Tag: Soorarai Pottru

  • ತಮಿಳಿನಲ್ಲಿ ತಾವೇ ಹೀರೋ ಆದ ಚಿತ್ರಕ್ಕೆ, ಹಿಂದಿ ರೀಮೇಕ್‌ನಲ್ಲಿ ಅತಿಥಿ ಪಾತ್ರ ಮಾಡಿದ ತಮಿಳು ನಟ ಸೂರ್ಯ

    ತಮಿಳಿನಲ್ಲಿ ತಾವೇ ಹೀರೋ ಆದ ಚಿತ್ರಕ್ಕೆ, ಹಿಂದಿ ರೀಮೇಕ್‌ನಲ್ಲಿ ಅತಿಥಿ ಪಾತ್ರ ಮಾಡಿದ ತಮಿಳು ನಟ ಸೂರ್ಯ

    ಭಾರತೀಯ ಕೆಳ, ಮಧ್ಯಮ ವರ್ಗದ ಕುಟುಂಬಕ್ಕೂ ವಿಮಾನಯಾನವನ್ನು ಸುಗಮಗೊಳಿಸಿದ, ಅತೀ ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಸಿಗುವಂತೆ ಮಾಡಿದ ಕ್ಯಾಪ್ಟನ್ ಗೋಪಿನಾಥ್ ಬದುಕಿನ ಸಿನಿಮಾ ತಮಿಳಿನಲ್ಲಿ ಸೂರೈರ್ ಪ್ರೊಟ್ರು ಹೆಸರಿನಲ್ಲಿ ಮೂಡಿ ಬಂದಿತ್ತು. ಬಾಕ್ಸ್ ಆಫೀಸಿನಲ್ಲೂ ಅದು ಸದ್ದು ಮಾಡಿತ್ತು. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿ ಬಂದ ಈ ಚಿತ್ರವು ಇದೀಗ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ಹಿಂದಿ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ.

    ತಮಿಳಿನಲ್ಲಿ ಈ ಸಿನಿಮಾ ಬಂದಾಗ ತಮಿಳಿನ ಖ್ಯಾತ ನಟ ಸೂರ್ಯ ಅವರೇ ಈ ಚಿತ್ರವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದ್ದರು. ಈ ಸಿನಿಮಾ ಅದ್ಭುತವಾಗಿ ಮೂಡಿ ಬಂದಿತ್ತು. ನಾಲ್ಕೈದು ಭಾಷೆಗೂ ಡಬ್ ಆಗಿತ್ತು. ಇದೀಗ ಅದೇ ಸಿನಿಮಾವನ್ನು ಹಿಂದಿಯಲ್ಲಿ ಅಕ್ಷಯ್ ಕುಮಾರ್ ಮಾಡುತ್ತಿದ್ದಾರೆ. ಕ್ಯಾಪ್ಟನ್ ಗೋಪಿನಾಥ್ ಅವರ ಪಾತ್ರವನ್ನು ಅಕ್ಷಯ್ ಕುಮಾರ್ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸೂರ್ಯ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರೆ. ಇದನ್ನೂ ಓದಿ : ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ: ಸಾಯಿ ಪಲ್ಲವಿ ವೀಡಿಯೋ ವೈರಲ್

    ಸೂರೈರ್ ಪೋಟ್ರು ಸಿನಿಮಾವನ್ನು ತಮಿಳಿನಲ್ಲಿ ಮಾಡಿದ್ದ ನಿರ್ದೇಶಕರೇ ಹಿಂದಿಯಲ್ಲೂ ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ ಸೂರ್ಯ ಅವರು ಅತಿಥಿ ಪಾತ್ರವನ್ನು ಒಪ್ಪಿಕೊಂಡಿದ್ದಾರಂತೆ. ಮೊದಲು ಇದು ಗಾಸಿಪ್ ಎನ್ನುವಂತೆ ಸುದ್ದಿಯಾಗಿತ್ತು. ಆದರೆ ಇದೀಗ ಸ್ವತಃ ಸೂರ್ಯ ಅವರೇ ಈ ಮಾಹಿತಿಯನ್ನು ಖಚಿತ ಪಡಿಸಿದ್ದಾರೆ. ಅಕ್ಷಯ್ ಕುಮಾರ್ ಜೊತೆಗಿದ್ದ ಫೋಟೋವನ್ನು ಅವರು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಆದರೆ, ಯಾವ ಪಾತ್ರ ಎನ್ನುವುದನ್ನು ಮಾತ್ರ ಗೌಪ್ಯವಾಗಿ ಇಡಲಾಗಿದೆ.

    Live Tv

  • 2021ರ ಆಸ್ಕರ್ ರೇಸ್‍ನಲ್ಲಿ ಸೂರರೈ ಪೊಟ್ರು

    2021ರ ಆಸ್ಕರ್ ರೇಸ್‍ನಲ್ಲಿ ಸೂರರೈ ಪೊಟ್ರು

    ಚೆನ್ನೈ: ಇತ್ತೀಚೆಗೆ ಬಿಡುಗಡೆಗೊಂಡ ಸೂರ್ಯ ನಟನೆಯ ಸೂರರೈ ಪೊಟ್ರು ಬಯೋಪಿಕ್ ಚಿತ್ರಪ್ರೇಮಿಗಳ ಮನಗೆದ್ದಿತ್ತು. ಇದೀಗ ಈ ಚಿತ್ರ 2021 ಆಸ್ಕರ್ ರೇಸ್ ಎಂಟ್ರಿ ಪಡೆದುಕೊಂಡಿದೆ.

    ಅಕಾಡೆಮಿ ಆಫ್ ಮೋಶನ್ ಪಿಕ್ಚರ್ ಆಫ್ ಆರ್ಟ್ ಆ್ಯಂಡ್ ಸೈನ್ಸ್ ಬಿತ್ತರಿಸಿರುವ ಮಾಹಿತಿ ಪ್ರಕಾರ 366 ಚಲನಚಿತ್ರಗಳನ್ನು 93ನೇ ಆಸ್ಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು. ಇದರಲ್ಲಿ ಸೂರ್ಯ ನಟನೆಯ ಸೂರರೈ ಪೊಟ್ರು ಸಿನಿಮಾ ಕೂಡ ಒಂದಾಗಿದೆ.

    ಕನ್ನಡಿಗ ಜಿ.ಆರ್ ಗೋಪಿನಾಥ್ ಅವರ ಕಥೆಯನ್ನಾಧರಿಸಿಕೊಂಡು ಮಾಡಿರುವ ಚಿತ್ರ ಸೂರರೈ ಪೊಟ್ರು. ಕ್ಯಾಪ್ಟನ್ ಗೋಪಿನಾಥ್ ದೇಶಕ್ಕಾಗಿ ಕೊಟ್ಟ ಕೊಡುಗೆಯನ್ನು ತಿಳಿಸುವ ಪ್ರಯತ್ನ ಮಾಡಿರುವ ಚಿತ್ರತಂಡ ಸಿನಿಪ್ರಿಯರ ಮನಗೆದ್ದಿತ್ತು.

    ಅತೀ ಮನೋಜ್ಞವಾಗಿ ನಟಿಸಿರುವ ಸೂರ್ಯ ಅವರ ನಟನೆ ಹಾಗೂ ಅವರ ಪತ್ನಿ ಪಾತ್ರಧಾರಿಯಾಗಿ ಮಿಂಚಿರುವ ಅರ್ಪಣ ಬಾಲಮುರಳಿ ಅವರು ಸಿನಿಮಾದುದ್ದಕ್ಕೂ ಕೌಟುಂಬಿಕ ಸನ್ನಿವೇಶವನ್ನು ಉತ್ತಮವಾಗಿ ಅಭಿನಯದ ಮೂಲಕ ಸಿನಿರಸಿಕರಿಗೆ ಉಣಬಡಿಸಿದ್ದಾರೆ.

    ಸೂರರೈ ಪೊಟ್ರು ಚಿತ್ರವನ್ನು ಸುಧಾ ಕೊಂಗರಾ ನಿರ್ದೇಶನ ಮಾಡಿದ್ದು, ಸೂರ್ಯ ಅವರ ಹೋಮ್ ಬ್ಯಾನರ್ 2ಡಿ ಎಂಟಟೈನ್ಮೆಂಟ್‍ನಲ್ಲಿ ನಿರ್ಮಾಣಮಾಡಲಾಗಿದೆ. ಚಿತ್ರದಲ್ಲಿ ಸಂಗೀತವನ್ನು ಜಿ.ವಿ ಪ್ರಕಾಶ್ ನೀಡಿ ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

    ಇದೀಗ ಸೂರರೈ ಪೊಟ್ರು ಸಿನಿಮಾ 2021ರ ಆಸ್ಕರ್ ಪ್ರಶಸ್ತಿ ಸುತ್ತಿನಲ್ಲಿ ಉತ್ತಮ ನಟ, ಉತ್ತಮ ನಟಿ, ಉತ್ತಮ ಡೈರೆಕ್ಟರ್ ಮತ್ತು ಇತರ ವಿಭಾಗಗಳಲ್ಲಿ ಸ್ವರ್ಧೆಗೆ ತಯಾರಾಗಿದೆ. ಅಕಾಡೆಮಿಯ ವೋಟಿಂಗ್ ಮಾರ್ಚ್ 5 ರಿಂದ 10 ವರೆಗೆ ನಡೆಯಲಿದ್ದು, ನಾಮಿನೇಶನ್ ಅಂತಿಮವಾಗಿ ಮಾರ್ಚ್ 15 ರಂದು ಹೊರಬೀಳಲಿದೆ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದೆ.

    ಕೋವಿಡ್- 19ನಿಂದಾಗಿ ಈಬಾರಿಯ ಆಸ್ಕರ್ ಪ್ರಶಸ್ತಿಯಲ್ಲಿ ಹಲವು ಬದಲಾವಣೆ ಮಾಡಲಾಗಿದ್ದು, ಈ ಬಾರಿ ಒಟಿಟಿಗಳಲ್ಲಿ ಬಿಡುಗಡೆಗೊಂಡ ಚಿತ್ರಗಳನ್ನು ಪ್ರಶಸ್ತಿ ಸುತ್ತಿಗೆ ನಾಮನಿರ್ದೇಶನ ಮಾಡುವ ನಿಯಮವನ್ನು ಜಾರಿಗೆ ತರಲಾಗಿದೆ.

  • ಆಸ್ಕರ್ ರೇಸ್‍ನಲ್ಲಿ ಸೂರರೈ ಪೊಟ್ರು – ಕನ್ನಡಿಗ ಗೋಪಿನಾಥ್ ಜೀವನ ಕಥೆ

    ಆಸ್ಕರ್ ರೇಸ್‍ನಲ್ಲಿ ಸೂರರೈ ಪೊಟ್ರು – ಕನ್ನಡಿಗ ಗೋಪಿನಾಥ್ ಜೀವನ ಕಥೆ

    ಬೆಂಗಳೂರು: ಕನ್ನಡಿಗ ಜಿ.ಆರ್.ಗೋಪಿನಾಥ್ ಅವರ ಜೀವನಕಥೆಯ ಸೂರರೈ ಪೊಟ್ರು ಸಿನಿಮಾ ಆಸ್ಕರ್ ಪ್ರಶಸ್ತಿಯ ಸ್ಪರ್ಧೆಗೆ ಎಂಟ್ರಿ ಪಡೆದುಕೊಂಡಿದೆ.

    ಸೂರರೈ ಪೊಟ್ರು ಓಟಿಟಿ ಪ್ಲಾಟ್‍ಫಾರಂನಲ್ಲಿ ಬಿಡುಗಡೆಯಾದ ಮೊದಲ ಸ್ಟಾರ್ ನಟನ ತಮಿಳು ಚಿತ್ರ. ಕನ್ನಡಿಗ ಗೋಪಿನಾಥ್ ಅವರ ಪಾತ್ರದಲ್ಲಿ ನಟ ಸೂರ್ಯ ನಟಿಸಿದ್ದರು. ತಮಿಳು ಭಾಷೆಯ ಬಹುನಿರೀಕ್ಷಿತ ಸಿನಿಮಾ ಆಗಿದ್ದರೂ ಕೋವಿಡ್-19 ಹಿನ್ನೆಲೆ ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಮಾಡಲಾಗಿತ್ತು. ಓಟಿಟಿ ಪ್ಲಾಟ್‍ಫಾರಂನಲ್ಲಿ ವೀಕ್ಷಕರನ್ನ ತನ್ನತ್ತ ಸೆಳೆಯುವಲ್ಲಿ ಚಿತ್ರ ಯಶಸ್ವಿಯಾಗಿತ್ತು. ಅಬ್ಬರ ಪ್ರಚಾರವಿಲ್ಲದಿದ್ರೂ ಅಭಿಮಾನಿಗಳಿಂದಲೇ ದೊಡ್ಡ ಮಟ್ಟದ ಪ್ರಮೋಷನ್ ಪಡೆದುಕೊಂಡಿದ್ದು ಸತ್ಯ. ಹಾಗಾಗಿ ನೆಟ್ಟಿಗರು ಮೊಬೈಲ್ ಗಳಲ್ಲಿ ಸೂರರೈ ಪೊಟ್ರು ಹುಡುಕಾಡಿದ್ದರು.

    ಚಿತ್ರ ಜನರಲ್ ಕೆಟಗಿರಿಯಲ್ಲಿ ಆಸ್ಕರ್ ಪ್ರವೇಶಿಸಿದೆ. ಉತ್ತಮ ನಟ, ಉತ್ತಮ ನಟಿ, ಉತ್ತಮ ನಿರ್ದೇಶಕ, ಉತ್ತಮ ಸಂಯೋಜನೆ, ಉತ್ತಮ ಚಿತ್ರಕಥೆ, ರಚನೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸಿನಿಮಾ ಸ್ಪರ್ಧೆಯಲ್ಲಿದೆ. ಸೂರರೈ ಪೊಟ್ರು ವೀಕ್ಷಿಸಿದ ಅಕಾಡೆಮಿ ಸ್ಕ್ರೀನಿಂಗ್ ಸದಸ್ಯರು ಚಿತ್ರಕ್ಕೆ ಮತ ನೀಡಿ ಆಸ್ಕರ್ ಗೆ ನಾಮಿನೇಷನ್ ಮಾಡಿದ್ದಾರೆ.

    ಸುಧಾ ಕೊಂಗರ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಸೂರ್ಯ, ಪರೇಶ್ ರಾವಲ್, ಅಪರ್ಣಾ ಬಲಮುರಳಿ, ಊರ್ವಶಿ, ಮೋಹನ್ ಬಾಬು, ಕರುಣಾಸ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಪುಟ್ಟ ಗ್ರಾಮದ ಯುವಕ ಹೇಗೆ ಒಂದು ವಿಮಾನಯಾನ ಸಂಸ್ಥೆ ಕಟ್ಟುತ್ತಾನೆ? ಆತನಿಗೆ ಯಾವೆಲ್ಲ ತೊಂದರೆಗಳು ಎದುರಾಗುತ್ತೆ ಅನ್ನೋ ಕಥಾ ಹಂದರವನ್ನು ಸೂರರೈ ಪೊಟ್ರು ಹೊಂದಿದೆ.