Tag: sonupatil

  • ಒಂದು ಕ್ಷಣವೂ ಯೋಚಿಸದೇ ಸುದೀಪ್ ಸರ್ ನನಗೆ ಸಹಾಯ ಮಾಡಿದ್ದಾರೆ : ಸೋನು ಪಾಟೀಲ್

    ಒಂದು ಕ್ಷಣವೂ ಯೋಚಿಸದೇ ಸುದೀಪ್ ಸರ್ ನನಗೆ ಸಹಾಯ ಮಾಡಿದ್ದಾರೆ : ಸೋನು ಪಾಟೀಲ್

    ಬೆಂಗಳೂರು: ಬಿಗ್‍ಬಾಸ್ ಸ್ಪರ್ಧಿ, ನಟಿ ಸೋನು ಪಾಟೀಲ್ ಅವರಿಗೆ ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಅವರು ಮಾಡಿರುವ ಸಹಾಯವನ್ನು ನೆನೆದು ಇನ್‍ಸ್ಟಾಗ್ರಾಮ್‍ನಲ್ಲಿ ಒಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ.

     

    ನಾನು ಕಷ್ಟದಲ್ಲಿದ್ದಾಗ ಕಂಡಕಂಡವರ ಬಳಿ ಸಹಾಯವನ್ನು ಕೇಳಿದ್ದೇನೆ. ನನ್ನ ತಾಯಿ ಆರೋಗ್ಯದಲ್ಲಿ ಏರುಪೇರಾಗಿತ್ತು. ನನ್ನ ತಾಯಿ ಚಿಕಿತ್ಸೆಗೆ ಹಲವರ ಬಳಿ ಸಹಾಯಕ್ಕಾಗಿ ಅಂಗಲಾಚಿದೆ. ಎಲ್ಲರೂ ಸಹಾಯ ಮಾಡುವ ಮಾತುಗಳನ್ನಾಡಿದರೇ ವಿನಾಃ ಯಾರು ಸಹಾಯ ಮಾಡಲಿಲ್ಲ.

    ಕೊನೆಗೆ ಸುದೀದ್ ಸರ್ ಬಳಿ ನನ್ನ ನೋವು ಹೇಳಿಕೊಂಡೆ. ಒಂದು ಕ್ಷಣವೂ ಯೋಚಿಸದೇ ಸುದೀಪ್ ಸರ್ ನನಗೆ ಸಹಾಯ ಮಾಡಿದ್ದಾರೆ. ನನ್ನ ತಾಯಿ ಚಿಕಿತ್ಸೆಗೆ ಲಕ್ಷ ರೂಪಾಯಿ  ಖರ್ಚು ಮಾಡಿದ್ದಾರೆ. ನನ್ನ ಕಷ್ಟಕ್ಕೆ ಬೆನ್ನೆಲುಬಾಗಿ ನಿಂತು ನಮಗೆ ಸಹಾಯ ಮಾಡಿದ ಕಿಚ್ಚ ಸುದೀಪ್ ಸರ್‍ಗೆ ನನ್ನ ಧನ್ಯವಾದ ಎಂದು ಹೇಳುತ್ತಾ ಸೋನು ಅವರು ಕಣ್ಣೀರು ಹಾಕಿದ್ದಾರೆ.