Tag: Sonipat

  • ಲಿವ್‌-ಇನ್‌ ಗೆಳತಿಯನ್ನ ಸುಟ್ಟು ಕೊಂದು ಬೆಂಕಿ ಅವಘಡ ಅಂತ ನಾಟಕವಾಡಿದ್ದ ಉದ್ಯಮಿ ಅಂದರ್‌

    ಲಿವ್‌-ಇನ್‌ ಗೆಳತಿಯನ್ನ ಸುಟ್ಟು ಕೊಂದು ಬೆಂಕಿ ಅವಘಡ ಅಂತ ನಾಟಕವಾಡಿದ್ದ ಉದ್ಯಮಿ ಅಂದರ್‌

    ಚಂಡೀಗಢ: ವಿವಾಹಿತ ಉದ್ಯಮಿಯೊಬ್ಬ (Businessman) ತನ್ನ ಲಿವ್‌-ಇನ್‌ ಗೆಳತಿಯನ್ನು ಚಾಕುವಿನಿಂದ ಇರಿದು ಕೊಂದು, ದೇಹವನ್ನು ಸುಟ್ಟುಹಾಕಿರುವ ಘಟನೆ ಹರಿಯಾಣದ ಸೋನಿಪತ್‌ನಲ್ಲಿ (Haryana’s Sonipat) ನಡೆದಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

    ಕೊಲೆಯಾದ ಮಹಿಳೆಯನ್ನು (Women) ಸರಿತಾ ಹಾಗೂ ಕೊಲೆ ಆರೋಪಿಯನ್ನ ಸಿವಿಲ್ ಲೈನ್ಸ್ ಪ್ರದೇಶದ ರಿಷಿ ಕಾಲೋನಿಯಲ್ಲಿ ಉಪಕಾರ್ ಎಂದು ಗುರುತಿಸಲಾಗಿದೆ. ಪಂಜಾಬ್‌ನ (Punjab) ಜಿರಾಕ್‌ಪುರ ನಿವಾಸಿಯಾಗಿರುವ ಸರಿತಾ ವೃತ್ತಿಯಲ್ಲಿ ಉಪನ್ಯಾಸಕಿಯಾಗಿದ್ದಳು. ಈಕೆ ಪತಿಯಿಂದ ಬೇರ್ಪಟ್ಟು 6 ವರ್ಷಗಳಿಂದ ಉದ್ಯಮಿಯೊಂದಿಗೆ ವಾಸಿಸುತ್ತಿದ್ದಳು ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಹಣ, ಹೆಂಡ ಹಂಚಿಕೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಪೈಪೋಟಿ ನೀಡಿದೆ: ಚರ್ಚೆಗೆ ಗ್ರಾಸವಾಯ್ತು ಬಿಕೆ ಹರಿಪ್ರಸಾದ್ ಮಾತು

    ಅಲ್ಲದೇ ಉಪಕಾರ್‌ ಲಿವಿ-ಇನ್‌ ಸಂಬಂಧ (live In Relationship) ಬಗ್ಗೆ ಆತನ ಪತ್ನಿಗೆ ತಿಳಿದಿತ್ತು. ಸರಿತಾ ಕೂಡ 2004ರಲ್ಲೇ ತನ್ನ ಪತಿಗೆ ವಿಚ್ಛೇದನ ನೀಡಿದ್ದಳು. ಇಬ್ಬರೂ ಕಳೆದ 6 ವರ್ಷಗಳಿಂದ ಲಿವ್‌-ಇನ್‌ ರಿಲೇಷನ್‌ಶಿಪ್‌ನಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸ್‌ ಅಧಿಕಾರಿ ಮನೀಶ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ದಾರಿ ತಪ್ಪಿಸಿದ ಗೂಗಲ್‌ ಮ್ಯಾಪ್‌ – ನಿರ್ಮಾಣ ಹಂತದ ಸೇತುವೆಯಿಂದ ನದಿಗೆ ಕಾರು ಬಿದ್ದು 3 ಸಾವು

    ಅಕ್ಟೋಬರ್‌ 25ರಂದು ಸರಿತಾಳನ್ನ ಕೊಂದಿರುವ ಉಪಕಾರ್‌ ಆಕೆಯ ದೇಹದೊಂದಿಗೆ ಇಡೀ ಮನೆಯನ್ನೇ ಸುಟ್ಟುಹಾಕಿದ್ದಾನೆ. ನಂತರ ಇದೊಂದು ಆಕಸ್ಮಿಕ ಬೆಂಕಿ ಅವಘಡ ಎನ್ನುವಂತೆ ಬಿಂಬಿಸಿದ್ದಾನೆ. ಆದ್ರೆ ವಿಧಿವಿಜ್ಞಾನ ಪ್ರಯೋಗಾಲಯ ಪರೀಕ್ಷೆ ಬಳಿಕ ಸುಟ್ಟ ಗಾಯಕ್ಕೂ ಮುನ್ನ ಚೂರಿ ಇರಿದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಉಪಕಾರ್‌ನನ್ನ ಬಂಧಿಸಲಾಗಿದೆ. ಸದ್ಯ ನ್ಯಾಯಾಲಯವು 2 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

    ಗೊತ್ತಾಗಿದ್ದು ಹೇಗೆ?
    ಪಂಜಾಬ್‌ನಲ್ಲಿರುವ ಸರಿತಾ ಸಹೋದರಿ ತ್ರಿಶ್ಲಾ ಸೋನಿಪತ್‌ನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಒಂದೊಂದೇ ಸತ್ಯಗಳು ಬೆಳಕಿಗೆ ಬಂದಿದೆ. ಇದನ್ನೂ ಓದಿ:  ʻವಕ್ಫ್ ಹಠಾವೋ ಭಾರತ್ ದೇಶ್ ಬಚಾವೋʼ – ಇಂದಿನಿಂದ ವಕ್ಫ್‌ ವಿರುದ್ಧ ಬಿಜೆಪಿ ರೆಬಲ್ಸ್‌ ಟೀಂ ಹೋರಾಟ ಶುರು

    ಸರಿತಾ ತನ್ನ ಪತಿ ಕಪಿಲ್‌ಗೆ ವಿಚ್ಛೇದನ ನೀಡಿ, 2018 ರಿಂದ ಸೋನಿಪತ್‌ನಲ್ಲಿ ಉಪಕಾರ್‌ನೊಂದಿಗೆ ವಾಸಿಸಲು ಪ್ರಾರಂಭಿಸಿದಳು. ಆಗಲೇ ಅವರಿಬ್ಬರ ನಡುವೆ ಜಗಳ ನಡೆಯುತ್ತಿತ್ತು. ಅ.20ರಂದು ಉಪಕಾರ್‌ ತನಗೆ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಎಂದು ಸರಿತಾ ನನ್ನ ಬಳಿ ಕೇಳಿಕೊಂಡಿದ್ದಳು. ಅ.25ರಂದು ತನಗೆ ಕರೆ ಮಾಡಿ ಉಪಕಾರ್‌ ನನ್ನನ್ನ ಸಾಯಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳಿದ್ದಳು. ಈ ಕರೆ ಕಟ್ಟಾದ ಕೆಲವೇ ಕ್ಷಣಗಳಲ್ಲಿ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಅದೇ ದಿನ ರಾತ್ರಿ ಸರಿತಾ ಇದ್ದ ಮನೆಗೆ ಬೆಂಕಿ ತಗುಲಿ ಆಕೆ ಬೆಂಕಿಗೆ ಆಹುತಿಯಾದಳು ಎಂಬ ಮಾಹಿತಿ ತ್ರಿಶಲಾಗೆ ಸಿಕ್ಕಿತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಳು. ವಿಧಿವಿಜ್ಞಾನ ಪ್ರಯೋಗಾಲಯ ಪರೀಕ್ಷಾ ವರದಿ ಬಂದ ಬಳಿಕ ಸತ್ಯ ಬಯಲಾಗಿದೆ.

  • ರಬ್ಬರ್‌ ಕಾರ್ಖಾನೆಯಲ್ಲಿ ಅಗ್ನಿ ಅವಘಡ- 40 ಕ್ಕೂ ಹೆಚ್ಚು ಕಾರ್ಮಿಕರು ಸುಟ್ಟು ಭಸ್ಮ

    ರಬ್ಬರ್‌ ಕಾರ್ಖಾನೆಯಲ್ಲಿ ಅಗ್ನಿ ಅವಘಡ- 40 ಕ್ಕೂ ಹೆಚ್ಚು ಕಾರ್ಮಿಕರು ಸುಟ್ಟು ಭಸ್ಮ

    ಚಂಡೀಗಢ: ಸೋನಿಪತ್ (Sonipat) ಜಿಲ್ಲೆಯ ರಾಯ್ ಕೈಗಾರಿಕಾ ಪ್ರದೇಶದ ರಬ್ಬರ್ ಕಾರ್ಖಾನೆಯಲ್ಲಿ (Rubber Factory) ಇಂದು ಭಾರೀ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಸಿಲಿಂಡರ್‌ಗಳು (Cylinder) ಸ್ಫೋಟಗೊಂಡಿದ್ದು, 40ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ.

    ಅಗ್ನಿ ಅವಘಡದ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ ಸಿಲುಕಿದ್ದ ನೌಕರರನ್ನು ರಕ್ಷಿಸಲಾಗಿದೆ. ಘಟನೆ ನಡೆದ ಕೂಡಲೇ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಎಣ್ಣೆ ಬೇಡ ಎಂದಿದ್ದಕ್ಕೆ ಸ್ನೇಹಿತನೇ ಮನೆಯ ಟೆರೇಸ್‌ನಿಂದ ತಳ್ಳಿದ!

    ಕಾರ್ಖಾನೆಯಲ್ಲಿ ರಬ್ಬರ್ ಇದ್ದ ಕಾರಣ ಬೆಂಕಿ ವೇಗವಾಗಿ ವ್ಯಾಪಿಸಿದೆ. 16 ಮಂದಿ ಕಾರ್ಮಿಕರು ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರಲ್ಲಿ 8 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಉನ್ನತ ಮಟ್ಟದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನೂ ಕೆಲವರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಸಿವಿಲ್ ಆಸ್ಪತ್ರೆಯಲ್ಲಿ ತುರ್ತು ಕರ್ತವ್ಯಕ್ಕೆ ವೈದ್ಯರನ್ನು ಕರೆಸಲಾಗಿದೆ ಎಂಬುದಾಗಿ ವರದಿಯಾಗಿದೆ.

  • ರಾಹುಲ್ ಗಾಂಧಿ ಮದುವೆ ಯಾವಾಗ? – ಸೋನಿಯಾ ಗಾಂಧಿ ಹೇಳಿದ್ದೇನು?

    ರಾಹುಲ್ ಗಾಂಧಿ ಮದುವೆ ಯಾವಾಗ? – ಸೋನಿಯಾ ಗಾಂಧಿ ಹೇಳಿದ್ದೇನು?

    ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸಾರ್ವಜನಿಕರನ್ನ ತಲುಪುವ ಪ್ರಯತ್ನದಲ್ಲಿ ಹರಿಯಾಣದ ಸೋನಿಪತ್‌ನ ರೈತ ಮಹಿಳೆಯರೊಂದಿಗೆ (Farmer Womens) ಸಂವಾದದಲ್ಲಿ ನಿರತರಾಗಿದ್ದಾರೆ. ಅವರೊಂದಿಗಿನ ಸಂಭಾಷಣೆಯ ವೀಡಿಯೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    ಇತ್ತೀಚೆಗೆ ಮಹಿಳೆಯರ (Womenʼs) ಹೊಲಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೋನಿಯಾ ಗಾಂಧಿ (Sonia Gandhi), ತಮ್ಮ ನಿವಾಸದಲ್ಲಿ ರೈತ ಮಹಿಳೆಯರಿಗೆ ಭೋಜನಕೂಟ ಏರ್ಪಡಿಸುವ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ರೈತ ಮಹಿಳೆಯರನ್ನ ಪ್ರಿಯಾಂಕಾ ಗಾಂಧಿ (Priyanka Gandhi) ಮನೆಗೆ ಆಹ್ವಾನಿಸಿ, ಸೋನಿಯಾ ಗಾಂಧಿ ಜೊತೆಗೆ ಭೋಜನಕ್ಕೆ ವ್ಯವಸ್ಥೆ ಮಾಡಿದ್ದರು. ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್‌ – ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ CBI

    ಹೀಗೆ ಮನೆಗೆ ಬಂದ ರೈತ ಮಹಿಳೆಯರ ಪೈಕಿ ಓರ್ವ ಮಹಿಳೆ ರಾಹುಲ್ ಗಾಂಧಿ ಅವರ ಮದುವೆ ಯಾವಾಗ? ಮಾಡಲಿದ್ದೀರಿ ಎಂದು ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ನಗುತ್ತಲೇ ಉತ್ತರಿಸಿದ ಸೋನಿಯಾ ಗಾಂಧಿ ʻನೀವೆ ಹುಡುಗಿಯನ್ನ ಹುಡುಕಿ..ʼ ಎಂದು ಚಟಾಕಿ ಹಾರಿಸಿದ್ದಾರೆ. ರಾಹುಲ್ ಗಾಂಧಿ ಹಂಚಿಕೊಂಡಿರುವ ಈ ವಿಡಿಯೋ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಔತಣ ಕೂಟದ ವೇಳೆ ಮಹಿಳೆಯರ ಜೊತೆಗೆ ಆಹಾರ, ಮಹಿಳಾ ಸಬಲೀಕರಣ ಮತ್ತು GST ಬಗ್ಗೆ ಚರ್ಚೆ ನಡೆಸಿದರು‌. ಈ ವೇಳೆ ಸರ್ಕಾರ ನನ್ನ ಮನೆಯನ್ನು ಕಿತ್ತುಕೊಂಡ ಹಿನ್ನಲೆ ಪ್ರಿಯಾಂಕಾ ಗಾಂಧಿ ಅವರ ಮನೆಗೆ ಆಹ್ವಾನಿಸಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರಿ ಉದ್ಯೋಗಕ್ಕೆ ತರಬೇತಿ ನಡೆಸಿದ್ದ ಯುವತಿ -‌ ಕೊಲೆಗೆ 3 ದಿನಗಳ ಹಿಂದೆಯೇ ಸ್ಕೆಚ್‌ ಹಾಕಿದ್ದ ಪಾಪಿ ಪ್ರೇಮಿ!

    ವೀಡಿಯೊದಲ್ಲಿ, ರಾಹುಲ್ ಗಾಂಧಿ ಮಧ್ಯಾಹ್ನದ ಊಟವನ್ನು ನೀಡುತ್ತಿದ್ದಾರೆ. ನಿಮಗೆ ಊಟ ಇಷ್ಟವಾಯಿತೇ ಎಂದು ಕೇಳುತ್ತಿದ್ದಾರೆ. ಎಲ್ಲರಿಗೂ ಸಿಹಿತಿಂಡಿಗಳಿವೆಯೇ ಎಂದು ವಿಚಾರಿಸಿತ್ತಿದ್ದಾರೆ. ಮಕ್ಕಳು ಮತ್ತು ಹುಡುಗಿಯರಿಗೆ ಚಾಕೊಲೇಟ್‌ಗಳನ್ನು ವಿತರಿಸುವುದನ್ನು ಸಹ ಕಾಣಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಣ್ಣನನ್ನು ಕೊಂದ 5 ತಿಂಗ್ಳ ಬಳಿಕ ತಮ್ಮನನ್ನೂ ಗುಂಡಿಕ್ಕಿ ಕೊಂದ್ರು!

    ಅಣ್ಣನನ್ನು ಕೊಂದ 5 ತಿಂಗ್ಳ ಬಳಿಕ ತಮ್ಮನನ್ನೂ ಗುಂಡಿಕ್ಕಿ ಕೊಂದ್ರು!

    – ಪೊಲೀಸರಿಂದಾಗಿ ಇದ್ದ ಇನ್ನೊಬ್ಬ ಮಗನನ್ನೂ ಕಳೆದುಕೊಳ್ಳುವಂತಾಯ್ತು ಅಂತ ತಂದೆ ಕಣ್ಣೀರು

    ಚಂಢೀಗಡ: ಅಣ್ಣನನ್ನು ಕೊಂದು 5 ತಿಂಗಳ ಬಳಿಕ ನಾಲ್ವರು ದುಷ್ಕರ್ಮಿಗಳು 18 ವರ್ಷದ ತಮ್ಮನನ್ನೂ ಕೊಲೆಗೈದ ಆಘಾತಕಾರಿ ಘಟನೆಯೊಂದು ನಡೆದಿದೆ.

    ಈ ಘಟನೆ ಗುರುವಾರ ಸೊನಿಪತ್ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಮದಿನಾ ಗ್ರಾಮದ ರಾಜೇಶ್ ಸಿಂಗ್ ಅಂತಾ ಗುರುತಿಸಲಾಗಿದೆ. ಈ ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ.

    ಏನಿದು ಘಟನೆ?: 10 ತರಗತಿಗೆ ಬೋರ್ಡ್ ಎಕ್ಸಾಂ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜೇಶ್ ಆತನ ತಂಗಿಯನ್ನು ಕರೆದುಕೊಂಡು ಬರಲೆಂದು ಆಕೆಯ ಶಾಲೆಯ ಆಟದ ಮೈದಾನದಲ್ಲಿ ನಿಂತಿದ್ದನು. ಈ ವೇಳೆ ರಾಜೇಶ್ ಗೆಳೆಯ ಸಾವನ್ ಕುಮಾರ್ ಕೂಡ ಇದ್ದನು. ಇವರಿಬ್ಬರು ಮಾತನಾಡುತ್ತಿದ್ದ ಸಂದರ್ಭದಲ್ಲಿ ನಾಲ್ವರು ದುಷ್ಕರ್ಮಿಗಳು ಬಂದು ರಾಜೇಶ್ ನನ್ನು ಸುತ್ತುವರಿದು ಗುಂಡಿನ ಮಳೆ ಸುರಿಸಿದ್ದಾರೆ. 10 ಬಾರಿ ರಾಜೇಶ್ ಮೇಲೆ ಗುಂಡು ಹಾರಿಸಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಘಟನೆಯಿಂದಾಗಿ ರಾಜೇಶ್ ಗೆಳೆಯನ ಹೊಟ್ಟೆಗೆ ಗಂಭೀರ ಗಾಯಗಳಾಗಿದೆ.

    ಪರೀಕ್ಷೆಯ ನಿಮಿತ್ತ ಶಾಲೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಹೀಗಾಗಿ ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಶಾಲೆಯಲ್ಲಿದ್ದ ಸಬ್-ಇನ್ಸ್ ಪೆಕ್ಟರ್ ಸುಭಾಷ್ ಚಂದರ್ ಆಟದ ಮೈದಾನದ ಕಡೆ ದೌಡಾಯಿಸಿದ್ರು. ಈ ವೇಳೆ ರಾಜೇಶ್ ರಕ್ತಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದರೆ, ಗೆಳೆಯ ಗಂಭೀರ ಗಾಯಗೊಂಡಿದ್ದನು. ಅಲ್ಲದೇ ಪೊಲೀಸರು ಸ್ಥಳಕ್ಕೆ ಬರುವುದನ್ನು ಗಮನಿಸಿದ ಆರೋಪಿಗಳು, ಪೊಲೀಸರು ನೋಡುತ್ತಿದ್ದಂತೆಯೇ ಬಿಳಿ ಬಣ್ಣದ ಕಾರು ಹತ್ತಿ ಪರಾರಿಯಾಗಿದ್ದಾರೆ. ಆದ್ರೆ ಈ ವೇಳೆ ಪೊಲೀಸ್ ಅಧಿಕಾರಿಗೆ ಆರೋಪಿಗಳನ್ನು ತಡೆಯಲು ಸಾಧ್ಯವಾಗಿಲ್ಲ. ಯಾಕಂದ್ರೆ ಇತ್ತ ಘಟನೆಯಿಂದ ಗಂಭೀರ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗೆಳೆಯ ಸಾವನ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಅಂತ ವರದಿಯಾಗಿದೆ.

    ಇನ್ನು ನಾಲ್ವರು ಆರೋಪಿಗಳಲ್ಲಿ ಇಬ್ಬರನ್ನು ಪತ್ತೆ ಮಾಡಲಾಗಿದ್ದು, ಅದೇ ಗ್ರಾಮದ ಸೀತಾ ಮತ್ತು ಪವನ್ ಎಂಬುದಾಗಿ ಗುರುತಿಸಲಾಗಿದೆ. ಈ ಇಬ್ಬರು ಆರೋಪಿಗಳು ಕಳೆದ ವರ್ಷ ಅಕ್ಟೋಬರ್ ನಲ್ಲಿ ನಡೆದ ರಾಜೇಶ್ ಅಣ್ಣ ರಾಕೇಶ್ ಕೊಲೆಯಲ್ಲಿಯೂ ಭಾಗಿಯಾಗಿದ್ದಾರೆಂದು ಶಂಕಿಸಲಾಗಿತ್ತು. ಹಳೆಯ ದ್ವೇಷದಿಂದಾಗಿ ರಾಕೇಶ್ ನನ್ನು ಕೊಲೆ ಮಾಡಲಾಗಿದೆ ಅಂತ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

    ರಾಕೇಶ್ ಕೊಲೆಯನ್ನು ರಾಜೇಶ್ ನೋಡಿದ್ದನು. ಹೀಗಾಗಿ ಘಟನೆಗೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳಲ್ಲಿ 8 ಮಂದಿಯನ್ನು ಬಂಧಿಸಲಾಗಿತ್ತು. ಆದ್ರೆ ಈ ಪ್ರಕರಣದಲ್ಲಿ ಸೀತಾ ಮತ್ತು ಪವನ್ ತಲೆಮರೆಸಿಕೊಂಡಿದ್ದರು ಅಂತ ಬರೋಡ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವೀರ್ ಭಾನ್ ತಿಳಿಸಿದ್ದಾರೆ.

    `ನನ್ನ ದೊಡ್ಡ ಮಗನ ಕೊಲೆಯಾದ ಬಳಿಕ ಸೀತಾ ಮತ್ತು ಪವನ್ ವಿರುದ್ಧ ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಅವರಿಬ್ಬರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ನಾವು ಇದೀಗ ಇದ್ದ ಮತ್ತೊಬ್ಬ ಮಗನನ್ನೂ ಕಳೆದುಕೊಳ್ಳುವಂತಾಯ್ತು’ ಅಂತ ರಾಜೇಶ್ ತಂದೆ ಜೈ ಸಿಂಗ್ ತಮ್ಮ ಅಳಲುತೋಡಿಕೊಂಡಿದ್ದಾರೆ.

    ರಾಜೇಶ್ ಕೊಲೆಯ ಬಳಿಕ ಗುರುವಾರ ಸಂಜೆಯೇ ರೋಹ್ಟಕ್- ಪಾನಿಪತ್ ನಡುವಿನ ಹೆದ್ದಾರಿ ತಡೆದು ರಾಜೇಶ್ ಮೃತದೇಹವನ್ನಿಟ್ಟು ಉಗ್ರ ಪ್ರತಿಭಟನೆ ನಡೆಸಿದ್ದರು. ಈ ವೇಳೆ ರಾಜೇಶ್ ಕುಟುಂಬ ಹಾಗೂ ಗ್ರಾಮಸ್ಥರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಅಲ್ಲದೇ ರಾಜೇಶ್ ತಂದೆ ಸಹಿತ ಸುಮಾರು 25 ಮಂದಿಯನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ್ರು. ಆ ಬಳಿಕ ಅಂದ್ರೆ ಇಂದು ರಾಜೇಶ್ ಅಂತ್ಯಸಂಸ್ಕಾರ ನಡೆಯಿತು.