Tag: son

  • Mysuru | ವಿದ್ಯುತ್ ತಂತಿ ತಗುಲಿ ತಾಯಿ-ಮಗ ದುರ್ಮರಣ

    Mysuru | ವಿದ್ಯುತ್ ತಂತಿ ತಗುಲಿ ತಾಯಿ-ಮಗ ದುರ್ಮರಣ

    ಮೈಸೂರು: ವಿದ್ಯುತ್ ತಂತಿ ತಗುಲಿ ತಾಯಿ-ಮಗ (Mother-Son) ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಣಸೂರು (Hunsur) ತಾಲೂಕು ಎಮ್ಮೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ನೀಲಮ್ಮ (39), ಹರೀಶ್ (19) ಮೃತ ದುರ್ದೈವಿಗಳು. ವಿದ್ಯುತ್ ಕಂಬದ ವಿದ್ಯುತ್ ತಂತಿಯಿಂದ ಅವಘಡ ಸಂಭವಿಸಿದೆ. ಜಮೀನಿಗೆ ಕೆಲಸಕ್ಕೆ ತೆರಳಿದ್ದ ವೇಳೆ ದುರಂತ ಸಂಭವಿಸಿದೆ. ಮೊದಲು ತಾಯಿ ನೀಲಮ್ಮಗೆ ವಿದ್ಯುತ್ ಶಾಕ್ (Electric Shock) ಹೊಡೆದಿದೆ. ಈ ವೇಳೆ ತಾಯಿಯನ್ನು ರಕ್ಷಣೆ ಮಾಡಲು ಹೋದ ಮಗ ಕೂಡ ಬಲಿಯಾಗಿದ್ದಾನೆ. ಇದನ್ನೂ ಓದಿ: ಕ್ರಿಮಿನಲ್‌ ಕೇಸ್‌ಗಳಲ್ಲಿ ಆರೋಪಪಟ್ಟಿ ರೂಪಿಸಲು ವಿಳಂಬ – ಸುಪ್ರೀಂ ಕಳವಳ

    ಹುಣಸೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ವಿದ್ಯುತ್ ಇಲಾಖೆ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಆರೋಪಿಸಲಾಗಿದ್ದು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನವೆಂಬರ್ 14ರ ಬಳಿಕ ಕಾಂಗ್ರೆಸ್ ಸರ್ಕಾರ ಪತನ: ಸುರೇಶ್ ಗೌಡ

  • ಬೆಂಗಳೂರು | ಆಸ್ತಿ ಆಸೆಗೆ ಸ್ನೇಹಿತನೊಂದಿಗೆ ಸೇರಿ ತಂದೆಯನ್ನೇ ಕೊಂದ ಪಾಪಿ ಮಗ

    ಬೆಂಗಳೂರು | ಆಸ್ತಿ ಆಸೆಗೆ ಸ್ನೇಹಿತನೊಂದಿಗೆ ಸೇರಿ ತಂದೆಯನ್ನೇ ಕೊಂದ ಪಾಪಿ ಮಗ

    ಬೆಂಗಳೂರು: ನಗರದ ಬಗಲಗುಂಟೆಯಲ್ಲಿ (Bagalagunte) ಆಸ್ತಿಯ ಆಸೆಗೆ ಸ್ನೇಹಿತನೊಂದಿಗೆ ಸೇರಿ ತಂದೆಯನ್ನೇ ಕೊಲೆ ಮಾಡಿದ ಮಗನ ಮರ್ಡರ್ ಮಿಸ್ಟ್ರಿ ಪೋಸ್ಟ್ ಮಾರ್ಟಂ ರಿಪೋರ್ಟ್‌ನಲ್ಲಿ ಬಯಲಾಗಿದೆ.

    ಮನೋಜ್‌ ಸ್ನೇಹಿತ ಪ್ರವೀಣ್‌

    ದಾಸರಹಳ್ಳಿಯ (Dasarahalli) ಕೆಂಪೇಗೌಡ ನಗರದ ಉದ್ಯಮಿ ಮಂಜಣ್ಣ ಮೃತ ದುರ್ದೈವಿ. ಮಗ ಮನೋಜ್ ಹಾಗೂ ಆತನ ಸ್ನೇಹಿತ ಕೊಲೆ ಮಾಡಿದ ಆರೋಪಿಗಳು. ಇದನ್ನೂ ಓದಿ: Nelamangala | ಕೆಲಸ ಮಾಡುವ ವೇಳೆ 2ನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು

    ಸೆ.2 ರಂದು ದಾಸರಹಳ್ಳಿಯ ಕೆಂಪೇಗೌಡ ನಗರದಲ್ಲಿ ಉದ್ಯಮಿ ಮಂಜಣ್ಣ ಮನೆಯಲ್ಲಿ ಮಲಗಿದ್ದ ಜಾಗದಲ್ಲೇ ಮೃತಪಟ್ಟಿದ್ದರು. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಅಂತಾ ಮನೆಯವರು ಕೂಡ ಅಂತ್ಯಕ್ರಿಯೆ ಮಾಡಿದ್ರು. ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಇದೊಂದು ಕೊಲೆ ಅನ್ನೋದು ಗೊತ್ತಾಗಿದೆ.

    ಮಂಜಣ್ಣ ಬಗಲುಗುಂಟೆಯಲ್ಲಿ ಒಳ್ಳೆಯ ಸ್ಥಿತಿವಂತರಾಗಿದ್ದರು. ಐದಾರು ಬಿಲ್ಡಿಂಗ್, ನಾಲ್ಕೈದು ಸೈಟ್, ಒಂದು ವುಡ್ ವರ್ಕ್ಸ್ ಫ್ಯಾಕ್ಟರಿ ಅನ್ನು ಹೊಂದಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ದೊಡ್ಡ ಮಗ ಮನೋಜ್ ಕೆಲಸ ಕಾರ್ಯ ಮಾಡದೆ ಸುತ್ತಾಡಿಕೊಂಡಿರುತ್ತಿದ್ದ. ಹೀಗಾಗಿ ತಂದೆ, ಮಗನಿಗೆ ಆಗಾಗ ಬುದ್ಧಿ ಹೇಳ್ತಿದ್ದರು. ಇದನ್ನೂ ಓದಿ: ತುಮಕೂರಲ್ಲಿ ಇಬ್ಬರು ಮಕ್ಕಳ ಜೊತೆ ತಾಯಿ ನೇಣುಬಿಗಿದುಕೊಂಡು ಆತ್ಮಹತ್ಯೆ ಕೇಸ್;‌ ಮಹಿಳೆಯ ಪತಿ, ಅತ್ತೆ ಬಂಧನ

    ಇದರಿಂದ ಮಗ ಮನೋಜ್, 5 ವರ್ಷದ ಹಿಂದೆಯೇ ಅಪ್ಪನನ್ನ ಕೊಂದು ಆಸ್ತಿ ಹೊಡೆಯೋ ಪ್ಲಾನ್ ಮಾಡಿದ್ದ. ಹೀಗಾಗಿ ಸ್ನೇಹಿತ ಪ್ರವೀಣ್‌ಗೆ 15 ಲಕ್ಷ ರೂ. ಸುಪಾರಿ ನೀಡಿ, 15,000 ರೂ. ಹಣವನ್ನು ಅಡ್ವಾನ್ಸ್ ಆಗಿ ನೀಡಿದ್ದ.

    ಸೆ.2 ರಂದು ವುಡ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದ ತಂದೆಯನ್ನು, ಮನೋಜ್ ವಿಶಾಂತ್ರಿ ತೆಗೆದುಕೊಳ್ಳಿ ಎಂದು ಹೇಳಿ ಮನೆಗೆ ಕಳುಹಿಸಿದ್ದ. ಮಂಜಣ್ಣ ಮನೆಯಲ್ಲಿ ಸೋಫಾ ಮೇಲೆ ಮಲಗಿದ್ದಾಗ ಮದ್ಯಪಾನ ಮಾಡಿ, ಮನೋಜ್ ಹಾಗೂ ಆತನ ಸ್ನೇಹಿತ ಪ್ರವೀಣ್ ಬಂದಿದ್ದರು.

    ಈ ವೇಳೆ ಇಬ್ಬರು ಸೇರಿ ಟವಲ್‌ನಿಂದ ಮಂಜಣ್ಣನ ಕುತ್ತಿಗೆಗೆ ಬಿಗಿದು ಕೊಂದಿದ್ದರು. ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಬಿಂಬಿಸಿದ್ರು. ಆದ್ರೆ ಮೃತದೇಹವನ್ನು ಕಂಡ ಪೋಲಿಸರಿಗೆ ಆಗಲೇ ಅನುಮಾನ ಶುರುವಾಗಿತ್ತು. ಇದೀಗ ಮರಣೋತ್ತರ ವರದಿಯಲ್ಲಿ ಮಗನ ಬಂಡವಾಳ ಬಯಲಾಗಿದೆ.

    ಸುಪಾರಿ ಹಣವನ್ನು ಪ್ರವೀಣ್, ತಂಗಿಯ ಮನೆಯಲ್ಲಿ ಕೊಟ್ಟು ಟ್ರಿಪ್‌ಗೆ ತೆರಳಿದ್ದ. ಸದ್ಯ ಪೊಲೀಸರು ಕೊಲೆಗೆ ಸಹಕರಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಮಗ ಮನೋಜ್ ತಲೆಮರೆಸಿಕೊಂಡಿದ್ದಾನೆ.

  • ಪತಿ ಜೊತೆ ಜಗಳ| ಚಹಾಗೆ ಇಲಿ ಪಾಷಾಣ ಬೆರೆಸಿ ಮಗು ಜೊತೆ ಕುಡಿದ್ಳು – ಪುತ್ರಿ ಸಾವು, ತಾಯಿ ಗಂಭೀರ

    ಪತಿ ಜೊತೆ ಜಗಳ| ಚಹಾಗೆ ಇಲಿ ಪಾಷಾಣ ಬೆರೆಸಿ ಮಗು ಜೊತೆ ಕುಡಿದ್ಳು – ಪುತ್ರಿ ಸಾವು, ತಾಯಿ ಗಂಭೀರ

    ಬೆಂಗಳೂರು: ಗಂಡನ ಮೇಲಿನ ಕೋಪಕ್ಕೆ ಪತ್ನಿಯೊಬ್ಬಳು ಮಗು ಜೊತೆ ಇಲಿ ಪಾಷಾಣ ಬೆರೆಸಿದ ಚಹಾವನ್ನು ಕುಡಿದ ಘಟನೆ ನಗರದಲ್ಲಿ ನಡೆದಿದೆ.

    ಘಟನೆಯಲ್ಲಿ 1 ವರ್ಷ 8 ತಿಂಗಳ ಮಗು ಚಾರ್ವಿ ಮೃತಪಟ್ಟರೆ ತಾಯಿ ಚಂದ್ರಿಕಾ (26) ಆಸ್ಪತ್ರೆ ಪಾಲಾಗಿದ್ದಾಳೆ. ಇದನ್ನೂ ಓದಿ: ಬೆಂಗ್ಳೂರಿನ ಪ್ರತಿಷ್ಠಿತ ಕಂಪನಿಯ ಸರ್ವರ್ ಹ್ಯಾಕ್ – 378 ಕೋಟಿ ಕ್ರಿಪ್ಟೋ ಕರೆನ್ಸಿ ಕಳ್ಳತನ

     

    ಬೆಂಗಳೂರಿನ ತಿಗಳರಪಾಳ್ಯದಲ್ಲಿ ಯೋಗೇಶ್, ಚಂದ್ರಿಕಾ ದಂಪತಿ ನೆಲೆಸಿದ್ದರು. ಜಗಳ ಮಾಡಿದ ನಂತರ ಯೋಗೇಶ್‌ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿದ್ದಾಗ ಚಹಾಗೆ ಇಲಿ ಪಾಷಾಣ ಬೆರೆಸಿ ಮಗಳಿಗೆ ಕುಡಿಸಿ ಚಂದ್ರಿಕಾ ಕುಡಿದಿದ್ದಾಳೆ.

    ಇಲಿ ಪಾಷಾಣ ಸೇವಿಸಿದ ಬಳಿಕ ಪತಿಗೆ ಕರೆ ಮಾಡಿ ಚಂದ್ರಿಕಾ ವಿಷಯ ತಿಳಿಸಿದ್ದಾಳೆ. ಕೂಡಲೇ ಮನೆ ಬಳಿ ಬಂದು ಮಗು ಮತ್ತು ಪತ್ನಿಯನ್ನ ಯೋಗೇಶ್‌ ಆಸ್ಪತ್ರೆಗೆ ದಾಖಲಿಸಿದ್ದ. ಚಿಕಿತ್ಸೆ ಫಲಕಾರಿಯಾಗದೇ ಚಾರ್ವಿ ಸಾವನ್ನಪ್ಪಿದರೆ, ಚಂದ್ರಿಕಾಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಡಿದ ಮತ್ತಿನಲ್ಲಿ ತಾಯಿಗೆ ಬೆಂಕಿ – ಶವದ ಪಕ್ಕವೇ ಮಲಗಿದ್ದ ಪುತ್ರ ಅರೆಸ್ಟ್‌

    ಕುಡಿದ ಮತ್ತಿನಲ್ಲಿ ತಾಯಿಗೆ ಬೆಂಕಿ – ಶವದ ಪಕ್ಕವೇ ಮಲಗಿದ್ದ ಪುತ್ರ ಅರೆಸ್ಟ್‌

    ಚಿಕ್ಕಮಗಳೂರು:  ಕುಡಿದ ಮತ್ತಿನಲ್ಲಿ ಪುತ್ರನೇ ತಾಯಿಯನ್ನ ಕೊಂದು, ಆಕೆ ಮೃತ ದೇಹಕ್ಕೆ ಬೆಂಕಿ ಹಾಕಿ ಪಕ್ಕದಲ್ಲೇ ಮಲಗಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ತಾಲೂಕಿನ ಅರೆನೂರು ಸಮೀಪದ ಹಕ್ಕಿಮಕ್ಕಿ ಗ್ರಾಮದಲ್ಲಿ ನಡೆದಿದೆ.

    ಕೂಲಿ ಕೆಲಸ ಮಾಡಿಕೊಂಡು ಅಮ್ಮನ ಜೊತೆಯಲ್ಲಿದ್ದ ಪವನ್‌ ಕಳೆದ ರಾತ್ರಿ ತಾಯಿಯನ್ನು ಕೊಂದು ಮನೆಯೊಳಗೆ ಬೆಂಕಿ ಹಾಕಿ ಸುಟ್ಟು ಹಾಕಿದ್ದಾನೆ. ಬಳಿಕ ತಾಯಿ ಮೃತದೇಹ ಬೆಂಕಿಯಲ್ಲಿ ಬೇಯುತ್ತಿದ್ದರೆ ಕೊಲೆಗಾರ ಮಗ ಪ್ರಜ್ಞೆ ಇಲ್ಲದವನಂತೆ ಅಲ್ಲೇ ಪಕ್ಕದಲ್ಲಿ ಮಲಗಿದ್ದಾನೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್; ದೂರುದಾರ ಮಾನಸಿಕ ಅಸ್ವಸ್ಥನೋ, ಸ್ವಸ್ಥನೋ ಪರೀಕ್ಷಿಸಬೇಕು: ಬಿ.ಸಿ.ಪಾಟೀಲ್

    ತಾಯಿ ಭವಾನಿ ಮೃತದೇಹ ಬಹುತೇಕ ಸುಟ್ಟುಹೋಗಿದ್ದು ಕಾಲು ಹಾಗೂ ಕೈ ಮಾತ್ರ ಉಳಿದಿದೆ. ಅಕ್ಕಪಕ್ಕದವರಿಂದ ವಿಷಯ ತಿಳಿದು ಆಲ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಾಯಿಯನ್ನ ಕೊಂದ ಪುತ್ರನನ್ನು ಆಲ್ದೂರು ಪೊಲೀಸರು ಬಂಧಿಸಿದ್ದಾರೆ.

  • Belagavi | ಕೃಷಿ ಹೊಂಡದಲ್ಲಿ ಮುಳುಗಿ ತಂದೆ-ಮಗ ಸಾವು

    Belagavi | ಕೃಷಿ ಹೊಂಡದಲ್ಲಿ ಮುಳುಗಿ ತಂದೆ-ಮಗ ಸಾವು

    ಬೆಳಗಾವಿ: ಕೃಷಿ ಹೊಂಡದಲ್ಲಿ (Agricultural Pit) ಮುಳುಗಿ ತಂದೆ-ಮಗ ಸಾವನ್ನಪ್ಪಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ (Savadatti) ತಾಲೂಕಿನ ಮಳಗಲಿ ಗ್ರಾಮದಲ್ಲಿ ನಡೆದಿದೆ.

    ತಂದೆ ಬಸವರಾಜ್ ಕೆಂಗೇರಿ (40), ಮಗ ಧರೆಪ್ಪ ಕೆಂಗೇರಿ (14) ಮೃತ ದುರ್ದೈವಿಗಳು. ಬಸವರಾಜ್ ಕೆಂಗೇರಿ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ನಿವಾಸಿಯಾಗಿದ್ದು, ಹೆಂಡತಿ ಊರಲ್ಲಿರುವ ಜಮೀನಿಗೆ ಕೀಟನಾಶಕ ಹೊಡೆಯಲು ಹೋಗಿದ್ದ. ಈ ವೇಳೆ ಕೃಷಿ ಹೊಂಡದಲ್ಲಿ ನೀರು ತರಲು ಹೋಗಿ ಕಾಲು ಜಾರಿ ಬಿದ್ದ ಮಗ ಧರೆಪ್ಪ ಮತ್ತೋರ್ವ ಬಾಲಕ ಬಾಗಪ್ಪ ಸಣ್ಣಕ್ಕಿಯನ್ನು ರಕ್ಷಣೆ ಮಾಡಲು ಬಸವರಾಜ್ ಧಾವಿಸಿದ್ದ. ಈ ವೇಳೆ ಕೃಷಿ ಹೊಂಡದಲ್ಲಿ ಮುಳುಗಿ ಬಸವರಾಜ್ ಮತ್ತು ಧರೆಪ್ಪ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಭಾರೀ ಮಳೆ – 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

    ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಬಾಗಪ್ಪನ ರಕ್ಷಣೆ ಮಾಡಿದ್ದಾರೆ. ಸದ್ಯ ಗಂಭೀರ ಸ್ಥಿತಿಯಲ್ಲಿರುವ ಬಾಲಕ ಬಾಗಪ್ಪಗೆ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮುರಗೋಡ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: WTC Final | 2031ರ ವರೆಗೆ ಇಂಗ್ಲೆಂಡ್‌ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ

  • ಮಂಗಳೂರು| ಹೆತ್ತ ತಾಯಿಯನ್ನೇ ಕೊಲೆಗೈದು ಸುಟ್ಟು ಹಾಕಿದ ಪಾಪಿ ಮಗ

    ಮಂಗಳೂರು| ಹೆತ್ತ ತಾಯಿಯನ್ನೇ ಕೊಲೆಗೈದು ಸುಟ್ಟು ಹಾಕಿದ ಪಾಪಿ ಮಗ

    ಮಂಗಳೂರು: ಹೆತ್ತ ತಾಯಿಯನ್ನೇ ಕೊಲೆಗೈದು ಪುತ್ರ ಸುಟ್ಟು ಹಾಕಿರುವ ಘಟನೆ ಮಂಗಳೂರು ಗಡಿಭಾಗ ಕಾಸರಗೋಡಿನ ವರ್ಕಾಡಿಯಲ್ಲಿ ನಡೆದಿದೆ.

    ನಲ್ಲೆಂಗಿಯ ಹಿಲ್ಡಾ ಮೊಂತೇರೊ (59) ಕೊಲೆಗೀಡಾದ ದುರ್ದೈವಿ. ಮೆಲ್ವಿನ್ ಮೊಂತೇರೊ (26) ಕೃತ್ಯ ಎಸಗಿರುವ ಆರೋಪಿ ಮಗ. ಘಟನೆಯಲ್ಲಿ ನೆರೆಮನೆಯ ಲೋಲಿಟಾ ಎಂಬವರಿಗೂ ಗಂಭೀರ ಸುಟ್ಟ ಗಾಯಗಳಾಗಿವೆ.

    ಮೃತ ಹಿಲ್ಡಾ ಪುತ್ರ ಮೆಲ್ವಿನ್ ಮೊಂತೆರೋ‌ನೊಂದಿಗೆ ವಾಸವಾಗಿದ್ದರು. ರಾತ್ರಿ ಊಟ ಮಾಡಿ ಮಲಗಿದ್ದ ಹಿಲ್ಡಾರನ್ನು ಮುಂಜಾನೆ ಕೊಲೆಗೈದು, ಮೃತದೇಹವನ್ನು ಮನೆಯ ಹಿಂಬದಿಗೆ ಕೊಂಡೊಯ್ದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ.

    ನೋಡಲು ಬಂದ ನೆರೆ ಮನೆಯವರಿಗೂ ಬೆಂಕಿ ಹಚ್ಚಿದ್ದ. ಆರೋಪಿ ಮೆಲ್ವಿನ್ ಮೊಂತೆರೋನನ್ನು ಕುಂದಾಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಾದಕ ವ್ಯಸನಿಯಾಗಿದ್ದ ಮೆಲ್ವಿನ್ ಮೊಂತೆರೋ, ನಶೆಯಲ್ಲಿ ಕೊಂದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

  • 36 ವರ್ಷಗಳ ಬಳಿಕ ಒಂದಾದ ತಾಯಿ-ಮಗ; ದೈವ ನುಡಿದಂತೆ ವರ್ಷದೊಳಗೆ ಮಗ ವಾಪಸ್

    36 ವರ್ಷಗಳ ಬಳಿಕ ಒಂದಾದ ತಾಯಿ-ಮಗ; ದೈವ ನುಡಿದಂತೆ ವರ್ಷದೊಳಗೆ ಮಗ ವಾಪಸ್

    ಮಂಗಳೂರು: ಆತ ಮನೆ ಬಿಟ್ಟು ಮುಂಬೈ ಸೇರಿ 36 ವರ್ಷ ಕಳೆದಿತ್ತು. ಕೆಲಸ ಅರಸಿ ಮುಂಬೈ ಸೇರಿದ್ದ ಮಂಗಳೂರಿನ (Mangaluru) ಯುವಕ ಬಳಿಕ ಮಾನಸಿಕ ಆಘಾತದಿಂದ ಮನೆಯವರ ಸಂಪರ್ಕ ಕಡಿದುಕೊಂಡಿದ್ದ. ಆರೋಗ್ಯ ಸುಧಾರಿಸಿದರೂ ಮನೆಯ ಸಂಪರ್ಕ ಸಾಧ್ಯವಾಗಲೇ ಇಲ್ಲ. ಇದೀಗ, ಮನೆ ದೈವ ಮಂತ್ರದೇವತೆ ಅಭಯದಂತೆ ಮನೆಮಗ ಮನೆ ಸೇರಿದ್ದಾನೆ. 36 ವರ್ಷಗಳ ಬಳಿಕ ತಾಯಿ ಮಗ ಒಂದಾಗಿದ್ದಾರೆ. ಇದು ದೈವ ಪವಾಡ ಅಂತ ಮನೆಯವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮೂಡುಬಿದ್ರೆಯ (Mudbidri) ಇರುವೈಲು ಗ್ರಾಮದ ಸಂಕಪ್ಪ ಹಾಗೂ ಗೋಪಿ ದಂಪತಿಯ ಹಿರಿಯ ಪುತ್ರ ಚಂದ್ರಶೇಖರ್, ತಮ್ಮ 25ನೇ ವಯಸ್ಸಿನಲ್ಲಿ ಉದ್ಯೋಗ ಅರಸಿ ಮುಂಬೈಯತ್ತ ತೆರಳಿದ್ದರು. ಆ ಬಳಿಕ ಕೆಲ ತಿಂಗಳು ಪತ್ರದ ಮುಖೇನ ಮನೆಯವರೊಂದಿಗೆ ಸಂಪರ್ಕದಲ್ಲಿದ್ದರು. ನಂತರ ಸಂಪರ್ಕ ಕಡಿದುಕೊಂಡು ಎಲ್ಲಿದ್ದಾರೆಂದು ಪತ್ತೆಯೇ ಇರಲಿಲ್ಲ. ಮಾನಸಿಕ ಆಘಾತಗೊಂಡಿದ್ದ ಬಳಿಕ ದೇವಸ್ಥಾನ, ಮಠ, ಮಂದಿರಗಳಲ್ಲಿ ದಿನ ಕಳೆಯುತ್ತಿದ್ದರಂತೆ. ಇದನ್ನೂ ಓದಿ: ಕಬಿನಿಯಿಂದ 25 ಸಾವಿರ ಕ್ಯುಸೆಕ್‌ ನೀರು ಹೊರಕ್ಕೆ – ಯಾವುದೇ ಕ್ಷಣದಲ್ಲಿ ಮತ್ತಷ್ಟು ನೀರು ಬಿಡುಗಡೆ

    36 ವರ್ಷದ ಹಿಂದೆ ಮುಂಬೈನಲ್ಲಿ ಅಲೆದಾಡುತ್ತಿದ್ದ ಚಂದ್ರಶೇಖರ್ ಸ್ಥಿತಿ ಕಂಡು ಮುಂಬೈನ ಬಾಲು ಕಾಂಬ್ಳಿ ಎಂಬವರು ತಮ್ಮ ಮನೆಗೆ ಕರೆದೊಯ್ದು ಆರೈಕೆ ಮಾಡಿ, ಚಿಕಿತ್ಸೆ ಕೊಡಿಸಿದ್ದರು. ಆರೋಗ್ಯದಲ್ಲಿ ಸುಧಾರಣೆಯಾದ ಬಳಿಕ ಚಂದ್ರಶೇಖರ್ ಮರಳಿ ಕೆಲಸಕ್ಕೆ ಸೇರಿದ್ದರು. ಜತೆಗೆ ರಾತ್ರಿ ಶಾಲೆಗೆ ಸೇರಿ ಓದು ಮುಂದುವರಿಸಿದ್ದರು. ಆದರೂ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಊರಿಗೂ ಬಂದಿರಲಿಲ್ಲ. ಪುತ್ರನಿಗಾಗಿ ಮೂರೂವರೆ ದಶಕಗಳ ಕಾಲ ಹೆತ್ತತಾಯಿ ದೇವರನ್ನು ಬೇಡಿಕೊಳ್ಳದ ದಿನಗಳಿಲ್ಲ. ಮನೆ ದೈವ ಮಂತ್ರದೇವತೆಗೆ ಮಗನಿಂದಲೇ ಕೋಲ ಸೇವೆ ಕೊಡಿಸುತ್ತೇನೆ ಎಂದು ಹರಕೆಯನ್ನೂ ಹೊತ್ತಿದ್ದರು. ಬಳಿಕ ಮನೆಯಲ್ಲಿ ನಡೆದ ಮಂತ್ರದೇವತೆ ದೈವದ ದರ್ಶನ ವೇಳೆ ಆತ ಜೀವಂತವಾಗಿ ಇದ್ದಾನೆ ಅಂತ ಅಭಯ ನೀಡಿತ್ತು. ಒಂದು ವರ್ಷದೊಳಗೆ ಮನೆಗೆ ಬರುವಂತೆ ಮಾಡುತ್ತೇನೆ ಎಂದು ಅಭಯ ನೀಡಿತ್ತು. ಹೀಗಾಗಿ ಮತ್ತೊಮ್ಮೆ ದರ್ಶನ ಸೇವೆ ನೀಡಲು ಮನೆಯವರು ತಯಾರಿ ನಡೆಸಿದ್ದರು.

    ದೈವ ಮಂತ್ರದೇವತೆ ನುಡಿಯಂತೆ ದರ್ಶನ ಸೇವೆಗೆ ಮೂರು ದಿನಗಳ ಮೊದಲು ಚಂದ್ರಶೇಖರ್ ಮನೆ ಸೇರಿದ್ದಾರೆ. ಮುಂಬೈನವರೊಬ್ಬರು ಚಂದ್ರಶೇಖರ್ ಇರುವ ಸುಳಿವು ನೀಡಿದ್ದರು. ಅದೇ ಸುಳಿವುನಲ್ಲಿ ಹುಡಕಾಟ ನಡೆಸಿದಾಗ ಪತ್ತೆಯಾದ. ಇದೀಗ ಚಂದ್ರಶೇಖರ್ ತಾಯಿಗೆ 80 ವರ್ಷ ದಾಟಿದೆ. ಜೀವನದ ಇಳಿವಯಸ್ಸಿನಲ್ಲಿ ಮಗ ಮನೆ ಸೇರಿದ್ದು, ಕಂಡು ತಾಯಿಯ ಸಂತೋಷಕ್ಕೆ ಪಾರವೇ ಇಲ್ಲವಾಗಿದೆ. ಇದು ಮನೆ ದೈವ ಮಂತ್ರ ದೇವತೆಯಿಂದಲೇ ಸಾಧ್ಯ ಆಯ್ತು ಅನ್ನೋದು ಮನೆಯವರು ನಂಬಿಕೆ. ಇದನ್ನೂ ಓದಿ: ಬೆಳಗಾವಿ | ಭಾರೀ ಮಳೆಗೆ ಮುಳುಗಿತು ಹಬ್ಬಾನಟ್ಟಿ ಮಾರುತಿ ದೇವಸ್ಥಾನ – ಎಲ್ಲೆಲ್ಲಿ ಏನಾಗಿದೆ?

  • ಮದ್ಯ ಖರೀದಿಗೆ ಹಣ ಕೊಡಲಿಲ್ಲ ಅಂತ ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಮಗ

    ಮದ್ಯ ಖರೀದಿಗೆ ಹಣ ಕೊಡಲಿಲ್ಲ ಅಂತ ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಮಗ

    ಜೈಪುರ: ಮದ್ಯ ಖರೀದಿಗೆ ಹಣ ನೀಡಿಲ್ಲ ಎಂದು ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ರಾಜಸ್ಥಾನದ (Rajastan) ಜೈಪುರ (Jaipur) ಮದ್ಯದಂಗಡಿ ಬಳಿ ನಡೆದಿದೆ.

    19 ವರ್ಷದ ಕಿಶನ್ ಮದ್ಯದಂಗಡಿಯಲ್ಲಿ (Liquor Shop) ಮದ್ಯ ಸೇವಿಸಿ ತಂದೆ ಜಗದೀಶ್ ಸೋನಿ ಬಳಿ ಹಣ ಕೇಳಿದ್ದ. ಜಗದೀಶ್ ಹಣ ನೀಡಲು ನಿರಾಕರಿಸಿದ್ದರು. ಈ ವೇಳೆ ತಂದೆ ಮಗನ ನಡುವೆ ವಾಗ್ವಾದ ನಡೆದಿದೆ. ಹಣ ನೀಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಕಿಶನ್, ತಂದೆಯ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ. ಇದನ್ನೂ ಓದಿ: ವಿಜಯನಗರ | ಗುಡೆಕೋಟೆಯಲ್ಲಿ ಗುಡುಗು, ಬಿರುಗಾಳಿ ಸಹಿತ ಆಲಿಕಲ್ಲು ಮಳೆ – ರೈತರಲ್ಲಿ ಹರ್ಷ

    ಹಲ್ಲೆಗೊಳಗಾದ ಜಗದೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇದರಿಂದ ಭಯಭೀತನಾದ ಕಿಶನ್ ತಂದೆಯ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಿದ್ದ. ಬಳಿಕ ಸಹೋದರ ಬಳಿ ತಂದೆ ಆಕಸ್ಮಿಕವಾಗಿ ಮೃತಪಟ್ಟರು ಎಂದು ಸುಳ್ಳು ಹೇಳಿ, ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದ. ಆತನ ನಡವಳಿಕೆಯಿಂದ ಅನುಮಾನಗೊಂಡ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇದನ್ನೂ ಓದಿ:  ಬಂಗಾಳದಲ್ಲಿ ವಕ್ಫ್‌ ಕಾಯ್ದೆ ವಿರೋಧಿಸಿ ಪ್ರತಿಭಟನೆ – ಘರ್ಷಣೆಯಲ್ಲಿ ಮೂವರು ಸಾವು

    ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಕಿಶನ್ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಆರೋಪಿ ಕಿಶನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

  • Chitradurga | ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ತಾಯಿ-ಮಗ ದುರ್ಮರಣ

    Chitradurga | ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ತಾಯಿ-ಮಗ ದುರ್ಮರಣ

    ಚಿತ್ರದುರ್ಗ: ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ತಾಯಿ-ಮಗ ಇಬ್ಬರೂ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿರುವ ಹೃದಯ ವಿದ್ರಾವಕ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಮೊಳಕಾಲ್ಮೂರು (Molakalmuru) ತಾಲೂಕಿನ ತುಮಕೂರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಬೋರಮ್ಮ (25) ಮತ್ತು ಪ್ರಣೀತ್ ಗೌಡ @ಅಜಯ್ (03) ಮೃತ ದುರ್ದೈವಿಯಾಗಿದ್ದಾರೆ. ಮನೆಯಿಂದ ಶೌಚಾಲಯಕ್ಕೆ ಎಳೆದಿರುವ ವಿದ್ಯುತ್ ವೈಯರ್ ಡ್ಯಾಮೇಜ್ ಆಗಿದ್ದು, ಅದನ್ನು ಆಕಸ್ಮಿಕವಾಗಿ ಹಿಡಿದುಕೊಂಡ ಪ್ರಣೀತ್ ಗೌಡಗೆ ಕರೆಂಟ್ ಶಾಕ್ ಹೊಡಿದಿದೆ. ಆಗ ಮಗನನ್ನು ರಕ್ಷಿಸಲು ಮುಂದಾದ ಮಗುವಿನ ತಾಯಿ ಬೋರಮ್ಮಗೂ ಸಹ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೋರಮ್ಮನ ಎದೆ ಮತ್ತು ಕೈಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಮೋದಿಗೆ ಭವ್ಯ ಸ್ವಾಗತ – ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಭಾಗಿ

    ಇನ್ನು ಏಕಾಕಾಲದಲ್ಲಿ ತಾಯಿ ಮತ್ತು ಮಗುವಿನ ಶವ ನೋಡಿದ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಾಜಣ್ಣ ಮತ್ತು ಮೊಳಕಾಲ್ಮೂರು ಪೊಲೀಸ್ ಠಾಣೆಯ ಪಿಎಸ್‌ಐ ಪಾಂಡುರಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಕೊಪ್ಪಳದಲ್ಲೊಂದು ಅಂತಾರಾಷ್ಟ್ರೀಯ ಮದುವೆ – ಲಂಡನ್ ಯುವತಿಗೆ ಗಂಗಾವತಿ ಗಂಡ!

    ಇನ್ನು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿಲಾಗಿದೆ. ಈ ಸಂಬಂಧ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುಡಾ ಕೇಸಲ್ಲಿ ಬಿರಿಪೋರ್ಟ್‌ಗೆ ಇಡಿ ಆಕ್ಷೇಪ – ಏಪ್ರಿಲ್ 8ಕ್ಕೆ ವಿಚಾರಣೆ ಮುಂದೂಡಿಕೆ

  • ತಾಯಿ-ಮಗ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್; ಮಗನಿಗಿತ್ತು ಹೆಚ್‌ಐವಿ ಸೋಂಕು

    ತಾಯಿ-ಮಗ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್; ಮಗನಿಗಿತ್ತು ಹೆಚ್‌ಐವಿ ಸೋಂಕು

    – ಪತ್ನಿ ಕುಟುಂಬಸ್ಥರಿಂದಲೇ ಸ್ಫೋಟಕ ಮಾಹಿತಿ ಬಹಿರಂಗ

    ಹಾಸನ: ಕೌಟುಂಬಿಕ ಕಲಹ (Family Feud) ಹಿನ್ನೆಲೆ ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ (Channarayapatna) ತಾಲೂಕಿನ ಕಬ್ಬಳಿ ಗ್ರಾಮದಲ್ಲಿ ಕೆರೆಗೆ ಹಾರಿ ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇವರಿಬ್ಬರ ಸಾವಿಗೆ ಅತ್ತೆ-ಸೊಸೆ ನಡುವಿನ ಹೊಂದಾಣಿಕೆ ಕಾರಣ ಅಲ್ಲ ಎಂಬ ಸ್ಫೋಟಕ ಸತ್ಯ ಹೊರಬಿದ್ದಿದೆ.

    ಮೃತ ಭರತ್ ಹೆಚ್‌ಐವಿ ಸೋಂಕಿತನಾಗಿದ್ದ ಎಂಬ ಸತ್ಯವನ್ನು ಆತನ ಪತ್ನಿ ಕುಟುಂಬದವರು ಇದೀಗ ಬಹಿರಂಗಪಡಿಸಿದ್ದಾರೆ. ಪತ್ನಿ ಕುಟುಂಬಸ್ಥರು ಭರತ್‌ಗೆ 8 ತಿಂಗಳ ಹಿಂದೆ ನಾಲ್ಕು ಲಕ್ಷ ಹಣ, 100 ಗ್ರಾಂ ಚಿನ್ನ ನೀಡಿ ಮಗಳನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ ಭರತ್ ಮೂರು ವರ್ಷಗಳ ಹಿಂದಿನಿಂದಲೇ ಹೆಚ್‌ಐವಿ ಸೋಂಕಿತನಾಗಿದ್ದ. ಮಾರಣಾಂತಿಕ ಕಾಯಿಲೆ ಸೋಂಕು ತಗುಲಿರುವುದನ್ನು ಮುಚ್ಚಿಟ್ಟು ಮದುವೆಯಾಗಿದ್ದ ಭರತ್, ಮದುವೆಯಾದ ಹದಿನೈದು ದಿನ ಮಾತ್ರ ಪತ್ನಿ ಜೊತೆ ಸಂಸಾರ ಮಾಡಿದ್ದ. ಬಳಿಕ ಪತ್ನಿಯಿಂದ ಅಂತರ ಕಾಯ್ದುಕೊಂಡಿದ್ದ. ಅಲ್ಲದೇ ಈ ವಿಚಾರವನ್ನು ಪತ್ನಿಯಿಂದ ಮುಚ್ಚಿಟ್ಟು ಕಾಯಿಲೆಗೆ ಮಾತ್ರೆ ತೆಗೆದುಕೊಳ್ಳುತ್ತಿದ್ದ. ಇದನ್ನೂ ಓದಿ: ಬೆಸ್ಟ್‌ ಆಕ್ಟಿಂಗ್‌ ಆಸ್ಕರ್‌ ಅವಾರ್ಡ್‌ ಯಾರಿಗೆ ಹೋಗುತ್ತೆ ಅಂದ್ರೆ.. – ದರ್ಶನ್ ಅನ್‌ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಪೋಸ್ಟ್

    ತನ್ನ ಹುಳುಕು ಮುಚ್ಚಿಕೊಳ್ಳಲು ಪಂಚಾಯ್ತಿ ಸೇರಿಸಿ ನನ್ನ ಪತ್ನಿ ಹೆಣ್ಣೇ ಅಲ್ಲ, ಮದ್ಯಪಾನ ಮಾಡುತ್ತಾಳೆ, ಮಾದಕ ವಸ್ತು ತೆಗೆದುಕೊಳ್ಳುತ್ತಾಳೆ ಎಂದು ಭರತ್ ಸುಳ್ಳು ಆರೋಪ ಮಾಡಿದ್ದ. ಕೆಲವು ದಿನಗಳ ಕಾಲ ಸಂಬಂಧಿಕರ ಮನೆಯಲ್ಲಿ ಕೂಡ ಪತ್ನಿಯನ್ನು ಉಳಿಸಿದ್ದ. ಭರತ್ ವಂಚನೆ ತಿಳಿಯದೇ ಮತ್ತೊಂದು ಪಂಚಾಯ್ತಿ ನಡೆಸಿ ಪತ್ನಿ ಕುಟುಂಬಸ್ಥರು ಆಕೆಗೆ ಬುದ್ಧಿವಾದ ಹೇಳಿ ಗಂಡನ ಮನೆಗೆ ಕಳುಹಿಸಿದ್ದರು. ಆದರೆ ಭರತ್ ತನ್ನ ಪತ್ನಿ ತಪ್ಪು ಮಾಡದೇ ಇದ್ದರೂ ಮತ್ತೆ ತವರು ಮನೆಗೆ ಕಳುಹಿಸಿದ್ದ. ಇದನ್ನೂ ಓದಿ: ಪ್ರಧಾನಿ ಮೋದಿ ನನ್ನ ನೆಚ್ಚಿನ ನಟ: ಹೇಳಿಕೆ ನೀಡಿ ಪೇಚಿಗೆ ಸಿಲುಕಿದ ರಾಜಸ್ಥಾನ ಸಿಎಂ

    ಭರತ್ ಹೆಚ್‌ಐವಿ ರೋಗಕ್ಕೆ ತೆಗೆದುಕೊಳ್ಳುವ ಮಾತ್ರೆ ಡಬ್ಬಿಯನ್ನು ಸದಾ ಕೊರಳಿಗೆ ಕಟ್ಟಿಕೊಂಡು ತಿರುಗುತ್ತಿದ್ದ. ತನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದು ಹಾಗೂ ಮಾತ್ರೆ ತೆಗೆದುಕೊಳ್ಳುವ ಬಗ್ಗೆ ಅನುಮಾನ ಪಟ್ಟ ಪತ್ನಿ, ಭರತ್ ಸ್ನಾನಕ್ಕೆ ಹೋಗಿದ್ದಾಗ ಮಾತ್ರೆಯ ಫೋಟೋ ತೆಗೆದು ತನ್ನ ಅಕ್ಕನಿಗೆ ಕಳುಹಿಸಿದ್ದಳು. ಆಕೆಯ ಸಹೋದರಿ ಮಾತ್ರೆಯ ಫೋಟೋಗಳನ್ನು ತನಗೆ ಪರಿಚಯ ಇರುವ ನರ್ಸ್‌ಗೆ ಕಳುಹಿಸಿದ್ದರು. ಇದನ್ನು ಪರಿಶೀಲಿಸಿದ ನರ್ಸ್ ಇದು ಹೆಚ್‌ಐವಿ ಸೋಂಕಿತರು ತೆಗೆದುಕೊಳ್ಳುವ ಮಾತ್ರೆ ಎಂದು ತಿಳಿಸಿದ್ದಾರೆ. ಇದರಿಂದ ಭರತ್ ಹೆಚ್‌ಐವಿ ಸೋಂಕಿತ ಎಂದು ಪತ್ನಿ ಕುಟುಂಬಸ್ಥರು ಅನುಮಾನಗೊಂಡಿದ್ದಾರೆ. ಇದನ್ನೂ ಓದಿ: ಬಸ್, ಮೆಟ್ರೋ ಬಳಿಕ ಪ್ರಯಾಣಿಕರಿಗೆ ಮತ್ತೊಂದು ಶಾಕ್ – ಇಂದೇ ಫೈನಲ್ ಆಗುತ್ತಾ ಆಟೋ ದರ ಏರಿಕೆ?

    ಬಳಿಕ ಎರಡೂ ಕಡೆಯ ಕುಟುಂಬಸ್ಥರಿಂದ ಮತ್ತೊಂದು ರಾಜಿ ಪಂಚಾಯ್ತಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಭರತ್ ಆಧಾರ್ ಕಾರ್ಡ್ ತರಬೇಕು. ಇಬ್ಬರೂ ಮೆಡಿಕಲ್ ಟೆಸ್ಟ್‌ಗೆ ಒಳಪಡಬೇಕು ಎಂದು ನಿರ್ಧಾರ ಮಾಡಿ ಸೋಮವಾರ ಮೆಡಿಕಲ್ ಟೆಸ್ಟ್‌ಗೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಭರತ್ ಆಧಾರ್ ಕಾರ್ಡ್ ಕೊಡದೇ ಸತಾಯಿಸಿದ್ದ. ಪಂಚಾಯ್ತಿ ನಡೆದರೆ ತಾನು ಮುಚಿಟ್ಟಿದ್ದ ಎಲ್ಲಾ ಸತ್ಯ ಬಯಲಾಗಲಿದೆ ಎಂಭ ಭಯದಿಂದ ಭರತ್ ಮಾ.9 ರಂದು ರಾತ್ರಿ ಬೆಂಗಳೂರಿನಿಂದ ತಾಯಿ ಜೊತೆ ದಿಡಿಗದ ಸಂಬಂಧಿಕರ ಮನೆಗೆ ಬಂದಿದ್ದ. ಬಳಿಕ ಸಂಬಂಧಿಕರಿಂದ ಬೈಕ್ ಪಡೆದು ಕಬ್ಬಳಿ ಮನೆಗೆ ಬಂದು ಅಲ್ಲಿಂದ ನೆರಲೆಕೆರೆ ಗ್ರಾಮದಲ್ಲಿರುವ ಅಜ್ಜಿ ಮನೆಗೆ ತಾಯಿ ಮಗ ತೆರಳಿದ್ದರು. 100 ಗ್ರಾಂ ಒಡವೆ, 30 ಗ್ರಾಂ ಚೈನು ಎಲ್ಲವನ್ನೂ ಅಜ್ಜಿಗೆ ಕೊಟ್ಟು ಅವರ ಆಶೀರ್ವಾದ ಪಡೆದು ಭರತ್ ಹಾಗೂ ತಾಯಿ ಮರಳಿ ಗ್ರಾಮಕ್ಕೆ ಬಂದಿದ್ದರು. ಮಾ.10ರ ಮುಂಜಾನೆ 3:15 ರಿಂದ 4 ಗಂಟೆ ನಡುವೆ ಗ್ರಾಮದ ನೀರಿನ ಕಟ್ಟೆಗೆ ಬಿದ್ದು ತಾಯಿ-ಮಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಭರತ್ ತಾಯಿ ಜಯಂತಿ ಗ್ರಾಮದ ದೇವರಿಗೆ ಕೈಮುಗಿದು ಹೋಗಿದ್ದರು. ಇದನ್ನೂ ಓದಿ: ಕೆಂಪು ಮೆಣಸಿನಕಾಯಿಗೆ ಬೆಂಬಲ ಬೆಲೆ – ಕರ್ನಾಟಕಕ್ಕೂ ವಿಸ್ತರಿಸಲು ಸಚಿವ ಪ್ರಹ್ಲಾದ್ ಜೋಶಿ ಒತ್ತಾಯ

    ಭರತ್ ತಾಯಿ ಜಯಂತಿ ಅವರಿಗೆ ಸೇರಿದ್ದ 150 ತೆಂಗಿನ ಮರ, 2 ಎಕರೆ ಹೊಲ ಮತ್ತು 1 ಮನೆ ಮತ್ತು ಆಸ್ತಿ ಲಪಟಾಯಿಸಲು ಜಯಂತಿ ಸಂಬಂಧಿಕರಿಂದ ಭರತ್ ಪತ್ನಿ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ಪತ್ನಿ ಕುಟುಂಬಸ್ಥರು ತಿಳಿಸಿದ್ದು, ಭರತ್‌ನಿಂದ ಮಗಳ ಬಾಳು ಹಾಳಾಗಿದೆ ಎಂದು ಕಣ್ಣೀರಿಡುತ್ತಿದ್ದಾರೆ. ಸದ್ಯ ಭರತ್ ಪತ್ನಿಯನ್ನು ಆಕೆಯ ಕುಟುಂಬಸ್ಥರು ಹೆಚ್‌ಐವಿ ಪರೀಕ್ಷೆಗೆ ಒಳಪಡಿಸಿದ್ದು, ನೆಗೆಟಿವ್ ರಿಪೋರ್ಟ್ ಬಂದಿದೆ. ಆದರೆ ಭರತ್ ಪತ್ನಿಯ ಮಾನಸಿಕ ಕಿರುಕುಳ, ಹಠಮಾರಿತನದಿಂದ ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಾಯಿ ಜಯಂತಿ ಸಂಬಂಧಿಕರು ಬಿಂಬಿಸಿದ್ದಾರೆ. ತಾಯಿ-ಮಗನ ಸಾವಿಗೆ ನಮ್ಮ ಮಗಳು ಕಾರಣಳಲ್ಲ ಎಂದು ಕುಟುಂಬಸ್ಥರು ಸ್ಪಷ್ಟನೆ ನೀಡಿದ್ದಾರೆ. ಸದ್ಯ ತಾಯಿ-ಮಗನ ಮೃತದೇಹ ನೋಡಲು ಭರತ್ ಸಂಬಂಧಿಕರು ಆತನ ಪತ್ನಿ ಹಾಗೂ ಕುಟುಂಬಸ್ಥರಿಗೆ ಅವಕಾಶ ನೀಡಿಲ್ಲ. ಇದನ್ನೂ ಓದಿ: EXCLUSIVE |ರನ್ಯಾ ಬಳಿ ಇದೆ ದುಬೈ ರೆಸಿಡೆಂಟ್ ವೀಸಾ – ಜಾಮೀನು ಸಿಕ್ರೆ ದೇಶ ಬಿಟ್ಟು ಹೋಗ್ತಾರಾ?