Tag: songs

  • ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್

    ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್

    ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ (Akshit Shashikumar) ಈಗ ಆದಿತ್ಯ ಶಶಿಕುಮಾರ್ ಅಂತ ಹೆಸರು ಬದಲಾಯಿಸಿಕೊಂಡಿದ್ದು, ’ಕಾದಾಡಿ’ (Kaadadi) ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು,ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಂಡಿರುವ ಸಿನಿಮಾವನ್ನು ಸತೀಶ್ ಮಾಲೆಂಪಾಟಿ ನಿರ್ದೇಶಿಸಿ, ಅರುಣಂ ಫಿಲಿಂಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಪ್ರಚಾರದ ಸಲುವಾಗಿ ಮೊನ್ನೆಯಷ್ಟೇ ನಾಯಕನ ಪರಿಚಯದ ಎರಡನೇ ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆ ಮಾಡಲಾಗಿದೆ.

    ಎನ್.ಮಾರುತಿ ಸಾಹಿತ್ಯದ ’ಕಲೆಯು ಇರಬೇಕು, ಮನೆಯು ಇರಬೇಕು, ಗುಡಿಯು ಇರಬೇಕು, ಕುಲವುನೂ ಇರಬೇಕು. ಸಹನೆಯು ಇರಬೇಕು, ಸಾಧನೆಯು ಇರಬೇಕು, ಗೆಲುವು ಇರಬೇಕು, ಸೋತರೂ ಗೆಲ್ಲುವ ಛಲವು ಇರಬೇಕು’ ಹಾಡಿಗೆ ಶಶಾಂಕ್ ಶೇಷಗಿರಿ ಧ್ವನಿಯಾಗಿದ್ದಾರೆ.

    ತ್ಯಾಗಮಯವಾಗುತ್ತಿರುವ ಜನರ ಜೀವನವು ದಿನದ ಅಂತ್ಯದಲ್ಲಿ ಪ್ರತಿಯೊಬ್ಬರು ತ್ಯಾಗಮಯಿರಾಗುತ್ತಾರೆ. ನಾವೆಲ್ಲರೂ ಕಾದಾಡುತ್ತಾ ಒಂದು ದಿನ ಸಾಯುತ್ತೇವೆ. ಆದರೆ ನಮ್ಮ ಜೀವನವನ್ನು ತ್ಯಾಗ ಮಾಡುವ ಮೂಲಕ ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಮಕ್ಕಳಿಗೆ ಏನಾದರೂ ಆಗಬೇಕು. ನಾವು ದಿನದಿಂದ ದಿನಕ್ಕೆ ಹೋರಾಟ ನಡೆಸುತ್ತಿದ್ದೆವೆ. ಇಂತಹ ಅಂಶಗಳನ್ನು ಥ್ರಿಲ್ಲರ್ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ.

    ಲಾವಣ್ಯ ಸಾಹುಕಾರ, ಚಾಂದಿನಿ ತಮಿಳರಸನ್ ನಾಯಕಿಯರು. ಉಳಿದಂತೆ ಪೋಸಾನಿ, ರವಿಕಾಳೆ, ಮಾರಿಮುತ್ತು, ಪ್ರೇಮ್‌ಮನೋಹರ್, ಶ್ರವಣ್‌ರಾಘವೇಂದ್ರ ಮುಂತಾದವರು ನಟಿಸಿದ್ದಾರೆ. ಆರು ಹಾಡುಗಳಿಗೆ ಭೀಮ್ಸ್ ಸಿಸಿರಿಲಿಯೋ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಡಿ.ಯೋಗಿಪ್ರಸಾದ್, ಕಲೆ ಅರ್ಜುನ್‌ಸೂರಿಸೆಟ್ಟಿ, ಸಂಕಲನ ಪ್ರಕಾಶ್‌ತೋಟ, ನೃತ್ಯ ರಾಜ್‌ಪಿಡಿ-ರಾಜ್‌ಕೃಷ್ಣ, ಸಾಹಸ ಬಿ.ಎಲ್.ಸತೀಶ್-ವಿನ್‌ಚೇನ್‌ಆಂಜಿ-ಬಿಂಬಸಾರ-ರಾಮಕೃಷ್ಣ-ರಾಮಸುಂಕರ ಅವರದಾಗಿದೆ. ಗೋವಾ, ಚಿಕ್ಕಮಗಳೂರು, ಹೈದರಬಾದ್, ಚೆನ್ನೈ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

  • ಪಂಜಾಬ್‌ನಲ್ಲಿ ಶಸ್ತ್ರಾಸ್ತ್ರ ನಿಯಂತ್ರಣ ಬಿಗಿ – ಹಿಂಸೆ ವೈಭವೀಕರಿಸುವ ಹಾಡುಗಳು ಬ್ಯಾನ್

    ಪಂಜಾಬ್‌ನಲ್ಲಿ ಶಸ್ತ್ರಾಸ್ತ್ರ ನಿಯಂತ್ರಣ ಬಿಗಿ – ಹಿಂಸೆ ವೈಭವೀಕರಿಸುವ ಹಾಡುಗಳು ಬ್ಯಾನ್

    ಚಂಡೀಗಢ: ಪಂಜಾಬ್ (Punjab) ಸರ್ಕಾರ ರಾಜ್ಯದ ಕುಖ್ಯಾತ ಬಂದೂಕು ಸಂಸ್ಕೃತಿಗೆ (Gun Culture) ಕಡಿವಾಣ ಹಾಕಿದ್ದು, ಶಸ್ತ್ರಾಸ್ತ್ರ (Arms)ನಿಯಂತ್ರಣವನ್ನು ಬಿಗಿಗೊಳಿಸಿದೆ. ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಸಾರ್ವಜನಿಕ ಶಸ್ತ್ರಾಸ್ತ್ರಗಳ ಪ್ರದರ್ಶನವನ್ನು ನಿಷೇಧಿಸುವುದು ಸೇರಿದಂತೆ ಗನ್ ಮಾಲೀಕತ್ವ ಮತ್ತು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ. ಶಸ್ತ್ರಾಸ್ತ್ರಗಳು ಅಥವಾ ಹಿಂಸೆಯನ್ನು ವೈಭವೀಕರಿಸುವ ಹಾಡುಗಳನ್ನು (Songs) ಕೂಡಾ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

    ಮೂಲಗಳ ಪ್ರಕಾರ ಇದುವರೆಗೆ ನೀಡಲಾದ ಎಲ್ಲಾ ಶಸ್ತ್ರಾಸ್ತ್ರ ಪರವಾನಗಿಗಳನ್ನು ಮುಂದಿನ 3 ತಿಂಗಳೊಳಗೆ ಕೂಲಂಕುಷವಾಗಿ ಪರಿಶೀಲಿಸಲಾಗುವುದು. ಪರವಾನಗಿದಾರರಲ್ಲಿ ಶಸ್ತ್ರಾಸ್ತ್ರ ಹೊಂದಿರಲು ಜಿಲ್ಲಾಧಿಕಾರಿಗಳಿಗೆ ತೃಪ್ತಿದಾಯಕ ಕಾರಣಗಳು ಸಿಗಲಿಲ್ಲವೆಂದಾದರೆ ಹೊಸ ಪರವಾನಗಿಯನ್ನು ನೀಡಲಾಗುವುದಿಲ್ಲ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

    ಮಾನವನ ಜೀವನಕ್ಕೆ, ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಶಸ್ತ್ರಾಸ್ತ್ರಗಳನ್ನು ಅಜಾಗರೂಕರಾಗಿ ಬಳಕೆ ಮಾಡುವುದು ಅಥವಾ ಸಂಭ್ರಮಾಚರಣೆಯ ವೇಳೆ ಗುಂಡು ಹಾರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಇದನ್ನೂ ಓದಿ: ಅಯೋಧ್ಯೆ ಮಸೀದಿ ನಿರ್ಮಾಣ ಕಾರ್ಯ 2023ಕ್ಕೆ ಪೂರ್ಣ ಸಾಧ್ಯತೆ – ಟ್ರಸ್ಟ್‌

    ಭಗವಂತ್ ಮಾನ್ ಅವರು ಮೇ ತಿಂಗಳಿನಲ್ಲಿಯೇ ಹಾಡುಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಅಥವಾ ಹಿಂಸೆಯನ್ನು ವೈಭವೀಕರಿಸುವ ಗಾಯಕರಿಗೆ ಎಚ್ಚರಿಕೆ ನೀಡಿದ್ದರು. ಅಂತಹ ಪ್ರವೃತ್ತಿಯನ್ನು ಬೆಂಬಲಿಸುವುದಕ್ಕೆ ಅವರು ಅಸಮ್ಮತಿ ಸೂಚಿಸಿದರು. ಇಂತಹ ಕೆಲಸಗಳಲ್ಲಿ ಭಾಗಿಯಾಗುವವರೊಂದಿಗೆ ಕಠಿಣವಾಗಿ ವ್ಯವಹರಿಸಲಾಗುವುದು ಎಂದು ಹೇಳಿದ್ದರು.

    ಇಂತಹ ಹಾಡುಗಳ ಮೂಲಕ ಸಮಾಜ ವಿರೋಧಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಬದಲು ಸಹೋದರತ್ವ, ಶಾಂತಿ ಮತ್ತು ಸೌಹಾರ್ದತೆಯ ಬಂಧಗಳನ್ನು ಬಲಪಡಿಸುವ ಮೂಲಕ ಪಂಜಾಬ್‌ನ ನೀತಿಗಳನ್ನು ಅನುಸರಿಸುವಂತೆ ಮಾನ್ ಗಾಯಕರಿಗೆ ಕರೆ ನೀಡಿದ್ದರು. ಇದನ್ನೂ ಓದಿ: ತನ್ನ ಹೆಂಡತಿಯನ್ನ ಭಾರೀ ಮೊತ್ತಕ್ಕೆ ಮಾರಾಟ ಮಾಡಿದ ಗಂಡ – ಮದುವೆನೂ ಮಾಡಿಸಿದ

    Live Tv
    [brid partner=56869869 player=32851 video=960834 autoplay=true]

  • ಹಫ್ತಾದ ಮೆಲೋಡಿ ಹಾಡು ಬಿಡುಗಡೆಗೊಳಿಸಿದರು ದುನಿಯಾ ವಿಜಯ್!

    ಹಫ್ತಾದ ಮೆಲೋಡಿ ಹಾಡು ಬಿಡುಗಡೆಗೊಳಿಸಿದರು ದುನಿಯಾ ವಿಜಯ್!

    ಬೆಂಗಳೂರು: ಪ್ರಕಾಶ್ ಹೆಬ್ಬಾಳ ನಿರ್ದೇಶನದ ಹಫ್ತಾ ಚಿತ್ರವೀಗ ಬಿಡುಗಡೆಯ ಸನ್ನಾಹದಲ್ಲಿದೆ. ಮಾಸ್ ಹಾಗೂ ಕ್ಯಾಚೀ ಟೈಟಲ್ಲಿನ ಮೂಲಕವೇ ಸದ್ದು ಮಾಡುತ್ತಾ ಬಂದಿರೋ ಈ ಚಿತ್ರದ ಆಡಿಯೂ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿ ವ್ಯಾಪಕ ಮೆಚ್ಚುಗೆಯನ್ನೂ ಗಳಿಸಿಕೊಂಡಿದೆ. ಈ ಅಲೆಯಲ್ಲಿಯೇ ವೀಡಿಯೋ ಹಾಡೊಂದನ್ನು ದುನಿಯಾ ವಿಜಯ್ ಬಿಡುಗಡೆಗೊಳಿಸಿದ್ದಾರೆ.

    ಈ ಲಿರಿಕಲ್ ವೀಡಿಯೋವನ್ನು ಬಿಡುಗಡೆಗೊಳಿಸಿರುವ ವಿಜಯ್, ಈ ಹೊಸಬರ ಪ್ರತಿಭಾವಂತ ತಂಡವನ್ನು ಪ್ರೋತ್ಸಾಹಿಸಿ ಗೆಲ್ಲಿಸುವಂತೆ ವಿನಂತಿಸಿಕೊಂಡಿದ್ದಾರೆ. ನೀನೇ ನೀನೇ ಜೊತೆಯಲಿ ನಿನ್ನ ಮಾತೇ ಸಿಹಿಚಳಿ ಎಂಬ ಮಧುರವಾದ ಈ ಹಾಡನ್ನು ಕೊಂಡಾಡುತ್ತಲೇ ವಿಜಯ್ ಅನಾವರಣಗೊಳಿಸಿದ್ದಾರೆ.

    ಇದು ಅಪ್ಪಟ ಮೆಲೋಡಿ ಹಾಡು. ಈ ಹಾಡಿಗೆ ವಿಜಯ್ ಯಾಡ್ರ್ಲಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಎಂಥವರನ್ನೂ ಮೋಹಕ್ಕೀಡು ಮಾಡುವಂಥಾ ಸಾಲುಗಳನ್ನು ಹೊಂದಿರೋ ಈ ಹಾಡನ್ನು ಅನುರಾಧಾ ಭಟ್ ಮತ್ತು ಹರಿಚರಣ್ ಹಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಆಡಿಯೋ ಬಿಡುಗಡೆಯಾಗಿತ್ತಲ್ಲಾ? ಅದರಲ್ಲಿನ ಎಲ್ಲ ಹಾಡುಗಳೂ ಜನಮಾನಸ ತಲುಪಿಕೊಂಡಿವೆ. ಅದರಲ್ಲಿಯೂ ಟೈಟಲ್ ಸಾಂಗ್ ಅಂತೂ ಟ್ರೆಂಡಿಂಗ್ ನಲ್ಲಿದೆ. ಈಗ ಬಿಡುಗಡೆಯಾಗಿರೋ ಈ ಮೆಲೋಡಿ ಲಿರಿಕಲ್ ವೀಡಿಯೋ ಸಾಂಗ್ ಕೂಡಾ ಅಂಥಾದ್ದೇ ಮೋಡಿ ಮಾಡೋ ಲಕ್ಷಣಗಳೇ ದಟ್ಟವಾಗಿವೆ.

    ಈ ಹಿಂದೆ ದಯಾಳ್ ಮತ್ತು ರಮೇಶ್ ಅರವಿಂದ್ ಅವರ ಜೊತೆ ಕೆಲಸ ಮಾಡಿರುವ ಪ್ರಕಾಶ್ ನಿರ್ದೇಶನದ ಮೊದಲ ಚಿತ್ರ ಹಫ್ತಾ. ಮೈತ್ರಿ ಮಂಜುನಾಥ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವರ್ಧನ್ ತೀರ್ಥಹಳ್ಳಿ ಮತ್ತು ರಾಘವ್ ನಾಗ್ ನಾಯಕರಾಗಿ ನಟಿಸಿದ್ದಾರೆ. ಇದುವರೆಗೂ ಹಲವಾರು ಚಿತ್ರಗಳಲ್ಲಿ ಖಳನಾಗಿ ಅಬ್ಬರಿಸಿರುವ ವರ್ಧನ್ ತೀರ್ಥಹಳ್ಳಿ ಈ ಸಿನಿಮಾ ಮೂಲಕ ನಾಯಕನಾಗಿದ್ದಾರೆ. ಕರಾವಳಿ ತೀರದ ಭೂಗತ ಜಗತ್ತಿನ ಕಥೆ ಹೊಂದಿರುವ ಈ ಚಿತ್ರದಲ್ಲಿ ವರ್ಧನ್ ಎರಡು ಶೇಡುಗಳ ಪಾತ್ರದಲ್ಲಿ ಮಿಂಚಿದ್ದಾರಂತೆ.

  • ಹಫ್ತಾದ ಮೆಲೋಡಿ ಹಾಡು ಬಿಡುಗಡೆಗೊಳಿಸಲಿದ್ದಾರೆ ದುನಿಯಾ ವಿಜಯ್!

    ಹಫ್ತಾದ ಮೆಲೋಡಿ ಹಾಡು ಬಿಡುಗಡೆಗೊಳಿಸಲಿದ್ದಾರೆ ದುನಿಯಾ ವಿಜಯ್!

    ಬೆಂಗಳೂರು: ಪ್ರಕಾಶ್ ಹೆಬ್ಬಾಳ ನಿರ್ದೇಶನದ ಹಫ್ತಾ ಚಿತ್ರವೀಗ ಬಿಡುಗಡೆಯ ಸನ್ನಾಹದಲ್ಲಿದೆ. ಮಾಸ್ ಹಾಗೂ ಕ್ಯಾಚೀ ಟೈಟಲ್ಲಿನ ಮೂಲಕವೇ ಸದ್ದು ಮಾಡುತ್ತಾ ಬಂದಿರೋ ಈ ಚಿತ್ರದ ಆಡಿಯೋ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿ ವ್ಯಾಪಕ ಮೆಚ್ಚುಗೆಯನ್ನೂ ಗಳಿಸಿಕೊಂಡಿದೆ. ಈ ಅಲೆಯಲ್ಲಿಯೇ ವೀಡಿಯೋ ಹಾಡೊಂದನ್ನು ಬಿಡುಗಡೆ ಮಾಡಲು ಚಿತ್ರ ತಂಡ ಸಜ್ಜುಗೊಂಡಿದೆ.

    ಈ ಲಿರಿಕಲ್ ವೀಡಿಯೋ ನಾಳೆ ಸಂಜೆ ಬಿಡುಗಡೆಯಾಗಲಿದೆ. ಇದು ಅಪ್ಪಟ ಮೆಲೋಡಿ ಹಾಡು. ವಿಶೇಷವೆಂದರೆ ಇದನ್ನು ಮಾಸ್ ಹೀರೋ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರು ಬಿಡುಗಡೆಗೊಳಿಸಲಿದ್ದಾರೆ!

    ಈ ಹಾಡಿಗೆ ವಿಜಯ್ ಯಾಡ್ರ್ಲಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಎಂಥವರನ್ನೂ ಮೋಹಕ್ಕೀಡು ಮಾಡುವಂಥಾ ಸಾಲುಗಳನ್ನು ಹೊಂದಿರೋ ಈ ಹಾಡನ್ನು ಅನುರಾಧಾ ಭಟ್ ಮತ್ತು ಹರಿಚರಣ್ ಹಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಆಡಿಯೋ ಬಿಡುಗಡೆಯಾಗಿತ್ತಲ್ಲಾ? ಅದರಲ್ಲಿನ ಎಲ್ಲ ಹಾಡುಗಳೂ ಜನಮಾನಸ ತಲುಪಿಕೊಂಡಿವೆ. ಅದರಲ್ಲಿಯೂ ಟೈಟಲ್ ಸಾಂಗ್ ಅಂತೂ ಟ್ರೆಂಡಿಂಗ್ ನಲ್ಲಿದೆ. ನಾಳೆ ಬಿಡುಗಡೆಯಾಗಲಿರೋ ಈ ಮೆಲೋಡಿ ಲಿರಿಕಲ್ ವೀಡಿಯೋ ಸಾಂಗ್ ಕೂಡಾ ಅಂಥಾದ್ದೇ ಮೋಡಿ ಮಾಡೋ ಭರವಸೆ ಚಿತ್ರತಂಡದಲ್ಲಿದೆ.

    ಈ ಹಿಂದೆ ದಯಾಳ್ ಮತ್ತು ರಮೇಶ್ ಅರವಿಂದ್ ಅವರ ಜೊತೆ ಕೆಲಸ ಮಾಡಿರುವ ಪ್ರಕಾಶ್ ನಿರ್ದೇಶನದ ಮೊದಲ ಚಿತ್ರ ಹಫ್ತಾ. ಮೈತ್ರಿ ಮಂಜುನಾಥ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವರ್ಧನ್ ತೀರ್ಥಹಳ್ಳಿ ಮತ್ತು ರಾಘವ್ ನಾಗ್ ನಾಯಕರಾಗಿ ನಟಿಸಿದ್ದಾರೆ. ಇದುವರೆಗೂ ಹಲವಾರು ಚಿತ್ರಗಳಲ್ಲಿ ಖಳನಾಗಿ ಅಬ್ಬರಿಸಿರುವ ವರ್ಧನ್ ತೀರ್ಥಹಳ್ಳಿ ಈ ಸಿನಿಮಾ ಮೂಲಕ ನಾಯಕನಾಗಿದ್ದಾರೆ. ಕರಾವಳಿ ತೀರದ ಭೂಗತ ಜಗತ್ತಿನ ಕಥೆ ಹೊಂದಿರುವ ಈ ಚಿತ್ರದಲ್ಲಿ ವರ್ಧನ್ ಎರಡು ಶೇಡುಗಳ ಪಾತ್ರದಲ್ಲಿ ಮಿಂಚಿದ್ದಾರಂತೆ.

  • ಹಫ್ತಾ ಹಾಡುಗಳು ಹೊರಬಂದಿವೆ

    ಹಫ್ತಾ ಹಾಡುಗಳು ಹೊರಬಂದಿವೆ

    ಬೆಂಗಳೂರು: ಪ್ರಕಾಶ್ ಹೆಬ್ಬಾಳ ಕತೆ, ಚಿತ್ರಕತೆ, ಸಂಭಾಷಣೆ ಬರೆದು ಪ್ರಥಮ ಬಾರಿ ನಿರ್ದೇಶನ ಮಾಡಿರುವ ‘ಹಫ್ತಾ’ ಚಿತ್ರದ ಹಾಡುಗಳು ಅನಾವರಣಗೊಂಡಿವೆ. ಹಫ್ತಾ ಚಿತ್ರಕ್ಕೆ ಸೆಂಟಿಮೆಂಟ್ ನಾಟ್ ಅಲೌಡ್ ಎಂಬ ಟ್ಯಾಗ್ ಲೈನ್ ಎಂದು ನೀಡಲಾಗಿದೆ. ಗೌತಮ್ ಶ್ರೀವತ್ಸ ಹಿನ್ನಲೆ ಸಂಗೀತ ನೀಡಿರುವ ಈ ಚಿತ್ರಕ್ಕೆ ವಿಜಯ್ ಯಾಡ್ರ್ಲಿ ಒಂದು ಡ್ಯುಯೆಟ್ ಮತ್ತು ಪ್ಯಾಥೋ ಹಾಡಿಗೆ ರಾಗ ಸಂಯೋಜಿಸಿದ್ದಾರೆ.

    ಕಡಲ ತೀರದ ಭೂಗತಲೋಕ ಮತ್ತು ಸುಪಾರಿ ಕಿಲ್ಲಿಂಗ್ ಜೊತೆಗೆ ಯಾರೂ ನಿರೀಕ್ಷಿಸದ ಪ್ರಮುಖ ವಿಷಯವನ್ನು ಸೇರಿಸಿ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ದುಷ್ಟರನ್ನು ಸಂಹಾರ ಮಾಡಲು ದುಷ್ಟನೇ ಬರಬೇಕೆನ್ನುವ ಫಾರ್ಮುಲಾ ಈ ಚಿತ್ರದ್ದಾಗಿದೆ. ಮಂಗಳೂರು, ಮುರುಡೇಶ್ವರ, ಗೋಕರ್ಣ ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ, ಖಳನಟನಾಗಿ ನಟಿಸಿದ್ದ ವರ್ಧನ್ ತೀರ್ಥಹಳ್ಳಿ ಮೊದಲ ಬಾರಿ ನಾಯಕನಾಗಿ ಎರಡು ಶೇಡ್‍ಗಳಲ್ಲಿ ಅದರಲ್ಲೂ ಒಂದು ಹಂತದಲ್ಲಿ ಮಂಗಳಮುಖಿಯಾಗಿ ಕಾಣಿಸಿಕೊಂಡಿರುವುದು ವಿಶೇಷ.

    ಬುದ್ಧಿವಂತಿಕೆಯಿಂದ ಅಪರಾಧದ ಸುಳಿವು ಸಿಗದಂತೆ ಸೈಲೆಂಟ್ ಕಿಲ್ಲರ್. ಇವನದು ಏನಿದ್ದರೂ ಗನ್ ಮಾತಾಡುತ್ತೆ ಎನ್ನುವ ಪಾತ್ರದಲ್ಲಿ ರಾಘವ ನಾಗ್ ನಟಿಸಿದ್ದಾರೆ. ಭರತನಾಟ್ಯ ವಿದ್ಯಾರ್ಥಿಯಾಗಿ ಬಿಂಬ ಶ್ರೀ ನೀನಾಸಂ ಅವರಿಗೆ ರಾಮರಾಮರೇ ನಂತರ ನಾಯಕಿಯಾಗಿ ಅವಕಾಶ ಸಿಕ್ಕಿದೆಯಂತೆ. ಕೂರ್ಗ್ ಮೂಲದ ಸೌಮ್ಯ ತಿತೀರ ಚೊಚ್ಚಲ ಚಿತ್ರದಲ್ಲೇ ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮುಖ್ಯ ಖಳನಾಯಕನಾಗಿ ಬಾಲ್‍ರಾಜ್ ವಾಡಿ ಉಳಿದಂತೆ ದಶಾವರ ಚಂದ್ರು, ಉಗ್ರಂ ರವಿ ಮುಂತಾದವರು ತಂಡದಲ್ಲಿ ಇದ್ದಾರೆ. ಛಾಯಾಗ್ರಹಣ ಸೂರಿ ಸಿನಿಟೆಕ್, ಸಂಕಲನ ರಘುನಾಥ್ ಎಲ್. ನಿರ್ವಹಿಸಿದ್ದಾರೆ.

    ಸಿಡಿ ಬಿಡುಗಡೆ ಮಾಡಿದ ಲಹರಿವೇಲು ಮಾತನಾಡಿ, ಒಂದು ಕಾಲದಲ್ಲಿ ಸೂಪರ್ ಕಾಪ್ ಪೋಲೀಸ್ ಅಧಿಕಾರಿಗಳು ಈ ಪದವನ್ನು ಉಪಯೋಗಿಸುತ್ತಿದ್ದುದನ್ನು ಕೇಳಿದ್ದೇನೆ. ಈಗ ನೋಡಿದರೆ ಇದೇ ಹೆಸರಿನಲ್ಲಿ ಸಿನಿಮಾ ಸಿದ್ಧಗೊಂಡಿದೆ. ತಂಡಕ್ಕೆ ಒಳ್ಳೆಯದಾಗಲಿ ಎಂದರು. ನಿರ್ಮಾಪಕನಾಗಿ ಇದು ನನ್ನ ಎರಡನೆ ಪ್ರಯತ್ನ. ಕತೆ ಚೆನ್ನಾಗಿರುವುದರಿಂದಲೇ ಹಣ ಹೂಡಿದ್ದೇನೆ ಎಂದು ಮೈತ್ರಿ ಕಟ್ಟಡಗಳ ಮಾಲೀಕ ಮೈತ್ರಿ ಮಂಜುನಾಥ್ ಕೋರಿದರು. ಸಹ ನಿರ್ಮಾಪಕ ಬಾಲರಾಜ್ ಟಿ.ಸಿ.ಪಾಳ್ಯ, ಅತಿಥಿಗಳಾಗಿ ಚಕ್ರಪಾಣಿ, ದಾಪಿ ಆಂಜನಪ್ಪ, ದಯಾಳ್ ಆಗಮಿಸಿದ್ದರು. ಯು/ಎ ಪ್ರಮಾಣ ಪತ್ರ ಪಡೆದುಕೊಂಡಿರುವ ಸಿನಿಮಾವನ್ನು ಸದ್ಯದಲ್ಲೇ ಜನರಿಗೆ ತೋರಿಸಲು ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದಾರೆ.

  • ಪಡ್ಡೆಹುಲಿಯ ಹತ್ತು ಹಾಡುಗಳನ್ನು ಒಟ್ಟಿಗೇ ಕೇಳೋ ಅವಕಾಶ!

    ಪಡ್ಡೆಹುಲಿಯ ಹತ್ತು ಹಾಡುಗಳನ್ನು ಒಟ್ಟಿಗೇ ಕೇಳೋ ಅವಕಾಶ!

    ಎಮ್. ರಮೇಶ್ ರೆಡ್ಡಿ ನಿರ್ದೇಶನ ಮಾಡಿರುವ ಪಡ್ಡೆಹುಲಿ ಚಿತ್ರದ ಹಾಡುಗಳು ಸೃಷ್ಟಿಸಿರುವ ಕ್ರೇಜ್ ಕಡಿಮೆಯದ್ದೇನಲ್ಲ. ರವಿಚಂದ್ರನ್ ಸೃಷ್ಟಿಸಿದ್ದ ಪ್ರೇಮಲೋಕ ಮತ್ತೊಮ್ಮೆ ಸೃಷ್ಟಿಯಾದಂಥಾ ಸಂಭ್ರಮವೊಂದು ಈ ಹಾಡುಗಳ ಮೂಲಕವೇ ಪ್ರೇಕ್ಷಕರೆದೆಗೂ ದಾಟಿಕೊಂಡಿದೆ. ಇದುವರೆಗೂ ಒಂದೊಂದಾಗಿ ಹೊರ ಬಂದಿದ್ದ ಹಾಡುಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಆದರೀಗ ಪಡ್ಡೆ ಹುಲಿಯ ಅಷ್ಟೂ ಹಾಡುಗಳನ್ನು ಒಟ್ಟಿಗೆ ಕೇಳುವ ಸದಾವಕಾಶ ಕೂಡಿ ಬಂದಿದೆ.

    ಯಾಕೆಂದರೆ, ಚಿತ್ರತಂಡ ಪಡ್ಡೆಹುಲಿ ಹಾಡುಗಳ ಜ್ಯೂಕ್ ಬಾಕ್ಸನ್ನು ಇದೀಗ ಅನಾವರಣಗೊಳಿಸಿದೆ. ಇದು ಕನ್ನಡ ಪ್ರೇಕ್ಷಕರ ಪಾಲಿಗೆ ಅಕ್ಷರಶಃ ಹಬ್ಬ. ಯಾಕೆಂದರೆ, ಹಿಟ್ ಹಾಡುಗಳ ಸರಮಾಲೆಯೇ ಈ ಜ್ಯೂಕ್ ಬಾಕ್ಸ್ ನಲ್ಲಿದೆ. ಒಂದು ಚಿತ್ರವೆಂದರೆ ಮೂರರಿಂದ ಆರು ಹಾಡುಗಳಿರೋದು ಮಾಮೂಲಿ. ಆದರೆ ಪಡ್ಡೆಹುಲಿ ಚಿತ್ರದ ಈ ಜ್ಯೂಕ್ ಬಾಕ್ಸ್ ನಲ್ಲಿ ಬರೋಬ್ಬರಿ ಹತ್ತು ಹಾಡುಗಳಿದ್ದಾವೆ. ಅವೆಲ್ಲವನ್ನೂ ಒಟ್ಟೊಟ್ಟಾಗಿ ಕೇಳೋ ಸದಾವಕಾಶವೊಂದು ಈಗ ಪ್ರೇಕ್ಷಕರ ಪಾಲಿಗೆ ಕೂಡಿ ಬಂದಿದೆ.

    ನಾನ್ ತುಂಬಾ ಹೊಸಬ ಬಾಸು, ಯಂಡ ಯೆಂಡತಿ, ಬದುಕು ಜಟಕಾ ಬಂಡಿ, ಒಂದು ಮಾತಲ್ಲಿ, ನಿನ್ನ ಪ್ರೇಮದ ಪರಿಯ, ಚೂರ್ ಚೂರ್, ಕಳಬೇಡ ಕೊಲಬೇಡ, ಜೀ ಜೀ ಜೀ, ಹೇಳಿ ಹೋಗು ಕಾರಣ ಹಾಗೀ ಟೈಟಲ್ ಸಾಂಗ್ ಸೇರಿದಂತೆ ಒಟ್ಟು ಹತ್ತು ಹಾಡುಗಳು ಈ ಜ್ಯೂಕ್ ಬಾಕ್ಸ್ ನಲ್ಲಿವೆ. ನಿರ್ದೇಶಕ ಗುರುದೇಶಪಾಂಡೆಯವರ ಸಾರಥ್ಯದಲ್ಲಿ ಈ ಹಾಡುಗಳೆಲ್ಲವೂ ಕೂಡಾ ಈಗಾಗಲೇ ಹಿಟ್ ಆಗಿವೆ. ಈ ಮೂಲಕ ಭರತ್ ಬಿಜೆ ಸಂಗೀತ ಮೋಡಿ ಮಾಡಿದೆ.

    ಇದೆಲ್ಲದಕ್ಕಿಂತಲೂ ವಿಶೇಷವಾಗಿ ಈ ಹಾಡುಗಳ ಮೂಲಕವೇ ನವನಾಯಕ ಶ್ರೇಯಸ್ ಅವರ ನಟನಾ ಚಾತುರ್ಯವೂ ಅನಾವರಣಗೊಂಡಿದೆ. ಖ್ಯಾತ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಈ ಚಿತ್ರಕ್ಕಾಗಿ ಎಂಥಾ ತಯಾರಿ ಮಾಡಿಕೊಂಡಿದ್ದಾರೆಂಬುದೂ ಹಾಡುಗಳ ಮೂಲಕವೇ ಜಾಹೀರಾಗಿದೆ. ಈ ಬಗ್ಗೆ ಪ್ರೇಕ್ಷಕರೂ ಕೂಡಾ ಮೆಚ್ಚುಗೆಯಿಂದಲೇ ಈ ಚಿತ್ರಕ್ಕಾಗಿ ಕಾತರದಿಂದ ಕಾಯಲಾರಂಭಿಸಿದ್ದಾರೆ.

  • ಶಾಲೆಯಲ್ಲಿ ಪಾಠ ಸ್ಟುಡಿಯೋದಲ್ಲಿ ಗಾನ – ಸ್ವಂತ ಖರ್ಚಿನಲ್ಲಿ ಜನ ಜಾಗೃತಿ!

    ಶಾಲೆಯಲ್ಲಿ ಪಾಠ ಸ್ಟುಡಿಯೋದಲ್ಲಿ ಗಾನ – ಸ್ವಂತ ಖರ್ಚಿನಲ್ಲಿ ಜನ ಜಾಗೃತಿ!

    ಕೊಪ್ಪಳ: ಶಾಲೆಯಲ್ಲಿ ಪಾಠ ಮಾಡುವುದರ ಜೊತೆಗೆ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಹಲವಾರು ಗೀತೆಗಳನ್ನ ರಚಿಸಿ ಕೊಪ್ಪಳದ ವ್ಯಕ್ತಿಯೊಬ್ಬರು ಅದಕ್ಕೆ ತಾವೇ ದನಿಯಾಗಿದ್ದಾರೆ.

    ಕೆಲ ವರ್ಷ ಶಿಕ್ಷಕನಾಗಿ ಕೆಲಸ ಮಾಡಿ ಬಳಿಕ ಸಮೂಹ ಸಂಪನ್ಮೂಲ ವಿಭಾಗದ ನೌಕರನಾಗಿರುವ ಹನಮಂತಪ್ಪ ಕುರಿ ತನ್ನ ಸ್ವಂತ ಖರ್ಚಿನಲ್ಲಿ ಹಾಡು ತಯಾರಿಸಿ ಜನರಲ್ಲಿ, ಮಕ್ಕಳಲ್ಲಿ ಹಾಗೂ ವ್ಯವಸ್ಥೆಗೆ ತನ್ನದೆ ಹಾಡಿನ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

    ಮೂಲತಃ ಕೊಪ್ಪಳ ತಾಲೂಕಿನ ಬೋಚನಹಳ್ಳಿ ನಿವಾಸಿಯಾಗಿರುವ ಹನಮಮತಪ್ಪ ಕುರಿ ಅವರು ಜಿಲ್ಲೆಯ ಬಹದ್ದೂರ ಬಂಡಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ನೌಕರಿ ಮಾತ್ರ ಮಾಡದೇ ಹನಮಂತಪ್ಪ ತಮ್ಮ ಹಾಡಿನ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ತಾವೇ ಹಾಡು ರಚಿಸಿ ಅದಕ್ಕೆ ಧ್ವನಿಯಾಗಿದ್ದಾರೆ. ಮಕ್ಕಳಿಗಾಗಿ ಜನಗಣತಿ ಗೀತೆಗಳು, ಚುನಾವಣೆ ಜಾಗೃತಿ ಗೀತೆಗಳು, ರೈತರ ಆತ್ಮಹತ್ಯೆಯುನ್ನ ತಡೆಗಟ್ಟುವ ಹಾಡು ಹೀಗೆ ಸುಮಾರು 25 ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿ ಹಾಡಿದ್ದಾರೆ. ಅದರಲ್ಲೂ ರೈತರ ಬಗ್ಗೆ ಹಾಡು ಬರೆದು ಅದನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಾಗ ಹನಮಂತಪ್ಪ ಕುರಿ ಅವರ ಕೆಲಸ ಜನರ ಮನಗೆದ್ದಿದೆ.

    ಹನಮಂತಪ್ಪ ಸುಮಾರು 12 ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಆಸೆಯ ಮೇರೆಗೆ ಹನಮಂತಪ್ಪ ಕುರಿ ಇಲಾಖೆಯ ತನ್ನ ಕರ್ತವ್ಯದ ಜೊತೆ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಬರೆದ ಹನಮಂತಪ್ಪರ ಗೀತೆಗಳನ್ನ ರಾಜ್ಯದ ಬೇರೆ ಬೇರೆ ಶಾಲೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ.

    ತನಗೆ ಬರುವ ಸಂಬಳದಲ್ಲಿ ಸುಮಾರು 50 ಸಾವಿರ ಹಣವನ್ನು ಖರ್ಚು ಮಾಡಿ ಗೀತೆಗಳನ್ನ ರಚಿಸಿದ್ದಾರೆ. ಶಿಕ್ಷಕರಿಗೆ ಕಲಿಸಿದ ಗುರುವಿಗೆ ಹಾಡಿನ ಮೂಲಕ ಹನಮಂತಪ್ಪ ಕುರಿ ಗುರುನಮನ ಸಲ್ಲಸಿದ್ದಾರೆ. ಇದರ ಜೊತೆಗೆ ನೂತನ ಪಿಂಚಣಿ ಯೋಜನೆಯನ್ನು ರದ್ದು ಮಾಡುವಂತೆ ಆಗ್ರಹಿಸಿ ರಾಜ್ಯದ ಎಲ್ಲಾ ನೌಕರರ ಪರ ಹಾಡು ಬರೆದು ರಾಜ್ಯಾದ್ಯಂತ ಮೆಚ್ಚುಗೆ ಗಳಿಸಿದ್ದಾರೆ.

    ಶಿಕ್ಷಕ ಹಾಗೂ ಹಾಡುಗಾರನಾಗಿ ಹನಮಂತಪ್ಪ ಮೋಡಿ ಮಾಡುತ್ತಿದ್ದಾರೆ. ಸ್ವತಃ ಹಾಡು ರಚಿಸಿ ಸಿಂದನೂರಿನ ಸ್ಟುಡಿಯೋ ಒಂದರಲ್ಲಿ ತಾವೇ ಧ್ವನಿ ನೀಡಿ ರೆಕಾರ್ಡ್ ಮಾಡಿದ್ದಾರೆ. ನೌಕರಿಯ ಜೊತೆಗೆ ಇಂತಹ ಸಾಮಾಜಿಕ ಕಳಕಳಿಯಲ್ಲಿ ತೊಡಗಿರೋ ಶಿಕ್ಷಕರನ್ನ ಸರ್ಕಾರ ಗುರುತಿಸಬೇಕು ಅನ್ನೋದು ಹನಮಂತಪ್ಪ ಅವರ ಸಹುದ್ಯೋಗಿಗಳ ಅಭಿಲಾಶೆಯಾಗಿದೆ.

    ಶಿಕ್ಷಕರೆಂದರೆ ಮಕ್ಕಳಿಗೆ ಪಾಠ ಮಾಡಿ ಮನೆಗೆ ಹೋಗ್ತಾರೆ ಎನ್ನುವರ ಮಧ್ಯೆ ಹನಮಂತಪ್ಪ ಕುರಿ ಭಿನ್ನವಾಗಿದ್ದಾರೆ. ಕಡು ಬಡತನ ಕುಟಂಬದಲ್ಲಿ ಹುಟ್ಟಿ ತನ್ನ ಸಂಬಳದ ಹಣದಲ್ಲಿ ಜನರ ಜಾಗೃತಿಗಾಗಿ ಮೀಸಲಿಟ್ಟಿದ್ದು ನಿಜಕ್ಕೂ ಶ್ಲಾಘನೀಯ ಕೆಲಸವಾಗಿದೆ.

    https://www.youtube.com/watch?v=zZjQiJ8his8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv