ!

    ಮುಂಬೈ: ‘ಸೂರ್ಮಾ’ – ಹಿಂದಿ ಚಿತ್ರ ನಿರ್ದೇಶಕ ಶಾದ್ ಆಲಿಯ ಪ್ರಥಮ ಜೀವಿತಗಾಥೆ ಆಧಾರಿತ ಚಿತ್ರ. ಇತ್ತೀಚೆಗೆ ಸೆನ್ಸಾರ್ ಮಂಡಳಿಯಿಂದ ‘ಯು’ ಸರ್ಟಿಫಿಕೇಟ್ ಪಡೆದ ಸೂರ್ಮಾ ಚಿತ್ರ, ನಮ್ಮ ಖ್ಯಾತ ಹಾಕಿ ಆಟಗಾರ ಸಂದೀಪ್ ಸಿಂಗ್ ಕುರಿತ ಬಯೋಪಿಕ್ ಆಗಿ ಮೂಡಿದೆ. ಫ್ಲಿಕರ್ ಸಿಂಗ್ ಎಂದೇ ಪ್ರಸಿದ್ಧಿ ಪಡೆದ ಸಂದೀಪ್ ಹಾಕಿ ಅಂಗಳದಲ್ಲಿ ಗರಿಷ್ಠ ಮಟ್ಟದ (145 ಕಿಮೀ.) ಡ್ರ್ಯಾಗ್ ಫ್ಲಿಕಿಂಗ್ ಮಾಡಬಲ್ಲ ಕೆಲವೇ ಅಂತರಾಷ್ಟ್ರೀಯ ಹಾಕಿ ಪಟುಗಳಲ್ಲಿ ಒಬ್ಬರು.

    ಸೂರ್ಮಾ ಚಿತ್ರದ ನಾಯಕ ದಿಲ್ಜಿತ್ ದೊಸಾಂಜ್ ಹಾಗೂ ನಾಯಕಿ ತಾಪ್ಸಿ ಪನ್ನು ಹಾಗೂ ಅಂಗದ್ ಬೇಡಿ ಪ್ರಮುಖ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಚಿತ್ರೀಕರಣದ ವೇಳೆ ಖುದ್ದು ಸಂದೀಪ್ ಸಿಂಗ್ ಹಾಗೂ ಸಹೋದರ ಬಿಕ್ರಮ್ ಜಿತ್ ಸಿಂಗ್ ಹಾಜರಿದ್ದು, ನಟ-ನಟಿಯರಿಗೆ ಹಾಕಿ ಕುರಿತು ಟಿಪ್ಸ್ ನೀಡಿದ್ದಾರೆ. 2018ರ ಉತ್ತರಾರ್ಧದಲ್ಲಿ ತಾಪ್ಸಿಯ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು, ತಾಪ್ಸಿ ಸೌತ್ ಸಿನಿಮಾದ ‘ಮೋಸ್ಟ್ ವಾಂಟೆಡ್’ ಹೀರೋಯಿನ್ ಆದರೂ ಅಚ್ಚರಿ ಇಲ್ಲ!

    ತಾಪ್ಸಿ ಸದ್ಯಕ್ಕೆ ಹಿಂದಿಯಲ್ಲಿ ಮುಲ್ಕ್, ತಡ್ಕಾ, ಬದ್ಲಾ, ಮನ್ ಮರ್ಜಿಯಾ ಚಿತ್ರಗಳಲ್ಲಿ ನಟಿಸಿದ್ದು, ತೆಲುಗಿನ ನೀವೆವರೋ, ತಮಿಳಿನ ಕಾನ್ ಚಿತ್ರಗಳು ಕೂಡ ಬಿಡುಗಡೆಗೆ ಸಿದ್ಧವಾಗುತ್ತಿವೆ. ಸೂರ್ಮಾದಲ್ಲಿ ತನ್ನ ಪಾತ್ರ ಬಹಳ ಚಾಲೆಂಜಿಂಗ್ ಆಗಿದ್ದು, ಬಾಕ್ಸಾಫೀಸಿನಲ್ಲಿ ಹಿಟ್ ಆಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾಳೆ ಬ್ಯೂಟಿ ತಾಪ್ಸಿ!

  • ದಿಲ್ಜಿತ್‍ಗೆ ಜೊತೆಯಾದಳು ತಾಪ್ಸಿ ಪನ್ನು!

    ದಿಲ್ಜಿತ್‍ಗೆ ಜೊತೆಯಾದಳು ತಾಪ್ಸಿ ಪನ್ನು!

    – ಇದು ಹಾಕಿ ಪ್ಲೇಯರ್ ಫ್ಲಿಕರ್ ಸಿಂಗ್ ಕಥೆ

    ಬೆಂಗಳೂರು: ತಾನು ಮಾಡೋ ಪಾತ್ರಗಳೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಭಿನ್ನವಾಗಿರ ಬೇಕು ಮತ್ತು ಸವಾಲಿನದ್ದಾಗಿರಬೇಕೆಂಬ ತುಡಿತ ಹೊಂದಿರೋ ಅಪ್ಪಟ ನಟಿ ತಾಪ್ಸಿ ಪನ್ನು. ಈಕೆ ಇದೀಗ ತನ್ನ ಮನದಿಂಗಿತಕ್ಕೆ ತಕ್ಕುದಾದೊಂದು ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಖ್ಯಾತ ಹಾಕಿ ಪ್ಲೇಯರ್ ಸಂದೀಪ್ ಸಿಂಗ್ ಅವರ ಜೀವನದ ನಿಜವಾದ ಘಟನೆಗಳನ್ನಾಧರಿಸಿದ ‘ಸೂರ್ಮಾ’ ಚಿತ್ರದಲ್ಲಿ ತಾಪ್ಸಿ ದಿಲ್ಜಿತ್ ದೂಸಾಂಜ್‍ಗೆ ಜೊತೆಯಾಗಿ ನಟಿಸುತ್ತಿದ್ದಾಳೆ.

    ಹಾಕಿ ಆಟದಲ್ಲಿ ಫ್ಲಿಕರ್ ಸಿಂಗ್ ಎಂದೇ ಖ್ಯಾತನಾಗಿರೋ ಸಂದೀಪ್ ಸಿಂಗ್ ಪಾತ್ರ ದಿಲ್ಜಿತ್‍ಗೆ ಸವಾಲಿನದ್ದಾದರೆ, ಆತನಿಗೆ ಜೊತೆಯಾಗಿ ನಟಿಸೋ ಪಾತ್ರವೂ ತಾಪ್ಸಿ ಪಾಲಿಗೆ ಚಾಲೆಂಜ್. ಇದೀಗ ಈ ಚಿತ್ರದ ಹಾಡೊಂದು ಅನಾವರಣಗೊಂಡಿದೆ. ಇದನ್ನು ಸ್ವತಃ ದಿಲ್ಜಿತ್ ಹಾಡಿರೋದು ವಿಶೇಷ. ಈ ಚಿತ್ರ ಹಾಕಿ ಆಟಕ್ಕೆ ಸಂಬಂಧಿಸಿದ್ದಾದರೂ ಕೂಡಾ ಸಂಗೀತಕ್ಕೂ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟಿರುವುದು ಮತ್ತೊಂದು ವಿಶೇಷ.

    ದಿಲ್ಜಿತ್ ಸಿಂಗ್ ಹಾಡಿರೋ ಈ ಚಿತ್ರದ ಹಾಡನ್ನು ಬರೆದಿರುವವರು ಖ್ಯಾತ ಕವಿ ಗುಲ್ಜಾರ್. ಇದಕ್ಕೆ ಶಂಕರ್ ಇಶಾನ್ ಲಾಯ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಂದರ್ಭದಲ್ಲಿಯೇ ದಿಲ್ಜಿತ್ ಕವಿ ಗುಲ್ಜಾರ್ ಅವರನ್ನು ಭೇಟಿಯಾದ ಬಗ್ಗೆಯೂ ಖುಷಿಗೊಂಡಿದ್ದಾರೆ. ಜಗತ್ತಿನಲ್ಲಿಯೇ ಡೇಂಜರಸ್ ಆಗಿರೋ ಡ್ರ್ಯಾಗ್ ಫ್ಲಿಕರ್ಸ್ ಮೂಲಕವೇ ಖ್ಯಾತರಾದ ಸಂದೀಪ್ ಸಿಂಗ್ ಜೀವನದಿಂದ ಸ್ಫೂರ್ತಿ ಪಡೆದಿರೋ ಈ ಚಿತ್ರದಲ್ಲಿ ತಾಪ್ಸಿಯ ಪಾತ್ರವೂ ಗಮನಾರ್ಹವಾಗಿದೆಯಂತೆ.

    ತಾಪ್ಸಿ ಪನ್ನು ಸ್ವತಃ ಖುಷಿಯಿಂದ ಒಪ್ಪಿಕೊಂಡಿರೋ ಈ ಚಿತ್ರದ ಹಾಡೊಂದು ಇದೀಗ ಅನಾವರಣಗೊಂಡಿದೆ. ಈ ಚಿತ್ರ ಈ ವರ್ಷ ತಾಪ್ಸಿ ಅಕೌಂಟಿಗೆ ಮತ್ತೊಂದು ಹಿಟ್ ಚಿತ್ರವಾಗಿ ಜಮೆಯಾಗುತ್ತದೆಂಬ ಭರವಸೆ ಚಿತ್ರ ತಂಡದಲ್ಲಿದೆ.