Tag: Sonal Monteiro

  • ಬಳೆ ಶಾಸ್ತ್ರ ಮಾಡಿಕೊಂಡ ಸೋನಲ್ ಮೊಂಥೆರೋ

    ಬಳೆ ಶಾಸ್ತ್ರ ಮಾಡಿಕೊಂಡ ಸೋನಲ್ ಮೊಂಥೆರೋ

    ತ್ತೀಚೆಗಷ್ಟೇ ಮದುವೆಯಾದ ನವವಧು ಸೋನಲ್ (Sonal Monterio) ಈಗ ಇನ್ಸ್ಟಾಗ್ರಾಂ ನಯಾ ಫೋಟೋದೊಂದಿಗೆ ಕಾಣಿಸ್ಕೊಂಡಿದ್ದಾರೆ. ಹಸಿರು ಸೀರೆಯುಟ್ಟು ಕೈತುಂಬಾ ಹಸಿರು ಬಳೆ ಧರಿಸಿ ಪೋಸ್ ಕೊಟ್ಟಿದ್ದಾರೆ. ಇದು ಬಳೆಶಾಸ್ತ್ರದ ಫೋಟೋಗಳಾಗಿದ್ದು ಕೈಗೆ ಬಳೆ ತೊಡಿಸಿಕೊಳ್ಳವ ಫೋಟೋಗಳನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಧ್ರುವ ಸರ್ಜಾ ಪುತ್ರ

    ಈ ಫೋಟೋ ನೋಡಿದರೆ ಮದುವೆ ನಡೆದು ತಿಂಗಳೇ ಉರುಳಿದೆ, ಮತ್ಯಾಕೆ ಸೋನಲ್ ಬಳೆ ಶಾಸ್ತ್ರ ಮಾಡಿಕೊಳ್ಳುತ್ತಿದ್ದಾರೆ ಎಂದು ಆಶ್ಚರ್ಯವಾಗೋದೇನು ನಿಜ. ಆದರೆ ಇದು ಹಳೆಯ ಫೋಟೋಗಳಾಗಿದ್ದು ಈಗ ಒಂದೊಂದಾಗೇ ನೆನಪು ತೋಡಿಕೊಳ್ಳುತ್ತಿದ್ದಾರೆ. ನಟಿ ಸೋನಲ್ ಮೊಂಥೆರೋ ಹಾಗೂ ನಿರ್ದೇಶಕ ತರುಣ್ ಸುಧೀರ್ ಕಳೆದ ಆಗಸ್ಟ್ ತಿಂಗಳಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಆ ವೇಳೆ ಮದುವೆ ಹೆಣ್ಣಿಗೆ ನಡೆದ ಬಳೆ ತೊಡಿಸುವ ಸಂಪ್ರದಾಯದ ಮುದ್ದಾದ ಫೋಟೋಗಳನ್ನ ಈಗ ಸೋನಲ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಸೋನಲ್ ಮತ್ತು ತರುಣ್ (Tharun Sudhir) ಮದುವೆ ಸಮಾರಂಭ ಸಂಪ್ರದಾಯಗಳು ಆಗಸ್ಟ್‌ನಲ್ಲಿ ಭರ್ತಿ ಒಂದು ವಾರ ನಡೆದಿತ್ತು. ಬೆಂಗಳೂರಿನ ಹೊರವಲಯದ ಛತ್ರದಲ್ಲಿ ಅದ್ದೂರಿಯಾಗಿ ಮದುವೆಯಾದ್ದರು ಸೋನಲ್ ಮತ್ತು ತರುಣ್. ಬಳಿಕ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಚರ್ಚ್‌ನಲ್ಲಿ ಮದುವೆಯಾಗಿದ್ದರು. ಅಲ್ಲಿ ಆರತಕ್ಷತೆಯನ್ನೂ ಏರ್ಪಡಿಸಿದ್ದರು. ಇದೀಗ ಮದುವೆಯ ಸಂಭ್ರಮಗಳ ಒಂದೊಂದೇ ನೆನಪುಗಳನ್ನ ಅಭಿಮಾನಿಗಳ ಜೊತೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ ಸೋನಲ್. ಕೆಲವೇ ದಿನದ ಹಿಂದೆ ಮೆಹಂದಿ ಕಾರ್ಯಕ್ರಮದ ಫೋಟೋ ಪೋಸ್ಟ್ ಮಾಡಿದ್ದ ಸೋನಲ್ ಈಗ ಬಳೆ ಶಾಸ್ತ್ರದ ಫೋಟೋ ಹಂಚಿಕೊಂಡಿದ್ದಾರೆ.

  • ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದ್ವೆಯಾದ ತರುಣ್‌, ಸೋನಲ್‌

    ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದ್ವೆಯಾದ ತರುಣ್‌, ಸೋನಲ್‌

    ಮಂಗಳೂರು: ಖ್ಯಾತ ನಿರ್ದೇಶಕ ತರುಣ್ ಸುಧೀರ್ (Tharun Sudhir), ನಟಿ ಸೋನಲ್ ಮೊಂಥೆರೋ (Sonal Monteiro) ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ (Christian Tradition) ಮದುವೆಯಾಗಿದ್ದಾರೆ.

    ಆಗಸ್ಟ್​ 11ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಅದ್ಧೂರಿಯಾಗಿ ಹಿಂದೂ ಸಂಪ್ರದಾಯದಂತೆ ಕುಟುಂಬಸ್ಥರು, ಗುರು, ಹಿರಿಯರ ಸಮ್ಮುಖದಲ್ಲಿ ಈ ನವ ಜೋಡಿ ಸಪ್ತಪದಿ ತುಳಿದಿತ್ತು. ಬೆನ್ನಲ್ಲೇ ಈ ಬ್ಯೂಟಿಫುಲ್ ಜೋಡಿ ಮತ್ತೊಮ್ಮೆ ವಿವಾಹವಾಗಿದೆ. ಇದನ್ನೂ ಓದಿ: ಮೂಡುಗಲ್ಲು ಕೇಶವನಾಥೇಶ್ವರ ದೇಗುಲಕ್ಕೆ ಭೇಟಿ ನೀಡಿದ ಜೂನಿಯರ್‌ ಎನ್‌ಟಿಆರ್‌

    ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್ ಸುಧೀರ್ ಹಾಗೂ ಸೋನಲ್‌ ಉಂಗುರ ಬದಲಾಯಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಸೋನಲ್‌ ಅವರು ಬಿಳಿ ಬಣ್ಣದ ಲಾಂಗ್​ ಗೌನ್​ನಲ್ಲಿ ಮಿಂಚಿದ್ದರೆ, ತರುಣ್ ಸುಧೀರ್ ವೈಟ್​ ಸೂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸೆಲೆಬ್ರೆಷನ್​ನಲ್ಲಿ ನವವಧು ಸೋನಾಲ್ ಗೋಲ್ಡ್​ ಕಲರ್ ಡ್ರೆಸ್ ಧರಿಸಿದ್ದರು.

    ಚರ್ಚ್​ ವೆಡ್ಡಿಂಗ್ ಬಳಿಕ ಸ್ಟಾರ್​ ಜೋಡಿ ಮಂಗಳೂರಿನಲ್ಲಿ ಅದ್ಧೂರಿ ರೆಸೆಪ್ಷನ್‌ ಸಹ ಮಾಡಿಕೊಂಡಿದೆ. ಈ ಅದ್ಧೂರಿ ರೆಸೆಪ್ಷನ್​ನ​ಲ್ಲಿಯೂ ತರುಣ್ ಸುಧೀರ್ ಬ್ರೌನ್ ಸೂಟ್ ಹಾಗೂ ನಟಿ ಸೋನಲ್‌ ಸೀರೆಯಲ್ಲಿ ಮಿಂಚಿದ್ದಾರೆ.

     

  • Video | Tharun Sonal Wedding – ತಾಳಿ ಕಟ್ಟುವ ಶುಭ ವೇಳೆ – ದೃಶ್ಯ ಕಣ್ತುಂಬಿಕೊಳ್ಳಿ!

    Video | Tharun Sonal Wedding – ತಾಳಿ ಕಟ್ಟುವ ಶುಭ ವೇಳೆ – ದೃಶ್ಯ ಕಣ್ತುಂಬಿಕೊಳ್ಳಿ!

    ಸಿನಿ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮದುವೆ ಇಂದು (ಭಾನುವಾರ) ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಪೂರ್ಣಿಮಾ ಪಾಲೇಸ್‍ ನಲ್ಲಿ ಅದ್ಧೂರಿಯಾಗಿ ನೆರವೇರಿತು. ಚಿತ್ರರಂಗದ ಅನೇಕ ಗಣ್ಯರು ಮತ್ತು ಕುಟುಂಬದ ಸಮ್ಮುಖದಲ್ಲಿ ಸಕಲ ಮಂಗಳ ವಾದ್ಯಗಳೊಂದಿಗೆ ನವಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಎರಡೂ ಕೈಗಳಲ್ಲಿ ತಾಳಿ ಹಿಡಿದುಕೊಂಡಿದ್ದ ತರುಣ್‌ ಸುಧೀರ್‌ ಒಂದು ಸುತ್ತು ಸುತ್ತುತ್ತಾ ಗಣ್ಯರಿಗೆ ತಾಳಿ ಪ್ರದರ್ಶಿಸಿದರು. ಬಳಿಕ ಸೋನಲ್‌ ಕೊರಳಿಗೆ ಕಟ್ಟಿದರು. ಈ ಶುಭವೇಳೆ ನಟಿ ಸೋನಲ್ ಕಣ್ಣಲ್ಲಿ ನೀರು ತುಂಬಿಕೊಂಟು ಭಾವುಕರಾದರು.  ಈ ಕುರಿತ ಅದ್ಭುತ ವೀಡಿಯೋ ಇಲ್ಲಿದೆ…

  • Tharun Sonal Wedding: ತಾರಾ ಜೋಡಿ ಮದುವೆ – ತಾಳಿ ಕಟ್ಟೋ ವೇಳೆ ಭಾವುಕರಾದ ಸೋನಲ್‌

    Tharun Sonal Wedding: ತಾರಾ ಜೋಡಿ ಮದುವೆ – ತಾಳಿ ಕಟ್ಟೋ ವೇಳೆ ಭಾವುಕರಾದ ಸೋನಲ್‌

    ಕಾಟೇರ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ (Tharun Sudheer) ಮತ್ತು ನಟಿ ಸೋನಲ್ (Sonal Monteiro) ಮದುವೆ ಇಂದು (ಭಾನುವಾರ) ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಪೂರ್ಣಿಮಾ ಪಾಲೇಸ್‍ ನಲ್ಲಿ ನಡೆಯಿತು.

    ಚಿತ್ರರಂಗದ ಅನೇಕ ಗಣ್ಯರು ಮತ್ತು ಕುಟುಂಬದ ಸಮ್ಮುಖದಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿತು. ತಾಳಿ ಕಟ್ಟೋ ವೇಳೆ ನಟಿ ಸೋನಲ್ ಭಾವುಕರಾಗಿದ್ದರು. ಇದನ್ನೂ ಓದಿ: ತರುಣ್‌-ಸೋನಲ್‌ ಆರತಕ್ಷತೆ; ನವಜೋಡಿಗೆ ಸ್ಯಾಂಡಲ್‌ವುಡ್‌ ತಾರೆಯರು, ಗಣ್ಯರಿಂದ ವಿಶ್‌

    ತರುಣ್ -ಸೋನಲ್ ಮದುವೆಗೆ ಅದ್ದೂರಿ ಧಾರೆ ಮಂಟಪ ಸೆಟ್ ಹಾಕಲಾಗಿದೆ. ದಕ್ಷಿಣ ಭಾರತ ಶೈಲಿಯಲ್ಲಿ ಕಲ್ಯಾಣ ಮಂಟಪದ ಅಲಂಕಾರ ಮಾಡಲಾಗಿದೆ. ಪ್ರವೇಶ ದ್ವಾರದಲ್ಲಿ ಮಹಾದ್ವಾರದ ಮಾದರಿ ಅಲಂಕಾರ ಮಾಡಲಾಗಿತ್ತು. ಇದನ್ನೂ ಓದಿ: ಕಾಟೇರ ಸಿನೆಮಾ ಹಾಡಿಗೆ Tharun-Sonal ಗ್ರ್ಯಾಂಡ್ ಎಂಟ್ರಿ

    ವಿಷ್ಣುವಿನ ದಶಾವತಾರಗಳ ಮಧ್ಯೆ ಕಮಲ ಮಂಟಪದ ಸಿದ್ದತೆ ಮಾಡಿದ್ದು ವಿಶೇಷವಾಗಿತ್ತು. ನಟ ಶರಣ್‍, ನೆನಪಿರಲಿ ಪ್ರೇಮ್‍, ಶ್ರುತಿ, ಮಾಲಾಶ್ರೀ, ಸುಧಾರಾಣಿ, ಅವಿನಾಶ, ನಿಶ್ವಿಕಾ ನಾಯ್ಡು ಸೇರಿದಂತೆ ಹಲವರು ಗಣ್ಯರು ಮದುವೆಗೆ ಸಾಕ್ಷಿಯಾದರು. ನಿನ್ನೆ ಸಂಜೆ ನಡೆದ ತರುಣ್ ಮತ್ತು ಸೋನಾಲ್ ಆರತಕ್ಷತೆಯಲ್ಲೂ ಚಿತ್ರರಂಗ, ರಾಜಕೀಯ ಗಣ್ಯರು ಭಾಗಿಯಾಗಿದ್ದರು. ನೂತನ ಜೋಡಿಗೆ ಶುಭ ಹಾರೈಸಿದರು.

  • ತರುಣ್‌-ಸೋನಲ್‌ ಆರತಕ್ಷತೆ; ನವಜೋಡಿಗೆ ಸ್ಯಾಂಡಲ್‌ವುಡ್‌ ತಾರೆಯರು, ಗಣ್ಯರಿಂದ ವಿಶ್‌

    ತರುಣ್‌-ಸೋನಲ್‌ ಆರತಕ್ಷತೆ; ನವಜೋಡಿಗೆ ಸ್ಯಾಂಡಲ್‌ವುಡ್‌ ತಾರೆಯರು, ಗಣ್ಯರಿಂದ ವಿಶ್‌

    ಸ್ಯಾಂಡಲ್‌ವುಡ್‌ ಮತ್ತೊಂದು ಮದುವೆ ಸಂಭ್ರಮ ಮನೆ ಮಾಡಿದೆ. ತಾರಾ ಜೋಡಿಯಾದ ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ನಟಿ ಸೋನಲ್‌ ಮಂಥೆರೋ (Tharun-Sonal Wedding) ಆರತಕ್ಷತೆ ನಡೆಯುತ್ತಿದೆ. ಸ್ಯಾಂಡಲ್‌ವುಡ್‌ನ ತಾರಾ ಬಳಗದ ದಂಡೇ ಆಗಮಿಸುತ್ತಿದ್ದು, ನವಜೋಡಿಗೆ ವಿಶ್‌ ಮಾಡಿದೆ.

    ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ತರುಣ್‌-ಸೋನಲ್‌ ಆರತಕ್ಷತೆ ನಡೆಯುತ್ತಿದೆ. ಸ್ಯಾಂಡಲ್‌ವುಡ್‌ನ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಸೇರಿ ತಾರಾಗಣವೇ ಆಗಮಿಸಿ ಜೋಡಿಗೆ ಶುಭಹಾರೈಸಿದೆ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಡಿಸಿಎಂ ಡಿ.ಕೆ.ಶಿವಕುಮಾರ್‌ ಕೂಡ ಆಗಮಿಸಿ ನವಜೋಡಿಗೆ ಶುಭಹಾರೈಸಿದರು. ಇದನ್ನೂ ಓದಿ: ಕಾಟೇರ ಸಿನೆಮಾ ಹಾಡಿಗೆ Tharun-Sonal ಗ್ರ್ಯಾಂಡ್ ಎಂಟ್ರಿ

    ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಸಂತೋಶ್ ಆನಂದ್ ರಾಮ್, ವಿಜಯ್‌ ರಾಘವೇಂದ್ರ, ನೆನಪಿರಲಿ ಪ್ರೇಮ್‌, ಸಿಂಗರ್‌ ಅರ್ಚನಾ ಉಡುಪ, ನಟಿಯರಾದ, ರಾಗಿಣಿ ಅಮೃತಾ ಅಯ್ಯಂಗಾರ್ ಹಾಗೂ ನಿಶ್ವಿಕಾ ನಾಯ್ಡು, ಅಮೂಲ್ಯ ಮೊದಲಾದವರು ರಿಷಪ್ಷನ್‌ಗೆ ಆಗಮಿಸಿ ತರುಣ್‌ ಮತ್ತು ಸೋನಲ್‌ಗೆ ವಿಶ್‌ ಮಾಡಿದರು.

    ನಟಿ ಶೃತಿ ಕುಟುಂಬ, ನಟಿ ಮಾಲಾಶ್ರೀ ಮತ್ತು ಆರಾಧನಾ, ನಟಿ ಹರ್ಷಿಕಾ ಪೂಣಚ್ಚಾ, ಕಾರುಣ್ಯ ರಾಮ್, ನಟರಾದ ಉಪೇಂದ್ರ, ಡಾಲಿ ಧನಂಜಯ್‌, ಸೃಜನ್‌ ಲೋಕೇಶ್‌, ವಿ.ರವಿಚಂದ್ರನ್‌, ಜೈಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ದಂಪತಿ ಬಂದು ತಾರಾ ಜೋಡಿಗೆ ಶುಭಹಾರೈಸಿದರು. ಇದನ್ನೂ ಓದಿ: Tharun Sonal Wedding Reception: ಅವಾರ್ಡ್‌ ಫಂಕ್ಷನ್‌ ಥೀಮ್‌ನಲ್ಲಿದೆ ವಿವಾಹ ಆರತಕ್ಷತೆ ವೇದಿಕೆ

    ನಟಿ ಹಾಗೂ ಮಾಜಿ ಸಂಸದೆ ಸುಮಲತಾ, ಪುತ್ರ ಅಭಿಷೇಕ್‌ ಅಂಬರೀಶ್‌ ಹಾಗೂ ಅನುರಾಧಾ ಭಟ್, ಅನುಪಮ ಭಟ್ ಸಹೋದರಿಯರು ಆರತಕ್ಷತೆಗೆ ಆಗಮಿಸಿದ್ದರು. ನಟ ದುನಿಯಾ ವಿಜಯ್‌, ನಿರ್ದೇಶಕ ಯೋಗರಾಜ್‌ ಭಟ್‌, ಟಾಕ್ಸಿಕ್‌ ಸಿನಿಮಾ ನಿರ್ಮಾಪಕ ವೆಂಕಟ್‌ ನಾರಾಯಣ್‌, ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದಂಪತಿ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಸುಮಾರು 10 ಸಾವಿರ ಜನರು ಆರತಕ್ಷತೆ ಹಾಗೂ ಮದುವೆಗೆ ಆಗಮಿಸುವ ನಿರೀಕ್ಷೆಯಿದೆ.

  • Tharun Sonal Wedding: ಸೋನಲ್‌ಗೆ ಹಲಸಿನ ಹಲ್ವಾ, ತರುಣ್‌ಗೆ ಸ್ಪೈಸಿ ಐಟಂ – ಆರತಕ್ಷತೆ ಮೆನುವಿನಲ್ಲಿ ಏನಿದೆ ಸ್ಪೆಷಲ್..?

    Tharun Sonal Wedding: ಸೋನಲ್‌ಗೆ ಹಲಸಿನ ಹಲ್ವಾ, ತರುಣ್‌ಗೆ ಸ್ಪೈಸಿ ಐಟಂ – ಆರತಕ್ಷತೆ ಮೆನುವಿನಲ್ಲಿ ಏನಿದೆ ಸ್ಪೆಷಲ್..?

    ಸ್ಯಾಂಡಲ್‌ವುಡ್‌ ನಿರ್ದೇಶಕ ತರುಣ್‌ ಸುಧೀರ್‌ – ಸೋನಲ್‌ ಮಂಥೆರೋ ಆರತಕ್ಷತೆ (Tharun Sudhir Sonal Monteiro Wedding Reception) ಬೆಂಗಳೂರಿನಲ್ಲಿ ನಡೆಯತ್ತಿದೆ. ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್‌ ಹೋಟೆಲ್‌ನಲ್ಲಿ ಆರತಕ್ಷತೆ ನಡೆಯುತ್ತಿದ್ದು, ರಿಸೆಪ್ಷನ್‌ಗೆ ಬಂದವರಿಗೆ ಅದ್ಧೂರಿ ಭೋಜನ ಏರ್ಪಡಿಸಲಾಗಿದೆ.

    ಮದುವೆ ಹಾಗೂ ಆರತಕ್ಷತೆಗೆ 10 ಸಾವಿರಕ್ಕೂ ಹೆಚ್ಚು ಮಂದಿ‌ ಆಗಮಿಸುವ ನಿರೀಕ್ಷೆಯಿದ್ದು, ಬಾಣಸಿಗರು 4 ಕಿಚನ್‌ಗಳಲ್ಲಿ ಅಡುಗೆ ಸಿದ್ಧ ಮಾಡುತ್ತಿದ್ದಾರೆ.

    ರಿಸೆಪ್ಷನ್ ಸ್ಪೆಷಲ್ ಮೆನು ಏನೇನು?
    20ಕ್ಕೂ ಅಧಿಕ ಬಗೆಯ ಸ್ವೀಟ್‌ಗಳು, ತರಹೇವಾರಿ ದೋಸೆಗಳು, ರೊಟ್ಟಿಗಳು, ಶ್ಯಾವಿಗೆ ಸೇರಿದಂತೆ ವಿವಿಧ ಖಾದ್ಯಗಳು ಸಿದ್ಧವಾಗಿದೆ. ಮಂಗಳೂರು- ಉತ್ತರ ಕರ್ನಾಟಕ ಮಿಕ್ಸ್ ಸ್ಟೈಲ್ ಫುಡ್, ಸೌತ್ ಇಂಡಿಯಾ ಹಾಗೂ ನಾರ್ತ್ ಇಂಡಿಯಾ ಫುಡ್ ರಿಸೆಪ್ಷನ್ ಊಟದ ಮೆನುವಿನಲ್ಲಿದೆ. (Tharun Sonal Wedding Recepton Menu)

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ತರುಣ್ ಮದುವೆ ರಿಸೆಪ್ಷನ್ ಕ್ಯಾಟರಿಂಗ್ ಮುಖ್ಯಸ್ಥ ಸುಭಾಷ್, ನಾವು ಈ ಅಡುಗೆ ವಹಿಸಿಕೊಂಡಿದ್ದಕ್ಕೆ ಸಂತೋಷವಿದೆ. ತರುಣ್ ಸರ್ ಹಾಗೂ ಸೋನಲ್ ಮೇಡಂ ಈ ಹಿಂದೆ ನಮ್ಮ ಕ್ಯಾಟರಿಂಗ್ ಅಡುಗೆ ರುಚಿ ನೋಡಿದ್ದಾರೆ. ಸೋನಲ್ ಮೇಡಮ್‌ಗಾಗಿಯೇ ಹಲಸಿನ ಹಲ್ವಾ, ತರುಣ್ ಗೋಸ್ಕರ ಒಂದು ಸ್ಪೆಷಲ್ ಸ್ಪೈಸಿ ಐಟಂ ಮಾಡ್ತಿದೀವಿ. ಎಷ್ಟು ಜನ ಬಂದ್ರೂ ಮ್ಯಾನೇಜ್ ಮಾಡ್ತೀವಿ. ಯಾರಿಗೂ ಊಟ ಕಡಿಮೆ ಆಗಬಾರದು ಎಂಬ ಹಾಗೆ ಪ್ರಿಪೇರ್ ಮಾಡ್ತಿದ್ದೇವೆ ಎಂದರು.

    ಮಂಗಳೂರು – ಉತ್ತರ ಕರ್ನಾಟಕ ಮಿಕ್ಸ್ ಸ್ಟೈಲ್ ಆಹಾರ, ಸೌತ್‌ ಇಂಡಿಯಾ ಹಾಗೂ ನಾರ್ತ್ ಇಂಡಿಯಾ ಫುಡ್ ರಿಸೆಪ್ಷನ್ ಊಟದ ಮೆನುವಿನ ಸ್ಪೆಷಲ್‌ ಐಟಂಗಳು ಎಂದು ಸ್ಪೆಷಲ್‌ ಮೆನು ಬಗ್ಗೆ‌ ಸುಭಾಷ್ ವಿವರಿಸಿದ್ದಾರೆ.

  • Tharun Sonal Wedding: ತರುಣ್‌ ಲವ್‌ ಬಗ್ಗೆ ಹೇಳ್ಲಿಲ್ಲ, ಮದುವೆ ಮಾಡಿಸಿದ್ದು ಬಾಸ್‌ ದರ್ಶನ್‌ ಅಂದ್ರು ತರುಣ್‌ ತಾಯಿ

    Tharun Sonal Wedding: ತರುಣ್‌ ಲವ್‌ ಬಗ್ಗೆ ಹೇಳ್ಲಿಲ್ಲ, ಮದುವೆ ಮಾಡಿಸಿದ್ದು ಬಾಸ್‌ ದರ್ಶನ್‌ ಅಂದ್ರು ತರುಣ್‌ ತಾಯಿ

    ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ತಾರಾ ಜೋಡಿ ಮದುವೆ ಸಂಭ್ರಮದಲ್ಲಿದೆ. ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ನಟಿ ಸೋನಲ್‌ ಮಂಥೆರೋ ಆರತಕ್ಷತೆ (Tharun Sudhir Sonal Monteiro Wedding Reception) ಇಂದು ನಡೆಯುತ್ತಿದೆ. ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ ನವಜೋಡಿಯ ಆರತಕ್ಷತೆಗೆ ಸಿದ್ಧವಾಗಿದೆ.

    ಮಗನ ಮದುವೆ ಸಂಭ್ರಮದ ಬಗ್ಗೆ ತರುಣ್‌ ಸುಧೀರ್‌ ತಾಯಿ ಮಾಲತಿ ಸುಧೀರ್‌ ‘ಪಬ್ಲಿಕ್‌ ಟಿವಿ’ ಜೊತೆ ಮಾತನಾಡಿದ್ದಾರೆ. ಮಗನ ಮದುವೆಯನ್ನ ಬಾಸ್ ಮಾಡಿಸಿದ್ದು. ಎಲ್ಲವೂ ಅವರದ್ದೇ ತಯಾರಿ ಆಗಿತ್ತು ಎಂದು ಮದುವೆಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕಾರಣ ಎಂದು ಹೇಳಿದ ಅವರು, ಸೊಸೆ ಬಗ್ಗೆ ಹೆಚ್ಚು ಗೊತ್ತಿಲ್ಲ. ಮುಂದೆ ಚೆನ್ನಾಗಿ ನೋಡಿಕೊಳ್ತೀನಿ. ನಮಗೆ ಹೆಣ್ಣುಮಗಳಿಲ್ಲ. ಅವಳೇ ಮಗಳ ಥರ ಎಂದರು. ಇದನ್ನೂ ಓದಿ: ಸೋನಲ್‌ ಜೊತೆ ತರುಣ್‌ ರೊಮ್ಯಾಂಟಿಕ್‌ ಫೋಟೋಶೂಟ್‌- ಮದುವೆ ಬಗ್ಗೆ ಕೊಟ್ರು ಗುಡ್‌ ನ್ಯೂಸ್

    ನನ್ನ ಮಗ ಮದುವೆಯಾಗ್ತಿರೋದು ತುಂಬಾ ಖುಷಿಯಾಗ್ತಿದೆ. ಆದರೆ ಈಗ ಯಜಮಾನ್ರಿಲ್ಲ ಅನ್ನೋದೇ ಬೇಸರ. ಅವರು ಅಲ್ಲಿಂದಲೇ ನೋಡಿ ಖುಷಿ ಪಟ್ಟಿರ್ತಾರೆ ಎಂದು ಮಾಲತಿ ಸುಧೀರ್‌ ಅವರು ಹೇಳಿದ್ದಾರೆ. ಮಗ ಡೈರೆಕ್ಟರ್ ಅಲ್ವೇ.. ಹಾಗಾಗಿ ಕ್ರಿಯೇಟಿವ್ ಆಗಿ ಹೀಗೆ ಪ್ಲ್ಯಾನ್ ಮಾಡಿದಾನೆ ಎಂದು ಸಂಭ್ರಮಿಸಿದ್ದಾರೆ.

    ತರುಣ್‌ ಫ್ರೆಂಡ್‌ ಲ್ಯಾಪ್‌ಟಾಪಲ್ಲಿ ಫೋಟೋ ತೋರಿಸ್ದ!: ತರುಣ್ ಬಂದು ನನಗೆ ಸೋನಲ್‌ ಜೊತೆಗಿನ ಪ್ರೀತಿ ಬಗ್ಗೆ ಹೇಳಿಲ್ಲ. ಅವನ ಸ್ನೇಹಿತ ಬಂದು ಲ್ಯಾಪ್‌ಟಾಪ್‌ನಲ್ಲಿ ತೋರಿಸ್ದ. ನೋಡಿ ಅಮ್ಮ ಇವರೇ ತರುಣ್ ಮದುವೆ ಆಗ್ತಿರೋ ಹುಡುಗಿ ಅಂದ. ಹೌದಾ, ಕೊನೆಗೂ ಮದುವೆಗೆ ಒಪ್ಪಿಕೊಂಡ ಅಂತ ನನಗೆ ಖುಷಿ ಆಯ್ತು ಎಂದು ಮಾಲತಿ ಹೇಳಿದರು. ಇದನ್ನೂ ಓದಿ: ಗುಡ್‌ನ್ಯೂಸ್‌ ಕೊಟ್ಟ ʻಕಾಟೇರʼ ನಿದೇರ್ಶಕ; ತರುಣ್‌ ಸುಧೀರ್‌ – ಸೋನಲ್‌ ಮದುವೆ ಡೇಟ್‌ ಫಿಕ್ಸ್‌

  • ತರುಣ್, ಸೋನಲ್ ಮದುವೆ ಆಮಂತ್ರಣ ಪತ್ರಿಕೆ ಹೇಗಿದೆ ಗೊತ್ತಾ?

    ತರುಣ್, ಸೋನಲ್ ಮದುವೆ ಆಮಂತ್ರಣ ಪತ್ರಿಕೆ ಹೇಗಿದೆ ಗೊತ್ತಾ?

    ಚಂದನವನದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ತರುಣ್ ಸುಧೀರ್ (Tharun Sudhir) ಮತ್ತು ಸೋನಲ್ (Sonal) ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ. ಕಲರ್‌ಫುಲ್ ಫೋಟೋಶೂಟ್ ಮೂಲಕ ಮದುವೆ ಡೇಟ್ ಅನೌನ್ಸ್ ಮಾಡಿದ ಬೆನ್ನಲ್ಲೇ ಈಗ ಆಮಂತ್ರಣ ಪತ್ರಿಕೆ ಕೂಡ ಸದ್ದು ಮಾಡುತ್ತಿದೆ. ಇದನ್ನೂ ಓದಿ:ನಟನೆ ಚೆನ್ನಾಗಿದೆ ಅಂತಾರೆ ಆದರೆ ಸಿನಿಮಾ ಆಫರ್ ಕೊಡಲ್ಲ: ನೇಹಾ ಧೂಪಿಯಾ ಬೇಸರ

    ತರುಣ್ ಮತ್ತು ಸೋನಲ್ ಮಂಥೆರೋ ಮದುವೆ ಕಾರ್ಡ್ ಆಕರ್ಷಕವಾಗಿದೆ. ಮದುವೆ ಪತ್ರಿಕೆ ಮೇಲೆ ಇಬ್ಬರ ರೊಮ್ಯಾಂಟಿಕ್ ಫೋಟೋ ಹಾಕಿಸಿದ್ದು, ಒಳಗೆ ಮದುವೆ ಮುಹೂರ್ತ ಸಮಾರಂಭ ಕುರಿತು ಬರೆಯಲಾಗಿದೆ.

    ತರುಣ್ ಸುಧೀರ್ ಮತ್ತು ಸೋನಲ್ ಜೋಡಿ ಇದೇ ಆಗಸ್ಟ್ 10, 11ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆಗಸ್ಟ್ 10ರಂದು ಸಂಜೆ 6:30 ನಂತರ ಆರತಕ್ಷತೆ ಕಾರ್ಯಕ್ರಮ, ಆ.11ರಂದು ಬೆಳಗ್ಗೆ 10:50 ರಿಂದ 11:35ರ ಶುಭ ಮುಹೂರ್ತದಲ್ಲಿ ಮದುವೆ ನಡೆಯಲಿದೆ. ಹಿಂದೂ ಸಂಪ್ರದಾಯದಂತೆ ಮದುವೆ ಜರುಗಲಿದೆ.

    ಈ ಎರಡು ದಿನದ ಸಮಾರಂಭವು ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಆರ್.ವಿ ಕಾಲೇಜ್ ಬಳಿ ಇರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ನಡೆಯಲಿದೆ. ಸದ್ಯ ಸ್ಯಾಂಡಲ್‌ವುಡ್ ನಟ, ನಟಿಯರಿಗೆ ಮದುವೆ ಕಾರ್ಡ್ ಕೊಡುವುದರಲ್ಲಿ ತರುಣ್ ಮತ್ತು ಸೋನಲ್ ಬ್ಯುಸಿಯಾಗಿದ್ದಾರೆ.


    ಇನ್ನೂ ದರ್ಶನ್ ನಟನೆಯ ರಾಬರ್ಟ್ ಸಿನಿಮಾಗೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ವಿನೋದ್ ಪ್ರಭಾಕರ್‌ಗೆ ಜೋಡಿಯಾಗಿ ಸೋನಲ್ ನಟಿಸಿದ್ದರು. ಈ ಪರಿಚಯವೇ ಈಗ ಮದುವೆಗೆ ಮುನ್ನುಡಿ ಬರೆದಿದೆ.

  • ‘ರಾಬರ್ಟ್’ ನಿರ್ದೇಶಕ ತರುಣ್ ಜೊತೆ ಸೋನಲ್ ಮದುವೆ

    ‘ರಾಬರ್ಟ್’ ನಿರ್ದೇಶಕ ತರುಣ್ ಜೊತೆ ಸೋನಲ್ ಮದುವೆ

    ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಮತ್ತೊಂದು ಜೋಡಿ ಹಸೆಮಣೆ ಏರೋದಕ್ಕೆ ಸಜ್ಜಾಗಿದೆ. ‘ರಾಬರ್ಟ್’ ನಿರ್ದೇಶಕ ತರುಣ್ ಸುಧೀರ್ (Tharun Sudhir) ಜೊತೆ ಸೋನಲ್ (Sonal) ಮದುವೆಗೆ ರೆಡಿಯಾಗಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಕುಟುಂಬಕ್ಕೆ ಧನ ಸಹಾಯ ಮಾಡಿದ ಧ್ರುವ ಸರ್ಜಾ ಫ್ಯಾನ್ಸ್

    ಖಳನಟ ಸುಧೀರ್ ಪುತ್ರ ತರುಣ್ ಸುಧೀರ್ ಚಿತ್ರರಂಗದ ಸಕ್ಸಸ್‌ಫುಲ್ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಸಿನಿಮಾ ಬಿಟ್ಟು ವೈಯಕ್ತಿಕ ಬದುಕಿನ ವಿಚಾರವಾಗಿ ಸುದ್ದಿಯಾಗ್ತಿದ್ದಾರೆ. ಸೋನಲ್‌ ಜೊತೆಗಿನ ತರುಣ್‌ ಮದುವೆ ಮ್ಯಾಟರ್. ಈ ಹಿಂದೆ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರ ನಿರ್ದೇಶನ ಮಾಡುವಾಗ ಸೋನಲ್ ಮತ್ತು ತರುಣ್ ಪರಿಚಯವಾಗಿದೆ. ಈ ಪರಿಚಯವೇ ಈಗ ಮದುವೆ ಮಾತುಕತೆಗೆ ಮುನ್ನುಡಿ ಬರೆದಿದೆ. ಈ ಮದುವೆ (Wedding) ಬಗ್ಗೆ ಬಲ್ಲ ಮೂಲಗಳಿಂದ ವಲಯದಿಂದ ತಿಳಿದು ಬಂದಿದೆ.

    ಎರಡು ಕುಟುಂಬದ ಸಮ್ಮತಿಯ ಮೇರೆಗೆ ಈಗ ತರುಣ್ ಮತ್ತು ಸೋನಲ್ ಮದುವೆಗೆ ರೆಡಿಯಾಗಿದ್ದಾರೆ. ಆಗಸ್ಟ್‌ಗೆ ಮದುವೆ ಡೇಟ್ ಕೂಡ ಫಿಕ್ಸ್ ಆಗಿತ್ತು. ಕಾರಣಾಂತರಗಳಿಂದ ಮದುವೆ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ. ಹರಿದಾಡುತ್ತಿರುವ ಸುದ್ದಿಗೆ ಸ್ಪಷ್ಟನೆ ಕೊಟ್ಟು ಶೀಘ್ರದಲ್ಲಿ ಮದುವೆ ಬಗ್ಗೆ ಅಧಿಕೃತ ಘೋಷಣೆ ಮಾಡ್ತಾರಾ? ಕಾದುನೋಡಬೇಕಿದೆ.

    ಅಂದಹಾಗೆ, ಚೌಕ, ರಾಬರ್ಟ್, ಕಾಟೇರ ಸಿನಿಮಾದ ಸಕ್ಸಸ್ ನಂತರ ತರುಣ್ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. ಇದರ ನಡುವೆ ತರುಣ್ ಶೋವೊಂದರ ಜಡ್ಜ್ ಆಗಿದ್ದಾರೆ. ಎಂಎಲ್‌ಎ, ಮದುವೆ ದಿಬ್ಬಣ, ರಾಬರ್ಟ್, ಗರಡಿ, ಶುಗರ್ ಫ್ಯಾಕ್ಟರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸೋನಲ್ ನಟಿಸಿದ್ದಾರೆ.

  • ಝೈದ್ ಖಾನ್ ಜೊತೆ `ಬನಾರಸ್’ ವೀಕ್ಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

    ಝೈದ್ ಖಾನ್ ಜೊತೆ `ಬನಾರಸ್’ ವೀಕ್ಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

    ಶಾಸಕ ಜಮೀರ್ ಅಹ್ಮದ್ ಖಾನ್ (Zameer Ahmed Khan) ಪುತ್ರ ಝೈದ್ ಖಾನ್ (Zaid Khan) ನಾಯಕ ನಟನಾಗಿ ನಟಿಸಿರೋ ಬನಾರಸ್ ಸಿನಿಮಾ ವೀಕ್ಷಣೆ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇತ್ತೀಚೆಗಷ್ಟೇ ತೆರೆಕಂಡ ಈ ಸಿನಿಮಾ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದ್ದು, ಬನಾರಸ್ (Banaras) ಹವಾ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಇದರಿಂದಾಗಿ ಸಹಜವಾಗಿಯೇ ಸಿನಿಮಾ (Cinema) ಭರ್ಜರಿ ಕಲೆಕ್ಷನ್ ಸಹ ಮಾಡುತ್ತಿದೆ. ಇದನ್ನೂ ಓದಿ: ಝೈದ್ ಖಾನ್ ನಟನೆಯ ‘ಬನಾರಸ್’ : ಬಾಕ್ಸಾಫೀಸ್ ನಲ್ಲೂ ಭರ್ಜರಿ ಭರಾಟೆ

    ಹೊಸ ನಟನೊಬ್ಬನ ಸಿನಿಮಾವೊಂದು ಮೊದಲ ದಿನದ ಪ್ರಮಾಣದಲ್ಲೇ ಭರ್ಜರಿ ಕಲೆಕ್ಷನ್ ಮಾಡಿದ್ದು, ಸಿನಿಮಾ ರಂಗದಲ್ಲಿ ಹೊಸ ಭರವಸೆ ಮೂಡಿಸಿದೆ. ಕೇವಲ ಬಾಕ್ಸ್ ಆಫೀಸಿನಲ್ಲಿ ದಾಖಲೆ ಮಾತ್ರವಲ್ಲ, ಝೈದ್ ನಟನೆಗೂ ನೋಡುಗರು ಫಿದಾ ಆಗಿದ್ದಾರೆ. ಕನ್ನಡಕ್ಕೆ ಮತ್ತೋರ್ವ ಹೊಸ ಪ್ರತಿಭೆ ಸಿಕ್ಕಿದ್ದಾನೆ ಎಂದು ಕೊಂಡಾಡಿದ್ದಾರೆ. ಝೈದ್ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಇತರ ಭಾಷೆಯ ನೋಡುಗರಿಗೂ ಇಷ್ಟವಾಗಿದ್ದಾರೆ. ಇದನ್ನೂ ಓದಿ: ಟಿಕೆಟ್ ದರ ಇಳಿಕೆ – `ಗಂಧದಗುಡಿ’ ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಬಂಪರ್ ಆಫರ್

    ಸಿನಿಮಾ ವೀಕ್ಷಣೆ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಸಹ ಬನಾರಸ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. `ಝೈದ್ ಖಾನ್ ಹಾಗೂ ಸೋನಲ್‌ ಮಾಂಟೇರೋ (Sonal Monteiro) ಅಭಿನಯದ ಬನಾರಸ್ ಚಿತ್ರ ವೀಕ್ಷಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದೇನೆ. ನೈಜತೆಯಿಂದ ಕೂಡಿದ ಪಾತ್ರಗಳು, ಸ್ವಾರಸ್ಯಕರವಾದ ಕತೆಯನ್ನು ಒಳಗೊಂಡಿರುವ ಸದಭಿರುಚಿಯ ಚಲನಚಿತ್ರವಿದು. ಇಂತಹ ಚಿತ್ರಗಳ ಸಂಖ್ಯೆ ನೂರಾಗಲಿ, ಚಿತ್ರರಂಗ ಬೆಳೆಯಲಿ, ಚಿತ್ರತಂಡ ಬೆಳೆಯಲಿ. ಎಲ್ಲರಿಗೂ ಒಳಿತಾಗಲಿ ಎಂದು ಶುಭ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]