Tag: son’s

  • ಚುನಾವಣಾ ಅಖಾಡದಲ್ಲಿ ಅಪ್ಪ-ಮಕ್ಕಳು : ಗೆದ್ದೋರು ಯಾರು? ಸೋತವರು ಯಾರು?

    ಚುನಾವಣಾ ಅಖಾಡದಲ್ಲಿ ಅಪ್ಪ-ಮಕ್ಕಳು : ಗೆದ್ದೋರು ಯಾರು? ಸೋತವರು ಯಾರು?

    ಬೆಂಗಳೂರು : ಈ ಬಾರಿ ವಿಧಾನಸಭೆ ಚುನಾವಣೆ (Assembly Election 2023) ಹತ್ತು ಹಲವು ವಿಶೇಷಗಳಿಂದ ಕೂಡಿತ್ತು. ಕುಟುಂಬ ರಾಜಕಾರಣದ ಬಗ್ಗೆ ಬಹುತೇಕ ಪಕ್ಷಗಳು ಭಾಷಣ ಮಾಡಿದ್ದರೂ, ಗೆಲ್ಲುವ ಹಿತದೃಷ್ಟಿಯಿಂದ ಒಂದೇ ಕುಟುಂಬಕ್ಕೆ ಟಿಕೆಟ್ ನೀಡಿದ ಉದಾಹರಣೆಗಳು ಇವೆ. ಅದರಲ್ಲೂ ತಂದೆ (Dad) ಮಗ (Sons) ಅಥವಾ ತಂದೆ ಮಗಳಿಗೆ ಟಿಕೆಟ್ ನೀಡುವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದವು ಆಯಾ ಪಕ್ಷಗಳು. ಈ ಬಾರಿ ಯಾವ ಕ್ಷೇತ್ರದಲ್ಲಿ ಯಾರೆಲ್ಲ ಅಪ್ಪ ಮಕ್ಕಳು ಅಭ್ಯರ್ಥಿಯಾಗಿದ್ದರು? ಯಾರು ಸೋತಿದ್ದಾರೆ, ಯಾರು ಗೆದ್ದಿದ್ದಾರೆ ಎನ್ನುವ ಲೆಕ್ಕಾಚಾರ ಇಲ್ಲಿದೆ.

    ಅರಕಲಗೂಡಿನಲ್ಲಿ ಜೆಡಿಎಸ್‌ (JDS) ನಿಂದ ಎ. ಮಂಜು ಜಯಗಳಿಸಿದ್ದರೆ, ಬಿಜೆಪಿಯ ಭದ್ರ ಕೋಟೆ ಎನಿಸಿದ್ದ ಮಡಿಕೇರಿಯಲ್ಲಿ ಅವರ ಮಗ ಕಾಂಗ್ರೆಸ್ (Congress) ನಿಂದ ಡಾ. ಮಂಥರ್ ಗೌಡ ಜಯಗಳಿಸಿದ್ದಾರೆ. ಇಬ್ಬರೂ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವುದು ವಿಶೇಷ.  ಜೆಡಿಎಸ್‌ ರಾಜಾಧ್ಯಕ್ಷ ಮಾಜಿ ಮುಖ್ಯಮಂತಿ ಹೆಚ್.ಡಿ. ಕುಮಾರ ಸ್ವಾಮಿ ಚನ್ನಪಟ್ಟಣದಲ್ಲಿ ಅತ್ಯಲ್ಪ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರೆ, ಮಗ ನಿಖಿಲ್ ಕುಮಾರ ಸ್ವಾಮಿ ಭಾರೀ ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಎದುರು ಸೋಲು ಕಂಡಿದ್ದಾರೆ.

    ಈ ಹಿಂದೆ ಜೆಡಿಎಸ್‌ ರಾಜಾಧ್ಯಕ್ಷರಾಗಿದ್ದ ಹಾಗೂ ಹಾಲಿ ಶಾಸಕ ಜಿ.ಟಿ. ದೇವೇಗೌಡ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಜಯಗಳಿಸಿದರೆ, ಅವರ ಮಗ ಜಿ. ಡಿ. ಹರೀಶ್ ಗೌಡ ಅವರು ಜೆಡಿಎಸ್ ನಿಂದ ಹುಣಸೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.  ಬೆಂಗಳೂರಿನ ವಿಜಯನಗರ ಕ್ಷೇತ್ರದಿಂದ ಎಂ. ಕೃಷ್ಣ ಅವರು ಕಾಂಗ್ರೆಸ್‌ ನಿಂದ ಮತ್ತು ಅವರ ಮಗ ಪ್ರಿಯಾ ಕೃಷ್ಣ ಅವರು ಗೋವಿಂದರಾಜ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು ಇಬ್ಬರೂ  ಜಯ ಸಾಧಿಸಿದ್ದಾರೆ.

    ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅತೀ ಹಿರಿಯ ಸ್ಪರ್ಧಿ  91 ವರ್ಷದ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಮತ್ತು ದಾವಣಗೆರೆ ಉತ್ತರ ಕ್ಷೇತ್ರದಿಂದ ಅವರ ಮಗ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಜಯಗಳಿಸಿದ್ದಾರೆ. ಇಬ್ಬರೂ ಕೂಡ ಕಾಂಗ್ರೆಸ್‌ ನಿಂದ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ 135, ಬಿಜೆಪಿ 65, ಜೆಡಿಎಸ್‌ 20 ಮುನ್ನಡೆ LIVE Updates

    ಬೆಂಗಳೂರಿನ ಬಿಟಿಎಂ ಲೇಔಟ್‌ ನಿಂದ ರಾಮಲಿಂಗ ರೆಡ್ಡಿ ಅವರು ಕಾಂಗ್ರೆಸ್‌ ನಿಂದ ಜಯಗಳಿಸಿದ್ದರೆ ಅವರ ಮಗಳ ಸೌಮ್ಯ ರೆಡ್ಡಿ ಅವರು ಕಾಂಗ್ರೆಸ್‌ ನಿಂದ ಅತ್ಯಲ್ಪ 160 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ದೇವನಹಳ್ಳಿ ಕ್ಷೇತ್ರದಿಂದ ಮುನಿಯಪ್ಪ ಗೆಲುವಿನ ನಗೆ ಬೀರಿದಿದ್ದಾರೆ. ಅವರ ಪುತ್ರಿ ರೂಪಾ ಶಶಿಧರ್ ಕೆಜಿಎಫ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

  • ಮಗಳ ಪ್ರಿಯಕರನ ಮುಖಕ್ಕೆ ಮೆಣಸಿನ ಪುಡಿ ಎರಚಿ ರಾಡ್‍ನಿಂದ ಹಲ್ಲೆ ನಡೆಸಿದ ಮಹಿಳೆ

    ಮಗಳ ಪ್ರಿಯಕರನ ಮುಖಕ್ಕೆ ಮೆಣಸಿನ ಪುಡಿ ಎರಚಿ ರಾಡ್‍ನಿಂದ ಹಲ್ಲೆ ನಡೆಸಿದ ಮಹಿಳೆ

    ಮುಂಬೈ: ಮಗಳನ್ನು(Daughter) ಪ್ರೀತಿಸುತ್ತಿದ್ದ ಪ್ರಿಯಕರನ (Lover) ಮುಖಕ್ಕೆ ಮೆಣಸಿನ ಪುಡಿ (Chilli Powder) ಎರಚಿ ರಾಡ್‍ನಿಂದ ಹಲ್ಲೆ ನಡೆಸಿದ ಆರೋಪದಡಿ ಮಹಿಳೆ ಮತ್ತು ಆಕೆಯ ಪುತ್ರನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

    ಸೆಪ್ಟೆಂಬರ್ 13 ರಂದು ಚಿಂಚ್‍ವಾಡ್ ಪ್ರದೇಶದ ಪಾಶ್ ಸೊಸೈಟಿ ಬಳಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ವಿಶಾಲ್ ಕಸ್ಬೆ(Vishal Kasbe) ಎಂದು ಗುರುತಿಸಲಾಗಿದ್ದು, ಕಳೆದ ಆರು ವರ್ಷಗಳಿಂದ ಯುವಕ ಹಾಗೂ ಮಹಿಳೆಯ ಪುತ್ರಿ ಪರಸ್ಪರ ಪ್ರೀತಿಸುತ್ತಿದ್ದರು. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಯುವತಿಯನ್ನು ಭೇಟಿಯಾಗಲು ಯುವಕ ಬಂದಿದ್ದನು. ಆದರೆ ಆತ ತನ್ನ ಗೆಳತಿಯನ್ನು (Girlfriend) ಭೇಟಿಯಾಗುವ ಮುನ್ನವೇ ಆಕೆಯ ತಾಯಿ ಮತ್ತು ಇಬ್ಬರು ಅಪ್ರಾಪ್ತ ಸಹೋದರರು ಮನೆಯಿಂದ ಹೊರಬಂದು ಯುವಕನನ್ನು ವಿಚಾರಿಸಲು ಆರಂಭಿಸಿದ್ದಾರೆ. ಈ ವೇಳೆ ಮಾತು ಜಗಳಕ್ಕೆ ತಿರುಗಿದೆ.

    ನಂತರ ಯುವಕನ ಮುಖಕ್ಕೆ ಮಹಿಳೆ ಮೆಣಸಿನ ಪುಡಿ ಎರಚಿದ್ದಾಳೆ. ಇದರಿಂದ ಅಸಹಾಯಕನಾದ ಯುವಕನಿಗೆ ಮಹಿಳೆಯ ಪುತ್ರರು ರಾಡ್‍ನಿಂದ(Rod) ಹಲ್ಲೆ ನಡೆಸಿ ಅಮಾನುಷವಾಗಿ ಥಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಸ್ಥಳೀಯರು(Residents) ಯುವಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದೀಗ ಪ್ರಿಯಕರ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ(Treatment) ಪಡೆಯುತ್ತಿದ್ದಾನೆ ಮತ್ತು ಆತನ ತಲೆಗೆ ಹಲವಾರು ಗಾಯಗಳಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ – ಡಿಕ್ಕಿ ಹೊಡೆದು, ಬೈಕ್ ಸವಾರನ ಎಳೆದೊಯ್ದ ಲಾರಿ

    ಸದ್ಯ ಗೆಳತಿಯ ತಾಯಿ ಹಾಗೂ ಆಕೆಯ ಇಬ್ಬರು ಪುತ್ರರನ್ನು ಪೊಲೀಸರು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ದೇಣಿಗೆ ಬೆದರಿಕೆ ಪ್ರಕರಣ – ಮೂವರು ಕಾಂಗ್ರೆಸ್ ಕಾರ್ಯಕರ್ತರು ಅಮಾನತು

    Live Tv
    [brid partner=56869869 player=32851 video=960834 autoplay=true]

  • ಕನ್ಹಯ್ಯ ಲಾಲ್ ಪುತ್ರರಿಗೆ ಸರ್ಕಾರಿ ನೌಕರಿ – ಗೆಹ್ಲೋಟ್ ನಿರ್ಧಾರ

    ಕನ್ಹಯ್ಯ ಲಾಲ್ ಪುತ್ರರಿಗೆ ಸರ್ಕಾರಿ ನೌಕರಿ – ಗೆಹ್ಲೋಟ್ ನಿರ್ಧಾರ

    ಜೈಪುರ: ಇಸ್ಲಾಂ ಮತಾಂಧರ ಕೈಯಲ್ಲಿ ಭೀಕರವಾಗಿ ಹತ್ಯೆಯಾದ ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಅವರ ಪುತ್ರರಿಗೆ ಸರ್ಕಾರಿ ಕೆಲಸ ನೀಡಲು ರಾಜಸ್ಥಾನ ಕ್ಯಾಬಿನೆಟ್ ತೀರ್ಮಾನಿಸಿದೆ.

    ಜೂನ್ 28ರಂದು ಇಬ್ಬರು ಭಯೋತ್ಪಾದಕರಿಂದ ಹತ್ಯೆಯಾದ ಕನ್ಹಯ್ಯ ಲಾಲ್ ತೇಲಿ ಅವರ ಪುತ್ರರಾದ ಯಶ್ ತೇಲಿ ಹಾಗೂ ತರುಣ್ ತೇಲಿ ಅವರನ್ನು ಸರ್ಕಾರಿ ಕೆಲಸಕ್ಕೆ ನೇಮಿಸಲು ಸಂಪುಟ ನಿರ್ಧರಿಸಿದೆ ಎಂದು ಗೆಹ್ಲೋಟ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

    ಈ ನೇಮಕಾತಿಯನ್ನು 2008 ಹಾಗೂ 2009ರ ರಾಜಸ್ಥಾನ ಅಧೀನ ಕಚೇರಿ ಕ್ಲರ್ಕ್ ಸೇವಾ ನಿಯಮಗಳ ಅಡಿಯಲ್ಲಿ ಮಾಡಲಾಗಿದೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ. ಇದನ್ನೂ ಓದಿ: ನಡೆದುಕೊಂಡು ಹೋಗ್ತಿದ್ದಾಗ ಚೂರಿ ಇರಿತ – ಕೆರೂರು ಪಟ್ಟಣದಲ್ಲಿ ಗುಂಪು ಘರ್ಷಣೆ, 144 ಸೆಕ್ಷನ್ ಜಾರಿ

    ಕನ್ಹಯ್ಯ ಲಾಲ್ ತಮ್ಮ ಕುಟುಂಬದಲ್ಲಿ ತಾವೊಬ್ಬರೇ ದುಡಿಯುತ್ತಿದ್ದ ವ್ಯಕ್ತಿಯಾಗಿದ್ದು, ತಮ್ಮಿಬ್ಬರು ಮಕ್ಕಳೂ ವಿದ್ಯಾಭ್ಯಾಸ ಮಾಡುತ್ತಿದ್ದರು. ಇದೀಗ ಕುಟುಂಬ ತನ್ನ ಆಸರೆಯನ್ನು ಕಳೆದುಕೊಂಡಿದ್ದು, ಸರ್ಕಾರ ಕನ್ಹಯ್ಯ ಕುಟುಂಬದ ಕಂಬನಿಗೆ ನೆರವು ನೀಡಲು ಮುಂದಾಗಿದೆ. ಕನ್ಹಯ್ಯ ಮಕ್ಕಳಿಗೆ ಸರ್ಕಾರಿ ಕೆಲಸಗಳನ್ನು ಒದಗಿಸಲು ಮುಂದಾಗುವ ಮೂಲಕ ಸಹಾಯ ಮಾಡಿದೆ.

    ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಕನ್ಹಯ್ಯ ಲಾಲ್ ಪೋಸ್ಟ್ ಮಾಡಿದ್ದಕ್ಕೆ ಧರ್ಮಾಂಧರು ಕನ್ಹಯ್ಯ ಅವರ ಶಿರಚ್ಛೇದನ ನಡೆಸಿ ಭೀಕರವಾಗಿ ಹತ್ಯೆಗೈದಿದ್ದರು. ಜೊತೆಗೆ ಹತ್ಯೆಯ ವೀಡಿಯೋವನ್ನು ಮಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹತ್ಯೆಯನ್ನೂ ಇದೇ ರೀತಿ ನಡೆಸುವುದಾಗಿ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ಬೂಸ್ಟರ್ ಡೋಸ್ ನಡುವಿನ ಅಂತರ 9 ರಿಂದ 6 ತಿಂಗಳಿಗೆ ಇಳಿಕೆ

    ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಲು ಪ್ರಾರಂಭವಾಗುತ್ತಿದ್ದಂತೆ ದೇಶಾದ್ಯಂತ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • 10 ವರ್ಷದಿಂದ ಹೆತ್ತ ತಾಯಿಯನ್ನೇ ಕೂಡಿ ಹಾಕಿದ್ದ ಮಕ್ಕಳು – ಮಹಿಳೆ ರಕ್ಷಣೆ

    10 ವರ್ಷದಿಂದ ಹೆತ್ತ ತಾಯಿಯನ್ನೇ ಕೂಡಿ ಹಾಕಿದ್ದ ಮಕ್ಕಳು – ಮಹಿಳೆ ರಕ್ಷಣೆ

    ಚೆನ್ನೈ: ಕಳೆದ 10 ವರ್ಷಗಳಿಂದ ಹೆತ್ತ ತಾಯಿಯನ್ನೇ ಮಕ್ಕಳಿಬ್ಬರು ಕೂಡಿ ಹಾಕಿದ್ದರು. ಇದೀಗ ಸಮಾಜ ಕಲ್ಯಾಣ ಇಲಾಖೆ ಮಹಿಳೆಯನ್ನು ರಕ್ಷಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ

    POLICE JEEP

    62 ವರ್ಷದ ಮಹಿಳೆಯ ಇಬ್ಬರು ಪುತ್ರರು ಬೇರೆಡೆ ವಾಸಿಸುತ್ತಿದ್ದು, ಆಕೆಗೆ ಆಹಾರ ವ್ಯವಸ್ಥೆಯನ್ನು ಮಾಡಿದ್ದರು. ಆದರೆ ಆಹಾರ ಇಲ್ಲದಿದ್ದಾಗ ಆಕೆ ಕೂಗುತ್ತಿದ್ದಳು. ಈ ವೇಳೆ ನೆರೆಹೊರೆಯವರು ಬೀಗ ಹಾಕಿದ ಮನೆಗೆ ಬಿಸ್ಕೆಟ್ ಅಥವಾ ಹಣ್ಣುಗಳನ್ನು ಕಿಟಕಿ ಮೂಲಕ ಎಸೆಯುತ್ತಿದ್ದರು. ನೆರೆಹೊರೆಯವರಿಗೆ ಆಕೆಯ ಪರಿಸ್ಥಿತಿ ತಿಳಿದಿದ್ದರೂ. ಮಹಿಳೆ ಎಂದಿಗೂ ಯಾರೊಟ್ಟಿಗೂ ಕೂಡ ತನ್ನ ಇಬ್ಬರು ಪುತ್ರರ ವಿವರಗಳನ್ನು ಹಂಚಿಕೊಳ್ಳಲು ಧೈರ್ಯ ಮಾಡಿರಲಿಲ್ಲ. ಆದರೆ ಓರ್ವ ಪುತ್ರ ಪೊಲೀಸ್ ಆಗಿ ಹಾಗೂ ಮತ್ತೋರ್ವ ಪುತ್ರ ಕೇಂದ್ರ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಮಹಿಳೆಯ ಕಷ್ಟ ಪಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆಕೆಯನ್ನು ರಕ್ಷಿಸಲು ಸಮಾಜ ಕಲ್ಯಾಣ ಇಲಾಖೆ ಮುಂದಾಯಿತು.  ಇದನ್ನೂ ಓದಿ: ನಾನು ತಪ್ಪಿತಸ್ಥನಲ್ಲ ನನ್ನ ತಪ್ಪು ಇದ್ದರೆ ಭಗವಂತ ನನಗೆ ಶಿಕ್ಷೆ ಕೊಡಲಿ: ಈಶ್ವರಪ್ಪ

    ಮನೆಯ ಕೀಲಿ ಕೈ ನೀಡಲು ಮಹಿಳೆಯ ಪುತ್ರರು ನಿರಾಕರಿಸಿದ್ದರಿಂದ ಪೆÇಲೀಸರ ನೆರವಿನೊಂದಿಗೆ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಮನೆಗೆ ನುಗ್ಗಿ ವೃದ್ಧೆಯನ್ನು ರಕ್ಷಿಸಿದ್ದಾರೆ. ನಂತರ ಆಕೆಯನ್ನು ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಇದೀಗ ಮಹಿಳೆಯ ಇಬ್ಬರು ಪುತ್ರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ತಪ್ಪಿತಸ್ಥನಲ್ಲ ನನ್ನ ತಪ್ಪು ಇದ್ದರೆ ಭಗವಂತ ನನಗೆ ಶಿಕ್ಷೆ ಕೊಡಲಿ: ಈಶ್ವರಪ್ಪ

  • ಕುಡಿದು ಅಡ್ಡಾಡುತ್ತಿದ್ದ ತಂದೆಯ ಮೇಲೆ ಮಕ್ಕಳಿಂದಲೇ ಹಲ್ಲೆ

    ಕುಡಿದು ಅಡ್ಡಾಡುತ್ತಿದ್ದ ತಂದೆಯ ಮೇಲೆ ಮಕ್ಕಳಿಂದಲೇ ಹಲ್ಲೆ

    ಹಾವೇರಿ: ಹೆತ್ತ ತಂದೆಯ ಮೇಲೆಯೇ ಮಕ್ಕಳು ಹಲ್ಲೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪಾಕ್ಟ್ – ರಸ್ತೆ ಗುಂಡಿಗಳನ್ನು ಮುಚ್ಚಲು ಟಾಸ್ಕ್ ಫೋರ್ಸ್ ರಚಿಸಿದ ಬಿಬಿಎಂಪಿ

    haveri

    ಯಲ್ಲಪ್ಪ ವಡ್ಡರ(70) ಹಲ್ಲೆಗೊಳಗಾದವರಾಗಿದ್ದಾರೆ. ಮಕ್ಕಳಾದ ಆನಂದ್ ಮತ್ತು ಜಗದೀಶ್ ತಂದೆ ಯಲ್ಲಪ್ಪ ವಡ್ಡರ ಮೇಲೆ ಹಲ್ಲೆ ಮಾಡಿದ್ದಾರೆ. ಗಾಯಾಳು ಯಲ್ಲಪ್ಪರನ್ನು ಸದ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ:ತಾನೇ ಎಷ್ಟು ಬೇಕೋ ಅಷ್ಟು ನೀರು ಸೇದಿಕೊಂಡು ಕುಡಿದ ಆನೆ- ವೀಡಿಯೋ ವೈರಲ್

    ತಂದೆ ಕುಡಿತದ ದಾಸನಾಗಿದ್ದು, ಗ್ರಾಮದಲ್ಲಿ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಕುಡಿದು ಅಡ್ಡಾಡುತ್ತಿದ್ದರು. ಇದರಿಂದ ಬೇಸತ್ತ ಮಕ್ಕಳು ತಂದೆ ಎನ್ನುವುದನ್ನು ಮರೆತು ರಸ್ತೆಯಲ್ಲಿ ಹಲ್ಲೆ ಮಾಡಿದ್ದಾರೆ. ಈ ಘಟನೆ ಕಾಗಿನೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಒಡವೆಗಾಗಿ ತಾಯಿ ಕೊಂದು, ಶವದ ಪಕ್ಕ ವಿಷದ ಬಾಟಲಿ ಇಟ್ಟು ಆತ್ಮಹತ್ಯೆ ನಾಟಕವಾಡಿದ ಮಕ್ಕಳು

    ಒಡವೆಗಾಗಿ ತಾಯಿ ಕೊಂದು, ಶವದ ಪಕ್ಕ ವಿಷದ ಬಾಟಲಿ ಇಟ್ಟು ಆತ್ಮಹತ್ಯೆ ನಾಟಕವಾಡಿದ ಮಕ್ಕಳು

    – ಕಿರಿಯ ಮಗ ಅಂತ್ಯಸಂಸ್ಕಾರಕ್ಕೆ ಬರುತ್ತಿದ್ದಂತೆ ಸತ್ಯ ಬಯಲು
    – ಪಾಪಿ ಮಕ್ಕಳನ್ನು ಖೆಡ್ಡಾಕ್ಕೆ ಕೆಡವಿದ ಪೊಲೀಸರು

    ಹಾಸನ: ಒಡವೆಗಾಗಿ ಹೆತ್ತಮ್ಮನನ್ನೇ ಹೊಡೆದು ಕೊಂದಿದ್ದ ಪಾಪಿ ಮಕ್ಕಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲೆಯ ಸಕಲೇಶಪುರ ತಾಲೂಕಿನ ಕರಡಿಗಾಲ ಗ್ರಾಮದ ತಂಗ್ಯಮ್ಮ(65) ಹೆತ್ತ ಮಕ್ಕಳಿಂದಲೇ ಕೊಲೆಯಾದ ನತದೃಷ್ಟ ತಾಯಿ. ಹಿರಿಯ ಮಗ ರಾಜೇಗೌಡ(48) ಹಾಗೂ ಎರಡನೇ ಮಗ ಸುಬ್ರಹ್ಮಣ್ಯ(45) ಸೇರಿ ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದಾರೆ.

    ಐದಾರು ವರ್ಷಗಳ ಹಿಂದೆಯೇ ತನಗಿದ್ದ ಏಳು ಎಕರೆ ಜಮೀನನ್ನು ಮೂರು ಜನ ಗಂಡು ಮಕ್ಕಳಿಗೆ ಪಾಲುಮಾಡಿಕೊಟ್ಟಿದ್ದ ತಂಗ್ಯಮ್ಮ, ತಮಗಾಗಿ ಅರ್ಧ ಎಕರೆ ಜಮೀನು ಇಟ್ಟುಕೊಂಡು ಮುರುಕಲು ಮನೆಯಲ್ಲಿ ಬದುಕು ಸಾಗಿಸುತ್ತಿದ್ದರು. ಜೀವನಾಧಾರಕ್ಕಾಗಿ ಮೂರು ಎಮ್ಮೆ ಸಾಕಿಕೊಂಡು ಹೈನುಗಾರಿಕೆಯಿಂದ ಬರುವ ಹಣದಲ್ಲಿ ಹೇಗೋ ಜೀವನ ಸಾಗಿಸುತ್ತಿದ್ದರು.

    ಆಸ್ತಿಯ ಜೊತೆ ಅಮ್ಮನ ಒಡವೆಯೂ ಬೇಕು ಎಂಬ ದುರಾಸೆಗೆ ಬಿದ್ದಿದ್ದು, ತುರ್ತು ಕೆಲಸಕ್ಕೆ ಬೇಕಾಗಿದೆ ಎಂದು ಅಮ್ಮನ ಒಡವೆ ಪಡೆದು ಗಿರವಿ ಇಟ್ಟುಕೊಂಡಿದ್ದಾರೆ. ಆದರೆ ಐದಾರು ತಿಂಗಳ ನಂತರ ನೆಂಟರ ಮನೆಗೆ ಹೋಗಿ ಬರಲು ಒಡವೆ ಇಲ್ಲ ಬಿಡಿಸಿ ಕೊಡಿ ಎಂದು ಕೇಳಿದ್ದಕ್ಕೆ ರಾಜೇಗೌಡ ಹಾಗೂ ಸುಬ್ರಹ್ಮಣ್ಯ ಗಲಾಟೆ ಮಾಡಿದ್ದರಂತೆ. ಮಾರ್ಚ್ 16ರಂದು ತಮ್ಮ ತೋಟದ ಸಮೀಪ ಎಮ್ಮೆಗಳಿಗೆ ಹುಲ್ಲು ತರೋಕೆ ಹೋಗಿದ್ದಾಗ ಅಲ್ಲಿಗೇ ಹೋಗಿದ್ದ ದುಷ್ಟ ಮಕ್ಕಳು ತಾಯಿಗೆ ಹೊಡೆದು ಕೊಂದಿದ್ದಾರೆ. ನಂತರ ಮೃತದೇಹದ ಪಕ್ಕದಲ್ಲಿ ವಿಷದ ಬಾಟಲಿ ಇಟ್ಟು ಅಮ್ಮ ವಿಷ ಕುಡಿದು ಸತ್ತಿದ್ದಾಳೆ ಎಂದು ಊರಿಗೆಲ್ಲಾ ಹೇಳಿ ಅಂತ್ಯ ಕ್ರಿಯೆಗೆ ಸಿದ್ಧತೆಯನ್ನೂ ಮಾಡಿದ್ದರು.

    ಬೆಂಗಳೂರಿನಲ್ಲಿದ್ದ ಕಿರಿಯ ತಮ್ಮ ಹೇಮಂತ್ ಗೆ ಫೊನ್ ಮಾಡಿ ಅಮ್ಮ ಜಮೀನಿನ ಬಳಿ ಮೃತಪಟ್ಟಿದ್ದಾರೆ, ಬಾ ಎಂದು ಹೇಳಿದ್ದಾರೆ. ಅಂದೇ ಮಧ್ಯ ರಾತ್ರಿ ಬಂದ ಕಿರಿಯ ಮಗ, ಅಣ್ಣಂದಿರು ಹೇಳಿದ ಮಾತು ನಂಬಿದರೂ, ಅಮ್ಮನ ಕುತ್ತಿಗೆ ಭಾಗದಲ್ಲಿ ರಕ್ತದ ಕಲೆಗಳ ಗಾಯಗಳು ಅನುಮಾನ ಮೂಡಿಸಿದೆ. ಕೂಡಲೇ ಸಕಲೇಶಪುರ ಗ್ರಾಮಾಂತರ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾನೆ. ಸ್ಥಳಕ್ಕೆ ದೌಡಾಯಿಸಿ ಬಂದ ಸಕಲೇಶಪುರ ಸಿಪಿಐ ಹಾಗೂ ಸಕಲೇಶಪುರ ಗ್ರಾಮಾಂತರ ಠಾಣೆ ಎಸ್‍ಐ ನೇತೃತ್ವದ ತಂಡ ಅಂತ್ಯಕ್ರಿಯೆ ಸ್ಥಗಿತ ಗೊಳಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಕಲೇಶಪುರಕ್ಕೆ ಸಾಗಿಸಿದ್ದಾರೆ.

    ಈ ವೇಳೆ ಒಡವೆ ಹಾಗೂ ಹಣಕ್ಕಾಗಿ ಜಗಳ ತೆಗೆದು ತಾಯಿಯನ್ನು ಕೊಂದು ಆತ್ಮಹತ್ಯೆ ನಾಟಕ ಮಾಡಿದ್ದ ದುಷ್ಟರ ಕೃತ್ಯ ಬೆಳಕಿಗೆ ಬಂದಿದೆ. ದುರಾಸೆಯಿಂದ ಹೆತ್ತಮ್ಮನನ್ನೇ ಕೊಂದು ಇಬ್ಬರು ಮಕ್ಕಳು ಇದೀಗ ಜೈಲು ಪಾಲಾಗಿದ್ದಾರೆ.

  • ವೃದ್ಧ ಹೆತ್ತವರನ್ನ ಕತ್ತುಹಿಸುಕಿ ಕೊಂದು, ಬೆಂಕಿ ಹಚ್ಚಿ ಆಕಸ್ಮಿಕವೆಂದು ಕಥೆ ಕಟ್ಟಿದ ಪುತ್ರರು!

    ವೃದ್ಧ ಹೆತ್ತವರನ್ನ ಕತ್ತುಹಿಸುಕಿ ಕೊಂದು, ಬೆಂಕಿ ಹಚ್ಚಿ ಆಕಸ್ಮಿಕವೆಂದು ಕಥೆ ಕಟ್ಟಿದ ಪುತ್ರರು!

    ಲಕ್ನೋ: ವೃದ್ಧ ದಂಪತಿಯ ನಿಗೂಢ ಸಾವಿನ ತನಿಖೆಯ ವೇಳೆ ಪೊಲೀಸರೇ ಬೆಚ್ಚಿ ಬೀಳುವಂತೆ ಸ್ಟೋರಿಯೊಂದು ಬೆಳಕಿಗೆ ಬಂದಿದೆ.

    ಹೌದು. ಉತ್ತರಪ್ರದೇಶದ ಬರೇಲಿಯಲ್ಲಿ ವೃದ್ಧ ದಂಪತಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಈ ಸಾವಿನ ಜಾಡು ಹಿಡಿದ ಪೊಲೀಸರಿಗೆ ದಂಪತಿಯ ಇಬ್ಬರು ಪುತ್ರರೇ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.

    ಮೃತ ದುರ್ದೈವಿ ವೃದ್ಧ ದಂಪತಿಯನ್ನು ರಾಜೇಂದ್ರ(61) ಹಾಗೂ ರಾಜ್ವತಿ(57) ಎಂದು ಗುರುತಿಸಲಾಗಿದೆ. ದಂಪತಿ ಬುಡಾನ್ ನಲ್ಲಿರುವ ತಮ್ಮ ನಿವಾಸದಲ್ಲಿ ವಾಸವಿದ್ದರು. ಆದರೆ ಡಿಸೆಂಬರ್ 15ರಂದು ಸಾವನ್ನಪ್ಪಿದ್ದರು. ಈ ದಂಪತಿಗೆ ನಾಲ್ವರು ಪುತ್ರರಿದ್ದು, ನಾಲ್ಕು ಮಂದಿ ಕೂಡ ಹೆತ್ತವರಿಂದ ದೂರವಾಗಿದ್ದಾರೆ.

    ವೃದ್ಧ ದಂಪತಿಯ ಸಾವಿನ ತನಿಖೆ ನಡೆಸಿದಾಗ ಪೊಲೀಸರಿಗೆ 20ರ ಆಸು-ಪಾಸಿನ ಪುತ್ರರಿಬ್ಬರು ತಂದೆ-ತಾಯಿಯನ್ನು ಕೋಣೆಯಲ್ಲಿ ಕತ್ತುಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಬೆಂಕಿ ಹಚ್ಚಿದ್ದಾರೆ. ಆದರೆ ಪೊಲೀಸರ ಮುಂದೆ ಮಾತ್ರ ತಮ್ಮ ಪೋಷಕರು ಮಲಗಿದ್ದಾಗ ಅವರ ಹೊದಿಕೆಗೆ ಬೆಂಕಿ ಬಿದ್ದ ಪರಿಣಾಮ ಅವರು ಸಜೀವ ದಹನವಾಗಿದ್ದಾರೆ ಎಂದು ಕಥೆ ಕಟ್ಟಿದ್ದಾರೆ. ಆದರೆ ಶವಗಳ ಮರಣೋತ್ತರ ಪರೀಕ್ಷೆಯ ವೇಳೆ ಕತ್ತು ಹಿಸುಕಿ ಕೊಲೆಗೈದು ಬಳಿಕ ಮೃತದೇಹಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ವರದಿ ಬಂದಿದೆ.

    ಈ ಸಂಬಂಧ ಎಸ್‍ಎಸ್‍ಪಿ ಸಂಕಲ್ಪ್ ಶರ್ಮಾ ಮಾತನಾಡಿ, ದಂಪತಿಗೆ 4 ಮಂದಿ ಗಂಡು ಮಕ್ಕಳಿದ್ದಾರೆ. ಆಸ್ತಿಗಾಗಿ ಇಬ್ಬರು ಮಕ್ಕಳು ದಂಪತಿಯನ್ನು ಕೊಲೆ ಮಾಡಿದ್ದಾರೆ. ಸದ್ಯ ಈ ಇಬ್ಬರನ್ನು ಬಂಧಿಸಿ ಜೈಲಿಗಟ್ಟಿರುವುದಾಗಿ ತಿಳಿಸಿದ್ದಾರೆ. ದಂಪತಿಯ ಇಬ್ಬರು ಗಂಡು ಮಕ್ಕಳು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತಿಬ್ಬರು ಬುಡಾನ್ ನಲ್ಲಿ ವಾಸವಿದ್ದಾರೆ. ಕುಟುಂಬ ಮನೆ ಹಾಗೂ 10 ಎಕರೆ ಕೃಷಿ ಭೂಮಿ ಹೊಂದಿದೆ.

  • ಅತಂತ್ರ ಫಲಿತಾಂಶ ಬಂದ್ರೆ ಯಡಿಯೂರಪ್ಪ ಬಿಹಾರಕ್ಕೆ ಹೋಗ್ತಾರೆ – ಬಿಕೆ ಹರಿಪ್ರಸಾದ್

    ಅತಂತ್ರ ಫಲಿತಾಂಶ ಬಂದ್ರೆ ಯಡಿಯೂರಪ್ಪ ಬಿಹಾರಕ್ಕೆ ಹೋಗ್ತಾರೆ – ಬಿಕೆ ಹರಿಪ್ರಸಾದ್

    ಶಿವಮೊಗ್ಗ: ಬಿಹಾರದಲ್ಲಿ ಮಹಾಮೈತ್ರಿ ಅಧಿಕಾರಕ್ಕೆ ಬರುವುದು ಹಾಗೂ ತೇಜಸ್ವಿ ಯಾದವ್ ಮುಖ್ಯಮಂತ್ರಿ ಆಗುವುದು ನಿಶ್ಚಿತ. ಆದರೆ ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ಯಡಿಯೂರಪ್ಪ ಬಿಹಾರಕ್ಕೆ ಹೋಗಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಆಪರೇಷನ್ ಕಮಲ ಮಾಡುವುದರಲ್ಲಿ ಎಕ್ಸ್‍ಪರ್ಟ್ ಇದ್ದಾರೆ. ಹೀಗಾಗಿ ಬಿಹಾರಕ್ಕೆ ಹೋಗುತ್ತಾರೆ ಎಂದು ಹೇಳಿ ಕಾಲೆಳೆದರು.

    ಶಿರಾ ಹಾಗೂ ಆರ್.ಆರ್ ನಗರ ಚುನಾವಣೆಯ ಫಲಿತಾಂಶದ ಬಗ್ಗೆ ಈಗಾಲೇ ಹೇಳಲು ನಾನು ಜ್ಯೋತಿಷಿಯಲ್ಲ. ಮತದಾರ ದೇವರು ಯಾರಿಗೆ ಆಶೀರ್ವಾದಿಸಿದ್ದಾನೋ ಅವರು ಗೆಲ್ಲುತ್ತಾರೆ ಎಂದು ಹೇಳಿದರು.

    ಶಿವಮೊಗ್ಗದಲ್ಲಿ ಈ ಬಗ್ಗೆ ಯಡಿಯೂರಪ್ಪ ಅವರ ಪುತ್ರರು ಉಪ ಚುನಾವಣೆಯಲ್ಲಿ ಹಣ ಖರ್ಚು ಮಾಡುವುದರಲ್ಲಿ ದಾಖಲೆ ನಿರ್ಮಿಸಿದ್ದಾರೆ. ರಾಜ್ಯದ ಖಜಾನೆಯನ್ನೇ ತೆಗೆದುಕೊಂಡು ಹೋಗಿ ಚುನಾವಣೆ ನಡೆಸಿದ್ದಾರೆ. ನನ್ನ 46 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಚುನಾವಣೆಯನ್ನೇ ನಾನು ನೋಡಿಲ್ಲ ಎಂದರು.

    ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಬಿಜೆಪಿ ಬಹಳಷ್ಟು ಮಂದಿಗೆ ಬಿಜೆಪಿಗೆ ಸೇರುವಂತೆ ಗಾಳ ಹಾಕುತ್ತದೆ. ಅವರ ಮಾತು ಕೇಳದಿದ್ದಾಗ ಅವರ ಮುಂಚೂಣಿ ಘಟಕಗಳಾದ ಐಟಿ, ಇಡಿ ಹಾಗೂ ಸಿಬಿಐ ಉಪಯೋಗಿಸಿಕೊಂಡು ಇಂತಹ ಕೆಲಸ ಮಾಡುತ್ತಾರೆ. ಹುಬ್ಬಳ್ಳಿಯಲ್ಲಿಯೂ ಸಹ ವಿನಯ ಕುಲಕರ್ಣಿ ಪ್ರಕರಣದಲ್ಲಿ ಇದೇ ಕೆಲಸವಾಗಿದೆ ಎಂದು ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.

  • ಜನರ ಮುಂದೆಯೇ ತಂದೆಯನ್ನು ನಡುರಸ್ತೆಯಲ್ಲೇ ಧರ-ಧರನೇ ಎಳೆದೊಯ್ದ ಮಕ್ಕಳು!

    ಜನರ ಮುಂದೆಯೇ ತಂದೆಯನ್ನು ನಡುರಸ್ತೆಯಲ್ಲೇ ಧರ-ಧರನೇ ಎಳೆದೊಯ್ದ ಮಕ್ಕಳು!

    – ಮಕ್ಕಳ ಕ್ರೂರ ವರ್ತನೆಯ ವಿಡಿಯೋ ವೈರಲ್

    ಲಕ್ನೋ: ಜನರ ಮುಂದೆಯೇ ಅಣ್ಣ- ತಮ್ಮಂದಿರಿಬ್ಬರು ತಮ್ಮ ತಂದೆಗೆ ಥಳಿಸಿದ್ದಲ್ಲದೇ ರಸ್ತೆ ಮಧ್ಯೆಯೇ ಧರಧರನೇ ಎಳೆದೊಯ್ದ ವಿಲಕ್ಷಣ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಈ ಘಟನೆ ಉತ್ತರಪ್ರದೇಶದ ನೊಯ್ಡಾದಲ್ಲಿ ನಡೆದಿದೆ. ಮಕ್ಕಳು ತಮ್ಮ ತಂದೆಯನ್ನು ದಂಕೌರ್ ಪ್ರದೇಶದ ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವುದನ್ನು ಸ್ಥಳೀಯ ನಿವಾಸಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಿದ್ದರು. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಮಕ್ಕಳ ಕೃತ್ಯವನ್ನು ಜಾಲತಾಣಿಗರು ಖಂಡಿಸಿದ್ದಾರೆ.

    ತಂದೆ ಮೇಲೆ ರೌದ್ರನರ್ತನ ತೋರಿದ ಮಕ್ಕಳಿಬ್ಬರನ್ನು ಬಂಧಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋ ಬಗ್ಗೆ ತಿಳಿದುಕೊಂಡ ಬಳಿಕ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ವಿಡಿಯೋದಲ್ಲಿ ಆರೋಪಿಗಳಿಬ್ಬರು ತಮ್ಮ ತಂದೆಯನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಈ ವೇಳೆ ಮಹಿಳೆಯೊಬ್ಬರು ಆರೋಪಿಗಳ ಜೊತೆ ಇದ್ದು, ಕಿರುಚುತ್ತಿರುವುದನ್ನು ಕೂಡ ಕೇಳಬಹುದಾಗಿದೆ. ಆದರೆ ಮಕ್ಕಳು ಯಾಕೆ ತಮ್ಮ ತಂದೆಯ ಮೇಲೆ ಕ್ರೂರತನ ಮೆರೆದಿದ್ದಾರೆ ಎಂಬುದರ ಬಗ್ಗೆ ಮಾಹಿತಿಯಿಲ್ಲ.

    ಗೌತಮ್ ಬುದ್ಧ ನಗರದ ಸಂಕೌರ್ ನಗರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಇಬ್ಬರು ಗಂಡು ಮಕ್ಕಳು ತಮ್ಮ ತಂದೆಯನ್ನು ಎಳೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಂಡಿದ್ದೇವೆ. ಘಟನೆ ಸಂಬಂಧ ಇಬ್ಬರು ಮಕ್ಕಳನ್ನು ಬಂಧಿಸಲಾಗಿದೆ. ಅಲ್ಲದೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ನೊಯ್ಡಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಕೋವಿಡ್ 19 ಪಾಸಿಟಿವ್ ಬಂದ 82ರ ತಾಯಿಯ ಕೈ ಬಿಟ್ಟ ಮಕ್ಕಳು

    ಕೋವಿಡ್ 19 ಪಾಸಿಟಿವ್ ಬಂದ 82ರ ತಾಯಿಯ ಕೈ ಬಿಟ್ಟ ಮಕ್ಕಳು

    – ಅಮಾನವೀಯತೆ ತೋರಿದ ನಾಲ್ವರು ಪುತ್ರರು

    ಹೈದರಾಬಾದ್: ತೆಲಂಗಾಣದಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕಿತರ ಸಂಖೆಯ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ಪಾಪಿ ಪುತ್ರರು ತನ್ನ ತಾಯಿಯ ಮೇಲೆ ಅಮಾನವೀಯತೆ ತೋರಿದ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ.

    ಲಚ್ಚಮ್ಮ ಕೊರೊನಾ ಪಾಸಿಟಿವ್ ಬಂದಿರುವ ವೃದ್ಧೆ. ಈಕೆಗೆ ನಾಲ್ವರು ಪುತ್ರರು ಹಾಗೂ ಓರ್ವ ಮಗಳಿದ್ದಾಳೆ. ಈಕೆಗೆ ವಾಕರ್ ಇಲ್ಲದೇ ನಡೆಯಲು ಅಸಾಧ್ಯ. ಈಕೆ ವೆಲೆರು ಮಂಡಲದ ಪೀಚರಾ ಗ್ರಾಮದ ಕೃಷಿ ಬಾವಿಯ ಬಳಿ ತನ್ನ ಕೆಲ ದಿನಗಳನ್ನು ಕಳೆದಿದ್ದಾರೆ.

    ಮಕ್ಕಳ ಜೊತೆ ವಾಸವಾಗಿದ್ದ ವೃದ್ಧೆಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ತಮಗೂ ಹರಡಬಹುದು ಎಂಬ ಭಯದಿಂದ ನಾಲ್ವರು ಪುತ್ರರು ಆಕೆಯನ್ನು ಬಾವಿಯ ಬಳಿ ಒಂದು ಶೆಡ್ ಹಾಕಿ ಬಿಟ್ಟು ಹೋಗಿದ್ದಾರೆ.

    ಈ ವಿಚಾರ ಇರೋ ಓರ್ವ ಮಗಳ ಗಮನಕ್ಕೆ ಬಂದಿದೆ. ತನ್ನ ತಾಯಿಯ ಸ್ಥಿತಿ ಹಾಗೂ ಸಹೋದರರ ನಡವಳಿಕೆಯಿಂದ ಬೇಸರಗೊಂಡ ಆಕೆ ಕೂಡಲೇ ಹಳ್ಳಿಗೆ ಧಾವಿಸಿದ್ದಾಳೆ. ಅಲ್ಲದೆ ತಾನೇ ತಾಯಿಯನ್ನು ನೋಡಿಕೊಳ್ಳುವುದಾಗಿ ತಿಳಿಸಿದ್ದು, ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದಾಳೆ.

    ಕಳೆದ 24 ಗಂಟೆಯಲ್ಲಿ ತೆಲಂಗಾಣದಲ್ಲಿ 1,802 ಮಂದಿಯಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 1,42,771ಕ್ಕೆ ಏರಿಕೆಯಾಗಿದೆ. ಒಂದೇ ದಿನ 9 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 895 ಮಂದಿ ಮೃತಪಟ್ಟಿದ್ದಾರೆ. 31,635 ಸಕ್ರಿಯ ಪ್ರಕರಣಗಳಿವೆ.