ಬೆಂಗಳೂರು: ಮಾನ್ಯತೆ ಪಡೆಯದ ಬೆಟ್ಟಿಂಗ್ ಆಪ್ ಬಗ್ಗೆ ಪ್ರಮೋಷನ್ (Betting App Promote) ಮಾಡಿದ ಆರೋಪದ ಮೇಲೆ ವಿಚಾರಣೆ ಎದುರಿಸಿದ್ದ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಸೇರಿದಂತೆ ಹಲವರು ಈಗ ಕ್ಷಮೆ ಕೋರಿದ್ದಾರೆ.

ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಹಾಗೇ ನಮ್ಮ ರೀಲ್ಸ್ ಸ್ಟಾರ್‌ಗಳಿಗೆ ಬಿಸಿಮುಟ್ಟುತ್ತಿದ್ದಂತೆ ಜ್ಞಾನೋದಯವಾಗಿದೆ. ತಾವು ಮಾಡಿದ ತಪ್ಪಿನ ಬಗ್ಗೆ ಅರಿವಾಗಿ ಯಾವ ಯಾವ ಅಕೌಂಟ್‌ಗಳಲ್ಲಿ ಬೆಟ್ಟಿಂಗ್ ಬಗ್ಗೆ ಪುಂಕಾನು ಪಂಕವಾಗಿ ಪುಂಗಿ ಊದುತ್ತಾ ಜನರನ್ನ ದಾರಿ ತಪ್ಪಿಸುವ ಪ್ರಯತ್ನ ಪಟ್ಟಿದ್ರೋ ಅದೇ ಅಕೌಂಟ್‌ಗಳಲ್ಲಿ ಇನ್ಮುಂದೆ ನಾನು ಯಾವುದೇ ಕಾರಣಕ್ಕೂ ಬೆಟ್ಟಿಂಗ್ ಪ್ರಮೋಷನ್ ಮಾಡಲ್ಲ. ನಾವು ಬೆಟ್ಟಿಂಗ್ ಪ್ರಮೋಷನ್ ಮಾಡುವುದರಿಂದ ಜನರ ಲಕ್ಷಾಂತರ ರೂಪಾಯಿ ಹಾಕಿ ಬೀದಿಗೆ ಬರ್ತಾರೆ. ಹಾಗಾಗಿ ಐಪಿಎಲ್ ಬೆಟ್ಟಿಂಗ್ ಬಗ್ಗೆ ಯಾರೇಲ್ಲ ಪ್ರಮೋಷನ್ ಮಾಡ್ತಾ ಇದ್ದಿರಾ ಅವರೇಲ್ಲರು ಕೂಡ ದಯವಿಟ್ಟು ಸ್ಟಾಪ್ ಮಾಡಿ ಅಂತಲೂ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿರುವ ಸೋನು ಶ್ರೀನಿವಾಸ್‌ಗೌಡ, ದೀಪಕ್ ಗೌಡ, ಬೆಟ್ಟಿಂಗ್ ಬಗ್ಗೆ ಪ್ರಮೋಷನ್ ನಾನು ಸ್ಟಾಪ್ ಮಾಡ್ತಿನಿ. ನೀವು ಕೂಡ ಸ್ಟಾಪ್ ಮಾಡಿ ಅಂತ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬೆಟ್ಟಿಂಗ್ ಆಪ್ ಪ್ರಮೋಟ್ ಆರೋಪ – ಸೋನು ಗೌಡ ಸೇರಿ 100ಕ್ಕೂ ಹೆಚ್ಚು ರೀಲ್ಸ್ ಸ್ಟಾರ್‌ಗಳ ವಿಚಾರಣೆ

ಇತ್ತೀಚೆಗಷ್ಟೇ 100ಕ್ಕೂ ಅಧಿಕ ರೀಲ್ಸ್ ಸ್ಟಾರ್‌ಗಳು ಬೆಂಗಳೂರು ಸೈಬರ್ ಕ್ರೈಂ ಪೊಲೀಸರ ತನಿಖೆ ಎದುರಿಸಿದ್ದರು. ಐಪಿಎಲ್ ಬೆಟ್ಟಿಂಗ್ ಆಪ್‌ಗಳ ಬಗ್ಗೆ ಪ್ರಮೋಷನ್ ಮಾಡಿದ್ದ ಕಾರಣ ಸುಮಾರು 50ಕ್ಕೂ ಹೆಚ್ಚು ಸ್ಟಾರ್‌ಗಳಿಗೆ ಸೈಬರ್ ಕ್ರೈಂ ಪೊಲೀಸರು ನೋಟಿಸ್ ಕೊಟ್ಟು ವಿಚಾರಣೆ ಎದುರಿಸಿದ್ದರು. ದುಡ್ಡಿನ ಆಸೆಗೆ ಬಿದ್ದು ಬೆಟ್ಟಿಂಗ್ ಆಪ್‌ಗಳ ಬಗ್ಗೆ ಪ್ರಮೋಟ್ ಮಾಡಿದರೆ ಕೇಸ್ ಹಾಕಿ ಜೈಲಿಗೆ ಕಳಿಸುವ ಎಚ್ಚರಿಕೆಯನ್ನೂ ಪೊಲೀಸರು ನೀಡಿದ್ದರು. ಹಾಗಾಗಿ ಬೆಟ್ಟಿಂಗ್ ಆಪ್‌ಗಳ ಬಗ್ಗೆ ಪ್ರಮೋಟ್ ಮಾಡಿದ್ದ ವಿಡಿಯೋಗಳನ್ನ ಡಿಲೀಟ್ ಮಾಡಿ ಅವರದ್ದೇ ಅಕೌಂಟ್‌ಗಳಲ್ಲಿ ಅಪಾಲಜಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮೆಟ್ರೋ ಯಡವಟ್ಟಿಗೆ ಮತ್ತೊಂದು ಬಲಿ – ವಯಾಡೆಕ್ಟ್ ಉರುಳಿ ಬಿದ್ದು ಆಟೋ ಅಪ್ಪಚ್ಚಿ, ಚಾಲಕ ಸಾವು!







ಇತ್ತೀಚೆಗೆ ಸೋನು ಅವರ ಯೂಟ್ಯೂಬ್‌ನಲ್ಲಿ ಮದುವೆ ಬಗ್ಗೆ ಮಾತನಾಡಿದರು. ಸದ್ಯದಲ್ಲೇ ನನ್ನ ಮದುವೆ ಬಗ್ಗೆ ಅನೌನ್ಸ್ ಮಾಡುತ್ತೀನಿ. ಎಲ್ಲರ ಮದುವೆ ನೋಡಿ ನೋಡಿ ನನಗೂ ಮದುವೆ ಆಗಬೇಕು ಅಂತ ಅನಿಸುತ್ತಿದೆ ಎಂದಿದ್ದರು. ಆದರೆ ಹುಡುಗ ಯಾರು ಅಂತ ಅವರು ರಿವೀಲ್ ಮಾಡಿರಲಿಲ್ಲ. ಇದೀಗ ಖುದ್ದು ಅವರೇ ತಿಳಿಸಿದ್ದಾರೆ.
ಕುಟುಂಬಸ್ಥರು ನಿಶ್ಚಿಯಿಸಿದ ಅರೇಂಜ್ ಮ್ಯಾರೇಜ್ ಇದಾಗಿದೆ. ಹುಡುಗನ ಕಡೆಯವರು ನಮ್ಮ ಕುಟುಂಬಸ್ಥರನ್ನು ಅಪ್ರೋಚ್ ಮಾಡಿದರು. ಒಳ್ಳೆಯ ಹುಡುಗ, ಒಳ್ಳೆಯ ಸಂಬಂಧ ಇದಾಗಿದ್ದು, ನನ್ನ ತಾಯಿ ಸಮ್ಮತಿ ಸೂಚಿಸಿದರು. ಹಾಗಾಗಿ ನಾನು ಕೂಡ ಈ ಮದುವೆಗೆ ಒಪ್ಪಿಕೊಂಡೆ. ಒಳ್ಳೆಯ ಸಂಬಂಧ ಅಂದರೆ ನಾನ್ಯಾಕೆ ಒಪ್ಪಿಕೊಳ್ಳಬಾರದು ಎನಿಸಿತು. ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದರೆ ಅದು ಸರಿಯಾದ ನಿರ್ಣಯ ಆಗಿರುತ್ತದೆ ಎಂಬ ನಂಬಿಕೆಯಿದೆ ಎಂದು ಸೋನು ಮದುವೆ ಕುರಿತು ಮಾತನಾಡಿದ್ದಾರೆ.













ಪಿಂಕ್ ಬಣ್ಣ ಸೀರೆಯುಟ್ಟು ಸೋನು ಗೌಡ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ. ಕಹಿನೆಲ್ಲಾ ಮರೆತು ಖುಷಿಯಿಂದ ಹೊಸ ಹೆಜ್ಜೆ ಇಡುತ್ತಿದ್ದಾರೆ ನಟಿ ಸೋನು. ಇದನ್ನೂ ಓದಿ:
ಜೈಲಿಂದ ರಿಲೀಸ್ ಆದ್ಮೇಲೆ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡೋಕೆ ಸೋನು ನಿರಾಕರಿಸಿದ್ದರು. ಆದರೆ ಅವರ ಲಾಯರ್ ಸೂಚನೆಯ ಮೇರೆಗೆ ಸೋನು ಯಾವುದೇ ರಿಯಾಕ್ಷನ್ ನೀಡಿರಲಿಲ್ಲ. ಆದರೆ ಈ ಪ್ರಕರಣದ ಇನ್ನೂ ತನಿಖೆ ನಡೆಯುತ್ತಿದೆ.
