Tag: Sondekoppa

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ನೆಲಮಂಗಲದಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಬ್ರೇಕ್

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ನೆಲಮಂಗಲದಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಬ್ರೇಕ್

    ನೆಲಮಂಗಲ: ನಗರದ ಮುಖ್ಯರಸ್ತೆ ಸೊಂಡೆಕೊಪ್ಪದ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವುದರಿಂದ ಜನರು ಜಾಸ್ತಿಯಾಗಿದ್ದು, ಪೋಲಿ ಪುಂಡರ ಹಾವಳಿ ಕೂಡ ಜಾಸ್ತಿಯಾಗಿತ್ತು. ಈ ಪರಿಣಾಮ ಕಾಲೇಜಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅವರಿಗೆ ಮುತ್ತಿಗೆ ಹಾಕಿ ಮನವಿ ಪತ್ರ ನೀಡಿ ವಿದ್ಯಾರ್ಥಿಗಳು ಗಮನ ಸೆಳೆದಿದ್ದರು.

     ಈ ಬಗ್ಗೆ ವರದಿ ಮಾಡಿದ್ದ ಪಬ್ಲಿಕ್ ಟಿವಿಯನ್ನು ನೋಡಿದ ಪೊಲೀಸ್ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ಇಂದು ಬೆಳಗ್ಗೆ ಕಾರ್ಯಾಚರಣೆ ನಡೆಸಿ ಬೀದಿ ಬದಿ ವ್ಯಾಪಾರಕ್ಕೆ ಬ್ರೇಕ್ ಹಾಕಿದ್ದಾರೆ. ಇಂದು ಬೆಳಗ್ಗೆ ಕಾರ್ಯಪ್ರವೃತ್ತರಾದ ನಗರಸಭೆ ಆಯುಕ್ತ ಮಂಜುನಾಥ್ ಬೀದಿ ಬದಿಯಲ್ಲಿ ಅಂಗಡಿ ಇಟ್ಟು ರಸ್ತೆಯಲ್ಲಿ ಟ್ರಾಫಿಕ್ ಕಿರಿಕಿರಿ ಜೊತೆ ವಿದ್ಯಾರ್ಥಿಗಳ ಓಡಾಟಕ್ಕೆ ತೊಂದರೆ ಮಾಡದಂತೆ ತಿಳಿಸಿ ಅಂಗಡಿಗಳನ್ನು ತೆರವು ಮಾಡಿದ್ದಾರೆ. ಇದನ್ನೂ ಓದಿ: ಪೋಲಿಪುಂಡರ ಹಾವಳಿ ತಪ್ಪಿಸಿ – ಶಾಸಕರನ್ನು ತಡೆದು ಮನವಿ ನೀಡಿದ ವಿದ್ಯಾರ್ಥಿನಿಯರು

    ನಗರಸಭೆ ಅಧಿಕಾರಿಗಳಿಗೆ ಸಾಥ್ ನೀಡಿದ ನೆಲಮಂಗಲ ಟೌನ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಕುಮಾರ್, ಪೋಲಿ ಪುಂಡರ ಮೇಲೆ ನಿಗಾ ಇಟ್ಟು ಯಾವುದೇ ತೊಂದರೆ ಆಗದಂತೆ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಅವಕಾಶ ಮಾಡುವುದಾಗಿ ತಿಳಿಸಿದ್ದು, ಎಲ್ಲದಕ್ಕೂ ಬ್ರೇಕ್ ಹಾಕಿದ್ದಾರೆ.

  • ಪೋಲಿಪುಂಡರ ಹಾವಳಿ ತಪ್ಪಿಸಿ – ಶಾಸಕರನ್ನು ತಡೆದು ಮನವಿ ನೀಡಿದ ವಿದ್ಯಾರ್ಥಿನಿಯರು

    ಪೋಲಿಪುಂಡರ ಹಾವಳಿ ತಪ್ಪಿಸಿ – ಶಾಸಕರನ್ನು ತಡೆದು ಮನವಿ ನೀಡಿದ ವಿದ್ಯಾರ್ಥಿನಿಯರು

    ನೆಲಮಂಗಲ: ಕಾಲೇಜಿಗೆ ಬರುವ ವೇಳೆ ಪೋಲಿಪುಂಡರ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಕೂಡಲೇ ಇವರ ಹಾವಳಿ ತಪ್ಪಿಸಿ ಎಂದು ನೂರಾರು ಕಾಲೇಜು ವಿದ್ಯಾರ್ಥಿಗಳು ಶಾಸಕ ಶ್ರೀನಿವಾಸಮೂರ್ತಿ ಅವರನ್ನು ತಡೆದು ಮನವಿ ಪತ್ರ ನೀಡಿದ ಪ್ರಸಂಗ ಜರುಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರದ ಸೊಂಡೆಕುಪ್ಪ ರಸ್ತೆಯ ಪವಾಡ ಬಸವಣ್ಣ ದೇವರ ಮಠದ ನೂರಾರು ವಿದ್ಯಾರ್ಥಿನಿಯರು ಶ್ರೀನಿವಾಸಮೂರ್ತಿ ಅವರಿಗೆ ಪತ್ರ ನೀಡಿ ಮನವಿ ಮಾಡಿದ್ದಾರೆ. ಇದನ್ನೂ ಓದಿ:  ರಾಷ್ಟ್ರೀಯ ಹಸಿರು ನ್ಯಾಯಾಲಯಕ್ಕೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಅಧಿಕಾರವಿದೆ: ಸುಪ್ರೀಂಕೋರ್ಟ್

    ನೆಲಮಂಗಲ ನಗರಸಭೆ ವ್ಯಾಪ್ತಿಯ ಸೊಂಡೆಕೊಪ್ಪ ರಸ್ತೆಯ ಎರಡು ಬದಿಯಲ್ಲೂ ಅನಧಿಕೃತವಾಗಿ ಅಂಗಡಿಗಳು ಹಾಗೂ ಶೇಡ್ ಗಳು ನಿರ್ಮಾಣವಾಗಿದೆ. ಈ ಹಿನ್ನೆಲೆ ಸೊಂಡೆಕೊಪ್ಪ ರಸ್ತೆಯಲ್ಲಿ ವೃದ್ಧರು, ಹೆಣ್ಣು ಮಕ್ಕಳು ಓಡಾಡುವುದೇ ದುಸ್ತರವಾಗಿದೆ.

    ಈ ರಸ್ತೆಯಲ್ಲಿ ವಾಹನ ದಟ್ಟಣೆ ಬಲು ಜೋರಾಗಿದ್ದು, ರಸ್ತೆಯ ಎರಡು ಬದಿಯಲ್ಲಿ ಅಂಗಡಿ ಮುಂಗಟ್ಟು ಇರುವುದರಿಂದ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳಲು ಹರ ಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಕಷ್ಟು ಬಾರಿ ಈ ಕುರಿತು ಅಧಿಕಾರಿಗಳು, ಪೊಲೀಸರಿಗೆ ದೂರು ನೀಡಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಇದನ್ನೂ ಓದಿ:  ಜೆಡಿಎಸ್ ಅನ್ನು ರಾಜಕೀಯವಾಗಿ 1 ಕಿ.ಮೀ, 1 ಮೀಟರ್ ದೂರ ಇಡಬೇಕು: ಪ್ರೀತಂಗೌಡ

    ಇಂದು ವಿದ್ಯಾರ್ಥಿಗಳು ಶಾಸಕ ಶ್ರೀನಿವಾಸಮೂರ್ತಿ ಬಳಿ ತಮ್ಮ ನೋವನ್ನು ಮನವಿ ಮೂಲಕ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ನೆಲಮಂಗಲದಲ್ಲಿ ಶ್ರೀನಿವಾಸ್ ಮೂರ್ತಿ ಮಾತನಾಡಿ, ಕೂಡಲೇ ಈ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ದಾರೆ.